- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಒಟ್ಟಾರೆ ಬೆಶಿ ಬೆಶಿ . ಬೇಶುತ್ತಲ್ಲಿಯೂ ಬೆಶಿ, ಬೇಶಿ ಮಡಿಗಿದ್ದದೂ ಬೆಶಿ, ಬೇಶಿ ಹಾಕುತ್ತವನೂ ಬೆಶಿ ..
ಒಳವೂ ಬೆಶಿ… ಹೆರವೂ ಬೆಶಿ..
ಅಡಿಗೆ ಸತ್ಯಣ್ಣನೂ ಬೆಶಿ.. ನಾವುದೇ ಬೆಶಿ..
ಇದರಿಂದ ಹೆಚ್ಚಿಗೆ ತಲೆ ಬೆಶಿ ಆಗದ್ದಿಪ್ಪಲೆ ನೇರವಾಗಿ ವಿಷಯಕ್ಕೇ ಹೋಪೋ° ಈಗ-
~
1.
ಅಡಿಗೆ ಸತ್ಯಣ್ಣ° ಕೈಪಂಗಳ ಅನುಪ್ಪತ್ಯಕ್ಕೆ ಹೋದ್ದಿದಾ..
ಮನೆ ಯೆಜಮಾನ ನಾಕು ಮಾವಿನಣ್ಣು ಕೈಲಿ ಹಿಡ್ಕೊಂಡು ಬಂದು – “ಸತ್ಯಣ್ಣ°., ಇದರ ಮೂರುಜೆನಕ್ಕೆ ಸಮಾನವಾಗಿ ಹಂಚೆಕ್ಕಾತನ್ನೆ”
ಅಡಿಗೆ ಸತ್ಯಣ್ಣ ಹೇಳಿದ° – ಅದಕ್ಕೆಂತಾಯೇಕು. ಒಂದರ ಇಲ್ಲಿ ಮಡಿಗಿಕ್ಕಿ ಹೋಗಿ. ಮತ್ತಂಗೆ ನಿಂಗೊಗಾತು. ಬಾಕಿ ಮೂರಾತನ್ನೆ.. ಒಬ್ಬೊಬ್ಬಂಗೆ ಒಂದೊಂದು ಕೊಟ್ಟಿಕ್ಕಿ ಬನ್ನಿ.
ಅಡಿಗೆ ಸತ್ಯಣ್ಣ° ಎಂತ ಕೊರದು ಜ್ಯೂಸ್ ಮಾಡಿ ಕೊಡುಗು ಹೇದು ಗ್ರೇಸಿದನೋ ಎಂತ ಯೆಜಮಾನ° !!! 😀
~~
2.
ಅಡಿಗೆ ಸತ್ಯಣ್ಣನ ಕಾಲಿಂಗೆ ಕಲ್ಲು ಡಂಕಿ ನೆತ್ತರು ಬಂದು ಬೆರಳು ಬೀಗಿತ್ತು..
ಇದಿನ್ನು ಬೇನೆ ಜೋರಾದರೆ ಕಾರ್ಯ ಕೊಯಂಙುಗು ಹೇದು ಹತ್ರದ ಡಾಕುಟ್ರಣ್ಣನಲ್ಲಿಗೆ ಹೋದ°..
ಡಾಕುಟ್ರಣ್ಣ ಸತ್ಯಣ್ಣನ ಕೂರ್ಸಿ ಉಷ್ಣಮಾಪನವ ಬಾಯಿಗೆ ಮಡಿಗಿ ಟೆತೋಸ್ಕೋಪ್ ಹಿಡ್ಕೊಂಡು ಎದೆಗೆ ಒತ್ತಿ ಒತ್ತಿ ನೋಡ್ಳೆ ಸುರುಮಾಡಿದವು..
