Oppanna.com

'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 31 (ಸುಭಗ ವಾರ – ತುಂಡು ಒಂದು)

ಬರದೋರು :   ಚೆನ್ನೈ ಬಾವ°    on   10/10/2013    12 ಒಪ್ಪಂಗೊ

ಚೆನ್ನೈ ಬಾವ°

ಅಡಿಗೆ ಸತ್ಯಣ್ಣ ಕಳುದವಾರವೇ ಮುವತ್ತು ಆತಿಲ್ಯೋ ಹೇದು ಕೊರಳ ನರಂಬು ಜೆಗ್ಗುಸಿ ಕೇಟಪ್ಪಗಳೇ ನವಗೆ ಅಂದಾಜಿ ಆತು, ನಿಂಗೊಗೂ ಅಂದಾಜಿ ಆತು. ಆದರೆ ಅಡಿಗೆ ಸತ್ಯಣ್ಣನ ಬಿಡ್ಳೆ ಬೈಲಿಂಗೆ ಮನಸ್ಸಿಲ್ಲೆ, ನವಗೂ ಇಲ್ಲೆ. ಆದರೆ ಅಡಿಗೆ ಸತ್ಯಣ್ಣ ನಿತ್ಯ ತಿರ್ಗಾಟಲ್ಲಿಪ್ಪ ಕಾರಣ, ಅಲ್ಲದ್ದೆ ಈಗ ಬೇರೆ ವಿಪರೀತ ಅನುಪ್ಪತ್ಯಂಗಳ ತೆರಕ್ಕಿಪ್ಪಕಾರಣ ರಜಾ ಎಡೆ ಬಿಡುವೋ° ಹೇದು ಗ್ರೇಶಿದ್ದದು ಅಪ್ಪು. ಇದರೆಡಕ್ಕಿಲ್ಲಿ ಓ ಆ ತೆಂಕ್ಲಾಗಿ ವೊರ್ಷಾಂತ.  ಅಲ್ಲಿ ಮದಲಿಂದಲೇ ಅಡಿಗೆಕೊಟ್ಟಗೆಲಿ  ಅಡಿಗೆ ಸತ್ಯಣ್ಣನ ಸುಧರಿಕೆ, ಚಪ್ಪರದಡಿಲಿ ಸುಭಗರ ಸುಧರಿಕೆ. ಕೆಲವು ಅಳಿಯಂದ್ರಿಂಗೆ ಮಜ್ಜಿಗೆ ಹೇದರೆ ಹುಳಿ, ಆಗ ಹೇದು ಇದ್ದರೂ ಸುಭಗರಿಂಗೆ ಮಜ್ಜಿಗೆನೀರು ಇಲ್ಲದ್ದೆ ಆಗ ಇದಾ.  ಮಜ್ಜಿಗೆನೀರು ಕುಡಿವಲೆ ಅಡಿಗೆ ಕೊಟ್ಟಗ್ಗೆ ಹೋದ ಸುಭಗರಿಂಗೆ ಅಡಿಗೆ ಸತ್ಯಣ್ಣ ರೆಜಾ ಸಾವಕಾಶಲ್ಲಿಪ್ಪದು ಕಂಡತ್ತು. ಹಾಂಗೆ ಹೀಂಗೆ ಮಾತಾಡಿಯಪ್ಪಗ ಕೆಲವು ಶುದ್ದಿಗೊ ಸಂಪಾದನೆ ಆತು. ಹಾಂಗಾಗಿ ಈ ವಾರಕ್ಕೆ – ‘ಸುಭಗರು ಕಂಡ ಸತ್ಯಣ್ಣ’ – ತುಂಡು ಒಂದು .
 
