ಓನರ್ ಮನೆಯಲ್ಲಿ ನಾಯಿ ತಪ್ಪ ತೀರ್ಮಾನ ಅಪ್ಪಗ ಎನಗೆ ಭಯಂಕರ ಕಿರಿಕಿರಿ ಆದ್ದು ಅಪ್ಪು. ಎನಗೋ ಪ್ರಾಣಿಗೊ ಹೇಳಿರೆ ಅಲರ್ಜಿ. (6 ನೇ ಕ್ಲಾಸಿಲಿಪ್ಪಗ ನಾಯಿ ಕಚ್ಚಿ- ಹೊಕ್ಕಳ ಸುತ್ತ ಇಂಜಕ್ಷನ್ ಚುಚ್ಚಿಸಿಕೊಂಡ ಮೇಲೆ, ನಾಯಿ ಕಂಡರಾವುತ್ತಿಲ್ಲೆ). ವಿಧಿ ಇಲ್ಲದ್ದೆ ಮನುಷ್ಯ ಪ್ರಾಣಿಗಳ ಜೊತೆ ಹೊಂದಿಕೊಂಡಿದ್ದೆ ! ಇನ್ನು ಮನೆ ಮುಂದೆ ಎಷ್ಟೊತ್ತಿಂಗೂ ನಾಯಿ ಕೂದಿರ್ತು ಹೇಳುವ ಕಲ್ಪನೆಯೇ ಮನಸ್ಸಿಲಿ ಹೀಕರಿಕೆ ಹುಟ್ಟಿಸಿದ್ದು ಅಪ್ಪು. ದೇವರತ್ರ ಹೇಳೆಕಷ್ಟೆ ! ಎಂಗ ಎಷ್ಟೇ ಹೇಳಿರು ಬಾಡಿಗೆಗೆ ಇಪ್ಪೋವು. ಕಮೆಂಟ್ ಮಾಡುವ ಹಕ್ಕಿಲ್ಲನ್ನೆ !
.
ಸೋಮವಾರ ಆಫೀಸ್ ಕೆಲಸ ಮುಗಿಸಿ ಬಂದಪ್ಪಗ ನಾಯಿ ತಂದಾಗಿತ್ತಿಲ್ಲೆ……… ಮಂಗಳವಾರವುದೆ ಕೆಲಸಂದ ಬಂದಪ್ಪಗ ನಾಯಿ ಇಲ್ಲೆ ! ನಾಯಿ ತಪ್ಪ ಪ್ಲಾನ್ ಕಾನ್ಸಲ್ ಆಗಿಕ್ಕು ಹೇಳಿ ಗ್ರಹಿಸಿದೆ. ದೇವರಿಗೊಂದು ಥ್ಯಾ೦ಕ್ಸ್ ಫಾರ್ವರ್ಡ್ ಮಾಡಿದೆ !
.
ಬುಧವಾರ ಕಸ್ತಲಪ್ಪಗ ಶ್ವಾನ ದರ್ಶನ ಆತು…. ಮೋಟು ಬಾಲದ ಬಿಳಿ-ಕಪ್ಪು ಬಣ್ಣದ ಮುದೋಳದ ನಾಯಿ ! ಮೊದಲ ಮಹಡಿಯ ಎಂಗಳ ಮನೆ ಬಾಗಿಲ ಹತ್ರವೇ- ಪ್ಯಾಸೇಜಿನ ಕರೇಲಿ- ಆ ನಾಯಿಗೊಂದು ಮನೆ ! ಅಯ್ಯೋ ಗ್ರಹಚಾರವೇ ! ಬಂದೇ ಬಿಟ್ಟತ್ತನ್ನೇ ! ದೇವರಿಗೊಂದು ವಾರ್ನಿಂಗ್ ನೋಟೀಸ್ ಕಳಿಸಿದೆ ” ಎಂಗಳ ಬಿಲ್ಡಿಂಗಿಗೆ ನಾಯಿ ಕಳಿಸುಲಾಗ ಹೇಳಿ 999 ಸಾರ್ತಿ ಹೇಳಿತ್ತಿದ್ದೆ. ಆದ್ರುದೆ ಕಳಿಸಿದ್ದೆಂತಕ್ಕೆ ? ನೀನು ಎನ್ನ ನಂಬಿಕೆಗೆ ದ್ರೋಹ ಮಾಡಿದ್ಯನ್ನೆ ……… ನಿಂಗೆ ಟೂ….ಟೂ…. ಟೂ…..”
