Oppanna.com

ಆಹಾರ-ವಿಹಾರದ ಪ್ರತಿಫಲನ ಆಚಾರ ವಿಚಾರಲ್ಲಿ ಇರ್ತು..!

ಬರದೋರು :   ಒಪ್ಪಣ್ಣ    on   25/07/2014    7 ಒಪ್ಪಂಗೊ

ವಾರಂದ ವಾರಕ್ಕೆ ಜಗತ್ತು ಎಷ್ಟು ಬದಲುತ್ತಪ್ಪೋ – ಹೇದು ಒಂದೊಂದರಿ ಆಶ್ಚರ್ಯ ಅಪ್ಪದಿದ್ದು.
ಆಚ ವಾರ ಸಾರಡಿತೋಡಿಲಿ ತೆಳು ಹರಿಪ್ಪು ಇದ್ದತ್ತೋ –
ಕಳುದವಾರ ರೌದ್ರಾವತಾರದ ಬೆಳ್ಳನೀರು –
ಈ ವಾರ ಅಂಬೆರ್ಪು ಪೂರ ತಣುದ ಗಾಂಭೀರ್ಯ!
ಜೀವನವೂ ಹಾಂಗೇ, ಒಂದೊಂದರಿ ಒಂದೊಂದು ನಮುನೆ. ಹಿಂದೆ ತಿರುಗಿ ನೋಡಿರೆ – ಅಪ್ಪೋ, ಹೀಂಗೂ ಇದ್ದೋ – ಹೇದು ಅನುಸುತ್ತ ಹಾಂಗೆ.

~
ದಿನಕ್ಕೊಂದರ ಹಾಂಗೆ ಪುಸ್ತಕ ಬಿಡುಗಡೆ ಇದ್ದು ಹೇಳಿಯೂ, ಅದರೊಟ್ಟಿಂಗೇ ರಾಮಕಥೆಯ ಭೂರಿಭೋಜನ ಇದ್ದು ಹೇಳಿಯೂ ನವಗೆ ಗೊಂತಾಯಿದು ಕಳುದವಾರ. ಈ ಚಾತುರ್ಮಾಸ್ಯ ಕಳುದ ಬೆನ್ನಾರೇ ಏಕಾಂತಕ್ಕೆ ಹೋವುತ್ತವು ಹೇಳಿಯೂ ನವಗೆ ಗೊಂತಾಯಿದು; ತಲೆಂಗಳ ಮಾವ° ಹೇಳಿದ್ಸು.
ಕೊಶಿಯ ಸಂಗತಿಯೂ, ಬೇಜಾರವೂ ಒಟ್ಟೊಟ್ಟಿಂಗೇ ಬಂದದು ಕುಕ್ಕಿಲ ಮಾವಂಗೆ ಆಶ್ಚರ್ಯವೇ ಆಗಿತ್ತು.
ಅದೇ ಆಶ್ಚರ್ಯ ಒಪ್ಪಣ್ಣಂಗೂ ಆಗಿದ್ದತ್ತು!
ಮೊನ್ನೆ ಎಡಪ್ಪಾಡಿ ಭಾವನತ್ರೆ ಮಾತಾಡುವಗ ಗೊಂತಾತು – ನವಗೆ ಮಾಂತ್ರ ಅಲ್ಲ, ಎಲ್ಲೋರಿಂಗೂ ಇದೇ ನಮುನೆ ಆಶ್ಚರ್ಯ ಇದ್ದು ಹೇದು. ಅಪ್ಪು, ಬೈಲಿನ ಎಲ್ಲೋರಿಂಗೂ ಆಯಿದು.
ಎಡಪ್ಪಾಡಿ ಬಾವನತ್ರೆ ಮಾತಾಡುವಗ ಎಂತೆಲ್ಲ ಶುದ್ದಿ ಬಂತಂಬಗ? ನೋಡುವೊ°.

