Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 4

ಬರದೋರು :   ಚೆನ್ನೈ ಬಾವ°    on   04/04/2013    9 ಒಪ್ಪಂಗೊ

ಚೆನ್ನೈ ಬಾವ°

ಕಳುದವಾರ ಎಂತ ಹೇಳಿದ್ದು ಹೇಳಿ ನಿಂಗೊಗೇ ಗೊಂತಿರೆಕು. ವಾರ ವಾರ ನೆಂಪು ಮಾಡ್ಳೆ ಇದು ‘ನಾಣಿ – ದಾಸಪ್ಪ ಮಾಸ್ಟ್ರ’ ಹಂತ ಹಂತಲ್ಲಿ ಕುತೂಹಲ ಕೆರಳುಸುವ ಧಾರಿವಾಹಿಯೂ ಅಲ್ಲ, ಅರ್ಜುನಂಗೆ ಭಗವಂತ° ಮಾಡಿದ ಗೀತೋಪದಶವೂ ಅಲ್ಲ ಹೇಳಿ ನಿಂಗಳೇ ಹೇಳುವಿ. ಹಾಂಗಾದ ಮತ್ತೆ ಎನಗಿನ್ನು ನೇರ ವಿಷಯಕ್ಕೆ ಬಪ್ಪದೇ ಕೆಲಸ. ಹಾಂಗಾಗಿ  ನಿಂಗೊ ಈಗ ಮುಂದೆ ಓದಿ –

1.

ಅಡಿಗೆ ಸತ್ಯಣ್ಣಂಗೆ ಬಂಟ್ವಾಳ ಸವಿತಕ್ಕನಲ್ಲಿ ಅನುಪತ್ಯದ ಅಡಿಗೆ..

ಸತ್ಯಣ್ಣ° ಹೋದಪ್ಪದ್ದೆ ಆಸರಿಂಗೆ ತಂದು ಕೊಟ್ಟು ರಜಾ ಉಭಯಕುಶಲ ಮಾತಾಡಿಗೊಂಡಿತ್ತವು..

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

 

ಸವಿತಕ್ಕನ ಎರಡ್ನೇ ಮಗಳು ಲಕ್ಷ್ಮಿ ಪಿ.ಯು.ಸಿ ಓದುತ್ತಾ ಇಪ್ಪದು.. ಕಲಿವಲೆ ದಡ್ಡಿ..

ಸವಿತಕ್ಕಂಗೆ ಈಗೆಲ್ಲ ಅದುವೇ ಯೇಚನೆ …

ಕಲಿವಲೆ ಉಷಾರಿಲ್ಲದ್ರೂ ಲಕ್ಷ್ಮಿಯ ಲಕ್ಷ್ಯ ಮಾಂತ್ರ ದೊಡ್ಡಕೇ ಇದ್ದಡಾ ..

ಮಾತಾಡುವ ಎಡೆಲಿ ಸವಿತಕ್ಕ° ಸತ್ಯಣ್ಣನತ್ರೆ ಹೇದವು.. – ‘ಎಂತ ಮಾಡ್ತದು ಗೊಂತಿಲ್ಲೆ ಸತ್ಯಣ್ಣೋ.., ಲಕ್ಷ್ಮಿಗೆ ವಿದೇಶಕ್ಕೆ ಹೋಗಿ ಸೆಟ್ಳಾಯೇಕು ಹೇಳಿ ಈಗಳೇ ಆಶೆ. ಇನ್ನೂ ಪಿ.ಯೂ.ಸಿ ಆಯ್ದಿಲ್ಲೆ.’

ಸತ್ಯಣ್ಣ° ತನಗೆ ಹೊಳದ ಐಡಿಯವ ಹೇಳಿದ° – ‘ಅದಕ್ಕೆಂತ ಕಷ್ಟ ಇದ್ದಕ್ಕ° ಈಗ ನಿಂಗೊ ಮಂಡೆ ಬೆಶಿ ಮಾಡ್ಳೆ…, ತಳಿಯದ್ದೆ ಬೇಗ ವಿದೇಶಲ್ಲಿಪ್ಪ ಮಾಣಿಗೇ ಲಕ್ಷ್ಮಿಯ ಮದುವೆ ಮಾಡಿಕೊಟ್ಟರಾತು’! 😀

 

~~

2

ಅಡಿಗೆ ಸತ್ಯಣ್ಣ ಹೇಳ್ತದು ಎಲ್ಲವೂ ತಮಾಷೆ ಹೇಳಿ ತಿಳ್ಕೊಂಬಲಾಗ.. ಕೆಲವೊಂದರಿ ಕೆಲವು ಮರ್ಮವೂ ಇರ್ತು ಅವನ ಮಾತಿಲ್ಲಿ…

ಆರೇ ಚಿಂತೆ ಮಾಡಿಗೊಂಡಿದ್ದರೂ ಸತ್ಯಣ್ಣನ ಖಾಯಂ ಡಯಲಾಗ್ – ‘ಹಡಗೇ ಮುಳುಗಿರೂ ಗಡ್ಡಕ್ಕೆ ಕೈ ಮಡಿಕ್ಕೊಂಡು ಕೂಬಲಾಗ”.