1
ಅಡಿಗೆ ಸತ್ಯಣ್ಣ° ಮಾನಿರ ಮಾಣಿಯ ಹೆಗ್ಗಳಿಕನ ಟೋರ್ಚಲೈಟು ಬಿಟ್ಟಮತ್ತೆ ಅನುಪ್ಪತ್ಯಕ್ಕೆ ಹೋಪಗ 2 ಟೋರ್ಚು ಕೊಂಡೋವ್ತ ಕ್ರಮ. ಒಂದು ದೊಡ್ಡದು ಗೆನಾದ್ದು. ಚಾರ್ಜು ಮಾಡ್ತ ನಮುನೆ ‘ಬ್ರೈಟುಲೈಟು’ ಕಂಪೆನಿದು. ಜಾಲಿಲ್ಲಿ ನಿಂದು ಸುಚ್ಚು ಹಾಕಿ ಮೇಗಂತಾಗಿ ತಿರುಗಿಸಿರೆ ಕೊಟ್ಟೆ ತೆಂಗಿನ ಮರದ ಕೊಬಳಿಲ್ಲಿಪ್ಪ ಗೊನೆಲಿ ಕಾಯಿ ಎಶ್ಟಿದ್ದು ಹೇದು ಎಳುಪ್ಪಲ್ಲಿ ಎಣುಸಲಕ್ಕು. ಅಷ್ಟು ಪ್ರಕಾಶ ಅದರದ್ದು. ಇನ್ನೊಂದು ಬರೇ ಸಣ್ಣದು. ಸಂತೆ ಐಟಮು. ಮಿನ್ನಾಂಪುಳುವಿನಷ್ಟೇ ಬೆಣಚ್ಚಿ ಅದಕ್ಕೆ.
ಆರೋ ಕೇಟವಡ – ‘ಇಷ್ಟು ಪ್ರಕಾಶ ಇಪ್ಪ ದೊಡ್ಡ ಟೋರ್ಚು ಇಪ್ಪಗ ಆ ಸಣ್ಣದು ಎಂತಕೆ ಸತ್ಯಣ್ಣ? ಎಂತ ಉಪಯೋಗ ಇದರದ್ದು?’
ಸತ್ಯಣ್ಣ° ಹೇದ° ‘ಉಪಯೋಗವೊ? ಹು!,  ಪಕ್ಕನೆ ಕರೆಂಟು ಕೈಕೊಟ್ರೆ ಆ ದೊಡ್ಡ ಟೋರ್ಚು ಎಲ್ಲಿ ಮಡುಗಿಂಡಿದ್ದು ಹೇದು ಹುಡ್ಕಲಾದರೂ ಒಂದು ವೆವಸ್ತೆ ಬೇಡದೋ? ಈ ಸಣ್ಣದು ಅದಕ್ಕಿಪ್ಪದಿದಾ.. ಚಡ್ಡಿ ಕಿಸೆಯೊಳ ಹಾಕಿಯೊಂಡ್ರೆ ಮುಗಾತು’ 😀
**2.10.2013
2
ಒಂದಿಕ್ಕೆ ಅನುಪ್ಪತ್ಯದ ಮುನ್ನಾಣ ದಿನ ಹೋಳಿಗೆ ಕೆಲಸ ಎಲ್ಲ ಮುಗುಶಿ ಒತ್ತರೆ ಆಗಿ ಇನ್ನು ಮನುಗುದು ಹೇಳ್ತ ಹಂತಕ್ಕೆ ಬಂತು.
ಹಸೆ ಹಾಕಿಯೂ ಆತು. ಜನರೇಟರು ಓಫು ಮಾಡಿ ಎಲ್ಲ ಕಸ್ತಲೆ ಮಾಡಿಯೂ ಆತು.
ಸತ್ಯಣ್ಣಂಗೆ ಹಾಂ..ಗೆ ಒರಕ್ಕು ಹಿಡುದತ್ತೂಳಿ ಅಪ್ಪಗ ಹತ್ತರೆ ಮನುಗಿದ ರಂಗಣ್ಣ ಎಂತ್ಸರನ್ನೋ ಪರಡ್ಲೆ ಸುರುಮಾಡಿದ.
ಸತ್ಯಣ್ಣಂಗೆ ಎಚ್ಚರಿಕೆ ಆತು. ‘ಎಂತ್ಸರನ್ನೋ ನೀನು ಪರಡುಸ್ಸು?’- ಸತ್ಯಣ್ಣ° ಕೇಟ°.
‘ಎಂತಿಲ್ಲೆ..ಎಂತಿಲ್ಲೆ..ಎನ್ನ ಲೈಟು..’ ಹೇದು ರಂಗಣ್ಣ° ಸುಮ್ಮನೆ ಕೂದ°.
