- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2013 ರ ಕವನ ಸ್ಪರ್ಧೆಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಬರಹ.
ಲೇಖಕಿ ಶ್ರೀಮತಿ ಅದಿತಿ ಶ್ರೀಹರ್ಷ,ಸಾದ೦ಗಯ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನತು೦ಬಿದ ಅಭಿನ೦ದನೆಗೊ.
***********************************
ಸಾರಥಿಯು ತಾನಾದ° ಮಣಿರಥ
ವೇರಿ ಕ೦ಸನು ದಿಬ್ಬಣಲಿ ನಡು
ದಾರಿಲೇ ಕೇಳಿತ್ತು ದೇವಕಿಯಷ್ಟಮ ಕುಮಾರ|
ಘೋರ ಸಾವಿನ ತತ್ತ° ಕೋಪದಿ
ಹಾರಿ ಕಡಿಲೋಪಗಳೆ ಸಮಯವ
ಕೋರಿ ವಸುದೇವಾಖ್ಯ ಕೊಡುಲೊಪ್ಪುತ್ತ° ಶಿಶುಗಳನೂ||
ಹೆದರಿ ಕಸ್ತಲೆ ಕೋಣೆಗಟ್ಟಿದ°
ಮದಲು ಹುಟ್ಟಿದ ಸಪ್ತ ಶಿಶುಗಳ
ತದುಕಿ ಹಿಡುದಪ್ಪಳಿಸಿ ಗೋಡಗೆ ಕೊಂದ° ದುರುಳರಸ|
ಕದಡಿ ಹೋತದ ಮನದ ಶಾಂತಿಯು
ಚದುರಿ ಹಾರಿತ್ತಿರುಳ ನೆಮ್ಮದಿ
ಕದಲಿ ಹೋದಷ್ಟಮದ ಗರ್ಭವು ಮೂಡಿ ದೇವಕಿಲಿ||
ಕಂದ ಹುಟ್ಟಿದ° ಮಳೆಯ ರಾತ್ರಿಲಿ
ಬಂದತೊಂದಶರೀರ ವಾಣಿಯು
ನಂದ ಕಂದನ ಜಾಗೆ ಬದಲಿಸಿ ಕೃಷ್ಣ° ಹೋಯೆಕ್ಕು|
ತಂದೆ ಮಡುಗಿದ° ಮಗನ ಕುರುವೆಲಿ
ಮುಂದೆ ಯಮುನೆಯು ದಾರಿ ಕೊಟ್ಟತು
ಹಿಂದೆ ಹೆಡೆಕೊಡೆ ಬಿಡುಸಿ ತಡದನೊ ಶೇಷ ಮಳೆಹನಿಯ||
ಬೆಳಕು ಮೂಡಿದ ಮತ್ತೆ ರಾಜನು
ಸೆಳದ ಕೂಸಿನ ಜೀವ ತೆಗವಲೆ
ಹಳಿದು ಕಂಸನ ಹಾರಿ ಹೋತದು ಭೂಮಿ ಮೇಗಂದ |
ಬಿಳುಚಿ ರಾಜನ ಮೋರೆ ಬೆಗರಿತು
ಕಳಚಿ ಹೋತದ ಧೈರ್ಯ ಮನಸಿಲಿ
ಸುಳುಹು ಸಿಕ್ಕಿತ್ತಾಘಳಿಗೆಲಿಯೆ ತನ್ನ ಸಾವಿಂದು||
ಯಬ್ಬಾ ಎನಗೆ ಹೀ೦ಗೆ ಬರವಲೇ ಎಡಿತ್ತಿಲ್ಲೆ 😉
ಲಾಯ್ಕ ಆಯ್ದು ಅದಿತಿ ಅಕ್ಕ 🙂
ಅಭಿನ೦ದನೆಗೊ 🙂
ಕತೆಯ ಪದ್ಯ ರೂಪಲ್ಲಿಳಿಶಿದ್ದು ಲಾಯಿಕಾಯಿದು ಅದಿತಿಯಕ್ಕ.
ಮಳೆಗಾಲದ ಆ ಒ೦ದು ದಿನ ನೆಡದ ಘಟನೆ ಈಗ ಪುರಾಣದ ಭಾಗ ಆತು.ಮು೦ದೆ ಭಾರತದೇಶದ ಮನೆ-ಮನ೦ಗಳಲ್ಲಿ ಶಾಶ್ವತ ಆಗಿ ನಿ೦ದತ್ತು.
ಅನಿರೀಕ್ಷಿತ ಕಲ್ಪನೆ ಅದಿತಿ ಅಕ್ಕ.ಅಭಿನ೦ದನೆಗೊ.
ಒಪ್ಪ ಕೊಟ್ಟ ಎಲ್ಲೋರಿಂಗು ಧನ್ಯವಾದ. 🙂
ಕವನದ ಯೋಚನಾ ಶೈಲಿ ವಿಭಿನ್ನವಾಗಿ ಮೂಡಿದ್ದು ಲಾಯ್ಕಾಯಿದು… ಅಭಿನಂದನೆಗ ಅಕ್ಕಾ..
ಹಿಂದೊಂದು ದಿನ ಮಳೆಗಾಲಲ್ಲಿ ಹೀಂಗಾಗಿತ್ತು ಹೇಳುದರ ಭಾಮಿನಿ ಕತೆಯಾಗಿ ಹೇಳಿದ್ದು ತುಂಬಾ ಚೊಕ್ಕ ಆಯಿದು. ಶ್ರೀಕೃಷ್ಣಜನ್ಮಾಷ್ಟಮಿ ಹೇಳುವಾಗ ‘ ಧೋ ‘ರನೆ ಸೊಯ್ಪುವ ಮಳೆ ನೆಂಪಾಗಿಯೇ ಆವುತ್ತು. ಅಂಥಾ ನಿಕಟವಾದ ಸಂಬಂಧ ಮಳೆಗುದೆ ಆ ಸಂದರ್ಭಕ್ಕುದೆ ಇತ್ತಲ್ಲದಾ. ಹೊಸ ರೀತಿಯ ಕಲ್ಪನೆಲಿ ಕವನ ಕಟ್ಟಿದ್ದಕ್ಕೆ ನಿಂಗಳ ಅಭಿನಂದಿಸುತ್ತೆ ಅದಿತಿ.
ಹರೇ ರಾಮ. ಲಾಯಕ ಆಯ್ದು.
ವಿಷಯವ ಬೇರೆಯೇ ರೀತಿಲಿ ಚಿ೦ತಿಸಿ ಆಯ್ಕೆ ಮಾಡಿದ್ದು ವಿಶೇಷ ಆಯಿದು..
ಲಾಯ್ಕ ಆಯಿದು.