Oppanna.com

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 55

ಬರದೋರು :   ಚೆನ್ನೈ ಬಾವ°    on   09/04/2015    6 ಒಪ್ಪಂಗೊ

ಚೆನ್ನೈ ಬಾವ°

1.
ಅಡಿಗೆ ಸತ್ಯಣ್ಣ° ಮವ್ವಾರಿಂಗೆ ತ್ರಿಕಾಲಪೂಜೆ ಅನುಪ್ಪತ್ಯಕ್ಕೆ ಹೋದ್ಸು ಅಡಿಗ್ಗೆ
ಬಟ್ಟಮಾವಂಗೆ ತ್ರಿಕಾಲಪೂಜೆ ಹೇದರೆ ಮೂರೊತ್ತಿಲ್ಲಿ ನಿವೃತ್ತಿ ಅಕ್ಕು ಆದರೆ ಅಡಿಗೆ ಸತ್ಯಣ್ಣಂಗೆ ಮುನ್ನಾಣದಿನಂದ ಮರದಿನ ಉದಿಯಪ್ಪಾಣ ಏರ್ಪಾಡು ಸೇರಿಯಪ್ಪಗ ಐದೊತ್ತಾಣದ್ದಾವುತ್ತಿದ
ರಮ್ಯ ಕಾಲೇಜಿಂಗೋದೋಳು ಬಸ್ಸಿಲ್ಲಿ ಬಂದು ಪೆರ್ಲಲ್ಲಿ ಇಳಿವಾಗ ಮೂರ್ಸಂಧಿ ಆಯಿದು. ಕಂಡಾವಟ್ಟೆ ತಲೆಶೆಳಿವಲೆ ಸುರುವಾತು. ನಡಕ್ಕೊಂಡು ಮನಗೆ ಹೋಪಲೆ ಎಡಿಯಲೇ ಎಡಿಯ ಹೇಳ್ತ ನಮೂನೆ.
ಸರಿ ಅಪ್ಪ° ಮನೆಲಿದ್ದರೆ ಪೆರ್ಲಕ್ಕೆ ಬೈಕು ತಪ್ಪಲೆ ಹೇಳ್ವೋಲಿ ಅಪ್ಪಂಗೆ ಫೋನ್ ಮಾಡಿ ಕೇಟತ್ತು –“ಅಪ್ಪ° ಎಲ್ಲಿದ್ದಿ?”.
ಸತ್ಯಣ್ಣ ಫೋನ್ ತೆಗೆದವ° ಹೇದ° – ಮವ್ವಾರಿಲ್ಲಿದ್ದೆ. ನೀಯೆಲ್ಲಿದ್ದೆ?
ರಮ್ಯ ಹೇತು – ಆನು ಪೆರ್ಲಲ್ಲಿ ಬಸ್ಶುಸ್ಟೇಂಡಿಲ್ಲಿ ಇದ್ದೆ.
ಅಡಿಗೆ ಸತ್ಯಣ್ಣ ಏವ ತೆರಕ್ಕಿಲ್ಲಿ ಇತ್ತಿದ್ದನೋ ಏನೋ… ಅಲ್ಲಿಂದಲೇ ಬೊಬ್ಬೆ ಹೊಡದ° – ಈ ಮೂರ್ಸಂಧಿ ಅಪ್ಪಗ ಅಲ್ಲಿ ಎಂತ ಮಾಡ್ಸು ನೀನು., ಹೋಗು ಬೇಗ ಮನಗೆ. 😀adige satyanna
ಈ ಅಪ್ಪಂಗೆ ಇನ್ನೀಗ ಎಂತ ಹೇದರೂ ತಲಗೆ ಹೊಕ್ಕ ಹೇದು ಆತಪ್ಪ° ಹೇದಿಕ್ಕಿ ಪೆರ್ಲಂದ ಮತ್ತೆ ರಿಕ್ಷ ಮಾಡ್ಯೊಂಡು ಹೋತಪ್ಪ 😀