ಬಾಯಿಗೆ ಮಡಿಗಿದ್ದರ ತೆಗದಪ್ಪದ್ದೆ ಸತ್ಯಣ್ಣ° °ಹೇದ° – ಇದ ಡಾಕುಟ್ರಣ್ಣ., ನಿಂಗೊ ಡಾಕುಟ್ರು ಹೇದು ಎನ ಗೊಂತಿದ್ದು., ಎನಗೆ ಈಗ ಕಾಲಿಂಗೆ ತಾಗಿದ್ದದು. ನಿಂಗೊ ಎಂತಕೆ ಎದೆ ಪರೀಕ್ಷೆ, ಬಾಯಿ ಪರೀಕ್ಷೆ ಮಾಡ್ಳೆ ಹೆರಟದು?!. ಇದಾ.. ಎನ್ನ ಕಿಸೆಲಿ ಮುವ್ವತ್ತೇ ರೂಪಾಯಿ ಇಪ್ಪದಿಂದು 😀
~~
3.
ಸತ್ಯಣ್ಣಂಗೆ ಅನುಪ್ಪತ್ಯ ಇಲ್ಲದ್ದ ದಿನ ಪುರುಸೊತ್ತಿದ್ದರೆ ಮಧ್ಯಾಹ್ನಂತ್ರಿಗಿ ಪೆರ್ಲ ಪೇಟಗೆ ಹೋಪ ಕ್ರಮ ..
ಪೇಟಗೆ ಹೋದವಂಗೆ ಪುರುಸೊತ್ತಿದ್ದರೆ ಡಾಕುಟ್ರಣ್ಣನ ಕ್ಲಿನಿಕ್ಕಿಂಗೆ ಹೋಪ ಕ್ರಮವೂ..
ಡಾಕುಟಣ್ಣಂಗೆ ಪುರುಸೊತ್ತಿದ್ದರೆ ಇಬ್ರೂ ಕೂದು ಸಾವಕಾಶ ಲೋಕಾಭಿರಾಮ..
ಓ ಮನ್ನೆ ಹಾಂಗೆ ಸತ್ಯಣ್ಣ° ಡಾಕುಟ್ರಣ್ಣನ ಕಾಂಬಲೆ ಹೋದಪ್ಪಗ ಅಲ್ಲಿ ಡಾಕುಟ್ರಣ್ಣ ಇಲ್ಲೆ., ಅಂದು ಅಲ್ಲಿ ಹೊಸ ನರ್ಸು..
ಸತ್ಯಣ್ಣಂಗೆ ನರ್ಸಿನ ಗುರ್ತ ಇಲ್ಲೆ, ನರ್ಸಿಂಗೆ ಸತ್ಯಣ್ಣನ ಗುರ್ತ ಇಲ್ಲೆ..
ಸತ್ಯಣ್ಣ° ಕೇಳಿದ° – ಡಾಕುಟ್ರು ಇಲ್ಲೆಯಾ?
ನರ್ಸಕ್ಕ ಹೇಳಿತ್ತು – ಇಲ್ಲ, ಹೊರಗೆ ಹೋಗಿದ್ದಾರೆ.
ಸತ್ಯಣ್ಣ° – ಬಕ್ಕಾ ?
ನರ್ಸಕ್ಕ° – ಬಕ್ಕು, ಲೇಟಕ್ಕು
ಸತ್ಯಣ್ಣ° – ತುಂಬ ಲೇಟಕ್ಕ?
ನರ್ಸಕ್ಕ° – ಅಪ್ಪು., ಐದು…. ಐದುವರೆ ಅಕ್ಕು.
ಸತ್ಯಣ್ಣ° – ನಿಂಗೊ ಆರು?, ಅವರ ಹೆಂಡತಿಯಾ?
ನರ್ಸಕ್ಕಂಗೆ ಇನ್ನು ಈ ಜೆನ ಪ್ರಶ್ನೆ ಕೇಳ್ತದು ಆಪತ್ತು ಹೇದು ಕಂಡತ್ತು ., ಟೋಕನ್ ನಂಬ್ರ 1 ತೆಗದು ಕೊಟ್ಟಿಕ್ಕಿ, ಹೆರ ಬೆಂಚಿಲಿ ಕೂದುಗೊಳ್ಳಿ ಹೇಳಿ ಒಳ ಹೋತು.
ಸತ್ಯಣ್ಣ “ಆತು” ಹೇದಿಕ್ಕಿ ಟೋಕನ್ನಿನ ಕಿಸಗೆ ಹಾಕ್ಯೊಂಡು ಮೆಟ್ಲು ಇಳ್ಕೊಂಡು ಹೆರಬಂದ° 😀
~~
4.
