ನಿ೦ಗೊಗೆ ಸುರೇಖ ಚಿಕ್ಕಮ್ಮನ ಗೊ೦ತಿದ್ದೋ? ಬೆ೦ಗಳೂರಿಲಿ ಕೋಣನಕು೦ಟೆಯ ಶ್ರೀ ರಾಮ ಕಲಾ ಸ೦ಘದ ಯಕ್ಷಗಾನ ತಾಳಮದ್ದಲೆ ನೋಡಿದ್ದರೆ ನಿ೦ಗೊಗೆ ಖ೦ಡಿತಾ ಗೊ೦ತಿಕ್ಕು. ” ಅಪ್ಪು,ಅಪ್ಪು ” ಹೇಳುಗು ಮುಳಿಯ ಭಾವ°.
ಭೀಮಗುಳಿ ಶ್ಯಾಮ ಭಟ್ ರ ಧರ್ಮಪತ್ನಿ ಸುರೇಖ ಚಿಕ್ಕಮ್ಮ ತನ್ನ ಇಬ್ರು ಮಕ್ಕೊಗೂ ಯಕ್ಷಗಾನಲ್ಲಿ ನಾಟ್ಯ ಕಲಿವ ಹಾ೦ಗೆ ಪ್ರೋತ್ಸಾಹ ಮಾಡ್ತಾ ಇದ್ದವು. ಬೈಲಿನ ಚಟುವಟಿಕೆಗಳ ನೋಡಿ, ಬರವ ಉಮೇದು ತೋರ್ಸಿ ಬೈಲಿ೦ಗೆ ಶುದ್ದಿ ಕಳುಸಿದ್ದವು.ಬನ್ನಿ, ಸುರೇಖ ಚಿಕ್ಕಮ್ಮನ ಶುದ್ದಿಗಳ ಓದಿ ಪ್ರೋತ್ಸಾಹ ಕೊಡುವ°.~ ಗುರಿಕ್ಕಾರ°.
ಆನು,ಅವ° ಮತ್ತೆ…
ಎನ್ನ ಬಾಳಲ್ಲಿ ಅವನ ಪ್ರವೇಶ ಅಪ್ಪಗ ಎನಗೆ ಭರ್ತಿ ಮೂವತ್ತು ವರ್ಷ ಕಳ್ದಿತ್ತು. ”ನಿಂಗೊಗಿಬ್ಬರಿಂಗು ಜೋಡಿ ಸರಿ ಬಾರ ‘‘ ಹೇಳಿ ಎಲ್ಲೋರು ಹೇಳಿದವು. ಎನಗುದೇ ಹಾಂಗೇ ಅನ್ನಿಸಿಕೊಂಡಿತ್ತು. ಅದರೆ ಎಂಥ ಮಾಡುದು ಹೇಳಿ ಗೊಂತಾಯ್ದಿಲ್ಲೆ. ಆನು ಬಿಟ್ರೂ ಅವ° ಬಿಡ. ಹಾಂಗೂ ಹೀಂಗೂ ಬ೦ಙ ಪಟ್ಟುಕೊಂಡು ಹತ್ತು ವರುಷ ಇವನೊಟ್ಟಿಂಗೇ ಇತ್ತಿದ್ದೆ. ಇವನೊಟ್ಟಿಂಗೆ ಆನು ಇದ್ದೆ ಹೇಳಿ ಗೊಂತಾಗದ್ದಂಗೆ. ಆದ್ರೆ ಎಷ್ಟು ದಿನ ಹೀಂಗೇ ನೆಡ್ಡೆತ್ತು ?
