- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಅಡಿಗೆ ಸತ್ಯಣ್ಣಂಗೆ ಓ ಮನ್ನಂಗೆ ಪ್ರಾಯ 54 ಸಂದತ್ತು. ಇಂದಿಂಗೆ ಅಡಿಗೆ ಸತ್ಯಣ್ಣನ ಒಗ್ಗರಣೆಗೊ ಕಂತಿಂಗೂ ಲೆಕ್ಕ 54 ಸಂದತ್ತು.
ಅಡಿಗೆ ಸತ್ಯಣ್ಣಂಗೆ ತೆರಕ್ಕಿನ ಅಂಬೇರ್ಪು ನಾಲ್ಕಾರು ಹತ್ತು ಇಪ್ಪಕಾರಣ ಬೈಲಿಂಗೆ ರಜಾ ಅಪ್ರೂಪ ಹೇದು ಆದರೂ ತೀರೆ ಏನೂ ಇಲ್ಲೆ ಹೇದೇನೂ ಇಲ್ಲೆ ಇದಾ.
ಬಂದಪ್ಪಗ ನಾಕೋ ಐದೋ ಒಂಬತ್ತೋ ಶುದ್ದಿಯೂ ಇದ್ದೇ ಇರ್ತು.
ಅಡಿಗೆ ಸತ್ಯಣ್ಣ° ಓ ಮನ್ನೆ ಕೊಡೆಯಾಲ ಅನುಪ್ಪತ್ಯಕ್ಕೆ ಬಂದಿತ್ತವೋ…ಅಲ್ಲಿಗೆ ನಾವುದೆ ಹೋಗಿತ್ತೋ.. ಅಲ್ಲಿಗೆ ಕೋಟೂರಣ್ಣನೂ ಬಂದಿತ್ತವದಾ..
ಕೊಟೂರಣ್ಣ ಬಂದಿತ್ತವು ಹೇದರೆ ಕೋಟೂರಣ್ಣನ ಕೆಮರದೊಳಂಗೆ ಅಡಿಗೆ ಸತ್ಯಣ್ಣ ಸೇರುದು ನಿಘಂಟೆ ಅಪ್ಪೋ!
ಐವತ್ತಾನಾಕರ ಲೆಕ್ಕಲ್ಲಿಯೂ ಆತು ಕೋಟುರಣ್ಣ ಸಿಕ್ಕಿದ್ದಕ್ಕೂ ಆತು ಹೇದು ಅಡಿಗೆ ಸತ್ಯಣ್ಣ ಇಂದು ಹೊಸ ಪಟಲ್ಲಿ ಬೈಲಿಲ್ಲಿ
ಹಾಂಗಾರೆ ಇಂದ್ರಾಣ ಶುದ್ದಿ 54 ರಲ್ಲಿ ಆ 9 ಎಂತರ ನೋಡ್ವೊ° ಬನ್ನಿ –
~~~~
1.
ಅಡಿಗೆ ಸತ್ಯಣ್ಣಂಗೆ ಮದುವೆ ಆಗಿ ಎರಡ್ನೆ ಮಗಳಿಂಗೂ ಮದುವೆಗೆ ಪ್ರಾಯ ಆತಪ್ಪೋ
ಅದರೆಡಕ್ಕಿಲಿ ಅಡಿಗೆ ಸತ್ಯಣ್ಣಂಗೆ ಹಳತ್ತೊಂದು ನೆಂಪಾತು
ಎಂತರ ಕೇಟ್ರೆ ಅಡಿಗೆ ಸತ್ಯಣ್ಣನ ಮದುವೆ ದಿಬ್ಬಾಣ ಹೋದ್ದದೆ
ದಿಬ್ಬಾಣ ಹೋಗ್ಯೆತ್ತಿ ಚಪ್ಪರ ಹೆರದಿಕ್ಕೆ ಮರಿಗೆಲಿ ಮಡಿಗಿದ ನೀರ ಕರಟಲ್ಲಿ ತೋಡಿ ಕಾಲು ಚೆಂಡಿ ಮಾಡಿಯಪ್ಪಗ ಸಣ್ಣ ಪ್ರಾಯದ ಕೂಸುಗೊರೆಡು ಚೆಂಡಿ ಉದ್ದಲೆ ಬೈರಾಸು ಕೈ ಉದ್ದ ಮಾಡಿದವು.