ರಜಾ ಹೊತ್ತಪ್ಪಗ ಪುನಾ ರಂಗಣ್ಣ ಸತ್ಯಣ್ಣನ ಹಸೆ ಅಡಿಲಿ; ತಲೆಕೊಂಬಿನ ಅಡಿಲಿ ಪರಡ್ಲೆ ಸುರುಮಾಡಿದ°.
ಸತ್ಯಣ್ಣಂಗೆ ಒರಕ್ಕು ಹಾಳಾತು. ‘ಎಂತರ ಮಾರಾಯನೆ ನಿನ್ನದೂ..?’ ಜೋರಿಲ್ಲಿ ಕೇಟ°.
‘ಲೈಟು.. ಎನ್ನ ಟೋರ್ಚುಲೈಟು ಕಾಣ್ತಿಲ್ಲೆ..’ ರಂಗಣ್ಣ° ರಾಗ ಎಳದ°.
ಸತ್ಯಣ್ಣಂಗೆ ಪಿಸುರು ಎಳಗಿತ್ತು – “ಈ ಕಸ್ತಲೆಲಿ ನಿನಗೆಂತಗೆ ಟೋರ್ಚು?! ತಳಿಯದ್ದೆ ಬಿದ್ದುಗೊ. ನಾಳೆ ಉದಿಯಪ್ಪಗ ಬೆಣಚ್ಚಾದಮತ್ತೆ ಹುಡ್ಕಿರೆ ಸಾಕು..!!” 😀
**
3
ಅಡಿಗೆ ಸತ್ಯಣ್ಣಂಗೆ ಕುಂಟುಕಾನ ಮಾಳಿಗೆ ಮನೆಲಿ ಅದೆಂತ್ಸೋ ಒಂದು ಅನುಪ್ಪತ್ಯ.
ಬೈಲ ಟೀಕೆಮಾವ ‘ಕೊರಿಯ’ಕ್ಕೆ ಹೋಗಿಂಡು ಬಂದಿಕ್ಕಿ ಅಲ್ಲಿಗೆ ಹಾಜರಿ ಆಯ್ದವು  ಅಂದು ದಂ ಕಟ್ಯೊಂಡೇ.
ಟೀಕೆಮಾವ° ಜಗುಲಿಲಿ ಕೂದೊಂಡು ಆರತ್ರೆಯೋ ಅಲ್ಯಾಣ ಸಂಗತಿಗಳ ವಿವರ್ಸಿಂಡು, ಟೀಕೆ ಮಾಡಿಂಡು ಇತ್ತಿದ್ದವಡ-  ‘ಕೊರಿಯ’ದವಕ್ಕೆ ಸಂಸ್ಕಾರ ಇಲ್ಲೆ, ಅವರ ಕೋಲ ನೋಡ್ಲೆಡಿತ್ತಿಲ್ಲೆ; ಅವರ ಭಾಷೆ ಅರ್ಥಾವ್ತಿಲ್ಲೆ; ಅವು ಪದ ಹೇಳಿರೆ ಅದರ ಕೇಳ್ಳೇ ಎಡಿತ್ತಿಲ್ಲೆ..’ ಇತ್ಯಾದಿ ಇತ್ಯಾದಿ.
ಇಲ್ಲಿ ಮಾತಾಡ್ತದು ಅಲ್ಲಿ ಅಡಿಗೆ ಕೊಟ್ಟಗೆ ವರೇಗೆ ಕೇಳ್ತು.
ಟೀಕೆಮಾವನ ಪಂಚಾತಿಕೆಯ ಅರ್ಧಂಬರ್ಧ ಕೇಳಿದ ಸತ್ಯಣ್ಣಂಗೆ ಪಿತ್ಥ ಕೆದರಿಂಡು ಬಂದು ಕೇಳಿದನಡ° –   ‘ಸಂಸ್ಕಾರ ಇಲ್ಯೋ? ಭಾಷೆ ಅರ್ಥಾವ್ತಿಲ್ಯೋ?? ಪದ ಹೇಳಿರೆ ಕೇಳ್ಳೇ ಎಡಿತ್ತಿಲ್ಯೋ??? ಆರು ಹೇಳಿದ್ದು ನಿಂಗೊಗೆ??!! ಆನು ಮನ್ನೆ ಮಿತ್ತನಡ್ಕಲ್ಲಿ ಕಂಡಿದೆ ಅವರ. ಎಷ್ಟು ಚೆಂದಕೆ ವೇಷ್ಟಿ ಜುಬ್ಬ ಶಾಲು ಹಾಕಿಂಡಿರ್ತವು? ಕೋಲ ಎಂತರ?? ಅವರ ಪದವನ್ನೂ ಕೇಳಿದ್ದೆ – ಎಷ್ಟು ಲಾಯಿಕಿದ್ದು!!’