ರಂಗಣ್ಣ ಒಂದಿನ ಕೇಳಿದ° – ‘ಅದೆಂತಕೆ ಹಾಂಗೆ ಸತ್ಯಣ್ಣ°’?

ಸತ್ಯಣ್ಣ°° – “ಅಪ್ಪೋ°…,   ಗಡ್ಡಕ್ಕೆ ಕೈ ಮಡಿಕ್ಕೊಂಡ್ರೆ ನೀಂದುತ್ತದೇಂಗೆ ಮತ್ತೆ?!” 😀

 

~~

3

 

ಅಡಿಗೆ ಸತ್ಯಣ್ಣಂಗೂ ಕೆಲವೊಂದರಿ ಏನಾರು ಪಟಕ್ಕನೆ ತೋರಿದ್ದರ ಹೇಳಿ ಹೋಪದಿದ್ದು..

ಆದರೆ ಎಲ್ಲರ ಎದುರಂದ ಅಲ್ಲ, ತನ್ನಷ್ಟಕ್ಕೆಯೋ ಅಥವಾ ತನ್ನ ಖಾಸಗೀ ಚೆಂಙಾಯಿಗಳ ಹತ್ರೆಯೋ ಮಾತ್ರ..

ಅಪ್ಪಿ ತಪ್ಪಿ ಅದು ಬೇರೊಬ್ಬನ ಕೆಮಿಗೆ ಅರಡಿಯದ್ದರೆ ಬಿದ್ದರೆ ಮಾತ್ರ ವಿಷಯ ಪಜೀತಿ ಅಪ್ಪದು..

ಹೀಂಗಿಪ್ಪ ಪರಿಸ್ಥಿತಿಲಿ ಒಂದಿನ ಎಂತಾತು ಕೇಳಿರೆ –

ಶಾರದೆ ಒತ್ತಾಯ ಮಾಡಿತ್ತು ಹೇಳಿ ಮೊನ್ನೆ ಪೆರ್ಲ ಜನಜನನಿಗೆ ಹೋದ ಸತ್ಯಣ್ಣ°..

ಅಲ್ಲಿ ಪೆರ್ಲ ಶಾಲೆಯ ಎದುರೆ ಇಪ್ಪ ಕಟ್ಟಿಂಡಿದ್ದಿದ್ದ ಗಜಗಾತ್ರದ ‘ಗೀರ್’ ಬೋರಿಯ ನೋಡಿಕ್ಕಿ ಯಾಗಶಾಲೆ ಹತ್ರ ಗೋವರ್ಧನ ಪರ್ವತನೋಡಿದ ಸತ್ಯಣ್ಣ° ಹೇಳಿದಾ°” ಇಷ್ಟು ಗೋಮಯ ರಾಶಿ ಇರೆಕ್ಕಾರೆ ಅದು ಆ ಬೋರಿದೇ ಆಗಿರೆಕು”. 😀

ತ್ತೆ ಒಂದು ಸುತ್ತು ತಿರುಗಿಕ್ಕಿ ನಡದು ಬಚ್ಚಿಯಪ್ಪಗ ಶಂಕರಸದನಕ್ಕೆ ಊಟಕ್ಕೆ ಹೋದಪ್ಪಗ ಅಲ್ಲಿ ಸಾವಯವ ಅಕ್ಕಿಯ ‘ಪುಲಾವ್’. ರಜಾ ಬಲಿಕ್ಕೆ ಆಗಿತ್ತು.., ಅದರ ಉಂಡುಗೊಂಡು ಭಾರೀ ಕೊಶಿಲಿ ಉದ್ಗರಿಸಿದಾ° – “ಓಹ್… ಇಂದು ‘ಘೀ-ರೈಸ್’ ಮಾಡಿದ್ದವು! 😀

ಇದು ಕೆಮಿಂದ ಕೆಮಿಗೆ ಬಿದ್ದು ಈಗ ನಿಂಗಳ ಕೆಮಿಗೂ ಬಿದ್ದತ್ತಿದಾ. ನಿಂಗೊ ಆರತ್ರಾರು ಹೇಳಿ ವಿಷ್ಯ ದೊಡ್ಡ ಮಾಡಿಕ್ಕೆಡಿನ್ನು. ವಿಷಯ ನಮ್ಮೊಳವೇ ಇರಲಿ ಆತಾ 😀

 

~~

 

4

ಅಡಿಗೆ ಸತ್ಯಣ್ಣನ ರೈಟ್ ಹ್ಯಾಂಡ್ ರಂಗಣ್ಣಂಗೆ ಸತ್ಯಣ್ಣನ ಹಾಂಗೇ ದಣಿಯ ಆಸ್ತಿ ಬದುಕ್ಕು ಹೇದು ಎಂತದೂ ಇಲ್ಲೆ.

ಮನೆ ಎದುರೆ ಎರಡು ಬಾಳೆ ಸೆಸಿ, ಎರಡು ತೆಂಗಿನಮರೆ, ನಾಕು ಬೀಜದ ಮರ, ಒಂದೈವತ್ತು ಅಡಕ್ಕೆ ಸಸಿ. ಹಟ್ಟಿಲಿ ಕರವಲೆ ಒಂದು ಸಣ್ಣ ಊರ ದನವುದೇ. (ಗೋಮಯಕ್ಕೂ ಬೇಕನ್ನೇ)..

