ನಮ್ಮ ಭಾಷೆಲಿ ಬಳಕೆ ಇಪ್ಪ ಅಪರೂಪದ ಒಂದು ನುಡಿಗಟ್ಟು ಇದು .ಅವ ಮುಂಗೈ ಪತ್ತು ಮಾಡಿದ ,ಅದು ಮುಂಗೈ ಪತ್ತು ಮಾಡಿತ್ತು ಹೇಳಿ !
ಎಂತದು ಮುಂಗೈ ಪತ್ತು ಹೇಳ್ರೆ ?ಅಂಗೈ ಹಾಂಗೆ ಮುಂಗೈ ಅರ್ಥ ಗೊಂತಿದ್ದನ್ನೇ !ಪತ್ತು ಹೇಳುದು ಪಟ್ಟು -ಹಿಡಿತ ಹೇಳುದೆ ಪತ್ತು ಆಗಿರೆಕ್ಕು .ಪಟ್ಟು ಹೇಳ್ರೆ ಕುಸ್ತಿ ಪಟುಗ ಸ್ಪರ್ಧಿಗಳ ತಪ್ಪಿಸಿಕೊಳ್ಳದ್ದ ಹಾಂಗೆ ,ಜಾರದ್ದ ಹಾಂಗೆ ಎಲ್ಲ ಗಟ್ಟಿಯಾಗಿ ಅಲುಗುಸುಲೆ ಎಡಿಯದ್ದ ಹಾಂಗೆ ಹಿಡಿವದು .
ಇದರ ಎರಡು ರೀತಿಲಿ ಬಳಕೆ ಮಾಡುತ್ತವು.ಒಂದು ಆಧಾರಕ್ಕಾಗಿ ಹಿಡಿವಲೆ ಕೈಯ ಮಡುಸಿ ಮುಂಗೈಯ ಹಿಡಿವಲೆ ಕೊಡುದು .ಹಿಡುಕೊಂಡೋನು ಎಷ್ಟೇ ಗಟ್ಟಿಯಾಗಿ ಹಿಡುದು ಕೊಂಡರೂ ಇವ ಉದ್ದಕ್ಕೆ ಚಾಚಿ ಆ ಕೈಯ ಬಿಡಿಸಿದರೆ ಹಿಡಿತ ತಪ್ಪಿಹೊವುತ್ತು (ಮುಂಗೈ ಮಡುಸಿ ಹಿಡುದು ನಂತರ ಆ ಕೈಯ ಬಿಡಿಸಿ ನೋಡಿ ಅಂಬಗ ನಮಗೆ ಗೊಂತಾವುತ್ತು ಮುಂಗೈ ಪತ್ತು ಎಷ್ಟು ಸುಲಭಲ್ಲಿ ಬಿಟ್ಟು ಹೊವುತ್ತು ಹೇಳಿ !)ಈ ರೀತಿಯಾಗಿ ಯಾವುದಾದರು ಸಂದರ್ಭಲ್ಲಿ ಜಾರಿ ಕೊಂಬೋರ ಬಗ್ಗೆ ಅವ ಮುಂಗೈ ಪತ್ತು ಮಾಡಿದ ಹೇಳಿ ಹೇಳುತ್ತವು
ಇನ್ನೊಂದು ಸಂದರ್ಭ ಒಬ್ಬಂಗೆ ತಪ್ಪಿಸಿಕೊಂಬಲೆ ಅನುಕೂಲ ಅಪ್ಪ ರೀತಿಯ ಪಟ್ಟಿನ ಬಳಕೆ . ಬಿಗಿಯಾದ ಪಟ್ಟಿನ ಎರಡು ಕೈಗಳ ಅಂಗೈ ಗಳ ಮೂಲಕ ಹಾಕುದು ಕ್ರಮ .ಇಂಥ ಪಟ್ಟಿನ ಮುಂಗೈಗಳ ಬಳಸಿ ಹಾಕುಲೆ ಹೋದರೆ ಅದು ಎಡಿಯ ಅನ್ನೇ ,ಅಂತ ಪಟ್ಟು /ಹಿಡಿತ ತುಂಬಾ ದುರ್ಬಲ ,ಆರಿನ್ಗೂ ತಪ್ಪಿಸಿಗೊಮ್ಬಲೆ ಎಡಿಗು .