.
ಜಾಗೆ ಬದಲಾದ ಕಾರಣವೋ ಎಂಥದೋ, ಅಂದು ರಾತ್ರಿ ಇಡೀ ಎಂಗೋಗೆ ನಾಯಿ ಸಂಗೀತದ ಲಾಲಿ ಹಾಡು ! ನಿದ್ದೆ ಮಾಡ್ಲೆ ಬಿಟ್ಟಿದ್ದಿಲ್ಲೆ ! ಮರುದಿನ ನಾಯಿಗೆ “come – go – eat” ಪಾಠ ಆಗಿಗೊಂಡಿತ್ತು ! ನಾಲ್ಕನೇ ದಿನಕ್ಕೆಲ್ಲ “ನಮ್ಮ ನಾಯಿಗೆ ಎಂತ ಬುದ್ಧಿ ಹೇಳಿ. come – go- drink – eat ಎಲ್ಲ ಅರ್ಥ ಆಗುತ್ತೆ !” ಹೊಗಳಿಕೆ ಬೇರೆ. ಎನಗೋ ಮೈ ಎಲ್ಲ ಉರುಕ್ಕೊ೦ಡಿತ್ತು !
.
ಈ ಕಡೆ ಆನು ದೇವರಿಗೆ ವಾರ್ನಿಂಗ್ ಕೊಟ್ಟಿತ್ತಿದ್ದೆ ! ಆದ್ರೆ ದೇವ್ರು ನಾಯಿ ಓಡಿಸಿದ್ದವಿಲ್ಲೆ ! ” ಆನು, ಇನ್ ಮೇಲೆ ನಿನ್ನ ನಂಬುತ್ತಿಲ್ಲೆ” ಅಂತ ಬೆದರಿಕೆ ಹಾಕಿದೆ. “ನೀ ನಂಬದಿದ್ರೆ ಕತ್ತೆ ಬಾಲ !” ಹೇಳಿ ದೇವರು ಸುಮ್ನೆ ಕೂತಂಗೆ ಕಂಡತ್ತು. ದೇವರ ಕೈಲಿಯುದೆ ಎಂತದೆ ನಡ್ದಿದ್ದಿಲ್ಲೆ. ಬದಲಿಂಗೆ ನಾಯಿ ಎಲ್ಲರೊಟ್ಟಿಂಗೆ ಸ್ನೇಹ ಸಂಪಾದನೆ ಮಾಡಿತ್ತು (ಎನ್ನ ಒಬ್ಬಳ ಬಿಟ್ಟು). ನಾಯಿಗಾಗಿ ಮಾಡಿದ್ದ ಸಣ್ಣ ಮನೆ ಎಂಗಳ ಮನೆ ಮುಂಬಾಗಿಲ ಕಡೇಂಗೆಯನ್ನೆ ? ಪ್ರತಿ ಸರ್ತಿ ಅದರ ಮನೆಗೆ ಹೋಪಗ ಎಂಗಳ ಮನೆ ಒಳ ಬಪ್ಪಲೆ ನೋಡಿಕೊಂಡಿತ್ತು ! ಎನ್ನ ಗುರುತು ಮಾಡಿಕೊಂಬಲೆ ಬಂದುಕೊಂಡದ್ದಾಗಿಕ್ಕು ! ನಾಯಿಯ ನಾರಾಯಣ ಸ್ವರೂಪಿ ಹೇಳ್ತವು. ಆ ನಾಯಿ ನೋಡಿಯಪ್ಪಗ ನಾರಾಯಣ ಖಂಡಿತ ನೆಂಪಾಕ್ಕೊಂಡಿರ್ತಿದ್ದ. ಆದ್ರೆ ಭಕ್ತಿಲಲ್ಲ. ಎನ್ನ ಬೈಗುಳ ತಿಂಬಲೆ !