ಶಾಸ್ತ್ರಕ್ಕೆ ಮದಿಮ್ಮಾಯ ಕಾಲುದ್ದಿದಾಂಗೆ ಮಾಡಿಕ್ಕಿ ವಾಪಸು ಕೊಟ್ಟಿಕ್ಕೆ ಎರಡೆಜ್ಜೆ ಮುಂದೆ ಮಾಡಿಯಪ್ಪಗ ಚಪ್ಪರ ಜಾಲಿಂಗೆ ಹೊಳಿಮಣೆ ಜೆಪ್ಪಿದ ಐತಪ್ಪು ಅಡಿಗೆ ಸತ್ಯಣ್ಣನ ಬೆಳಿ ಅಂಗಿಲಿ ನೋಡಿ ಚಪ್ಪರಕ್ಕೆ ಮಡಲಾಕಿದ ಸುಂದರನತ್ರೆ ಕೇಟತ್ತು– ಓಹ್ಹ್ ಇಂಬರ್ ಮದಿಮ್ಮಾಯರಾ?!!
ಅಡಿಗೆ ಸತ್ಯಣ್ಣಂಗೆ ಕಣ್ತಪ್ಪಿ ಏನಾರು ಆಗಿ ಹೋಪದಾರೂ ಇಕ್ಕು ಆದರೆ ಕೆಮಿ ಮಾಂತ್ರ ಭಾರೀ ಸೂಕ್ಷ್ಮ ಇದಾ
ಅಡಿಗೆ ಸತ್ಯಣ್ಣ° ಅದಕ್ಕೆ ಕೇಳುತ್ತಾಂಗೇ ಹೇದಾ – “ಅತ್ತ್, ಇನಿ ಮದಿಮ್ಮೆ ಆಯೆರೆ ಬತ್ತಿನಾರ್” 😀
~~
2.
ಅಡಿಗೆ ಸತ್ಯಣ್ಣ ಮದುವೆ ಕಳುಶಿಕ್ಕಿ ಮಾವುಗಳ ಮನೆ ಸಮ್ಮಾನ ಕಳ್ಸಿಕ್ಕಿ ಬೈಲ ದೊಡ್ಡಕ್ಕನ ಮನಗೆ ಇರುಳಿಂಗೆ ಹೋಪ ದಾರಿಲಿ ಮಜ್ಜಾನಕ್ಕೆ ಬೈಲ ಸಣ್ಣಕ್ಕನಲ್ಲಿಗೂ ಒಂದೊತ್ತಿಂಗೆ ಹೋದ್ದಿದಾ
ಮಜ್ಜಾನ ಊಟಕ್ಕೆ ಅದೂ ಇದೂ ಅಲ್ಲದ್ದೆ ಬೇಳೆ ಹಾಕಿ ಸೌತೆಕ್ಕಾಯಿ ಕೊದಿಲು ಮಾಡಿತ್ತವದಾ
ಕೊದಿಲ ಬಳ್ಸಿಕ್ಕಿ ಆಚಿಗೆ ಬಳ್ಸುಕ್ಕಾರೆ ಅಡಿಗೆ ಸತ್ಯಣ್ಣಂಗೆ ಕೊದಿಲನ್ನ ಬೆರುಸಿ ಒಂದು ತುತ್ತು ಬಾಯಿಗೆ ಹಾಕಿ ಆಗಿ ಕೈಲಿ ಗ್ಲಾಸ ನೆಗ್ಗಿ ಹಿಡುದ್ದಾ°ಷ್ಟೆ….. ಸಣ್ಣಕ್ಕ ಕೇಟತ್ತು – ಕೊದಿಲು ಹೇಂಗಾಯ್ದು ಸತ್ಯಣ್ಣ?