ರಂಗಣ್ಣ ಮನೆ ಸಾಮಾನು, ಹಿಂಡಿ ತಂತದು ಹತ್ರೆ ಇಪ್ಪ ಪಾರೆ ಇಬ್ರಾಯಿ ಅಂಗುಡಿಂದ. ಪೇಟೆ ಹೇಳಿರೆ ಮತ್ತೆ ಪೆರ್ಲಕ್ಕೆ ಹೋಯೇಕ್ಕಷ್ಟೆ..

ಪಾರೆ ಅಂಗುಡಿಲಿ ದಿನಾ ಪೈಸೆ ಕೊಟ್ಟು ತೆಕ್ಕಂಬದಲ್ಲ. ಅಲ್ಲಿ ಒಂದು ಲೆಕ್ಕ ಪುಸ್ತಕ ಏರ್ಪಾಡು ಮಾಡಿಮಡುಗಿದ್ದ ರಂಗಣ್ಣ°.. ಅವನಪ್ಪನ ಕಾಲಂದಲೇ..

ಬೇಕಾದಾಂಗೆ ಸಾಮಾನು ತೆಕ್ಕೊಂಡದ್ದು ಲೆಕ್ಕಲ್ಲಿ ಬರದತ್ತು, ಕೈಲಿ ಪೈಶೆ ಆದಾಂಗೆ ಕೊಟ್ಟು ವಜಾ ಮಾಡಿ.. ಸೇರ್ಸಿ… ಹೀಂಗೇ ಹೋವ್ತು ಲೆಕ್ಕಾಚಾರ. ಅದರೆಡಕ್ಕಿಲ್ಲಿ ನಾಕು ಕುರ್ವೆ ಬೀಜ, ನೂರೋ ಇನ್ನೂರು ಹಣ್ಣಡಕ್ಕೆ ಆದ್ದರ ಅಲ್ಲಿಗೇ ಕೊಟ್ಟು ಲೆಕ್ಕಲ್ಲ್ಲಿ ಕಳಕ್ಕೊಂಬದು.

ಅಂಗಡಿಂದ ಸಾಮಾನು ತಪ್ಪದು ನಡೆತ್ತಾ ಇದ್ದು, ಅಂಗಡಿಗೆ ರಜ ರಜಾ ಪೈಸೆ ಕೊಡುವದೂ ನಡೆತ್ತಾ ಇದ್ದು  ರಂಗಣ್ಣಂಗೆ ಈ ಲೆಕ್ಕದ ಪುಸ್ತಕಲ್ಲಿ ಮಾತ್ರ ಚುಕ್ತ ಅಪ್ಪದು ಕಾಣುತ್ತಿಲ್ಲೆ .. ತಿಂಗಳು ತಿಂಗಳು ಲೆಕ್ಕ ಏರ್ತಾ ಹೋವ್ತಷ್ಟೆ ವಿನಾ.. ಹೋಗಿ ಹೋಗಿ ಹತ್ತು ಸಾವಿರ ದಾಂಟಿತ್ತು.

ಬ್ಯಾರಿ ಪೈಸೆ ಕೊಡಿ ಭಟ್ರೆ ಹೇಳಿ ಪಿರಿಪಿರಿ ಮಾಡ್ತಿಲ್ಲೆ. ಅದೊಂದು ಪುಣ್ಯ.. , ಅಂದರೂ ಲೆಕ್ಕ ಏರಿಗೊಂಡೇ ಹೋವ್ತನ್ನೇ..!

ತಲೆಬೆಶಿಯಾಗಿ ರಂಗಣ್ಣ ಒಂದಿನ ಇದರ ಸತ್ಯಣ್ಣಂಗೆ ಹೇಳಿದ°..

ಅದಕ್ಕೆ ಸತ್ಯಣ್ಣ ಹೇಳಿದಾ – “ಸರಕಾರಕ್ಕೆ ನಾವು ಎಷ್ಟು ತೆರಿಗೆ, ದಂಡ, ವಸೂಲಿ ಕೊಟ್ರೂ ರಂಗಣ್ಣೋ..,  ಭಾರತ ದೇಶದ ಸಾಲ ಮುಗಿವಲೆ ಇಲ್ಲೆ. ಹಾಂಗೇ ಈ ಬ್ಯಾರಿಯಂಗಡಿ ಲೆಕ್ಕವೂ ಮುಗಿವಲೆ ಹೇಳಿ ಇಲ್ಲೆ”. 😀

~~

5

ಅಡಿಗೆ ಸತ್ಯಣ್ಣಂಗೆ ಮದಲೊಂದರಿ ಹೋಟೆಲು ಇದ್ದತ್ತು ಹೇಳಿದ್ದು ನೆಂಪಿದ್ದೋ…

ಹೋಟ್ಳು ಹೇಳಿರೆ ದೊಡಾ ಮಟ್ಟಿನದ್ದೇನಲ್ಲ..

