Oppanna.com

ಎತ್ತೆಕ್ಕಾದಲ್ಲಿಗೆ ಎತ್ತುಸದ್ದೆ ಗಟ್ಟದ ಮೇಗೆ ನೀರೆತ್ತುವ ಎತ್ತಿನಹೊಳೆ ಯೋಜನೆ..!

ಬರದೋರು :   ಒಪ್ಪಣ್ಣ    on   04/09/2015    4 ಒಪ್ಪಂಗೊ

ಮನುಶ್ಯಂಗೆ ಎಷ್ಟಿದ್ದರೂ ಸಾಲ್ತಿಲ್ಲೆ.
ಇನ್ನೂ ಬೇಕು, ಇನ್ನೂ ಬೇಕು – ಹೇದು ಪುನಾ ಪುನಾ ಕಾಂಬದು.
ಹೊಟ್ಟೆ ಹಶುವಿನ ಶುದ್ದಿ ನಾವು ಕಳುದ ವಾರವೇ ಮಾತಾಡಿದ್ದು – ಪ್ರಾಯೋಪವೇಶದ ಸಂಗತಿಲಿ.
ಇದು ಹೊಟ್ಟೆ ಹಶು ಮಾಂತ್ರ ಅಲ್ಲ, ಜೀವನದ ಆಶೆಯ ಹಶು.
ತಿಂಬ ಹಶು, ಹೆಸರಿನ ಹಶು, ಪೈಶೆಯ ಹಶು – ಎಲ್ಲಾ ಹಶುಗಳೂ ಸೇರಿ ಒಟ್ಟಾರೆ ನಮ್ಮ ಲೋಕ ಲಗಾಡಿ – ಹೇದು ರಂಗಮಾವ ಪರಂಚುತ್ತವು ಒಂದೊಂದರಿ.
ಇದೇ ನಮುನೆ ಹಶು ಆಸರು ತಣಿಶಲೆ ಹೇದು ನಿಗಂಟು ಮಾಡಿದ ಒಂದು ಮಹಾ ಯೋಜನೆಯ ಬಗ್ಗೆ ನಿಂಗೊಗೆ ಗೊಂತಿಕ್ಕು. ಅಲ್ದೋ?
~
ಗಟ್ಟದ ಬುಡಂದ ಸಂದ್ರದ ಕರೆ ವರೆಂಗೆ ನಮ್ಮ ಪರಶುರಾಮ ಸೃಷ್ಟಿ – ಹೇದು ವಾಡಿಕೆ ಇದ್ದು.
ಒಳುದ ಜಾಗೆಯ ಹಾಂಗಲ್ಲ ಈ ಜಾಗೆ.
ಇಲ್ಯಾಣ ಜೈವಿಕ ವೈವಿಧ್ಯ, ವಾತಾವರಣ, ಭೌಗೋಳಿಕ ಪ್ರದೇಶ, ಎಲ್ಲವುದೇ ಗಟ್ಟದ ಮೇಗಾಣದ್ದರಿಂದ ಭಿನ್ನ.
ಕಣಿಗೊ, ಉಜಿರುಕಣಿಗೊ, ಪಾದೆಗೊ, ಉಜಿರುಪಾದೆಗೊ – ಎಲ್ಲವುದೇ ನೀರಿನ ಆಕರಂಗೊ. ಹಲವು ತೋಡುಗೊ, ಅದು ಹೋಗಿ ದೊಡ್ಡ ತೋಡಿಂಗೆ ಸೇರುದು.
ದೊಡ್ಡ ತೋಡುಗೊ ಹಳ್ಳಕ್ಕೆ ಸೇರುದು, ಹಳ್ಳಂಗೊ ಹೋಗಿ ಹೊಳೆಗೆ ಸೇರುದು, ಹೊಳೆ ಹೋಗಿ ನದಿಗೆ ಸೇರುದು, ನದಿ ಹೋಗಿ ಸಮುದ್ರಕ್ಕೆ ಸೇರುದು.
ಇದು ನಮ್ಮ ಊರಿನ ರಚನೆ.