ಇಪ್ಪದರ ಇಪ್ಪಾಂಗೆ ಬಾಯಿಬಿಟ್ಟು ಬೇಜಾರಾಗದ್ದಾಂಗೆ ಹೇಳಿಕ್ಕುದು ಅಡಿಗೆ ಸತ್ಯಣ್ಣನ ಅಭ್ಯಾಸ ಹೇಳ್ತದು ನಿಂಗೊಗೂ ಗೊಂತಿದ್ದನ್ನೆ
ಸತ್ಯಣ್ಣ° ಹೇದ° – “ಭಾರೀ ಪಷ್ಟಾಯ್ದಕ್ಕೋ. ಇದಾ ನೋಡು ಕಣ್ಣಿಲ್ಲಿ ಮೂಗಿಲ್ಲಿ ನೀರು ಬಂತು., ಕೆಮಿಂದ ಸಾನ ಬೆಶಿ ಗಾಳಿ ಹೆರಡುತ್ತೀಗ. ಆ ನೀರ ಚೆಂಬಿತ್ತೆ ಮಡುಗು ಮದಾಲು” 😀
ಓಯ್… ಕೊದಿಲು ಕೊಠಂಗನೆ ಆಯಿದಾಯಿಕ್ಕಪ್ಪೋ 😀
~~
3.
ಮನ್ನೆ ಬೈಲ ಬಾವನ ಮಾಣಿಯ ಉಪ್ನಾನ ಕಳುತ್ತಪ್ಪೋ
ಅಡಿಗೆ ಸತ್ಯಣ್ಣಂದೇ ಅಡಿಗೆ ಅದಾ
ಉಪ್ನಾನ ಕಳುದು, ಊಟಾಗಿ ಅರ್ಗೆಂಟು ಹೋವ್ತೋರೆಲ್ಲ ಹೋದಮತ್ತೆ ಶೂನ್ಯವೇಳೆ ಹರಟೆ ಹೇದು ಇರ್ತನ್ನೆ.
ಚಪ್ಪರಲ್ಲಿ ಬೆಂಚಿ ಹತ್ರೆ ಹಸೆ ಹಾಕಿದ್ದರ್ಲಿ ಕಾಲು ನೀಡಿ ಕೂದೊಂಡೋರಲ್ಲಿ ಕುಂಟಾಂಗಿಲ ಬಾವನೂ ಅಡಿಗೆ ಸತ್ಯಣ್ಣನೂ ಕೂದ್ದು ಹತ್ತರೆ ಹತ್ತರೆ ಆಯಿದು.
ಎಡಕ್ಕಿಲಿ ಕುಂಟಾಂಗಿಲ ಬಾವ° ಅಡಿಗೆ ಸತ್ಯಣ್ಣನತ್ರೆ ಕೇಟ° – ದೋಸಗೆ ದೋಸೆಯ ರುಚಿ ಬತ್ಸೇಂಗೆ ಸತ್ಯಣ್ಣ°?!
ಪೆರಟು ಚೋದ್ಯಕ್ಕೆ ಪೆರಟೇ ಅಲ್ಲದ ಉತ್ತರ ?!,
ಅಡಿಗೆ ಸತ್ಯಣ್ಣ ಹೇದ° – ದೋಸೆಯ ದೋಸೆ ಹಾಂಗೆ ಮಾಡ್ತ ಕಾರಣ!
ವುಡ್ ಲಾಂಡ್ಸಿಂಗೆ ಅಡಿಗ್ಗೆ ಕೆಲಸಕ್ಕೆ ಹೋಪಗ ಇಂಟ್ರೂವಿಲ್ಲಿ ಇದೇ ಪ್ರಶ್ನೆ ಕೇಟದಾಯ್ಕೋ ? ಉಮ್ಮ ಅಡಿಗೆ ಸತ್ಯಣ್ಣನೇ ಸಿಲೆಕ್ಟು ಆದ್ದು ಅಂದು! 😀
~~
4.