ಸಣ್ಣ ಹೋಟ್ಳು . ಕಟ್ಟುಗಟ್ಳೆ ಐಟಂ – ದೋಸೆ ಇಡ್ಳಿ ವಡೆ ಬೆಶಿ ಬೆಶಿ ಸಿಕ್ಕುಗು ಮಾಡಿಗೊಂಡಿಪ್ಪ ಹೋದರೆ. ಮತ್ತೆ ಚಟ್ಟಂಬಡೆ, ಬನ್ಸು ಗೋಳಿಬಜೆ, ಅವಲಕ್ಕಿ ಉಸ್ಲಿ, ಬ್ರೆಡ್ಡು.. ಬೆಶಿ ಬೆಶಿ ಉದಿಯಪ್ಪಗ ಮಾಡಿಮಡಿಗಿರಾತು.

ಬಪ್ಪವೂ ಪೆಂಗಣ್ಣನಾಂಗಿರ್ತ ನಾಕು ಖಾಯಂ ಗಿರಾಕಿಕೊ ಹೇಂಗೂ. ಎಜೆಸ್ಟು ಆಗಿಯೊಂಡಿತ್ತಿದ್ದು.

ಆದರೆ ….

ಇವು ಹೋದವು ಬೆಶಿ ಬೆಶಿ ಎಂತ ಉಂಟು ಹೇಳಿ ದಿನಾ ಕೇಳುದರ ಕೇಳಿ ಕೇಳಿ ಬೊಡುದ್ದು ಸತ್ಯಣ್ಣಂಗೆ.

ಒಂದಿನ ಇವು ಕೇಳಿದವು ಹೊತ್ತೋಪಗ ಹೋಗಿ – ” ಬೆಶಿ ಬೆಶಿ ಎಂತ ಇದ್ದು ಸತ್ಯಣ್ಣ? “

ಸತ್ಯಣ್ಣಂಗೆ ಅರೆಕೋಪವೂ ಬಂತು … ಹೇಳಿದಾ – “ಇದಾ..  ಬೆಶಿ ಬೆಶಿ ಕಾಪಿ ಇಲ್ಲಿದ್ದು., ಬೇರೆಂತಾರು ಬೆಶಿ ಆಯೇಕಾರೆ ಮೇಗೆ ಕರಡಿ ಭಟ್ಟನಲ್ಲಿಗೇ ಹೋಯೇಕಷ್ಟೆ”. 😀

~~

6

“ವೃಕ್ಷ ಮದಾಲೋ – ಬೀಜ ಮದಾಲೋ” – ಇದು ಎಂದಿಂದಲೋ ಬಗೆಹರಿಯದ್ದೆ ಉಳುದ್ದ ಜಿಜ್ನಾಸೆ.

ಆದರೆ ಅಡಿಗೆ ಸತ್ಯಣ್ಣಂಗೆ ಈ ವಿಷಯಲ್ಲಿ ಎಳ್ಳಷ್ಟೂ ಸಂಶಯವೇ ಇಲ್ಲೆ. – ಬೀಜವೇ ಮದಲು.

ಎಂತಕೆ ಹೇಳಿ ನಿಂಗೊ ಕೇಳಿರೆ ಅದಕ್ಕೆ ಅಧ್ಯಾತ್ಮ ಚಿಂತನೆ ಸತ್ಯಣ್ಣನತ್ರೆ ಇದ್ದು –

“ ನಾವು ವಸಿಷ್ಠ, ಜಮದಗ್ನಿ, ಭಾರದ್ವಾಜ. ಕಾಶ್ಯಪ ಗೋತ್ರ ಹೇಳಿ ಹೇಳುತ್ತನ್ನೇ.. ಹೇಳಿರೆ ಅಲ್ಲಿಂದ ನಮ್ಮ ಗೋತ್ರ. ಅಂಬಗ ಅದರಿಂದ ಮದಲಾಣೋರಿಂಗೆ ಏವ ಗೋತ್ರ ಹೇಳಿ ಕೇಳ್ತ ಕ್ರಮ ಇಲ್ಲೆ. ಹಾಂಗೇ ಇದುದೇ. ಒಂದು ಹಂತಂದ ಲೆಕ್ಕಚಾರ ಹಿಡುದು ಅಳದರೆ ಸಮ ಆವ್ತು. ಇಲ್ಲದ್ದರೆ ಸರ್ವೆಯವು ಬಂದು ಪ್ರತಿಸರ್ತಿ ಜಾಗೆ ಅಳವಾಗಲೂ ಒಂದೇ ಹಾಂಗೆ ಆವ್ತಿಲ್ಲೆ. ಅದನ್ನೇ ಹಿಡುಕ್ಕೊಂಡು ಕೂದರೆ  ಜಾಗೆ ವ್ಯಾಜ್ಯ ಮುಗಿವಲೂ ಇಲ್ಲೆ. ಹಾಂಗೆ ನೋಡಿರೆ ಈ ಪ್ರಪಂಚವೇ ಆ ದೇವರಿಂದ ಆದ್ದು. ಅಂಬಗ ಆ ದೇವರ ಗೋತ್ರ ಏವುದು? ಅವನಲ್ಲಿಂದಲೇ ಗೋತ್ರ ಸುರುವಾಗೇಡೇದಾ ?! ಅಂವ ಅತೀತ ಹೇಳಿ ಆದರೂ ಅಂವನಿಂದ ಉಂಟಾದ್ದು ಎಲ್ಲವೂ ಅವನ ಗೋತ್ರವೇ ಅಲ್ಲದ. ಅವನೇ ಜಗದ ಪಿತಾಮಹ ಹೇಳಿ ಆದಮತ್ತೆ ನಾವೆಲ್ಲರೂ ಸಹೋದರ ಲೆಕ್ಕವೇ ಅಲ್ಲದ. ಸಹೋದರ ಮದುವೆಯೋ ಅಂಬಗ ಮತ್ತೆ ಆದ್ದದು ? … …..”