~

ಮೊನ್ನೆ ಹತ್ತನ್ನೆರಡು ಜೆನ ದೊಡ್ಡಮಾಣಿ ಗುಡ್ಡೆಯ ಬಲ್ಲೆಕಡಿವಲೆ ಬಯಿಂದವಲ್ಲದೋ; ಬಲ್ಲೆ ಕೆರಸುತ್ತ ಮಿಶನು ಹಿಡ್ಕೊಂಡು –ಆ ಮಿಶನುಗಳ ಕೂರ್ಬಾಯಿ ಹರಟೆಗೆ ಒಪ್ಪಣ್ಣನ ಕೆಮಿ ಹೂಗು ಅರಳಿದ್ದತ್ತು!
ಹಾಂಗೆ ಅಲ್ಲೇ ತುಂಬ ಹೊತ್ತು ಕೂದರೆ ಮತ್ತೆ ಬ್ಯಾರಿ ಬಾಂಕುದೇ ಕೇಳ- ಹೇದು ಮೆಲ್ಲಂಗೆ ಅಲ್ಲಿಂದ ಹೆರಟು ಹಳ್ಳ ದಾಂಟಿ, ತೋಟ ಪಗರಿದೆ; ಎಡಪ್ಪಾಡಿ ಎತ್ತಿತ್ತು.
ಎಡಪ್ಪಾಡಿ ಬಾವ° ಮನೆಲೇ ಇದ್ದ ಕಾರಣ ನವಗೆ ಮಾತಾಡ್ಳೂ ಅನುಕ್ಕೂಲ ಆತು; ಕೊತ್ತಂಬರಿ ಕಶಾಯಕ್ಕೂ ಅವಕಾಶ ಆತು.
~

“ಎಂತ ಎಡಪ್ಪಾಡಿ ಭಾವ° ಇದು, ಗುರುಗೊ ಏಕಾಂತ ಹೋವುತ್ತವಡ, ಎಷ್ಟು ದಿನ?” ಕೇಟೆ.
ಆ ಶುದ್ದಿ ಹೊಸತ್ತು ಕೇಳುವಾಗ ಎಡಪ್ಪಾಡಿ ಬಾವಂಗೆ ಆಶ್ಚರ್ಯ ಆಗಿದರೂ, ಈಗ ಅದು ಜೀರ್ಣ ಆಯಿದು. ಹಾಂಗಾಗಿ, ಅದರ ಬಗ್ಗೆ ರಜ್ಜ ಧೈರ್ಯಲ್ಲಿ ಮಾತಾಡ್ಳೆ ಎಡಿಗಾಯಿದು. “ಎಷ್ಟು ದಿನ – ಹೇದು ನಿಘಂಟು ಮಾಡ್ಳೆ ಅದೆಂತ ಪರೀಕ್ಷೆ ಬರೆತ್ತ ಕೋಲೋಜಿನ ಕ್ಲಾಸು ಅಲ್ಲ, ಅದು ಆಂತರ್ಯಕ್ಕೆ ಇಪ್ಪದಲ್ಲದೋ ಒಪ್ಪಣ್ಣ” ಹೇದು ಮಾತು ಸುರು ಮಾಡಿದ° ಎಡಪ್ಪಾಡಿ ಬಾವ°.
ಲೋಕಾಂತಂದ ಏಕಾಂತಕ್ಕೆ ಹೋಪದು, ಏಕಾಂತಂದ ಲೋಕಾಂತಕ್ಕೆ ಹೋಪದು – ನಾವು ಶ್ರೀಕಾಂತನಲ್ಲಿಗೆ ಹೋಪನ್ನಾರವೂ ಈ ಕಾರ್ಯ ಮಾಡ್ತಾ ಇರ್ತು – ಹೇದ°.

ಲೋಕಾಂತ ಹೇದರೆ ಎಂತ್ಸು?
ಸಂಘಜೀವಿಯಾದ ಮನುಷ್ಯಂಗೆ ತನ್ನ ಭಾವನೆಗಳ ಹಂಚಿಗೊಂಡು, ಇನ್ನೊಬ್ಬನ ಭಾವನೆಗೊಕ್ಕೆ ಕೆಮಿಯಾಗಿ, ಹೆಗಲಾಗಿ ಇಪ್ಪ ಅವಕಾಶ.
ಲೋಕಲ್ಲಿ ಸಂಬಂಧಿಕರ, ಗುರ್ತದೋರ, ಪ್ರೀತಿಪಾತ್ರರ, ಶಿಷ್ಯಂದ್ರ – ಒಟ್ಟಿಂಗೆ ಸಾಂಗತ್ಯಲ್ಲಿ ಇಪ್ಪ ಸಂದರ್ಭ. ಅಲ್ಲದೋ?