ಮನ್ನೆ ಕೊಡೆಯಾಲ ಪುಣ್ಯಾಯಕ್ಕೆ ಅಡಿಗೆ ಸತ್ಯಣ್ಣಂಗೆ ಹೋಪಲೆ ಇತ್ತಿದ್ದಪ್ಪೋ
ಹೇಂಗೂ ಹೋವುತ್ತನ್ನೇ ಹೇದು ಕಾಯಿಕಡವ ರಂಗಣ್ಣನನ್ನೂ ಕೂಡಿಯೊಂಡು ಮುನ್ನಾಣ ದಿನವೇ ಹೋಯಿದ° ಅಡಿಗೆ ಸತ್ಯಣ್ಣ
ಎಂತ್ಸಕೆ?!
ಜೆಪ್ಪು ಮೈದಾನಲ್ಲಿ ಕಟೀಲು ಮೇಳದ ಆಟ ಇದ್ದತ್ತಡ ಅದಾ!
ಓ ಅಂದ್ರಾಣ ಕಲ್ಲುಗುಂಡಿ ಆಟ ಕಳುದಮತ್ತೆ ಅಡಿಗೆ ಸತ್ಯಣ್ಣಂಗೆ ಆಟಕ್ಕೆ ಹೋಪಲೇ ಆಯಿದಿಲ್ಲೆ ಅದಾ. ಹಾಂಗಾಗಿ ಇರುಳು ಉಂಡಿಕ್ಕಿ ಆಟ ಆವುತ್ತಲ್ಯಂಗೆ ಅಡಿಗೆ ಸತ್ಯಣ್ಣ ಹಾಜರು
ಆಟದ ಮೈದಾನಕ್ಕೆ ಎತ್ತುವಾಗ ಮಧುಕೈಟಬ ಕತೆ ಮುಗುದ್ದು. ನೋಡಿರೆ ಅಲ್ಲಿ ಜೆನವೋ ಜೆನ
ಹತ್ರಂಗೆ ಎತ್ತುವಾಗ ಎದುರಂಗೆ ಸಿಕ್ಕಿದ್ದು ಗೋವಿಂದಕೋಡ್ಳು ಭಾವ ಅದಾ
ಎಂಸು ನಿಂದೊಂಡದು ?? – ಅಡಿಗೆ ಸತ್ಯಣ್ಣ ಕೇಟ°
ಇಲ್ಲೆ ಸತ್ಯಣ್ಣ ಕೂಬಲೆ ಕುರ್ಚಿ ಕಾಲಿ ಇಲ್ಲೆ.
ಒಟ್ಟಿಂಗೆ ಇತ್ತಿದ್ದ ರಂಗಣ್ಣ ಒಂದು ಕೆಣಿ ಹೇದ° – ಆ ಕರೇಲಿ ಕೂದೊಂಡಿಪ್ಪೋನ ತಟ್ಟಿ ಅದಾ ಓ ಅಲ್ಲಿ ಆರೋ ದೆನಿಗೊಳ್ತವು ಹೇದು ದೂರಕ್ಕೆ ಕೈ ತೋರ್ಸು. ಅಟ್ಟಪ್ಪಗ ಅಂವ ಆರಪ್ಪ ಹೇದು ಎದ್ದಿಕ್ಕಿ ನೋಡ್ಳೆ ಹೋಕು. ನೀನಂಬಗೆ ಕುರ್ಚಿ ಬಲುಗಿ ಆಚೊಡೆಲಿ ಮಡಿಗಿ ಕೂದುಗೊ.
ಒಟ್ಟಿಂಗೆ ಇತ್ತಿದ್ದು ಸತ್ಯಣ್ಣ ಅಪ್ಪೋ?! ರಂಗಣ್ಣಂದ ಇಪ್ಪತ್ತೊರಿಶ ಮದಲೇ ಹುಟ್ಟಿದ ಕಾರಣ ಅದರಿಂದ ಒಳ್ಳೆ ಕೆಣಿ ಅವಂಗೆ ಗೊಂತಿರದೆ ಇಕ್ಕೋ!
