ಈ ಪವನಜಮಾವ ಸ್ವಲ್ಪ ಅಪರೂಪದ ಜನ. ಅವು ಹುಟ್ಟಿದ್ದು ಸುಳ್ಯಂದ ೮ ಮೈಲು ದೂರಲ್ಲಿಪ್ಪ ಕಾಸರಗೋಡು ಜಿಲ್ಲೆಗೆ ಸೇರಿದ ಬೆಳ್ಳಿಪ್ಪಾಡಿಲಿ. ಓದಿದ್ದು ಪಂಜಿಕಲ್ಲು, ಸುಳ್ಯ, ಪುತ್ತೂರು, ಮೈಸೂರು. ಈ ಜನ ಮಾಡಿದ್ದು ಕೆಮಿಸ್ಟ್ರಿಲಿ ಎಂಎಸ್ಸಿ. ನಂತರ ಹೋಗಿ ಸೇರಿಕೊಂಡದ್ದು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರಲ್ಲಿ ವಿಜ್ಞಾನ ಆಗಿ. ಅಲ್ಲಿಯೇ ಪಿಎಚ್ಡಿಮಾಡಿ ನಂತ್ರ ತೈವಾನಿಲಿಯೂ ಹೆಚ್ಚಿನ ಸಂಶೋಧನೆ ಮಾಡಿದವು. ಮುಂಬಯಿಲಿ ಇಪ್ಪಗಳೇ ಕನ್ನಡ ಕಂಪ್ಯೂಟರಿಲಿ ಸುಮಾರು ಕೆಲಸ ಮಾಡಿದ ಜನ. ೧೯೯೩ರಲ್ಲಿಯೇ ಕನ್ನಡ ಕಲಿ ಹೇಳೂವ ಒಂದು ಪ್ರೋಗ್ರಾಮ್ ಮಾಡಿತ್ತಿದ್ದವು. ಬಿಎಆರ್ಸಿ ಮುಂಬಯಿಯ ಕನ್ನಡ ಸಂಘದ ಕಾರ್ಯದರ್ಶಿಯಾಗಿ, ಕನ್ನಡ ವಿಜ್ಞಾನ ಪತ್ರಿಕೆ "ಬೆಳಗು"ವಿನ ಸಂಪಾದಕ ಆಗಿ, ಅದರ ಕಂಪ್ಯೂಟರಿಲಿ ಡಿಟಿಪಿ ಮಾಡಿ, ಕನ್ನಡಲ್ಲಿ ವಿಜ್ಞಾನ ವಿಚಾರ ಸಂಕಿರಣ ಎಲ್ಲ ಮಾಡಿದ ಜನ.೧೯೯೬ರ ಕಾಲಲ್ಲಿಯೇ, ಅದೂ ದೂರದ ಮುಂಬಯಿಲಿ ಕೂತುಕೊಂಡು, ಅಂತರಜಾಲಲ್ಲಿ ಕನ್ನಡವ ಇಡೀ ಪ್ರಪಂಚಲ್ಲೇ ಪ್ರಪ್ರಥಮ ಸರ್ತಿ ಸೇರಿಸಿ ವಿಶ್ವಕನ್ನಡ ಹೇಳುವ ಆನ್ಲೈನ್ ಪತ್ರಿಕೆ ಮಾಡಿತ್ತಿದ್ದವು.
೧೯೯೭ರಲ್ಲಿ ಬಿಎಆರ್ಸಿಯ ಬಿಟ್ಟು ಬೆಂಗಳೂರಿಗೆ ಬಂದವು. ಬಂದು ಸೇರಿದ್ದು ಸಾಫ್ಟ್ವೇರ್ ಕ್ಷೇತ್ರಲ್ಲಿ. ಇಲ್ಲಿಯೂ ಸುಮ್ಮನೆ ಇದ್ದ ಜನ ಅಲ್ಲ. ಕರ್ನಾಟಕ ಸರಕಾರಕ್ಕೆ ಕಂಪ್ಯೂಟರ್ ಕನ್ನಡ ಸಲಹಾ ಸಮಿತಿಲಿ ಕೆಲಸ ಮಾಡಿದ್ದವು, ಅದೂ ಎರಡು ಸರ್ತಿ. "ನುಡಿ" ಹೆಸರಿನ ಕನ್ನಡ ಸಾಫ್ಟ್ವೇರ್ ಬಪ್ಪಲೆ ಇವ್ವೇ ಕಾರಣ. ಅದರ ವಿನ್ಯಾಸ, ಸಲಹೆ, ಮಾರ್ಗದರ್ಶನ ಎಲ್ಲ ಇವರದ್ದೇ. ಯುನಿಕೋಡ್ ಕನ್ಸೋರ್ಶಿಯಂಗೆ ಕನ್ನಡದ ಬಗ್ಗೆ ಆಗಾಗ ಇವು ಕೊಟ್ಟ ಸಲಹೆಂದಾಗಿ ಯುನಿಕೋಡ್ಲಿ ಕನ್ನಡ ಸರಿ ಇದ್ದು. ಸುಮಾರು ವರ್ಷ ಇವು ಮೈಕ್ರೋಸಾಫ್ಟ್ ಕಂಪೆನಿಗೆ ಭಾರತೀಯ ಭಾಷೆಗಳ ಹಾಂಗೂ ಕನ್ನಡ ಭಾಷೆಯ ಸಲಹೆಗಾರ ಆಗಿ ಕೆಲಸ ಮಾಡಿದ್ದವು. ಮಕ್ಕೊಗೆ ಕಂಪ್ಯೂಟರಿಲಿ ಕನ್ನಡ ಭಾಷೆಲಿಯೇ ಪ್ರೋಗ್ರಾಮ್ ಮಾಡ್ಲೆ ಎಡಿಗಪ್ಪಂತೆ ಮಾಡುವ ಕನ್ನಡಲೋಗೋ ಹೇಳುವ ಸಾಫ್ಟ್ವೇರ್ ಮಾಡಿ ಅದಕ್ಕೆ ಮಂಥನ ಪ್ರಶಸ್ತಿ ಪಡ್ಕೊಂಡಿದವು. ಇವಕ್ಕೆ ಮೈಕ್ರೋಸಾಫ್ಟ್ ಕಂಪೆನಿ ಮೋಸ್ಟ್ ವಾಲ್ಯೂಏಬಲ್ ಪ್ರೊಫೆಶನಲ್ ಹೇಳುವ ಬಿರುದು ಕೊಟ್ಟಿತ್ತಿದ್ದವು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ, ಅದ್ರಲ್ಲೂ ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಇವು ಸುಮಾರು ಲೇಖನ ಬರದ್ದವು, ಭಾಷಣ ಕೊಟ್ಟಿದವು. ಕನ್ನಡ ಪ್ರಭ ಪತ್ರಿಕೆಲಿ ಈಗ ಪ್ರತಿ ಸೋಮವಾರ ಇವರ ಗಣಕಿಂಡಿ ಹೇಳುವ ಅಂಕಣ ಇದ್ದು ಅದು ನೂರು ಸಂಚಿಕೆ ದಾಟಿದ್ದು. ಬೆಳಗಾವಿಲಿ ಆದ ಎರಡನೆ ವಿಶ್ವ ಕನ್ನಡ ಸಮ್ಮೇಳನಲ್ಲಿ ಇವರ ಭಾಷಣ ಇತ್ತು.
