- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಅಡಿಗೆ ಸತ್ಯಣ್ಣಂಗೆ ಒಟ್ಟು ತೆರಕ್ಕು. ನವಗೂ ಬೇರೆಲ್ಲ ಅಲಾಯುದ ತೆರಕ್ಕು.
ಅಂತೂ ಹೇಳ್ಳೆ ಇಪ್ಪದರ ಹೇದಿಕ್ಕುವೋ ಹೇದಾತು ಅಡಿಗೆ ಸತ್ಯಣ್ಣಂಗೆ ಹಸೆ ಬಿಡುಸಲಪ್ಪಗ.
~~
1
ಅತ್ರಿಜಾಲು ಉಪ್ನಾನ. ಹೋಳಿಗೆ ಕಾಯಿಹಾಲು
ಅಲ್ಲಿಂದ ಇಲ್ಲಿಂದ ಹೇದಲ್ಲ, ಎಲ್ಲಿಲ್ಲೆಂದ ಬೈಂದವು ಹೇದರೆ ಎಲ್ಲ ದಿಕ್ಕಂದಲೂ ಬೈಂದವು ಕೆಲವು ದಿಕ್ಕಂದ ಬಿಟ್ರೆ ಹೇದವು ಆರೆಲ್ಲ ಬೈಂದವು ಕೇಟದಕ್ಕೆ ಅತ್ರಿಜಾಲು ನಾಣಣ್ಣ
ಅಡಿಗೆ ಕೊಟ್ಟಗೆಲಿ ಮಾತಾಡ್ಯೊಂಡಿತ್ತಿದ್ದ ಮುಳಿಯಾಲ ಭಾವ ಎಡಕ್ಕಿಲಿ ಹೇದ…ಒಟ್ಟಾರೆ ಸತ್ಯಣ್ಣ ಮದುವೆ ಆಯೇಕು ಹೇದು ಮಾಣಿಯಂಗ ಸುಮಾರು ಇದ್ದವು. ಕೂಸು ಸಿಕ್ಕುತ್ತೇ ಇಲ್ಲೆ. ಎಂತ ಮಾಡ್ತದು ಗೊಂತಾವ್ತಿಲ್ಲೆ! 🙁
ಸತ್ಯಣ್ಣಂಗೆ ಇಪ್ಪದು ಒಂದು ಕೂಸು , ಅದೂ ಕಾಲೇಜಿಂಗೆ ಹೋವ್ತಟ್ಟೆ. ಸತ್ಯಣ್ಣ ಎಂತ ಮಾಡ್ಳೆ ಎಡಿಗು ಅದಕ್ಕೆ!! 🙁
ಸತ್ಯಣ್ಣ ಹೇದ° – ಎಂತ ಮಾಡ್ಳೂ ಎಡಿಯ ಅಣ್ಣೋ.., ಕೂಸು ಸಿಕ್ಕುವನ್ನಾರ ಮದುವೆ ಆಗದ್ದಿಪ್ಪದೇ ಒಳ್ಳೆದು 😀
~~
2
ಕಾಟಿಪ್ಪಳ್ಳ ಉಪ್ನಾನಕ್ಕೆ ಅಡಿಗೆ ಸತ್ಯಣ್ಣಂಗೆ ಹೋಪಲೆ ಇತ್ತಿದ್ದಾದರೂ ಅತ್ರಿಜಾಲ ಉಪ್ನಾನ ಮದಲೆ ನಿಗಂಟು ಆದ ಕಾರಣ ಇಲ್ಲಿ ಬೇರೆ ಅಡಿಗೆ ಅಣ್ಣನ ಏರ್ಪಾಡು ಮಾಡಿಕ್ಕದ್ದೆ ನಿವೃತ್ತಿ ಇತ್ತಿಲ್ಲೆ.
ಕಾಟಿಪ್ಪಳ್ಳ ಉಪ್ನಾನಕ್ಕೆ ಅಡಿಗ್ಗೆ ಬಂದ ಶೆಡ್ಡು ಪ್ರಕಾಶಣ್ಣ ಅದೆಂತ್ಸಕೋ ಅಡಿಗೆ ಸತ್ಯಣ್ಣಂಗೆ ಫೋನ್ ಮಾಡಿ ಮಾತಾಡಿಗೊಂಡೇ ಬಾತ್ ರೂಮ್ ಹತ್ರಂಗೆ ಬಂದ.
