Oppanna.com

ಶುಬತ್ತೆಯ ದೇವರೊಳ ನಾಯಿಗೇ ಜಾಗೆ ಇಲ್ಲೆಡ!

ಬರದೋರು :   ಒಪ್ಪಣ್ಣ    on   03/09/2010    84 ಒಪ್ಪಂಗೊ

ಕುಂಡಡ್ಕಲ್ಲಿ ಅಪುರೂಪದ ದೇವಕಾರ್ಯ ಕಳುದ್ದರ ನಾವು ಕಳುದವಾರ ಮಾತಾಡಿದ್ದು.

ದೊಡ್ಡ ದೇವರೊಳ ಬಟ್ಟಮಾವ ಮಣೆಮಡಿಕ್ಕೊಂಡು ಕೂದು ಮಂತ್ರ ಹೇಳುವಗ,
ಕುಂಡಡ್ಕ ಮಾವ ದೇವರ ಮಂಟಪದ ಎದುರು ಕೂದಂಡು ದೈವೀಕ ಕಾರ್ಯಂಗಳ ಮಾಡುದರೊಟ್ಟಿಂಗೆ,
ಉಂಬಲೆ ಕೂದೋರಿಂಗೆ ಬಳುಸಿ, ದೇವರಿಂಗೂ ಅವಕ್ಕೂ ಉಣುಸಿ, ಸಂತೋಷಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದ್ದರ –
ಕೂದು ನೋಡಿಗೊಂಡೇ ಇತ್ತಿದ್ದೆ ಮೊನ್ನೆ.
ಆ ಶುದ್ದಿಯ ನಾವು ಮಾತಾಡಿದ್ದನ್ನೇ!

ಅಲ್ಲಿಂದ ಊರಿಂಗೆ ಬಂದೂ ಆತು. ಊರಿಲಿ ಕೆಲವು ಕಾರ್ಯಂಗಳೂ ಕಳಾತು.
ದೊಡ್ಡಮಾಣಿ ಅತ್ತಾಳ – ಮದುವೆ – ಸಟ್ಟುಮುಡಿ, ಸಿದ್ದಿಬೈಲು ಮದುವೆ – ಸಟ್ಟುಮುಡಿ, ಜೋಗಿಮೂಲೆ ಮದುವೆ, ನಿಡ್ಡಾಜೆಲಿ ಪೂಜೆ,  ಗೋಕರ್ಣಲ್ಲಿ ನಮ್ಮ ಮಂಡಲದ ಬಿಕ್ಷೆ – ಹೋ! ಪುರುಸೊತ್ತೇ ಇಲ್ಲೆ ಊರಿನೋರಿಂಗೆ!
~
ಊರಿಲಿ ಮಾಂತ್ರ ಜೆಂಬ್ರದೂಟದ ಅಂಬೆರ್ಪು ಗ್ರೇಶಿದಿರೋ? ಅಲ್ಲಪ್ಪ!
ಇದೆಲ್ಲದರ ಎಡಕ್ಕಿಲಿ ಶುಬತ್ತೆ ಮನೆಲಿ ಸಣ್ಣಮಟ್ಟಿಂಗೆ ಪೂಜೆ!! ಊರ ಕ್ರಮಲ್ಲಿ!
ಅಪ್ಪೂಳಿ – ಆಶ್ಚರ್ಯ ಆತೋ?
ಬೆಂಗುಳೂರಿನ ನಮ್ಮ ಶುಬತ್ತೆಯ ಮನೇಲೇ – ಬೇರೆಲ್ಲಿಯೂ ಅಲ್ಲ.
~
ಶುಬತ್ತೆ ಹೇಳಿರೆ ನಮ್ಮ ತರವಾಡುಮನೆ ರಂಗಮಾವನ ಸೋದರತ್ತಿಗೆ.
ಶಂಬಜ್ಜನ ತಂಗೆಯ ಮಗಳು. ಪ್ರಾಯಲ್ಲಿ ರಜ ಸಣ್ಣ, ರಂಗಮಾವಂದ. ಬೆಂಗುಳೂರಿಂಗೆ ಕೊಟ್ಟದು ಅದರ.
ಪ್ರಕಾಶಮಾವ ಬೆಂಗುಳೂರಿಲಿ ದೊಡಾ ಒಯಿವಾಟುಗಾರ°. ಗೊಂತಿದ್ದನ್ನೇ!
ಅದಾಗಲೇ ಸುಮಾರು ಸರ್ತಿ ಮಾತಾಡಿದ್ದು ನಾವು ಅವರ ಬಗ್ಗೆ – ಪುನಾ ಪುನಾ ಪರಿಚಯ ಹೇಳಿರೆ ಒರಕ್ಕು ತೂಗುತ್ತು, ಆರೇ ಆದರೂ.

ಹಾಂಗೆ, ಶುಬತ್ತೆಯ ಬೆಂಗುಳೂರಿಂಗೆ ಕೊಡುವನ್ನಾರವೂ ಊರಿನ ಕೂಸು ಆಗಿತ್ತು.
ಬೆಂಗುಳೂರಿಂಗೆ ಹೋದ್ದೇ ಹೋದ್ದು, ಬೆಂಗುಳೂರಿನ ಹೆಮ್ಮಕ್ಕೊ ಆಗಿ ಬಿಟ್ಟತ್ತು.
ಅಲ್ಯಾಣ ಕ್ರಮಂಗೊ, ಅಲ್ಯಾಣ ಜೀವನ ಶೈಲಿ, ಅಲ್ಯಾಣ ಆಚರಣೆಗೊ, ಅಲ್ಯಾಣ ವ್ರತಂಗೊ – ನಮ್ಮ ಊರಿನ ಹೆಮ್ಮಕ್ಕೊಗೆ ಕಂಡು ಗೊಂತಿಲ್ಲದ್ದ ಎಷ್ಟೋ ಹೊಸ ಹೊಸ ವಿಧಾನಂಗೊ ಅದರದ್ದಾತು.
ಅಲ್ಲಿಗೆ ಹೊಕ್ಕಿಹೆರಡ್ತ ಹೆಮ್ಮಕ್ಕೊಗೆ ಒಂದು ರವಕ್ಕೆ ಕಣ ಧರ್ಮಕ್ಕೇ ಸಿಕ್ಕುಗಡ.
ಅಂದೊಂದರಿ ಮಾಲಚಿಕ್ಕಮ್ಮ – ಮಾಲಚಿಕ್ಕಮ್ಮ ಹೇಳಿರೆ ರಂಗಮಾವನ ಕಾಸಾ ತಂಗೆ – ಮಾಲಚಿಕ್ಕಮ್ಮ ಬೆಂಗುಳೂರಿಂಗೆ ಹೋಗಿಪ್ಪಗ ಸಿಕ್ಕಿತ್ತಿದ್ದಡ – ಅರುಶಿನ ಬಣ್ಣದ ಗೆನಾ ರವಕ್ಕೆಕಣ! ಸಿಕ್ಕಿ ಅಪ್ಪಗ ಮಾಲಚಿಕ್ಕಮ್ಮಂಗೆ ತಡವಲೆಡಿಯದ್ದ ಕೊಶಿ.
ಮತ್ತೆ ಹೀಂಗೆ ಮಾತಾಡುವಗ ಆ ರವಕ್ಕೆಕಣ ಶುಬತ್ತೆಗೆ ಇನ್ನೊಂದು ಮನೆಲಿ ಕೊಟ್ಟದಾಗಿತ್ತು – ಹೇಳಿ ಗೊಂತಾದಮತ್ತೆ ಅದರ ಮನೆಕೆಲಸಕ್ಕೆ ಬತ್ತ ಸುಂದರಿಗೇ ಕೊಟ್ಟತ್ತಡ ಮಾಲಚಿಕ್ಕಮ್ಮ!

ಅದಿರಳಿ ಹೀಂಗಿರ್ತ ಸುಮಾರು ಪೇಟೆಕ್ರಮಂಗೊ ಶುಬತ್ತೆಯ ಮೈಗಿಡೀ ಸುಂದಿಗೊಂಡಿದು.
ಶನಿದೇವಸ್ತಾನಕ್ಕೆ ಶೆನಿವಾರ ಉದಿಯಪ್ಪಗ ಹೋಪದರಿಂದ ಹಿಡುದು, ರಾಯರ ಪೂಜೆ, ಅರ್ಚನೆ ಮಾಡುಸುದು, ಆಂಜನೇಯನ ಪೂಜೆ, ವರಮಹಾಲಕ್ಷ್ಮಿ, ರಾಹುಕಾಲ, ಗುಳಿಕಕಾಲ – ಹೀಂಗಿರ್ತ ಎಷ್ಟೋ ಪೇಟೆಮರಿಯಾದಿ ಶುಬತ್ತೆಯ ಅಂಗವೇ ಆಗಿ ಬಿಟ್ಟಿದು.

ಪ್ರಕಾಶಮಾವ ಅಂತೂ ಮರಬಿಟ್ಟ ಮಂಗನ ನಮುನೆ ಆಯಿದವು.
ಅತ್ಲಾಗಿ ಊರಿನ ಕ್ರಮಂಗೊ ಗೊಂತಿಲ್ಲೆ, ಪೇಟೆ ಕ್ರಮಂಗೊ ಅರಡಿತ್ತಿಲ್ಲೆ!
ಅಲ್ಲಿಯೂ ಅರಡಿಯ, ಇಲ್ಲಿಯೂ ಅರಡಿಯ! ಶುಬತ್ತೆ ಜೋರು ಮಾಡಿರೆ ಮಾಂತ್ರ ಅರಡಿಗಷ್ಟೇ! 😉
ಒಂದು ನಮೂನೆ ನೊಂಪಣ್ಣನ ನಮುನೆ!
~
ಅದಿರಳಿ,
ಮೊನ್ನೆ ಅವರಲ್ಲಿ ಪೂಜೆ ಹ್ಮ್, ಅಪುರೂಪಲ್ಲಿ ನಮ್ಮ ಊರ ಕ್ರಮಲ್ಲಿ ಪೂಜೆ ಮಾಡುಸಿದ್ದಡ.
ಅಲ್ಲೇ, ಅವರ ಮನೆಯ ಹತ್ತರೆ ಎಲ್ಲಿಯೋ ಒಬ್ಬ ಕಿಳಿಂಗಾರು ಬಟ್ಟಮಾವ ಇದ್ದವಡ ಅಲ್ಲದೋ –
ಅಮೈ ಮಾಷ್ಟ್ರಣ್ಣನೂ ಅಲ್ಲೇ ಇಪ್ಪದಲ್ಲದೋ ಬೆಂಗುಳೂರಿಲಿ – ಈ ಸರ್ತಿ ಅವಕ್ಕೆ ಹೋಪಲೆ ಆಯಿದಿಲ್ಲೆಡ, ಹಾಂಗಾಗಿ ಕಿಳಿಂಗಾರು ಮಾವ ಮಾಂತ್ರ ಬಂದದು.
~

ಅಂದೇ ಮಾಡುಸೆಕ್ಕಾತು, ಪ್ರಕಾಶಮಾವಂಗೆ ಪುರುಸೊತ್ತಾತಿಲ್ಲೆಡ.
ಒಯಿವಾಟಿನ ಲೆಕ್ಕಲ್ಲಿ ಒಂದರಿ ದುಬಾಯಿಗೆ ಹೋಪಲಿತ್ತಡ.
ಬಪ್ಪಗ ಪರಿಮ್ಮಳದ ನಾಕು ಮಾಪ್ಳೆ ಸೆಂಟು ತಯಿಂದವಡ, ಮಾಲಚಿಕ್ಕಮ್ಮಂಗೆ ಪರಿಮ್ಮಳ ಕೇಳಿರೆ ತಲೆಬೇನೆ ಅಕ್ಕೋ ಏನೋ!
ಅದಿರಳಿ, ಎಂತದೋ ಹೇಳುಲೆ ಹೆರಟು ಎಂತದೋ ಹೇಳಿ ಹೋವುತ್ತು ಒಂದೊಂದರಿ ಶುದ್ದಿ ಮಾತಾಡುವಗ!
~

ಮೊನ್ನೆ ಪೂಜೆ ಕಳಾತಲ್ಲದೋ – ಅದಕ್ಕೆ ನಮ್ಮ ಬೈಲಿಂದ ಬಿಂಗಿಪುಟ್ಟ ಹೋಗಿತ್ತಿದ್ದ.
ಅವಂದೇ ಈಗ ಬೆಂಗುಳೂರಿಲೇ ಇದ್ದ ಅಲ್ಲದೋ! – ಹಾಂಗಾಗಿ ನೆಂಪಿಲಿ ಶುಬತ್ತೆ ಪೋನು ಮಾಡಿ ಬಪ್ಪಲೆ ಹೇಳಿತ್ತು. ಹೋಗಿತ್ತಿದ್ದ.

ಅವ ಮೊನ್ನೆ ಶೆನಿವಾರ ಊರಿಂಗೆ ಬಂದಿತ್ತಿದ್ದ ಇದಾ.
ಸಿಕ್ಕಿಅಪ್ಪಗ ಈ ಪೂಜೆಯ ಶುದ್ದಿ ಎಲ್ಲ ಹೇಳಿದ.
~

ಮೂರು ಮಾಳಿಗೆ ಮನೆಡ ಶುಬತ್ತೆದು! ಜಾರಟೆ ನೆಲಕ್ಕ.ಒಬ್ಬೊಬ್ಬಂಗೆ ಒಂದೊಂದರ ಹಾಂಗೆ ದೊಡಾ ಕೋಣೆಗೊ – ಬೆಶ್ನೀರಕೊಟ್ಟಗೆ ಇಪ್ಪಂತಾದ್ದು.
ಹಾಸಿಗೆಯ ನಮುನೆ ಕುರ್ಚಿಗೊ, ಗಾಳಿ ತಿಂಬಲೆ ಉಯ್ಯಾಲೆಗೊ, ದೊಡಾ ಅಟ್ಟುಂಬೊಳ (ಅಡಿಗೆಕೋಣೆ), ದೊಡಾ ಉಂಬ ಕೋಣೆ, ದೊಡಾ ಓದುತ್ತ ಕೋಣೆ, ದೊಡಾ ಬದುಕ್ಕುತ್ತ ಕೋಣೆಗೊ..
ಮಾಳಿಗೆ ಮೇಲೆಯುದೇ ಅದೇ ನಮುನೆ ವೆವಸ್ತೆ!

~
ಶುಬತ್ತೆ-ಪ್ರಕಾಶಮಾವಂಗೆ ಇಬ್ರು ಮಕ್ಕೊ.
ದೊಡ್ಡಮಗಳು ಈಗ ಹತ್ತನೆಯೋ ಮಣ್ಣ ಆಯಿಕ್ಕು, ಎರಡ್ಣೇ ಮಾಣಿ ಈಗ ಆರನೆಯೋ ಮಣ್ಣ ಆಯಿಕ್ಕು.
ಇಬ್ರಿಂಗೂ ಅವರದ್ದೇ ಲೋಕದ ಕೋಣೆಗೊ.
ಅದರ್ಲಿ ಅವರ ಇಷ್ಟದ ಸಿನೆಮದ ಕಾಕತಂಗೊ ಗೋಡೆಲಿ ಅಂಟುಸಿಗೊಂಡು – ಇಷ್ಟದ ಗೊಂಬೆಗೊ ಹಾಸಿಗೆ ಮೇಲೆ ಹೊರಳಿಗೊಂಡು ಇರ್ತಡ.
ಹಾಸಿಗೆಯ ಮಡುಸುತ್ತ ಮರಿಯಾದಿ ಇಲ್ಲೆಡ, ಅಸೌಖ್ಯದ ಮನೆಯ ಹಾಂಗೆ ಯೇವತ್ತೂ ಹಾಸಿಗೆ ಬಿಡುಸಿಗೊಂಡೇ!
~
ಅದಿರಳಿ, ಹಾಂಗೆ ಬಿಂಗಿಪುಟ್ಟಂದೇ ಹೋದ ಪೂಜಗೆ.
ಬೆಂಗುಳೂರಿಲೇ ಇದ್ದರೂ ಪೆರ್ಲದಣ್ಣಂಗೆ ಬಪ್ಪಲಾಯಿದಿಲ್ಲೆಡ – ಎಂತದೋ ಬೇರೆ ಕೆಲಸದ ನಿಮಿತ್ತ!
ಹತ್ತು ಗಂಟಗೆ ಬಟ್ಟಮಾವ ಬಂದವು, ಸ್ಕೂಟರಿಲಿ.
ಪೂಜಗೆ ತಯಾರುಮಾಡ್ಳೆ ದೊಡ್ಡ ಕೆಲಸ ಏನಿಲ್ಲೆ.
ಎಲ್ಲ ತೆಯಾರಿ ಇಪ್ಪದರನ್ನೇ ತಂದು ಕೊಡ್ತವಡ ಬೆಂಗುಳೂರಿಲಿ.
ಹೂಗಿನ ಹರಿವಾಣ, ಮಾಲೆ, ತೊಳಶಿ ಕೊಡಿ, ಚೆಂಬು – ಎಲ್ಲವುದೇ!
ತಂದು ಚೆಂದಕೆ ಜೋಡುಸಿ ಮಡಗಿದ್ದರ ಎದುರು ಬಟ್ಟಮಾವ ಕೂದುಗೊಂಡವು.
~
ಕೂದುಗೊಂಡವು – ಎಲ್ಲಿ?
ಅಷ್ಟು ದೊಡ್ಡ ಮನೆಲಿ ಸಣ್ಣದಾದ ದೇವರಕೋಣೆ ಒಂದಿದ್ದು.
ಎಷ್ಟು ಸಣ್ಣದು ಹೇಳಿರೆ ತರವಾಡುಮನೆ ಪಂಪಿನಕೊಟ್ಟಗೆಂದಲೂ ಸಣ್ಣ! ಅಷ್ಟೇ ಅಲ್ಲ – ಬಟ್ಯನ ಕೋಳಿಗೂಡಿಂದಲೂ ಸಣ್ಣ!
ಬಿಂಗಿಪುಟ್ಟ ಬಿಂಗಿ ಬಿಟ್ಟಿದನಿಲ್ಲೆ, ಈಗಳೂ ಕೆಲಾವು ಸರ್ತಿ ಬಿಂಗಿಬಿಂಗಿ ಮಾತಾಡ್ತ!

ಹ್ಮ್, ಓದುತ್ತ ಕೋಣೆಂದ ಉಣ್ತ ಜೆಗಿಲಿಗೆ ಹೋಪ ದಾರಿಲಿ ಒಂದು ಸಣ್ಣ ಮರದ ಗೂಡು ಇದ್ದಡ.
ದೇವಸ್ತಾನದ ಗರ್ಬಗುಡಿಯ ಆಕಾರದ ಗೂಡು – ಸಣ್ಣದು – ಚೆಂದದ್ದು.

ಕಿಣಿಕಿಣಿ ಗಂಟೆ ಇಪ್ಪ ಬಾಗಿಲು

ಆ ಗೂಡಿಂಗೆ ಗರ್ಬಗುಡಿಯ ನೆಮುನೆಗೆ ಬಾಗಿಲು! ಬಾಗಿಲಿಲಿ ಕಿಣಿಕಿಣಿ ಗಂಟೆ – ತರವಾಡುಮನೆ ಹೋರಿಕಂಜಿಗೆ ಕಟ್ಟುತ್ತಷ್ಟು ದೊಡ್ಡದು.
ಅದೆಂತ ಆಡುಸಲೆ ಇಪ್ಪದಲ್ಲ, ಚೆಂದಕೆ!
ಬಾಗಿಲು ತೆಗದರೆ ಒಳ ಮೆಟ್ಳು ಮೆಟ್ಳು ದೇವರಿಂಗೆ ಜಾಗೆ ಇದ್ದಡ!
ಅದರ ಒಳದಿಕೆ ಸಣ್ಣಕೆ ಒಂದು ಲೈಟು-ಬಲ್ಬು ಎಲ್ಲ ಹೊತ್ತಿಗೊಂಡು ಇದ್ದಡ.
ಅಲ್ಲಿಪ್ಪ ಹಲವಾರು ದೇವರ ಪಟಂಗಳಲ್ಲಿ ಮದೂರು ಗೆಣಪ್ಪಣ್ಣಂದುದೇ ಇದ್ದಡ!
ಎಲ್ಲಾ ದೇವರುದೇ ಆ ಅಷ್ಟು ಸಣ್ಣ ಜಾಗೆಲಿ ಎಜೆಷ್ಟು ಮಾಡಿ ಕೂರೆಕ್ಕಿದಾ – ಪಾಪ!
ಆ ಮರದ ಗೂಡಿನ ಒಂದು ಸಣ್ಣ ಕೋಣೆಯ ನಮುನೆಯ ರಚನೆ ಒಳದಿಕೆ ಮಡಗಿದ್ದಡ.

ಅದೆಂತ ಕೋಣೆ ಹೇಳಿ ಕಟ್ಟಿದ್ದಲ್ಲ, ಆಚೀಚ ಗೋಡೆಗಳ ಸಂದಿಲಿ ರಜಾ ಜಾಗೆ ಇತ್ತು, ಅದರ ದೇವರಕೋಣೆ ಹೇಳಿ ಮಾಡಿಬಿಟ್ಟದಡ!

