Oppanna.com

“ರಾತ್ರಿ ಒಂದು ಗಂಟೆಗೆ ಎಚ್ಚರಾಗಿ ಇದ್ದಕ್ಕಿದ್ದಂತೆ ಜ್ಞಾನೋದಯ ಆತು !”

ಬರದೋರು :   ಸುರೇಖಾ ಚಿಕ್ಕಮ್ಮ    on   05/10/2014    0 ಒಪ್ಪಂಗೊ

2013ರ ಡಿಸೆಂಬರ್ 26ಕ್ಕೆ ಕಾರವಾರ ರೈಲಿನಲ್ಲಿ “ಗೋಕರ್ಣ ಬೀಚ್ ಟ್ರಕ್ಕಿಂಗ್” ಪ್ರಯುಕ್ತ (11  ಜೆನರ ತಂಡ) ಹೊನ್ನಾವರಕ್ಕೆ ಬಂದಿಳಿದಪ್ಪಗ ಸೂರ್ಯ ನೆತ್ತಿಯ ಮೇಲಿತ್ತಿದ್ದ. ಶರಾವತಿ ನದಿ ಸಮುದ್ರ ಸೇರುವ ಜಾಗೆಲಿ ಮೂಗೋಡು ಕಡೆಯ ಹಳ್ಳಿಗಳಿಗೆ ಹೋಪ ಡಿಂಗಿಲಿ ಒಂದುವರೆ ಗಂಟೆ ದೋಣಿ ವಿಹಾರ. ಮತ್ತೆ ಹೊನ್ನಾವರಂದ ಟೆಂಪೊ ಟ್ರಾವೆಲರ್ ಲಿ  ರಾಮತೀರ್ಥ ಮತ್ತು ಅಪ್ಸರ ಕೊಂಡಕ್ಕೆ ಎಂಗಳ ಪ್ರಯಾಣ. ಅಲ್ಲಿ ನೂರಾರು ಮೆಟ್ಟಿಲು ಹತ್ತಿ ಉದ್ಯಾನವನದಲ್ಲಿ ವಿಹರಿಸಿ, ಮತ್ತೊಂದು ಪಕ್ಕದಲ್ಲಿ ಬೆಟ್ಟ ಇಳುದು, ಜಲಪಾತ ನೋಡಿಕ್ಕಿ, ಮತ್ತೆ ಬೆಟ್ಟ ಹತ್ತಿ, ಸೂರ್ಯಾಸ್ತ ನೋಡಿಗೊಂಡು ಬೆಟ್ಟಂದ ಇಳಿದು ಬಪ್ಪಾಗಲೆ ಕಾಲು ಕತೆ ಹೇಳಿಗೊಂಡಿತ್ತು. ರಾತ್ರಿ ಎಂಗೋ ಉಳಿವಲೆ ಕುಮಟಾಂದ 6 km ದೂರದಲ್ಲಿಪ್ಪ ಬಾಡ ಹೆಸರಿನ ಊರಲಿ ಮೊದೂಲೆ ಸ್ಥಳ ಕಾಯ್ದಿರಿಸಿತ್ತಿದ್ದೆಯೋ°. ಅಲ್ಲಿಪ್ಪ “ಶ್ರೀ ಕನ್ನಿಕಾ ಪರಮೇಶ್ವರಿ ದೇವ -ಬಾಡ” ದೇವಾಲಯದ ಮೇಲಿನ ಕೊಠಡಿಲಿ ಎರಡು ದಿನ ಎಂಗಳ ವಾಸ್ತವ್ಯ. ಅಲ್ಲಿಯೇ ಒಂದು ಹವ್ಯಕರ ಮನೆಯಲ್ಲಿ ಊಟ ತಿಂಡಿ ವ್ಯವಸ್ಥೆ. ಹೊನ್ನಾವರದಿಂದ ಕುಮಟಾ- ಆಲ್ಲಿಂದ ಬಾಡ ತಲುಪಿಯಪ್ಪಗ ರಾತ್ರಿ 8.30. ಇಲ್ಲಿ ನೋಡಿರೆ ದೇವಸ್ಥಾನ ನೂರೊಂದು