ಸತ್ಯಣ್ಣನ ಅಬ್ಬರ ನೋಡಿ ಟೀಕೆಮಾವ ಒಂದಾರಿ ಟ್ಟೆಟ್ಟೆಟ್ಟೆ. ಸಂಗತಿ ಎಂತರ ತಲೆ ಬುಡ ಅರ್ಥ ಆಯಿದಿಲ್ಲೆ ಅವಕ್ಕೆ.
ಮತ್ತೆ ಗೊಂತಾತು…. – ಟೀಕೆ ಮಾವ ಟೀಕೆ ಮಾಡಿದ್ದು ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಹೇದು ಜಾನ್ಸಿ ಸತ್ಯಣ್ಣಂಗೆ ಕೋಪ ಬಂದದು ಹೇಳ್ತ ಸಂಗತಿ! 😀
**
4
ಅಂದು ಅಡಿಗೆ ಸತ್ಯಣ್ಣ ಹೋದಲ್ಲಿ ಇರುಳಿಂಗೆ ಭೂತಕೋಲ, ಮರದಿನ ಸಮರಾಧನೆ
ಸಮರಾಧನೆಗೆ ಹೋಳಿಗೆಯೇ ಆಗ್ಬೇಕು ಹೇಯ್ದ° ಮನೆಯೆಜಮಾನ
ಭೂತಕೂಲ ಇರುಳಾಣ ಊಟ ಆಗಿಕ್ಕಿ ಮತ್ತೆ ಆಯೇಕ್ಕಾದ್ದು ಎಡೆಲಿ ಚಾಯ ಮಾತ್ರ ಅದಾ
ಹಾಂಗೆ ಇರುಳಾಣ ಊಟ ಆಗಿಕ್ಕಿ ಹೋಳಿಗೆ ಬೇಶಲೆ ಸುರುವಾತು. ನಾಕು ಕೆರುಶಿ ಜೆಂಗಕ್ಕೆ ಏರ್ಸಿಯೂ ಆತು.
ನೆಡಿರುಳು ಕಳುದು ರಜಾ ಹೊತ್ತಪ್ಪಗ ಭೂತ ಕಟ್ಟಿ ಎದ್ದು ನಿಂದತ್ತು
ಬೊಂಡಬರಡ್ ಬೊಂಡ ಬರಡ್ ಹೇಳೊದು ಕೇಟತ್ತು ಅಡಿಗೆ ಸತ್ಯಣ್ಣಂಗೆ
ಅಡಿಗೆ ಕೊಟ್ಟಗೆಲಿ ಇತ್ತಿದ್ದ ಸತ್ಯಣ್ಣ ಹೇದ – ಇದಾ ಬೆಶಿ ಬೆಶಿ ಹೋಳಿಗೆ ಇದ್ದು. ಭೂತಕ್ಕೆ ಎರಡು ಕೊಡಿ. ತಿನ್ನಲಿ  😀
**
5
ಅಡಿಗೆ ಸತ್ಯಣ್ಣ ಅಂದು ಅನುಪ್ಪತ್ಯ ಮುಗಿಶಿಕ್ಕಿ ಕರಿಗಣಪ್ಪಣ್ಣನ ಜಾಲ ಕರೇಲ್ಯಾಗಿ ಮೇಗೆ ಗುಡ್ಡೆ ಹತ್ತಿ ಮಾರ್ಗ ಹಿಡಿತ್ತ ಅಂದಾಜಿಲಿ ಹೆರಟದು
ಬೈಲ ಮೂಲೆ ಕರಿಗಣಪ್ಪಣ್ಣ ಹೇಳಿರೆ ಗೆಣಪ್ಪಜ್ಜ ಹೇದೂ ಹೇಳ್ಳಕ್ಕು, ಗೆಣಪ್ಪ ಮಾವ° ಹೇದೂ ಹೇಳ್ಳಕ್ಕೂ
ಗೆಣಪ್ಪಜ್ಜಂಗೆ ಪ್ರಾಯ 78 ದಾಂಟಿರೂ ಇನ್ನೂ ಕಾಂಬಲೆ 48ರ ಹಾಂಗೇ ಇದ್ದವು
ಕರಿಗೆಣಪ್ಪಜ್ಜನ ಮನಗೆ ನಿತ್ಯ ಕೆಲಸಕ್ಕೆ ಬತ್ತದು ಅಲ್ಲೇ ಹತ್ರಾಣ ದಿಕ್ಕಂಗೊ.