ಯೋಪ! ಎನ ತಲೆತಿರುಗಿತ್ತು. ಏನಾರು ಅರ್ಥ ಆಯ್ದೋ?!.  ಬೇಕೋ ನಿಂಗೊಗೆ ಇನ್ನು ಬೀಜಮೂಲ ??!! 😀

~~

7

ಅಡಿಗೆ ಸತ್ಯಣ್ಣ° ಮಾರುತಿ800 ಇತ್ತೀಚೆಗೆ ತೆಗದ್ದು ನಿಂಗೊಗೂ ಗೊಂತಿದ್ದನ್ನೇ..

ದೂರಕ್ಕೆ ಕಾರು ಓಡ್ಸೆಕ್ಕಾರೆ ರಂಗಣ್ಣ ಬಂದಾಯೇಕ್ಕಷೇ..

ಈಗಷ್ಟೆ ರಜ ರಜಾ ಬಿಡ್ಳೆ ಅಭ್ಯಾಸ ಆಗ್ಯೊಂಡಿದ್ದು ಸತಣ್ಣಂಗೆ..

ಎದುರಂಗೂ ಹಿಂದಂಗೂ L ಬೋರ್ಡ್ ದೊಡ್ಡಕೆ ಬರದು ಹಾಕಿದ್ದ ಕಾರ್ಲಿ ಸತ್ಯಣ್ಣ°..

ಒಂದಿನ ರಂಗಣ್ಣ° ಇಲ್ಲದ್ದಿಪ್ಪಗ ಅಗತ್ಯ ಪೆರ್ಲಕ್ಕೆ ಹೋಯೇಕ್ಕಾಗಿ ಬಂತು ಸತ್ಯಣ್ಣಂಗೆ..

ಪೆರ್ಲಕ್ಕೆ ಸಲೀಸಾಗಿ ಹೋಗಿ ಬಂದುಗೊಂಬಷ್ಟು ಅಭ್ಯಾಸ ಆಯ್ದು ಹೇಂಗೂ ಈಗಾಗಳೇ..

ಹಾಂಗೆ ಕಾರು ತೆಕ್ಕೊಂಡು ಮುಖ್ಯರಸ್ತೆ ಪೆರ್ಲಕ್ಕೆ ಎತ್ತಿಯಪ್ಪಗ ಕರೇಲಿ ನಿಂದುಗೊಂಡಿತ್ತ ಪೋಲಿಸು ಚೆಕ್ಕಿಂಗು ಕೈ ತೋರ್ಸಿ ದೆನಿಗೇಳಿತ್ತು..

ಚೀಲಲ್ಲಿ ಹೋಳಿಗೆ ಇಲ್ಲೆ. ಎಂತ ಮಾಡ್ತಿನ್ನು ?!..

ಸತ್ಯಣ್ಣ° ಹೇಳಿದ°… – “ಸಾರ್, ಇದಾ ನಾನು ಈಗಷ್ಟೇ ಡ್ರೈವಿಂಗ್ ಕಲಿತ್ತಾ ಇಪ್ಪದು…”

ಪೋಲಿಸರ : “ಡ್ರೈವಿಂಗ್ ಮಾಷ್ಟ್ರ ಇಲ್ಲದ್ದೆಯೋ..”?!! – ಆಶ್ಚರ್ಯಂದ ಕೇಳಿತ್ತು

ಸತ್ಯಣ್ಣ°  : “ಅಪ್ಪು ಸಾರ್.,    ಇದು ಕರೆಸ್ಪೋಂಡೆನ್ಸು ಟ್ರೈನಿಂಗು” !

ಅಡಿಗೆ ಸತ್ಯಣ್ಣ ಹೇಳಿರೆ ಹೋಳಿಗೆ ಸತ್ಯಣ್ಣ ಹೇಳಿಯೇ ಊರಿಡೀ ಗುರ್ತ ಇಪ್ಪ ಮನುಷ್ಯ°, ಇವನತ್ರೆ ಇನ್ನು ಮಾತಾಡಿರೆ ಹಲ್ವವೋ ಜಿಲೇಬಿಯೋ ಹಿಡಿಶಿಕ್ಕುಗು ಹೇದು ಪೋಲೀಸರಂಗೆ ಮದಲೇ ಅಂದಾಜಿ ಇದ್ದು. .. “ಆತು ಭಟ್ರೇ., ನೀವು ಹೊರಡಿ” ಹೇಳಿತ್ತು. 😀

~~

8

ಅಪಾಯವ ಉಪಾಯಲ್ಲಿ ತಪ್ಪುಸೆಕು ಹೇಳ್ತದು ಒಂದು ಕೆಣಿ.