~
ತರವಾಡು ಮನೆಲೂ ದೇವರ ಕೋಣೆ ಇದ್ದು.
ಹೆರಾಣ ಜೆಗಿಲಿಂದ ಬಲತ್ತಿಂಗೆ ಕೈಸಾಲೆ ಇದ್ದಲ್ಲದೋ – ಅದರ ಒಳದಿಕೆ ನೆಡದರೆ ವಿಶಾಲವಾದ ದೇವರಕೋಣೆ.
ಶತರುದ್ರ ಮಾಡ್ತರೆ ಹತ್ತು – ಹದಿನೈದು ಜೆನ ಬಟ್ಟಕ್ಕೊಗೆ ಆರಾಮಲ್ಲಿ ಕೂಪಲೆಡಿತ್ತು.
ಶಂಬಜ್ಜನ ತಿತಿಯೋ ಮಣ್ಣ ಇದ್ದರೆ ಕ್ಷಣುವಿನವಕ್ಕೆ ಕೂದು, ಬಟ್ಟಮಾವಂದೇ ಇದ್ದುಗೊಂಡು, ರಂಗಮಾವಂಗೆ ಎಲ್ಲ ಕ್ರಮ ಮಾಡ್ತಷ್ಟು ಜಾಗೆ ಇದ್ದಲ್ಲಿ!
ಅತ್ಯಂತ ರಕ್ಷಿತವಾಗಿ ಕಾಕತ-ಪತ್ರಂಗೊ ತೆಗದು ಮಡಗುತ್ತ ಕಪಾಟು ಇಪ್ಪದುದೇ ಅಲ್ಲಿಯೇ!
ವಿಭೂತಿ, ಗಂಧದ ಕೊರಡು, ಇಂತಾದ್ದರ ಮಡಗಲೆ ವಿಶೇಶವಾದ ವೆವಸ್ತೆಗಳೂ ಅಲ್ಲಿಯೇ ಇಪ್ಪದು.

ದೇವಕಾರ್ಯ ಇತ್ಯಾದಿ ಆದರೆ ಎಲ್ಲ ಕಾರ್ಯಂಗಳನ್ನೂ ಮಾಡ್ಳೆ ದೊಡಾ ಅವಕಾಶ ಇಪ್ಪ ಕೋಣೆ –

ಎಲ್ಲ ಇಕ್ಕಟ್ಟಿಲೂ ರಂಗಮಾವಂಗೆ ನೀಟಂಪ ಮನುಗಿ ಸಾಷ್ಟಾಂಗ ನಮಸ್ಕಾರ ಮಾಡ್ಳಕ್ಕಾದ ಕೋಣೆ ಆಗಿರ್ತು ಇದು!
~
ಶುಬತ್ತೆಯ ದೇವರಕೋಣೆ ಅಷ್ಟು ಸಣ್ಣ ಆದ ಕಾರಣ ಅದರ ಎದುರಂಗೇ ಪೂಜೆ ಮಾಡಿದ್ದಡ.
ಪಟ ಮಡಗಲೆ ಸಣ್ಣ ವೆವಸ್ತೆ ಮಾಡಿ, ಅದರ ಎದುರೆ ಕಲಶ ಮಡಗಿ ತೂಷ್ಣಿಲಿ ಮಾಡ್ಳೆ ವೆವಸ್ತೆ ಇತ್ತಡ,
ಅನಿವಾರ್ಯವಾಗಿ ಬಟ್ಟಮಾವಂದೇ ಹಾಂಗೇ ಮಾಡಿದವಡ!
ಪೂಜೆ ಕಳಾತು, ಸಪಾದ – ಬೆಂಗುಳೂರಿನ ಅಡಿಗೆಬಟ್ಟಕ್ಕೊ ಮಾಡಿದ್ದು – ಸಪಾದ ತಿಂದಾತು, ಕಾಲು ಗಂಟೆಲಿ ಎಲ್ಲೊರುದೆ ಹೆರಟುದೇ ಆತು!

– ಬಿಂಗಿಪುಟ್ಟ ಹೇಳಿಗೊಂಡೇ ಹೋದ.

ಎಲ್ಲ ಗಮನ ಮಡಗಿ ಕೇಳಿರೂ, ಆ ದೇವರೊಳಾಣ ವಿಚಾರ ಒಂದು ಒಪ್ಪಣ್ಣಂಗೆ ಅನುಸಿಯೇ ಹೋತು.
~

ಹರಿಸೇವೆ -ದೇವಕಾರ್ಯ ಹೀಂಗಿರ್ತ ಅಪುರೂಪದ ಕಾರ್ಯಕ್ರಮ ನಮ್ಮೋರ ಮನೆಗಳಲ್ಲಿ ಅಪ್ಪದು ಕಮ್ಮಿ ಕಮ್ಮಿ ಆಗಿ, ಕೇವಲ ಕೆಲವು ತರವಾಡುಮನೆಗೊಕ್ಕೇ ಸೀಮಿತವಾಗಿ ಇಪ್ಪ ಪರಿಸ್ಥಿತಿ ಬಯಿಂದಲ್ಲದೋ – ಹೇಳಿ ಬೈಲಿನೋರೆಲ್ಲರೂ ಬೇಜಾರು ಮಾಡಿಗೊಂಡವು!
ಅದೇ ಶುದ್ದಿಯ ಯೋಚನೆಲೇ ಇತ್ತಿದ್ದು ನಾವೆಲ್ಲೊರುದೇ.
ಹಳೇ ಕಾಲದ ಮನೆಯ ಶೈಲಿ, ಅದರ ವಾಸ್ತು, ಅದರ ಕೋಣೆಗಳಲ್ಲಿ ಇಪ್ಪ ಕಸ್ತಲೆ, ಅಡಿಗೆಕೋಣೆಲಿ ಇಪ್ಪ ಹೊಗೆಯ ಪರಿಮ್ಮಳ, ಉಗ್ರಾಣದ ಹತ್ತರೆ ಇಪ್ಪ ಒಣಕ್ಕಟೆ ಪರಿಮ್ಮಳ, ವಿಶಾಲವಾದ ದೇವರಕೋಣೆಲಿ ಬಪ್ಪ ಗಂಧದ ಪರಿಮ್ಮಳ – ಇದೆಲ್ಲ ನೋಡ್ಳಾದರೂ ಶುಬತ್ತೆಯ ಮಕ್ಕೊ ಬರಳಿ ಹೇಳಿ ಅನುಸುತ್ತು ನವಗೆ!
ಕೂರ್ತ ಕೋಣೆ, ಮೀತ್ತ ಕೋಣೆ, ಬದುಕ್ಕುತ್ತ ಕೋಣೆ, ಅಡಿಗೆಕೋಣೆ, ಮನುಗುತ್ತ ಕೋಣೆ, ಆ ಕೋಣೆ, ಈ ಕೋಣೆ, ಎಲ್ಲವೂ ವಿಶಾಲ ಇದ್ದು ಶುಬತ್ತೆಯಲ್ಲಿ!
ಆದರೆ ದೇವರಕೋಣೆ ಮಾಂತ್ರ ಬಹು ಸಣ್ಣದು.
ಎಷ್ಟು ಸಣ್ಣದು ಹೇಳಿರೆ, ಅವರ ಮನೆಲಿ ನಿತ್ಯ ತಿರುಗುತ್ತ ನಾಯಿ ಆ ದೇವರಕೋಣೆಗೆ ಹೋವುತ್ತೇ ಇಲ್ಲೆಡ!

ದೇವರಕೋಣೆಯೊಳದಿಕೆ ಮಡುಗಿದ ಕುಂಞಿ ಮಂಟಪ ಹೀಂಗೇ ಇತ್ತಡ

ಎಂತ್ಸಕ್ಕೇ ಹೇಳಿತ್ತುಕಂಡ್ರೆ, – ಹೋದರೆ ಬಪ್ಪಲೆಡಿಯ, ಬಂದರೆ ಹೋಪಲೆಡಿಯ!
ನಾಯಿ ಬಯಂಕರ ದೊಡ್ಡ ಇದ್ದು, ಕೋಣೆಲಿ ಅದರ ದೇಹ ತಿರುಗ ಇದಾ..
~

ನಮ್ಮ ಪ್ರಾಮುಖ್ಯತೆ ಯೇವದಿದ್ದೋ – ಆ ಅಂಶಂಗೊ ದೊಡ್ಡ ಆವುತ್ತಡ, ಮಾಷ್ಟ್ರುಮಾವ° ಹೇಳುಗು.

ಜಿರಾಪೆಯ ಕೊರಳು ಉದ್ದ ಹಾಂಗೆ!
ತರವಾಡು ಮನೆಲಿ ದೇವರೊಳ ಅತ್ಯಂತ ಹೆಚ್ಚು ಕಾರ್ಯಂಗೊ ಅಕ್ಕು, ಹಾಂಗಾಗಿ ದೇವರೊಳ ದೊಡ್ಡ ಇದ್ದು!
ಶುಬತ್ತೆಗೆ ಅಡಿಗೆಯೂ, ಒರಕ್ಕುದೇ ಬಹುಮುಖ್ಯ, ಹಾಂಗಾಗಿ ಅದೆಲ್ಲ ದೊಡ್ಡ ದೊಡ್ಡ ಇದ್ದು!
ಎರಡು ಕೋಣೆಯ ನೆಡುಸರಂಗೆ ಒಳುದ ಗೋಡೆಯ ಒರುಂಕಿಲಿ ಇಪ್ಪ ಜಾಗೆಯನ್ನೇ ದೇವರಕೋಣೆ ಹೇಳಿ ಮಾಡಿಗೊಂಡದು ಕಂಡ್ರೆ ದೇವರಿಂಗೂ ಬೇಜಾರಕ್ಕು ಹೇಳಿದ ಬಿಂಗಿಪುಟ್ಟ!

ದೇವರಕೋಣೆ ಸಣ್ಣ ಆತು. ಅದರ ಒಟ್ಟಿಂಗೆ ದೇವರ ಮೇಗಾಣ ಭಕ್ತಿಯುದೇ!
ನಿತ್ಯದ ಒಯಿವಾಟಿನ ಒತ್ತಡಂಗಳ ಎಡೆಲಿ ದೇವರಿಂಗೆ ನೀಟಂಪ ಹೊಡಾಡ್ಳೆ ಪುರುಸೊತ್ತು ಎಲ್ಲಿದ್ದು ಬೇಕೆ.
ಅಂಬೆರ್ಪಿಲಿ ಹೆರಡ್ಳಪ್ಪಗ ಹೆರಾಂದಲೆ ಒಂದರಿ, ಒಂದು ಕೈಲಿ ನಮಸ್ಕಾರ ಮಾಡುದಡ. ಇಬ್ರಾಯಿ ಸಲಾಮು ಮಾಡ್ತ ನಮುನೆ!
ಅಷ್ಟಕ್ಕೆ ದೊಡಾ ದೇವರ ಕೋಣೆ ಎಂತ್ಸಕೆ – ಅಂತೆ ಜಾಗೆ ವೆರ್ತ- ಹೇಳಿಗೊಂಡು ಸಣ್ಣಕೆ ಮಾಡುದೋ ತೋರ್ತು.
ಅಂತೂ ಕೋಣೆ ಸಣ್ಣ ಆಗಿ ಮನಸ್ಸೂ ಸಣ್ಣ ಆಗಿ ದೇವರ ನೆಂಪೂ ಬಾರದ್ದೆ ಹೋತು. ಅದರ ಪರಿಣಾಮ ಕಾಣದ್ದೇ ಇಕ್ಕೊ!
ಆರೋಗ್ಯ ಹೆಚ್ಚು ಹೆಚ್ಚು ಹಾಳಪ್ಪಲೆ ಸುರು ಆತು. ಆಸ್ಪತ್ರೆಗೊ ತುಂಬುಲೆ ಸುರು ಆತು!
ಆಸ್ಪತ್ರೆ ಕಟ್ಟುಸಿದಷ್ಟೂ ಅದರಲ್ಲಿ ಜನ ಸಮಲಿಗೊಂಡೇ ಇರ್ತು!
ಶಂಬಜ್ಜನ ಕಾಲಲ್ಲಿ ಹೀಂಗೆ ಇತ್ತೋ?

ಒಂದಲ್ಲಾ ಒಂದು ಕಾಲಕ್ಕೆ ಊರು ಬಿಟ್ಟು, ಊರಿನ ಜೆನಜೀವನವನ್ನುದೇ, ಜೀವನ ಶೈಲಿಯನ್ನುದೇ ಬಿಟ್ಟು ದೂರ ಹೋಗಿ ಹೊಸ ಪರಿಸರಲ್ಲಿ ಹೊಸ ಹೊಸಜಗತ್ತಿಂಗೆ ಬೇಕಾದ ಹಾಂಗೆ ಹೊಸ ಜೀವನ ನಡೆಶುಲೆ ನಮ್ಮೋರು ಬಂಙ ಬತ್ತವಲ್ಲದ, ಅದರ ಕಂಡ್ರೆ ಬೇಜಾರಾವುತ್ತು ಭಾವ!
~
ಒಂದೊಪ್ಪ: ದೇವರೊಳ ಸಣ್ಣ ಆತು, ಆಸ್ಪತ್ರೆ ದೊಡ್ಡ ಆತು

ಸೂ: ಬೈಲಿನ ಶುಬತ್ತೆಗೂ, ನಿಜವಾದ ಶುಬತ್ತೆಗೂ ಯೇವದೇ ಸಂಬಂದ ಇಲ್ಲೆ. ಪ್ರಕಾಶಮಾವನೂ ಹಾಂಗೇ! 😉balenciaga schoenen verkoop

84 thoughts on “ಶುಬತ್ತೆಯ ದೇವರೊಳ ನಾಯಿಗೇ ಜಾಗೆ ಇಲ್ಲೆಡ!

  1. ಓಪ್ಪಣ್ಣ.ಕೊಮ್.ಲಿ ಕನ್ನಡ ಲ್ಲಿ ಟ್ಐಪ್ ಮಾಡ್ಲೆ ಒಪ್ಪಣ್ಣನೇ ಸೌಕರ್ಯ ಮಾಡಿ ಕೊಟ್ೞ್ಟಿದ.ಕನ್ನಡ ಕೀಲಿ ಮಣೆ ನೋಡಿ ಫ್ರಯತ್ನ ಮಾಡಿ.succes is yours.

    1. ನಿಂಗೋಗೆ ಅನಂತಾನಂತ ಧನ್ಯವಾದನ್ಗೋ !!
      ನಿಂಗಳ ಕುವೈಟಿಲಿ ಎಷ್ಟು ಜೆನ ಹವ್ಯಕ ಬ್ರಾಹ್ಮಣರು ಇದ್ದವು ?ಇಲ್ಲಿ ಆನಿಪ್ಪ ಯು ಎ ಇ ಲಿ ನೂರರ ಮೇಲೆ ನಮ್ಮ ಹವ್ಯಕ ಕುಟುಮ್ಬಂಗೋ ಇದ್ದವು !!!!!!!ಅಪ್ಪಲೇ ಇಲ್ಲಿ ಹವ್ಯಕ ಸಂಘವೇ ಇದ್ದು !! ಆದರೆ ಎಂಥ ಮಾಡೋದು ಇಂಥ ಒಂದು ಒಳ್ಳೆ ಬ್ಲಾಗ್ ಸೈಟ್ ನ ಒಳುಶುವ ಮನಸ್ಸಿಲ್ಲೆನ್ನೇ ಹೇಳಿ ಬೇಜಾರಾವುತ್ತು !!!!ಆನು ಈ ಇಲ್ಲಿಯ ಹವ್ಯಕ ಸಂಘ ಶುರುವಪ್ಪಗ ಇತಿದ್ದೆ !!! ಒಂದು ವಿಷಯವ ಈ ಬಯಲಿಲಿ ಎತ್ತಿ ಕೊಡ್ತಾ ಇದ್ದೆ !!!!!!!ಅಲ್ಲಯ್ಯಾ ನಿಂಗಳಲ್ಲಿ ನಮ್ಮ ಸರ್ಪಂಗಳದವು ಇದ್ದವಲ್ಲದ ಅದು ನಿಂಗಳೆಯಾ!!!!!!!!!?ನಮ್ಮ ಹರ್ಷ ಮೆಡಿಕಲ್ ನ ವೇಣು ವಿನ ತಮ್ಮ ?

  2. ಕೃಷ್ಣಮೋಹನ ರೇ ನಿಂಗೋ ಎಂಥಾ ಇಂಗ್ಲೀಶಿಲಿ ನಮ್ಮ ಹವ್ಯಕ ಭಾಷೆಯ ಬರವದು ??!!
    ಕನ್ನಡ ಫಾಂಟ್ ನಿಂಗೋ ಎಂಥ ಉಪಯೋಗಿಸುತ್ತಿಲ್ಲಿ ?! ನಮ್ಮ ಈ ಕನ್ನಡ ಎಷ್ಟು ಉರುಟುರುಟಾಗಿ ಚೆಂದ ಇದ್ದು !!
    ನಿಂಗೋಗೆ ಜಿ ಮೇಲ್ ಲಿ ಕನ್ನಡಲ್ಲಿ ಟೈಪ್ ಮಾಡಿ,ಮತ್ತೆ ಅಲ್ಲಿ ಕಟ್ ಮಾಡಿ ಇಲ್ಲಿ ನಮ್ಮ ಒಪ್ಪಣ್ಣನ ಬಯಲಿಲಿ ಪೇಸ್ಟ್ ಮಾಡಿರೆ ಆತು !
    ಆನೀಗ ಹಾಂಗೆ ಮಾಡೋದಿದ!.

  3. Mulata navella (Havika Beahmanaru)pavurohityada uddeshanda ahichatranda gokarna mandalakke banda brahmanaru. aadare navage adu gontille gontiddare maraddu.eega kuusu noduvaaga kuusina abbe appana noduthavu gunakkagi alla statussinge adu krishikana magalu alladre batra magalu athava adigeyavana magalu helta taaratamya. mulata navella edaralli yavado ondu vargakke seriddattu heliye maradu hoidu.namma hiriyavaralli aro obban (hechu hinde hogeda)edaralli ondu kelasa maadiddu khanditha adara artha madiyondre shubhatteya devarola nayige tirugale jage elladdadu vishesha tiliyadre eegana sampradaya gontilladda oppanna baraddadakke dhikkara.aanantu oppannange jai hakuttarottinge oppavu kodutte.Mohanana.

  4. ಭಾವ
    ಸಮಾಜದ ಉಳಿವಿಗೆ ಅಗತ್ಯವಾದ ಲೇಖನ.. ತುಂಬಾ ದಿನದ ನಂತ್ರ ವಿಮರ್ಶೆಗೊ ಕೂಡಾ ಬೈಂದು..

    ಇದು ಸಂಧಿ ಕಾಲ ಹೇಳಿರೆ ತಪ್ಪಾಗ, ನಮ್ಮ ಸಮಾಜ, ಸಂಸ್ಕೃತಿ ಉಳಿಯೆಕ್ಕಾದರೆ ಏನು ಮಾಡೆಕ್ಕು ಹೇಳ್ತದು ನವಗೆ ಮುಖ್ಯ ಆಯೆಕ್ಕು. ಎನ್ನ ಪ್ರಕಾರ ನಾವು ಎಲ್ಲೆ ಹೋದರು, ನಮ್ಮತನವ ಬಿಡುಲಾಗ, ಸಾಧ್ಯವಾದಸ್ಟು ಅನುಸರಿಸೆಕ್ಕು..

    ಶ್ರೀಗುರು ದೇವತಾ ಅನುಗ್ರಹಂದ ನಮ್ಮಿಂದ ಇಂತಾ ಕಾರ್ಯ ಆಗಲಿ…

  5. “ಓ.. ಇದು ನಿಂಗಳೋ,ಎನಗೆ ಗೊಂತಾಯಿದಿಲ್ಲೆ. ಆನು ಆರೋ ಹೇಳಿ ಗ್ರೇಷಿದೆ”

    ಎನ್ನ ಉತ್ತರ ಹೆಚ್ಚು ಕಮ್ಮಿ ಹೀಂಗೆ ನೋಡಿ ಮುಳಿಯ ಭಾವ, ಆದ ಕಾರಣ ತಲೆಗೆ ಧಾರಾಳವಾಗಿ ಕೊಡ್ಳಕ್ಕು. ಎಂಥರಲ್ಲಿ ಹೇಳಿ ಎಂಗಳ ಮಾಣಿ ಆದರ್ಶ ನಿರ್ಧಾರ ಮಾಡ್ಲಿ, ಎಂತ ಹೇಳಿತಿ

    1. ನಿಂಗೊ ಕುವೈತಿನವು,ಕೊಡೋಗ ಖರ್ಜೂರಲ್ಲೇ ಕೊಡಿ ಆಗದೋ?? ಆದರ್ಶನ ಬಾಯಿಯೂ ಚೀಪೆ ಆಯೆಕ್ಕದ,ನೆಗೆಗಾರಣ್ಣನ ಒಟ್ಟಿನ್ಗೆ..

