Oppanna.com

“ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ “

ಬರದೋರು :   ಸುರೇಖಾ ಚಿಕ್ಕಮ್ಮ    on   12/10/2014    4 ಒಪ್ಪಂಗೊ

2010 ರ “ರಾಷ್ಟ್ರ ಸೇವಿಕಾ ಸಮಿತಿ”ಯ ವಿಜಯದಶಮಿ ಉತ್ಸವಕ್ಕೆ “ವೀರವನಿತೆಯರು” ರೂಪಕ ಪ್ರಸ್ತುತಪಡಿಸಿತ್ತಿದ್ದೆಯೋ°. ಆ ರೂಪಕ, ಉತ್ತರಪ್ರದೇಶದ ಬರೇಲಿಲಿ (ಜನವರಿ 26 ರಿಂದ 30, 2011)  ನಡೆಯಲಿಪ್ಪ ” 6 ನೇ ಅಂತರಾಷ್ಟ್ರೀಯ ರಂಗ ಉತ್ಸವ” ( ಇನ್ಟರ್ ನ್ಯಾಷನಲ್ ಥಿಯೇಟರ್ ಫೆಸ್ಟಿವಲ್) ಕ್ಕೆ ಸಮಾಜ ಸೇವಾ ಸಮಿತಿ ಕಡೇಂದ ಆಯ್ಕೆ ಆತು. ಎಂಗೋ 10 ಜೆನ ಹೆಮ್ಮಕ್ಕ ಸೇರಿ ಬರೇಲಿಲಿ ಕಾರ್ಯಕ್ರಮ ಕೊಡ್ಲೆ ಹೆರಟೆಯೊ° .

ಎಂಗಳ ಉತ್ಸಾಹ ನೋಡೆಕಾತು !  ಪ್ರಯಾಣದ ದಿನ ಹತ್ತಿರ  ಬಂದ ಹಾಂಗೆ, ದೆಹಲಿ ಮತ್ತೆ ಬರೇಲಿಯ ಚಳಿ  ತಡ್ಕೂಂಬಲೆ  ಸ್ವೆಟ್ಟರು, ಶಾಲು ಅಲ್ಲದ್ದೆ ಥರ್ಮಲ್ ವೇರ್ ಎಂಗಳ ಬ್ಯಾಗ್ ಸೇರಿತ್ತನ್ನೆ, ಬ್ಯಾಗು ಭಾರಾ.. ಭಾರ. ಆದ್ರೆ ಈ ಸರ್ತಿ ಲಗ್ಗೇಜು ಹೊತ್ತುಕ್ಕೊಂಡು ಹೋಪದು ಎಂಗಳೇ ಅಲ್ಲದಾ ? ಜೊತೆಗೆ ಪತಿಪರಮೇಶ್ವರ ಇಲ್ಲನ್ನೆ !