~~
2.
ಅಡಿಗೆ ಸತ್ಯಣ್ಣ° ಪಡಿಪ್ರೆ ಮದುವೆ ಕಳಿಶಿಕ್ಕಿ ಸಮ್ಮಾನದ ಅಡಿಗೆ ತೆರಕ್ಕಿಲ್ಲಿ ಇತ್ತಿದ್ದ ಅದಾ
ಸಮ್ಮಾನಕ್ಕೆ ಮೈಸೂರು ಪಾಕು ಆಯೇಕು.
ಸಮ್ಮಾನಕ್ಕೆ ಮಾಂತ್ರ ಆದರೆ ಸಾಲನ್ನೆ. ರಜಾ ಒಳಿಯೆಕ್ಕನ್ನೆ ಹತ್ರಾಣೋರಿಂಗೆ ಕಟ್ಟಿ ಕೊಡ್ಳೂ ಮತ್ತೆ ನಾಕು ದಿನಕ್ಕೆ ಹಂಚಲೂ
ರಂಗಣ್ಣನ ಸಾಥ್ ಇಪ್ಪಕ್ಕಾರಣ ಗೆಡಿಬಿಡಿ ಹೇದು ಇಲ್ಲದ್ದೆ ಮೈಸೂರುಪಾಕ್ ಕೆಲಸ ತೆರಕ್ಕಿಲ್ಲಿ ಆಗ್ಯೊಂಡಿತ್ತಿದ್ದು ಸತ್ಯಣ್ಣಂಗೆ
ಅಷ್ಟಪ್ಪಗ ರಂಗಣ್ಣನ್ನದೊಂದು ಕೊಕ್ಕೆ – ಅಪ್ಪೋ ಮಾವ° ., ಮೈಸೂರು ಪಾಕ್ ಹೇದು ಇಪ್ಪಾಂಗೆ ಮಡಿಕೇರಿ ಪಾಕ್, ಸುಳ್ಯಪಾಕ್, ಮುಳ್ಳೆರಿಯಪಾಕ್ ಹೇದು ಏಕೆ ಇಲ್ಲೆ?
ಸತ್ಯಣ್ಣ ಹೇದ° – ಮೈಸೂರಿಂದ ಪಾಕಿಂಗೆ ರೈಲು ಇದ್ದಿಕ್ಕು ಅಂಬಗ ಆದರೆ ನೀ ಹೇಳ್ತ ಮಡಿಕೇರಿ ಸುಳ್ಯ ಮುಳ್ಳೆರಿಯಂದೆಲ್ಲ ಇದ್ದಿರ. ನೀ ಬೇಕಾರೆ ತಮಿಳುನಾಡಿಂಗೆ ಹೋಗು. ಅಲ್ಲಿ ವೆತ್ತಿಲೈ ಪಾಕ್ ಹೇದು ಸಿಕ್ಕುಗು ನಿನಗೆ 😀
~~
3.
ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯ ಅಡಿಗೆ ಇಪ್ಪದು ಅಪ್ಪು, ಅನುಪ್ಪತ್ಯ ಅಡಿಗ್ಗೆ ಹೋಪಗ ಅಡಿಗೆ ಸತ್ಯಣ್ಣನತ್ರೆ ಮೊಬೈಲು ಇಪ್ಪದೂ ಅಪ್ಪು.
ಕೆಲಸದೆಡಕ್ಕಿಲ್ಲಿ ಅದರ ಗುರುಟ್ಳಾಗ ಹೇಳ್ತ ನಿಯಮ ಅಡಿಗೆ ಸತ್ಯಣ್ಣಂಗೆ ಇಪ್ಪದಾದರೂ ಕೆಲಸ ಮುಗುಶಿಕ್ಕಿ ಅದರ ಗುರುಟುತ್ತಕ್ಕೆ ಅಡಿಗೆ ಸತ್ಯಣ್ಣನ ಅಡ್ಡಿಯೂ ಇಲ್ಲೆ.
ಅಡಿಗೆ ಸತ್ಯಣ್ಣನೂ ಮೊಬೈಲು ಗುರುಟಿಯೊಂಡು ಕೂರುಗು ವಾಟ್ಸಪ್ಪಿಲ್ಲಿ ಎಂತ ಬಯಿಂದು, ಮೋರೆಪುಟಲ್ಲಿ ಎಂತ ಹಾಕಿದ್ದವು, ಬೈಲಿಲಿ ಎಂತ ಹೇಳ್ತವು ಹೇದು ನೋಡ್ಳೆ.
ಕುಂಟಾಂಗಿಲ ಬಾವಯ್ಯಂಗೆ ಎಲ್ಯಾರು ಆಟಕ್ಕೆ ಹೋದಲ್ಲಿ ಅಲ್ಲಿಂದ ಕೆಲವೊಂದು ಸ್ವಾರಸ್ಯಂಗಳ ರೆಕಾರ್ಡು ಮಾಡಿ ವಾಟ್ಸಪ್ಪಿಲ್ಲಿ ನೇಲ್ಸುತ್ತ ಕ್ರಮ ಇದ್ದಿದಾ. ಅದು ಅಡಿಗೆ ಸತ್ಯಣ್ಣಂಗೂ ಹಂಚಿಕೆ ಆವ್ತು. ಅಡಿಗೆ ಸತ್ಯಣ್ಣನೂ ಅದರ ನೋಡಿ ಕೇಟು ಕೊಶಿಪಟ್ಟುಗೊಂಬುದು ಇದ್ದು.
ಮನ್ನೆ ಬದಂತ್ತಡ್ಕ ಅನುಪ್ಪತ್ಯಕ್ಕೆ ಅಡಿಗೆ ಸತ್ಯಣ್ಣ ಮುನ್ನಾಣ ದಿನವೇ ಹೋದಲ್ಯಂಗೆ ಕುಂಟಾಂಗಿಲ ಬಾವನ ಯಕ್ಷಗಾನ ಹಾಡುಗೊ ಬಪ್ಪಲೆ ಸುರುವಾತು.
ಅಡಿಗೆ ಸತ್ಯಣ್ಣನ ಮೊಬೈಲಿಲಿ ಇರ್ಸು ಬಿ.ಎಸ್.ಎನ್.ಎಲ್ಲು ನೆಟ್ಟು ಇದಾ… ಪಕ್ಕಕ್ಕೆ ಮಣ್ಣ ಸಿಕ್ಕಿಕ್ಕ., ಸಿಕ್ಕಿರೂ ನೇರ್ಪಕ್ಕೆ ಅದರ್ಲಿ ನೇಲ್ಲೆ ಎಡಿಯ.
ಅಡಿಗೆ ಸತ್ಯಣ್ಣ ಹೇದ° – ನೀ ರಜಾ ಕೆಳದಿಕೆ ನೇಲ್ಸು , ಅಷ್ಟೆತ್ತರಕ್ಕೆ ನೀ ನೇಲ್ಸಿರೆ ಎನಗಿಲ್ಲಿ ಇಳಿಶಿಗೊಂಬಲೆ ಎಡಿತ್ತಿಲ್ಲೆ 😀
~~
4
ಬದಂತಡ್ಕಂದ ಅನುಪ್ಪತ್ಯ ಕಳಿಶಿಕ್ಕಿ ಮನಗೆ ಎತ್ತಿಯಪ್ಪದ್ದೆ ಅಡಿಗೆ ಸತ್ಯಣ್ಣಂಗೆ ಅದೆಂಸೋ ಕೈ ಬೇನೆ ಸುರುವಾತಡ
ಅಂದೊಂದರಿ ಹಲ್ಲು ಬೇನೆ ಆದಿಪ್ಪಗ ಡಾಕುಟ್ರಣ್ಣ ಅದೆಂಸೋ ಹಲ್ಲಿನೊಡಿ ಹೇದು ಹಲ್ಲುತಿಕ್ಕಲೆ ಕೊಟ್ಟಿತ್ತವಡ ಅಡಿಗೆ ಸತ್ಯಣ್ಣಂಗೆ ಒಂದು ಕರಡಿಗೆಲಿ ಹಾಕಿ.
ಅದರ ಹಾಕಿ ಹಲ್ಲು ತಿಕ್ಕಿದ ಮತ್ತೆ ಹಲ್ಲು ಬೇನೆ ಬಯಿಂದಿಲ್ಲೆಡ ಅಡಿಗೆ ಸತ್ಯಣ್ಣಂಗೆ.
ಈಗ ಕೈಬೇನೆ ಅಪ್ಪಗ ಆ ಹಲ್ಲಿನೊಡಿ ನೆಂಪಾತು ಅಡಿಗೆ ಸತ್ಯಣ್ಣಂಗೆ.
ಆಡಿಗೆ ಸತ್ಯಣ್ಣ ಡಾಕುಟ್ರಣ್ಣಂಗೆ ಫೋನ್ ಮಾಡಿ ಕೇಟ° – “ಅಂದು ನಿಂಗ ಹಲ್ಲು ಬೇನಗೆ ಕೊಟ್ಟ ಹೊಡಿ  ಕೈ ಬೇನೆಗೂ ಅಕ್ಕೋ ಡಾಕುಟ್ರಣ್ಣ?! 😀
~~
5.
ಅಡಿಗೆ ಸತ್ಯಣ್ಣನ ಎಜಮಾಂತಿಯ ಅಪ್ಪನ ಮನೆಲೆ ಸಣ್ಣಕೆಂಸೋ ಅನುಪ್ಪತ್ಯ ಹೇದು ಶಾರದಕ್ಕೆ ಮುನ್ನಾಣ ದಿನವೇ ಅಪ್ಪನ ಮನಗೆ ಹೋಗಿ ಆಗಿತ್ತು.
ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯಕ್ಕೆ ಹೋಪಲಿತ್ತಿದ್ದ ಕಾರಣ ಅಡಿಗೆ ಸತ್ಯಣ್ಣ ಉದಿಗಾಲಕ್ಕೇ ಎದ್ದು ಹೆರಟು ನಿಂದ°
ಅಂದು ಆದಿತ್ಯವಾರ ಆದ ಕಾರಣ, ಮರದಿನ ಕೋಲೇಜಿಲ್ಲಿ ಪರೀಕ್ಷೆ ಇತ್ತಿದ್ದಕಾರಣ ಮಗಳು ರಮ್ಯ ಎಲ್ಲಿಗೂ ಹೆರಡದ್ದೆ ಮನೆಲಿ ಕೂದತ್ತು.
ನಿನ್ನಾಣ ಅಶನ ಇದ್ದು, ಉದಿಯಪ್ಪಂಗೆ ಬೇಕಾರೆ ಚಿತ್ರಾನ್ನ ಮಾಡಿಗೊ ಹೇದು ಮಗಳತ್ರೆ ಹೇದಿಕ್ಕಿ ಅಡಿಗೆ ಸತ್ಯಣ್ಣ ಹೆರಟ°
ಅಡಿಗೆ ಸತ್ಯಣ್ಣ ಅನುಪ್ಪತ್ಯ ಮನಗೆ ಎತ್ತಿಯಪ್ಪದ್ದೆ ಅಡಿಗೆ ಸತ್ಯಣ್ಣನ ಮೊಬೈಲಿಂಗೆ ರಮ್ಯನ ಫೋನ್ – “ಚಿತ್ರಾನ್ನ ಮಾಡ್ಳೆ ಏವ ಚಿತ್ರ ಇಪ್ಪ ಪಾತ್ರೆ ಮಡುಗೆಕ್ಕಪ್ಪ°?!” 😀