ಮೆಸೇಜು ಬಂದದರ ಹೇಂಗೆ ನೋಡ್ತದು ಹೇದು ಸತ್ಯಣ್ಣಂಗೆ ರಂಗಣ್ಣ° ಹೇಳಿಕೊಡ್ಳೆ ಸುರುಮಾಡಿದ°..
“ಮೆಸೇಜು ಗುಬ್ಬಿ ಒತ್ತಿ, ಮತ್ತೆ ಇನ್ ಬಾಕ್ಸ್ ಬಾಗಿಲು ಓಪನ್ ಮಾಡಿರೆ ಆತು” – ರಂಗಣ್ಣ° ಉವಾಚ.
ಸತ್ಯಣ್ಣ° ಗುರುಟಿ ಗುರುಟಿ ಕಡೇಂಗೆ ಕೇಳಿದ° – “ರಂಗಣ್ಣೋ., ಒಳಂಗೆ ಹೋಪಲೆ ಬಾಗಿಲು ಎಲ್ಲಿಪ್ಪದು ಹೇದು ಕಾಣುತ್ತಿಲ್ಲೆ, ಕಾಲಿಂಗ್ ಬೆಲ್ಲು ಮತ್ತು ಇದ್ದೋ ನೋಡೇಕೊ ಇಲ್ಲಿ?!”
~~
5.
ಬಾಳೆಹಣ್ಣು, ಹಲಸಿನ ಹಣ್ಣು, ಮಾವಿನ ಹಣ್ಣು ಹೇಳಿರೆ ಹವ್ಯಕರಿಂಗೆ ಗುರು ಗಣಪತಿ ದುರ್ಗೆ ಇದ್ದಾಂಗೆ.
ಆಯಾ ಸೀಸನ್ನಿಲ್ಲಿ ಆಯಾ ಪ್ರತಾಪ..
ಓ ಮನ್ನೆ ಬೈಲಕೆರೆ ಅಜ್ಜನಲ್ಲಿ ಕಾಲಾವಧಿ ಸೇವೆಗೊ..
ಅಜ್ಜನ ಮಗಳಕ್ಕೋ ಎರಡೂ ಬೆಂಗ್ಳೂರ್ಲಿ ಇರ್ಸು, ಪುಳ್ಯಕ್ಕಳೂ ಬಂದಿತ್ತವು. ಅಡಿಗೆ ಸತ್ಯಣ್ಣನೇ ಹೋದ್ದು ಅಲ್ಲಿಗೆ ಅಡಿಗ್ಗೆ..
ಕೆಲಸಕ್ಕೆ ಬತ್ತ ಸುಂದರಿ ಉದಿಯಪ್ಪಗ ಬಪ್ಪಗ ಲಾಯ್ಕ ಹನಿಯ ಕಾಟು ಮಾವಿನಣ್ಣು ಎಲ್ಲಿಂದಲೋ ಹೆರ್ಕಿ ತಂದು ಕೊಟ್ಟತ್ತಿದ್ದು ‘ಅಣ್ಣಾರ್ನನಳ್ಪ ವಿಶೇಸೋ ಇನಿ’ ಹೇದು..
ಮಾವಿನಣ್ಣು ಇಪ್ಪಗ ಅದರ ಎಂತಾರು ಮಾಡದ್ದೆ ಇಪ್ಪದೆಂತಕೆ. ಲಾಯಕ ಸಾಸಮೆ ಮಾಡುವೋ ಹೇದು ಒಮ್ಮತ ಆತು..
ಕಾಲಾವಧಿ ಸೇವೆ ಹೇಳಿರೆ ಮನೆಯೋರು, ಕಳಿಯಬಾರದ್ದ ನೆರೆಕರೆಯೋರು ಅಟ್ಟೆ.. ಸಣ್ಣ ಐವತ್ತು..