ಮೆಟ್ಟಿಲಿನ ಮೇಲಿದ್ದು ! ಲಗ್ಗೇಜ್ ಹೊತ್ತುಗೊಂಡು ಕೊಠಡಿ ತಲುಪಿಯಪ್ಪಗಲೆ ಗೊಂತಾದದ್ದು- ಊಟ ಬೆಟ್ಟದ ಕೆಳಗಿಪ್ಪ ಭಟ್ಟರ ಮನೆಲಿ ಅಂತ ! ಸರಿ. ಮತ್ತೆ ಇಳದು, ಉಂಡಿಕ್ಕಿ, ಮತ್ತೆ ಹತ್ತಿ ಹೋದದ್ದಾತು. ದೇವಸ್ಥಾನದ ಮೇಲಿಪ್ಪ ಒಂದು ಕೊಠಡಿನ ಎಂಗೊಗೆ ಬಿಟ್ಟು ಕೊಟ್ಟಿತ್ತಿದ್ದವು. ಎಂಗೋ 11 ಜನರಿಪ್ಪ ಕಾರಣ ಎಂಗೊಗೆ ಆದು ಸಾಲುತ್ತಿತ್ತಿಲ್ಲೆ. ಈ ಬಾಡ ಊರಿನ ಒಂದು ಹೊಡೆಂಗೆ ಅಘನಾಶಿನಿ ನದಿ- ಸಮುದ್ರ ಸೇರುವ ಜಾಗ, ಇನ್ನೊಂದು ಹೊಡೇಂಗೆ ಸುತ್ತುವರೆದ ಸಮುದ್ರ. ಕೋಣೆಯ ಹೊರಗೆ ನಿಂದರೆ ಸಮುದ್ರದ ಭೋರ್ಗರೆತ, ಆಕಾಶದಲ್ಲಿ ತಾರೆಗಳು- ಚಂದ್ರ-ತಂಪಾಗಿ ಬೀಸುತ್ತಿದ್ದ ತಂಗಾಳಿ !

ಒಂದರಿ ಬಾಲ್ಯ ನೆಂಪಾತು. ಅಡಿಕೆ ಒಣಗಿಸುಲೆ, 10  ಅಡಿ ಎತ್ತರದ ಕಲ್ಲು ಕಂಬದ ಆಧಾರದ ಮೇಲೆ ನಿರ್ಮಿಸಿದ ಅಡಿಕೆ ದಬ್ಬೆಯ ಚಪ್ಪರ. ಚಂದ್ರಗ್ರಹಣ ನೋಡುವ ನೆಪಲಿ ಎಂಗಳ ಮಕ್ಕಳ ಸೈನ್ಯ ಚಪ್ಪರಲಿ ಮನಿಕ್ಕೊಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆಯೋ°. ಎಚ್ಚರವಿಪ್ಪಷ್ಟು ಹೊತ್ತು ಚಂದ್ರ  ಗ್ರಹಣ ನೋಡುದು, ರೇಡಿಯೋದಲ್ಲಿ ಬಂದುಕ್ಕೊಂಡಿತ್ತಿದ್ದ “ಆಕಾಶ ವೀಕ್ಷಣೆ” ಕಾರ್ಯಕ್ರಮಲಿ ಕೇಳಿ ತಿಳಿದ ವಿಷಯಗಳನ್ನು  ತಾನೇ ದೊಡ್ಡ ಖಗೋಲ ಶಾಸ್ತ್ರಜ್ಞನಂತೆ ವಿವರಿಸುತ್ತಿದ್ದ ಅಣ್ಣ. ಎಂಗೋ ಕಣ್ಣು-ಬಾಯಿ ಬಿಟ್ಟುಗೊಂಡು ಕೇಳಿಸಿಕೊಳ್ಳುತ್ತಿದ್ದೆಯೋ°, ಎಷ್ಟು ಅರ್ಥವಾಗುತ್ತಿತ್ತೋ ದೇವರಿಗೇ ಗೊತ್ತು ! ಅಕ್ಕನಿಂದ ಗ್ರಹಣದ ಬಗ್ಗೆ ವಿವರಣೆ, ನಕ್ಷತ್ರ-ಗ್ರಹಕ್ಕೆ ವ್ಯತ್ಯಾಸ, ಸಪ್ತರ್ಷಿ ಮಂಡಲ ಗುರುತಿಸುವುದು, ಶುಕ್ರ, ಮಂಗಳ ಗ್ರಹಗಳನ್ನು ಪತ್ತೆ ಹಚ್ಚುವುದು. ಲಕ್ಷಾಂತರ ನಕ್ಷತ್ರದಿಂದ ಮಿನುಗುವ ಆಕಾಶ, ತಂಗಾಳಿಗೆ ತೂರಾಡುವ ಅಡಿಕೆ ಮರಗಳ ತೋಟ, ಮನೆಯ ಇನ್ನೊಂದೆಡೆ ದಟ್ಟ ಕಾಡು ! ಕಾಡಿನ ಕಡೇಂದ ಬೀಸಿಬರುವ ಗಾಳಿಲಿ ಸೂರಗೆ ಹೂವಿನ ಸುಗಂಧ ! ಎಲ್ಲವೂ ಚಂದ-ಚಂದ. ಯಾವ ಗಳಿಗೆಯಲ್ಲಿ ಕಣ್ಣು ಮುಚ್ಚಿ, ನಿದ್ರಾದೇವಿಗೆ ಶರಣಾಗುತ್ತಿದ್ದೆವೋ ? ಎಚ್ಚರವಾದಾಗಲೆಲ್ಲಾ ಚಂದ್ರಂಗೆ ಎಷ್ಟು ಗ್ರಹಣ ಹಿಡಿಯಿತು-ಬಿಟ್ಟಿತು ನೋಡುದು. ಬೆಳಿಗ್ಗೆ 3 ಕ್ಕೆಲ್ಲ ಚಳಿಚಳಿ. ಕಂಬಳಿ ಒಳಗೇ ದಾಳಿಯಿಡುತ್ತಿದ್ದ ಚಳಿರಾಯ ! 4ಕ್ಕೆಲ್ಲ ಪ್ರಕೃತಿ ಕರೆಯ ಅನಿವಾರ್ಯತೆ. ಎದ್ದು ನಡೆದರೆ ದಬ್ಬೆಗಳ ದಡ-ಬಡ ಶಬ್ದ. ಶಬ್ದದಿಂಗಾಗುವ ನಿದ್ರಾಭಂಗದಿಂದಾಗಿ ಅಪ್ಪನಿಂದ ಸಹಸ್ರನಾಮಾರ್ಚನೆ. ಪ್ರಕೃತಿಕರೆ ತೀರಿಸಿಕೊಂಡ ಮೇಲೆ ಮನೆಯೊಳ ಹೋಪದಾ ? / ಮತ್ತೆ ಚಪ್ಪರ  ಏರುದಾ ? ಎಂಬ ದ್ವಂದ್ವ ! ದಿನ ನಿತ್ಯದ ಹಾಸಿಗೆ ಚಪ್ಪರದ ಮೇಲಿರುತ್ತಿತ್ತನ್ನೇ ? ಬೇರೆ ದಾರಿ ಇಲ್ಲದ್ದೆ ಚಪ್ಪರ ಏರಿ- ಮುಸುಕು ಹಾಕಿ ಮಲಗಿದೆವೆಂದರೆ ಮೇಲಿಂದ ಸುರಿವ ಮಂಜಿನ ಹನಿಗಳು ! ಉಸಿರಾಡುವಷ್ಟೇ ಮಾರ್ಗ ತೆರೆದಿಟ್ಟು ಎರೆಡೆರೆಡು ಕಂಬಳಿಯೊಳಗೆ ಮುರುಟಿ ಮಲಗಿದೆವೆಂದರೆ, ಬೆಳಗಾಗುವುದನ್ನೇ ಕಾಯುವ ಅನಿವಾರ್ಯತೆ ! ಆದರೂ ಸೂರ್ಯ ಕಿರಣಗಳು ಕಣ್ಣಿಗೆ ಚುಚ್ಚಿದ ಮೇಲಷ್ಟೇ ಸರಿಯಾಗಿ ಎಚ್ಚರ. ಅರೆ ನಿದ್ದೆ- ಅರೆ ಎಚ್ಚರದ ಸ್ಥಿತಿ. ಸಾಕಪ್ಪಾ ಸಾಕು !  