ಸಂಪರ್ಕಕ್ರಾಂತಿ ರೈಲಿಲಿ ಯಶವಂತಪುರಂದ ಎಂಗಳ ಪ್ರಯಾಣ ಸುರು. ಎಲ್ಲ ಹೆಮ್ಮಕ್ಕಳ ಕುಟುಂಬವೇ ರೈಲ್ವೆಸ್ಟೇಶನ್ ಗೆ ಬಂದಿತ್ತು. ಎಷ್ಟೋ ವರ್ಷಂದ ಮನೆ ಒಳ ಬೀಡುಬಿಟ್ಟ ಅಬ್ಬೆ ಹೀಂಗೆ ಹೆರ ಹೆರಟ ಸಂದರ್ಭಕ್ಕೆ ಸಾಕ್ಷಿಯಪ್ಪಲೆ ಬಂದ ಕುಟುಂಬದ ಎಲ್ಲೋರಿಂದಲೂ ಒಂದೇ ಮಾತು “ಜೋಪಾನ” ಹೇಳಿ. ಅವುಗಳೆಲ್ಲರ ಹಾರೈಕೆ ಜೊತೆ ಸುರುವಾದ ಎಂಗಳ ಪ್ರಯಾಣ, ಮಾರನೆ ದಿನ ಸಮೂಹ ಗೀತೆಗಳ ಅಭ್ಯಾಸ, ಭಜನೆ, ಹಾಸ್ಯ, ನೆಗೆ ಜೊತೆ ಕಳದ್ದೇ ಗೊಂತಾಯ್ದಿಲ್ಲೆ. ದೆಹಲಿ-ಆಗ್ರಾ-ಮಥುರಾ ನೋಡಿಕೊಂಡು ಮಾರನೆ ದಿನ ರಾತ್ರಿ  ದೆಹಲಿಂದ ಬರೇಲಿ ರೈಲು ಹತ್ತಿ ಹೆರಟೆಯೊ°. ಬೆಳಿಗ್ಗೆ 5 ಗಂಟೆಗೇ ಬರೇಲಿ ಸಿಕ್ಕುತ್ತಡ.  ಕೆಲ ನಿಮಿಷ ಮಾತ್ರ ನಿಲ್ಲುಗಷ್ಟೆ. ಬೇಗ ಎದ್ದು ರೇಡೀ ಆಗಿ, ಬರೇಲಿ ಬಂತಾ ನೋಡಿಕೊಂಡು ಇಳಿಯೆಕ್ಕು. ಗ್ರೂಪ್ ತಪ್ಪಿಸಿಕೊಂಬಲಾಗ, ಲಗ್ಗೇಜ್ ತಪ್ಪದ್ದಂಗೆ ನೋಡಿಕೊಳ್ಳೆಕ್ಕು. ಅಲರಾಂ ಮಡಗಿಕೊಳ್ಳೆಕ್ಕು. ಎಚ್ಚರ ಆವುತ್ತಾ ? ಅದರಲ್ಲಿ ಚಾರ್ಜ್ ಎರಡೇ ಕಡ್ಡಿ ಇಪ್ಪದು. ಮೊಬೈಲ್ ಚಾರ್ಜ್ ಮಾಡುಲೆ 5 ಬೋಗಿ ಆ ಕಡೆ ಹೋಗಿ ಕಾದು ನಿಲ್ಲೆಕ್ಕು. ರೈಲ್ವೇ ಸ್ಟೇಶನ್ ನಿಂದ ಎಂಗೊ ಹೋಯೆಕ್ಕಾದ ಜಾಗೆ ಎಷ್ಟು ದೂರ ಇದ್ದು ಗೊಂತಿಲ್ಲೆ !  ಒಂದಾ ಎರಡಾ ಸಮಸ್ಯೆ ? (ಪಾಪ… ಗಂಡ ಹೇಳುವ ಪ್ರಾಣಿ(?)ಯಿಂದ ಎಷ್ಟು ಉಪಯೋಗ ಇದ್ದು !)

ಬರೇಲಿಲಿ ವಿಪರೀತ ಚಳಿ(-2°).  ಸಿಮೆಂಟ್ ನೆಲದ ಮೇಲೆ ಕಾಲು ಮಡುಗಲೆ ಎಡಿಯ ! ಆಯೋಜಕರು ಎಂಗೊಗೆ ಒದಗಿಸಿದ್ದ ಕಲ್ಯಾಣಮಂಟಪದ ವಸತಿ ವ್ಯವಸ್ಥೆ ಒಂದೆಡೆ, ಊಟದ ವ್ಯವಸ್ಥೆ ಇನ್ನೊಂದೆಡೆ, ಎಂಗೊ ಕಾರ್ಯಕ್ರಮ ಕೊಡೆಕ್ಕಾದ್ದ ಕಲಾಕ್ಷೇತ್ರ ಮತ್ತೊಂದೆಡೆ. ಒಂದಕ್ಕೂ ಇನ್ನೊಂದಕ್ಕೂ 1 ರಿಂದ 2 ಕಿಲೋಮೀಟರ್ ದೂರ. ಟಾಂಗಾದವು 10 ರುಪಾಯಿಗೆ ಒಂದೆಡೆಯಿಂದ ಇನ್ನೋದೆಡೆಗೆ ಕರಕೊಂಡು ಹೋಗಿಗೊಂಡಿತ್ತಿದ್ದವು. ಎಂಗಳ ಹೆಮ್ಮಕ್ಕಳ ತಂಡದ ಸದಸ್ಯರೆಲ್ಲ 30 ರಿಂದ 60 ವರ್ಷ ಪ್ರಾಯದವು. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿಯೊ°.   ಅವು ಕೊಟ್ಟ ರೊಟ್ಟಿ ಊಟ ಉಂಡೆಯೊ°. ಅಂದು ಮದ್ಯಾಹ್ನ ನಡೆಯಲಿಪ್ಪ ಮೆರವಣಿಗೆ ಕಾರ್ಯಕ್ರಮಕ್ಕೆ ಸಿದ್ಧರಾದೆಯೊ°. ಕರ್ನಾಟಕ ದ್ವಜದ ಬಣ್ಣದ ಸೀರೆ ಸುತ್ತಿಕ್ಕಿ ಮೆರವಣಿಗೆ 4 – 5 ಕಿಲೋಮೀಟರ್ ನಡಿಗೆಯಲ್ಲಿ ಪಾಲ್ಗೊಂಡೆಯೊ°. ಬರೇಲಿಯಲ್ಲಿ  “ಜಗಮಗ” ಮಿಂಚಿದೆಯೊ° ! ಅಲ್ಯಾಣ ದಿನಪತ್ರಿಕೆಲಿ ಜಾಗ ಗಿಟ್ಟಿಸಿಕೊಂಡೆಯೊ°.