ಅಡಿಗೆ ಸತ್ಯಣ್ಣ ಹೇದ° – ಎಂಸೂ ಬೇಡ, ಇನ್ನು ರಜಾ ಹೊತ್ತು ಕೂದರೆ ಮಹಿಷಾಸುರ ಬಪ್ಪಲಾತು. ಅಟ್ಟಪ್ಪಗ ಜೆನಂಗೆ ಹೇಂಗೂ ಎದ್ದು ನಿಂದು ಎಕ್ಕಳ್ಸಿ ನೋಡ್ಳೆ ಸುರುಮಾಡುಗು. ಅಷ್ಟಪ್ಪಗ ಮೂರ್ನಾಕು ಕುರ್ಚಿ ಇತ್ತೆ ಬಲುಗಿರೆ ಆತು.
~~
5.
ಜೆಪ್ಪು ಮೈದಾನಲ್ಲಿ ಮಹಿಷಾಸುರ ಬಪ್ಪಲಾತು
ಓ ಅಟ್ಟು ದೂರಲ್ಲಿಯೆ ದೊಂದಿ, ಬೆಳುಗುಲು ರಾಶಿಗೆ ಕಿಚ್ಚು ಕೊಡ್ಸು ಕಾಣ್ತು.
ಗೋವಿಂದಕೋಡ್ಳು ಭಾವ° ಹೇದ° ಅದಾ – ಇಂದು ಮಹಿಷಾಸುರ ಜೀಪಿಲ್ಲಿ ಬಪ್ಪದಡಾ!!
ಅಡಿಗೆ ಸತ್ಯಣ್ಣ° ಹೇದ° – ಅಂಬಗ ನಾಳಂಗೆ ಲಾರಿಲಿ ಟೆಂಪೊಲಿ …ಅಲ್ಲ, ಬಸ್ಸಿಲ್ಲಿಯೂ ಬಪ್ಪದಾಯ್ಕು, ಅಲ್ಲ ವಿಮಾನಲ್ಲೇ ಬಂದಿಳಿವದೂ ಆಯ್ಕು. ಆದರೆ ಬಪ್ಪೊರಿಶ ಆನೆಲಿ ಮಹಿಷಾಸುರ ಬಪ್ಪ ವ್ಯವಸ್ಥೆ ಆದರೂ ಅಕ್ಕು ! 😀
“ಮತ್ತೆ ಮನೆಂದಲೇ ವೇಷ ಹಾಕ್ಯೊಂಡು ಜೀಪಿಲ್ಲಿ ಕಾರ್ಲಿ ಲಾರಿಲಿ ಬಸ್ಸಿಲ್ಲಿ ಸಮಯಕ್ಕಪ್ಪಗ ಬಂದಿಳಿತ್ತಾಂಗೆ ಸುರುವಕ್ಕಪ್ಪೋ! ” – ಅಕೇರಿಂಗೆ ರಂಗಣ್ಣಂದೂ ಒಂದೊಗ್ಗರಣೆ 😀
~~
6.
ಅಡಿಗೆ ಸತ್ಯಣ್ಣ ಆಟಕ್ಕೆ ಹೋಪದು ಅಪರೂಪ ಅಪ್ಪೋ
ಹಾಂಗಾಗಿ ಕಲಾವಿದರ ಗುರ್ತವೂ ಅಪರೂಪವೇ
ಅಂತೇ ಕೆಲವು ಹೆಸರುಹೋದವರ ಹೆಸರು ಮಾಂತ್ರ ಹೇದು ಕೇಟು ಗೊಂತು.
ಮಹಿಷಾಸುರ ಜೀಪಿಲ್ಲಿ ಬತ್ಸರ ನೋಡಿ ರಂಗಣ್ಣ° ಕೇಟ° – ಆರು ಮಾಂವ ಅದು ಮಹಿಷಾಸುರ ಇಂದು?
ಅಡಿಗೆ ಸತ್ಯಣ್ಣ ಹೇದ° – ಕಟೀಲು ಮೇಳದ ಆಟಲ್ಲಿ ಕಟೀಲು ಮೇಳದವ್ವೇ ಮಹಿಷಾಸುರ ಹಾಕುಗನ್ನೆ? ನೆಲ್ಯಾಡಿಯೋ ಮಣ್ಣೋ ಇಕ್ಕು. ಪನೆಯಾಲ ಅಪ್ಪಚ್ಚಿ ಈ ಮೇಳಕ್ಕೆ ಬಂದು ಮಹಿಷಾಸುರ ಹಾಕುತ್ಸವಾಯಿಕ್ಕು!!!