ಏಕಾಂತ ಹೇದರೆಂತ್ಸು?
ತನ್ನ ಆಂತರ್ಯಲ್ಲಿಪ್ಪ ಅದ್ವೈತತೆಯ ಕಂಡುಗೊಂಡು, ತಾನೇ ತಾನಾಗಿ, ಒಬ್ಬನೊಳವೇ ಒಬ್ಬ ಆಗಿಂಡು, ಸರ್ವಸ್ವವನ್ನೂ ಒಂದೇ ಸಂಯುಕ್ತವಾಗಿ ಅನುಭವಿಸಿಗೊಂಡು, ಎಲ್ಲಾ ಭಾವನೆ, ಬೇಜಾರ, ಕುಷಿ, ಸಂತೋಷ, ಅಧ್ಯಯನ – ಎಲ್ಲವನ್ನೂ ಒಬ್ಬನೇ ಸ್ವಪಾಕ ಮಾಡಿಗೊಂಡು, ತನ್ನ ಒಳ ಇಪ್ಪ ದೇವನ ಸಾಂಗತ್ಯಲ್ಲಿ ಇಪ್ಪ ಸಂದರ್ಭ.
ಒಂದರ್ಥಲ್ಲಿ ನೋಡ್ತರೆ ಲೋಕಾಂತದ ಸಮಾ ವಿರುದ್ಧದ ಸನ್ನಿವೇಶ.

ಈ ಏಕಾಂತವೂ ಲೋಕಾಂತವೂ ಚಕ್ರದ ಎರಡು ಹೊಡೆಲಿಪ್ಪ ವಿಷಯಂಗೊ.
ಇದು ಗುರುಗೊಕ್ಕೆ ಮಾಂತ್ರ ಅನ್ವಯ ಅಲ್ಲ, ಮನುಷ್ಯ ಆದ ಎಲ್ಲೋರಿಂಗೂ ಅನ್ವಯ ಅಪ್ಪದು. ಮನುಷ್ಯಂಗೆ ಏಕಾಂತದ ಒಲವು ಒಂದರಿ ಬಂದರೆ, ಮತ್ತೊಂದರಿ ಲೋಕಾಂತದ ಒಲವು ಬತ್ತು. ಯೇವದೂ ಶಾಶ್ವತ ಅಲ್ಲ- ಹೇಯಿದ°.

ಒಂದರಿ “ಆರೂ ಬೇಡ, ತನ್ನಷ್ಟಕ್ಕೇ ತಾನಿರ್ತೆ” ಹೇದು ಕಾಂಬದು, ರಜ್ಜ ಸಮೆಯಲ್ಲಿ ತನ್ನ ಪ್ರೀತಿಮಾಡುವವಕ್ಕಾಗಿಯಾದರೂ ಅವರೊಟ್ಟಿಂಗೆ ಇಪ್ಪೊ° – ಹೇದು ಕಾಂಬದು; ಮತ್ತೊಂದರಿ ಒಬ್ಬನೇ ದೂರ ಕೂದುಗೊಂಡು ರಾಮಾಯಣವೋ, ಭಾಗವತೋ ಎಂತಾರು ಓದುವೊ° ಕಾಂಬದು; ಮತ್ತೊಂದರಿ ತನಗೆ ಗೊಂತಿಪ್ಪದರ ಶಿಷ್ಯಂದ್ರಿಂಗೆ ಹೇಳಿ ಉದ್ಧಾರ ಮಾಡುವೊ°  – ಹೇದು ಕಾಂಬದು. ಇದೆಲ್ಲವೂ ಸಹಜವೇ – ಹೇಳ್ತದು ಎಡಪ್ಪಾಡಿಭಾವನ ಅಭಿಪ್ರಾಯ.