ಒಬ್ಬೊಬ್ಬನದ್ದು ಒಂದೊಂದು ಕೆಣಿ..

ವಾಹನಲ್ಲಿ ಹೋಪಗ ಮಾರ್ಗಲ್ಲಿ ಹುಲಿ ಎದುರೆ ಆದರೆ ಎಡತ್ತಿಂಗೆ ಇಂಡಿಕೇಟರ್ ಹಾಕಿ ಬಲತ್ತಿಂಗೆ ತಿರುಗಿಸಿ ಹೋಯೇಕು ಹೇಳ್ವದು ಸರ್ದಾರನ ಕೆಣಿ.

‘ಜೀವ ಇದ್ದರೆ ಬೇಡಿ ತಿಂಬೆ’ ಹೇದು ರಿವರ್ಸ್ ಗೇರ್ ಹಾಕಿ ಬಲಿಪ್ಪೆಕು ಹೇಳ್ವದು ರಾಂಪನ ಕೆಣಿ.

ರಜವೂ ಹೆದರದ್ದೆ ಅಲ್ಲಿಯೇ ನಿಂದು ಹುಲಿಯ  ಕಣ್ಣಿಂಗೇ ಬೀಳ್ತಾಂಗೆ ಹೆಡ್ಲೈಟ್ ಹಿಡಿಯೆಕು ಹೇಳ್ತದು ಅಡಿಗೆ ಸತ್ಯಣ್ಣನ ಕೆಣಿ. 😀

~~

9

ಮೌಢ್ಯದ ಸಮಯಲ್ಲಿ ಅನುಪತ್ಯ ಕಮ್ಮಿ..

ಸತ್ಯಣ್ಣಂಗಾದರೂ ಅಪರೂಪಲ್ಲಿ ಮಾಸಿಕವೋ ತಿಥಿಯೋ ಅಡಿಗೆ ಸಿಕ್ಕುಗು..

ಒಬ್ಬನೇ ಹೋಯೇಕ್ಕಾಗಿಪ್ಪಲ್ಯಂಗೆ ರಂಗಣ್ಣ ಎಂತಕೆ?!..

ಮನೇಲಿ ಅಂತೇ ಕೂದರೆ ಹೊತ್ತು ಹೋವ್ತಿಲ್ಲೆ.. ಗೈವಲೆ ಹಾಂಗೇನೂ ಉಂಬಳಿ ಸಿಕ್ಕಿದ ಭೂಮಿಯೂ ಇಲ್ಲೆ.

ರಂಗಣ್ಣಂಗೆ ಒಂದು ವಾರದ ರಜೆ ಇದ್ದನ್ನೆ ಎಂತ ಮಾಡೋದು ಹೇಳಿ ಗ್ರೇಶಿಯೊಂಡಿಪ್ಪಗ ಒಂದು ಅಂದಾಜಿ ತಲಗೆ ಹೊಕ್ಕತ್ತು..

ಸತ್ಯಣ್ಣನತ್ರೆ ಹೋಗಿ ರಂಗಣ್ಣ ಹೇದ° – ಸತ್ಯಣ್ಣೋ.. ಆನು ನಾಕು ದಿನ ಬೆಂಗಳೂರ ಅಣ್ಣನಲ್ಲಿಗೆ ಹೋಯ್ಕಿ ಕೂದಿಕ್ಕಿ ಬತ್ತೆ..

ಬೆಂಗಳೂರ್ಲಿ ನಾಕು ದಿನ ಕೂದು ಎಂತ ಮಾಡ್ತ್ಯೋ ಅಲ್ಲಿ ? – ಕೇಳಿದ ಸತ್ಯಣ್ಣ°.

ರಂಗಣ್ಣ ಹೇಳಿದ°.. – “ಸತ್ಯಣ್ಣೋ., ಬೆಂಗಳೂರ ಅಣ್ಣನ ಮನೆ ಇಪ್ಪದು ಮೂರನೇ ಮಹಡಿಲಿ. ಉದಿಯಪ್ಪಗ ಬೇಗ ಎದ್ದು ಹಲ್ಲು ತಿಕ್ಕಿಯೊಂಡು ಬಾಲ್ಕನಿಲಿ ನಿಂದು ಕೆಳಂತಾಗಿ ನೋಡಿರೆ ರಂಗೋಲಿ ಹಾಕುತ್ತದು ನೋಡ್ಳಾವ್ತು. ಚಂದಕೆ ಹಾಕುತ್ತವು. ನಮ್ಮೂರಿಲ್ಲಿ ಹಾಂಗಿರ್ತದು ನೋಡ್ಳೆ ಸಿಕ್ಕ!”.