ಊಟಕ್ಕೆ ಒಂದನೆ ಹಂತಿಲಿ ದೂರ ಬೆಂಗ್ಳೂರಿಂದ ಬಂದ ಮಗಳಕ್ಕೋ ಪುಳ್ಯಕ್ಕಳೂ ಕೂದುಗೊಂಡವು.. ಸತ್ಯಣ್ಣನೂ ಖುದ್ದು ಬಳುಸಲೂ ಸೇರಿಗೊಂಡ°..
ಮಾವಿನಣ್ಣು ಸಾಸಮೆ ತೆಕ್ಕೊಂಡು ಬಂದ ಎಲ್ಲೋರಿಂಗೂ ಒಂದು ಎರಡು ಹೇದು ಗೊರಟು ಬಳ್ಸಿಗೊಂಡು ಬಂದ°..
ಬೆಂಗ್ಳೂರ ಪುಳ್ಯಕ್ಕಗೂ “ಇದಾ ಮಕ್ಕಳೆ ಮಾವಿನಣ್ಣು ಸಾಸಮೆ ಲಾಯಕ ಇದ್ದು.. ಉಣ್ಣಿ ಲಾಯಕ” ಹೇದು ದೊಡ್ಡ ದೊಡ್ಡ ಗೊರಟು ಹುಡ್ಕಿ ಬಳಿಸಿದ°..
ಅಬ್ಬೆಕ್ಕಳೂ ಹೇದವು ಮಕ್ಕೊಗೋ -“ಸೀ ಹೌ ನೈಸ್ ಸ್ವೀಟ್ ಇಟ್ ಈಸ್., ಈಟ್ ಇಟ್., ಟೇಸ್ಟ್ ಇಟ್”
ಪಿಜ್ಜ ಬರ್ಗರು ಕಚ್ಚಿ ತಿಂತ ಮಕ್ಕಗೊ ಇದು ಎಂತ ಹೇದು ನೋಡುವ ಮನಸ್ಸೂ ಆಯ್ದಿಲ್ಲೆ. ಎನಬೇಡಾ ಹೇದು ಕರೇಂಗೆ ನೂಂಕಿದವು..
ಒಂದು ಅಬ್ಬೆ ಹೇಳಿತ್ತು – “ನೋಡಿ ಸತ್ಯಣ್ಣ., ಈ ಮಕ್ಕೊ ಗೊರಟು ಕರೇಂಗೆ ದೂಡಿದ್ದು !”
ಅಡಿಗೆ ಸತ್ಯಣ್ಣ ಹೀಂಗಿರ್ಸು ಎಷ್ಟು ನೋಡಿದ್ದನೋ ಏನೋ!, ಹೇಳಿದಾ° – “ಈಗಾಣ ಮಕ್ಕೊ ಗೊರಟು ಚೀಪಲೂ ಆಗ” 😀
~~
6.
ಅಡಿಗೆ ಸತ್ಯಣ್ಣ° ಕಾರು ತೆಗದ ಹೊಸತ್ತರಲ್ಲಿ ಕಾರು ಓಡುಸಲೆ ಒಂದು ಡ್ರೈವರ° ಬೇಕು ಹೇದು ಹುಡ್ಕಿಯೊಂಡಿತ್ತಿದ್ದ°..
ಕಾರಿನ ಬ್ರೋಕರ ಮಮ್ಮದೆಯತ್ರೆಯೂ ಕೇಟ°.. ಆದರೆ ಸಮಗಟ್ಟು ಜೆನ ಸಿಕ್ಕಿತ್ತಿಲ್ಲೆ..
ಚೋಮ ಮೂಲ್ಯನ ಮಗ ಬಾಲಕೃಷ್ಣನತ್ರೆ ಕೇಟ° – “ಸ್ಟಾರ್ಟಿಂಗು ಸಂಬಳ ರೂ.2000/- ಕೊಡ್ತೆ ಬತ್ತೆಯಾ”
ಬಾಲಕೃಷ್ಣ ಕೇಳಿತ್ತು.. “ಸ್ಟಾರ್ಟ್ ಮಾಡ್ಳೆ ಎರಡು ಸಾವಿರ ಕೊಡ್ತರೆ ಮತ್ತೆ ಓಡುಸಲೆ ಎಷ್ಟು ಕೊಡ್ತಿ?!”