ರಂಗಣ್ಣ ತಳಿಯದ್ದೆ ಕೂದ°!!
😀
~~
7.
ಮನ್ನೆ ಶಿವರಾತ್ರಿ ಅಪ್ಪೋ
ಅಡಿಗೆ ಸತ್ಯಣ್ಣ ಉದಿಯಪ್ಪಗ ಎದ್ದಿಕ್ಕಿ ಇಕ್ಕೇರಿ ಮಠಲ್ಲಿ ಅಡಿಗೆ ಹೇದೊಂಡು ಹೆರಟು ನಿಂದಿದ° ಅಟ್ಟೆ.
ಅದೇ ಹೊತ್ತಿಲ್ಲಿ ಆಚಕರೆ ಅಣ್ಣು ಪೂಜಾರಿ ಎಲ್ಲಿಗೋ ಹೋವ್ಸು ಜಾಲಿಲಿ ಅಡಿಗೆ ಸತ್ಯಣ್ಣನ ಬೈಕು ಇದ್ದನ್ನೆ, ಅಣ್ಣೇರ್ ಇದ್ದವಂಬಗ ಹೇದು ಒಂದರಿ ಮಾತಾಡಿಕ್ಕಿ ಹೋವುತ್ತೆ ಹೇದು ಬಂತು ಜಾಲಬುಡಲ್ಲಿ
ದಾನೆ ಎಡ್ಡೆ ಆದಮತ್ತೆ ಅಣ್ಣು ಪೂಜಾರಿ ಕೇಟತ್ತು ಇಂದು ಶಿವರಾತ್ರಿಗೆ ಎಂತ ಇದ್ದು ಸತ್ಯಣ್ಣ° ಹೇದು
ಸತ್ಯಣ್ಣ° ಹೇದ° – ಇಲ್ಲಿ ಎಂಸೂ ಇಲ್ಲೆ, ಅಕ್ಕಾರೆ ಆ ತೊಂಡೆಚಪ್ಪರದ ಬುಡಲ್ಲಿ ಕಾಲ್ತೊಳವೆ ನೀರ ಕೂಡಿ ಮಡುಗುತ್ತ ಸಿಮೆಂಟಿನ ಮರಿಗೆ ಇದ್ದು, ಅದರಲ್ಲಿ ಎರಡು ಕರಟವೂ ಇದ್ದು. 😀
ಹ್ಹಾ° ಆಡಿಗೆ ಸತ್ಯಣ್ಣ° ಜಿಲೇಬಿ ಮೆಶಿನು ಜಾಗ್ರತೆಲಿ ಮಡಿಕ್ಕೊಂಡಿಕ್ಕಪ್ಪೋ 😀 😀
~~
8.
ಅಡಿಗೆ ಸತ್ಯಣ್ಣ ಮನ್ನೆ ಹೋದ ಉಪ್ನಾನಕ್ಕೆ ದುಬೈ ಬಾವನೂ ಬಂದಿತ್ತವಡ
ದುಬೈ ಬಾವ ಅಡಿಗೆ ಕೊಟ್ಟಗೆಲಿ ಅಡಿಗೆ ಸತ್ಯಣ್ಣಂಗೆ ದುಬೈಯ ವರ್ಣನೆ ಮಾಡಿಗೊಂಡಿತ್ತಿದ್ದ° ಎಷ್ಟು ಲಾಯಕ ಇದ್ದು ಆ ದೇಶ!
ಎಲ್ಲಿ ನೋಡಿರೂ ಅಚ್ಚ ಸ್ವಚ್ಚ ಕ್ಲೀನು ಕ್ಲೀನು
ಜೆನಂಗಳೂ ಅಷ್ಟೇ ನಿರ್ಭಯರಾಗಿ ಮರ್ಯಾದೆಲಿ ಇರುತ್ತವು. ನೆಡು ಇರುಳು ಕೂಡ ಹೆಮ್ಮಕ್ಕ ಚಿನ್ನ ಹಾಕ್ಯೊಂಡು ಪೇಟಗೆ ಹೋಯಿಕ್ಕಿ ಬಪ್ಪದಕ್ಕೆ ಹೆದರಿಕೆ ಇಲ್ಲೆ.