~
ಅದೇ – ಕರ್ನಾಟಕದ ಮೇಗಾಣ ಭಾಗಕ್ಕೆ ಹೋದರೆ – ಅಲ್ಯಾಣ ರಚನೆ ಹೀಂಗಲ್ಲ.
ಅಲ್ಲಿ ಒರಿಶಕ್ಕೆ ಎರಡು ಮೂರು ತಿಂಗಳು ಮಳೆ ಬಕ್ಕು.
ಮತ್ತೆ ಹತ್ತು ತಿಂಗಳು ಮಳೆ ಇರ.
ಅದರ್ಲಿ ಆರು ತಿಂಗಳು ಒಣಕ್ಕಟೆ ಇಕ್ಕು.
ನಾಲ್ಕು ತಿಂಗಳು ಚಳಿ ಇಕ್ಕು.
ಆದರೆ, ನಮ್ಮ ಊರಿನ ಹಾಂಗೆ ಕಣಿ, ಉಜಿರುಕಣಿ, ಹಳ್ಳ, ತೋಡು – ಇತ್ಯಾದಿಗೊ ಇಲ್ಲೆ ಅಲ್ಲಿ.
ಅಲ್ಲಿಪ್ಪದು ಕೆರೆ.
ಪ್ರತಿ ಊರಿಂಗೊಂದು ದೊಡಾ ಕೆರೆ.
ಅಥವಾ, ದೊಡಾ ಕೆರೆಯ ಸುತ್ತ ಒಂದು ಊರು.
ಒರಿಶಲ್ಲಿ ಮಳೆ ಬಪ್ಪದು ಎರಡೇ ತಿಂಗಳಾದರೂ – ಆ ನೀರು ಹೋಗಿ ಈ ಕೆರೆಲಿ ಸೇರಿ ನಿಲ್ಲುತ್ತು.
ನೂರೆಕ್ರೆ, ಐನ್ನೂರೆಕ್ರೆ, ಸಾವಿರ ಎಕ್ರೆಯ ಕೆರೆಗಳಲ್ಲಿ ಎರಡು ತಿಂಗಳ ಮಳೆನೀರು ಪೂರ್ಣವಾಗಿ ನಿಂದು, ಅದು ಒರಿಶ ಇಡೀ ನೀರು ಕೊಡ್ತು.
ಆ ಊರಿಂಗೆ ಇಡೀ ಸಾಕಾವುತ್ತು ಆ ನೀರು.
ತಲೆತಲಾಂತರಂದ ಹೀಂಗೇ ನೆಡಕ್ಕೊಂಡು ಬಯಿಂದು ಅಲ್ಯಾಣ ಜೀವನಕ್ರಮ.