~~
6.
ಅಡಿಗೆ ಸತ್ಯಣ್ಣನ ಸಣ್ಣ ಮಗಳು ರಮ್ಯ ಸಣ್ಣ ಇಪ್ಪಾಗ ಜೋರು ತರ್ಕ ಮಾಡ್ಯೊಂಡಿತ್ತು ಹೇದು ಅಂದು ಹೇದ್ದು ನೆಂಪಿದ್ದೋ
ಆಚಕರೆ ಅನುಪ್ಪತ್ಯಕ್ಕೆ ಮಾರ್ಗಲ್ಲಿ ನಡಕ್ಕೊಂಡು ಹೋಗ್ಯೊಂಡಿಪ್ಪಗ ಮಾರ್ಗಲ್ಲಿ ಬಂದ ಬಸ್ಸಿನ ನಿಲ್ಲುಸಿ ಕಂಡೆಟ್ಟರನತ್ರೆ ಒಂದಾರಿ ಬಸ್ಸಿನ ಹೋರ್ನು ಹಾಕಲೆ ಹೇದ ಕತೆ ಹಳತ್ತೊಂದು ಆಯಿದಪ್ಪೋ
ಮನ್ನೆ ಆಚಕರೆ ಅಕ್ಕ° ಅದರ ಬಾಬೆಯ ಕರಕ್ಕೊಂಡು ಅಡಿಗೆ ಸತ್ಯಣ್ಣನ ಮನಗೆ ಬಂದಿಪ್ಪಗ ರಮ್ಯ ಅದರೊಟ್ಟಿಂಗೆ ಆಟ ಆಡ್ಯೊಂತ್ತಿದ್ದಿದ್ದು
ಎಡಕ್ಕಿಲಿ ಅದೆಂಸೋ ಸಮ ಆಗದ್ದಿಪ್ಪಗ ಬಾಬೆ ತರ್ಕ ಮಾಡ್ಳೆ ಸುರುಮಾಡಿತ್ತು.
ರಮ್ಯ ಅದರ ಎತ್ತಿಯೊಂಡು ಜಾಲಿಲಿ ನಿಂದೊಂಡು ಮೇಗೆ ಹಾರ್ಯೊಂಡಿತ್ತಿದ್ದ ಕಾಕೆಯ ತೋರ್ಸಿ – ಅದ ಪುಟ್ಟು ಕಾಕೆ ಹಾರುತ್ತು, ಅದಲ್ಲಿ ಕಪ್ಪು ಕಾಕೆ ಹೇದು ಮಂಙಣೆ ಮಾಡ್ಯೊಂತ್ತಿದ್ದು.
ಜೆಗಿಲ್ಲಿ ಕಾಲುನೀಡಿ ಕೂದೊಂಡು ಎಲಗೆ ಸುಣ್ಣ ಉದ್ದಿ ಮಡ್ಸಿಯೊಂಡು ಇತ್ತಿದ್ದ ಸತ್ಯಣ್ಣ ಕೇಟ° – ಅಪ್ಪೋ ಮಗಳು., ಅದು ಗೆಂಡು ಕಾಕೆಯೋ , ಹೆಣ್ಣು ಕಾಕೆಯೋ?! 😀
~~