ಕಸ್ತಲಾದಾಂಗೆ  ಚಳಿ ಏರುಲೆ ಸುರುವಾತು. ಅಲ್ಯಾಣ ಆಹಾರ, ವಸತಿ ಎಂಗೊಗೆ ದೊಡ್ಡ ಸಮಸ್ಯೆ ಆತು. ಎಂಗಳ “ಭಾರತ ಮಾತೆ ವೇಶಧಾರಿ” ಸತ್ಯವತಿ, ಅವುಗಳ ದೂರದ ನೆಂಟರ ಮೂಲಕ ಬರೇಲಿಯಲ್ಲಿದ್ದ ಸಕ್ಸೇನ ದಂಪತಿಗಳ ವಿಳಾಸ ಪತ್ತೆ ಹಚ್ಚಿದವು. ಎಂಗೊಗೆ ಉಳಿವಲೆ ವ್ಯವಸ್ಥೆಯಾವುತ್ತಾ ಹೇಳಿ ಎಂಗಳ ನಿರೀಕ್ಷೆ. ಪುಣ್ಯಕ್ಕೆ ಶ್ರೀಯುತ ಸಕ್ಸೇನ ದಂಪತಿಗಳಿಂದ, ಅವುಗಳ ಬಂಗಲೆಗೆ,  ಎಂಗಳ ಮಹಿಳಾ ತಂಡಕ್ಕೆ ಆಧರದ ಸ್ವಾಗತ ಸಿಕ್ಕಿತು. “ಅಬ್ಬಾ !…. ಬದುಕಿಗೊಂಡೆಯೊ° !” ಹೇಳಿಗೊಂಡು, ಅಂದು ರಾತ್ರಿಯೇ ಅತ್ಯಂತ ವಿನಯದಿಂದ ಅವುಗಳ ಬಂಗಲೆನ “ಆಕ್ರಮಿಸಿದೆಯೊ°”………….

ಎಂಗೊಗೆ ಅವುಗಳ ಅಡುಗೆ ಕೋಣೆ ಮುಕ್ತವಾಗಿ ದಕ್ಕಿತ್ತು. ಆನು ಮತ್ತು ಸುವರ್ಣ ಉದಿಯಪ್ಪಗಿನ ತಿಂಡಿಗಾಗಿ ಉಪ್ಪಿಟ್ಟು ತಯಾರಿಸಿದೆಯೊ°. ಮನೆಯವಿಗೂ ಕೊಟ್ಟು, ಎಂಗಳೂ ತೃಪ್ತಿಯಾಗುವಷ್ಟು(ತಿಂದು ಎಷ್ಟು ದಿನವಾಯ್ದು ? ಹೇಳುವಂಗೆ) ತಿಂದೆಯೋ. ಉದಿಯಪ್ಪಗ ಕೋಲಾಟ ಪ್ರದರ್ಶನ ಕೊಟ್ಟಿಕ್ಕಿ, ಹೊತ್ತಪ್ಪಗಿನ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿದೆಯೊ. ಕಲಾಕ್ಷೇತ್ರಲಿ ವೇಶಭೂಷಣ ಮಾಡಿಗೊಂಬಲೆ ಸರಿಯಾದ ಸ್ಥಳಾವಕಾಶ ಇರದ್ದ ಕಾರಣ, ಸಕ್ಸೇನ ಅವುಗಳ ಮನೆಯಲ್ಲಿಯೇ “ವೀರವನಿತೆಯರು” ರೂಪಕಕ್ಕೆ ತಕ್ಕಂತೆ ವೇಶ ಧರಿಸಿ, ಕಲಾಕ್ಷೇತ್ರದತ್ತ ಹೊರಟೆಯೊ. ಟಾಂಗಾದಲ್ಲಿ “ರಾಣಿಯರ ಗತ್ತಿ”ನಲ್ಲಿ ಎಂಗಳ ಪ್ರಯಾಣ ! ಬರೇಲಿಯ ಜನತೆ ಕಣ್ಣರಳಿಸಿ ಎಂಗಳನ್ನೆ ನೋಡಿಗೊಂಡಿತ್ತು !