~
ಈಗ ಎಂತಾಯಿದು?
ಕೆಲವು ದಿಕ್ಕೆ ಕೆರೆಗೊ ಮುಚ್ಚಿದ್ದು. ಕೆರೆಗೊ ಇದ್ದರೂ- ಅದಕ್ಕೆ ಮಳೆನೀರು ಬಪ್ಪ ವೆವಸ್ತೆಗೊ ಮುಚ್ಚಿದ್ದು.
ಮಳೆನೀರು ಬತ್ತರೂ ಊರಿನ ಚರಂಡಿ ಕೊಳಕ್ಕಿನ ಪೂರಾ ಹಿಡ್ಕೊಂಡು ಬತ್ತು.
ಕೆರೆನೀರು ಉಪಯೋಗ್ಯ ಅಲ್ಲದ್ದೆ ಆಗಿ ಹೋಯಿದು.
ಮನುಶ್ಯನ ಹಾಂಗಾರಂದಾಗಿ ಪ್ರಕೃತಿಲಿ ಸರಿಯಾಗಿ ಮಳೆಯೂ ಆಉತ್ತಿಲ್ಲೆ.
ಅಧಿಕ ಪ್ರಸಂಗಂದಾಗಿ ಮಳೆ ಬಂದ ನೀರಿನ ಸಮಗಟ್ಟು ಹಿಡುದು ಮಡಗಲೂ ಎಡಿತ್ತಿಲ್ಲೆ.
ಹೀಂಗೆಲ್ಲ ಆಗಿ – “ಎಂಗೊಗೆ ಕುಡಿಯಲೆ ನೀರಿಲ್ಲೆ” – ಹೇದು ಅಯ್ಯೋ ಉಳ್ಳೋ ಬೊಬ್ಬೆ ಹೊಡವ ಹಂತಕ್ಕೆ ಬಯಿಂದು.
~
ಗಟ್ಟದ ಮೇಗೆ ಕುಡಿಯಲೆ ನೀರಿಲ್ಲೆ”, “ಬರೆಗ್ಗಾಲ ಬಂತೂ” – ಹೇದು ಮಂತ್ರಿ ಮಾಗಧರೂ ಬೊಬ್ಬೆ ಹೊಡವಲೆ ಸುರು ಮಾಡಿದವಡ.
ಹಾಂಗಾಗಿ ಎಂತ ಮಾಡುಸ್ಸು?
ಓ ಅತ್ಲಾಗಿ ಗಟ್ಟಂದ ಕೆಳ ಇಪ್ಪ ಊರಿಲಿ ಧಾರಾಳ ನೀರಿದ್ದು, ಅಲ್ಲಿಂದ ಎಳವ° – ಹೇದು ಒಬ್ಬ° ಬೋಚಬಾವ° ಸಲಹೆ ಕೊಟ್ಟನಾಡ.
ನಮ್ಮ ಊರಿಲಿ ನೀರು ತುಂಬ ಕಾಣ್ತು. ಎಂತಕೆ ಕಾಣ್ತು?
ಭೂಮಿಲಿ ನೀರು ಹಿಡುದು ನಿಂಬ ಕ್ರಮ ಇಲ್ಲೆ. ಒರತ್ತೆ ಆಗಿ ಸೀತ ಹರುದು ಹೋಪದೇ ಇದಾ.
ಹಾಂಗಾಗಿ ಎರಡು ತೋಡು, ಒಂದು ಹೊಳೆ ನೋಡಿದವಂಗೆ ಯಥೇಷ್ಟ ನೀರು ಕಾಣ್ತು.
ಎತಾರ್ತಲ್ಲಿ, ನಮ್ಮಲ್ಲಿ ಮಳೆ ಬಂದ ಕೂಡ್ಳೇ – ಅರ್ಧ ಗಂಟೆಲಿ ಆ ನೀರು ಹೊಳೆಲಿರ್ತು, ಎರಡು ದಿನಲ್ಲಿ ಸಮುದ್ರಲ್ಲಿ ಇರ್ತು!
ಆದರೆ ಗಟ್ಟದ ಮೇಗೆ ಹಾಂಗಲ್ಲ, ಪ್ರತಿ ಹನಿಯುದೇ ಸೀತಾ ಎತ್ತುದು ಕೆರೆಗೆ. ಅದಿರಳಿ.
ಈಗಾಣ ಆಲೋಚನೆ ಎಂತರ ಹೇದರೆ, ಇಲ್ಯಾಣ ನೀರಿನ ಮೇಗಂಗೆ – ಗಟ್ಟಕ್ಕೆ ತಿರುಗುಸುದು.
ಈ ಆಲೋಚನೆ ಅಂದೇ ಇತ್ತು – “ನೇತ್ರಾವತೀ ನದಿಯ” ಗಟ್ಟಕ್ಕೆ ಕೊಂಡೋಪದು – ಹೇದು.
ಆದರೆ, ಆ ನೇತ್ರಾವತಿಯ ಹೆಸರು ಕೇಳಿದ ಕೂಡ್ಳೇ, ನೇತ್ರಾವತಿಯ ನದಿ ನೀರು ಕುಡಿವ ಮಕ್ಕೊ ಪೂರಾ ಎದ್ದು ನಿಂದು ಗಲಾಟೆ ಸುರು ಮಾಡಿದವು.
ಹಾಂಗಾಗಿ ಅದರ ವಿರುದ್ಧ ಕುದುರೆಮುಖಂದ ಧರ್ಮಸ್ಥಳ ಆಗಿ ಕೊಡೆಯಾಲ ವರೆಂಗೆ ಜಗಳ ಸುರು ಆತು.
ಅದಕ್ಕೆ ಈಗ ಉಪಾಯಲ್ಲಿ “ಎತ್ತಿನಹೊಳೆ” ಯೋಜನೆ – ಹೇದು ಹೊಸ ಹೆಸರು ಮಡಗಿದ್ದವಡ.
~