7.

ಕುಂಟಾಂಗಿಲ ಬಾವ ಎಳಗಿಸಿದವು ಹೇದು ಅಡಿಗೆ ಸತ್ಯಣ್ಣ ಆಟಕ್ಕೆ ಹೋದ್ದು ಪದವಿಂಗೆ

ಅಡಿಗೆ ಸತ್ಯಣ್ಣ ಹೆರಟವು ಹೇದು ರಂಗಣ್ಣನೂ ಹೆರಟ. ರಮ್ಯ ಹೆರಟಿದಿಲ್ಲೆ. ಅದಕ್ಕೆ ತಲೆ ಶೆಳಿತ್ತು ಚೆಂಡೆಪೆಟ್ಟು ಕೇಟ್ರೆ

ಬಲಿಪ್ಪನ ಪದ. ಪಂಚವಟಿ – ವಾಲಿ – ಅತಿಕಾಯ – ಇಂದ್ರಜಿತು ಪ್ರಸಂಗಂಗೊ. ಉದಿವರೆಗಾಣ ಆಟ.

ಒಂದನೇ ಪ್ರಸಂಗ ಆತು, ಎರಡ್ನೇದು ಕಳಾತು. ಎಡೆಲಿ ಚಟ್ಟಂಬಡೆ ಚಾಯವೂ ಆತು

ಅತಿಕಾಯನ ಪ್ರವೇಶಕ್ಕಪ್ಪಗ ಬಲಿಪ್ಪಜ್ಜ° ಕೂದ್ಸು. ಅಷ್ಟಪ್ಪಗ ಅದಾ ಆಟಕ್ಕೆ ಕಳೆ ಏರಿತ್ತು.

ಅತಿಕಾಯನೂ ಲಾಯಕ ಆಯಿದು. ಸೀತೆಯ ರಾಮಗೆ ಕೊಟ್ಟು ಪದವೂ ಆತು

ಅಷ್ಟಪ್ಪಗದಾ ರಂಗಣ್ಣ ಕೇಟ° – ಅಪ್ಪೋ ಮಾವ°, ಅತಿಕಾಯ ಆರು?