ಅದೇಂಗೆ?!
ಎಲ್ಲ ಅಲ್ಲಿಯಾಣ ಸ್ಟ್ರಿಕ್ಟು ಕಾನೂನು. ತಪ್ಪು ಮಾಡಿರೆ ಕೈ ಕಾಲೋ ಕಣ್ಣೋ ಕಡುದು ಹಾಕುತ್ತವಲ್ಲಿ!
ದುಬೈ ಬಾವಯ್ಯ ಅಟ್ಟು ಹೇದ್ದರ ಕೇಟಪ್ಪಗ ಸತ್ಯಣ್ಣನ ತಲೆ ಓಡಿತ್ತು
“ಅಪ್ಪೋ ಬಾವ! ಅಂಬಗ ಅಲ್ಲಿ ಅಲ್ಪ ಕೈ ಕಾಲು ಕಣ್ಣು ಇಲ್ಲದ್ದೆ ತಿರುಗುವವು ಅಲ್ಪ ಇಕ್ಕಪ್ಪೋ!” 😀 😀
~~
9.
ರಮ್ಯಂಗೆ ಕೋಳೇಜಿಲ್ಲಿ ಮನ್ನೆ ಒಂದು ಪರೀಕ್ಷೆ ಕಳುತ್ತಪ್ಪೋ
ಸತ್ಯಣ್ಣ ಅನುಪ್ಪತ್ಯಕ್ಕೆ ಹೋಯಿಕ್ಕಿ ಬಂದು ಕುರ್ಚಿಲಿ ಕೂದೊಂಡಿಪ್ಪಗ ಅದರ ಅಂದ್ರಾಣ ಕೊಶ್ಚನು ಪೇಪರು ಮೇಜಿಲಿ ಕಂಡತ್ತಲ್ಲಿ
ಅರ್ಥ ಆವುತ್ತೋ ಇಲ್ಲ್ಯೋ ಎಂಸೋ ಸತ್ಯಣ್ಣಂಗೆ ಅದರ ಕೈಲಿ ಹಿಡ್ಕೊಂಡು ಒಂದರಿ ಅದರ ಮೇಗಂದ ಕೆಳತ್ತಾಂಗಿ, ಪು ತಿ ನೋ ಕಣ್ಣಾಡಿಸಿಹೋತು
ಅದರ್ಲಿ ಅಕೇರಿಗೆ ಒಂದು ಪ್ರಶ್ನೆ ಇದ್ದತ್ತು – ಕೆಳಗಿನ ವಿಷಯದಲ್ಲಿ ಒಂದು ಪುಟಕ್ಕೆ ಮೀರದಂತೆ ನಿಮ್ಮ ವಾಕ್ಯದಲ್ಲಿ ಬರೆಯಿರಿ –
“ನಾನು ಪ್ರಧಾನ ಮಂತ್ರಿ ಆದಾಗ”
ಅಡಿಗೆ ಸತ್ಯಣ್ಣ ಹೇದ – “ನೀನು ಪ್ರಧಾನ ಮಂತ್ರಿ ಆದಾಗ ಎಂಸರ ಹೇದು ನಿನಗೆ ಗೊಂತಿರಕು ಹೊರತು ಇದರತ್ತರೆ ಕೇಳ್ಸು ಎಂತರ?!” 😀
*** 😀 😀 😀 ***
`
ಅಡಿಗೆ ಸತ್ಯಣ್ಣಂಗೆ ಹರೇರಾಮ. ಅಲ್ಲಾ… ನಮ್ಮ ಅಡಿಗೆ ಸತ್ಯಣ್ಣ ಬಂದಪ್ಫಗ ಬೈಲಿನ ಎಜಮಾನಕ್ಕೊಲ್ಲ ಬಂದವನ್ನೆ ಮಾತಾಡ್ಸಲೆ!.ಅಡಿಗೆ ಬುಕ್ ಮಾಡ್ಳೆ ಆಲೋಚನೆಯೋ….?