      1. ಈ ವರ್ಷ ಮದ್ದು ಬಿಡದ್ದೆ, ಕೊಯಿಶಲೆ ಜೆನ ಇಲ್ಲದ್ದೆ ಭಾರೀ ಕಷ್ಟ ಆಯಿದು ಭಾವಾ…. 🙂

  6. ಈ ಬಯಲಿಲಿ ಇಪ್ಪ ಎಲ್ಲೋರಿಂಗೂ ಎನ್ನ ನಮಸ್ಕಾರ ; ಇಂಥಹ ಒಂದು ಒಳ್ಳೆ ಮಾರ್ಮಿಕವಾದ ವಿಷಯವ ಈ ಬಯಲಿಲಿ ಬರದು ನಮ್ಮವಕ್ಕೆ ಎಲ್ಲ ವಿಮರ್ಶೆಗೆ ಎಡೆ ಮಾಡಿ ಕೊಟ್ಟದಕ್ಕೆ ತುಂಬಾ ದನ್ಯವಾದಂಗೋ.
    ನೋಡಿ ನಾವೆಲ್ಲಾ ಹವ್ಯಕ ಬ್ರಾಹ್ಮಣರು!;ನಾವು ಈ ಸಮಾಜಲ್ಲಿ ದೇವರ ಪೂಜೆ ಕಾರ್ಯಂಗಳ ನಡೆಶಿಗೊಂದು ಬಪ್ಪಲೆ ಅರ್ಹತೆ ಇಪ್ಪವು!! ನಮ್ಮ ಈ ಪವಿತ್ರವಾದ ಸಮಾಜಲ್ಲಿ ನಾವೇ ಸರಿಯಾಗಿ ನಡಕ್ಕೊಲ್ಲದ್ದರೆ ನಮ್ಮ ಹಿಂಬಾಲಿಸುವವರ ಸ್ಥಿತಿ ನವಗೆ ತೀರ್ಮಾನಿಸುಲೆ ಎದಿಯದಾ!!? ಬೇಲಿಯೇ ಹೊಲ ಮೇದರೆ !!!!
    ದೇವರ ಕೋಣೆ ಹೇಳ್ಥದು ಶುದ್ದವಾಗಿ; ಭಕ್ತಿಯಿಂದ, ಧ್ಯಾನಿಸಿ,ಸಾಷ್ಟಾಂಗ ಪ್ರಣಾಮ ಮಾಡಿ ಮನಸ್ಸು ಹಗುರ ಮಾಡ್ಲೆ ಉಪಯೋಗಿಸುಲೆ ಬೇಕಾದಷ್ಟು ದೊಡ್ಡ ಆದರೂ ಇದ್ದರೇ ಒಳ್ಳೆದಲ್ಲದ !! ಮತ್ತೆ ಇಗಾಣವಕ್ಕೆ ಎಲ್ಲ ಫೆಶೋನ್ ಯುಗ ಅಲ್ಲದ !!! ನಾವು ಸಹಿಸಿಗೋಲ್ಲೇಕ್ಕಷ್ಟೇ!!!

  7. raaja narayana vishayava chendake arta madiyondida vivaranage jai.(Ava heli baraddadu tappadare bejaara maadedi aanu 62varshadavan aasaligeli baraddaste)

  8. ನಮಸ್ಕಾರ ಕುವೈತ್ ಭಾವಯ್ಯಂಗೆ, ನಿಂಗಳ ಪರಿಚಯ.. ಎನ್ನ ನೆಡವ ದೂರವಾಣಿ ಸಂಖ್ಯೆಯ ಕೊಡ್ತೆ.. ಸಂಪರ್ಕಿಸಿ ೬೫೬೨ ೮೦೨೧

    1. ನಮಸ್ಕಾರ ಪ್ರಶಾಂತ್, ನಾಳೆ ಕಾಂಬಲಿದ್ದನ್ನೆ. ಅಂಬಗ ಪರಿಚಯ ಮಾಡಿಗೊಂಬ !!

      1. ಬೈಲಿನ ಮೂಲಕ ನಿಂಗೊ ಬೇಟಿ ಅಪ್ಪಂಗೆ ಆದ್ದಕ್ಕೆ, ಬೈಲಿಂಗೆ ಸಿಹಿ ಕೊಡಕ್ಕಿದಾ.. ಯೇವಾಗ ಸಿಕ್ಕುಗು… ನೆಗೆ ಬಾಂಗೆ ಈಗಲೇ ಬಾಯಿಲಿ ನೀರು ಅರುದುಕೊಂಡು ಇದ್ದು..

        1. ಅಜ್ಜಕಾನ ಭಾವಾ,ಪ್ರಶಾಂತಣ್ಣನ ಉತ್ತರ ಎಂತ ಹೇಳಿ ಗೊಂತಿದ್ದೋ..
          “ಓ.. ಇದು ನಿಂಗಳೋ,ಎನಗೆ ಗೊಂತಾಯಿದಿಲ್ಲೆ. ಆನು ಆರೋ ಹೇಳಿ ಗ್ರೇಷಿದೆ” ಹೇಳಿಕ್ಕು.
          ಈ ಕುವೈಟ್ ಭಾವ ಹಾಂಗಿರ್ತ ವೆಗ್ತಿ.

          1. ಮುಳಿಯ ಭಾವನ ತಲೆಗೆ ಕೊಡೆಕ್ಕಾದ್ದೆ….. 🙂 ಕುವೈತ್ ಪ್ರಶಾಂತನ ಉತ್ತರ ಅದೇ ಇಕ್ಕಷ್ಟೆ. ಅವಂಗೆ ಒಂದು ದಿನದ ಮಟ್ಟಿಗೆ suspense ಇರಲಿ…..
            :))

          2. {ಮುಳಿಯ ಭಾವನ ತಲೆಗೆ ಕೊಡೆಕ್ಕಾದ್ದೆ}

            ಕೊಡ್ಲಕ್ಕು ಕೊಡ್ಲಕ್ಕು, ಎಂತರಲ್ಲಿ ಕೊಡೆಕ್ಕಾದ್ದು ಹೇಳಿ ಹೇಳಿದರೆ ಸಾಕು.. 😉

          3. ಅವರವರ ಭಾವಕ್ಕೆ…. ಮುಳಿಯ ಭಾವನ ಘನತೆಗೆ, ಭಾವನೆಗೆ ತಕ್ಕಂತೆ …..
            .
            ತಕ ಥೈ … 🙂

        2. {ಈಗಲೇ ಬಾಯಿಲಿ ನೀರು ಅರುದುಕೊಂಡು ಇದ್ದು}

          ಇದಾ ಅವನ ಹತ್ರೆ ಒಂದು ಪಾತ್ರವೋ ಪಾಟೆಯೋ ಎಂತಾರು ಹಿಡ್ಕೊಂಡೇ ಅತ್ಲಾಗಿ ಇತ್ಲಾಗಿ ಹೋಪಲೆ ಹೇಳು ಭಾವಾ,, ಅವ ಹಾಂಗೆ ಅರುಶಿಗೊಂಡು ಹೋದರೆ ಉದ್ದುಲೆ ಬೈಲಿಲಿ ಕೆಲಸದವುದೆ ಇಲ್ಲೆ ಇದಾ.. 🙂

  9. ಉತ್ತಮ ಲೇಖನ. ಒಪ್ಪಂಗಳೂ ಒಂದಕ್ಕಿಂದ ಒಂದು ಬಲ. ಹಲವಾರು ವಿಷಯಂಗೊ ಹೆರ ಬಂದವು.

    ದಿವ್ಯಕ್ಕ “ನಮ್ಮ ದಕ್ಷಿಣ ಕನ್ನಡ / ಕಾಸರಗೋಡು ಭಾಗದ ಹವ್ಯಕರಲ್ಲಿ ಈ ಅಭ್ಯಾಸ (ಅರಶಿನ ಕುಂಕುಮ ಮಾತ್ರ ಕೊಡುದು. ಮತ್ತೆ ಹಬ್ಬಂಗ , ಪೂಜೆ ಎಂತಾದರು ಇದ್ದರೆ ಆವಗಳು ರವಕ್ಕೆ ಕಣ …) ಇಲ್ಲೆ” ಹೇಳಿ ಬರದ್ದು. ಆನು ಮೂಡ್ಲಾಗಿ (ಪಂಜ) ಹುಟ್ಟಿ ಬೆಳದವ. ಆನು ಸಣ್ಣಾಗಿಪ್ಪಗ ಶುಭ ಸಮಾರಂಭಗಳಲ್ಲಿ ಮುತ್ತೈದೆಗೊಕ್ಕೆ “ಬಾಯನ” ಕೊಡ್ತದರ ಕಂಡ ನೆಂಪು. “ಬಾಯನ”ದ ಮೂಲ ಉದ್ದೇಶ ಬಹುಶ ಅರಸಿನ ಕುಂಕುಮ+ರವಕೆ ಕಣದಷ್ಟೇ ಅಥವಾ ಹೆಚ್ಚು ಇಕ್ಕು. ಈಗಿತ್ಲಾಗಿ ಇದೆಲ್ಲ ನಿಂದ ಹಾಂಗಿದ್ದು…..ನಗರೀಕರಣವೂ ಒಂದು ಕಾರಣ ಇಕ್ಕೋ? ಅಥವಾ ನಮ್ಮವರ ಉಪೇಕ್ಷೆಯೋ?

      1. ಕನ್ನಡಲ್ಲಿ “ಬಾಗಿನ” ಹೇಳ್ತದನ್ನೆ ನಮ್ಮ ಭಾಷೆಲಿ “ಬಾಯನ” ಹೇಳ್ಸು ಹೇದು ಎನ್ನ ತಿಳುವಳಿಕೆ. ನೆಗೆಗಾರಣ್ಣನ ಅರ್ಥಕೋಶಲ್ಲಿ ಬೇರೆಂತ ಇದ್ದೋ ಗೊಂತಿಲ್ಲೆ.

        1. ಏ ಭಾವ! ಬಾಗಿನ ಹೇಳಿರೆ ನಮ್ಮ ಮಂತ್ರಿಗೋ ಅಣೆಕಟ್ಟಿಲಿ ನೀರು ತುಂಬಿಯಪ್ಪಗ ಅದರ ಬಿಡೆಕ್ಕರೆ ಮೊದಲು ಅರ್ಪಿಸುದು ಅಲ್ಲದ?! 😀

          1. ಮಂತ್ರಿಗಳನ್ನೇ ಬೆಳ್ಳಕ್ಕೆ ಬಿಟ್ಟರೆಂತ,ಬಾಗಿನ ಬಿಡುಲೆ ಬಾಗಿ ಅಪ್ಪಗ ??

  10. ಶುಬತ್ತೆಯ ದೇವರೊಳ ನಾಯಿಗೇ ಜಾಗೆ ಇಲ್ಲೆಡ! . ಇದು ಹೋಲಿಕೆ ಅಲ್ಲ ತಲೆ ಬರಹ ಅಸ್ಟೇ ಇದು ಬಹಳ ಅರ್ಥಂಗಳ ಕೊಡ್ತು ,ಅನು ಹೆಂಗೆ ಅರ್ಥ ಮದ್ಯೊಂಡದು ಹೇಳಿ ಇಲ್ಲಿ ವಿವರುಸುತ್ತೆ.
    ೧. ದೇವರ ಕೋಣೆ ಬಿಟ್ಟು ನಾಯಿ ಮನೆಯೊಳ ಪೂರ ಹೊವುತು. : ನಮ್ಮ ಸಂಪ್ರದಾಯದ ಪ್ರಕಾರ ಮನೆಯೊಳ ನಾಯಿಗೆ ಪ್ರವೇಶ ಇಲ್ಲೆ.ಇಡಿ ಮನೆಯೊಳ ನಾಯಿ ಹೊಪಲಕ್ಕರೆ ದೇವರ ಕೊನೆಯೊಳ ಎಂಥ ಆಗ???
    ೨. ನಾವು ದೇವರೋಲಂಗೆ ಗೆ ಕೊಟ್ಟ ಪ್ರಾಮುಖ್ಯತೆ. : ಇಲ್ಲಿ ಒಪ್ಪನ್ನ ಸಣ್ಣ ಮನೆಯ ಬಗ್ಗೆ ಹೇಳಿದ್ದಲ್ಲ.. ವಿವರಿಸುವಾಗ ಬೇರೆಲ್ಲ ರೂಮುಗಳ ಹೆಂಗೆ ಕಟ್ಟಿದ್ದವು ಹೇಳಿ ವಿವರಿಸ್ಸಿದ್ದ . ೩ ಮನಗುವ ಕೋಣೆ ಇದ್ದು. ಹಂಗಾದ ಕಾರಣ ಸಣ್ಣ ಮನೆ ಅಲ್ಲ. ಇಸ್ಟೆಲ್ಲಾ ಮಾಡಿದವಕ್ಕೆ ಒಂದು ಲೈಕಿನ ದೇವರ ಕೋಣೆ ಮಡುಗುಲೆ ಅವುತಿಲೆಯೋ ??

    ಎನ್ನ ಪ್ರಕಾರ ದೇವರ ಕೋಣೆ ಇಪ್ಪದು ನಾವು ನಮ್ಮ ಜೀವನಲ್ಲಿ ನೆಮ್ಮದಿ ಆಗಿ ಇಪ್ಪಲೇ ಹೊರತು ಅರಾನ್ನರು ಮಂಗ ಮಾಡಲೇ ಅಲ್ಲ. ದೇವರ ಕೋಣೆ ಅವಶ್ಯಕತೆ ಇಲ್ಲೆ ಹೇಳಿ ಕಂಡ್ರೆ ಮಡುಗಡಿ… ಸಣ್ಣಕೆ ಮಡಿಗಿ ದೇವರಿನ್ಗೆ ಅವಮಾನ ಮಾಡುದು ಸರಿ ಅಲ್ಲ…….. ಒಪ್ಪನ್ನ ಹೇಳಿದ ಹಾಂಗೆ ನಾವು ದೇವರ ಕೊನೆಯ ಓದುವ ರೂಂ ಆಗಿ ಒಪಯೋಗಿಸುಲಕ್ಕು. ಯೋಗ .ಧ್ಯಾನ ಪ್ರಾಣಾಯಾಮ ಮಾಡಲೇ ಉಪಯೋಗಿಸುಲಕ್ಕು,,,,

    ಇದು ಒಂದು ಸಕಲಿಕ ಬರಹ ಹೇಳುದು ಎನ್ನ ಅನಿಸಿಕೆ. ಒಪ್ಪನ್ನ ಬಾವ ,ಹೀಂಗೆ ಪಯಣ ಮುಂದುವರಿಯಲಿ

    1. ಒಪ್ಪಣ್ಣನ ಅಭಿಪ್ರಾಯಕ್ಕೆ ಪೂರಕವಾಗಿ, ಅರ್ಥ ಆಗದ್ದವಕ್ಕೆ ಅರ್ಥ ಆವುತ್ತ ಹಾಂಗೆ ವಿವರವಾಗಿ ವಿವರುಸಿ ಕೊಟ್ಟಿದೆ ರಾಜಾ. ಆನುದೆ ನಿಂಗಳೊಟ್ಟಿಂಗೆ ಇದ್ದೆ.

  11. Vishnu nandana bhavan barada vishayada bagye enna oppige eddu.Sagana talivadu heragiddavu kubbadu adu khanditha ee kaalakke alla.andige clean aayekaare adu bekittu madidavu appa netta aalada marakke jotu bileku heli elle.tondare eddadu bhavaneli adakke pete halli heli elle aadare petelippavara hechina percentage onde bhavane.hallili eddavan jaaga nodiyoleku abbe appana nodiyoleku engo uuringe bandippaga sariyaagi upachariseku haange paalaagiddare enna palina amshalli banda beleli karchu kaladu kodeku hinge halavu.Krishili badkale kasta padta ee kaalalli edella saadya elle heli tilittavu kammi.Khanditha apavaadango eddu alli este kasta aadaru manage kalusi manage bandappaga more noodadda anna tammandru ertavu.ennu hechu ennondaari baravon aagado?dodda bhavan helida vishaya ennatre baraha eegaagale eddu yeko technicalaagi kelavu tondare kandattu.ennana mailingappaga Kannadalle baravale prayatna padutte.oppangalotinge.

  12. Laykaydu bhava lekhana…

    Artha aathu yenage ningala lekhanada uddesha…

    Aadare…

    Yenna prakara navu ondu samajavagi samskruthiya ottinge adhunika jagatthige hondigondu hoyekku. Ooriliye koodare navu hinde oligashte. Achara vicharangala navu kaili appa mattinge munduvarisigondu hoyekku.

    Eega peteli “Sagana Niru” thaludu shudda madle yediga?

    Hange sumaru thondare iddu. Thakka mattinge hondigondu hoyekku.

    Matthe hallili ippapu bhari olleyavu. Ivve samskrthiya uddara madthavu heltha kalpane beda. Anude nodidde hecchina maneli “Nithya pooje” madekkanne heli maduvavu iddavu.

    Matthe havyaka samskruthi olle samskruthi. Hange bere oorili kooda olle samskruthi iddu. Ravakke cheat kottu “Mutthaide” yara ashirvada thekkombadu olle samskruthi. Bangalore, Mysore athlagi habbgala aacharisuvashtu shraddeli namma oorina kade aacharane madthaville. Beretyavarinda olle amshangala thekkomba.

    Adhunika yugakke sariyagi aacharnegala hondusigondu hopa. “Chandi” ya hange koodare navu 2 ralli ondara mathra aayke madekkashte. Navage 2de beku.

    1. ಅಪ್ಪು ವಿಷ್ಣುನಂದನ.. ಮಾಲ ಚಿಕ್ಕಮ್ಮನಗೆ ಹೆಂಗೆ ದರ್ಮಕ್ಕೆ ಒಂದು ರವಕ್ಕೆ ಕಣ ಸಿಕ್ಕಿದ್ದೋ ಅಷ್ಟೇ ದರ್ಮಕ್ಕೆ ಹೆಮ್ಮಕ್ಕೊಗೆ ಅತಿ ಮುಖ್ಯವಾದ “ಮುತ್ತೈದೆ” ಆಗಿ ಬಾಳು ಹೇಳುವ ಆಶಿರ್ವದದೆ
      (ಅರಶಿನ ಕುಂಕುಮ)ಸಿಕ್ಕಿದ್ದು . ಒಪ್ಪಣ್ಣ ಬರೇ ದರ್ಮಕ್ಕೆ ಸಿಕ್ಕಿದ ರವಕ್ಕೆ ಕಾಣದ ಬಗ್ಗೆ ಮಾತ್ರ ಹೇಳಿದ ಈ ಅರಶಿನ ಕುಂಕುಮ ದ ಬಗ್ಗೆ ಹೇಳುಲೇ ಮರದ್ದೋ ಕಾಣ್ತು… ಹೀಂಗೆ ಒಪ್ಪಣ್ಣ ಅರ್ದ ಅರ್ದ ಶುದ್ದಿ ಹೇಳಿ ಜನರಿಂಗೆ ಅರ್ದ ಅರ್ದ ತಿಳುವಳಿಕೆ ಕೊಡ್ಲೆ ಆಗ ..
      ಅಲ್ಲಿ ಮಹತ್ವ ಇಪ್ಪದು ಅರಶಿನ ಕುಂಕುಮಕ್ಕೆ .. ರವಕ್ಕೆ ಕಣಕ್ಕೆ ಅಲ್ಲ.ಹೀನ್ಗಿಪ್ಪ ಒಳ್ಳೆ ಕ್ರಮವ ತಮ್ಮದಾಗಿ ಮಾದಿಗೊಂಡ ಶುಭತ್ತೆ ಗೆ ಒಂದು ಒಪ್ಪ . ರವಕ್ಕೆ ಕಣವ ಒಬ್ಬನ ಮನೆಗೆ ಸುರುವನ ಸರ್ತಿ / ಅಪರೂಪಕ್ಕೆ ಹೊದಿಪ್ಪಗ ಕೊಡುದು.. ದಿನಾಗ್ಲು / ಯಾವಾಗಲು ಹೊಪವಕ್ಕೆ ಬರೇ ಅರಶಿನ ಕುಂಕುಮ ಮಾತ್ರ ಕೊಡುದು. ಮತ್ತೆ ಹಬ್ಬಂಗ , ಪೂಜೆ ಎಂತಾದರು ಇದ್ದರೆ ಆವಗಳು ರವಕ್ಕೆ ಕಣ ಕೊಡ್ತವು ..ಎಷ್ಟು ಒಳ್ಳೆ ಸಂಪ್ರದಾಯ ಇದು.. ನಮ್ಮ ದಕ್ಷಿಣ ಕನ್ನಡ / ಕಾಸರಗೋಡು ಭಾಗದ ಹವ್ಯಕರಲ್ಲಿ ಈ ಅಭ್ಯಾಸ ಇಲ್ಲೇ. ಹೇಂಗೆ ನವಗೆ (ದಕ್ಷಿಣ ಕನ್ನಡ / ಕಾಸರಗೋಡು ಭಾಗದ ಹವ್ಯಕ) ಅರಶಿನ ಕುಂಕುಮ / ರವಕ್ಕೆ ಕಣ ವಿಶೇಷ ಕಾಣ್ತೋ ಹಾಂಗೆ ಅವಕ್ಕೆ ಬಂದೊರಿನ್ಗೆ ಅರಶಿನ ಕುಂಕುಮ ಕೊಡದ್ದರೆ ಅದುವೇ ದೊಡ್ಡ ವಿಷಯ ಆವುತ್ತು .. ಘಟ್ಟದ ಮೇಲೆ (ನಮ್ಮ ಗ್ರಾಮ್ಯ ಭಾಷೇಲಿ ಹೇಳ್ತಾರೆ) ಎಲ್ಲ ಕಡೆ ಇದ್ದು ಈ ಸಂಪ್ರದಾಯ.. ಬಹುಷಃ ಉತ್ತರ ಕನ್ನಡ / ಶಿವಮೊಗ್ಗ ಕಡೆಯ ಹವ್ಯಕರಲ್ಲಿದೆ ಅರಶಿನ ಕುಂಕುಮ ಸಂಪ್ರದಾಯ ಇದ್ದು ಹೇಳಿ ಕಾಣ್ತು .(ಎನಗೆ ಸರಿ ಗೊಂತಿಲ್ಲೇ ತಿಳುದೊರು ಹೇಳಿ).