ಗೆಣಪ್ಪಜ್ಜ ಅವರ ಆಳುಗೊ ಹೇದು ಹೇಳ್ತದು
ದಿಕ್ಕಂಗೊ ಹೇದರೆ ನಿತ್ಯ ನೇಂಟುತ್ತವು ಹೇದು ಪ್ರತ್ಯೇಕ ಹೇಳೇಕು ಇಲ್ಲೆನ್ನೆ
ಆದರೆ ಗೆಣಪ್ಪಜ್ಜಂಗೆ ಅವು ಕುಡ್ಕೊಂಡು ಕೆಲಸಕ್ಕೆ ಬತ್ಸು ಆವ್ತಿಲ್ಲೆ, ಕುಡಿಯದ್ದೆ ಬಂದರೆ ದಿಕ್ಕಂಗೊಕ್ಕೆ ಕೆಲಸ ಮಾಡ್ಳೂ ಎಡಿತ್ತಿಲ್ಲೆ.
ಜಗಲಿಲ್ಲಿ ಕೂದೊಂಡಿತ್ತಿದ್ದ ಗೆಣಪ್ಪಜ್ಜಂಗೆ ಸತ್ಯಣ್ಣ ಹೋವ್ಸು ಕಂಡತ್ತು. ದೆನಿಗೋಳಿ ಆಸರಿಂಗೆ ಕುಡುದಾತು.
ಎಡಕ್ಕಿಲ್ಲಿ ಗೆಣಪ್ಪಜ್ಜ ಪರಂಚಲೆ ಸುರುಮಾಡಿದವು – “ಎಂತಾರು ಈ ಆಳುಗೊ ಕುಡಿತ್ತವು ಸತ್ಯಣ್ಣ, ಆಳುಗೊ ಕುಡಿತ್ತವು.”
ಸತ್ಯಣ್ಣ ಹೇದ° – “ಅಪ್ಪೋ ಗೆಣಪ್ಪಣ್ಣ° ಆಳುಗೊ ಕುಡಿಯದ್ದೆ ಮತ್ತಾರು ಬ್ರಾಹ್ಮರೋ ಕುಡಿಸ್ಸು !”
ಅಂದಿಗೆ ನಿಂದತ್ತು ಗೆಣಪ್ಪಜ್ಜನ ಆಳುಗೊ ಕುಡಿತ್ತವು ಹೇಳ್ತ ಪರಂಚಾಣ 😀
**
6
ಒಂದಿಕ್ಕೆ ಒಬ್ಬ ಗ್ರಾಸ್ತ ‘ಮೇಗೆ’ ಹೋದ.
ದಶಾಹಾದಿ ಕಾರ್ಯಕ್ರಮಂಗೊಕ್ಕೆ ಅಡಿಗ್ಗೆ ಸತ್ಯಣ್ಣ & ಕೋ.
ಕಾಲವೀಳ್ಯಲ್ಲಿ ಎತ್ತಿ ಆಸರಿಂಗೆ ಕುಡುದು ಅಡಿಗೆ ಕೊಟ್ಟಗೆ ಹೊಡೆಂಗೆ ಹೋವ್ತ ಹೊತ್ತಿಂಗೆ ಆರೋ ಮಾತಾಡುದು ಕೇಳಿತ್ತು – ….  “ಸಣ್ಣ ಮಗ ‘ಸೌದಿ’ಗೆ ಹೋದವ° ಬರೆಕ್ಕಷ್ಟೆ..ಸಮಯಕ್ಕಪ್ಪಗ ಬಂದೆತ್ತುದೂ ಸಂಶಯವೇ.. ಬಂದಮತ್ತೇ ನಿಗಂಟು..”
ರಂಗಣ್ಣ ಮೆಲ್ಲಂಗೆ ಕೇಟ – “ಮಾವಾ!, ಸಂಗತಿ ಕೆಣುದತ್ತೋ ಅಂಬಗ? ನಾವು ಪಾಕಂಗಳ ಬೇಯ್ಶುಸ್ಸು ಹೇಂಗೆ? ಗೇಸಿನ ಏರ್ಪಾಡಾದರೂ ಮಾಡಿದ್ದವೋ ಇಲ್ಯೋ?”
“ಎಂತ್ಸರನ್ನೋ ನೀನು ಹೇಳ್ಸ್ಸು…?”
“ಅಲ್ಲ..ಸೌದಿಗೆ ಹೋದವ ಬಯಿಂದಯಿಲ್ಲೆಡ!!, ಮತ್ತೆ ಹೇಂಗೆ ಅಡಿಗೆ ಮಾಡ್ಸ್ಸು?! ಅದಕ್ಕೆ ಗೇಸಿನ ವೆವಸ್ತೆ ಇಕ್ಕೋ ಕೇಟದಾನು..”