.
ಶನಿವಾರ ಬೆಳಿಗ್ಗೆ ದೇವರಿಂಗೆ ದಮಕಿ ಹಾಕಿದೆ “ನಾಳೆ ಸಂಜೆ ಒಳ ನಾಯಿಯ ಎಂಗಳ ಬಿಲ್ಡಿಂಗ್ ನಿಂದ ಹೆರ ಕಳಿಸದ್ದೆ ಇದ್ರೆ ……… ನೀನು ಇಲ್ಲೆ ಅಂತ ಪ್ರಚಾರ ಮಾಡ್ತೆ. ನಿನಗೆ ಆರೂ ನಮಸ್ಕಾರ ಮಾಡುಲಾಗ. ಹೋಮ-ಹವನ ನಡೆಸುಲಾಗ ಹಂಗೆ ಮಾಡ್ತೆ”.
.
ದೇವರು ಕೇಳಿಸಿಕೊಂಡನಾ ? ಇಲ್ಲೆಯೋ ? ಅನುಮಾನ ಆತು. ಮತ್ತೆ ಮತ್ತೆ ಮಂತ್ರದ ಹಾಂಗೆ ಹೇಳಿಗೊಂಡೇ ಇತ್ತಿದ್ದೆ ! ರಾತ್ರಿ ಕನಸಲ್ಲಿ ಕಂಡ ದೇವರು “ಆತು ಮಾರಾಯ್ತಿ. ಸಾಕು ಮಾಡು ನಿನ್ನ ಪಿರಿಪಿರಿ” ಹೇಳಿ ಹೇಳಿದಂಗಾತು !
.
ಭಾನುವಾರ ಉದಿಯಪ್ಪಗ ಓನರ ಮನೆಯೋವೆಲ್ಲ ಯಾರದ್ದೋ ಮದುವೆಗೆ ಹೊರಟವು. ನಾಯಿ ಪಾತ್ರೆಗೆ ಒಂದಷ್ಟು ರಾಗಿ ಗಂಜಿ ಸುರುವಿ, ನಾಯಿಗೆ ತಿನ್ಸಿಕ್ಕಿಯೇ ಹೆರಟವು. ಆನು ನೋಡಿಯೂ ನೋಡದಂತೆ ಇತ್ತಿದ್ದೆ ! ಸದ್ಯ “ನಾಯಿಗೆ ಊಟ ಹಾಕ್ತೀರಾ ?” ಅಂತ ಎನ್ನನ್ನ ಕೇಳಿದ್ದವಿಲ್ಲೆನ್ನೆ. ಮನಸ್ಸಿನ ಒಳ೦ದಲೇ ಸಮಾಧಾನ ಮಾಡಿಗೊಂಡೆ. ಒಂದು ಗಂಟೆ ಹೊತ್ತಿಂಗೆ ನಾಯಿ ಮನೆ೦ದ ಕೆಳ ಗೇಟ್ ಹತ್ತರ೦ಗೆ ಎ೦ತದೋ ಸೊರುಗಿದ ಹಾ೦ಗೆ ಶಬ್ದ ! ನೋಡಿದರೆ – ನಾಯಿ ವಾಂತಿ ಮಾಡಿಗೊಂಡಿದು. ರಾಮ … ರಾಮ…ಇಶ್ಶೀಶ್ಶೀ,,,,,,
.