ಓ ಅಲ್ಲಿ ಸಕಲೇಶಪುರನ್ದ ಗಟ್ಟ ಇಳ್ಕೊಂಡು ಬಪ್ಪಗ ಸಿಕ್ಕುವ ಕೆಂಪುಹೊಳೆ, ಎತ್ತಿನಹೊಳೆ ಇತ್ಯಾದಿ ಹೊಳೆಗೊ – ಕ್ರಮೇಣ ಗಟ್ಟ ಇಳುದು ಬಂದು ಕೆಳ ಸೇರ್ತು.
ನೇತ್ರಾವತಿಯ ಹೊಟ್ಟೆ ತುಂಬುಸುತ್ತು.
ಇದುವೇ ಮುಂದೆ ದೊಡ್ಡಜೀಜಿ ಆಗಿ ಕೊಡೆಯಾಲದ ಜೆನಂಗಳ ಆಸರು ತಣಿಶುದು.
ಆದರೆ, ಈಗಾಣ ಯೋಜನೆ ಪ್ರಕಾರ ಎತ್ತಿನ ಹೊಳೆಂದ ಪೈಪು ಹಾಕಿ ದೊಡ್ಡಾ ಪಂಪಿಲಿ ನೀರಿನ ಸೀತಾ – ಗಟ್ಟದ ಮೇಗಂಗೆ ಎತ್ತುಸುದಾಡ.
ಭೀಮಗಾತ್ರದ ಪೈಪುಗಳೂ ಬಂದು ಬಿದ್ದಿದು.
ನೀರು ಮಾಂತ್ರ ಅಲ್ಲ, ನೀರಾನೆಯೂ ಹೋಕು, ಅಷ್ಟು ದೊಡ್ಡ ಪೈಪುಗೊ!
ಇದರ್ಲಿ ನೀರು ತೆಕ್ಕೊಂಡು ಹೋಗಿ, ಓ ಅಲ್ಲಿ ದೊಡ್ಡಬಳ್ಳಾಪುರ, ತುಮ್ಕೂರು ಇತ್ಯಾದಿ ಊರುಗಳಲ್ಲಿ ಕುಡಿವ ನೀರಿನ ಯೋಜನೆ ಮಾಡುದಡ!