ಗುರುಗೊಕ್ಕೆ ಹಾಂಗೆ ಕಂಡದರ್ಲಿಯೂ ಆಶ್ಚರ್ಯ, ಬೇಜಾರ ಮಾಡೇಕಾದ್ಸು ಏನಿಲ್ಲೆ.
ಸ್ವಾಧ್ಯಾಯ, ಸಚ್ಚಿಂತನ, ಸದ್ವಿನಿಯೋಗಕ್ಕಾಗಿ ಶ್ರೀರಾಮನ ಅನುಗ್ರಹಕ್ಕಾಗಿ ಏಕಾಂತಕ್ಕೆ ಮೊರೆಹೋವುತ್ತವು ನಮ್ಮ ಗುರುಗಳು. ಅವರ ನೆಮ್ಮದಿಲಿ ಕಳುಸಿಕೊಡೇಕಾದ್ಸು ಶಿಷ್ಯವೃಂದದ ಕರ್ತವ್ಯ – ಹೇಳ್ತದು ಶಿಷ್ಯವರ್ಗದ ಬಹುದೊಡ್ಡ ಹೊಣೆ – ಹೇಳ್ತದು ಎಡಪ್ಪಾಡಿಬಾವನ ಅಭಿಪ್ರಾಯ.
ಅದಿರಳಿ.

~

ಆಹಾರ – ವಿಹಾರ:

ಜೀವಿ ಬದ್ಕಲೆ ಆಹಾರ ಬೇಕೇಬೇಕು. ಜಠರಾಗ್ನಿಯ ತಣಿಶಲೆ ಆಹಾರ ಕೊಡ್ಳೇ ಬೇಕು. ಅದಿಲ್ಲದ್ದೆ ಆಗ.
ಆಹಾರ ಮಾಂತ್ರ ತೆಕ್ಕೊಂಡಿದ್ದರೆ ಸಾಕೋ? ಸಾಲ. ದೇಹಕ್ಕೆ ರಜ ವ್ಯಾಯಾಮ ಕೊಡೆಕ್ಕು. ರಜ ಓಡಾಟ, ವಿಹಾರ, ಸಂಪರ್ಕ, ನಾಕು ಜೆನರ ಹತ್ತರೆ ಮಾತುಕತೆ – ಎಲ್ಲವೂ ಬೇಕು. ಇದರ ಪ್ರಾಮುಖ್ಯತೆ ಎಂತರ ಹಾಂಗಾರೆ?
ನಮ್ಮ ವಿಹಾರಲ್ಲಿ ಬೇರೆ ಜೆನಂಗೊ ಸಿಕ್ಕಿ, ಅವರ ಕಷ್ಟಸುಖ ಅರ್ತುಗೊಂಬಲೆ ಅವಕಾಶ ಆವುತ್ತು. ಅವರ ಭಾವನೆಗಳ ಪ್ರಭೆ ನಮ್ಮ ಮನಸ್ಸಿಂಗೆ ಆವುತ್ತು. ಹಾಂಗೇ ನಾವು ಉಂಬ ಊಟವೂ ನಮ್ಮ ಮನಸ್ಸಿನ ಮೇಗೆ ಪರಿಣಾಮ ಆವುತ್ತು – ಹೇಳ್ತದು ವೈಜ್ಞಾನಿಕ ಸತ್ಯ. ಮಾಂಸವನ್ನೇ ತಿಂದ ಸಂಕುವಿನ ಮಗ ಕೈಕ್ಕಾಲು ಎಲ್ಲ ಗಟ್ಟಿಗಟ್ಟಿ ತುಂಬಿಗೊಂಡು ಇದ್ದು. ಮಾಂಸಂ ಮಾಂಸೇನ ವರ್ಧತೇ – ಹೇದು ಗಣೇಶಮಾವನ ಶ್ಲೋಕ ಇದ್ದಲ್ಲದೋ – ಹಾಂಗೆ. ಅಂಬಗ ಹುಳಿಮಜ್ಜಿಗೆ ಉಂಡ ಒಪ್ಪಣ್ಣ ಹುಳಿಹುಳಿ ಮಾತಾಡ್ತನೋ ಹೇದು ಟೀಕೆಮಾವ° ಟೀಕೆ ಮಾಡುಗು. ಅದು ಸಾರ ಇಲ್ಲೆ.
ಆದರೆ, ಆಹಾರದ ಮೇಗೆ ನಮ್ಮ ವೆಗ್ತಿತ್ವ ಹೊಂದಿಗೊಂಡು ಇಪ್ಪದು ಅಪ್ಪಾದ ಸಂಗತಿಯೇ.