      1. oppanna .. mundana vaara arasina kunkuma da mahatvada bagge poorti yaagi bailoringe tilisi koduve allado… kaadugondu irte…

      2. ಎಂಥ ದಿವ್ಯಕ್ಕ ನಿಂಗ,,,,,,, ಈಗಣ ಹೆಮ್ಮಕ್ಕ ಕುಂಕುಮ ಅರಿಶಿನ ಉಪಯೋಗಿಸದ್ದ ಕಾರಣ ಒಪ್ಪನ್ನಂಗೆ ಬರವಲೆ ಬಿಟ್ತೋತಯಿಕು
        .breaking News: ಕೆಲವು ದಿಕ್ಕಿಲಿ ಈಗ ರವಕೆ ಕಣ ಕೊದುದರ ನಿಲ್ಸಿ T-shirt , Fair-Lovely cream ಕೊಡ್ಲೆ ಸುರುಮಡಿದ್ದವು.

  13. ಶುದ್ದಿಂದಲೂ ತೂಕದ ಒಪ್ಪಂಗೊ ಬಂದು ಶುದ್ದಿಯ ಗಾಂಭೀರ್ಯತೆಯ ಮನನ ಮಾಡಿದ್ದು ಒಪ್ಪಣ್ಣಂಗೆ ತುಂಬಾ ಕೊಶಿ ಆತು.
    ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ.
    ಕೃಷ್ಣಮೋಹನಣ್ಣ, ಗಣೇಶಮಾವ, ಶ್ರೀಅಕ್ಕ°, ಶಾಂತತ್ತೆ – ಎಲ್ಲೋರುದೇ ಪೂರಕ ವಿಚಾರವ ಹಂಚಿಗೊಂಡಿದಿ.
    ಇನ್ನೂ ಇದೇ ನಮುನೆ ಒಪ್ಪಂಗೊ ಬತ್ತಾ ಇರಳಿ.
    ಒಂದು ನಿಮಿಶ ಆದರೂ ಇದರ ತಾತ್ಪರ್ಯದ ಬಗೆಗೆ ಚಿಂತನೆ ಮಾಡೆಕ್ಕಾಗಿ ಬಂದರೆ ಈ ಶುದ್ದಿಯ ಸಾರ್ಥಕತೆ.
    ಹರೇರಾಮ.

  14. Dr.K.G.Bhatringe Padmanabha Bhatru kotta uttarave sari.samasye eppadu halli pete helutadaralli alla bhavaneli engo alale eddavu ningo dudivale heluva bhavaneli.elliyo A.Croomilli kudondu krishi bagye baretta mantrigo,officerugo krishige bekaagi gudde kadudu haakiddadu eeanu elle.Ennu petali kudavu hallili belada vastu tegeyadre giraaki elle emba vichaara arasadaru aaladaru ootakke annave aayeku(eegana kaalalli breddo mattantadophizhavo heludella aavuttada)adilladde appaga peteyavan halliya hudkiyondu barekakku.enna kaalalli alladru ningala kaalalle edu nodle sikkugu.ennu strong languagina vishaya charcha vedikeli aa shabda aprastuta heli enna abhipraaya.halliliddavu pete elladre badkuttastu dina peteyavakke halli elladre badkalediya edu khanditha.enna bandu balagadavu peteyo hora deshalliyo edda haange krishiliyu eddavu haangaagi nanyada eradu mukhada parichayavu enage eddu.Dr.inge raja besi rakta heli kaanuttu tannange kuudu aalochane maadi.muliya bhavayyan vastavava arta maadiyondidan heli kaanuttu.Oppangalottinge mohananna

    1. ಅಪ್ಪಚ್ಚಿ… ನಿಂಗೊ ಬರೆತ್ತ ಒಪ್ಪಂಗೊಕ್ಕೆ ಒಳ್ಳೆ ತೂಕ ಇರ್ತು. ತುಂಬಾ ಸರ್ತಿ ಇಲ್ಲಿ ಕನ್ನಡಲ್ಲಿ ಬರೆಸ್ಸು ಹೇಂಗೇ ಹೇಳಿ ನಾವು ಮಾತಾಡಿದ್ದು. ಎಡಿಗಾರೆ ಬರಹ ಯುನಿಕೋಡ್ ಡೌನುಲೋಡು ಮಾಡಿ ಮಡಿಕ್ಕೊಳ್ಳಿ, ಅದರ ಇನ್‌ಸ್ಟಾಲ್ ಮಾಡಲೆ ಸುಲಭ, ಬೇಕಾದಪ್ಪಗ ಕನ್ನಡಲ್ಲಿ ಬರವಬ್ಲೂ ಸುಲಾಭ. ಹಾಂಗೇ ಗ್ರೇವತಾರ ಉಪಯೋಗುಸಿ ನಮ್ಮ ಪಟ ಬೈಲಿಲ್ಲಿ ಬಪ್ಪಲೆ ಎಂತ ಮಾಡೆಕ್ಕು ಹೇಳಿ ಬರದ ಸುದ್ದಿ ನೋಡಿಕ್ಕಿ, ಅದು ಬಹುಶಃ ಜುಲೈ ೨೪ ತಾರೀಕಿನದ್ದು, ಹಳತ್ತಿಂಗೆ ಮಡಗಿದ್ದರ ಹುಡ್ಕಿರೆ ಸಿಕ್ಕುಗು.
      ಒಪ್ಪಂಗೊ ಕನ್ನಡ ಲಿಪಿಲಿಯೇ ಇದ್ದರೆ ಓದುತ್ತವಕ್ಕೆ ತುಂಬಾ ಸುಲಭ. ಎಡಿಗಾರೆ ಒಂದು ಪ್ರಯತ್ನ ಮಾಡಿಕ್ಕಿ.

  15. laikaidu baraddu oppanno.
    namma manasili jaage kotre saaku.devara koneye beku heli ille nitya
    pooje maadtare allado devara kone beku.
    ondu patavude ondu deepa madugule thakkitha jaage iddare saaku heli
    greshuttavallada.
    devaru haragana heli kaanadre saaku.
    halli maneya devara koneya prashanthathe hoogu gandha agarabatthiya parimmalave manasinge kushi kodtu nemmadiyu sikkuttu oppanna.ondoppa sooper.good luck..

  16. ಒಪ್ಪಣ್ಣಾ,ಸಮಸ್ಯೆ ಮತ್ತೆ ಉತ್ತರವ ತುಂಬಾ ಲಾಯಿಕಲ್ಲಿ ಬಿಡಿಸಿ
    ಮಡುಗಿದ್ದೆ . ನಮ್ಮ ಸಂಸ್ಕೃತಿಯ ನಾವು ಸುಧಾರ್ಸುದೇ
    ಅಂತಿಮ ಉಪಾಯ! ಮನಸ್ಸು ದೊಡ್ಡ ಆದರೆ ಮನೆಯೂ ದೊಡ್ಡ ಆವ್ತು.
    ಲೇಖನ ಒಳ್ಳೆದಾಯಿದು, ಸೊಗಸಾದ ಚಿ೦ತನೆ. ಸರಳ ಶೈಲಿ.

  17. ಲೇಖನ ಲಾಯ್ಕಾಯ್ದು ಒಪ್ಪಣ್ಣ….
    ಒಂದೊಪ್ಪ ಲಾಯ್ಕಾಯ್ದು…
    {ಅಂತೂ ಕೋಣೆ ಸಣ್ಣ ಆಗಿ ಮನಸ್ಸೂ ಸಣ್ಣ ಆಗಿ ದೇವರ ನೆಂಪೂ ಬಾರದ್ದೆ ಹೋತು.}-ಆ ಸಣ್ಣ ಮನಸ್ಸಿಲಿ ಅವರ ಮನೆಯವಕ್ಕೆ ಮಾತ್ರ ಜಾಗೆ… ಮತ್ತೆ ಆ ದೇವರಿಂಗೆ ಎಲ್ಲಿದ್ದು?
    ಮತ್ತೆ ’ಸಂಕಟ ಬಂದಾಗ ವೆಂಕಟರಮಣ’ ಹೇಳಿ ಎಂತಾರು ಅಪ್ಪಗ ದೇವರ ನೆಮ್ಪಾವ್ತು….
    ಹಳ್ಳಿ ಮನೆಯ ದೇವರ ಕೋಣೆಯ ಪರಿಮ್ಮಳವೇ ಚಂದ….ಶುಭತ್ತೆಯ ಮಕ್ಕೊಗೆ ಅದು ವಾಸನೆಯೋ ಏನೊ…. 🙁

  18. ಈಗೀಗ ನಮ್ಮ ಪ್ರಾಮುಖ್ಯತಗೊ ಹೇಂಗೆ ಬದಲಾವುತ್ತಾ ಇದ್ದು ಹೇಳುದರ ತುಂಬಾ ಲಾಯಿಕಿಲಿ ಹೇಳಿದ್ದ ಒಪ್ಪಣ್ಣ°.
    ನಮ್ಮ ಜೀವನ ಧರ್ಮಾರ್ಥಕಾಮಮೋಕ್ಷಂಗೊಕ್ಕೆ ಹೇಳಿ ಗುರುಗೊ ಜ್ಞಾನಿಗೊ ತಿಳುದೋರು ಹೇಳುತ್ತವು.
    ಆದರೆ ಈಗ ಅರ್ಥ ಕಾಮಂಗಳೇ ಮುಖ್ಯ ಆಗಿ ಧರ್ಮ-ಮೋಕ್ಷಂಗೊ° ಹಿಂದೆ ಸರಿತ್ತಾ ಇದ್ದು ಹೇಳುದು ಖೇದದ ಸಂಗತಿ.

    1. ಜೆಡ್ಡು ಡಾಗುಟ್ರ ಮೂರುಗೆರೆಯ ಒಪ್ಪಕ್ಕೆ ’ತ್ರಿ’ಫಲಾದಿ ಚೂರ್ಣದಷ್ಟೇ ಗುಣ ಇದ್ದು.
      ಚತುರ್ವಿಧ ಪುರುಷಾರ್ಥಂಗಳ ಮನನ ಮಾಡ್ತದರ ಎಡಕ್ಕಿಲಿ ನಮ್ಮದರ ಒಳಿಶಿಗೊಳೆಕ್ಕು ಹೇಳ್ತದೇ ನಮ್ಮ ಕಾಳಜಿ.
      ಅಲ್ಲದೋ?

  19. Oppanna,
    Baraddadu layakkaidu.Kalaya tasmai namaha. Indu oorillappa hange onduvare acre jageli mane kattule ediga Bengaloorilli.Ella Havyakaru kooda ondu kalalli Kumble seemage ellindalu bandadu .Andu ady aavashyakavadare indu Bengalooru adarind hechu agathya .Badukuva dari.Aadare nammatanava bidekku heliu alla.Namma ella olle gunangalannu madikkondu Bengalooring hondikondu badukkunvo.Devara kone doddadagi maduva shakthi avane elloringu kodeku. 60*40 site iddava indu Bengaloorilli Kotyadhishwara .elloru oorilli 5-10 acre hage marikki Bengaloorilli 30*40 ra site tegavave hechu, adoo, 15-20 Km doora (Mejestikkinda).Shubhattege shubhashayango.Bangalorrina maneli ellorannu bappale heli pooje madusithanne. Devaru olledu madali.
    Oppanna heenge baretha iru .Oorina hale kramakku, herana hosakramakku hondanike irali.

    1. ವೈವೀ ಮಾವಾ°..
      ಬೈಲಿಂಗೆ ಬಂದದು ಕೊಶೀ ಆತು.

      ಹಳ್ಳಿ – ಪೇಟೆಯ ಸಮತೋಲನವ ಚೆಂದಲ್ಲಿ ವಿವರುಸಿದಿ.
      ಬತ್ತಾ ಇರಿ, ಶುದ್ದಿಗೊಕ್ಕೆ ಒಪ್ಪ ಕೊಡ್ತಾ ಇರಿ.
      ಹರೇರಾಮ

  20. ಅಂಬಗಳ°… ಬಿಂಗಿಪುಟ್ಟಂಗೆ ಶುಭತ್ತೆ ಸಪಾದ ಕಟ್ಟಿ ಕೊಟ್ಟಿದವಿಲ್ಲೆಯ? ಎನಗೆ ನೀನು ಕೊಟ್ಟಿದೇ ಇಲ್ಲೆ ಮತ್ತೆ? ಕೋಪ ನಿನ್ನತ್ರೆ!

  21. ಎಲ್ಲವೂ ಹಳೆ ಕಾಲದ್ದು ಹೇಳಿ ನೇತರೆ ಅಪ್ಪ ನೆಟ್ಟ ಆಳದ ಮರಕ್ಕೆ ನೆಲೇಕ್ಕಷ್ಟೇ.ಇನ್ನೊಬ್ಬ ಮಾಡಿದ್ದರ ಕೋಂಗಿ ಕತ್ತುದು ಭಾರಿ ಸುಲಭ.ಹಳ್ಳಿಲಿ ಕೂದೊಂಡು ಇಷ್ಟು ಜೆನ ಎಂತ ಮಾಡುಗು?ಇಂದು ಬೆಂಗಳೂರಿಲ್ಲಿ ಕೆಲಸ ಸಿಕ್ಕುವ ಕಾರಣ ನಮ್ಮ ಮಕ್ಕೋ ಜೀವನ ಮಾಡುತ್ತವು.

    1. ಎಂಕುಳು ಹಳ್ಳಿಟ್ ಬೆನ್ಪುನೆಡ್ದ್ ನಿಕುಲು ಪೇಂತೆದಾಕುಲು ತಿನ್ಯೆರೆ ಆಪುಂಡು. { … }. ನಿಕುಲೆಗ್ ಪೇರ್ ಭಾರೀ ಕಮ್ಮಿಡ್ ತಿಕ್ಕುಂಡ್. ಐತ್ತ ಅಸಲ್ ಏತ್ ಆಪುಂಡ್ ಪಂಡ್ದ್ ನಿಕುಲೆಗ್ ಗೊತ್ತುಂಡಾ? ನನ ಒಂಜಿ ಕಾಲ ಬರ್ಪುಂಡು. ಆತಾನಗ ಹಳ್ಳಿಡ್ ಬ್ಯಾರಿಗುಲೇ ಬರ್ಪೊ. ಬ್ರಾಣೆರ್ ಮಾಂತ ಪೇಂಟೆಡ್ ಪೋದು ಕುಲ್ಲುದು ಬ್ಯಾರಿ ಮಲ್ತ್‍ನ ತರಕಾರಿ ಆಯೆ ಪಂಡಿನ ಬಿಲೆ ಕೊರುದು ದೆತ್ತೊನುನ ಕಾಲ ಬೇಕ ಬರ್ಪುಂಡು ಡಾಕುಟ್ರೇ. ಒಂಜಿ ಪಾತೆರ ಪನ್ಪೆ. ಹಳ್ಲಿದಾಕ್ಲೆಗ್ ಸೌಟ್ವೇರ್ ಇಜ್ಯಾಂಡಲ ಬದ್ಕೊಲಿ. ಸೌಟ್‍ವೇರ‍್ದಕುಲೆಗ್ ಹಳ್ಳಿದ ಉತ್ಪನ್ನ (ತರಕಾರಿ, ಅರಿ, ಪೇರ್) ಇಜ್ಯಾಂದೆ ಬದ್ಕೆರೆ ಸಾಧ್ಯ ಉಂಡಾ?

      1. ಈ ಸೌಟ್ವೇರ್ ದಾಕ್ಳೆನ ಇಲ್ಲಾಳ್ಡ್ ಸೌಟ್ ತಿರ್ಗೊಡಂಡ ಬಟ್ಯ ಬೆನ್ತುತೇ ಅವಡತ್ತ. ಅಕ್ಳೆಗು ಅವು ಪೂರಾ ಇತ್ತೆ ಗೊತ್ತಾವಂದು. ಕಾಸು ಕೊರ್ಂಡ ತಿಕ್ಕುಂಡತ್ತ. ಒಳ್ತು ಬರ್ಪುನೆ ಎಂದು ಅಕ್ಳೆಗು ಗೊತ್ತಿಜ್ಜಿ ಬಟ್ಯ. ಈ ಪಂಡಿನ ಎಂಕು ಕೊಶೀ ಆಂಡ್ಯಾ

        1. ದಯವಿಟ್ಟು ಹವ್ಯಕ ಅಥವಾ ಕನ್ನಡ ಭಾಷೇಲಿ ಬೆರೆಯಿರಿ …ಈ ಹಿಂದೆ ಇಂಗ್ಲಿಷ್ ಲಿ ಬರದ್ದಕ್ಕೆ ನಿಂಗೊ ಹವ್ಯಕಲ್ಲಿ ಬರೆದರೆ ಒಳ್ಳೇದು ಹೇಳಿ ಹೇಳಿದ್ದಿ .. ಇಂಗ್ಲಿಷ್ ಅರ್ಥ ಆವುತಿಲ್ಲೇ ಹೇಳಿ.. ಹಾಂಗೆ ಕೆಲವರಿನ್ಗೆ ತುಳು ಭಾಷೆದೆ
          ಅರ್ಥ ಅವುತ್ತಿಲ್ಲೇ…ಇದು ಹವ್ಯಕ ಭಾಷೆಯ ಬ್ಲಾಗ್/ ವೆಬ್ಸೈಟ್ ಆದ ಕಾರಣ ಹೆಂಗೆ ಇಂಗ್ಲಿಷ್ ಬೇಡ ಹೇಳ್ತಿರೋ ಹಾಂಗೆ ತುಳು ದೇ ಬೇಡ ಆಗದೋ…

      2. You people live in imaginary utopia.Do you have any idea what will be your condition in your own village if all opt for rural life?It will be absolute chaos.As it is we have acute labor problem.Water scarcity is imminent if not a fact already and you want all to settle in villages and cultivate grains vegetables and run dairy farms,are you?Who do you think will consume your produce?Those of us who live in towns and cities.It is a mutually beneficial set up,like it or not.One can’t survive without the other and it has been so since time immemorial. Those who think one can survive in villages without people living in towns and cities live in fools’ paradise.Sorry for the strong language but you asked for it.

        1. ರಜಾ ಜೋರಿಲಿ ಹೇಳಿದರೂ ವಿಷಯ ಇದ್ದು ಮಾವ.
          ಚಪ್ಪಾಳೆ ಶಬ್ದ ಕೇಳೆಕ್ಕಾರೆ ಎರಡು ಕೈ ಬಡಿಯೇಕ್ಕಲ್ಲದೋ? ಹಳ್ಳಿಯ ಉತ್ಪನ್ನಂಗೋ ಪೇಟೆಗೆ ಹೊಯೇಕ್ಕು,ಪೇಟೆಯ ಪೈಸೆ ಹಳ್ಳಿಗೆ ಸಿಕ್ಕೆಕ್ಕು ,ಆವಾಗ ಸಹಕಾರಿ ಸಹಬಾಳ್ವೆ ಸಾಧ್ಯ. ಉತ್ಪತ್ತಿ ಮಾಡುವ ಕ್ರಶಿಕನೂ ಬೇಕು,ತೆಕ್ಕೊಂಬಲೆ ಇತರ ವ್ರತ್ತಿಯ ಜೆನವೂ ಬೇಕು.ಮಧ್ಯವರ್ತಿ ರಹಿತ ಚಲಾವಣೆ ಸಾಧ್ಯ ಆದರೆ ಇಬ್ಬರಿಂಗೂ ಲಾಭವೇ.
          ಅತಿ ವೇಗಲ್ಲಿ ಸಾಗುತ್ತ ನಗರೀಕರಣ೦ದ ನಮ್ಮ ದೇಶ ಕ್ರಷಿ ಪ್ರಧಾನ ಹೇಳುತ್ತಾ ಸ್ಥಾನವ ಕಳೆತ್ತಾ ಇದ್ದು. ಕ್ರಶಿಭೂಮಿಯ ಕೊರತೆ ಬಪ್ಪಲೆ ಇನ್ನು ಹೆಚ್ಚು ವರುಷ ಹೋಯೆಕ್ಕಾಗ. ಎಲ್ಲಾ ಹಳ್ಳಿಗಳಲ್ಲಿ ಸಮಸ್ಯೆಗೋ ಇದ್ದು,ಪೇಟೇಲಿ ಬೇರೆಯೇ ರೀತಿಯ ಕಷ್ಟನ್ಗೋ ಇದ್ದು. ಸ್ವದೇಶೀ, ಸ್ವಾವಲಂಬನೆಲಿ ಬದುಕ್ಕೆಕ್ಕಾರೆ ಖಂಡಿತವಾಗಿಯೂ ಕ್ರಶಿಗೆ ಸಿಕ್ಕೆಕ್ಕಾದ ಸ್ಥಾನ,ಮರ್ಯಾದೆ ತಿರುಗಿ ಸಿಕ್ಕುಗು. ಆವಾಗ ಭೂಮಿ ನಮ್ಮೊರ ಕೈಲಿರ್ತೋ ಇಲ್ಲೆಯೋಗೊಂತಿಲ್ಲೆ.
          ಆನು ಹೇಳೊದು ಕನಸು ಆಗಿಕ್ಕುಇಂದು,ನನಸು ಅಕ್ಕು ಮುಂದು.