~
ಅದೇ ಮೊದಲಾಣ ಯೋಜನೆಯೇ ಆದರೂ – ಹೆಸರು ಮಾಂತ್ರ ಯೇವದೋ ಒಂದು ಸ್ಥಳೀಯ ಗುಡ್ಡೆಯ ಹೆಸರು ಮಡಗಿದ್ದವು.
ಹಾಂಗಾಗಿ ಮೊದಲಾಣ ಹಾಂಗೆ ಇಡೀ ನೀತ್ರಾವತಿಯ ಮಕ್ಕೊ ಎದ್ದು ನಿಂಬಲೆ ಇಲ್ಲೆ ಇದಾ.
ಎತ್ತಿನ ಹೊಳೆ ಹೇಳ್ತ ಹೊಳೆಕ್ಕರೆಲಿ ಆರೂ ಇಲ್ಲೆ. ಹಾಂಗಾಗಿ ಎಲ್ಲೋರುದೇ “ಇದು ನಮ್ಮದಲ್ಲ” – ಹೇದು ನಿರಾಳಲ್ಲಿ ಇದ್ದವು.
ಆದರೆ, ಇದೇ ಎತ್ತಿನಹೊಳೆ ಬಂದು ನೇತ್ರಾವತಿಯ ಹೊಟ್ಟೆ ತುಂಬುಸುದು – ಹೇಳ್ಸು ನವಗೆ ಅರ್ತ ಆಗೆಡದೋ?
ಅಬ್ಬೆಯ ಹೊಟ್ಟೆ ತುಂಬದ್ರೆ ಮಕ್ಕಳ ಸಾಂಕುದು ಹೇಂಗೆ?
ಅಬ್ಬೆಯೇ ಸೊರಗಿ ಹೋದರೆ ಮಕ್ಕೊ ಸೋಲವೋ?
ನೇತ್ರಾವತಿಯ ತುಂಬುಸುವ ಹೊಳೆಗಳ ಪೂರಾ ಪೈಪಿಲಿ ಕೊಂಂಡೋಗಿ ಗಟ್ಟಲ್ಲಿ ಕುಡಿವ ನೀರಿನ ಯೋಜನೆ ಮಾಡುದಾಡ!
ಕೊಡೆಯಾಲದೋರು ಕಡಲಿಂದ ಉಪ್ಪುನೀರು ಕುಡುದರೂ ಚಿಂತೆ ಇಲ್ಲೆ, ಗಟ್ಟದ ಮೇಗೆ ಇಪ್ಪೋರು ಚೀಪೆ ಚೀಪೆ ಈ ನೀರು ಕುಡಿಯಲಿ – ಹೇದು ಯೋಜನೆಯೋ?
ಸಮುದ್ರಕ್ಕೆ ನೀರು ಹೋಪ ಪ್ರಮಾಣ ಕಡಮ್ಮೆ ಆದರೆ – ಒತ್ತಡವ ಸರಿತೂಗುಸಲೆ ಉಪ್ಪುನೀರು ಒಳಾಂತಾಗಿ ಬಕ್ಕು.
ಕ್ರಮೇಣ ನಮ್ಮ ಬಾವಿಯ ಒರತ್ತೆಲಿಯೂ ಉಪ್ಪುನೀರು ತುಂಬುಗು – ಹೇದು ಕೆಲವು ಪಂಡಿತರ ಅಭಿಪ್ರಾಯ.
ಗಟ್ಟವ ಪೂರ ಕಡುದು ಪೈಪು ಹಾಕಿರೆ ಹಲವಾರು ಸಸ್ಯರಾಶಿಗೊ ಹಾಳಾವುತ್ತು – ಹೇದು ಮತ್ತೆ ಕೆಲವು ಪಂಡಿತರ ಅಭಿಪ್ರಾಯ.
ಗಟ್ಟಂದ ನೀರು ಕದ್ದರೆ, ಗಟ್ಟಕ್ಕೆ ನೀರಿಲ್ಲದ್ದೆ ಹಲವಾರು ಪ್ರಾಣಿಸಂಕುಲ, ಜೀವವೈವಿಧ್ಯಂಗೊ ನಿರ್ನಾಮ ಅಕ್ಕು -ಹೇದು ಮತ್ತೆ ಕೆಲವರ ಹೆದರಿಕೆ.
ಆದರೆ, ಅದೇನೂ ಇಲ್ಲದ್ದೆ ಪೈಪಿಲಿ ನೀರು ಸಾಗುಸಿ ಓ ಅಲ್ಲಿ ಗಟ್ಟದೋರ ಹೊಟ್ಟೆ ತಂಪು ಮಾಡ್ಳೆ ಸರ್ಕಾರ ಅಂತೂ ಸದಾ ಸಿದ್ಧ!