ಎನ್ನದೇ ಪರಿಸ್ಥಿತಿಯಲ್ಲಿಪ್ಪ, ಕದ್ದು ಮುಚ್ಚಿ ಸಂಧಾನ ಮಾಡಿಕೊಂಡಿಪ್ಪ, ಎನ್ನ ಜೊತೆಯವನ್ನ ನೋಡಿಯಪ್ಪಗ, ಆನುದೇ ಹೀಂಗೇ ಇದ್ದುಬಿಡ್ಲಕ್ಕನ್ನೇ ? ಹೇಳಿ ಕಾಣ್ತು. ಈಗಾಗ್ಲೇ ರಾಜಿಯಾಗಿಪ್ಪ ಗೆಳತಿಯರು ಹೇಳ್ತವು ” ನೀನು ನಮ್ಹಾಂಗೆ ಆಗೆಡ, ಯಾವ ವಿಷ್ಯನ್ನು ಮುಚ್ಚಿ ಮಡುಗೆಡ. ಹೇಂಗೆ ಇರ್ತೋ ಹಾಂಗೆ ಒಪ್ಪಿಗೊ, ಇಲ್ಲದ್ರೇ ನಮ್ಮ ಹಾಂಗೆ ಆವುತ್ತು, ಎಂಗೋ ಹಿಂತಿರುರಿ ಬಾರದ್ದಷ್ಟು ಮುಂದೆ ಹೋಗಿ ಆಯ್ದು“. ಅವರ ಮಾತುದೆ ಸರಿ ಹೇಳಿ ಕಾಣ್ತು. ಅಪ್ಪು…. ಅವ° ಎನ್ನ ಪೂರ್ತಿ ಆವರಿಸೊದರ ಮೊದೂಲೆ ಹೆರ ಪ್ರಪಂಚಕ್ಕೆ ಎನ್ನ-ಅವನ ಸಂಬಂಧ ಹೇಂಗಿದ್ದು ಹೇಳಿ ಹೇಳಿಬಿಡೆಕ್ಕು…………
ಮೊನ್ನೆ ಮೊನ್ನೆ ಆನು ಆ ದಿಕ್ಕಿಲಿ ಒಂದು ಹೆಜ್ಜೆ ಮುಂದಿಟ್ಟದ್ದು ಅಪ್ಪು. ಆದರೇ ಅದ್ರಿಂದ ಎಷ್ಟು ಉಪದ್ರ ಆತು ಗೊಂತಿದ್ದಾ………….?
ಎನ್ನ ಈ ಪ್ರಯತ್ನದಿಂದ ಎನ್ನ ಮಕ್ಕೊಗೆ ತುಂಬಾ… ಕಿರಿಕಿರಿ ಆಯ್ದು. ಅವರ ದೋಸ್ತಿಗೊ ಎಲ್ಲೋರೂ ಎನ್ನ ಬಗ್ಗೆಯೇ ಮಾತಾಡಿದ್ರೆ ಉಪದ್ರ ಆಗದ್ದೆ ಇಕ್ಕಾ ? ಆದ್ರೇ… ಮಕ್ಕೋಗೆ ಉಪದ್ರ ಅವುತ್ತು ಹೇಳಿ ಆನು ಕಳ್ಳರಂಗೆ ಎಷ್ಟು ದಿನ ಇಪ್ಪಲೆಡಿತ್ತು ? ಎನ್ನ ಹಾಂಗೆ ತೊಂದರೆಯಲ್ಲಿ ಇಪ್ಪ ೯೦ % ಜೆನ ಮಾಡುತ್ತಾ ಇಪ್ಪ ಹಾ೦ಗೆ, ಆನುದೆ ಕಳ್ಳರಾ೦ಗೆ ಇದ್ದು ಬಿಡೆಕ್ಕ ?
ಎನ್ನ ಮಕ್ಕಳ ಗೆಳೆಯರಿಂಗೆ ಎಷ್ಟು ಸೊಕ್ಕು ಗೊಂತಿದ್ದ ? ನೇರಕ್ಕೇ ಎನಗೇ ಆ ವಿಷ್ಯದ ಪ್ರಶ್ನೆ ಕೇಳ್ತವು……….. ಎಂತ ಉತ್ತರ ಕೊಡೆಕ್ಕು ಅವಕ್ಕೆ ?
ಎನ್ನ ಹಾಂಗೆ ಕಳ್ಳ ಜೀವನ ಮಾಡ್ತಾ ಇಪ್ಪ, ಎನಗಿಂತ ವಯಸ್ಸಿಲಿ ದೊಡ್ಡೊವು, ಎನ್ನ ಚುಚ್ಚಿ ಮಾತಾಡ್ತವು.
ಅಥವಾ ಎನಗೆ ಹಾಂಗೆ ಕಾಂಬದಾ ? ಗೊಂತಿಲ್ಲೆ.
