Oppanna.com

ಸಮಸ್ಯೆ 76 : ಮೋಡ ಕರಗಿ ಭೂಮಿಗಿಳಿವ ಚೆ೦ದ ಕ೦ಡಿರೋ

ಬರದೋರು :   ಸಂಪಾದಕ°    on   26/07/2014    20 ಒಪ್ಪಂಗೊ

ಈ ವಾರ ಭೋಗ ಷಟ್ಪದಿಲಿ ಸಮಸ್ಯೆ :

ಮೋಡ ಕರಗಿ ಭೂಮಿಗಿಳಿವ ಚೆ೦ದ ಕ೦ಡಿರೋ

ಆಟಿ ತಿ೦ಗಳ ಮಳೆ ಬೈಲಿಲಿ ಧಾರೆಧಾರೆಯಾಗಿ ಹರಿವಗ ಕಲ್ಪನೆಗಳೂ ಹರಿಯಲಿ ಅಲ್ಲದೋ?

20 thoughts on “ಸಮಸ್ಯೆ 76 : ಮೋಡ ಕರಗಿ ಭೂಮಿಗಿಳಿವ ಚೆ೦ದ ಕ೦ಡಿರೋ

  1. ಆನು ಬಪ್ಪಗ ಎಲ್ಲೋರ ಕವನಂಗಳ ಮಳೆಯೇ ಹರುದ್ದನ್ನೇ… 🙂 ಪಷ್ಟಾಯಿದು..

    ಓಡಿ ಬಚ್ಚಿ ಬೆಶಿಲ ಗಾವು
    ತೋಡಿ ಕುಡಿಯೆ ನೀರಿನೊಸರು
    ಕೂಡಲಾವಿ ಬಾನ ಕೊಡಿಲಿ ಮನುಗಿಯೊರಗಿರೆ
    ತಾಡಿ ಬಂದ ತಂಪು ಗಾಳಿ
    ಮಾಡ ಮೇಲೆ ದೂಡಿ ಬಿದ್ದ
    ಮೋಡ ಕರಗಿ ಭೂಮಿಗಿಳುದ ಚೆಂದ ಕಂಡಿರೋ ||

    1. ಅನಿತಕ್ಕನ ‘ ಪದ್ಯ ‘ಕ್ಕುದೆ ಸ್ವಾಗತ

      1. ಅಪ್ಪು.ಬಾಲ ಭಾಷೆಲಿಯೂ ಅಕ್ಕು.

  2. ಆ ಹಾ… ತಲೆ ಬೋಡಾತೋ!ಕಾಲು ನೀಡಿ ಕೂಬ್ಬಾಂಗಾತೋ !

    ಆದರುದೆ ಪ್ರಕೃತಿಯ ಆಸ್ವಾದನೆ ಇದ್ದನ್ನೇ .ಲಾಯಕ್ಕಾಯಿದು ರಘುವಣ್ಣ.

  3. ಬೋಡು ತಲೆಯ ಉದ್ದಿ ಕಾಲ
    ನೀಡಿ ಕೂದುಗೊಂಡು ಮೇಲೆ
    ನೋಡಿ ಬಾಕಿಯಾದೆ ಭಾವ ಬಾನ ರಂಗವಾ |
    ಜೋಡುಗುಡ್ಡೆ ಕೊಡಿಯ ದಾ೦ಟಿ
    ಓಡಿಗೊ೦ಡು ಬಂದ ಕಪ್ಪು
    ಮೋಡ ಕರಗಿ ಭೂಮಿಗಿಳುದ ಚೆಂದ ಕಂಡಿರೋ ||

  4. ಮೂಡೊ ಸೂರ್ಯ ಕಂತುವಾಗ
    ಬೀಡುಬಿಟ್ಟ ಮೇಘರಾಶಿ
    ತಾಡಿಗೊಂಡವೊಂದನೊಂದು ಬಗೆಯ ಕಾಣಿರೋ |
    ತೀಡಿ ಬಂದ ಬೀಸೊ ಗಾಳಿ
    ದೂಡುವಾಗ ಮಿಂಚು ಗುಡುಗು
    ಮೋಡ ಕರಗಿ ಭೂಮಿಗಿಳುದ ಚೆಂದ ಕಂಡಿರೋ ||

  5. ಓಡಿ ಹರಿವ ನೀರು ಕೂಡಿ
    ಗಾಢ ಬೆಶಿಲಿನೊಳವೆ ಸೇರಿ
    ಮೋಡ ಕರಗಿ ಭೂಮಿಗಿಳಿವ ಚೆಂದ ಕಂಡಿರೋ?
    ನಾಡಿನಾಚೆ ವಾಸ ಮಾಡೊ
    ಕಾಡಿ ಬೇಡಿ ನೀರ ಕೇಳೊ
    ಬೀಡು ಬಿಟ್ಟ ಜನತೆ ಬರಗು ನೆಗೆ ಚಟಾಕಿಯ II

    ಕರ್ನಾಟಕದ ಕೊಡಗಿಲಿ ಮಳೆ ಬಂದರೆ ತಮಿಳುನಾಡಿನವಕ್ಕೆ ಮೋರೆ ತುಂಬಾ ನೆಗೆ ಬಂದು ಅದು ಬೈಲಿಲಿ ಪ್ರತಿಫಲಿಸುಗು 🙂