~
ಇದರಿಂದ, ಮಳೆಗಾಲದ ನೀರನ್ನೇ ಸರಿಯಾಗಿ ಜೋಡುಸಿ, ಕೆರೆಗಳಲ್ಲಿ ಹಿಡುದು ಮಡಗಿರೆ ಒಳ್ಳೆದಲ್ಲದೋ?
ಈಗಳೇ ಇಪ್ಪ ನೀರಾವರಿಯ ಸುಧಾರ್ಸಿ, ಕಾವೇರಿ ನದಿಯ ಕಾಲುವೆಗಳ ಸರಿ ಮಾಡಿಗೊಂಡು ಕೆರೆನೀರು ತುಂಬುಸಿ ಮಡಗಿರೆ ಒಳ್ಳೆದಲ್ಲದೋ?
ಯೇವ ರೀತಿ ಗಟ್ಟದ ಮೇಗೆ ಜೆನ ಜಾಸ್ತಿ ಆಯಿದೋ, ಅದೇ ರೀತಿ ನಮ್ಮ ಊರಿಲಿಯೂ ಜೆನ ಜಾಸ್ತಿ ಆಯಿದು.
ಕೊಡೆಯಾಲ, ಉಪ್ರಂಗಡಿ, ಧರ್ಮಸ್ಥಳ ಇತ್ಯಾದಿ ಊರುಗಳಲ್ಲಿಯೂ ಕುಡಿವ ನೀರಿನ ಅಗತ್ಯ ಜಾಸ್ತಿ ಆಯಿದು.
ಓ ಅಲ್ಲಿ ದೊಡ್ಡಬಳ್ಳಾಪುರಲ್ಲಿ ಮಾಂತ್ರ ಅಲ್ಲ.
ನಮ್ಮ ಊರಿನ ನೀರು ನವಗೆ ಬೇಖು.
ಅಲ್ಲದ್ದೆ, ಯೋಚನೆ ಇಲ್ಲದ್ದೆ ಯೋಜನೆ ಮಾಡಿರೆ ನಾಳೆ ನಮ್ಮ ಊರು ಬೆಳ್ಳಾಪುರ ಇಪ್ಪದು ಬಳ್ಳಾಪುರವೇ ಅಕ್ಕು.
ಎತ್ತೆಕ್ಕಾದ ನೀರು ಎತ್ತೆಕ್ಕಾದಲ್ಲಿಗೇ ಎತ್ತೆಕ್ಕು. ಅದರ ಪೈಪಿಲಿ ಎತ್ತಿ ಎಲ್ಲೆಲ್ಲಿಗೆ ಎತ್ತುಸಿರೆ ಬೆತ್ತ ತೆಗೇಕಕ್ಕು. ಅಲ್ದೋ?
ಎಂತ ಹೇಳ್ತಿ?

~
ಒಂದೊಪ್ಪ: ಅಬ್ಬೆಯ ಬಾಯಿಗೆ ನೀರು ಸಿಕ್ಕದ್ದರೆ ಮಕ್ಕೊಗೆ ಹಾಲೆಲ್ಲಿಂದ?

 

4 thoughts on “ಎತ್ತೆಕ್ಕಾದಲ್ಲಿಗೆ ಎತ್ತುಸದ್ದೆ ಗಟ್ಟದ ಮೇಗೆ ನೀರೆತ್ತುವ ಎತ್ತಿನಹೊಳೆ ಯೋಜನೆ..!

  1. ಸಮಯೋಚಿತ ಶುದ್ದಿ. ಯೋಜನೆಯ ಎಲ್ಲೋರು ವಿರೋಧಿಸೆಕಾದ್ದದೇ.

  2. ಸಕಲೇಶಪುರಂದ ಕೆಳ ಇಪ್ಪ ಮಂಜರಾಬಾದ್ ಕೋಟೆಂದ ನೋಡುವಾಗ ಪೈಪುಗಳ ಎಕ್ರೆಗಟ್ಲೆ ಜಾಗೆಲಿ ಮಡುಗಿದ್ದು ಕಾಣುತ್ತು.

  3. ಹರೇರಾಮ, ಒಳ್ಳೆ ವಿಷಯಂಗೊ [ವಿವರ] ಸಿಕ್ಕಿತ್ತು ಒಪ್ಪಣ್ಣ. ಸರಿಯಾದ ಯೋಚನೆ ಇಲ್ಲದ್ದ ಯೋಜನೆಂದಾಗಿ ಅದರ ಒಳ್ಳೆ ಫಲಂದ ಅಡ್ಡ ಪರಿಣಾಮವೇ ಹೆಚ್ಚು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×