ಆಚಾರ – ವಿಚಾರ:
ಲೋಕಾಂತ- ಏಕಾಂತ ಮನಸ್ಸಿಂಗೆ ಸಮ್ಮಂದ ಪಟ್ಟದಾದರೆ,
ಆಹಾರ- ವಿಹಾರ ದೇಹಕ್ಕೆ ಸಮ್ಮಂದ ಪಟ್ಟದಾದರೆ,
ಆಚಾರ – ವಿಚಾರ?  – ಅದು ನಮ್ಮ ಸಂಸ್ಕಾರಕ್ಕೆ ಸಮ್ಮಂದ ಪಟ್ಟದು.

ಸಂಸ್ಕಾರ ನೆತ್ತರಿಲಿ ಬಪ್ಪದು ನಿಜ. ಆದರೆ ನೆತ್ತರಿಲಿ ಬಂದದರ ಮೈಗೂಡುಸಿಗೊಂಬಲೆ ಬೇಕಪ್ಪದು ಆಚಾರ-ವಿಚಾರ.
ನಮ್ಮ ಆಚಾರ ವಿಚಾರಂಗೊ, ನಾವು ಸೇವಿಸುವ ಆಹಾರಕ್ಕೆ ನೇರ ಸಮ್ಮಂದ ಇದ್ದಾಡ.
ಅದಕ್ಕೇ ಅಲ್ಲದೋ – ಜೆಂಬ್ರದ್ದಿನ ಗೌಜಿ ಆಹಾರ ಮಾಡುಸ್ಸು, ಶ್ರದ್ಧೆಯ ದಿನ ಉಪವಾಸ ಕೂರುಸ್ಸು – ಇತ್ಯಾದಿ.
ವೆಗ್ತಿಯೊಬ್ಬ ತನ್ನ ಇಷ್ಟದ ಆಹಾರ-ವಿಹಾರ ಹೊಂದಿರೆ, ಅದರ ಪ್ರತಿಫಲನ ಅವನ ಆಚಾರ-ವಿಚಾರಲ್ಲಿಯೂ, ತನ್ಮೂಲಕ ಆ ಆಚಾರ-ವಿಚಾರದ ಪ್ರತಿಫಲನ ಅವನ ಆಸಕ್ತಿಗಳಲ್ಲಿಯೂ ಕಾಣ್ತು – ಹೇಳ್ತದು ಎಡಪ್ಪಾಡಿ ಬಾವನ ಅಭಿಪ್ರಾಯ.

ಚಾತುರ್ಮಾಸ್ಯಲ್ಲಿಯೂ ನೋಡಿ – ಆಹಾರ ನಿಯಂತ್ರಣದ ಹಲವು ವ್ರತಂಗೊ ಇದ್ದಾಡ.
ಕ್ಷೀರವ್ರತ, ದಧಿವ್ರತ, ಶಾಕವ್ರತ – ಇತ್ಯಾದಿ – ಒಂದೊಂದು ವಾರ ಒಂದೊಂದು ನಮುನೆ ಆಹಾರವ ತ್ಯಜಿಸಿ / ಸೇವಿಸಿ – ವ್ಯತ್ಯಾಸ ಮಾಡ್ತದು. ಹಲವೂ ಕಟ್ಟುನಿಟ್ಟುಗಳ, ಪಥ್ಯಂಗಳ ಹಾಕಿಂಬದು.
ಅದರೊಟ್ಟಿಂಗೇ, ಹೆರಾಣ ವಿಹಾರವ ಸಂಪೂರ್ಣ ನಿಲ್ಲುಸಿ, ಏಕಸ್ಥಳಲ್ಲೇ ಇದ್ದುಗೊಂಡು ಅಧ್ಯಯನ ಮಾಡ್ತದು ಆ ಕಾಲದ ಪರಮಪುಣ್ಯ ಕಾಲಕ್ಷೇಪ.

ಆಹಾರ-ವಿಹಾರ ಬದಲಿತ್ತೋ, ಅದೇ ನಮುನೆಲಿ ಆಚಾರ-ವಿಚಾರವೂ ವೇಗ ತೆಕ್ಕೊಳ್ತು.
ನಮ್ಮ ಚಿಂತನೆಗೊ, ನಮ್ಮ ಚಿಂತನಾರೂಪಂಗೊ – ಎಲ್ಲವುದೇ ಪರಿವರ್ತನೆ ಆಗಿರ್ತು.