ವಾಂತಿ ಮಾಡಿ, ನಾಯಿ ಸುಸ್ತಾಗಿ ಮನಗಿತ್ತು. ನಾಲ್ಕು ಗಂಟೆಗೆ ಮದುವೆ ಮುಗುಸಿ ಬಂದವಕ್ಕೆ ನಾಯಿ ವಾಂತಿಯ ಸ್ವಾಗತ ! ಕೆಟ್ಟ ವಾಸನೆ ಬೇರೆ ! ಬೈದುಗೊಂಡೇ ಒಳಬಂದವು ಎಲ್ಲೋರು ! ಒಂದಿಷ್ಟು ನೀರು ಸುರುದು ತೊಳೆದವು. ವಾಸನೆ ಹೋಯ್ದಿಲ್ಲೆ ! ಬ್ಲೀಚಿಂಗ್ ಹುಡಿ ಸುರುದು ತಿಕ್ಕಿ ತೊಳದವು. ವಾಂತಿ ವಾಸನೆ ಹೋಗಿ, ಆಸ್ಪತ್ರೆ ವಾಸನೆ ಬಪ್ಪಲೆ ಸುರುವಾತು. ಮಹಡಿ ಮೇಲೆ ಬಂದು, ನಾಯಿ ಚೈನ್ ಹಿಡಿದುಗೊಂಡು, ಹೆರ ಹೋದವು. ಎಲ್ಲಿಂದ ತಂದವೊ ಅಲ್ಲಿಗೆ ತೆಕ್ಕಂಡೊಗಿ ಬಿಟ್ಟಿಕ್ಕು ! ಅಂತು ದೇವರು ಕಣ್ಣು ಬಿಟ್ಟಿದ್ದ ! ನಾಯಿಯಿಂದ ಎನಗೆ ಮುಕ್ತಿ ಸಿಕ್ಕಿತ್ತು !
.
ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತಾ- ಇಲ್ಲದಾ ಗೊಂತಿಲ್ಲೆ. ನಾಯಿ ಓಡಿಸಲೆಡಿಗು ! ಇದು ಎನ್ನ ಅನುಭವ !
Latest posts by ಸುರೇಖಾ ಚಿಕ್ಕಮ್ಮ (see all)
- “ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ “ - October 12, 2014
- “ರಾತ್ರಿ ಒಂದು ಗಂಟೆಗೆ ಎಚ್ಚರಾಗಿ ಇದ್ದಕ್ಕಿದ್ದಂತೆ ಜ್ಞಾನೋದಯ ಆತು !” - October 5, 2014
- ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ!! - September 20, 2014
ಮಂತ್ರಕ್ಕೆ ಮಾವಿನಕಾಯಿ ಉದುರದ್ದರೂ ನಾಯಿಂದ ಮುಕ್ತಿ ಸಿಕ್ಕಿತ್ತನ್ನೆ ಸಾಕು.ನಿರೂಪಣೆ ಲಾಯ್ಕಾಯಿದು.
ಇದು 1998 ನೇ ಇಸವಿಯಲ್ಲಿ ಬರೆದ್ದ್ದು ಮಡುಗಿದ ಲೇಖನ. ಈಗ ಎದುರು ಮನೆಲಿ ಒಂದಲ್ಲ- ಎರಡು ನಾಯಿಗಳು ದಿನಯಿಡೀ ಕೊರಿತಾ ಇರ್ಥವು. ಅವುದ್ದೂ ಸ್ವಂತ ಮನೆ (ನಾಯಿಗಳದ್ದಾ ? ಓನರಿಂದಾ ?). ಎಂಗಳದ್ದುದೆ ಸ್ವಂತ ಮನೆ. ಯಾವ ಮಂತ್ರವೂ ಉಪಯೋಗಕ್ಕೆ ಬೈಂದಿಲ್ಲೆ ! ಹೊಸ ಮಂತ್ರದ ಹುಡುಕಾಟದಲ್ಲಿದ್ದೆ. ಆರಾದ್ರು ಹೆಲ್ಪ್ ಮಾಡಿ ಪ್ಲೀಸ್….