ಎನ್ನ ಹಣೆ ಬರಹಕ್ಕೆ ಎಲ್ಲಿಗೆ ಹೋದ್ರುದೆ ಅವನ ಬಗ್ಗೆಯೇ ಮಾತಾಡ್ತವು. ಮೊನ್ನೆ ಒಂದು ಜಂಬ್ರಕ್ಕೆ ಹೊಗಿತ್ತಿದ್ದೆಯೊ°. ಅಲ್ಲಿಗೆ ಎತ್ತಿ ಇನ್ನು ಎರಡು ನಿಮಿಷವೂ ಆಗಿತ್ತಿಲ್ಲೆ. ಅವನ ಬಗ್ಗೆಯೇ ಪ್ರಶ್ನೆ ಕೇಳಿದವು. ಮತ್ತೆ ಕೆಲವ್ರು ಆನು ಕೇಳದ್ರೂ ಸಲಹೆ ಕೊಡ್ತವು. ಇವರೆಲ್ಲರ ಎಂತ ಹೇಳಿ ಕರೆಯಕ್ಕು ? ಹತ್ತಿರದ ನೆಂಟ್ರನ್ನೇ ? ಬಿಡುಲೆಡಿಯ. ಎನ್ನ ನಿರ್ಧಾರಕ್ಕೆ ದೃಢವಾಗಿ ಅಂಟಿಕೊಂಬಲೆ ಬಿಡದ್ದ ಇವರ ’ ಹಿತ ಶತ್ರುಗಳು’ ಹೇಳೆಕಷ್ಟೆ ! ಅಲ್ಲದೋ ?
ಎನ್ನ ಮುಂದೆ ಎರಡೇ ಆಯ್ಕೆ ಇಪ್ಪದು. ಒಂದು ಕಳ್ಳರೊಟ್ಟಿಂಗೆ ಕಳ್ಳರ ಹಾ೦ಗೆ ಇದ್ದು ಬಿಡೆಕ್ಕು. ಸಾಯುವವರೆಗೆ ಕಳ್ಳನಾಂಗೆ ಜೀವನ ! ಇನ್ನೊಂದು ಆರು ಎಂತಾ ಹೇಳ್ತವು ನೋಡದ್ದೆ ಎನ್ನ-ಇವನ ಸಂಬಂಧವ ಬಹಿರಂಗವಾಗಿ ಒಪ್ಪಿಕೊಂಡು ಬಿಡೆಕ್ಕು. ಆಗ ಈ ಹತ್ತು ವರ್ಷದ ಕಳ್ಳ ಬಾಳಿ೦ಗೆ ಒಂದು ಮುಕ್ತಾಯ ಹೇಳಿ ಆವುತ್ತು. ಮುಂದಾದ್ರು ಅರಾಮಾಗಿ ಇಪ್ಪಲಾವುತ್ತನ್ನೆ ! ನಿರ್ಧಾರ ಮತ್ತೆ ಎನಗೇ ಬಿಟ್ಟದ್ದು ಅಲ್ಲದೋ ? ಇನ್ನಾದರೂ ಪ್ರಾಮಾಣಿಕಳಾಗಿ ಇರೆಕ್ಕು ಹೇಳಿ ನಿರ್ಧಾರ ಮಾಡಿದ್ದೆ. ಎನ್ನ ಆಸೆಗೆ ನಿಂಗಳ ಸಹಕಾರ- ಪ್ರೊತ್ಸಾಹ ಕೊಡ್ತಿರನ್ನೆ ?
ಎಂತ ಇವಳ ಕಥೆ ?
ಮರ್ಲರ ಹಾಂಗೆ ಮಾತಾಡ್ತಾ ಇದ್ದಲ್ದಾ ? ಹೇಳಿ ತಲೆ ಬೆಶಿ ಮಾಡಿಕೊಂಡಿರೋ ಹೇಂಗೆ ? ಆನು ರಾಜಿ ಅಪ್ಪಲಿಪ್ಪದು ಬೇರೆ ಆರೊಟ್ಟಿ೦ಗೂ ಅಲ್ಲಪ್ಪ……….. ಎನ್ನ ಪ್ರಬುದ್ಧತೆಯ ( ????) ಸಂಕೇತವಾಗಿರೋ “ಬೆಳಿ ಕೂದಲ” ಜೊತೆಯಲ್ಲಿ ಮಾರಾಯ್ರೆ………….?
ಗೊಂತಾತನ್ನೆ ?