~

ಬೆಂಗುಳೂರಿನ ಪೆರ್ಲದಣ್ಣ ಸಿಕ್ಕಿತ್ತಿದ್ದ ಇದಾ, ಓ ಮೊನ್ನೆ ಶೆನಿವಾರ.
ಬೆಂಗುಳೂರಿನ ಕೆಲವು ಇತ್ತೀಚಿಗಾಣ ಘಟನೆಗಳ ಹೇಳಿದ°.
ಒಂದು ಶಾಲೆಯ ಮಾಷ್ಟ್ರ° ಆಗಿದ್ದ° ಜೆನರ ಹೀನ ಆಚಾರ.
ಆರೇ ಒರಿಶದ ಪುಟ್ಟು ಕೂಸಿನ ಮೇಗೆ ಅತ್ಯಾಚಾರ ಮಾಡಿದ ಹ್ಯೇಯ ಶುದ್ದಿ!
ಇನ್ನೊಂದು ದಿಕ್ಕೆ – ಕ್ರಿಸ್ತಿಯಾನಿ ಕೂಸಿನ ಮೇಗೆ ಅತ್ಯಾಚಾರ ಮಾಡಿ “ಪೈಶೆ ಕೊಡು” ಹೇದು ಬರದಿಕ್ಕಿ ಹೋದ ಶುದ್ದಿ.
ಮತ್ತೊಂದು ದಿಕ್ಕಿ ಇರುಳು ಹೋಟ್ಳಿಂದ ಉಂಡಿಕ್ಕಿ ಹೋಪಗ ಕಾರಿನ ಅಡ್ಡತಡದು ಆರೋ ನಾಲ್ಕು ರೌಡಿಗೊ ಮಾಡಿದ ಅತ್ಯಾಚಾರದ ಶುದ್ದಿ.
ಟೀವಿಯೋರಂತೂ ಈ ಮೂರು ಶುದ್ದಿಗೊ ಮಾಂತ್ರ ಕರ್ನಾಟಕಲ್ಲಿ ಆದ್ಸು ಹೇದು ತೋರ್ಸುತ್ತಾ ಇತ್ತಿದ್ದವೂ – ಎಲ್ಲಿ ನೋಡಿರೂ ಇದರದ್ದೇ ಶುದ್ದಿಗೊ. ಅಂತಾರ್ರಾಷ್ಟ್ರೀಯ ಮಟ್ಟಲ್ಲಿಯೂ ಬೆಂಗ್ಳೂರು ಹೇದರೆ ಅಷ್ಟೊಂದು ಕೆಟ್ಟ ಊರು – ಹೇದು ಕಾಂಬ ನಮುನೆಲಿ ಟೀವಿಯೋರು ಮಾಡಿ ಹಾಕಿದವು– ಹೇದ° ಪೆರ್ಲದಣ್ಣ.
ಆಯಿಪ್ಪಲೂ ಸಾಕು, ರಾಜ್ಯದ ರಾಜಧಾನಿ. ಅಲ್ಲಿ ಕಳ್ಳಂಗೊ ಜಾಸ್ತಿ ಇರ್ತವು; ಹಾಂಗಾಗಿ ಅಪರಾಧಂಗಳೂ ಜಾಸ್ತಿ ಇಕ್ಕು – ಹೇದು ಅನುಸಿತ್ತು. ಇರಳಿ..

ಆದರೆ, ಹೀಂಗೆಲ್ಲ ಅಪರಾಧಂಗೊ ಅಪ್ಪಲೆ ಅವರ ಆಚಾರ-ವಿಚಾರ ಸರಿ ಇಲ್ಲದ್ದು ಮುಖ್ಯ ಕಾರಣ.
ಆದರೆ, ಅದರ ಪರಾಂಬರುಸಿ ನೋಡಿರೆ, ಅವರ ಆಹಾರ-ವಿಹಾರವೂ ಸರಿ ಇರ!
ಸಾತ್ವಿಕ ಆಹಾರ ತೆಕ್ಕೊಂಡ್ರೆ ಮನಸ್ಸೂ ಸಾತ್ವಿಕ ಆವುತ್ತು; ತಾಮಸಿಕ ಆಹಾರ ಸ್ವೀಕಾರ ಮಾಡಿರೆ ಮನಸ್ಸುದೇ ಅದೇ ನಮುನೆ ಚಿಂತನೆಲಿ ಇರ್ತು – ಹೇಳುಸ್ಸು ನಮ್ಮ ಅಜ್ಜಂದ್ರ ಕಲ್ಪನೆ.
~