ಇದು ನುಡಿಗಟ್ಟು ಆಗಿ ಬಳಕೆ ಅಪ್ಪಗ ಈ ರೀತಿಯ ಶಬ್ದಶಃ ಅರ್ಥ ಬತ್ತಿಲ್ಲೆ ,ಆದರೂ ಭಾವ ಇದೇ ಆಗಿರುತ್ತು .ಆಸ್ತಿ /ಮನೆ ಪಾಲು ವ್ಯಾಜ ,ಚರ್ಚೆ ಮೊದಲಾದ ಸಂದರ್ಭಗಳಲ್ಲಿ ಕೆಲವು ನಿರ್ಣಾಯಕವಾದ ,ಆರಿಂದು ಸರಿ ತಪ್ಪು ಹೇಳಿ ಸರಿಯಾಗಿ ಗೊಂತಿಪ್ಪ ವ್ಯಕ್ತಿಗ ಇರ್ತವು .
ಅಂತ ವ್ಯಕ್ತಿಗ ಇದು ತಪ್ಪು ಸರಿ ಹೇಳಿ ಸ್ಪಷ್ಟವಾಗಿ ಹೇಳಿದರೆ ಅಲ್ಲಿಗೆ ವಿವಾದ ಮುಗುದು ಹೋವುತ್ತು.ಆದರೆ ಎಷ್ಟೋ ಜನಂಗ ಸ್ಪಷ್ಟವಾಗಿ ಇದರ ಹೇಳುತ್ತವಿಲ್ಲೆ ,ಕಣ್ಣಾರೆ ಕಂಡಿದ್ದರೂ ಆನು ಅಲ್ಲಿ ಇತ್ತಿದೆ ,ಆದರೆ ಗೋಷ್ಠಿ ಮಾಡಿದ್ದಿಲ್ಲೆ /ಆನು ಗಮನಿಸಿದ್ದಿಲ್ಲೆ ,ಅವು ಏನೋ ಹೇಳಿದ್ದವು ಎಂಥ ಹೇಳಿ ಎನಗೆ ನೆನಪಿಂಗೆ ಬತ್ತಿಲ್ಲೆ ..ಇತ್ಯಾದಿಯಾಗಿ ಅಡ್ಡ ಗೋಡೆ ಮೇಲೆ ದೀಪ ಮಡುಗಿದ ಹಾಂಗೆ ಹೇಳುತ್ತವು .
ಉದಾ ಹರಣೆಗೆ ಹೇಳುದಾದರೆ ಒಬ್ಬ ಕೂದಿಪ್ಪಗ ಅವನ ಎದುರೇ ಒಬ್ಬಪಾಪದವಂಗೆ ಇನ್ನೊಬ್ಬ ಜೋರಿನವ ವಿನಾಕಾರಣ ಜಗಳ ತೆಗದು ಎರಡು ಮಡುಗುತ್ತ ಹೇಳಿ ಮಾಡಿಕ್ಕೊಂಬ ,ಮುಂದೆ ಆ ಬಗ್ಗೆ ಪಂಚಾಯತಿಕೆ ಅಪ್ಪಗ ಅಲ್ಲಿ ಕೂದು ಗೊಂಡು ಇದ್ದ ವ್ಯಕ್ತಿಯ ಹತ್ತರೆ ಎಂತಾತು ಹೇಳಿ ಕೇಳ್ತವು .ಅಷ್ಟಪ್ಪಗ ಅವ ಆನು ಪುಸ್ತಕ ಓದಿಕೊಂಡು ಇತ್ತಿದೆ ಏನೋ ಒಂದು ಶಬ್ದ ಆತು ಎಂತ ಹೇಳಿ ಎನಗೆ ಗೋಷ್ಠಿ ಆಯಿದಿಲ್ಲೆ ಹೇಳಿ ಹೇಳಿದರೆ ಅದರ ಮುಂಗೈ ಪತ್ತು ಮಾಡುದು ಹೇಳಿ ಹೇಳುತ್ತವು
.ಎನಗೆ ಗೊಂತೆ ಇಲ್ಲೆ ಆನು ಅಲ್ಲಿ ಇತ್ತೇ ಇಲ್ಲೆ ಹೇಳಿರೆ ಅದೊಂದು ಬೇರೆ !ಆದರೆ ಅಲ್ಲಿ ಇತ್ತಿದೆ ಹೇಳಿ ಒಪ್ಪಿಗೊಂಡುದೆ ತಪ್ಪು ಮಾಡಿದವ ತಪ್ಪಿಸಿಕೊಂಬ ಅವಕಾಶ ಕೊಟ್ಟು ವ್ಯವಹರಿಸುವ ಬಗ್ಗೆ ಬಳಕೆ ಅಪ್ಪ ನಮ್ಮ ಭಾಷೆಯ ನುಡಿಗಟ್ಟು ಇದು.