ಪೋನಿಲ್ಲಿ ಮಾತಾಡ್ಯೊಂಡಿದ್ದ ಅಡಿಗೆ ಸತ್ಯಣ್ಣಂಗೆ ಈಚೊಡೆಂದ ‘ಎಲ್ಲಿದ್ದು?’ ಹೇದು ಕೇಳ್ವದು ಕೇಟತ್ತು.
ಸತ್ಯಣ್ಣ ಅಡಿಗೆ ಪ್ರಕಾಶಣ್ಣನತ್ರೆ ಕೇಟ° – ‘ಎಂತರ ಹುಡ್ಕುತ್ಸು ನೀನು’?
ಅಡಿಗೆ ಪ್ರಕಾಶಣ್ಣ ಹೇದ° – ‘ಬಾತ್ ರೂಮ್’
ಸತ್ಯಣ್ಣ ಹೇದ° – ಏ!!! ನೀನು ಏವ ಕಾಲಲ್ಲಿ ಇದ್ದೆ ಇನ್ನೂ!. ನಿನ್ನ ಮೊಬೈಲಿಲಿ ನೆಟ್ಟು ಇದ್ದನ್ನೇ. ಅದರ್ಲಿ ಗೂಗಲ್‍ಲಿ ಹುಡ್ಕಿ ನೋಡು. ಎಲ್ಲಿದ್ದು ಹೇದು ಕಾಂಗು. ರಮ್ಯ ಹೇಯಿದು- ಗೂಗುಲಿಲಿ ಸಿಕ್ಕದ್ದು ಹೇದು ಏವುದೂ ಇಲ್ಲೆಡ 😀
~~
3
ಅತ್ರಿಜಾಲ ಉಪ್ನಾನ ಕಳಾತು. ಬಂದ ಅರ್ಗೆಂಟಿನವೆಲ್ಲ ಹೆರಟಾತು
ಉಪ್ನಾನಲ್ಲಿ ಪಟ ತೆಗದ ಕೆಮರ ಹಿಡ್ಕೊಂಡಿತ್ತಿದ್ದ ಮಾಣಿ ಮಧ್ಯಾಂತ್ರಿಗಿ ಎಲ್ಲೋರು ಹೋದಮತ್ತೆ ಅಂತೇ ಕೂದೊಂಡಿಪ್ಪಗ ಸತ್ಯಣ್ಣಂಗೆ ತೆಗದ ಪಟಂಗಳ ಕೆಮರಲ್ಲೇ ತಿರುಗಿಸಿ ಹಾಕಿ ತೋರ್ಸಿಗೊಂಡಿತ್ತಿದ್ದ.
ಎಡೆ ಎಡೆಲಿ ಅಡಿಗೆ ಸತ್ಯಣ್ಣಂಗೂ ತೋರ್ಸಿದ – ‘ಇದಾ ಮಾವ ಇದು ನೋಡಿ… ಇವನ ನೋಡಿ’ ಹೇದು
ಎಡೆಕ್ಕಿಲಿ ಅದೇವುದೋ ಒಂದು ಪಟ ತೋರ್ಸಿ ‘ಇದಾ ನೋಡಿ ನೋಡಿ’ ಹೇದು ನೆಗೆ ಮಾಡಿದ ಕೆಮರ ಮಾಣಿ
ಸತ್ಯಣ್ಣನೊಟ್ಟಿಂಗೆ ಅಲ್ಲಿ ಕೂದೊಂಡಿತ್ತಿದ್ದ ಗೋವಿಂದಕ್ಕೋಡ್ಳು ಮಾಣಿಯೂ ಇಣ್ಕಿ ನೋಡ್ಯೊಂಡು ಪ್ಪ್ಫೇ 😀 ಹೇದ°
ಕೊಂಗಿ ಮಾಡ್ಯೊಂಡಿತ್ತಿದ್ದ ಆ ಪಟವ ನೋಡಿ ಸತ್ಯಣ್ಣಂಗೆ ಅದಾರು ಹೇದು ಅಂದಾಜಿ ಆತಿಲ್ಲೆ.
ಅಷ್ಟಪ್ಪಗ ಗೋವಿಂದಕ್ಕೋಡ್ಳ ಮಾಣಿ ಹೇದ° – ಅದು ‘ಆನೇ’
ಸತ್ಯಣ್ಣನೂ ಅವನ ನೋಡಿ ನೆಗೆ ಮಾಡಿ ಕೇಟ° ಏ…. ‘ಆನೆ’ ಹೀಂಗೆ ಇರ್ತೋ?!! :D
~~
4
ಅನುಪ್ಪತ್ಯಕ್ಕೆ ಬಂದೋರು ಅಡಿಗೆ ಕೊಟ್ಟಗೆ ಬುಡಲ್ಲಿ ಬಂದು ನಿಂದೊಂಡು ಅಂತೇ ಏನಾರು ಅವರದ್ದೇ ಪಿರಿ ಪಿರಿ ಮಾತಾಡ್ಯೊಂಡು ನಿಂದರೆ ಅಡಿಗೆ ಸತ್ಯಣ್ಣಂಗೆ ಕಿರಿ ಕಿರಿ ಆಗದ್ದೆ ಇಕ್ಕೋ?!