ಸತ್ಯಣ್ಣ ಹಿಡಿಸೂಡಿ ಎಲ್ಲಿದ್ದು ಅಲ್ಲ ದಂಟು ಎಲ್ಲಿದ್ದು ಹೇಳಿ ಹುಡ್ಕುವಂದ ಮದಲೆ ರಂಗಣ್ಣ ಮೊಸರು ಮಜ್ಜಿಗೆ ಆಗದ್ದ ಜೆನ ಅಡಿಗೆ ಕೊಟ್ಟಗೆಲಿ ಹುಳಿ ಮಜ್ಜಿಗೆನೀರು ಒಗ್ಗರಣೆ ಹಾಕಿದ್ದು ಲಾಯಕ ಇದ್ದು ಹೇಳಿ ನಾಕು ಗ್ಲಾಸು ಕುಡುದು ಹುಳಿ ನೆಗೆ ಮಾಡಿ ಬಾಯಿ ಉದ್ದಿಗೊಂಡವನಾಂಗೆ ನೆಗೆ ಮಾಡಿ ಜಾಗೆ ಕಾಲಿ ಮಾಡಿದ°. 😀

~ ~

10.

ಸತ್ಯಣ್ಣಂಗೆ ಮೊಬೈಲ್ ಇಲ್ಲದ್ರೂ ಮಗಳು ರಮ್ಯಂಗೆ ರಂಗಣ್ಣ ಕೊಟ್ಟ ಮೊಬೈಲ್ ಇದ್ದು., ಸಾಕಾವ್ತು.

ಸತ್ಯಣ್ಣಂಗೆ ಏವತ್ತಾರು ಬೇಕಪ್ಪದು….

ರಂಗಣ್ಣ° ಒಂದಿನ ಫೋನ್ ಮಾಡಿದ° ಆ ಮೊಬೈಲಿಂಗೆ…,  ಆರೂ ತೆಗದ್ದವಿಲ್ಲೆ..

ಹೊತ್ತೋಪಗ ಸತ್ಯಣ್ಣನ ಕಂಡ ರಂಗಣ್ಣ ಕೇಳಿದ° – “ಆನು ಆಗ ರಿಂಗ್ ಮಾಡಿಯಪ್ಪಗ ಏಕೆ ಆರೂ ತೆಗಯದ್ದದು?”

ಸತ್ಯಣ್ಣ ಹೇಳಿದ° – “ ರಂಗಣ್ಣೋ.. ಆನೇಂಗೆ ತೆಗವದು !…  ಮಗಳು ಆ ರಿಂಗ್ ಟೋನಿಂಗೆ ಡಾನ್ಸ್ ಮಾಡಿಯೊಂಡಿತ್ತು” !! 😀

 

                                          “““““` 😀 😀 😀 “““““`

 

9 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 4

  1. ಎರಡು ಮೂರು ಸರ್ತಿ ಓದಿದೆ ಭಾವ.. ಅನ್ದರೂ ಬೊಡಿತ್ತಿಲ್ಲೆ ಮಿನಿಯಾ…ಬಾರೀ ಲಾಯ್ಕಾಯ್ದು..

  2. ಸತ್ಯಣ್ಣನ ಸತ್ಯ ಕಥಗೊ ಸತ್ಯವಾಗ್ಲೂ ಸಕತ್ ಆಗಿದ್ದು. ಒದಗುಸಿ ಕೊಡ್ತಾ ಇಪ್ಪ ಚೆನ್ನೈ ಭಾವಯ್ಯಂಗೆ ಧನ್ಯವಾದಂಗೊ. ಹುಲಿ ಕಾರಿನ ಎದುರ ಬಂದರೆ ಅದರ ಕಣ್ಣಿಂಗೆ ಹೆಡ್ ಲೈಟು ಹಾಕುತ್ತ ಐಡಿಯ ಒಳ್ಳೆದಾಯಿದು.

  3. ಒ೦ದರಿ೦ದ ಒ೦ದು ಬಲ…ಕ೦ಪ್ಯೂಟರ್ ನೋಡಿ ನೆಗೆ ಮಾಡುವ ಹಾ೦ಗಾತು !

  4. ಇನ್ನೊ೦ದು ಜೋಕು…

    ~~
    ರಮ್ಯ ತು೦ಬಾ ಸಮಯ ಚಾಟ್ ಲಿ ಕಳೆತ್ತ ಇತ್ತಿದ್ದು. ಇತ್ತೀಚೆಗೆ ಒ೦ದು ವಾರ೦ದ ಬಹು ಕಡಿಮೆ ಸಮಯವ ಚಾಟ್ ಲಿ ಕಳವದು. ಎ೦ತ ಕಾರಣ ಆದಿಕ್ಕು ಹೇಳಿ ಸತ್ಯಣ್ಣ ಬಹಳ ತಲೆ ಕೆಡಿಸಿಗೊ೦ಡ…

    ವಿಷಯ ಎ೦ತರ ಹೇಳಿರೆ ರಮ್ಯ ಇತ್ತೀಚೆಗೆ ಸ೦ಸ್ಕ್ರುತ ಸ೦ಭಾಷಣೆ ಮಾಡುಲೆ ಸುರು ಮಾಡಿ ಇನ್ನು ಮೆಲೆ ಚಾಟ್ ಲಿ ಸ೦ಸ್ಕ್ರುತವೆ ಉಪಯೋಗಿಸುದು ಹೇಳಿ ಶಪಥ ಮಾಡಿಗೊ೦ಡಿದು.