  6. ಗೋಡೆಗೆರಗಿ ಕೂದು ನೋಡಿ
    ಮಾಡ ನೀರು ಧಾರೆಯಾಗಿ
    ಮೋಡ ಕರಗಿ ಭೂಮಿಗಿಳಿವ ಚೆಂದ ಕ೦ಡಿರೋ ?
    ತೋಡ ಕರೆಲಿ ದೊಡ್ದ ಗೆದ್ದೆ
    ಹೂಡಿ ಮತ್ತೆ ಭತ್ತ ಬಿತ್ತಿ
    ಮೂಡಿ ಬಪ್ಪ ನೇಜಿ ನೋಡಿ ಮನವ ತುಂಬಿರೊ II

  7. ನವ್ಯ ನೀತಿ
    ವಾಡಿಕೆಂದ ಬೇರೆ ರೀತಿ
    ಮೂಡಿ ಬಂದ ನವ್ಯ ನೀತಿ
    ಮೋಡ ಕರಗಿ ಭೂಮಿಗಿಳಿವ ಚೆಂದ ಕಂಡಿರೋ
    ಕೋಡಿ ಹರುದು ಬೆಳ್ಳ ಬಂತು
    ನಾಡವಕ್ಕೆ ಹರುಷ ತಂತು
    ಕಾಡು ಭೂಮಿ ಅರಳಿ ನಿಂದ ಪರಿಯ ನೋಡಿರೋ
    (ವಾಡಿಕೆ=ಸಂಪ್ರದಾಯ,ಕೋಡಿ ಹರುದು=ನೀರು ತುಂಬಿ ಹೆರ ಹರುದು,ತಂತು=ತಂದತ್ತು,ನಾಡವಕ್ಕೆ=ನಾಡಿನ ಜೆನಂಗೊಕ್ಕೆ)

    1. ಬದಲಾದ ಆಡಳಿತ ವೆವಸ್ತೆಯ ವರ್ಣನೆ ಮಾಡಿದ್ದೋ ಮಾವಾ ?

      1. ಧಾರಾಳ ಮಳೆ ಬರೆಕಾದ ಕಾಲಲ್ಲಿ ಮಳೆ ಬಾರದ್ದೆ ಬೇರೆ ಸಮಯಲ್ಲಿ ಬತ್ತಾ ಇದ್ದಲ್ಲದೋ?ವರುಣನ ದೇಶಲ್ಲಿಯೂ ಆಡಳಿತ ವೆವಸ್ತೆ ಬದಲಾಯಿದೋ ಏನೋ?

  8. ಗಾಢ ಕಪ್ಪು ಬಣ್ಣವಾಗಿ
    ಬೀಡುಬಿಟ್ಟ ಮುಗಿಲ ಗುಂಪ
    ತೀಡಿತನ್ನೆ ಬೀಸೊ ಗಾಳಿ ಭಾರಿ ಜೋರಿಲಿ |
    ನೋಡುವವರ ಮನಸ ಗೆದ್ದ
    ದೂಡೊ ಸೆಡಿಲು ಮಿಂಚು ಬೆಣಚು
    ಮೋಡ ಕರಗಿ ಭೂಮಿಗಿಳಿವ ಚೆಂದ ಕಂಡಿರೋ ||

    1. ಆಕಾಶಲ್ಲಿ ನಡೆತ್ತ ರೂಪಕದ ವೀಕ್ಷಕ ವಿವರಣೆಯ ಹಾಂಗಿದ್ದು ಅತ್ತೆ . ಲಾಯ್ಕ ಆಯಿದು .

  9. ನೋಡಿ ಬಾನ ಮೇಗೆ ತೇಲಿ
    ಓಡೊ ಕಪ್ಪು ಮುಗಿಲ ಚೆಂದ
    ‘ಬಾಡಿ ಹೋದ ಮೋರೆ’ ಗೆಲವು ಕಂಡು ಕೊಶಿಲಿಯೇ /
    ಮೋಡಿ ಮಾಡೊ ಕಪ್ಪು ಜಿಡೆಯ
    -ಜೋಡಿ ಬಿಡುಸಿ ಮೀವ ಹಾಂಗೆ
    ಮೋಡ ಕರಗಿ ಭೂಮಿಗಿಳಿವ ಚೆಂದ ನೋಡಿರೋ /

    1. ಆಹಾ .. ಉಪಮೆ ರೈಸಿದ್ದು ಬಾಲಣ್ಣ ಮಾವ .

  10. ಬಾಡಿ ಹೋದ ಸೆಸಿಗಳದ್ದೆ
    ಕಾಡು ಬೆಳೆಶಿ ಹಸುರು ಮಾಡ್ಲೆ
    ಮೋಡ ಕರಗಿ ಭೂಮಿಗಿಳುದ ಚೆಂದ ಕ೦ಡಿರೊ I
    ತೋಡು ತುಂಬ ನೀರು ಹರುದು
    ಜೋಡಿ ದೊಡ್ಡದಾಗಿ ಕೊಡಗ-
    ರಾಡಿ ಹೊಗಳೊ ನಾಡಗಂಗೆ ತುಂಬಿ ಚೆಂದವೆ !! II

    ನಾಡ ಗಂಗೆ =ಕಾವೇರಿ , ಕೊಡಗರು ಆಡಿ ಹೊಗಳುವ =ಕೊಡಗರಾಡಿ ಹೊಗಳೊ .
    ಮೋಡ ಕರಗಿ ಹೇಳುವಲ್ಲಿ ಮೋಡಕ್ಕೆ ಸೆಸಿಗೊ ಬಾಡಿದ್ದು ಕಂಡು ಬೇಜಾರಾಗಿ ಹೇಳಿಯೂ ಅರ್ಥ ಬಪ್ಪ ಹಾಂಗೆ …

    1. ಕೊಡಗರಾಡಿ ಹೊಗಳೊ ನಾಡಗಂಗೆ – ಒಳ್ಳೆ ಪೂರಣ ಭಾಗ್ಯಕ್ಕ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×