          1. ಎನ್ನ ಉದ್ದೇಶವೂ ಅದುವೇ.ನಾವು ನಮ್ಮ ಪರಿಸ್ತಿತಿ ನೋಡಿಯೊಂಡು ನಮ್ಮ ವಿದ್ಯಾಭ್ಯಾಸ ಮಾಡುದು ಈಗ ಸಾಧ್ಯ ಇಲ್ಲೇ.ಮಕ್ಕೊಗೆ ಅವು ಕಲಿತ್ತದರ ಕಲಿಶದ್ದೆ ಆವುತ್ತೋ?ಕಲ್ತ ಮೇಲೆ ಅವಕ್ಕೆ ಮನೇಲಿ ಇಪ್ಪಲೇ ಆವುತ್ತೋ.ಎನ್ನ ಹಾಂಗಿಪ್ಪವಕ್ಕೆ ಮನೇಲಿ ಕೃಷಿ ಸಾಕಷ್ಟು ಇಲ್ಲದ್ದೆ ಇಪ್ಪಗ ಪೇಟೆಗೆ ಹೋಗಿ ಹೊಟ್ಟೆ ತುಂಬುಸುದು ಅನಿವಾರ್ಯ.ಅದರ ಅರ್ಥ ಆನು ಹಳ್ಳಿ ಜೆನರ ತಾಪು ಮಾಡುತ್ತೆ ಹೇಳಿ ಅಲ್ಲ,ಅಲ್ಲದೋ?
            ಕೃಷಿಗೆ ಮರ್ಯಾದೆ ಯಾವಾಗಲೂ ಇದ್ದು.ರಜಾ ಸಣ್ಣ ಪ್ರಾಯಲ್ಲಿ ಮಕ್ಕೊಗೆ ಗೊಂತಾಗದ್ದೆ ಇದ್ದಾರೆ ಅದಕ್ಕೆ ಕಾರಣ ಎಂಗೋ ಹಿರೀ ಸ್ತಾನಲ್ಲಿ ಇಪ್ಪವು ವಿನಹಾ ನಿನಗೋ ಅಲ್ಲ.ಎನ್ನ ಹಾಂಗಿಪ್ಪವಕ್ಕೆ ಕೆಲಸದ ಒತ್ತಡ ಜಾಸ್ತಿ ಅಪ್ಪಗ ಮತ್ತಲ್ಲದ್ದೆ ಮಕ್ಕಳ ಶಾಲೆ ಕೆಲಸ ಜಾಸ್ತಿ ಇಪ್ಪಗ ಯಾವದರ ಹೇಳುದು,ಯಾವದರ ಬಿಡುದು ಹೇಳೇ ಅರಡಿಯದ್ದೆ ಮಕ್ಕೋ ಕೃಷಿಯ ಬಗ್ಗೆ ತಿಳಿಯದ್ದೆ ಇಪ್ಪಲೇ ಸಾಧ್ಯ.ಆದರೆ ಕೃಷಿಕ ಯಾವತ್ತೂ ಬೆಲೆ ಕಳಕ್ಕೊಂಬಲೇ ಇಲ್ಲೇ.

        2. ಹಳ್ಳಿಯವುದೆ ಪೇಟೆಯವುದೆ ಪರಸ್ಪರ ಅರ್ತುಗೊಂಡು ಬದುಕ್ಕಿರೆ ಅದು ಸಮಸ್ಯೆ ಆವುತ್ತಿತಿಲ್ಲೆ. ಈಗ ಹಾಂಗೆ ಅಯಿದಿಲ್ಲೆ ಹೇಳುದು ವಿಷಾದದ ಸಂಗತಿ. ಹಳ್ಳಿಂದ ಪೇಟೆಗೆ ಹೋಪ ಸಾಮಾನಿಂಗೆ ಚಿಲ್ಲರೆ ಪೈಸೆ ಬೆಲೆ. ಪೇಟೆಂದ ಸಾಮಾನು ತರೆಕ್ಕಾರೆ ಅದರ ಬೆಲೆ ನಾಲ್ಕಾರು ಪಟ್ಟು ಹೆಚ್ಚಿರ್ತು. ಈಗ ರಂಝಾನಿನ ಟೈಮಿಲ್ಲಿ ನೇಂದ್ರ ಬಾಳೆಹಣ್ಣಿಂಗೆ ಪೇಟೆಲಿ ೪೫ ರೂಪಾಯಿ! ಇದರಲ್ಲಿ ಆ ಬಾಳೆಗೊನೆ ಬೆಳದವಂಗೆ ಎಷ್ಟು ಸಿಕ್ಕುತ್ತು ಹೇಳುದು ಇಲ್ಯಾಣ ಪ್ರಶ್ನೆ. ಬೇಳೆಕಾಳುಗೊಕ್ಕೆ ಈಗ ಮುಟ್ಳೆಡಿಯದ್ದಷ್ಟು ಕ್ರಯ. ಇದು ಪೇಟೆಲಿ ಮಾಲುಗೊ ಬಂದ ಮೇಲೆ ಶುರು ಆದ್ದದಲ್ದೋ? ಅವು ಅವರ ಗೋದಾಮಿಲ್ಲಿ ಸ್ಟೋಕು ಮಡುಗಿ ಕೃತಕ ಅಭಾವ ಉಂಟುಮಾಡುವದು. ಎಲ್ಲ ವಸ್ತುಗೊಕ್ಕೂ ಕ್ರಯ ನಿರ್ಣಯ ಮಾಡುದು ಪೇಟೆಲಿಪ್ಪವು. ಇದು ಕ್ರಮ ಸರಿಯೋ? ಹಳ್ಳಿಲಿ ಪೇಟೆಗಳಲ್ಲಿ ಇರ್ತ ಹಾಂಗೆ ಸಂಘಂಗೊ ಇಲ್ಲೆ ನಿಜ. ಹಾಂಗಾಗಿ ಬೆಳೆಗಾರರ ಮಧ್ಯೆ ಒಮ್ಮತ ಇರ್ತಿಲ್ಲೆ. ಅದರ ಪೇಟೆಲಿಪ್ಪವು ’ಕ್ಯಾಶ್’ ಮಾಡುದಲ್ದೋ? ಹಾಲಿಂಗೆ ೨ ರೂಪಾಯಿ ಹೆಚ್ಚು ಮಾಡುವಗ ಬೊಬ್ಬೆ ಹಾಕುದು ಎಂತಕೆ? ಪೆಪ್ಸಿ ಕಂಪೆನಿಯ ’ಲೇಸ್’ ಚಿಪ್ಸಿಂಗೆ ೩೦ ಗ್ರಾಮಿಂಗೆ ೧೦ ರೂಪಾಯಿ ಕೊಡ್ಳೆ ಸಂಕಟ ಆಗದ್ದವು ೧ ಕಿಲೊ ಬಟಾಟೆಗೆ ೨೦ ರೂಪಾಯಿ ಅದರೆ ಮಾರುತ್ತವನ ಹತ್ರೆ ಚೊರೆ ಮಾಡ್ತವಿಲ್ಲೆಯೋ?
          ಎಲ್ಲೊರೂ ಹಳ್ಳಿಲಿ ಕೂದೊಂಡು ಎಂತ ಮಾಡುದು? ಆನುದೆ ಅದೇ ಪ್ರಶ್ನೆ ಕೇಳ್ತೆ. ಎಲ್ಲೊರೂ ಪೇಟೆಗೆ ಹೋದರೆ ಹೇಂಗಕ್ಕು? ನಮ್ಮ ಊರಿಲ್ಲಿ ಹಿಂದುಗಳ ಸಂಖ್ಯೆ ಕಮ್ಮಿ ಆವುತ್ತಾ ಇದ್ದು. ಮಾಪ್ಳೆಗಳ ಸಂಖ್ಯೆ ಹೆಚ್ಚುತ್ತಾ ಇದ್ದು. ಈ ವಿಷಯ ಗಂಭೀರವಾಗಿ ಚಿಂತಿಸೆಕ್ಕಾದ್ದದೇ. ನಾವು ಬ್ರಾಹ್ಮಣರೇ ಜಾಗೆ ಇಪ್ಪದರ ಈ ಬ್ಯಾರಿಗೊಕ್ಕೆ/ಕೊಚ್ಚಿ ಪೊರ್ಬುಗೊಕ್ಕೆ ಕೊಟ್ಟಿಕ್ಕಿ ಹೋಪದರಲ್ಲಿ ಉಷಾರು. ಹೀಂಗೆ ವಲಸೆ ಹೋದರೆ ನಿಂಗೊ ಹೇಳಿದ ’ಮ್ಯೂಚುವಲ್ ಬೆನೆಫಿಟ್’ ಎಲ್ಲಿಂದ ಬಕ್ಕು? ಕೆಲಸದವರ ಕೊರತೆ ಆದ್ದದು ಈ ಮಾಪ್ಳೆಗಳಿಂದಾಗಿಯೇ. ಕಳ್ಳ ಪೈಸೆಯ ಚಲಾವಣೆ ಮಾಡ್ಳೆ ನಾವು ೧೦೦ ಕೊಡ್ತಲ್ಲಿ ೨೦೦ ಕೊಟ್ಟು ಕೆಲಸದವರ ಆಲಸಿಗೊ ಮಾಡಿದ್ದದು. ಮತ್ತೆ ಅವು ಕೃಷಿ ಕೆಲಸಕ್ಕೆ ಬಕ್ಕೋ?
          ಪೇಟೆಲಿ ಮಾಡ್ತ ಸಾಫ್ಟ್ವೇರ್ ತಿಂಬಲೆಡಿತ್ತೋ? ಅಷ್ಟಕ್ಕೂ ಇವು ಡೆವಲಪ್ ಮಾಡ್ತ ಸಾಫ್ಟ್ವೇರ್ ಯಾವುದು? ಯಾವುದೋ ದೇಶಕ್ಕೆ ಬೇಕಾಗಿ ಅಲ್ಲದೋ ಕೆಲಸ ಮಾಡುದು? ಅದೂ ಕೆಲವು ಸರ್ತಿ ವಿಕ್ಟರ್, ಜಾರ್ಜ್, ಕ್ಲಿಫರ್ಡ್ ಹೇಳಿ ಪೊರ್ಬುಗಳ ಹೆಸರು ಮಡುಗ್ಯೊಂಡು. ಇಷ್ಟೆಲ್ಲ ಸಾಫ್ಟ್ವೇರ್ ಇಂಜಿನಿಯರ್ ಗೊ ಇದ್ದರೂ ದೇಶಕ್ಕೆ ಹೆಮ್ಮೆ ಕೊಡ್ತ ಹಾಂಗಿಪ್ಪ ಯಾವ ಪ್ರಾಡಕ್ಟ್ ಸ್ವಂತವಾಗಿ ಮಾರ್ಕೆಟ್ ಮಾಡಿದ್ದವು? ಮೈಕ್ರೋಸಾಫ್ಟ್, ಅಡೋಬ್, ಮೋಝಿಲ್ಲಾ ಹಾಂಗಿಪ್ಪ ಒಂದು ಹೆಸರು ಏಕೆ ಕಾಣ್ತಿಲ್ಲೆ? ಇನ್ಫೋಸಿಸ್, ವಿಪ್ರೋದವರ ಸ್ವಂತ ಸಾಫ್ಟ್ವೇರ್ ಯಾವುದು ಇಷ್ಟು ಹೆಸರು ಮಾಡಿದ್ದು?
          ಆನು ಪೇಟೆಗೆ ಆರೂ ಕೂಡ ಹೋಪಲಾಗ ಹೇಳ್ತಿಲ್ಲೆ. ಆದರೆ ಈಗ ಕಾಲ ಹೇಂಗಾಯಿದು ಹೇಳಿರೆ ಪೇಟೆಗೆ ಹೋದವ ಬುದ್ಧಿವಂತ, ಹಳ್ಳಿಲಿ ಕೂದವ ಹೆಡ್ಡ ಹೇಳಿ ಆಯಿದು. ಅದು ಸರಿ ಅಲ್ಲ ಹೇಳುದು ಆನು. ಬ್ರಾಹ್ಮಣರಲ್ಲಿ ಹುಡುಗಿಯರ ಕೊರತೆ ಆದ್ದದು ಈಗ ಎದ್ದು ಕಾಣುತ್ತಲ್ದೋ? ಅದರಲ್ಲಿಯೂ ಹಳ್ಳಿಲಿ ಕೂದವಕ್ಕೆ ಕೂಸುಗಳೇ ಸಿಕ್ಕುತ್ತಿಲ್ಲೆ. ಎಲ್ಲ ಕೂಸುಗಳ ಪೇಟೆಲಿಪ್ಪವಕ್ಕೆ ಮದುವೆ ಮಾಡಿ ಕೊಟ್ಟರೆ ಹಳ್ಳಿಲಿಪ್ಪವ ಎಂತ ಮಾಡೆಕ್ಕು? ನಿಂಗೊ ಹೇಳಿದ ’ಸಮತೋಲನ’ ಎಲ್ಲಿ ಬಂತು? ಪೇಟೆಲಿಪ್ಪ ಮಾಣಿಯಂಗೊಕ್ಕೆ ಹಳ್ಳಿಯ ಕೂಸುಗೊ ಅಕ್ಕಾದರೆ ಪೇಟೆಯ ಕೂಸುಗೊ ಹಳ್ಳಿಗೆ ಬಪ್ಪಲೆ ತಯಾರಿದ್ದವಾ? Mutual Benefit ಹೇಳಿ ಆಯೆಕ್ಕಾದರೆ ಇದುದೆ ಆಗೆಡದೋ?

          1. ಸಮತೋಲನ ಬಪ್ಪಲೆ ಸಾಧ್ಯ ಇಲ್ಲೇ.ಪೇಟೇಲಿ ಇಪ್ಪ ಎಲ್ಲೋರೂ ನಿನಗೋ ಹೇಳಿದ ಹಾಂಗೆ ಬಾಳೆ ಹಣ್ಣು ಐವತ್ತು ರುಪಾಯಿ ಕೊಟ್ಟು ತೆಕ್ಕೊಂಬದೆ.ಆನೂ ತೆಕ್ಕೊಳುತ್ತೆ.ಅದು ವ್ಯಾಪಾರಿಗಳ ಸೀನ್ತ್ರಿ.ಅದಕ್ಕೆ ಪೇಟೇಲಿ ಹಳ್ಳಿಲಿ ಹೇಳಿ ಏನೂ ಬಂಧ ಇಲ್ಲೇ.ಬೆಳೆಶಿದವ ಸಂತೇಲಿ ಕೂಡು ಮಾರ್ಲೇ ತಯಾರಾದರೆ ಸರಿಯಕ್ಕೋ ಏನೋ.ವ್ಯವಸ್ತೆಲಿ ಲೋಪ ಇದ್ದು ಹೇಳಿ ದೂರಿಗೊಂದು ಕೂಡು ಪ್ರಯೋಜನ ಆಗ.ನಮ್ಮ ಸ್ವಾಮಿಗೋ ಈ ಬಗ್ಗೆ ಯೋಚನೆ ಮಾಡಿ ಸಂಘಟನೆ ಮಾಡಲೇ ಸರಿಯಾದ ಜನ.
            ಸಮತೋಲನ ಅಥವಾ ಬದಲಾವಣೆ ಇಂದಿಂದ ನಾಳಂಗೆ ಅಪ್ಪ ಸಂಗತಿ ಅಲ್ಲ.
            ಕೂಸುಗಳ ಮಾಡುವೆ ಮಾಡುವ ವಿಷಯಲ್ಲಿ ಏನೂ ಹೇಳಲೇ ಬಾರ.ಎನ್ನ ಮಗಳ ಆನು ಎಲ್ಲಿ ಕೊಡೆಕು ಹೇಳುತ್ತದು ಎನ್ನ ವೈಯಕ್ತಿಕ ವಿಷಯ ವಿನಹಾ ಹಳ್ಳಿಲಿಪ್ಪವ,ಪೇಟೆಯವ ಹೇಳುದಲ್ಲ.
            ಲೋಪಂಗೋ ಇದ್ದು.ಇದಕ್ಕೆ ಉತ್ತರ ಎನ್ನ ಹತ್ತರೆ ಇಲ್ಲೇ.

          2. ಕೇಜಿಮಾವಾ°..
            ನಿಂಗೊ ಯೇವದೇ ಒಪ್ಪ ಕೊಡುವಗಳೂ ನಿರ್ದಿಷ್ಟ ವಾದವ ನೇರಾನೇರ ಹೇಳ್ತಿ. ಓದಲೆ ಗಮ್ಮತ್ತಿರ್ತು!
            ನಿಂಗೊ ಬರದ ಒಪ್ಪಂಗೊ, ಅದಕ್ಕೆ ಇಮ್ಮಡಿಬಟ್ಯೆ, ಶ್ರೀಶಣ್ಣ, ಮುಳಿಯಬಾವ, ಪದ್ಮನಾಬಣ್ಣ – ಇವು ಬರದ ಉತ್ತರಂಗೊ – ಎಲ್ಲವನ್ನೂ ನೋಡಿರೆ ಈ ಬೈಲು ಒಂದು ಚರ್ಚಾ ವೇದಿಕೆ ಆವುತ್ತು ಹೇಳ್ತ ಅಭಿಮಾನ ಕೆಲವು ಸಾಹಿತ್ಯಾಸಕ್ತರಿಂಗಾದರೂ ಆಗದ್ದೆ ಇರ.
            ದಿವ್ಯಕ್ಕನ ಭಾಷಾಭಿಮಾನ ನೋಡಿ ಹೃದಯತುಂಬಿ ಬಂತು. ನಮ್ಮಭಾಷೆಲೇ ಒಪ್ಪ ಕೊಟ್ರೆ ಎಷ್ಟು ಚೆಂದ, ಅಲ್ಲದೋ?!
            ಹ್ಮ್, ಇನ್ನು ವಿಶಯಕ್ಕೆ ಬಪ್ಪೊ –
            ಹಳ್ಳಿಜೀವನ ಬಿಡೆಡಿ, ಪೇಟಗೆ ಹೋಗೆಡಿ ಹೇಳಿ ಆರೂ, ಯೇವತ್ತೂ ಹೇಯಿದ್ದಿಲ್ಲೆ.
            ಈ ಶುದ್ದಿ ನವಗೆ ಹೇಳಿದ ಬಿಂಗಿಪುಟ್ಟ ಬೆಂಗುಳೂರಿಂಗೆ ಹೋಯಿದ° – ಕಳುದ ಸರ್ತಿ ಅವನ ಶುದ್ದಿ ಮಾತಾಡಿದ್ದು.
            ಅವ° ಪೇಟಗೆ ಹೋದ ಕಾರಣ ಅವನ ಅಮ್ಮಂಗೆ ನೋಡ್ಳೆ ಒಂದು ಟೀವಿ ಬಂತು ಈಗ.
            ಅವನ ಮನೆಲಿ ಅಬಿವುರ್ದಿ ಕಾರ್ಯಂಗೊ ಆವುತ್ತಾ ಇದ್ದು. ಪೇಟೆಯೇ ವೆವಹಾರದ ಕೇಂದ್ರ.

            ಹಳ್ಳಿಗಳಲ್ಲಿ ಇದ್ದೋರು ಪೇಟಗೆ ಪೂರಕ, ಪೇಟೆಲಿದ್ದೋರು ಹಳ್ಳಿಗೆ ಪೂರಕ.
            ಒಂದಕ್ಕೊಂದು ಪೂರಕ, ಪರ್ಯಾಯ ಅಲ್ಲನ್ನೇ!

            ಆದರೆ,
            ಪೇಟೆಲಿದ್ದೋಂಡು ನಮ್ಮ ಹಳೆ ನೆಂಪುಗಳ ಮಾಡ್ತದು ಹೇಂಗೆ – ಹೇಳ್ತದು ಈಗಾಣ ಚಿಂತನೆ.
            ದೊಡಾ ದೇವರಕೋಣೆಂದ ಸಣ್ಣ ವೆವಸ್ತೆಗೆ ನಾವು ಹೇಂಗೆ ಬದಲಾತು – ಹೇಳ್ತ ಶುದ್ದಿಯ ಮಾತಾಡಿದ್ದು.
            ಇದುದೇ ಪೇಟೆಮಟ್ಟಿಂಗೆ ಅನಿವಾರ್ಯ ಆದಿಕ್ಕು – ಮನೆಯೇ ಸಣ್ಣ ಅಪ್ಪಗ ದೇವರಕೋಣೆ ಸಣ್ಣ ಆಗದೋ – ಕೇಳುಗು ಜೆನಂಗ.
            ಆದರೆ ತೀರಾ ಸಣ್ಣ ಒಂದು ಗೂಡು ಮಾಡಿಗೊಂಬದು ಎಂತ್ಸಕ್ಕೇ? – ಹೇಳ್ತದೇ ಬೈಲಿಲಿ ಬಂದ ಪ್ರಶ್ನೆ.
            ಒಳ್ಳೆ ರೀತಿಲಿ ವಿಮರ್ಶೆ ತೆಕ್ಕೊಂಡು ಹೋದ ನಿಂಗೊಗೆ ಎಲ್ಲೋರಿಂಗೂ ಒಂದೊಂದು ಒಪ್ಪ.
            ವಸ್ತು ವಿಮರ್ಶೆ ಇನ್ನೂ ಆಗಲಿ.
            ಚಿಂತನೆಗೊ ಹೊಸದೊಂದು – ಬರಲಿ ಒಂದೊಂದು!!