ಅದಾರೋ ಇಬ್ರು ಬಾವಂದ್ರು ಮನ್ನೆ ಅತ್ರಿಜಾಲ ಉಪ್ನಾನಲ್ಲಿ ಅಡಿಗೆ ಕೊಟ್ಟಗೆ ಬುಡಲ್ಲಿ ನಿಂದು ಮಾತಾಡ್ಯೊಂಡಿತ್ತಿದ್ದವಡ.. ಭಾವ ನಾಳಂಗೆ ಅಲ್ಲಿಗೆ ಹೋಯೆಕು, ಇಲ್ಲಿಗೆ ಹೋಯೆಕು, ಆಚಿಗಂಗೆ ಹೋಯೆಕು, ಈಚಿಗಂಗೆ ಹೋಯೆಕು . ಚ್ಚೆಕ್ಕ್ ಆನೊಬ್ಬನೇ ಇಪ್ಪದು. ಎಂತರೆಲ್ಲ ಮಾಡ್ತದಾನು ! 🙁
ಅಡಿಗೆ ಸತ್ಯಣ್ಣ ರಂಗಣ್ಣನ ಗಟ್ಟಿಗೆ ದೆನಿಗೊಂಡ. ರಂಗಣ್ಣನೂ ‘ಎಂತ ಮಾವ°?’- ಹೇದು ತಿರುಗಿ ನಿಂದು ಕೇಟ°
ಸತ್ಯಣ್ಣ ಹೇದ° – ಇದಾ ರಂಗೋ ನಾಳಂಗೆ ಉದಿಯಪ್ಪಗ ಪೆರ್ಲಕ್ಕೆ ಹೋಯೆಕು, ಅಲ್ಲಿಂದ ಮತ್ತೆ ಬದಿಯಡ್ಕಕ್ಕೆ ಹೋಯೆಕು, ಮತ್ತೆ ಮಧ್ಯಾಹ್ನಪ್ಪಗ ಕಾಸ್ರೋಡಿಂಗೆ ಎತ್ತೆಕು. ಹೋಪದಾರಿಲೆ ಎಡನೀರು ಕಾಣೆಕು. ಮಧ್ಯಾಂತ್ರಿಗೆ ಕುಂಬ್ಳಗೆ ಬಂದಿಕ್ಕಿ ಹೊತ್ತೋಪಗ ಮೀಯಪ್ಪದವಿಂಗೆ ಹೋಯೆಕು.
ರಂಗಣ್ಣ ಕೇಟ° – ಅಲ್ಲೆಲ್ಲ ಹೋಯಿಕ್ಕಿ ಎಂತ ಮಾಡೆಕು ಮಾವ°?!!
ಸತ್ಯಣ್ಣ ಹೇದ° – ತಿರುಗಿ ವಾಪಾಸ್ಸು ಮನಗೆ ಬರೆಕು . ಈಗ ಆ ಕೈಮರಿಗೆ ಇತ್ತೆ ಕೊಂಡ. ಕೊದಿಲು ತೋಡಿ ಮಡುಗುತ್ತೆ. 😀
ರಂಗಣ್ಣ ಈಚಿಗೆ ತಿರುಗಿ ನೋಡಿರೆ ಇಲ್ಲಿ ನಿಂದುಗೊಂಡು ಮಾತಾಡಿಗೊಂಡಿತ್ತಿದ್ದ ಭಾವಂದ್ರು ಇಬ್ರೂ ಕಾಣೆ 😀
~~
5
ಇದರೆಡಕ್ಕಿಲ್ಲಿ ಅಡಿಗೆ ಸತ್ಯಣ್ಣ ಓ ಮನ್ನೆ ಒಂದಿನಕ್ಕೆ ದೊಡ್ಡ ಮಗಳ ಮನೆ ಬೆಂಗಳೂರಿಂಗೆ ಹೋಗಿತ್ತಿದ್ದ°
ಸುಮಾರು ಇರುಳು ಎಂಟುವರೆ ಗಂಟೆ ಅಪ್ಪಗ ಆರೋ ಅಳಿಯನ ಒಬ್ಬ ಪ್ರೆಂಡು ಬಂದು ಒಂದು ಕಾಗದಲ್ಲಿ ಕಟ್ಟಿ ದ ಪೇಕೇಟಿನ ತಂದು ಕೊಟ್ಟಿಕ್ಕಿ, ಎನಗೆ ಅರ್ಗೆಂಟು ಇದ್ದು. ಮತ್ತೆ ಫೋನಿಲ್ಲಿ ಮಾತಾಡ್ತೆ ಹೇದಿಕ್ಕಿ ನಡದ°
ಒಂಬತ್ತು ವರಗೆ ಬಂದ ಅಳಿಯ ಮಿಂದಿಕ್ಕಿ ಎಲ್ಲೋರು ಉಂಬಲೆ ಕೂದೊಂಡಿಪ್ಪಗ ರಾಧೆ ಆ ಕಟ್ಟವು ಬಿಡುಸಿತ್ತು. ನೋಡಿರೆ ಕಾಯಿ ಹೋಳಿಗೆ!