ಓಹೋ ,ನಿ೦ಗಳ ಅನುಭವ ಹಾ೦ಗೆಯೋ?,
ಹೀ೦ಗೆ ಕೆಲವು ವರುಷ ಹಿ೦ದೆ ಸಿ೦ಗಲ್ ಬಿಡಾರ ಹೂಡಿಕೊ೦ಡಿಪ್ಪಗ ,ಅಲ್ಲೋ೦ದು ದಾಸನ ಬಿಳಿ ಬಣ್ಣದ ಒ೦ದು ಕುನ್ನಿ ಇತ್ತು.ನಾವಗೆ ಅದರ ಕ೦ಡರೆ ಆಗ ಹೇಳಿ ಇಲ್ಲೇ. ಆದರೆ ಆದಕ್ಕೆ ನಮ್ಮ ಆಗ ,
ನಾವು ಜರಾನ ಅರಮನೆ ಹೊಕ್ಕುವಾ೦ಗೆ ಹೋಪಗ ಅದು ಬಾಯಿಮಾಡಿ ಕೊ೦ಡು ಇತ್ತು.
ಆದರೆ ನಾವಾಗ ಆಗದ್ದ ವಿಸ್ಯ ಹೇಳಿದರೆ ಅದು ತಲೆ ಬಾಚಿ ಕೂದಲು ಎಲ್ಲಾಕಡೆ ಉದುರ್ಸಿಕೊ೦ಡು ಇದ್ದರೆ ನಾವಗೆ ರಜಾ ಉರಿದರಿಸುವ ವಿಸ್ಯ.
ಹಾ೦ಗೆ ಕಾಲದೂಡುತ್ತಾ ಇಪ್ಪಾಗ ,ಅದು ನಮ್ಮ ಶಿರಸ್ತ್ರಾಣದ ಒಳ ಕಾ೦ಬಲೆ ಸುರು ಆತು.
ಇದು ಚೋದ್ಯವೇ ಆತು. ಇದು ಹೇ೦ಗೆ ಹೇಳಿ. ನಾವುದೇ ಶತಪಥ ಹಾಕುತ್ತಾ ಆ ಕುನ್ನಿಯ ಕಾರುಬಾರು ,ಕೂದಲು ತ೦ದು ಮಾಡುವ ಕ್ರಮ ನೋಡಲೇ ಕಾದು ಕೂದತ್ತು.
ಆದರು ಗೊ೦ತ್ತಾಯಿದಿಲ್ಲೆ.
ಪೋ೦ಡುಫೋ ಅತು.
ಮತ್ತೆ ಕನ್ನಡಿ ಮು೦ದೆ ನಿ೦ತು ನೋಡುವಾಗ ಗೊ೦ತ್ತಾತು
ನಾವು ಮೂರನೆಯವರ/ಳ ತಲೇಲಿ ಹೊತ್ತು ಕೊ೦ಡು ತಿರುಗಲೇ ಸುರು ಮಾಡಿದ್ದು ಹೇಳಿ.
ಅಲ್ಲಿ೦ದ ಮತ್ತೆ ನಾವಗೆ ಅತಿವೇಗದ ಬಿಳಿತಲೆ ಪಟ್ಟವೂ ಒಲಿದು ಬ೦ತು.
ಅದಾ… ಸೀದಾ ಹೋಗಿ ಆ ನಾಯಿಮರಿ ಹತ್ರ ಸೋರಿ ಕೇಳಿಕ್ಕಿ ಬನ್ನಿ…….