ಇನ್ನು ನಿಂಗಳುದೆ ತಲೆ ಕೂದಲಿಂಗೆ ಬಣ್ಣ ಹಾಕದ್ದೆ, ಎನಗೆ ಪ್ರೋತ್ಸಾಹ ಕೊಡೆಕ್ಕದಾ(!!!! ????).. ಎನ್ನ ಪಕ್ಷಕ್ಕೆ ಸೇರೆಕ್ಕದಾ… ಅಕ್ಕಾ ?
- “ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ “ - October 12, 2014
- “ರಾತ್ರಿ ಒಂದು ಗಂಟೆಗೆ ಎಚ್ಚರಾಗಿ ಇದ್ದಕ್ಕಿದ್ದಂತೆ ಜ್ಞಾನೋದಯ ಆತು !” - October 5, 2014
- ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ!! - September 20, 2014
Surekha akka, aanude ide nirdhaara maduva andajilittidde. NingaLa lekhana nodi kushi aathu, sphoortide sikkittu..
ಬಾ… ಬಾ… ಒಟ್ಟಿಂಗೆ ಹೋಪ.
ಲಾಯ್ಕಾಯಿದು 🙂
ಧನ್ಯವಾದಂಗೊ. ಕಲ್ಪನೆಗಿಂತ ಅನುಭವ ಯಾವತ್ತು ಲಾಯ್ಕ. ಅಲ್ಲದೊ ?
ಸರಿ ಹಾ೦ಗೇ ಆಗಲಿ.
ಎಲ್ಲಿ ಆದರೂ ಹೋತ್ತೋಪಗಣ ಆಟ ಆಗಿದ್ದರೆ
ಇಲ್ಲಿ ಹೇಳಿಕೆ ಹಾಕಿ. ಆದರ ದೂರಲ್ಲೇ ನಿ೦ದು,
ಮ೦ಥರೇಯ ಸ್ವಾಗತ ಎಲ್ಲ ನೋಡಿ, ಸೋಜಿ ಕುಡಿವುಲೆ
ನಾವಗೆ ಒ೦ದು ಅವಕಾಶವೂ ಆಗಲಿ.
ಇ೦ದು ಉದಿಯಪ್ಪಗ ಬೇರೆ ಬೈಲಿಲಿ ತಿರಿಗಿ, ಬೈಟೂ ಕಾಪಿ ಉರ್ಪುವಾಗ
,ಚೌಚೌ ಬಾತ್ ಮಾಡಿ ನಿ೦ಗ ಮಡಗಿದ್ದು ಕ೦ಡತ್ತು.
ಅದರಲ್ಲಿ ವನವಾಸದ ಪೀಠಿಕೆ ರಾಮ ಹಾಕಿದ್ದು ಕ೦ಡತ್ತು.
ರಾಮ೦ಗೆ ಕಿರಿಯಬ್ಬೆ ಮಾಡಿಕೊಟ್ಟ ಕಾಪಿ ಕಯಿಕ್ಕಿದ್ದಿಲ್ಲೆಡೋ.ಅಲ್ಲದೋ.
ಅದು ಪೂರ್ವ ತಯಾರಿಡ.
( ಇದು ನಿ೦ಗಳ ಅಕ್ಷರನಗರದ ಬರಹ ಬಗ್ಗೆ.).
ನಾವು ಅಪ್ಪಾದಿಕ್ಕೂ ಹೇಳಿತ್ತು ಇಲ್ಲಿ೦ದ.
ಆಗಿಕ್ಕು. ಕೆಲವು ಸರ್ತಿ ಕೆಲವರ ಅರ್ಥ ವಿಶೇಷ ಖುಷಿ ಕೊಡುತ್ತು. ಅವತ್ತು ಆದ್ದು ಹಾಂಗೆ. ಹಾಂಗೆ ತಲೇಲಿ ‘ರಾಮ-ಕೈಕಯಿ-ಮಂಥರೆ’ ವಿಷಯ ಓಡಿಕೊಂಡಿತ್ತು. ಹಾಂಗೆ ಮನೆಗೆ ಬಂದು ‘ಮಂಥರೆಯ ಸ್ವಗತ’ ಹೇಳಿ ಒಂದು ಲೇಖನ ಬರೆದೆ. ಆನೇ ಮಂಥರೆಯ ಅರ್ಥ ಹೇಳೆಕಾರೆ ನಮ್ಮ ‘ಶ್ರೀರಾಮ ಕಲಾ ಸಂಘ’ದ ತಾಳಮದ್ದಳೆ ಸಂದರ್ಭ ಬರೆಕ್ಕು, ಎನಗೆ ಮಂಥರೆ ಪಾರ್ಟು ಸಿಕ್ಕೆಕ್ಕು. ಲೇಖನ ಬರೆದು ಮಡುಗಿರೆ ಯಾವತ್ತಿಗಾರು ಉಪಯೊಗಕ್ಕೆ ಬಕ್ಕು.
ಭಾರೀ ಖುಶಿ ಆತು ಓದಿ…. ನಿನ್ನ ಜೊತೆಗೆ ಆನಿದ್ದೆ…. ಆನು ಕೂದಲಿಂಗೆ ಬಣ್ಣ ಹಾಕುದರ ಬಿಟ್ಟಿದೆ… ಈಗ ಎಲ್ಲೋರೂ ನಿನಗೆ ಬಿಳಿ ಕೂದಲೇ ಹೆಚ್ಹು ಒಂಬುತ್ತು ಹೇಳ್ತವು !!!! ಲಾಂಗ್ ಜಂಪ್ ಬರಹಕ್ಕೆ ಕಾಯ್ತಾ ಇದ್ದೆ…ಬೇಗ ಬರದು ಕಳಿಸಿ..
ಮರುಸ್ಪಂದನೆ ನೋಡಿ ಖುಷೀ ಆತು. ಜೊತೆ ಸಿಕ್ಕಿದ್ದಕ್ಕೆ ಮತ್ತು ಖುಷಿ ಆತು. ಆಚರಣೆಲಿ ತಂದು, ಜೊತೆ ನಿಂದದ್ದು, ನೇರಾನೇರ ಜೊತೆ ಕೊಟ್ಟದ್ದಕ್ಕೊಂದು ಧನ್ಯವಾದ. ಎಲ್ಲೋರು ಬಾಯಲಿ ಅಪ್ಪು ಅಪ್ಪು ಹೇಳ್ತವು. ಎಲ್ಲರಿಂಗೆ ಆಚರಣೆಲಿ ತಪ್ಪಲೆಡಿತ್ತಿಲ್ಲೆ. ಮುಂದಿನ ಬರಹಕ್ಕೆ ಪ್ರೊತ್ಸಾಹ ಕೊಟ್ಟದ್ದಕ್ಕೆ ಇನ್ನೊಂದು ಧನ್ಯವಾದ.
‘ಒಂದು ಲಾಂಗ್-ಹೈ ಜಂಪೂ ‘ ಪದ ಓದಿಯಪ್ಪಗ ಲಘು ಬರಹ ಬರೆವಲೆ ಇನ್ನೊಂದು ವಿಷಯ ಸಿಕ್ಕಿತು ! ಸದ್ಯಲ್ಲೆ ಬರಿತ್ತೆ…..’ಲಾಂಗ್ ಜಂಪ್ – ಒಂದು ಅನುಭವ’. ಗಂಭೀರ ವಿಷಯಕ್ಕಿಂತ ಲಘುಬರಹ ಇಂಟೆರೆಸ್ಟ್ ಜಾಸ್ತಿ.
ಬರೆವ ಪಿತ್ತಕ್ಕೆ/ಆಶೆಗೆ ,, ಎಲ್ಲಾ ಪತ್ರಿಕೆಗೆ ಬರೆದು ಕಾದು,
ಲೋಪಾಮುದ್ರಾವಾಗಿಯೋ ಅಲ್ಲ ಮುದ್ರಾಲೋಪವಾಗಿಯೋ,
ಉರಿದರಿಸಿ, ಕಾವೇ’ರಿ , ತೀರ್ಥ(ಹಳ್ಹೀ )ಕಮ೦ಡಲದ ಕಡೇ೦ದ ,
ಒ೦ದು ಲಾ೦ಗ್-ಹೈ ಜ೦ಪ್ಪೂ ಹೊಡೆದು,
ಬೈಲಗ೦ಗೆಯಾಗಿ ಹರಿವಲೆ ಶುರು ಮಾಡಿದ್ದು
ಅಭಿನ೦ದನೀಯ.