ಒಂದೊಪ್ಪ: ಆಹಾರದ ರುಚಿ ಇಪ್ಪ ನಾಲಗೆಗೆ ಆಚಾರದ ರುಚಿಯೂ ಕೊಡುವೊ°.

7 thoughts on “ಆಹಾರ-ವಿಹಾರದ ಪ್ರತಿಫಲನ ಆಚಾರ ವಿಚಾರಲ್ಲಿ ಇರ್ತು..!

  1. ಹರೇರಾಮ,
    ಒಪ್ಪನ್ಣನ ಪ್ರತಿಯೊಂದೂ ಶುದ್ದಿಯೂ ಓದುವಗ ಮನಸ್ಸಿಂಗೆ ಸಂತೋಷ ಕೊಡುದರೊಟ್ಟಿಂಗೆ ಮೆದುಳಿಂಗೂ, ಆತ್ಮಕ್ಕೂ ಕೆಲಸ ಕೊಡೂವ ವಿಷಯಂಗಳ ಹೊತ್ತು ತತ್ತು.
    ಈ ಶುದ್ದಿ ಅದ್ವೈತದ ಅರ್ಥವ ಹೇಳೀಗೊಂಡು ಶುರುವಾಗಿ..ಅದ್ವೈತಂದ ದೂರಾಗಿ…ಪರಮ ತತ್ವವ ಮರತ್ತು…ಆಹಾರ-ವಿಹಾರ, ಆಚಾರ-ವಿಚಾರಂಗಳ ತಪ್ಪಾಗಿ ಪಾಲಿಸುದರಿಂದ ನಮ್ಮ ಸಮಾಜ ಏವ ದಿಕ್ಕಿಲ್ಲಿ ಹೋವ್ತಾ ಇದ್ದು, ಹೀಂಗೇ ಬಿಟ್ತರೆ ಎಂತಕ್ಕು ಹೇಳ್ತದರ ವಿವರ್ಸಿದ್ದವು.

    we are what we eat ಹೇಳುವ ಮಾತು ಆಂಗ್ಲಲ್ಲಿಯೂ ಇದ್ದು. ನಮ್ಮ ಆಹಾರ-ವಿಹಾರ, ಆಚಾರ-ವಿಚಾರಂಗೊ ಹೇಂಗೆ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀಳ್ತು ಹೇಳುದರ ಉಲ್ಲೇಖ ವೇದಲ್ಲಿಯೂ ಇದ್ದು ಹೇಳಿ ಕೇಳಿದ್ದೆ. ಅದರ ವಿವರಂಗಳ ವಿದ್ವಾನಣ್ಣನೇ ಹೇಳೆಕಷ್ಟೆ.

    ಉತ್ತಮ, ಸಮಯೋಚಿತ ಲೇಖನ.