ಅಳಿಯ ಹೇದ° ಹೋ ಅಂವ ಊರಿಂಗೆ ಹೋಗಿತ್ತಿದ್ದ ಅಣ್ಣನ ಮಗಳ ಬಾರ್ಸ ಹೇದು. ಇದು ಬಾರ್ಸದ ಹೋಳಿಗೆ ಆಗಿಕ್ಕಂಬಗ.
ಹೋಳಿಗೆ ಲಾಯಕ ಆಯ್ದು – ಸತ್ಯಣ್ಣನೂ ತಿಂದಿಕ್ಕಿ ಹೇದ°
ಉಂಡಿಕ್ಕಿ ಎದ್ದ ಅಳಿಯ ತಂದುಕೊಟ್ಟವಂಗೂ, ಊರಿಂದ ಕಳ್ಸಿಕೊಟ್ಟ ಅವನ ಅಣ್ಣಂಗೂ ಮೆಸೇಜು ಕಳ್ಸಿದ°- “ಕಾಯಿ ಹೋಳಿಗೆ ತುಂಬ ಲಾಯಕ ಆಯ್ದು. ಕಳ್ಸಿಕೊಟ್ಟದಕ್ಕೆ ಧನ್ಯವಾದ”
ಊರಿಂದ ಮೆಸೇಜು ಬಂತು – “ಬಾರ್ಸಕ್ಕೆ ಮಾಡಿದ್ಸು ಹೋಳಿಗೆ ಅಲ್ಲ ಲಾಡು!!”
ಎಲ ಕತೆಯೇ! ಇದೆಂತ್ಸರ ಹೀಂಗಂಬಗ ಹೇದು ಅದರ್ನೇ ತಂದುಕೊಟ್ಟವಂಗೆ ರವಾನೆ ಮಾಡಿದ ಆ ಮೆಸೇಜಿನ ಅಳಿಯ
ಅವನತ್ರಂದ ಉತ್ತರ ಬಂತು – ಅಪ್ಪು, ಬಾರ್ಸಕ್ಕೆ ಲಾಡು ಮಾಡಿದ್ದದು. ನಿಂಗೊಗೇಳಿ ತಂದ ಲಾಡಿನ ಎನ್ನ ಮಗಳು ಕಚ್ಚಿ ಕಚ್ಚಿ ಹೊಡಿ ಮಾಡಿ ಹಾಕಿದ್ದು. ಅದರ ನಿಂಗೊಗೆ ಕೊಡ್ತದೇಂಗೆ ಹೇದು ಓ ಇಲ್ಲಿಂದ ಕಾಯಿ ಹೋಳಿಗೆ ತೆಗದು ತಂದದು ಆಗ ನಿಂಗಳ ಕಾಂಬಲೆ ಬಂದಿಪ್ಪಗ. ನಿಂಗೊ ಇಲ್ಲದ್ದ ಕಾರಣ ಆನು ಎಂತರ್ನೂ ಹೇಳದ್ದೆ ಅದರ ಮಾತ್ರ ಕೊಟ್ಟಿಕ್ಕಿ ಬಂದೆ. !!