ಕಲಾಕ್ಷೇತ್ರಲ್ಲಿ ಎಂಗೊ ಕಾರ್ಯಕ್ರಮ ಕೊಡುಲೆ ರಂಗಸ್ಥಳದ ಪಕ್ಕದಲ್ಲಿ ಕಾದು ನಿಂದರೆ, ಎಷ್ಟು ಹೊತ್ತಾದರೂ ಎಂಗಳ ಸರದಿ ಬಾರ ! ಮತ್ತೆ ಕೇಳಿತು  “ಸುರೇಖಾ…………. ಸಮಾಜ ಸೇವಾ ಸಮಿತಿ, ಕರ್ನಾಟಕ್ – ಸೋಲೋ ಪರ್ಫಾರ್ಮೆನ್ಸ್ ….”.  ಅಬ್ಬಕ್ಕಾ ರಾಣಿಯ ಧಿರಿಸಿನಲ್ಲಿ ಎನ್ನ ಏಕಪಾತ್ರಾಭಿನಯ !  ಹಾಸ್ಯ ಪ್ರಧಾನ ಏಕಪಾತ್ರಾಭಿನಯಕ್ಕೆ ಎನ್ನ ಧಿರಿಸು ರಜವುದೆ ಹೊಂದಾಣಿಕೆಯಾಗಿಕೊಂಡು ಇತ್ತಿಲ್ಲೆ. ಆಯೋಜಕರಲ್ಲಿ ಆರೋ ಒಬ್ಬರು ರಂಗದ ಮೇಲೆ ಬಂದಿಕ್ಕಿ “ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ ” ಹೇಳ್ತಾ ಇದ್ದವು ! ಅವಕ್ಕೆ ಬೇಕಾಗಿ ಆನು ಡ್ಯಾನ್ಸ್ ಮಾಡ್ಲಾವುತ್ತಾ ? ಬೇರೆಂತ ಮಾಡುಲೆ ತೋಚಿದ್ದಿಲ್ಲೆ. ಕಿರೀಟವನ್ನು ಕಳಚಿಟ್ಟಿಕ್ಕಿ , ಖಡ್ಗವನ್ನು ಕೆಳಗಿಟ್ಟಿಕ್ಕಿ. ರಂಗಕ್ಕೆ ಬಂದು ಏಕಪಾತ್ರಾಭಿನಯ ಮಾಡಿದೆ ! ಎಂಗಳ ಕನ್ನಡ ಭಾಷೆ ಅವಕ್ಕೆ ಅರ್ಥವಾಗದ್ದರೂ, ಅಭಿನಯದಿಂದಲೇ ಅರ್ಥಮಾಡಿಕೊಂಡ ಪ್ರೇಕ್ಷಕರು, ಜೆಡ್ಜ್ ಗಳು ಹಾಸ್ಯವನ್ನು ಆಸ್ವಾದಿಸಿದವು. ಏಕಪಾತ್ರಾಭಿನಯ ಮುಗಿತಾ ಇಪ್ಪಂಗೆ, “ವೀರ ವನಿತೆಯರು” ರೂಪಕ. ಅಬ್ಬಕ್ಕಾ ರಾಣಿಯೇ ಮೊದಾಲು ಹೊಯೆಕ್ಕಿದ್ದಾ….. ರಪರಪನೆ ಕಿರೀಟ ತೊಟ್ಟಿಕ್ಕಿ- ಖಡ್ಗ ಹಿಡುದು ರಂಗಕ್ಕೆ ಹೋದ್ದೇ…..  ಮತ್ತೆ ನೋಡಿದರೆ ಎಂಗೊ ಕೊಡುಲಿಪ್ಪ ಕಾರ್ಯಕ್ರಮಂಗಳನ್ನ ಒಟ್ಟಿಂಗೆ ಬರೆಸಿದ್ದು ಈ ಅವಾಂತರಕ್ಕೆ ಕಾರಣ ಆದ್ದು !