ಹಾ೦ಗಾಗಿಯೋ ಎ೦ತದೋ,
ಮೊದಲಿ೦ಗೆ ತಲೆಯ- ಜಡೆಕ್ಕಿಲಿ,
ಬಣ್ಣ ಕಪ್ಪೋ-ಅಲ್ಲ ಬಿಳಿಯೋ,
ಪ್ರಶ್ನೆ ಬ೦ದದು ಆಗಿಕ್ಕು.
ಹರೇ ರಾಮ , ಬೈಲಿಂಗೆ ಸ್ವಾಗತ. ಶುದ್ದಿ ಮನ್ನೆಯೇ ಕಂಡತ್ತು. ಮೇಗಂದ ಮೇಗೆ ಓದಿಯಪ್ಪಗ ತಲೆ ತಿರಿಗಿತ್ತು. ಎಂತಾರು ಇನ್ನೊಂದರಿ ನೇರ್ಪಕ್ಕೆ ಓದಿಕ್ಕಿಯೇ ಒಪ್ಪಬರವದು ಹೇದು ತಲೆ ಉದ್ದಿ ಆತು ಅಂದು.
ರಾವಣಂಗೆ ಮೂಗಿನ ಪ್ರಶ್ನೆ ಹಾಂಗೆ ನಿಂಗೊಗೆ ತಲೆಯ ಪ್ರಶ್ನೆ ಹೇದು ಈಗಷ್ಟೇ ಗೊಂತಾತು. ಅಪ್ಪಪ್ಪು ರಾಜಿ ಮಾಡಿಗೊಂಬದೇ ಒಳ್ಳೆದು. ಇಲ್ಲದ್ರೆ ತಲೆಲಿ ಕಪ್ಪುಕೂದಲೆಷ್ಟಿದ್ದಿನ್ನು ಬಾಕಿ ಹೇದು ಎಣುಸುವಾಂಗೆ ಅಕ್ಕು.
ಬರಕ್ಕೊಂಡಿರಿ.
ಮೊದಾಲು ಒಪ್ಪಣ್ಣಗೊಂದು ಧನ್ಯವಾದಂಗೊ. ಸುಧಾ/ವಿಜಯ ಕರ್ನಾಟಕ/ಕನ್ನಡ ಪ್ರಭಕ್ಕೆ ಬರೆದು, ಅವು ಪ್ರಕಟ ಮಾಡ್ತವು ಹೇಳಿ ಕಾದು ಕೂದು ಬಚ್ಚಿತ್ತು. ೪ ಲೇಖನ ಬರೆದರೆ ಒಂದು ಪ್ರಕಟ ಮಾಡ್ತವು. ಬರೆವ ಪಿತ್ತಕ್ಕೆ/ಆಶೆಗೆ ಇದೊಂದು ದಾರಿ. ಸುಲಾಭ ಆತು. ಶುದ್ಧ ಹವ್ಯಕಕ್ಕೆ ತಿದ್ದಿ ಕೊಟ್ಟ ಮುಳಿಯ ಭಾವಂಗೆ ಧನ್ಯವಾದಂಗೊ.
ಸ್ವಾಗತಿಸಿ, ಓದಿ, ಒಪ್ಪಕೊಟ್ಟು ಪ್ರೊತ್ಸಾಹಿಸಿದ ಎಲ್ಲರಿಂಗು ಧನ್ಯವಾದಂಗೊ. ಮೊದೂಲೆ ಹೇಳಿ ಬಿಡ್ತೆ. ಎನಗೆ ಶುದ್ಧ ಹವ್ಯಕ ಬತ್ತಿಲ್ಲೆ.(ಅಪ್ಪನ ಮನೆ ತೀರ್ಥಹೞಿ. ಹವ್ಯಕ ಅಲ್ಲ. ಕೋಟ). ಮಾತಾಡ್ಲೆಡಿತ್ತು. ಬರೆವಲೆ ರಜ್ಜ ಕಷ್ಟ ಆವುತ್ತು. ಎನ್ನನ್ನೆ ಒಪ್ಪಿಕೊಂಡಿದ್ದವು ಹವ್ಯಕರು, ಇನ್ನು ಎನ್ನ ಭಾಷೆ ಒಪ್ಪಿಕೊೞದಿಕ್ಕಾ ?