ಸತ್ಯಣ್ಣ ತಳಿಯದ್ದೆ ಹೆರಟಿಕ್ಕಿ ಮರುದಿನಂದ ರಂಗಣ್ಣನನ್ನೇ ಹೋಪಲ್ಯಂಗೆ ಕರಕ್ಕೊಂಡು ಹೋಪಲೆ ಸುರುಮಾಡಿದ°. ಹೇಂಗೂ ಕಾಯಿ ಕಡವಲೆ ಒಬ್ಬ° ಬೇಕನ್ನೇ. 😀
~~
7.
ನಮ್ಮೂರಿಲ್ಲಿ ನಮ್ಮವೇ ಅಂಗಡಿಯೋ, ಯೇಪಾರವೋ, ಸರ್ವೀಸೋ ಮಡಿಕ್ಕೊಂಡಿದ್ದರೂ ನಮ್ಮವೆಲ್ಲೋರೂ ಅಲ್ಲಿಗೇ ಹೋಯೇಕು ಹೇಳ್ವ ನಿರೀಕ್ಷೆ ಮಡಿಕ್ಕೊಂಬದು ಸರಿಯಲ್ಲ.
ಅದೆಲ್ಲ ಅವರವರ ಸೌಕರ್ಯ, ಇಷ್ಟ..
ಅಡಿಗೆ ಸತ್ಯಣ್ಣಂಗೂ ಆ ಮಾತಿಲ್ಲಿ ಒಮ್ಮತವೇ..
ಬೈಲಿಲಿ ಅಲ್ಪ ಜೆಂಬ್ರಂಗಳೂ ಇರ್ತು ., ಅಲ್ಪ ಅಡಿಗೆಯೋರೂ ಇದ್ದವು..
ಎಲ್ಲಾ ದಿಕ್ಕಂಗೂ ಅಡಿಗೆ ಸತ್ಯಣ್ಣನತ್ರೇ ಕೇಳಿ ಹೇಳಿ ಅಡಿಗ್ಗೆ ನಿಘಂಟು ಮಾಡ್ತದು ಹೇಳ್ವ ಮಾತೆಲ್ಲಿಯೂ ಇಲ್ಲೆ..
ಅಡಿಗೆ ಸತ್ಯಣ್ಣನೂ ಹಾಂಗಿರ್ಸು ಬಯಸುತ್ತೋನಲ್ಲ..
ಅಡಿಗೆ ಸತ್ಯಣ್ಣ° ತಾನು ಅಡಿಗೆ ಮಾಡ್ತರೂ, ಬೇರೆವು ಅಡಿಗೆ ಮಾಡ್ತ ಅನುಪ್ಪತ್ಯಕ್ಕೆ ತಾನು ಹೋದರೂ ಹೇಳ್ತದು ಒಂದೇ ಮಾತು –
“ಅಡಿಗೆ ಆರು ಮಾಡಿರೂ ಅಡ್ಡಿ ಇಲ್ಲೆ., ಒಳ್ಳೆದಾಯೆಕು ಅಷ್ಟೆ.” 😀
~~
8.
ಹೋದ ಸರ್ತಿ ಶಾರದೆಗೆ ತುಂಬಾ ವೀಕ್ ನೆಸ್ ಆಗಿತ್ತು ಹೇದು ಕೋಟೆಕ್ಕಲ್ಲು ಆರ್ಯ ವೈದ್ಯ ಶಾಲಗೆ ಹೋದ್ದಕ್ಕೆ ಅಲ್ಲಿಯಾಣ ಡಾಕುಟ್ರು ೨ ಕುಪ್ಪಿ ಅಶೋಕಾರಿಷ್ಟ ಕೊಟ್ಟು ಕಳುಸಿದವು..
ಎರಡು ತಿಂಗಳು ಅಶೋಕಾರಿಷ್ಟ ಕುಡುದ್ದರ್ಲಿ ಹೆಮ್ಮಕ್ಕ ಗೆನಾ ಆದವು..