ಆದರೆ…. ಮರುದಿನ ಶಾಲೆಲಿ ಗೆಳೆಯ-ಗೆಳತಿಯರೊಟ್ಟಿಂಗೆ ಹೇಳಿಕೊಳ್ಳುವಾಗ ಎಂಗೊ ಎಂಥದ್ದೋ ಸಾಹಸ(!?) ಮಾಡಿಪ್ಪೆ ಹೇಳುವ ಭಾವ ! ಆಶ್ಚರ್ಯ ಹೇಳಿರೆ ಮುಂದಿನ ಚಂದ್ರ ಗ್ರಹಣದ ಹೊತ್ತಿಂಗೆ ಮತ್ತೆ ಚಪ್ಪರಲಿ ಪವಡಿಸುಲೆ ಮನಸ್ಸು ಸಿದ್ಧವಾಗಿಗೊಂಡಿತ್ತು !  ಮತ್ತೆ ಅದೇ ಕಥೆ !

ಇಂದು ದೇವಸ್ಥಾನದ ಮೇಲ್ಛಾವಣಿ ಮೇಲೆ ಕುಳಿತು, ಎನ್ನ ಬಾಲ್ಯದ ಸಾಹಸ (!!??) ಹೇಳಿಯಪ್ಪಗ, ಮಕ್ಕೋ ಉತ್ಸಾಹಗೊಂಡವು. ಎಂಗೋ ಒಟ್ಟು ಆರು ಜೆನ- ಸಮುದ್ರದ ಭೋರ್ಗರೆತಕ್ಕೆ ಕಿವಿಗೊಟ್ಟು, ಶುಭ್ರ ಆಕಾಶ, ಮಿನುಗುವ ನಕ್ಷತ್ರಗಳು, ತಂಪಾಗಿ ಬೀಸುವ ಗಾಳಿ. ಪ್ರಕೃತಿಯ ಸೊಬಗನ್ನು ಅಸ್ವಾದಿಗೊಂಡು…. ಆಕಾಶದ ಅಂದವನ್ನು ಕಣ್ಣಿಗೆ ತುಂಬಿಗೊಂಡು…. ತೆರೆದ ಮೇಲ್ಛಾವಣಿಲಿ ಮನಗಿ ಆತು. ಕೆಳಗೆ ಒಂದು ಚಾಪೆ-ಹೊದೆಯಲು  ಎರಡೆರಡು ಬೆಡ್ ಶೀಟ್ ಅಷ್ಟೆ !  ಹಿಂದಿನ ದಿನದಿಂದ ಆರಂಭವಾದ ರೈಲು ಪ್ರಯಾಣ, ದೋಣಿ ವಿಹಾರ, ರಾಮತೀರ್ಥ-ಅಪ್ಸರಕೊಂಡ-ಉಳಿದುಕೊಂಡಿದ್ದ ಬಾಡದಲ್ಲಿ ಮೆಟ್ಟಿಲು ಹತ್ತಿಳಿದ್ದಿದ್ದ ಪರಿಣಾಮ ಕಾಲುಗಳಷ್ಟೇ ಅಲ್ಲ, ದೇಹದಲ್ಲುದೆ ದಣಿವು. ಜೊತೆಗೆ ಆಗಷ್ಟೇ ಮುಗಿಸಿದ ತಣ್ಣೀರು ಸ್ನಾನದ ಪರಿಣಾಮ ಚಂದಕ್ಕೆ ನಿದ್ದೆ ಹತ್ತಿತ್ತು. ರಾತ್ರಿ ಒಂದು ಗಂಟೆಗೆ ಎಚ್ಚರಾಗಿ ಇದ್ದಕ್ಕಿದ್ದಂತೆ ಜ್ಞಾನೋದಯ ಆತು- ಎಂಗಳಲ್ಲಿ ಆರಿಂಗಾದರೂ ಆರೋಗ್ಯ ಕೈ ಕೊಟ್ಟರೆ ಮರುದಿನದ ಟ್ರಕ್ಕಿಂಗ್ ಕಾರ್ಯಕ್ರಮಗೊ ಹಾಳೆದ್ದು ಹೋವುತ್ತು ಹೇಳಿ ! ಇಲ್ಲಿ ಮಲಗುವ ಮೊದಲು ದೇವಸ್ಥಾನದ ಮೇಲ್ಭಾಗದಲ್ಲಿ ಶೀಟ್ ಇಳಿಸಿದ ಜಾಗವನ್ನು ಗಮನಿಸಿತ್ತಿದ್ದೆಯೋ°. ಅಲ್ಲಿ ಕೊಬ್ಬರಿ ಕಾಯಿಗಳು, ಮರಗೆಲಸ ಮುಗಿದಾಗ ಉಳಿಯುವ ಮರದ ತುಂಡುಗಳು, ಇತ್ಯಾದಿ ಇತ್ಯಾದಿ. ಒಟ್ಟಿನಲ್ಲಿ ದೇವಸ್ಥಾನದ ಸಕಲ ಬೇಡದ ವಸ್ತುಗಳ ಉಗ್ರಾಣ ಅದು. ಮಧ್ಯದಲ್ಲಿ ಆರು-ಎಂಟು ಜನ ಮನಗುವಷ್ಟು ಜಾಗ ಖಾಲಿ ಇದ್ದತ್ತು. ಇಲಿ-ಹಲ್ಲಿ-ಹೆಗ್ಗಣ ಇತ್ಯಾದಿ ಪ್ರಾಣಿಗಳ ವಾಸಸ್ಥಾನ ಅದಾಗಿರೆಕ್ಕು ಹೇಳುವ ಅನುಮಾನ !  ಅಲ್ಲಿ ಹೊರಗಡೆಗಿಂತ ಬೆಚ್ಚಗಿದ್ದ ಕಾರಣ,  ಬೇರೆ ದಾರಿ ಇಲ್ಲದೆ ಎಲ್ಲರನ್ನೂ ಅಲ್ಲಿಗೆ ಈ ಅಪರಾತ್ರಿಲಿ ಸ್ಥಳಾಂತರಿಸಿದೆಯೋ !

ಮಲಗಿದ ಕೂಡಲೆ ನಿದ್ದೆ ಬತ್ತೋ ? ಅಲ್ಲಿ ಯಾವುದೋ ಪ್ರಾಣಿ “ಕುಂಯ್ಯಾ… ಕುಂಯ್ಯಾ…” ಹೇಳುಲೆ ಸುರು ಮಾಡಿತ್ತು. ಇಲಿ-ಹೆಗ್ಗಣಗಳನ್ನು ಹುಡುಕಿಕೊಂಡು ಹಾವು ಬೈಂದೋ ? ಇದು ಹಾವಿಗೆ ಆಹಾರವಾದ ಇಲಿಯ ಚೀರಾಟವೋ ? “ಹುಶ್.. ಹುಶ್…” ಎಂದು ಶಬ್ಧ ಮಾಡಿ, ಧೈರ್ಯ ಮಾಡಿ ಮಲಗಿದ್ದಾತು. ಬೆಳಿಗ್ಗೆ ಎದ್ದು ನೋಡಿರೆ, ಬುಟ್ಟಿಯೊಂದರಲ್ಲಿ ತನ್ನೈದು ಮರಿಗಳೊಂದಿಗೆ ಬೆಕ್ಕೊಂದು ಬೆಚ್ಚಗೆ ಮಲಗಿದ್ದು ! ಹೇಳದೆ ಕೇಳದೆ ತನ್ನ ಶಯನಮಂದಿರ(?)ಕ್ಕೆ ಅತಿಕ್ರಮಣ ಮಾಡಿದ ಎಂಗಳ ಮೇಲೆ ಬೆಕ್ಕು ತನ್ನ  ಪ್ರತಿರೋಧವನ್ನು ವ್ಯಕ್ತಪಡಿಸಿತ್ತು ! ಅಥವಾ ಅದಕ್ಕೆ  ಭಯವಾತೊ ಎಂಥದೋ ? ಆರಿಂಗೆ ಗೊಂತಿದ್ದು ? ಪಾಪ !