          3. ಕೂಸುಗಳ ಮದುವೆ ಮಾಡಿ ಕೊಡ್ತ ವಿಷಯ ಅವರವರ ವೈಯಕ್ತಿಕ ವಿಷಯ ಹೇಳ್ತ ವಾದ ಒಪ್ಪೆಕ್ಕಾದ್ದದೇ. ಅದಕ್ಕೆ ಎದುರು ಹೇಳುವ ಹಾಂಗಿಲ್ಲೆ. ಆದರೆ ಇದು ಸಾಮಾಜಿಕ ಅಸಮತೋಲನ ಉಂಟುಮಾಡುವ ಮಟ್ಟಿಂಗೆ ಹೋದ್ದದು ಮಾಂತ್ರ ಒಪ್ಪಲಾಗದ್ದ ಸಂಗತಿ.
            ಇಡೀ ಭಾರತಲ್ಲಿ ಗಂಡು ಹೆಣ್ಣು ಅನುಪಾತ ಕಳವಳಕಾರಿಯಾಗಿ ವ್ಯತ್ಯಾಸ ಆವುತ್ತ ಇಪ್ಪದು ಗೊಂತಿದ್ದಲ್ದೋ? ಅದರಲ್ಲಿಯೂ ಬ್ರಾಹ್ಮಣ ಸಮುದಾಯಲ್ಲಿ ಈ ವ್ಯತ್ಯಾಸ ಅತೀ ಹೆಚ್ಚು ಆಯಿದು. ಫ್ಯಾಮಿಲಿ ಪ್ಲಾನಿಂಗ್, ವೈದ್ಯಲೋಕಲ್ಲಿಪ್ಪ ಸೌಲಭ್ಯಂಗಳ ದುರುಪಯೋಗಂದಾಗಿ ಈ ಸಮಸ್ಯೆ ಇಷ್ಟು ಜೋರಾದ್ದದು. ಪ್ರತಿಯೊಬ್ಬಂಗೂ ಇದು ವೈಯಕ್ತಿಕ ವಿಷಯವೇ. ಆದರೆ ಹೀಂಗಿಪ್ಪ ವೈಯಕ್ತಿಕ ವಿಷಯಂಗೊ ಸಾಮಾಜಿಕವಾಗಿ ದುಷ್ಪರಿಣಾಮ ಉಂಟುಮಾಡುತ್ತಲ್ದೋ? ಇದಕ್ಕೆ ಎಂತ ಹೇಳ್ತಿ?
            ಮಗಳ ಮದುವೆ ಮಾಡಿ ಕೊಡ್ತ ವಿಷಯ ಬಿಡಿ, ಅದರ ಮೊದಲು ಪೇಟೆಲಿ ಬೆಳದ ಕೂಸುಗೊ ಹಳ್ಳಿಗೆ ಬಪ್ಪಲೆ ತಯಾರಿದ್ದವೋ?

          4. ಪೇಟೇಲಿ ಬೆಳದ ಕೂಸುಗೋ ಹಳ್ಳಿಗೆ ಬಾರವು.ಆದರೆ ಇಂದು ಹಳ್ಳಿಲಿ ಬೆಳದ ಕೂಸುಗಳೂ ಹಳ್ಳಿಲಿ ಇಪ್ಪಲೆ ತಯಾರಿಲ್ಲೆ.ಎಲ್ಲಾರೂ ಸುಖವ ಹೆರ ಹುಡ್ಕುದು ಇದಕ್ಕೆ ಒಂದು ಕಾರಣ.ಸುಖ ನಮ್ಮ ಒಳವೇ ಇಪ್ಪದಲ್ಲದ್ದೆ ಹೆರ ಸಿಕ್ಕುವ ಸಾಮಾನಲ್ಲ ಹೇಳುದು ನವಗೆ ಗೊಂತಪ್ಪಗ ನಾವು ಭಾರೀ ದೂರ ಹೋಗಿ ಆಗಿರ್ತು,ಹಿಂದೆ ಬಪ್ಪದು ಕಷ್ಟವೇ.ಎನ್ನ ಒಬ್ಬ ಗುರ್ತದವ° ಪೇಟೇಲಿ ಇಪ್ಪವ° ಹಳ್ಳಿಯ ಜಾಗೆಯ ಕೊಡದ್ದೆ ಮಡಿಕ್ಕೊಂಡಿದ°.ಪ್ರಾಯ ಅಪ್ಪಗ ಹಳ್ಳಿಗೆ ಬಪ್ಪೋ° ಹೇಳಿ.ಅಥವಾ ಮಕ್ಕೊಗೆ ಇರಲಿ ಹೇಳಿ.
            ಬ್ರಾಹ್ಮಣ ಸಮುದಾಯಲ್ಲಿ ಗಂಡು ಹೆಣ್ಣು ಅನುಪಾತ ಹೆಂಗಿದ್ದು ಹೇಳುತ್ತ ವಿವರ ಎಲ್ಲಿಯೂ ಸಿಕ್ಕುತ್ತಿಲ್ಲೆ.ಆದರೆ ಕೂಸುಗಳ ಸಂಖ್ಯೆ ಕಮ್ಮಿ ಆವುತ್ತ ಇಪ್ಪದರ ಬಗ್ಗೆ ಎರಡು ಮಾತಿಲ್ಲೆ.ಇದು ಸಾಮಾಜಿಕ ದುಷ್ಪರಿಣಾಮ ಉಂಟು ಮಾಡ್ತು ಹೇಳುದೂ ಒಪ್ಪೆಕ್ಕಾದ್ದೆ.ಪ್ಲಾನಿಂಗಿಂದ ಹೆಚ್ಹು ಸವಲತ್ತಿನ ದುರುಪಯೋಗ ಹೇಳುದು ಹೆಚ್ಹು ಸರಿಯಕ್ಕು.ಅದರ ಸರಕಾರವೇ ಕಾನೂನು ಮೂಲಕ ತಡೆಯೆಕ್ಕು.ಒಬ್ಬನ ಕೈಲಿ ಅಪ್ಪ ಕೆಲಸ ಇದಲ್ಲ.
            ಅದಲ್ಲದ್ದೆ ಡಾಕ್ಟ್ರು ರೋಗಿ ಹೇಳಿದ ಹಾಂಗೆ ಕೊಣಿವದು ನಿಲ್ಲೆಕ್ಕು.ಕಷ್ಟ.ಇಂದು ಪೈಸೆ ಮಾಡುದು ಅತಿಯಾಗಿಪ್ಪ ಕಾಲಲ್ಲಿ ದಾಕ್ಟರುಗಳೂ ಆ ದಾರಿ ಹಿಡಿವದು ಅನಿವಾರ್ಯ ಆಯಿದು,ಇಲ್ಲದ್ದರೆ ಯಾವದೇ ಯೋಗ್ಯತೆ ಇಲ್ಲದ್ದ ಡಾಕ್ಟ್ರು ಹೊಸಾ ಕಾರಿಲ್ಲಿ ಹೋಪದು ನೋಡುವಾಗ ಆನೂ ಹೀಂಗೆ ಹೊಪಲೆ ಸಾಧ್ಯ ಇದ್ದು ಹೇಳಿ ಪಶ್ಚಾತ್ತಾಪ ಆವುತ್ತು.
            ಅಂತೂ ಇದಕ್ಕೆ ಪರಿಹಾರ ಎನ್ನ ಹತ್ತರೆ ಇಲ್ಲೇ.

  22. ಪೇಟೆಲಿ ಒಂದು ಮನೆ. ಅದರಲ್ಲಿ ಒಂದು ಸಣ್ಣ ದೇವರ ಕೋಣೆ. ಅದರ ಸರೀ ಮೇಲೆ ‘ಕಮೋಡು’ ಇಪ್ಪ ಒಂದು ಪಾಯಿಖಾನೆ ಬತ್ತ ಹಾಂಗೆ ಒಂದು ಅತಿಥಿಗೊಕ್ಕೆ ಇಪ್ಪ ಕೋಣೆ. ಮನೆ ಮಾತ್ರ ಭಾರೀ ಗಮ್ಮತ್ತು ಕಟ್ಟುಸಿದ್ದವು. ಮನೆ ಒಕ್ಕಲಿಂಗೆ ಮನೆಲಿ ಸತ್ಯನಾರಾಯಣ ಪೂಜೆ ಮಾಡುವಾಗ ಅರ್ಜೆಂಟು ಆದ ಕೆಲಾವು ಜೆನ ನೆಂಟ್ರು ಮೇಲೆ ಇತ್ತಿದ್ದ ಕಮೋಡು ಉಪಯೋಗಿಸಿಕೊಂಡು ಇತ್ತಿದ್ದವಡ. ದೇವರ ಕೋಣೆ ಸಣ್ಣ ಆತು ಹೇಳುವದು ಒಂದು ವಿಷಯ ಮಾಡ್ಲಾಗ. ಆದರೆ, ಹೀಂಗಿಪ್ಪ ಅಪಸವ್ಯಂಗೊ ಆಗದ್ದ ಹಾಂಗೆ ನೋಡೆಕ್ಕು. ಹೊಸಬ್ಬಂಗೊ ಕಾಲಕ್ಕೆ ತಕ್ಕ ಹಾಂಗೆ ಕೋಲ ಕಟ್ಟುತ್ತವಪ್ಪ. ಅದರ ನೆಗೆ ಮಾಡುದು ಎಂತಕೆ? ಎಲ್ಲೊರಿಂಗೂ ಹಳೇ ಕಾಲಕ್ಕೆ ಓಪಾಸು ಹೋಪಲೆಡಿತ್ತೋ?

  23. ಎನಗುದೇ ದಿವ್ಯ ಹೇಳಿದ್ದು ಸರಿ ಕಾಣ್ತು..ದೇವರಕೋಣೆ ಸಣ್ಣದಿಪ್ಪದು ಆದಿಕ್ಕು ಶುಭ ಅತ್ತೆಯ ಮನೆಲಿ,ಆದರೂ ಅದರಲ್ಲಿ ಕ್ರಮ ಪ್ರಕಾರವಾಗಿ ಪೂಜೆ ಮಾಡ್ಸಿದವನ್ನೇ!!! ಪೇಟೆಲಿ ಒಂದು ಮನೆ ಕಟ್ಟುದೇ ಸಹಾಸಕ್ಕೆ ಕೈ ಹಾಕಿದ ಹಾಂಗೇ..ಹಾಂಗಿಪ್ಪಗ ಇಪ್ಪ ರಜಾ ಜಾಗೆಲಿಯೇ ಮನೆ ಕಟ್ಟೆಕ್ಕು ಹೇಳಿ ಅಪ್ಪಗ ತರವಾಡು ಮನೆಲಿ ಇಪ್ಪಷ್ಟು ದೊಡ್ಡ ದೇವರ ಕೋಣೆ ಕಟ್ಟುಸೆಕ್ಕು ಹೇಳಿ ಮನಸ್ಸಿದ್ದರೂ ಮಾಡ್ಲೆ ಕಷ್ಟವೇ..ಹಾಂಗಾದರೂ ಸಣ್ಣದಾಗಿ ಆದರೂ ದೇವರಕೋಣೆ ಇರಲಿ ಹೇಳಿ ಕಟ್ಟುಸುತ್ತವನ್ನೇ!!!!
    ಎನಗೆ ಕಾಂಬದು ಮನೆಲಿ ದೇವರ ಕೋಣೆ ಇದ್ದಾ ಅಥವಾ ಎಷ್ಟು ದೊಡ್ಡ ಇದ್ದು ಹೇಳ್ತದು ಮುಖ್ಯ ಅಲ್ಲ,ಅದರ ಬದಲು ಮನೆಯವಕ್ಕೆ ಭಕ್ತಿ ಎಷ್ಟು ಇದ್ದು ಹೇಳ್ತದು ಮುಖ್ಯ ಆವುತ್ತು..ದೇವರು ಎಲ್ಲೆಲ್ಲಿಯೂ ಇಪ್ಪಗ ದೇವರಿಂಗೆ ಅವರದ್ದೇ ಆದ ಕೋಣೆ ಬೇಕು ಹೇಳಿ ಬಯಸುಗಾ?ಆತು,ದೇವರ ಕೋಣೆ ಮಾಡುವ,ಅದು ಇಷ್ಟೇ ದೊಡ್ಡ ಇರೆಕ್ಕು ಹೇಳಿ ಇದ್ದಾ?ಬಟ್ಟಮಾವ ಮಂತ್ರ ಹೇಳುವಗ “ಯಥಾ ಶಕ್ತ್ಯಾ”ಹೇಳಿ ಹೇಳ್ತವಿಲ್ಲೆಯಾ,ಹಾಂಗೇ ತಮ್ಮ ತಮ್ಮ ಅನುಕೂಲ ಶಕ್ತಿ ಇಪ್ಪಷ್ಟು ದೊಡ್ಡಕ್ಕೆ ಮನೆ ಕಟ್ಟುಸುತ್ತವು..ಮೊದಲಾಣೋರಿಂಗೆ ಮನೆ ಕಟ್ಟುಸುಲೆ ಜಾಗೆ ಬೇಕಾದಷ್ಟಿತ್ತು,ಅಷ್ಟಪ್ಪಗ ಬಾಕಿ ಕೋಣೆಗಳಾಂಗೇ ದೇವರ ಕೋಣೆಯನ್ನೂ ದೊಡ್ಡ ಮಾಡಿದವು,ಆದರೆ ಈಗ ಅದುದೇ ಪೇಟೆಯ ಸಣ್ಣ ಮನೆಗಳಲ್ಲಿ ಹಾಂಗೆ ಮಾಡ್ಲೆ ಎಡಿಗಾ?ಸಣ್ಣ ದೇವರಕೋಣೆಲಿ ಸುದಾರ್ಸುಲೆ ಕಷ್ಟ ಆದರೂ ಸರಿ,ದೇವರಿಂಗೆ ಕ್ರಮಬದ್ದವಾಗಿ ಪೂಜೆ ಮಾಡಿ ೪ ಜನಕ್ಕೆ ಊಟ ಹಾಕೆಕ್ಕು ಹೇಳಿ ಕಂಡತ್ತನ್ನೇ,ಅದೇ ಮುಖ್ಯ ಅಲ್ಲದಾ ಒಪ್ಪಣ್ಣ??

    1. ಡಾಗುಟ್ರಕ್ಕಾ..
      ಇಂಜೆಕ್ಷನಿನ ಹಾಂಗಿರ್ತ ಒಪ್ಪ ಇದು!
      ವಿಶಯವೂ ಇದ್ದು, ಖಾರವೂ ಇದ್ದು! 🙂
      ಕೊಶಿ ಆತು.

      ಅದೇ, ಈಗಾಗಲೇ ಹೇಳಿದಾಂಗೆ – ದೇವರಕೋಣೆ ದೊಡ್ಡ ಇದ್ದರೆ ಜಾಗೆ ಹಾಳಪ್ಪದು ಹೇಂಗೆ?
      ಅದು ನವಗೇ ಇಪ್ಪ ಕೋಣೆ ಅಲ್ಲದೋ? ಅಲ್ಲಿ ಅನಾಚಾರ ಮಾಡದ್ದರೆ ಆತು.
      ಮಾಪುಳ್ಚಿಗಳ ಹಾಂಗೆ ಮನೆ ಇಡೀಕ ಚೆರ್ಪು ಹಾಕಿಯೊಂಡು ನಡೆಯದ್ರೆ ಆತು!! ಅಷ್ಟೇ!

    2. ದಾಕುಟ್ರಕ್ಕ ನಿಂಗ ಬರದ ಒಪ್ಪವ ಓದಿದೆ.ರಜಾ ಖಾರಕ್ಕೆ ಬರದಿರೋ ಹೇಳಿ ತೋರುತ್ತು ! ಎಂಥಕ್ಕೆ ಹೇಳಿರೆ ನೋಡಿ ನಮ್ಮ ಶ್ರಿಷ್ಟಿಸಿದವನೇ ದೇವರು! ಹಾಂಗಿಪ್ಪಗ ನಾವು ದೇವರಿಂಗೆ ಎಷ್ಟು ಕೈ ಮುಗುದರೂ ಕಮ್ಮಿಯೇ !
      ನೋಡಿ ಅಕ್ಕ ನಮ್ಮ ಗುರುಗೋ ನವಗೆ ಹೇಳಿ ಕೊಟ್ಟದು ನೆಂಪಿದ್ದಾಯಿಕ್ಕು.ಮಾತ್ಹ್ರು ದೇವೋ ಭವಃ,ಪಿತ್ರ್ ದೇವೋ ಭವಃ………..! ಇಷ್ಟೆಲ್ಲಾ ಕಲ್ತು ಬಂದ ನಮ್ಮವ್ವೆ ಈಗೀಗ ಅಬ್ಬೆ ಅಪ್ಪನ ಪ್ರಾಯ ಅಪ್ಪಗ ನೋಡುಲೆ ಕಷ್ಟ
      ಆವುತ್ತು ಹೇಳಿ ಎಲ್ಲಿಯಾದರೂ ಆಶ್ರಮಲ್ಲಿಯೋ ,ಅಲ್ಲಿ ಇಲ್ಲಿ ಬಿಟ್ಟಿಕ್ಕಿ ಬತ್ಹವು ಹೇಳಿ ಕೇಳಿದ್ದೆ !! ಇತ್ತೀಚೆಗೆ ಆನು ಊರಿಲಿ ಇಪ್ಪಗ ಆರೋ ಹೇಳಿದ್ದು ಕೇಳಿದ್ದೆ ಪ್ರಾಯ ಆದ ಅಬ್ಬೆಯ” ನಾಯಿಯ” ಕಟ್ಟಿ ಹಾಕುವ ವಯ್ಯಪ್ರೆ ಲಿ ಮನುಗಿಷಿ ಅಲ್ಲಿಗೆ ತಿಮ್ಬಲೇ ಉಮ್ಬಲೇ ಕೊಟ್ಟುಗೊಂದು ಇತ್ತಿದ್ದವದ!!!!!! ಅಕ್ಕ ಒಪ್ಪಣ್ಣ ಹೇಳಿದ ಹಾಂಗೆ ನಾವು ದೇವರೋಳ ಬೇದನ್ಕಟ್ಟೆ ಎಂಥದೂ ಮಾಡದ್ದೆ ಇದ್ದುಗೊಂದು ಆ ಕೋಣೆಯ ಒಳ್ಳೆದಕ್ಕಾಗಿ ಎಂಥಕ್ಕೂ ಉಪಯೋಗಿಸುಲೇ ಆಗ ಹೇಳಿ ಇಲ್ಲೇ.ಇಂದ್ರಾಣ ಕಾಲಲ್ಲಿ, ದೇವರಿನ್ಗೆ ಸಮಾನರಾದ;ಜೀವಲ್ಲಿಪ್ಪಗಳೇ” ಅಬ್ಬೆ ಅಪ್ಪ” ಇವರನ್ನೇ ಸರಿಯಾಗಿ ನೋಡಿಗೊಮ್ಬಲೇ ಎಡಿಯದ್ದವು ದೇವರಿನ್ಗೆ ಎಷ್ಟು ಬೆಲೆ ಕೊಡುಗು !!??

  24. ದೇವರ ಕೋಣೆ ದೊಡ್ಡ ಇದ್ದು ಹೇಳಿ ಆರಾದರೂ ದೇವರ ಕೋಣೆಯ ಒಳಗೆ ನಾಯಿಯ ಹೋಪಲೆ ಬಿಡ್ತವ ಒಪ್ಪಣ್ಣ …??? ಹಾನ್ಗಿಪ್ಪ ಹೋಲಿಕೆ ಎಷ್ಟು ಸರಿ .. ??

    1. ದಿವ್ಯಕ್ಕೋ..
      ಬೇಜಾರಾತಾ? ಒಪ್ಪಣ್ಣಂಗೂ ಬೇಜಾರಾಗಿತ್ತು, ಶುದ್ದಿ ಹೇಳುವಗ.
      ನಿನಗೆ, ಎನಗೆ, ನವಗೆ ಎಲ್ಲೊರಿಂಗೂ ಹಾಂಗೇ ಕಾಣ್ತು – ದೇವರೊಳಂಗೂ ನಾಯಿಗೂ ಎಂತ ಹೋಲಿಕೆ! ಹೇಳಿಗೊಂಡು.
      ಆದರೆ ಶುಬತ್ತೆಯ ಸ್ಥಾನಲ್ಲಿ ನಿಂದುಗೊಂಡು ನೋಡಿರೆ, ಅದೊಂದು ದೊಡ್ಡ ಪ್ರಶ್ನೆಯೇ ಅಲ್ಲ.
      ಅದರ ರೋಸಿ ಮನೆಯ ಎಲ್ಲಾ ಕೋಣೆಗೊಕ್ಕೂ ಹೋಪಲಕ್ಕಾದ ವೆಗ್ತಿತ್ವ. ಆದರೆ, ದೇವರೊಳಂಗೆ ಒಂದು ಬಗೆ ಹೋವುತ್ತಿಲ್ಲೆ, ಎಂತ್ಸಕ್ಕೇ ಹೇಳಿತ್ತುಕಂಡ್ರೆ – ಶುದ್ದದ ಆಚಾರಂದಾಗಿ ಅಲ್ಲ, ಬದಲಾಗಿ – ಹೋಪಲೆಡಿತ್ತಿಲ್ಲೆ ಹೇಳ್ತ ಕಾರಣಲ್ಲಿ.