ಒಂದಿಕ್ಕೆ ಮದುವೆ ಅನುಪ್ಪತ್ಯಕ್ಕೆ ಹೋದಲ್ಲಿ ಮದಿಮ್ಮಾಳ ಅಪ್ಪಂಗೆ ವೀಕ್ ನೆಸ್ ಆಯ್ದು ಹೇದು ಶುದ್ದಿ ಅಡಿಗೆ ಕೊಟ್ಟಗ್ಗೆ ಎತ್ತಿತ್ತು..
ಪಾಚ ತೊಳಸ್ಯೊಂಡಿತ್ತಿದ್ದ ಅಡಿಗೆ ಸತ್ಯಣ್ಣ ಕೈಲಿ ಸೌಟು ಹಿಡ್ಕೊಂಡಿದ್ದವನೇ ಸೀದ ಹೋಗಿ ಸಲಹೆ ಕೊಟ್ಟ° – “ಕೇಚಣ್ಣ., ಗಡಿಬಿಡಿ ಬೇಡ., ಎರಡು ಕುಪ್ಪಿ ಅಶೋಕಾರಿಷ್ಟ ಕುಡೀರಿ. ಪಕ್ಕ ಕಮ್ಮಿ ಆವ್ತು. ಎನ್ನ ಯಜಮಾಂತಿಗೆ ವೀಕ್ ನೆಸ್ ಆದಿಪ್ಪಗ ಅದನ್ನೇ ಕೊಟ್ಟದು. ಪೂರ್ತಿ ಗುಣ ಆಯ್ದು”. 😀
~~
9.
ಮದರಾಸು ಭಾವನ ಕಾಣೆಕು ಹೇದು ವೈಶಾಖಲ್ಲಿ ಮದರಾಸಿಂಗೆ ಬಂದ ಅಡಿಗೆ ಸತ್ಯಣ್ಣ ಮದರಾಸು ಭಾವನಲ್ಲಿ ಏ.ಸಿ ಯ ನೋಡಿಕ್ಕಿ ನವಗೂ ಹೀಂಗಿರ್ಸು ಒಂದು ಹಾಕ್ಸಿರೆ ಆವ್ತಿತ್ತು ಹೇದು ಮದರಾಸು ಭಾವಯ್ಯನತ್ರೆ ಅದರ ವಿವರ ಕೇಳ್ಳೆ ಸುರುಮಾಡಿದ° ಅಡಿಗೆ ಸತ್ಯಣ್ಣ..
ಮದರಾಸು ಭಾವ° ಸತ್ಯಣ್ಣಂಗೆ ಹೇದ° – “ನಿನ್ನ ಮಾರುತಿ ಕಾರಿನಷ್ಟೋ, ಪಲ್ಸರ್ ಬೈಕಿನಷ್ಟೋ ಇದಕ್ಕೆ ಅಸಲು ಇಲ್ಲೆ ಸತ್ಯಣ್ಣ., ಕರೆಂಟು ಬಿಲ್ಲು ಮಾತ್ರ ತಿಂಗಳಿಂಗೆ ಕಮ್ಮಿಲಿ ನಾಲ್ಕೈದು ಸಾವಿರ ಬಕ್ಕು..”
ಅಷ್ಟು ಕೇಳಿಯಪ್ಪದ್ದೆ ಸತ್ಯಣ್ಣ° ಅಭಿಪ್ರಾಯ ಬದಲ್ಸಿದ° – “ ನವಗೆ ಮನೆಲಿ ಸೋಗೆ ಕೊಟ್ಟಗೆ ಇದ್ದು, ಅದರಷ್ಟು ತಂಪು ಇದರಲ್ಲಿ ಇಲ್ಲೆ ಬಿಡಿ”
ಅಷ್ಟು ಹೇಳಿದ ಸತ್ಯಣ್ಣ° ಅಂದೇ ಮಂಗಳೂರು ಮೈಲಿಲಿ ಊರಿಂಗೆ ವಾಪಸ್ಸು.. !! 😀
~~
10.
ಸೀಟು ಲೇದು ಸೀಟು ಲೇದು ಹೇದು ಮಗಳ ಮೈದುನನ ಮದುವೆಲಿ ಬೊಬ್ಬೆ ಹೊಡಕ್ಕೊಂಡಿದ್ದ ಮದಿಮ್ಮಾಯನ ತೆಲುಗು ಚೆಂಙಾಯಿಗಳ ನೋಡಿ ಸತ್ಯಣ್ಣಂಗೆ ರಜ ಹರಟೆ ಹರಟೆ ಆತು..