ನಮ್ಮ ಗುರುಗಳ ದೊಡ್ಡ ಭಕ್ತ. ಗುರುಗಳ ಆಶಯಂದಾಗಿ ಸುರುವಾದ IT4Cow, ಅವಲಂಬನ ಸಂಸ್ಥೆಗಳಲ್ಲಿ ಇವು ಕೆಲಸ ಮಾಡ್ತವು. ಗೋವಿಶ್ವ ಹೇಳುವ e-ಪತ್ರಿಕೆ ನೆಡೆಶುತ್ತವು.
ಯುನಿಕೋಡ್ 7.0 ಬೈಯಿಂದು. ವಿವರ ಇಲ್ಲಿದ್ದು – http://www.unicode.org/charts/PDF/U0C80.pdf. ಅದರಲ್ಲಿ ಚಂದ್ರಬಿಂದು ಇದ್ದು. ಅದರ ಸಂಕೇತ – 0C81. ಇದರ ನಾವು ಉಪಯೋಗುಸುಲಕ್ಕು. ಆದರೆ ಅದಕ್ಕೆ ಎರಡು ಕೆಲಸ ಆಯೆಕ್ಕು –
1. ಈ ಅಕ್ಷರ ಇಪ್ಪ ಫಾಂಟ್ ಆಯೆಕ್ಕು
2. ಕೀಬೋರ್ಡಿಲಿ ಇದರ ಸೇರುಸೆಕ್ಕು.
ಇದರಲ್ಲಿ 2ನೆಯ ವಿಷಯದ ಬಗ್ಗೆ ಆನು ಕೆಲಸ ಮಾಡ್ತಾ ಇದ್ದೆ. ಸದ್ಯಲ್ಲೆ ವಿಸ್ತರಿಸಿದ ಕೆ.ಪಿರಾವ್ ಲೇಔಟ್ (ನುಡಿ ಲೇಔಟ್) ಬತ್ತು. ಅದರ ಸರಕಾರಂದ ನೋಟಿಫೈ ಮಾಡ್ಸುತ್ತೆ.
@ಬೊಳುಂಬು ಬಾವ – ನಿಂಗೊ ಬರದ್ದಕ್ಕೂ ವಿಕಿಪೀಡಿಯಕ್ಕೂ ಯಾವ ಸಂಬಂಧವೂ ಇಲ್ಲೆ. ಯುನಿಕೋಡ್ ಒಂದು character encoding scheme ಅಷ್ಟೆ. ಅದರ ಯಾವ ಫಾಂಟಿಲಿ ಯಾವ ರೀತಿ ತೋರ್ಸೆಕ್ಕೂಳಿ ಹೇಳೊದು ನವಗೆ ಬಿಟ್ಟದ್ದು. ನಮ್ಮ ಕಂಪ್ಯೂಟರಿಲಿ ನಮಗೆ ಬೇಕಾದ ಫಾಂಟ್ ಮಡಿಕ್ಕೊಂಡು ಅದರಲ್ಲಿ ನಿಂಗೊ ಹೇಳಿದ ನಕರಪಿಲ್ಲು (ಅಪ್ಪು, ಅದಕ್ಕೆ ನಕರಪಿಲ್ಲು ಹೇಳ್ತವು) ಹಾಕಿಕೊಂಡು ವಿಕಿಪೀಡಿಯದ ಸೆಟ್ಟಿಂಗಿಲಿ ಈ ಫಾಂಟ್ನ default font ಮಾಡಿಕೊಂಡರೆ ಆತು.
“ವಿಕಿಪೀಡಿಯದ ಇನ್ನಾಣ ಆವೃತ್ತಿಲಿ” ಅಲ್ಲ, “ಯುನಿಕೋಡಿನ ಇನ್ನಾಣ ಆವೃತ್ತಿಲಿ.”
ವಿಕಿಪೀಡಿಯದ ಇನ್ನಾಣ ಆವೃತ್ತಿಲಿ ನವಗೆ “ಹಳೆಯ ನ್” ಬೇಕು.
https://upload.wikimedia.org/wikipedia/commons/4/4c/Kannada-archaic-n.jpg