ಅಂದು ಎಂಗೊ ಪ್ರದರ್ಶಿಸಿದ ರೂಪಕ ಆಯೋಜಕರ, ಪ್ರೇಕ್ಷಕರ ಮನ ಗೆದ್ದಿತ್ತು. ಅಲ್ಯಾಣ ಮಾಧ್ಯಮದೋವು ಎಂಗಳ ಗುಂಪಿನ ಫೋಟೋ ತೆಗೆದದ್ದೇ ತೆಗೆದ್ದದ್ದು ! ಎಂಗಳ ರೂಪಕದ ನಿರ್ದೇಶಕಿ ಪ್ರಜ್ಯೋತಿ ಭಟ್  ಸಂದರ್ಶನವನ್ನೂ ತೆಗೆದುಕೊಂಡವು. ಎಂಗೊ ಆರಿಂಗೂ ಸರಿಯಾಗಿ ಹಿಂದಿ ಬಾರದ್ದ ಕಾರಣ, ಅದು ಆವ ಚಾನಲ್ ನಲ್ಲಿ, ಎಷ್ಟು ಹೊತ್ತಿಂಗೆ  ಪ್ರಸಾರ ಆವುತ್ತು ಹೇಳಿ ಸ್ಪಷ್ಟವಾಗಿ ಗೊಂತಾಯ್ದಿಲ್ಲೆ !

ಮಾರನೆಯ ದಿನ ಕಾರ್ಯಕ್ರಮದ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಸರದಿ ಬರುವವರೆಗೆ ಕಾಯ್ದು ಕಾರ್ಯಕ್ರಮ ಕೊಡುವುದು ಎಂಗೊಗೆ ಕಷ್ಟ ಹೇಳಿ ಅನಿಸಿತು. “ಹಚ್ಚೇವು ಕನ್ನಡದ ದೀಪ” ನೃತ್ಯ ಅಪ್ಪಗ, ಈ ಕಾವ ಕೆಲಸ ಆಗ ಹೇಳಿ, ತಿಂಗಳಿಂದ ಅಭ್ಯಾಸ ಮಾಡಿದ್ದ ಸಮೂಹ ಗೀತೆಗಳ ಗಾಯನವ ರದ್ದು ಪಡಿಸಿದೆಯೊ°. ಮರುದಿನಕ್ಕೆ ಹರಿದ್ವಾರ-ಹೃಷಿಕೇಶ ಪ್ರವಾಸವನ್ನು ಹಮ್ಮಿಕೊಂಡೆಯೊ°.