ಸುಮ್ಮನೆ ಅನುಮಾನ ಪಟ್ಟಾಯಿದು. ಪರಿಹಾರ ಮಾಡಿಕೊಳ್ಳೆಕನ್ನೆ ? ಈಗ ಆ ನಾಯಿ ಸತ್ತು ಸ್ವರ್ಗ ಸೇರಿಕ್ಕು. ಒಂದರಿ ಬೈಲಿಗೆ ಅದರ ಅತ್ಮನ ಕರೆಸುವನಾ ? (ಗೊಂತಿದ್ದಾ ಅದು ? ಮಂಡಲ ಹಾಕಿ ಆತ್ಮ ಕರೆಸುವ ಕ್ರಮ ?)
ಸುಮ್ಮನೆ ಒಂದು ಲೇಖನಕ್ಕಾಗುವ ವಿಷಯ ವೇಸ್ಟ್ ಆತನ್ನೆ… ಎನ್ನ ಲೇಖನದಲ್ಲಿ ಇದ್ದ ವಿಷಯ :ಓನರ್ ನಾಯಿ ಮರಿ ತಂದದ್ದು. ಸುಧಾರಿಸಲಾಗದೆ ವಾಪಾಸ್ ಕಳಿಸಿದ್ದು. ಉಳದ್ದೆಲ್ಲ ಸುಮ್ ಸುಮ್ನೆ ಬರದ್ದು……..
ಹಾಂಗೆ….. ಮೊನ್ನೆ ಶನಿವಾರದ ಕನ್ನಡ ಪ್ರಭಾದ ಅನುಭವ ಮಂಟಪ ಓದಿದಿರಾ ? ಎನ್ನ ಲೇಖನ ಇದ್ದತ್ತು.
ಲೇಖನ ಅ೦ದೇ ಓದಿದ್ದು.
ಚಿಕ್ಕಮ್ಮ, ನಿಂಗೊ ರಾಗಿ ಗಂಜಿಲಿ ವಾಂತಿ ಮಾತ್ರೆ ಹಾಕಿದ ವಿಷಯ ಆನು ಆರತ್ರೂ ಹೇಳ್ತಿಲ್ಲೆ. ಪಾಪ ಆ ನಾಯಿ ಮರಿ.!!!!!!!!!!!!!
ಶ್ಶೆ !!!!!…. ಅಷ್ಟು ಸೀಕ್ರೆಟ್ ಮಡಗಿತ್ತಿದ್ದೆ ವಿಷಯವಾ. ಅದು ಹೇಂಗೆ ಗೊಂತಾತು ? ನಿಂಗೋ ಆವ ರೂಪಲಿ ಅಲ್ಲಿ ಇತ್ತಿದ್ರಿ ? ಸಾಕ್ಷಿ ಸಿಕ್ಕೆ ಬಿಟ್ಟತ್ತಾ ?
(ಶಾಂತಂ ಪಾಪಂ… ಹಾಂಗೆಲ್ಲ ಮಾಡಿದ್ದಿಲ್ಲೆ ! ಆನು ಬಾರೀ ಒಪ್ಪಕ್ಕ. ನನ್ನನ್ನ ನಂಬಿ ಪ್ಲೀಸ್……….)
ಚಿಕ್ಕಮ್ಮಾ, ನಿಂಗಳ ಪಕ್ಕದ ಮನೆ ಲಕ್ಷ್ಮಿ ಅಕ್ಕ “ಗಿಳಿಬಾಗಿಲಿಲ್ಲಿ” ನೋಡಿದ್ದವಡ. ಅವೇ ಹೇಳಿದ್ದದು. ಬೇಜಾರು ಮಾಡೆಡಿ. (ತಮಾಷೆಗೆ ಬರದ್ದು.)
ಇನ್ನೊಂದು ಸಾಕ್ಷಿಯುದೆ ಸಿಕ್ಕಿತಾ ?
ಆನುದೆ ತಮಾಷೆಗೆ ಬರೆದದ್ದು……………….