    {
    ಕುಶಲಮ್ ವಾ?
    ~ಕುಶಲಮ್
    ಸ೦ಸ್ಕ್ರುತೆ ಏವ ಸ೦ಭಾಷಣಮ್ ಕುರ್ಮಃ
    ~ಅಸ್ತು
    ಪುನರ್ಮಿಲಾಮಃ
    }
    ಇಷ್ಟರಲ್ಲಿ ಸ೦ಭಾಷಣೆ ಮುಗಿತ್ತಡ.

    ~~

  5. ಚೆನ್ನೈ ಭಾವ ಗಂಭೀರ ವಿಚಾರಲ್ಲೂ ಬಲ…ಹಾಸ್ಯಲ್ಲೂ ಮಹಾಬಲ!

  6. ಸತ್ಯಣ್ಣನ ಜೋಕುಗೋ ಎಲ್ಲ ಓದಿದೆ… ತುಂಬಾ ಖುಷಿ ಆತು… ಹರೇ ರಾಮ…

    ~~
    ಸತ್ಯಣ್ಣ: ಬೈಲಿಲ್ಲಿ ಜೋಕುಗೋ,ಪೆನ್ಸಿಲ್, ಭಗವದ್ಗೀತೆ ಹೇಳಿಗೊಂಡು ಧಾರಾವಾಹಿಯ ಹಾಂಗೆ ಬಪ್ಪದರ ಓದಿಗೊಂಡು ಕೂದರೆ ಅನುಪತ್ಯಲ್ಲಿ ಅಡಿಗೆ ಮಾಡುದಲ್ಲದ್ದೆ ಮನೆಲಿ ಅರ್ಧ ಅಡಿಗೆ ಮಾಡುವ ಆನು… ಇನ್ನು ಪೂರ್ತಿ ಅಡಿಗೆ ಮಾಡೆಕ್ಕಕ್ಕೋ ಹೇಳಿ!

    ಶಾರದೆ : ಏ ಹಾಂಗೆಲ್ಲ ಓದಿಗೊಂಡು ಕೂರುತ್ತಿಲ್ಲೇ ಆತ… ನಮ್ಮದೇ ಜೋಕುಗೋ ಬಪ್ಪಗ ಓದದ್ದೆ ಇಪ್ಪದು ಹೆಂಗೆ ನಿ೦ಗಳೇ ಹೇಳಿ!
    ~~

    ಸತ್ಯಣ್ಣ ಬಫೆಲಿ ಬೇಗ ಬೇಗ ಒಂದು ಪ್ಲೇಟ್ ಪಲಾವ್ ಮಾಂತ್ರ ತಿಂದು ಕೈ ತೊಳದ.
    ಅವ ಊಟ ಆಗಿ ಕೈ ತೊಳವದರ ಮಾಂತ್ರ ನೋಡಿದ ಯಜಮಾನ್ರು ಕೇಳಿದವು – ‘ಎಂತ ಇಷ್ಟು ಬೇಗ ಮುಗಿಶಿದಿ ಸತ್ಯಣ್ಣ?’
    ಸತ್ಯಣ್ಣ ಹೇಳಿದ – ಶುಗರ್ ಇದ್ದ ಕಾರಣ ಮೂರನೆ ಹಂತಿವರೆಗೆ ಕಾವಲೆ ಕಷ್ಟ ಅಪ್ಪದಕ್ಕೆ ರಜ್ಜ ತಿಂದುಗೊಂಡದು…
    ~~

    1. [ನಮ್ಮದೇ ಜೋಕುಗೋ ಬಪ್ಪಗ ] – ತಿರುಪತಿಗೇ ಲಡ್ಡೋ… ಸತ್ಯಣ್ಣಂಗೇ ಪೆಟ್ಟೋ ! 😀

      ಒಪ್ಪ ಲಾಯಕ ಆಯ್ದು ಜಯಕ್ಕ°. ಧನ್ಯವಾದಂಗೊ

      ಧನ್ಯವಾದಂಗೊ ಸುಖೇಶಣ್ಣೋ, ಸಂದೇಶಣ್ಣೋ. ಹಾಂಗೇ., ಓ ಅಲ್ಲಿ ಮೇಗಂದಲೇ ನಿಂದು ತಳಿಯದ್ದೆ ಲೈಕ್ ಒತ್ತಿಕ್ಕಿ ಹೋದವಕ್ಕೂ .

  7. ಸತ್ಯಣ್ಣನ ಜೋಕುಗೊ ಲಾಯ್ಕಲ್ಲಿ ಬತ್ತಾ ಇದ್ದು ಮಾವ. ಪುಸ್ತಕ ಮಾಡುವ ಯೋಚನೆ ಇದ್ದಾ?

  8. satyanna jokugokke ondu oppa.. laika ayidu bhaava..
    satyanna’nge beshi aaddadu.. gaddakke kai madugulaga .. soooper… 🙂 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×