  2. ಆಹಾರ ವಿಹಾರ ಕುರಿತ ಲೇಖನ ಲಾಯಕ ಆಯಿದು

  3. ಆಹಾರ- ನಮ್ಮ ಆಚಾರ ವಿಚಾರ ದ ಮೇಗೆ ಪ್ರಭಾವ ಬೀರುದು ಖಂಡಿತಕ್ಕು ನಿಜ .ಮಾಂಸಾಹಾರಿಗೊ ,ಅವರ ನೆಡವಳಿಕೆಗಳ ಗಮನಿಸಿದರೆ ಇದು ಇದು ಸ್ಪಷ್ಥ ಆವುತ್ತು. ಇದರೊಟ್ಟಿಂಗೆ ಇನ್ನೊಂದು ವಿಚಾರವುದೇ ಇದ್ದು ,ಅದೆಂತ್ಸರ ಕೇಳಿರೆ , ಯೇವದೇ ಕಲಾ ಪ್ರಕಾರಂಗಳ ಕಡೇಂಗೆ ಆಸಕ್ತಿ ಇಲ್ಲದ್ದಿಪ್ಪ ಮನುಶ್ಯರಿದ್ದವಲ್ಲದೋ ಅವರಲ್ಲಿ ಇಂತಹ ದುಷ್ಟ ಆಲೋಚನೆಗೊ ಬಪ್ಪದು ಬೇಗ ಹೇಳಿ ಕಾಣುತ್ತು . ಅದನ್ನೇ ಹಿಂದೆ ವಿದ್ವಾಂಸರು ‘ಸಂಗೀತ ಸಾಹಿತ್ಯ ಕಲಾ ವಿಹೀನಹ ಸಾಕ್ಷಾತ್ ಪಶು ‘ ಹೇದು ಹೇದ್ದಲ್ಲದೋ ?. ಆಂಗ್ಲ ಭಾಷೆಲಿಯುದೆ idle mind is devils work shop ಹೇಳಿ ಇದ್ದಾಡ .

    * ವಿಚಾರ ಲಾಯಕ್ಕಾಯಿದು .ಹರೇ ರಾಮ .

  4. ಲೋಕಾಂತ ಏಕಾಂತ ಶ್ರೀಕಾಂತ … ಲಾಯಕ ಆಯ್ದು . ಸಾಧಕಕ್ಕೆ ಅಗತ್ಯ ಏಕಾಂತ. ಗೀತೆಲಿ ನಾವು ಓದಿದ್ದದು ಇದರ್ನೆ. ಸಾಧನೆ ಹೇದರೆ ಎಲ್ಲವನ್ನೂ ಬಿಟ್ಟಿಕ್ಕಿ ಹೋಪದು ಅಲ್ಲ, ಎಲ್ಲವುದರೊಟ್ಟಿಂಗೆ ಇದ್ದುಗೊಂಡು ಏವುದನ್ನೂ ಅಂಟುಸಿಗೊಳ್ಳದ್ದೆ ಲೋಕಾಂತವಾಗಿಯೂ ಏಕಾಂತವಾಗಿಯೂ ಕರ್ಮನಿರತನಾಗಿಪ್ಪದೇ ಸಾಧನೆ. ಹರೇ ರಾಮ.

  5. ಲೋಕಾಂತ ಏಕಾಂತದ ಬಗ್ಗೆ ಒಳ್ಳೆ ಮಾಹಿತಿ ಸಿಕ್ಕಿತ್ತು. ನಮ್ಮ ಆಹಾರ ನಮ್ಮ ಆಚಾರದ ಮೇಗೆ ಪರಿಣಾಮ ಬೀರುವದು ಖಂಡಿತಾ ಅಪ್ಪು. ಒಪ್ಪಣ್ಣನ ಶುದ್ದಿಗೆ ಒಂದೊಪ್ಪ.

  6. ಹರೇರಾಮ, ಶ್ರೀ ಗುರುಗೊ ಏಕಾಂತಕ್ಕೆ ಹೋಪಸುದ್ದಿ ಕಳುದ ವಾರ ಒಪ್ಪಣ್ಣನ ಸುದ್ದಿಲಿ ಗೊಂತಾಗಿ ; ಸಮಾಜಕ್ಕೆ ಇನ್ನೂ ಬಹುದೊಡ್ಡ ಕೊಡುಗೆ ಇಲ್ಲದ್ದಿರ ಹೇಳ್ತದು ಖಂಡಿತ. ಇದೀಗ ಲೋಕಾಂತ-ಏಕಾಂತ, ಆಹಾರ-ವಿಹಾರ, ಆಚಾರ-ವಿಚಾರ ಇದರ ಬಗ್ಗೆಯೂ ಹೆಚ್ಚಿನ ಮಾಹಿತಿ ಬರದ್ದದು ಒಳ್ಳೆದಾತು ಒಪ್ಪಣ್ಣ.

  7. ಅಂಬಗ ಕೆಕ್ಕಾರಿಲಿ … ಮನಸು, ದೇಹ ಮತ್ತೆ ಸಂಸ್ಕಾರಕ್ಕೆ ಬೇಕಾದ್ದೆಲ್ಲ ಇದ್ದು ಹೇಳಿದಾಂಗೆ ಅಲ್ಲದೋ… ಹರೇ ರಾಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×