ಮರುದಿನ ತದಡಿಯಿಂದ ಗೋಕರ್ಣದ ಓಂ ಬೀಚ್ ವರೆಗೆ ಸುಮಾರು 7 – 8 km ಕಡಲ ಪಕ್ಕದ ಗುಡ್ಡ-ಬೆಟ್ಟಗಳ ಕಡಿದಾದ ಭಾಗದಲ್ಲಿ ಏರುತ್ತಾ-ಇಳಿಯುತ್ತಾ ನಡೆದ ಎಂಗಳ ಟ್ರಕ್ಕಿಂಗ್ ಅದ್ಭುತವಾಗಿತ್ತು. ಮತ್ತೆ ಸಮುದ್ರ ಸ್ನಾನ. ಈಜಲು ಬತ್ತು ಹೇಳುವ ಭಂಡ ಧೈರ್ಯಂದ ಎದೆ ಮಟ್ಟದ ನೀರಿನವರೆಗೆ ಹೋದದ್ದು- ಒಮ್ಮೇಲೆ ತೆರೆಗಳ ಹೊಡೆತ ಜೋರಾದದ್ದು- ಸಮುದ್ರ ದಂಡೆಗೆ ಬರಬೇಕೆಂದುಕೊಂಡರೂ ಆಗದ್ದೆ ಒದ್ದಾಡಿದ್ದು- ತೆರೆಗಳು ಎರಡು ಮೀಟರ್ ತೀರದೆಡೆಗೆ ನೂಕಿ, ನಾಲ್ಕು ಮೀಟರ್ ಸಮುದ್ರದೆಡೆಗೆ ಕೊಂಡೊಯ್ಯುತ್ತಿದ್ದದ್ದು- ಎಲ್ಲವೂ ಹೊಸ ಅನುಭವಗಳೇ. ಆದರೆ ಅದೂ ಒಂದು ತರ ಗಮ್ಮತ್ತಾಗಿತ್ತು !

ಮರುದಿನ “ಬಾಡ”ದ ಸಮುದ್ರ ತೀರದಲ್ಲೆ ಮರಳಿನಲ್ಲಿ ತೆರೆಗಳ ಜೊತೆ-ಜೊತೆಯಲ್ಲಿ 3 km ಟ್ರಕ್ಕಿಂಗ್ ಕಾಗಾಲದವರೆಗೆ. ತಿಂದನ್ನ ಕರಗ ಬೇಕಲ್ಲ – ಬೇರೆ ಕೆಲಸವಿಲ್ಲದೋವು ಹೇಳ್ತವೋ ಎಂಥದೋ ಟ್ರಕ್ಕಿಂಗ್ ನ ಖುಷಿಯ ಬಗ್ಗೆ ಗೊಂತ್ತಿಲ್ಲದ ಜೆನ. ಅವುಗಳ ಹುಚ್ಚು ಅವಕ್ಕವಕ್ಕೆ. ನೀವೇನಂತೀರಿ ?

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×