ಸತ್ಯಣ್ಣ ಹೇದ° – ದುಬಾಯಿಂದ ಬಪ್ಪಗ ಚೆರ್ಕಳಂದ ಸೆಂಟು ತಂದು ಕೊಡುವದು ಕೇಟಿದೆ ಆನು. ಲಾಡು ಹೋಳಿಗೆ ಅಪ್ಪದು ಕೇಟದು ಇದುವೇ ಸುರು ಆತ !! 😀
~~
ಸತ್ಯಣ್ಣಂಗೆ ಒರಕ್ಕು ತೂಗಿತ್ತೋ ಏನೋ ಹೊದಕ್ಕೆ ಎಳಕ್ಕೊಂಡು ಆಚೊಡೆಂಗೆ ತಿರುಗಿದ°. ನಾವೂ ಈಚೊಡೆಂಗೆ ಚಾಂಬಿತ್ತಲ್ಲಿಂದ.
*** 😀 😀 😀 ***
{… ಗೂಗುಲಿಲಿ ಸಿಕ್ಕದ್ದು ಹೇದು ಏವುದೂ ಇಲ್ಲೆಡ… }
ಅದಪ್ಪು… ಆದರೆ ದೇವಸ್ಥಾನಲ್ಲಿ ಕಳೆದು ಹೋದ ಮೆಟ್ಟುಗೊ ಗೂಗುಲಿಲಿ ಸಿಕ್ಕುಗೊ???
ಉಮ್ಮಪ್ಪ… ರಮ್ಯನತ್ರೆ ಕೇಳೆಕ್ಕಷ್ಟೆ… ನವಗರಡಿಯ,,, 😉 🙂
ಸತ್ಯಣ್ಣನಿಂದಾಗಿ ಉಪ್ನಾನ ರೈಸಿತ್ತೋ?ಉಪ್ನಾನಂದಾಗಿ ಸತ್ಯಣ್ಣ ರೈಸಿದನೋ?
ನೀ ಮಾಯೆಯೊಳಗೋ?ನಿನ್ನೊಳು ಮಾಯೆಯೋ? ಹರೇ ರಾಮ.
ಉಪ್ನಯನ ಪೆಸ್ಹಲ್ ಲಾಯ್ಕ ಅಯಿದು
ಹರೇ ರಾಮ.
ಭಾವಂದ್ರ ಓಡಿಸಿದ್ದು ಲಾಯ್ಕಾಯಿದು
ಗೂಗುಲಿಲ್ಲಿ ಬೆಶಿನೀರ ಕೊಟ್ಟಗೆ ಎಲ್ಲಿದ್ದು ಹೇಳಿ ಸಿಕ್ಕುಗಾಯ್ಕು, ಈ ಸತ್ಯಣ್ಣನ ಕೈಲಿ ಎಡಿಯ. ಅವನ ಕೊಟಂಕನೆ ಬಪ್ಪ ಉತ್ತರ ಲಾಯಕಿರ್ತು.
ಒ ತೆರಕ್ಕಿಲಿ ಚಾಪೆ ಬಿಡಿಸುಲಪ್ಪಗ ಹೇಳಿದ್ದರ ಕೇಳಿಪ್ಪಗ ,
ಅಲ್ಲೆ ಇದ್ದ ರ೦ಗಣ್ಣ ಮೆಲ್ಲ೦ಗೆ ಕೆಮಿ ಹೂಗು, ಅರಳುವಾ೦ಗೆ ಹೇಳೀದ್ದು ನೆ೦ಪಾತಿದ,
ಈಗ ಎಲ್ಲಾ ಕಡೇ ಚಾ ಪೇ ಚರ್ಚೆ ಆದರೆ,
ನಿ೦ಗಳದ್ದು ಚಾಪೆ ಬಿಡುಸುಲಪ್ಪಗ ಸುರುವಾತ!!!!.
ನಾವು ಕುತ್ತ ಪಿಳಿಪಿಳಿ ನೋಡಿಕೊ೦ಡೆ ಕೂದತ್ತು.
ಉಪನಯನಕ್ಕೆ ಸಥ್ಯಣ್ಣ ಮಾಡುವ ಹೋಳಿಗೆ ಮಾಡುವ ಪಟ ತೆಗೆದ ವೆಂಕಟಣ್ಣಂಗು ಧನ್ಯವಾದಗಳು.ಪಟ ಲಾಇಕ ಆಯಿದು. ಹಾಂಗೆ ಓಂದು ಕಟ್ಟ ಹೋಳಿಗೆ ಎನಗು ಕಳುಸಿ… >ಫ್
ಭಾರಿ ಲೈಕಾ ಆಯಿದು ಅತ. ಉಪನಯನದ ಪೆಶಲ್ ಆದ ಕಾರಣ ಆನು ಅನುಭವಿಸಿಗೊಂಡು ಓದಿದೆ.