“ಯೇ ಪುಣ್ಯಾದಿಗಾ.. ‘ಸೌದಿ’ ಹೇದ್ದು ಯೇವದರ ಜಾನ್ಸಿದ್ದೆ ನೀನು..? ಹ್ಹು! ಇವರ ಸಣ್ಣ ಮಾಣಿ ಎಂಜಿನೀರು ಕಲ್ತು ಪರದೇಶಲ್ಲಿ- ಸೌದಿ ಅರೇಬಿಯಲ್ಲಿ ಇರ್ಸ್ಸು. ಅವ ಮನ್ನೆ ಬಂದಿಕ್ಕಿ ಹೋದ್ದಷ್ಟೆಡ.. ಆ ಶುದ್ದಿ ಮಾತಾಡಿಂಡಿದ್ದದು ಅಲ್ಲಿ. ಗೊಂತಾತೋ?”
ರಂಗಣ್ಣಂಗೆ ಇಂಗು ತಿಂದ ಮಂಗನಾಂಗೆ ಆತು ಮೋರೆ 😀
**
7
ಆರ ಕೈಲಿಯೂ ಸಿಕ್ಕಿಬೀಳದ್ದೆ ಉಳುಂಚುವ ಸಾಮರ್ತಿಕೆ ಇಪ್ಪ ಸತ್ಯಣ್ಣನ ಹೇಂಗಾರು ಮಾಡಿ ಬಗ್ಗುಸೆಕ್ಕು ಹೇದು ಕಾದೊಂಡಿದ್ದವು ಕೆಲವು ಜೆನ.
ಒಂದಿಕ್ಕೆ ಒಬ್ಬ° ಕೇಟ° – “ಅಪ್ಪೊ ಸತ್ಯಣ್ಣ, ನಿಂಗೊ ಇಷ್ಟು ಸಲೀಸು ರೈಲು ಬಿಡ್ತಿರನ್ನೆ, ನಿಂಗೊಗೆ ವಿಮಾನ ಬಿಡ್ಲೂ ಏನೂ ಕಷ್ಟ ಆಗ. ಅದನ್ನೂ ಒಂದು ಕೈ ನೋಡ್ಲಾವ್ತಿತ್ತನ್ನೆ?”
ಸತ್ಯಣ್ಣ ಸಮದಾನಲ್ಲೇ ಹೇದ ” ಅದೂ ನಾವು ನೋಡದ್ದ ಬಗೆ ಅಲ್ಲ. ಆದರೆ ವಿಮಾನಕ್ಕೆ ಎಲ್ಲ ಇದ್ದರೂ ಒಂದು ಕೊರತೆ ಇದ್ದು. ಹಾಂಗಾಗಿ ಅದರ ಬಿಡುವ ವೈವಾಟು ಬೇಡ ಹೇದು ನಾವೇ ಕರೇಲಿ ಮಡುಗಿದ್ದು ಅದರ..”
“ವಿಮಾನಕ್ಕೆ ಕೊರತೆಯೋ..?! ಎಂತರಪ್ಪ..??!!”
“ಅಪ್ಪು ಮಾರಾಯನೇ, ಎನ್ನ ವಿಮಾನ ಆಕಾಶಲ್ಲಿ ಸ್ಪೀ..ಡಿಲ್ಲಿ ಹೋವ್ತಾ ಇದ್ದು ಜಾನ್ಸಿಗೋ. ಎದುರಂದ ಒಂದು ವಿಮಾನ ಮೆ..ಲ್ಲಂಗೆ ಹೋವ್ತಾ ಇದ್ದು. ಆನು ಅದರ ದಾಂಟಿ ಮುಂದೆ ಹೋಯೆಕ್ಕಾರೆ ಸೈಡು ಕೇಳುದು ಹೇಂಗೆ? ವಿಮಾನಕ್ಕೆ ಹೋರ್ನು ಇದ್ದೋ? ಒಂದು ಹೋರ್ನು ಸಾನು ಇಲ್ಲದ್ದ ವಿಮಾನದ ವೈವಾಟು ಎನಗೆ ಬೇಪಲೇಬೇಡ ಹೇದು ಅಂದೇ ನಿಗೆಂಟು ಮಾಡಿದ್ದೆ..” 😀
**
‘ಅಡಿಗೆ ಸತ್ಯಣ್ಣ’ ಈ ವಾರದ ಸಂಪಾದಕರು – ‘ಸುಭಗಣ್ಣ’    😀
 