ಸೀದಾ ಅವರತ್ರಂಗೆ ಹೋಗಿ ಸತ್ಯಣ್ಣ ಹೇದಾ° – “ದಾಯ್ತ ಗಲಾಟೆ ಮಾರಾಯ? ಸ್ವೀಟ್ ಲಾಡ್ ಅತ್ತ್., ಹೋಳಿಗೆ! ಪುಟ್ಟಿ ಬುಕ್ಕೊ ಲಾಡ್ ಸಿಂತಿಜ್ಜನ!” 😀
~~ 😀 😀 😀 ~~
~~~~
ಓದುಗರಿಂಗೆ ಸವಾಲು –
ಕಳುದವಾರದ ಸರಿ ಉತ್ತರ – ○ ಕೃಷ್ಣ
ಈ ವಾರದ ಚೋದ್ಯ –
ಅಡಿಗೆ ಸತ್ಯಣ್ಣಂಗೆ ಕಾನಾವಕ್ಕ° ಕಟ್ಟಿಕೊಟ್ಟ ಹೋಳಿಗೆ ಎಷ್ಟು ?
○ಆರು ○ ನಾಲ್ಕು ○ ಹತ್ತು ○ ಐದು
* ಇನಾಮು ಕಳುದ ಸರ್ತಿ ಹೇದಾಂಗೇ. ಸದ್ಯಕ್ಕೆಂತ್ಸೂ ಬದಲಾವಣೆ ಆಯ್ದಿಲ್ಲೆ.
~~~~
ಬೆಂಗಳೂರು ಪುಳ್ಯಕ್ಕೊ ‘ ಈಟ್ ಇಟ್’ ಹೇದಪ್ಪಾಗ ಗೊರಟು ನುಂಗದ್ದು ಭಾಗ್ಯ ! ಚೆನ್ನೈ ಭಾವ… ಸತ್ಯಣ್ನಂಗೆ ಬಿಡುವೇ ಇಲ್ಲೆ ಭಾರೀ ಬೆಶಿ … ಅಲ್ಲದೋ?
ನೆಗೆ ಮದ್ದುಗ ಭಾರೀ ಲಾಯ್ಕಾಯ್ದು.
ಸತ್ಯಣ್ಣಂಗೆ ಜೈ……!
ಕಿಸೆಲಿ ಮೂವತ್ತೇ ರೂಪಾಯಿ ಇಪ್ಪದು ಪಷ್ಟಾಯಿದು
ಹಹ್ಹಹ್ಹ! ಪಷ್ಟಾಯಿದು ಬಾವಯ್ಯ!
ನೈಜವಾಗಿಪ್ಪ ಸತ್ಯಣ್ಣನ ನಗೆಹನಿಗೊ ಒಟ್ಟು ಸೇರಿ ಬೈಲಿಲ್ಲಿ ಹೊಳೆಯಾಗಿ ಹರಿತ್ತಾ ಇಪ್ಪದು ತುಂಬಾ ಕೊಶಿಯ ಸಂಗತಿ.
ಬೆಂಗ್ಳೂರಿನ ಪುಳ್ಯಕ್ಕೊ ಗೊರಟಿನ ಕರೇಂಗೆ ದೂಡಿದ್ದು, ಸ್ಟಾರ್ಟಿಂಗು ಸಂಬಳ, ಸೀಟು ಲೇದು ಎಲ್ಲವೂ ಲಾಯಕಿತ್ತು. ಕಾನಾವಕ್ಕ ಆರು ಹೋಳಿಗೆ ಅಲ್ಲದೊ ಕೊಟ್ಟದು ? ಎನಗೆ ಕೊಟ್ಟ ಕಟ್ಟಲ್ಲಿ ಅಷ್ಟಿತ್ತು.
ಒಹೋಯ್ ಸೂಪರ್ ಸತ್ಯಣ್ನಾ. ಹಾ೦.. ೫.