ಕೊಶಿ ಆತು, ಸುಮಾರು ಸಮಯಂದ ಮತ್ತೆ ಸತ್ಯಣ್ಣನ ವರ್ತಮಾನ ಸಿಕ್ಕಿತ್ತು.
🙂
ಓಹೋ ,ಈ ಸುದ್ದಿ ಓದಿಪ್ಪಗ ಮೊನ್ನೆ ನಡೆದ
ಇ೦ಡೋ-ಪಾಕ್ ಮ್ಯಾಚಿನ ಕಮೆ೦ಟ್ರಿ
ಬಗ್ಗೆ ಸತ್ತ್ಯಣ್ಣ ಕಮೆ೦ಟ್ ಮಾಡಿದ್ದು ನೆ೦ಪಾತಿದ.
ಆ ಪಾಕಿಗೋ ಪೋರು ತಟ್ಟಿ ಅಪ್ಪಗ ಇಲ್ಲ್ಯಾನವು
ಎ ಬಿ ಸ್ ಏನ್ ಲ್ ಕಾ ಚಕ್ಕಾ ಹೇಳುವುದು ಎ೦ತಕ್ಕೆ?ಕೇಟವು.
ಲಾರಿಲಿ ಬಂದಿಳಿತ್ತ ಮಹಿಷಾಸುರ೦ಗೆ ದೊಂದಿ ರಾಳದ ಹೊಡಿ ಬೇಕಾಗದೋ ಹೇಂಗೆ! ವಾಹನದ ಹೆಡ್ ಲೈಟಿನ ದೊಡ್ಡಕೆ ಹಾಕಿರೆ ಸಾಕಕ್ಕೋ ?!
ಅಡಿಗೆ ಸತ್ಯಣ್ಣ ಆಟಕ್ಕೆ ಹೋಗಿ ಒರಗಿದಲ್ಲೇ ಬಾಕಿಯೋ ಗ್ರೇಶಿದೆ.
ಅದಾ ಬೈಲಿಲ್ಲಿ ತಲೆ ಕೊಡಿ ಕಾಮ್ಬಲೆ ಸುರು ಆತಪ್ಪೋ 🙂
ಬೈಲಿನವರ ಅಂಬಗ೦ಬಗ ಬಂದು ಮಾತಾಡ್ಸಿಕ್ಕಿ ಹೋಗಿ 🙂
ಸತ್ಯಣ್ಣೋ…, ಸೌಖ್ಯವೆಯೋ…?
ಹೋಳಿಗೆ ಹಂಚಿನ ಉದ್ದುಲೇ ಹಿಡಿಸೂಡಿ ಹಿಡ್ಕೊತ್ತ ಕಾರಣ” ಸತ್ಯಣ್ಣ ಕೇಜ್ರಿವಾಲನ ಪಾರ್ಟಿ ಅಡ” ಹೇದು ಓ ಮನ್ನೆ ನೆಗೆಮಾಣಿ ಪೆಕೆ ಪೆಕೆ ಮಾಡ್ಯೊಂಡಿತ್ತಿದ್ದ.
* ಸತ್ಯಣ್ಣೋ ಆಯೆಕ್ಕಾತಪ್ಪೋ…. 🙁
ಹೆ ಹೆ ಹೆ….
ಅಡಿಗೆ ಅತ್ಯಣ್ಣೋ ಬತ್ತೆ ಬಂದೆಯೋ… ಸ್ವಾಗತಂ.
ಸತ್ಯಣ್ಣನೂ ವಾಟ್ಸ್ ಏಪಿನ ಗುಂಪಿಲಿ ಗೋವಿಂದಾ ಆದಿಕ್ಕು ಹೇಳಿ ಗ್ರೇಷಿತ್ತಿದ್ದೆ… ಪುನ ಬೈಲಿಂಗೆ ಬಂದ ಅಲ್ಲದಾ?… 🙂