     ***   😀 😀 😀  ***

12 thoughts on “'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 31 (ಸುಭಗ ವಾರ – ತುಂಡು ಒಂದು)

  1. ಸುಭಗಣ್ಣಂಗೂ ಸತ್ಯಣ್ಣಂಗೂ ಜಯವಾಗಲಿ. ಸತ್ಯಣ್ಣ ಜೋಕು ಮುಂದುವರಿಯಲಿ.ಹರೇ ರಾಮ.

  2. ಸುಭಗನ್ನ ವರ್ಶಾಂತ ಸುದರಿಕೆಲಿ ಬಿಸಿ ಇದ್ದ ಕಾರಣ ಕಂದತ್ತಿಲ್ಲೆ

  3. ಸತ್ಯಣ್ಣ ಮತ್ತೆ ಬಂದಲ್ಲದೋ ಅದೇ ಸಮಾಧಾನ.. ಅಪ್ಪು ಈ ಸುಭಗಣ್ಣ ಇಷ್ಟ್ರವರೆಗೆ ಎಲ್ಲಿತ್ತವಡ… ಲೈಟ್‌ ಹುಡ್ಕಿಯೊಂಡಾ..?
    ಎಂತದೇ ಆಗಲಿ.. ರೈಸಿದ್ದೋ ರೈಸಿದ್ದಉ.. ಜೈ ಸತ್ಯಣ್ಣ

  4. ಎರಡೆರಡು ಲೈಟು ಎಂತಕೆ? ಲೈಟು ಚಾಯ ಕೇಳಿದವಕ್ಕೆ ಕೊಡ್ಳೆ ಒಂದು… ಲೈಟು ಕಾಪಿ ಕೇಳಿದವಕ್ಕೆ ಕೊಡ್ಳೆ ಇನ್ನೊಂದು… ಅಲ್ಲದೋ?

  5. ಕುಡಿಯದ್ದೆ ಮತ್ತಾರು? .
    ಒ೦ದು ಸರ್ತಿ ಅದೇ ಸತ್ಯಣ್ಣನೊಟ್ಟಿ೦ಗೆ ಎ೦ಗಳ ಹಳೇ ಮಾಸ್ಟ್ರು
    ಮಾತಡುವುದು ನಾವಗೆ ಮೆಲ್ಲ೦ಗೆ ಎಲ್ಲೋ ಕೇಟ ನೆ೦ಪಾತಿದ.
    ಒ೦ದು ಸರ್ತಿ ಅವು ಗುಡ್ಡೇ ಗ೦ಡಿ ದಾರಿಲಿ ಹೋಪಾಗ,
    ಅ೦ಗಡಿಗೆ ಕಟ್ಟಿದಬೀಡಿ ಕೊಡಲೆ ಹೋವುತ್ತ ೨ ಶಾಲೆ ಮಕ್ಕೊಳ
    ಬಾರೀ ವಾದವೇ ಕ೦ಡು ಬತ್ತ೦ಡ,
    ಕಟ್ಟನುಕಳೇ ರಡ್ಡ್ ಒಯಿತ್ತಜಾ೦ಟ ,ಬುಕ್ಕ ಎರ್ ಒಯಿಪ್ಪುನೇ?.
    ( ಅದರ ಕೇಟ ಜೂನಿಯರ್, ತರುಜಮೆ ಮಾಡಿಕೊ೦ಡಡ-ಲಾಡು ಕಟ್ಟಿದವನೇ ೨ ಲಾಡ…)