      ಇಲ್ಲಿ ದೇವರೊಳ ಮತ್ತೆ ನಾಯಿಯ ಹೋಲಿಕೆ ತೆಕ್ಕೊಳೆಡಿ, ಬದಲಾಗಿ ದೇವರೊಳ ನಾಯಿಯ ಗಾತ್ರಂದಲೂ ಸಣ್ಣ ಹೇಳ್ತ ಹೋಲಿಕೆ ತೆಕ್ಕೊಳಿ.
      ಇನ್ನೂ ಬೇಜಾರಾದರೆ – ಇಪ್ಪವಿಶಯ ಹೇಳಿ ಬೇಜಾರುಮಾಡಿದ ಒಪ್ಪಣ್ಣ – ಹೇಳೆಕ್ಕಟ್ಟೆ!! 🙁
      ಬೇಜಾರಲ್ಲೇ ಕಾಶಿಗೋ, ರಾಮೇಶ್ವರಕ್ಕೋ ಮಣ್ಣ ಹೋಯಿಕ್ಕೆಡಿ ಇನ್ನು! ಹಾಂ! 😉

    2. ದಿವ್ಯಕ್ಕಾ ಈಗಾಣವಕ್ಕೆ ಗೊಂಥಪ್ಪಲೇ ಒಪ್ಪಣ್ಣ ಹೋಲಿಕೆ ಕೊಟ್ಟದು ತಪ್ಪು ಹೇಳಿ ಕಾಣ್ತಿಲ್ಲೆ ! ನಮ್ಮ ಶ್ರಿಷ್ಟಿಕರ್ಥನೆ ಆದ ಆ ಪರಮಾತ್ಹ್ಮಂಗೆ ಒಂದು ಸಣ್ಣ ಕೋಣೆ ಕಟ್ಟುಸುವೊವಕ್ಕೆ ಅರ್ಥ ಆಗಲಿ ಹೇಳಿ ನಾಯಿಗೂ
      ಅಲ್ಲಿ ಜಾಗೆ ಇಲ್ಲೇ ಹೇಳಿ ಬರದ್ದಾಯಿಕ್ಕು !!

  25. ಒಪ್ಪಣ್ಣ….. ಈ ಲೇಖನ ಓದಿ ಅಪ್ಪಗ ಎನಗೆ ಒಂದು ಸಂಶಯ ಬಂತು .. ಎಂತ ಹೇಳಿದರೆ ಒಬ್ಬನ ಮನೆಯ ದೇವರ ಕೋಣೆಯ ಸೈಜ್ ಆವನ ದೇವರ ಮೇಲಣ ಭಕ್ತಿಯ ತೋರುಸುತ್ತಾ ?? ದೇವರ ಕೋಣೆ ದೊಡ್ದದದಷ್ಟು ಭಕ್ತಿ ಹೆಚ್ಹು, ಸಣ್ಣದಾದಷ್ಟು ಭಕ್ತಿ ಕದಮ್ಮೆ ಹೇಳಿ ಎಂತಾದರು ಇದ್ದ? ಎನ್ನ ಪ್ರಕಾರ ಸೈಜ್ ಇಂದ ದೇವರ ಮೇಲಣ ಭಕ್ತಿ ಮುಖ್ಯ .. ಹಾಂಗೆ ಹೇಳಿಗೊಂದು ದೇವರ ಕೋಣೆ ಯಾ ಹೆಂಗೋ ಹೆಂಗೋ ಮಾಡಲೇ ಅಕ್ಕು ಹೇಳಿ ಅಲ್ಲ .ದೇವರ ಕೋಣೆ ರಜ ಸಣ್ಣದಾದರೂ ಕ್ಲೀನ್ ಆಗಿ ಇಪ್ಪದು ಮುಖ್ಯ. ಈಗನ ಫ್ಲಾಟ್ ನಮೂನೆ ಮನೇಲಿ ದೇವರ ಕೋಣೆಗೆ ಜಾಗೆಯೇ ಮಡುಗುತ್ತವುಲ್ಲೇ.. ಮತ್ತೆ ನಮಗೆ ಬೇಕಾದ ಹಾಂಗೆ ಸನ್ನ್ಕೊಂದು ದೇವರ ಕೋಣೆ ಮಾಡುದು .(ನಾವ್ವು ಅದರ ದೇವರ ಕೋಣೆ ಹೇಳಿ ಭಾವಿಸಿಗೊಮ್ಬದು).ಕಡೆಗೆ ಅದು ಲೆವಿಂಗ್ ರೂಂ cum dining ರೂಂ cum ದೇವರ ಕೋಣೆ ಅವುತ್ತು.. ಹಾನ್ಗದರೆ ಫ್ಲಾಟ್ ಲಿ ಇಪ್ಪವಕ್ಕೆ ದೇವರ ಮೇಲೆ ಭಕ್ತಿ ಇಲ್ಲೇ ಹೇಳಿ ಲೆಕ್ಕವ ?? atleast ಶುಭಾತ್ತೆ ಅಷ್ಟಾದರೂ ಜಾಗೆ ಮದಿಗಿದ್ದಕ್ಕೆ ಅದರ ಮೆಚಕ್ಕು .. ಶುಭತ್ತೆ ಯಾ ಮನೇಲಿ ದೇವರ ಕೋಣೆ ಸಣ್ಣದಾರು ಪ್ರತಿವಾರ ದೇವಸ್ತಾನಕ್ಕೆ ಹೋಗಿ ಪೂಜೆ ಮದಿಕ್ಕಿ ಬತ್ತೆನ್ನೇ ..ಅದು ಅದರ ದೇವರ ಮೇಲಣ ಭಕ್ತಿಯ ತೋರ್ಸುತ್ತು. ಯಾವದೇ ಗಡಿಬಿಡಿ ಇಲ್ಲದೆ , ಬೇರೆ ಸಾವಿರ ಆಲೋಚನೆ ಮಾಡದ್ದೆ ,ನಿಷ್ಕಲ್ಮಶ ಮನಸಿಲ್ಲಿ ( ದೇವರ ಕೋಣೆ ಸಣ್ಣದಾದರು ) ಭಕ್ತಿಲಿ ದೇವರಿನ್ಗೆ ನಮಸ್ಕಾರ ಮಾಡಿದರೆ ದೇವರ ದಯೆ ನಮ್ಮ ಮೇಲೆ ಇಕ್ಕು.. ಅಷ್ಟೊತ್ತಿನ್ಗೆ ಆಸ್ಪತ್ರೆಗೋ ದೊಡ್ಡ ಆಗ. ಅದಕ್ಕೆ ನಾಮ್ಮ ಹಿರಿಯರು ಹೇಳಿದ್ದು “ಮನೆಯೇ ಮಂತ್ರಾಲಯ ಮನಸೇ ದೇವಾಲಯ ” ಹೇಳಿ..

    1. ದಿವ್ಯಕ್ಕಾ..
      ಇಲ್ಲಿ ಭಕ್ತಿ ಇಲ್ಲೆ ಹೇಳ್ತ ಉದ್ದೇಶಂದ ಹಾಂಗೆ ಹೇಳಿದ್ದಲ್ಲ ದಿವ್ಯಕ್ಕಾ..
      ಇದಾ,
      ತುಂಬ ಮದಲಿಂಗೆ ಇಡೀ ಮನೆಯೇ ದೇವರದ್ದು – ಅದರ್ಲಿ ನಾವಿಪ್ಪದು ಹೇಳಿಗೊಂಡು ಬದುಕ್ಕಿತ್ತಿದ್ದವು ನಮ್ಮ ಅಜ್ಜಂದ್ರು.
      ಕ್ರಮೇಣ, ಇಡೀ ಮನೆಯೇ ದೇವರು ಕೊಟ್ಟದು – ಅದರ್ಲಿ ಆ ನೆಡೂಕಾಣ ದೊಡ್ಡ ಕೋಣೆ ದೇವರಿಂಗೆ ಇಪ್ಪದು – ಹೇಳಿಗೊಂಡವು. ದೇವರಿಂಗೆ ಇಪ್ಪದಾದರೂ, ನಾವು ನಮ್ಮ ನಿತ್ಯ ನೈಮಿತ್ತಿಕಕ್ಕೆ ಉಪಯೋಗ ಮಾಡ್ಳಾಗ ಹೇಳ್ತದು ಇತ್ತಿಲ್ಲೆ.
      ಆ ದೊಡಾ ದೇವರಕೋಣೆ ಕಪಾಟೋ, ಹಾಸಿಗೆಯೋ, ಸಾಮಾನುಗಳೋ, ಹಾಲೋ, – ಹೀಂಗಿರ್ತದು ಎಂತಾರು ಮಡಿಕ್ಕೊಂಡು ಇಕ್ಕು. ದೇವರ ಕಾರ್ಯಂಗಳ ಅಲ್ಲಿ ಮಾಡುಗು. ಪ್ರಾರ್ಥನೆಯ ಕಾಲಕ್ಕೆ ಮನೆಯ ಎಲ್ಲೋರೂ ಬಂದು ಕೂದುಗೊಂಗು.

      ಈಗೀಗ – ಅತೀ ಸಣ್ಣ ಕೋಣೆ – ಯೆಜಮಾನಂಗೂ ಬರ್ಕತ್ತಿಂಗೆ ಕೂಪಲೆಡಿಯದ್ದ ನಮುನೆ ಕೋಣೆಗೊ.
      ದೇವರಕೋಣೆ ನಮ್ಮದಲ್ಲ – ಹೇಳ್ತ ಆಲೋಚನೆಂದಾಗಿ ಈ ಪರಿಸ್ಥಿತಿ ಬಂದುಬಿಟ್ಟತ್ತೋ ಹೇಳಿ ಕಾಂಬದು ನವಗೆ.

      ಶುಬತ್ತೆಯ ದೈವಭಕ್ತಿಯ ಬಗ್ಗೆ ಪ್ರಶ್ನೆ ಇಲ್ಲೆ. ಆದರೆ ಮನಸ್ಸು ಸಣ್ಣ ಆಯ್ಕೊಂಡು ಬಂದು ದೇವರಕೋಣೆಗೆ ಹೋಪದು ಅಪುರೂಪ ಆದರೆ ಮಕ್ಕೊಗೆ ಭಕ್ತಿ ಬೆಳವದು ಹೇಂಗೆ?
      ತಾಯಿಯೇ ಮೊದಲ ಗುರು ಆದರೆ ಮನೆಯೇ ದೇವಾಲಯ – ಅಲ್ಲದೋ?

  26. ಒಪ್ಪಣ್ಣ,
    ನೀನು ಶುಭತ್ತೆಯ ಹೀಂಗೆಲ್ಲ ಹೇಳಿರೆ ಹೇಂಗೆ? ಪಾಪ ಮನೆ ಕಟ್ಟುವಾಗ ಮಗಂಗೊಂದು ಓದ್ಲೆ ಕೋಣೆ, ಪುರುಸೊತ್ತು ಅಪ್ಪಗ ಗಾರ್ಡನ್ ಮಾಡ್ಲೆ ಇಪ್ಪ ಕಂಪೀಟರ್ ಮಡುಗಲೆ ಒಂದು ಕೋಣೆ, ಉದಾಸೀನಪ್ಪಗ ಅನಿಮೇಶನ್ ಸೀರಿಯಲ್ ನೋಡ್ಲೆ ಹೋಂ ಥಿಯೇಟರ್ ಮಡುಗಲೆ ಒಂದು ಲಿವಿಂಗ್ ಹಾಲ್ ಎಲ್ಲಾ ಇಲ್ಲದ್ದರೆ ಅಕ್ಕೋ? ಇಲ್ಲದ್ದರೆ ಅವ ದೊಡ್ಡ ಆಗಿ ಎಂಜಿನಿಯರೋ ಡಾಕ್ಟ್ರೋ ಅಪ್ಪದು ಹೇಂಗೆ?
    ಮಗಳಿಂಗೆ ಒಂದು ಇದೇ ರೀತಿಯ ವೆವಸ್ಥೆ ಇಲ್ಲದ್ದರೆ ತಾರತಮ್ಯ ಮಾಡಿದ್ದು ಹೇಳವೋ. ಹಾಂಗೆ ಅದಕ್ಕೂ ಇದೇ ನಮೂನೆಯ ವೆವಸ್ಥೆ ಮಾಡಿದ್ದವು.(ಇಬ್ರಿಂಗೂ ಒಂದೆ ಟೀವಿ, ಕಂಪೀಟರ್ ಸಾಕಾವುತ್ತೋ?).
    ಮತ್ತೆ ಶುಭತ್ತೆಗೆ ಒಂದು ಬೆಡ್ ರೂಂ, ಅದಕ್ಕೆ ಹೊಂದಿಗೊಂಡು ಬಾತ್ ರೂಂ. ಒಂದು ಸಿಟ್ ಔಟ್ ಇಲ್ಲದ್ದರೆ ಹೊತ್ತೋಪಗ ಹೆರ ಕೂದೊಂಡು ನೋಡುವದು ಎಂತರ?. ನೆಂಟ್ರುಗೊ ಬಂದಿಪ್ಪಗ ಅವಕ್ಕೆ ಒಂದು ಬೆಡ್ ರೂಂ ಕೊಡದ್ದರೆ ಅವರ ಪ್ರೆಸ್ಟೀಜ್ ಎಂತ ಅಕ್ಕು?
    ಉಂಬಲೆ ಒಂದು ಚೆಂದದ ಡೈನಿಂಗ್ ಹಾಲ್ ಇಲ್ಲದ್ದರೆ ಅಕ್ಕೋ? ಅಡಿಗೆ ಕೋಣೆಗೆ ಒಂದು ಸ್ಟೋರ್ ರೂಂ ಇಲ್ಲದ್ದರೆ ಅಡಿಗೆ ಕೋಣೆ ಚೆಂದ ಹಾಳು ಆವುತ್ತಿಲ್ಲೆಯಾ?
    ಹೋಂಡಾ ಸಿಟಿ ಕಾರಿನ ಎಂತ ಮಾರ್ಗಲಿ ಮನೆ ಹೆರ ನಿಲ್ಸಲೆ ಆವುತ್ತಾ. ಅದಕ್ಕೊಂದು ಶಟ್ಟರ್ ಹಾಕಿದ ಶೆಡ್ ಬೇಡದ?
    ಮಾವಂಗೆ ಒಂದು ಆಫೀಸ್ ರೂಂ ಬೇಡದ? ಮಾತಾಡ್ಲೆ ಬಂದವರ ಎಲ್ಲಾ ಹಾಲಿಲ್ಲಿ ಕೂರ್ಸಲೆ ಆವುತ್ತ?
    ನಾಯಿಗೆ ಒಂದು ಮನುಗುತ್ತ ಕೋಣೆ ಇಲ್ಲದ್ದರೆ “ಜಾತಿ” ನಾಯಿ ಎಂತ ಅಕ್ಕು? ಅದಕ್ಕೆ ಒರಕ್ಕು ಬಕ್ಕೋ? (ಎಲ್ಲರೂ ನಾಯಿ ನಾಯಿ ಹೇಳುವದು ಕೇಳಿ ಶುಭತ್ತೆಗೆ ಬೇಜಾರು ಆಯಿದಡ.ಆಷ್ಟು ಚೆಂದಕೆ “ರೋಸಿ” ಹೇಳಿ ಹೆಸರು ಹಾಕಿರೆ ಎಲ್ಲರೂ “ಅವನ “ ನಾಯಿ ಹೇಳಿ ಪೂಜೆ ದಿನ ಹೆರ ಹೋಪಲೆ ಹೇಳಿದ್ದು ಬೇಜಾರು ಆಗಿ ಆ ದಿನ ಊಟವೇ ಮೆಚ್ಚಿದ್ದಿಲ್ಲೆ ಅಡ) ಪೂಜೆಗೆ ಉಪವಾಸ ಮಾಡದ್ದರೂ ರೋಸಿ ಲೆಕ್ಕಲ್ಲಿ ಉಪವಾಸ ಮಾಡಿದ್ದಕ್ಕೆ ಒಳ್ಳೆ ಫಲ ಸಿಕ್ಕುಗಾಯಿಕ್ಕು
    ಈ 60X40 ರ ಸೈಟಿಲ್ಲಿ ಎಂತೆಲ್ಲಾ ಮಾಡಿಗೊಂಬದಪ್ಪಾ
    ಇಷ್ಟೆಲ್ಲಾ ಆಗಿಯೂ ದೇವರಿಂಗೆ ಹೇಳಿ ಒಂದು ಕೋಣೆ ಮಾಡೆಕ್ಕಾರೆ ಅವು ಎಷ್ಟು ಬಙ ಬಯಿಂದವು ಹೇಳಿ ನಿನಗೆ ಎಂತ ಗೊಂತಿದ್ದು?
    ನಾಯಿಯ ದೇವರ ಒಳಂಗೆ ಹೋಪಲೆ ಅರಾರೂ ಬಿಡುಗೋ? ಮತ್ತೆ ಎಂತಕೆ ಹೆಚ್ಚು ದೊಡ್ಡ ಕೋಣೆ ದೇವರಿಂಗೆ.
    ನಾವೇ ಆದರೆ ಹೇಂಗಾದರೂ ಸುದಾರುಸುತ್ತಲ್ಲದ?. ದೇವರಿಂಗೆ ಊರಿಡೀ ಅವನದ್ದೇ ಜಾಗೆ ಅಲ್ಲದ. ಜಾಗೆ ಸಿಕ್ಕದ್ದರೂ ಸ್ಟೇರ್ ಕೇಸ್ ನ ಕೆಳ ಇಪ್ಪ ಜಾಗೆಯ ಚೆಂದಕೆ ಹೊಂದಿಸಿದ್ದವಿಲ್ಲೆಯಾ. ಅದಕ್ಕೆ ಮೆಚ್ಚೆಕ್ಕಾದ್ದು ಬಿಟ್ಟು ನೀನು ಸಣ್ಣ ದೇವರ ಕೋಣೆ ಹೇಳಿರೆ ಹೇಂಗೆ?
    ಹೋರಿ ಕಂಜಿಯ ಕೊರಳಿಂಗೆ ಕಟ್ಟುವ ಗಂಟೆ ಹೇಳಿದ್ದೆ ಅಲ್ಲದ. ಹೋರಿ ನಮ್ಮ ಶಿವನ ವಾಹನ ಅಲ್ಲದ. ಅದರ ಕೊರಳಿಂಗೆ ಕಟ್ಟುವ ಗಂಟೆ ಹೇಳಿರೆ ಅಲ್ಲಿಯೂ ದೇವರು ಇದ್ದ ಅಲ್ಲದ?
    ಆ ಬಿಂಗಿ ಮಾಣಿ ಹೇಳಿದ ಹೇಳಿ ನೀನು ಹೀಂಗೆ ಬರದ್ದರ ಓದಿರೆ ಶುಭತ್ತೆ ಇನ್ನು ಅವನನ್ನೂ ಊಟಕ್ಕೆ ದೆನುಗೊಳ.:)