ಕನ್ನಡಲ್ಲಿ ಬಳಕೆ ಇಪ್ಪ ಹಾವು ಸಾಯಬಾರದು ಕೋಲೂ ಮುರಿಯಬಾರದು .ಅಕ್ಕಿಯ ಮೇಲೆ ಆಸೆ ,ನೆಂಟರ ಮೇಲೆ ಪ್ರೀತಿ ಮೊದಲಾದ ಮಾತುಗ ಮುಂಗೈ ಪತ್ತು ಅಭಿವ್ಯಕ್ತಿಸುವ ಅರ್ಥದ ಹತ್ತರಂಗೆ ಬತ್ತು
ಬೇರೆಯೂ ಇದಕ್ಕೆ ಸಮಾನಾಂತರವಾದ ಬಳಕೆಗ ಇಕ್ಕು ,ಗೊಂತಿದ್ದೋರು ತಿಳುಸಿ.
- ಗಿಳಿ ಬಾಗಿಲಿಂದ -ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ? - September 11, 2014
- ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು - August 20, 2014
- ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ - July 30, 2014
ಮನೆ ಹೆಮ್ಮಕ್ಕಳೇ ಹಾಕಿದ ಉಪ್ಪಿನಕಾಯಿ , ನಮ್ಮ ಕ್ರಮದ ಹ೦ತಿ ಊಟಲ್ಲಿ ಸರಿಯಾದ ಸಮಯಕ್ಕೆ ;ಮಜ್ಜಿಗೆಯ ಹಿ೦ದ೦ದಲೇ ಬ೦ದಷ್ಟು ಸಮಯೋಚಿತವಾಗಿದ್ದು ಈ ಸರ್ತಿಯಾಣ ನುಡಿಗಟ್ಟು.
ವಿವರಣೆ ಒಳ್ಳೆದಾಯಿದು.
ವ್ಯಾಜ ,ಚರ್ಚೆ ಮೊದಲಾದ—– ಇಲ್ಲಿ ಕ್ಯ ಪತ್ತಿನ ಪ್ರಯೋಗ ಇದ್ದಡ.
ಕಯಿಪತ್ತ್ತ್ತು
ಇದಕ್ಕೆ ಒಳ್ಳೇ ಉದಾಹರಣೆ—- ನಮ್ಮ ಪ್ರಧಾನಿ ಮನಮೋಹನ ಸಿಂಗ್. ಎಷ್ಟೋ ಹಗರಣ ನಡದರೂ ಎನಗೆ ಗೊಂತೇ ಇಲ್ಲೆ ಹೇಳುವ ರೀತಿ ಕೂದೊಂಡಿರ್ತು. ಹರೇ ರಾಮ.
ಅಪ್ಪಪ್ಪು ಕೆಲವೊಂದರೆ ಮುಂಗೈ ಪತ್ತು ಮಾಡ್ತದೇ ಒಳ್ಳೆದು ಕಾಣುತ್ತು ಅಪ್ಪೋ