  6. ಒಂದು ಹೋರ್ನು ಸಾನು ಇಲ್ಲದ್ದ ವಿಮಾನದ ವೈವಾಟು ಎನಗೆ ಬೇಪಲೇಬೇಡ..ವಿಮಾನಕ್ಕೆ ಹಾರ್ನು ಇಲ್ಲೆ ಹೇಳುವ ಸಂಗತಿ ಸತ್ಯಣ್ಣಂಗೆ ಹೊಳದ್ದು ಸಾಕು !ರವಿ ಕಾಣದ್ದದರ ಕವಿ ಕಂಡ ಹೇಳಿ ಹೇಳ್ತವಲ್ಲ ,ಹಾಂಗೆ ಈ ಸತ್ಯಣ್ಣಂಗೆ ಕಾಣದ್ದ ವಿಷಯವೇ ಇಲ್ಲೆಯಾ ಹೇಳಿ !
    ಏನೇ ಆದರೂ ಸುಭಗಣ್ಣ ಹಿಡುಕ್ಕೊಂಡು ಬಂದ ಸತ್ಯಣ್ಣ ಭಾರೀ ರೈಸಿದ್ದ !

  7. * ಸತ್ಯಣ್ನ ನ ಟೋರ್ಚು ಲೈಟಿನ ಕತೆ ಲಾಯಕ ಇದ್ದು…. ಒಬ್ಬ ದೊಡ್ದ ವಿಜ್ನಾನಿ ಎರಡು ಪುಚ್ಚೆ ಸಾಂಕಿತ್ತಿದ್ದನಾಡ , ಒಂದು ದೊಡ್ದದು ಇನ್ನೊಂದು ಸಣ್ನದು.ಅವೆರಡನ್ನುದೇ ಒಂದೇ ಗೂಡಿಲಿ ಹಾಕಿ ಅವಕ್ಕೆ ಹೋಪಲೆ ಬಪ್ಪಲೆ ಎರಡು ಬಾಗಿಲು ಮಡಗಿದನಾಡ .ಒಂದು ದೊಡ್ಡದು ಒಂದು ಸಣ್ಣದು ,ದೊಡ್ದ ಬಾಗಿಲು ದೊಡ್ದ ಪುಚ್ಚೆಗೆ ,ಸಣ್ಣ ಬಾಗಿಲು ಸಣ್ನ ಪುಚ್ಚೆಗೆ ……..ಹ..ಹ ಹಾ.

  8. ತಳಿಯದ್ದೆ ಮನುಗುಲೆ ಹೆರಟ ಸತ್ಯಣ್ಣನ ಈ ಸುಭಗಣ್ಣ ಪುನಃ ಕರಕ್ಕೊಂಡು ಬಂದನ್ನೆ- ಲಾಯ್ಕಾತು. ಕಸ್ತಲೆಲಿ ಬಿದ್ದ ಸೂಜಿಯ ಬೆಣಚಿ ಇಪ್ಪ ಜಾಗೆಲಿ ಹೋಗಿ ಹುಡುಕಿದ ಕತೆಯ ಹಾಂಗೆ ಆಯಿದು ರಂಗಣ್ಣನ ಲೈಟ್ ಹುಡ್ಕಾಣದ ಕತೆ. ಹಾರ್ನ್ ಇಲ್ಲದ್ದ ವಿಮಾನ ಏನೂ ಪ್ರಯೋಜನಯಿಲ್ಲೆ ಅಂಬಗ ಅಲ್ಲದಾ? ಸೌದಿ ಕತೆಯುದೆ ರೈಸಿತ್ತು.

  9. ರಂಗಣ್ಣ ಹೋದಲ್ಲಿ ಲೈಟು ಹುಡುಕುದೇ ಏಕೆಪ್ಪ, ಎನಗೆರಡಿಯ..ಕೊಡಿ ಹಿಡಿವಲೆ ಬಾಗಿಲು ತೆಗದರಾತಪ್ಪ. ಅಂತೂ ಸತ್ಯಣ್ಣ ಹೋದಲ್ಲಿ ಮರ್ಯಾದೆ ಹೋಪಲೆ ಬಿಡ.

  10. ಸತ್ಯಣ್ಣ ಕರೆಂಟು ಹೋದಪ್ಪಗ ಚಡ್ಡಿ(ಕಿಸೆ)ಯೊಳ ಕೈ ಹಾಕುತ್ತದೆಂತಕೆ ಹೇಳಿ ಈಗ ಗೊಂತಾತು..!!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×