ಅಡಿಗೆ ಸತ್ಯಣ್ಣ ಹೇದ° – ಅತಿಕಾಯ ರಾವಣನ ಮಗ° , ಅಷ್ಟೂ ಗೊಂತಾಯಿದಿಲ್ಯೋ ನಿನಗೆ. ಮತ್ತೆಂತರ ಆಟ ನೋಡ್ಸು ನೀನು 😀

ಪಾಪ ಅಡಿಗೆ ಸತ್ಯಣ್ಣಂಗೆ ಹಾಂಗೆ ಆಟದೋರ ಹೆಸರೆಲ್ಲ ಕೇಟ್ರೆ ಅರಡಿಯ ಹೇಳ್ಸು ನವಗೊಂತಿಲ್ಯೊ ಅಲ್ದ! 😀 😀

~~

6 thoughts on “ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 55

  1. ಸತ್ಯಣ್ಣಂಗೆ ಮತ್ತೆ ಸ್ವಾಗತ. ಅವನ ಅಡಿಗೆಯ ತೆರಕ್ಕಿಲ್ಲಿ ಅವಂಗೆ ಬೈಲಿನ ನೆಂಪಾದ್ದು ನಮ್ಮೆಲ್ಲರ ಪುಣ್ಯ.

  2. ಅದಾ …ಸತ್ಯಣ್ಣ .ತುಂಬಾ ಸಮಯ ಆತು ಮಿನಿಯಾ ಕಾಣದ್ದೆ . ಕೊಶಿ ಆತು

    * ಸತ್ಯಣ್ಣನತ್ರೆ ಆ ಹಳೆ ಮೊಬೈಲು ಇತ್ತಲ್ಲದಾ .ಅದೆಂತಾತು ?

    * ಅವಂಗೆ ಕೈ ಬೇನೆ ಆದ್ದದೇ ಆ ಹೊಡಿ ಲಿ ಹಲ್ಲು ತಿಕ್ಕಿ ಅಡೊ ಹೇಳಿ ಶುದ್ದಿ ಇದ್ದು . ಮತ್ತಾರೋ ಹೇಳಿದ ಪ್ರಕಾರ ಆ ಹೊಸಾ ಮೊಬೈಲು ತಿಕ್ಕಿ ತಿಕ್ಕಿ ಆಡ .( ಅದು ಕೆ ಪಿ ನಂಬೂದಿರಿ ದೋ ?)

  3. (ಅಪ್ಪೋ ಮಾವ°, ಅತಿಕಾಯ ಆರು)
    ಬಹುಶ ಅತ್ತಿರಸದ ವಿಷಯ ಕೇಳ್ತಿತ್ತರೆ ಆವುತಿತ್ತೋ ಏನೋ.

  4. ಸತ್ಯಣ್ಣನ ಕಾಣದ್ದೆ ತುಂಬಾ ದಿನ ಆತು…ಇಷ್ಟೊಂದು ಅನುಪ್ಪತ್ಯಗಳ ಒಟ್ಟಿನ್ಗೆ ಬ್ಯುಸಿ ಇದ್ದರೂ ಸತ್ಯಣ್ಣ ಟೈಮ್ ಮಾಡಿ ಇಲ್ಲಿ ಬಂದದ್ದು ನೋಡಿ ಸತೋಷ ಆತು…ಸತ್ಯಣ್ಣನ ಕಾರ್ಬಾರುಗಳ ಎಲ್ಲ ಕೇಳಿ ಹೊಟ್ಟೆ ತುಂಬ ನಗೆ ಬಂತು…ಹೀಂಗೆ ಮುಂದುವರಿತಾ ಇರಲಿ, ತುಂಬಾ ಸಂತೋಷ ಆವುತ್ತು

  5. ಬೈಲಿನ ಒಳನ್ಗೆ ಕಾಲು ಮಡುಗದ್ದೆ ಸುಮಾರು ದಿನ ಆಗಿತ್ತು ,ಸತ್ಯಣ್ಣನ ಕಾರ್ಬಾರುಗಳ ಓದಿ ನೆಗೆ ಬಂತು ,ಲಾಯಕ ಆಯಿದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×