5 ನೇ ದಿನ ಮತ್ತೆ ಮೆರವಣಿಗೆ 5-6 ಕಿಲೋಮೀಟರ್ ನಡಿಗೆ. ಮದ್ಯೆ ಮದ್ಯೆ ಹಾಡು-ಡ್ಯಾನ್ಸು. (ಇಲ್ಲಿ -ನಮ್ಮೂರಲ್ಲಿ ಹಾಂಗೆಲ್ಲ ರಸ್ತೆ ಮೇಲೆ ಕುಣಿಯಲಾವ್ತಾ ?) ಊರಿನ ಜನರೆಲ್ಲ , ಬೇರೆ ಬೇರೆ ರಾಜ್ಯದಿಂದ ಅವುಗಳ ಊರಿಂಗೆ ಬಂದು ಕಾರ್ಯಕ್ರಮ ಕೊಟ್ಟ ಎಂಗಳ ಮೇಲೆ (ಒಟ್ಟು ಸ್ಪರ್ಧಿಗಳು ಸುಮಾರು 800 ಜನ ಇತ್ತಿದ್ದೆಯೊ°) ಹೂ ಎರಚಿದವು, ಚಹಾ ಕೊಟ್ಟವು, ಸಿಹಿ ಹಂಚಿದವು, ಫೋಟೋ ತೆಗೆದವು. ಮೆರವಣಿಗೆ ಆದ ಮತ್ತೆ,  ಸಂಜೆ 7 ಕ್ಕೆಲ್ಲ ಮುಕ್ತಾಯ ಸಮಾರಂಭ ಸುರು ಆತು. ಎಷ್ಟು ಹೊತ್ತು ಕಾದರೂ ಎಂಗಳ ಹೆಸರಿಲ್ಲ. ಅಂತೂ 9.30 ಸುಮಾರಿಗೆ ಎಂಗಳ ಹೆಸರು ಪ್ರಕಟ ಅತು. ಮೊದಲ ದಿನ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿ ಭಾಗವಹಿಸಿದ್ದಕ್ಕಾಗಿ “ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್”, ಎಂಗಳ “ವೀರವನಿತೆಯರು” ರೂಪಕಕ್ಕೆ “ಸ್ಪೆಶಲ್ ಪರ್ಫಾರ್ಮೆನ್ಸ್ ಅವಾರ್ಡ್”, ಎನ್ನ ಏಕಪಾತ್ರಾಭಿನಯಕ್ಕೆ ಮೊದಲ ಬಹುಮಾನ, ಕೋಲಾಟಕ್ಕೆ ಎರಡನೆಯ ಬಹುಮಾನ ಸಿಕ್ಕಿತ್ತು !

ಮರುದಿನ ಬೆಳಿಗ್ಗೆ ಸಕ್ಸೇನ ದಂಪತಿಗಳಿಗೆ ಹೊಡಾಡಿಕ್ಕಿ,ಆಶೀರ್ವಾದ ಪಡದು, ಅಲ್ಲಿಂದ ರೈಲು ಹತ್ತಿದೆಯೊ°. ಮರುದಿನ ದೆಹಲಿಗೆ – ಅಲ್ಲಿಂದ ಬೆಂಗಳೂರಿಂಗೆ. ಬರೇಲಿಯ ಸಿಹಿ-ಕಹಿ ಅನುಭವಗಳೊಂದಿಗೆ ಬೆಂಗಳೂರು ತಲುಪಿಯಪ್ಪಗ ಸಾಕಪ್ಪಾ ಸಾಕು ಅನ್ನಿಸಿದ್ದು ಸತ್ಯ ! ಆದರೆ ಹೇಳಿಕೊಂಬಂಗಿಲ್ಲೆ. ಎಂಥಕ್ಕೇ ಹೇಳಿರೆ ಎಂಗೊ “ವೀರವನಿತೆಯರು” ಅಲ್ಲದಾ ?

4 thoughts on ““ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ “

  1. ಡ್ಯಾನ್ಸ್ ಕರ್ಲೋ ಹೇಳುವಾಗ ನಿಂಗ ಡ್ಯಾನ್ಸ್ ಮಾಡಿದ್ದು ಮರದ ಸ್ಟೇಜಿನ ಮೇಲೋ ಅಥವಾ ಸಿಮೆಂಟಿನ ಸ್ಟೇಜಿನ ಮೇಲೋ? ಆಮೇಲೆ ಸ್ಟೇಜಿನ ರಿಪೇರಿಗೆ ಆರು ಪೈಸೆ ಕೊಟ್ಟದಡ? 😉 (ತಮಾಷೆಗೆ ಹೇಳೀದ್ದಾತ 🙂 )

    1. ಓ ಅದಾ….. ಆ ಸ್ಟೇಜ್ ಎಂತರದ್ದು ಗೊಂತೇ ಆಯ್ದಿಲ್ಲೆ. ಅದನ್ನ ಮುರಿಯಲುದೆ ಪ್ರತ್ಯೇಕ ಸ್ಪರ್ಧೆ ಇದ್ದತ್ತು. ಯಾರಿಗುದೆ ಮುರಿಯಲಾಯ್ದಿಲ್ಲೆ. ನಿಂಗೋ ಮುಂದಿನರಿ ಹೋಪ ಪ್ಲಾನ್ ಇದ್ದಾ ?
      ಆನು ಸೀರಿಯಸ್ ಆಗಿ ಹೇಳಿದ್ದು ಆತಾ…..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×