ಲೇಖನ ಬರೆದ ಮತ್ತೆ ಒಂದು ಒೞೆದಾಯ್ದು. ಈಗ ಆರುದೆ ‘ ಎಂತಕೆ ತಲೆಗೆ ಬಣ್ಣ ಹಾಕುತ್ತಿಲ್ಲೆ ‘ ಕೇಳ್ತವಿಲ್ಲೆ ! ಮೊದಾಲು ಅದು ಹಾಕು, ಇದು ಒೞಿದು ಹೇಳಿ ಪರಂಚಿಕೋಂಡು ಇತ್ತಿದ್ದವು.
‘ಎಂಥಕೆ ಬಣ್ಣ ಹಾಕ್ಕ್ಕುತ್ತಿಲ್ಲೆ ?’ ಪ್ರಶ್ನೆಗೆ ‘ಎಂತಕೆ ಹಾಕೆಕ್ಕು ?’ ಕೇಳಿಕೊಂಡಿತ್ತಿದ್ದೆ.
‘ಚಂದ ಕಾಂಬಲೆ’ ಹೇಳುಗು. ‘ಎಂತಕೆ ಚಂದ ಕಾಣೆಕ್ಕು ?’ ಹೇಳಿರೆ ವಿಚಿತ್ರ ಪ್ರಾಣಿ ನೋಡಿದಂಗೆ ನೋಡಿಕೋಡಿತ್ತಿದ್ದವು.
ಈಗ ಅವಿಗೂ, ಎನಗೂ ಅಭ್ಯಾಸ ಆತು.
ಎನಗನುಸುತ್ತು “ದೇವರು ಇಟ್ಟಂಗೆ ಇದ್ದರಾತು. ನಮ್ಮೆತ್ತರಕ್ಕೆ ಬೆಳೆದ ಮಕ್ಕಳ ಕಂಡಪ್ಪಗ ಗೊಂತಾವುತ್ತಿಲ್ಲೆಯೊ ವಯಸ್ಸು ಎಷ್ತಾತು ಹೇಳಿ. ಯಾರಿಂಗೆ ಮೋಸ ಮಾಡುಲೆ ಬಣ್ಣ ಹಚ್ಚುದು ?” ಆರುದೆ ಎನ್ನ ಪಾರ್ಟಿಗೆ ಸೇರುಲೆ ರೆಡಿ ಇಲ್ಲೆ !!!
ಸುಮ್ಮನೆ ಬರೆದದ್ದು ಅಷ್ಟೆಯಪ್ಪ. ಎನಗೆ ಬೇಡ ಹೇಳಿರೆ, ಉಳಿದೊವಕ್ಕೆ ಹೀಂಗೆ ಮಾಡಿ ಹೇಳುವ ಹಕ್ಕು ಎನಗೆಲ್ಲಿದ್ದು ? ಹಾಂಗೆ ಮಾಡಿರೆ ಬ್ಯೂಟಿ ಸಲೂನ್ ಮತ್ತೆ ಬಣ್ಣ ತಯಾರು ಮಾಡುವ ಕಂಪನಿಯೊವು ಎನಗೆ ಶಾಪ ಹಾಕುಗು…………….
ಸುರೇಖ ಚಿಕ್ಕಮ್ಮನ ಚಿಕ್ಕ – ಚೊಕ್ಕ ಶುದ್ದಿಗೆ ಒಂದೊಪ್ಪ.
ಸುರೇಖಾ ಚಿಕ್ಕಮ್ಮಂಗೆ ಸ್ವಾಗತವೂ ಅಭಿನಂದನೆಯೂ. ಕುತೂಹಲವ ಅಖೇರಿಯೊರೆಗೂ ಕಾಯ್ದಿರಿಸಿಗೊಂಡದು ಲಾಯ್ಕಾಯಿದು.
ಲಾಯ್ಕ ಆಯಿದು ನಿರೂಪಣೆ.
ಸುರೇಖಾ ಚಿಕ್ಕಮ್ಮಂಗೆ ಸ್ವಾಗತ.ಉಸುಲು ಬಿಗಿ ಹಿಡುದು ಓದಿದೆ.ಎಂತಾ ಕತೆ?ಅಖೇರಿಗೆ ಸಮಾಧಾನ ಆತು.ಭಾರೀ ಲಾಯಕಾಯಿದು.ಅಭಿನಂದನೆ.
ಧನ್ಯವಾದಗಳು.