  27. ಒಪ್ಪಣ್ಣ, ಶುದ್ದಿ ಲಾಯ್ಕಾಯಿದು.ಈಗಾಣ ಜೆನಂಗೊಕ್ಕೆ, ಸಣ್ಣ ಕುಟುಂಬ, ಸಣ್ಣ ದೇವರ ಕೋಣೆ ಸಾಕು ಹೇಳ್ತ ಅಭಿಪ್ರಾಯ ಆಗಿಕ್ಕು ಅಲ್ಲದಾ? ಕೆಲವು ಇಂಜಿನಿಯರ್ಗೊಕ್ಕೆ ದೇವರ ಕೋಣೆ ಬಿಟ್ಟು ಬಾಕಿ ಕೋಣೆಗಳ ಡಿಸೈನ್ ಲಾಯ್ಕು ಮಾಡೆಕ್ಕು ಹೇಳ್ತ ಆಶೆಯೂ ಆದಿಕ್ಕು ಅಲ್ಲದಾ? ಎಂತದೋ… ಅಂತೂ ಮನೆಲಿ ದೇವರಿಂಗೆ ಪ್ರಾಮುಖ್ಯತೆ ಕಡಮ್ಮೆ ಆವುತ್ತು. ಜಾಗೆ ಕಮ್ಮಿ ಹೇಳಿ ಅವು ಪರಂಚವನ್ನೇ 🙁
    ಶಂಬಜ್ಜನ ಕಾಲಲ್ಲಿ ಹೀಂಗೆ ಇತ್ತೇ ಇಲ್ಲೆನ್ನೆ. ಅವು ಇದ್ದಿದ್ದರೆ ಎಷ್ಟು ಬೇಜಾರು ಮಾಡ್ತಿತ್ತವೋ ಏನೋ?
    ಅದಪ್ಪು, ಬಿಂಗಿ ಪುಟ್ಟ° ನಿನ್ನ ಹತ್ತರೆ ಶುಬತ್ತೆಯ ಅಸಬಡಿಯಾಟ ಹೇಳಿದ್ದಾ° ಇಲ್ಲೆಯಾ ಅಂಬಗ? ಶುಬತ್ತೆಯಲ್ಲಿಗೆ ಪೂಜೆಗೆ ಹೋದ ಶಂಕರಿ ಅತ್ತೆ ನಿನ್ನೆ ಸಿಕ್ಕಿದವು.. ಬೈಲಿನ ಶುದ್ದಿ ಹೇಳಿದೆ.
    ಶುಬತ್ತೆಗೆ ರೋಸಿ ಪೂಜೆ ಅಪ್ಪಗ ಮನೆಲಿ ಇತ್ತಿಲ್ಲೆ ಹೇಳಿ ಒಂದೇ ಬೇಜಾರ ಹೇಳಿ ಶಂಕರಿ ಅತ್ತೆ ಹೇಳಿದವು. ಬಟ್ಟಮಾವ° ನಾಯಿ ಮನೆಲಿದ್ದರೆ ಪೂಜೆ ಮಾಡೆ ಹೇಳಿದವಡ್ಡ. ಹಾಂಗೆ ಅನಿವಾರ್ಯವಾಗಿ ರೋಸಿಯ ಶುಬತ್ತೆಯ ಫ್ರೆಂಡಿನ ಮನೆಗೆ ಕಳುಸಿದ್ದಡ್ಡ.
    ಅತ್ತೆಯ ಹತ್ತರೆ ಹೇಳಿತ್ತಡ್ಡ ಶುಬತ್ತೆ, ‘ನಾಯಿ ಇಪ್ಪಲಾಗ ಹೇಳಿದವು, ಅದು ಅದರಷ್ಟಕ್ಕೆ ಸೋಫಾಲ್ಲಿ ಕೂದುಗೊಂಡಿರ್ತು, ದೇವರ ಕೋಣೆಗೆ ತಪ್ಪಿಯೂ ಬತ್ತಿಲ್ಲೆ, ಅದಿಲ್ಲಿ ಇದ್ದಿದ್ದರೆ ಎಂತದೂ ಆವುತ್ತಿತಿಲ್ಲೇ. ಈಗ ಆ ಮನೆಲಿ ಅದಕ್ಕೆ ಹೊತ್ತು ಹೊತ್ತಿಂಗೆ ಸಿಕ್ಕುತ್ತೋ ಇಲ್ಲೆಯೋ’ ಹೇಳಿ ಅದೇ ಜೆಪಲ್ಲಿತ್ತಡ್ಡ, ಪೂಜೆ ಸಂಕಲ್ಪಂದ ಊಟ ಅಪ್ಪನ್ನಾರವುದೇ.
    ಅದರ ಫ್ರೆಂಡಿಂಗೆ ಮೊದಲೇ ತಾಕೀತು ಮಾಡಿದ್ದಡ್ಡ, ಪೂಜೆಗೆ ರೋಸಿಯ ಒಬ್ಬನನ್ನೇ ಬಿಟ್ಟಿಕ್ಕಿ ಬರೆಕ್ಕು ಹೇಳಿ ಇಲ್ಲೆ, ರೋಸಿಯ ಊಟದ ಒಟ್ಟಿಂಗೆ ಅದಕ್ಕೂ ಊಟ ಕಳುಸಿ ಕೊಡ್ತು ಹೇಳಿ.. ಮಗ° ಟಿ. ವಿ ನೋಡ್ತವ° ದೇವರಿಂಗೆ ಹೂಗು ಹಾಕುಲೇ ಬಯಿಂದಾ ಇಲ್ಲೆಡ್ಡ. ಶುಬತ್ತೆಗೆ ಯೇವುದೂ ಕಂಡಿದೇ ಇಲ್ಲೆ ಹೇಳಿದವು ಶಂಕರಿ ಅತ್ತೆ.
    ಮೊದಲೆಲ್ಲಾ ಮನೆಗೆ ದೇವರ ಕೋಣೆಯೇ ಕೇಂದ್ರ ಆಗಿದ್ದತ್ತು., ಈಗಾಣ ಕಾಲಲ್ಲಿ, ಒಪ್ಪಣ್ಣ ಹೇಳಿದ ಹಾಂಗೆ ಮನೆಯ ಕೂರ್ತ, ಮೀತ್ತ, ಬದುಕ್ಕುತ್ತ, ಮನುಗುತ್ತ, ಅಡಿಗೆ ಮಾಡ್ತ ಕೋಣೆಗಳೇ ಮುಖ್ಯ ಆಯಿದು. ನಮ್ಮ ಸಂಸ್ಕೃತಿಗ, ಆಚಾರಂಗ ಕಾಣೆ ಆಗಿ ಹೋಗದ್ದ ಹಾಂಗೆ ಒಳಿಶುದು ನಮ್ಮ ಕೈಲೇ ಇದ್ದಲ್ಲದಾ?

    1. [ಅದೇ ಜೆಪಲ್ಲಿತ್ತಡ್ಡ, ಪೂಜೆ ಸಂಕಲ್ಪಂದ ಊಟ ಅಪ್ಪನ್ನಾರವುದೇ.]

      ನಾರಾಯಣಂಗೆ ಮತ್ತೆ ಈಶ್ವರಂಗೆ ಸಲ್ಲೆಕ್ಕಾದ ಪೂಜೆ ನಾಯಿಗೆ ಸಂದತ್ತೋ?.
      ಪೂಜೆಗೆ ಬೇಕಾದ ಶ್ರದ್ಧೆ ಮತ್ತೆ ಭಕ್ತಿ ನಾಯಿಲಿ ಕೇಂದ್ರೀಕೃತ ಆದರೆ ಪೂಜೆ ಮಾಡ್ತದು ಎಂತಕೆ?

  28. ಒಪ್ಪಣ್ಣಾ, ಒಳ್ಳೆಯ ಲೇಖನ.
    ತರವಾಡು ಮನೆಗಳ ದೇವರ ಕೋಣೆ ಮನೆಯ ಮಧ್ಯಲ್ಲಿದ್ದು, ಅದರ ಸುತ್ತಲೂ ಪ್ರದಕ್ಷಿಣೆ ಬಪ್ಪ ಹಾಂಗೆ ಅನುಕೂಲತೆ ಇಪ್ಪೊದು ಸಾಮಾನ್ಯ ವಾಸ್ತು ಕ್ರಮ. ನೀ ಹೇಳಿದ ಹಾಂಗೆ ನಮ್ಮ ಮೂಲ ಜೀವನಶೈಲಿಂದ ದೂರಹೋದ ಹಾಂಗೆ ನಮ್ಮ ಸಂಸ್ಕಾರಂಗೊ ಬದಲಪ್ಪೊದು ಸಾಮಾನ್ಯ. ದೇವರ ಕೋಣೆ ಹೇಳಿ ಒಂದು ಪ್ರದರ್ಶನಕ್ಕೆ ಇರೆಕ್ಕು ಹೇಳ್ತ ಅಭಿಪ್ರಾಯಲ್ಲಿ ಹೆಚ್ಚಿನ ಪೇಟೆಯ ಮನೆಗಳ ನೋಡೊಗ ಅಂದಾಜು ಮಾಡುಲಕ್ಕು,ದೇವರ ಕೋಣೆ ಇಲ್ಲೆಯೋ ಹೇಳಿ ಊರಿಂದ ಬಂದೋರು ಕೊರತೆ ಹೇಳುಲೆ ಆಗ ಇದ. ಮತ್ತೆ ಅಲ್ಲಿ ಎಂತ ದಿನಾಗುಳು ಕೆಲಸ?ವರುಷಕ್ಕೊಂದರಿ ಪೂಜೆ ಪುರುಸೊತ್ತಿದ್ದರೆ ಮಾಡಿರಾತು,ಅಲ್ಲದೋ?
    ದೇವರೊಳ ಇಪ್ಪ(?) ದೇವರೇ ಕಾಪಾಡೆಕ್ಕಷ್ಟೇ..

  29. oh1Oppanna astu adbuthavaagi baraddan helire satya heltadara edeli lottage ede kuuda elle.enage engala hale mane nempaatu.enna tange magalu bandippaga ella aa maneya olusigollekaagithu helugu.entake helire adara maneli hinge nayige hogale daari elladda devara kone.Ondu sanna kapatada adaralli namma madhurina boddajjan ,kumble gopanna,hange ennu estesto devarakko eddavu.adbuthavaagi barada oppannange ondastu oppangala male.

  30. ಒಪ್ಪಣ್ಣ, ಲೇಖನ ಓದಿ ಎನಗೆ ಅನಿಸಿದ್ದು:
    ಈಗ ಮನೆ ಕಟ್ಟುವಾಗ ದೇವರಿಂಗೆ ಒಂದು ಜಾಗೆ ಬೇಡದಾ ಹೇಳಿ ಎಂಜಿನೀರ್ ಕೇಳಿರೆ ಮನೆ ಯಜಮಾನ/ಯಜಮಾಂತಿ ಹೇಳುವದು, ಅದೇ ಸ್ಟೇರ್ ಕೇಸ್ ಕೆಳಗಡೆ ಸ್ವಲ್ಪ ಜಾಗ ಸಿಗ್ತದಲ್ಲ ಅಲ್ಲಿ ಒಂದು ವೆವಸ್ಥೆ ಮಾಡಿರೆ ಆತು ಹೇಳಿ. ಎಂತ ಹೇಳಿರೆ ದೇವರು ಎನಗೆ ಜಾಗೆ ಸಾಲ ಹೇಳಿ ಹಕ್ಕು ಚಲಾಯಿಸಲೆ ಬತ್ತ ಇಲ್ಲೆ ಅಲ್ಲದ. ಮನಸ್ಸಿಲ್ಲಿ ಜಾಗೆ ಬೇಕು ಹೇಳಿ ತೋರುವದಕ್ಕೆ (ಬೆಡ್ ರೂಂ, ಬಾತ್ ರೂಂ. ಸ್ಟಡಿ ರೂಂ, ಡೈನಿಂಗ್ ಹಾಲ್, ಲಿವಿಂಗ್ ಹಾಲ್,ಸಿಟ್ ಔಟ್ etc etc) ಎಲ್ಲ ಜಾಗೆ ಹೊಂದಿಸಿಗೊಂಡು ಬೇಕಾದ ಹಾಂಗೆ ಮನೆ ಕಟ್ಟುಸುವಾಗ, ದೇವರಿಂಗೆ ಮನಸ್ಸಿಲ್ಲಿಯೇ ಜಾಗೆ ಇಲ್ಲದ್ದರೆ ಮನೆಲಿ ಎಲ್ಲಿ ಜಾಗೆ ಇಕ್ಕು ಅಲ್ಲದ?
    ಎಲ್ಲರ ಮನೆಲಿಯೂ ಒಂದು ಇದ್ದಲ್ಲದ ಹಾಂಗೆ ನಮ್ಮ ಮನೆಲಿ ಇರಳಿ ಹೇಳುವ ಒಂದೇ ಕಾರಣಕ್ಕೆ ಅಷ್ಟು ಸಣ್ಣ ಜಾಗೆ ಆದರೂ ದೇವರಿಂಗೆ ಸಿಕ್ಕುವದು. ಇಲ್ಲದ್ದರೆ ಅದೂ ಇಲ್ಲೆ. ಬೇರೆಯವರ ಅನುಕರಣೆ ಯಾವುದಕ್ಕೆ ಮಾಡೆಕ್ಕು ಹೇಳಿ ತಿಳ್ಕೊಂಬದು ಮುಖ್ಯ.

    1. { ದೇವರಿಂಗೆ ಮನಸ್ಸಿಲ್ಲಿಯೇ ಜಾಗೆ ಇಲ್ಲದ್ದರೆ ಮನೆಲಿ ಎಲ್ಲಿ ಜಾಗೆ ಇಕ್ಕು ಅಲ್ಲದ? }
      ಒಳ್ಳೆ ಮಾತು ಹೇಳಿದಿ ಅಪ್ಪಚ್ಚಿ.
      ಅದುವೇ ಈ ಶುದ್ದಿಯ ತಾತ್ಪರ್ಯ. ನಮ್ಮೋರೇ ಆ ನಮುನೆ ಮಾಡಿರೆ ಇಂಜಿನಿಯರುಗೊಕ್ಕೆ ಬೈವದು ಎಂತರ, ಅಲ್ಲದೋ?

  31. ಲೇಖನ ಲಾಯ್ಕ ಆಯಿದು …….ಈಗಾಣವು ಮಾಡುದನ್ನೇ ಲಾಯ್ಕಲ್ಲಿ ಮನಸಿಂಗೆ ತಟ್ಟುವ ಹಾಂಗೆ ಬರದ್ದಿ… ಧನ್ಯವಾದ !!!!

    1. ಗೆಣವತಿಅಣ್ಣನ ಒಪ್ಪ ನೋಡಿ ತುಂಬಾ ಕೊಶಿ ಆತು.
      ಬೈಲಿಂಗೆ ಬತ್ತಾ ಇರಿ.
      ಒಪ್ಪಣ್ಣ ಒಪ್ಪಕ್ಕಂದ್ರ ಶುದ್ದಿಗೊಕ್ಕೆ ಒಪ್ಪ ಕೊಡ್ತಾ ಇರಿ, ಆತೋ? ಏ°?

  32. {ಹಳೇ ಕಾಲದ ಮನೆಯ ಶೈಲಿ, ಅದರ ವಾಸ್ತು, ಅದರ ಕೋಣೆಗಳಲ್ಲಿ ಇಪ್ಪ ಕಸ್ತಲೆ, ಅಡಿಗೆಕೋಣೆಲಿ ಇಪ್ಪ ಹೊಗೆಯ ಪರಿಮ್ಮಳ, ಉಗ್ರಾಣದ ಹತ್ತರೆ ಇಪ್ಪ ಒಣಕ್ಕಟೆ ಪರಿಮ್ಮಳ, ವಿಶಾಲವಾದ ದೇವರಕೋಣೆಲಿ ಬಪ್ಪ ಗಂಧದ ಪರಿಮ್ಮಳ.. }
    ಅದ್ಭುತ! ಒಂದರಿ ಆ ನಮ್ಮ ಹಳೇ ಮನೆಯೊಳ ಹೋಗಿ ಬಂದಾಂಗೇ ಆತು.
    ತುಂಬಾ ಲಾಯ್ಕಾಯಿದು ಶುದ್ದಿ. ಗಂಭೀರ ವಿಷಯದ ಎಡೆಲೂ ಸಣ್ಣ ಸಣ್ಣ ಹಾಸ್ಯದ ವಿವರಣೆಗೊ.
    ಅಗತ್ಯ ಇಪ್ಪದರ ಅಗತ್ಯವಾಗಿ ಮಾಡದ್ರೆ ಅನಗತ್ಯವಾಗಿ ತೊಂದರೆಗಳ ಅನುಭವಿಸೆಕ್ಕಾವುತ್ತು ಹೇಳುದರ ಚೆಂದಲ್ಲಿ ವಿವರುಸಿದ್ದಿ.
    ಅರ್ಥಪೂರ್ಣ ಒಂದೊಪ್ಪವೂ ಸೂಪರ್!

  33. ಭಾವಾ ! ಭಾರೀ ಲಾಯ್ಕಾಯ್ದು!!! ಪೇಟೇಲಿ ಎಷ್ಟೋ ಮನೇಲಿ ದೇವರ ಕೋಣೆ ಇಲ್ಲೇ !!! ಪರ್ವಾಗಿಲ್ಲೇ ಶುಭತ್ತೆಯಲ್ಲಿ ಅದು ಇದ್ದು!!. ” ನಾವು ಮನೆ ಕಟ್ಟುವಾಗ ಎರಡು ಅಂಶಂಗಳ ಗಮನಲ್ಲಿ ಮಡಗೆಕ್ಕು, ಒಂದು ಮನಸ್ಸಿನ ಶುದ್ದ ಮಾಡುವ ಜಾಗೆ!! ಇನ್ನೊಂದು ದೇಹ ಶುದ್ದ ಮಾಡುವ ಜಾಗೆ!! “…ಇನ್ನೊಂದು ವಿಷಯ ಗೊಂತಿದ್ದ ಭಾವಾ!! ಈಗ ಪೋರ್ಟೇಬಲ್ ದೇವರ ಕೋಣೆ ಎಲ್ಲ ಇದ್ದು!! ಮರಂದ ಮಾಡುದು! ಬೇಡಾ ಹೇಳಿ ಕಂಡ್ರೆ ಅಟ್ಟಕ್ಕೆ ಹಾಕುಲಕ್ಕು!! (ಪೇಟೇಲಿ ಅಟ್ಟ ಇರ್ತಿಲ್ಲೆ!! ಅದು ಬೇರೆ ವಿಷಯ!! )ಬೇಕಾದಲ್ಲಿ ಮಡುಗುಲಕ್ಕು !! ಎಂತ ಮಾಡುದು!! ಕಷ್ಟ ಕಾಲಕ್ಕೆ ಅಲ್ಲದ ದೇವರು ಬೇಕಪ್ಪದು!!
    ಲೇಖನ ಅದ್ಭುತ ಆಯ್ದು!! ಸಮಯೋಚಿತ!!

    1. ಪುಟ್ಟಬಾವಾ..
      { ಒಂದು ಮನಸ್ಸಿನ ಶುದ್ದ ಮಾಡುವ ಜಾಗೆ!! ಇನ್ನೊಂದು ದೇಹ ಶುದ್ದ ಮಾಡುವ ಜಾಗೆ!! }
      – ವಾಹ್! ಎಂತಾ ಚೆಂದದ ಮಾತು ಭಾವಯ್ಯಾ!! ತುಂಬಾ ಕೊಶಿ ಆತು.

  34. ಲೇಖನದ ತಲೆ ಬರಹ ನೋಡಿ ಇದರಲ್ಲಿ ಎಂತ ವಿಶೇಷ ಅಪ್ಪಾ, ನಾಯಿಗೆ ಹೇಂಗಾರೂ ದೇವರ ಕೋಣಗೆ ಪ್ರವೇಶ ಇಲ್ಲೇನೆ ಹೇಳಿ ಅನಿಸಿತ್ತು. ಮತ್ತೆ , ನಾಯಿಗೆ ದೇವರ ರೂಮಿಂಗೆ(!) ಹೋಪಲೆಡಿಯದ್ದ ಕಾರಣ ಎಂತಾ ಹೇಳಿ ಗೊಂತಾಗಿ ಅಪ್ಪಗ, ಲೇಖನದ ಉದ್ದೇಶ ಸರಿಯಾಗಿ ಅರ್ಥ ಆತು. ಒಪ್ಪಣ್ಣಾ, ಪೇಟೆ ಮನೆಯವರ ನಿಜ ಸ್ಠಿತಿಯ ಮನದಟ್ಟು ಮಾಡಿ, ಅವರ ಮುಸುಡಿಂಗೆ ಬಡಿತ್ತ ಹಾಂಗೆ ಲೇಖನ ಬರದ್ದೆ. ಲಾಯಕಾಯಿದು. ಮತ್ತೆ ಅವರ ನಾಲ್ಕು ಸೆಂಟ್ಸು ಜಾಗೆಲಿ ಅವಕ್ಕೆ ಎಂತೆಲ್ಲ ಮಾಡ್ಳೆ ಎಡಿಗು ನೀನೇ ಹೇಳು ?

    ಹಾಸಿಗೆಯ ಮಡುಸುತ್ತ ಮರಿಯಾದಿ ಇಲ್ಲೆಡ, ಅಸೌಖ್ಯದ ಮನೆಯ ಹಾಂಗೆ ಯೇವತ್ತೂ ಹಾಸಿಗೆ ಬಿಡುಸಿಗೊಂಡೇ!
    ಪೇಟೆಯ ದೇವರ ಕೋಣೆ ಪಂಪಿನಕೊಟ್ಟಗೆಂದಲೂ ಸಣ್ಣ! ಅಷ್ಟೇ ಅಲ್ಲ – ಬಟ್ಯನ ಕೋಳಿಗೂಡಿಂದಲೂ ಸಣ್ಣ!
    ದೇವರಕೋಣೆ ಸಣ್ಣ ಆತು. ಅದರ ಒಟ್ಟಿಂಗೆ ದೇವರ ಮೇಗಾಣ ಭಕ್ತಿಯುದೇ!
    ದೇವರೊಳ ಸಣ್ಣ ಆತು, ಆಸ್ಪತ್ರೆ ದೊಡ್ಡ ಆತು. ಓಹ್ ! ಎಂತೆಂತಾ ಮಾತುಗೊ ಒಪ್ಪಣ್ಣಾ, ಎಂತೆಂತಾ ಮಾತುಗೊ. ಲೇಖನಕ್ಕೆ ಎನ್ನ ಪ್ರೀತಿಯ ಒಪ್ಪಂಗೊ.

    1. ಒಪ್ಪಣ್ಣ ನಿನ್ನ ಬ್ಲಾಗ್ ನೋಡಿ ಖುಷಿ ಆತು. ಎಂಗಳ ಮಾಣಿ ಈ ನಮೂನೆ ಬರೆತ್ತ ಹೇಳಿ ಸಂತೋಷ ಆತು.. ನಿಂಗಳ ಭಾಷೆ ಲಾಯಕ್ಕಿದ್ದು. ಎನ್ನದು ಒಂದು ಬ್ಲಾಗ್ ಇದ್ದು ನೋಡುವುದು. ಸಿರಿಮನೆ.ಬ್ಲಾಗ್ ಸ್ಪಾಟ್. ಕಾಮ್. ಇಷ್ಟಾಗಿ ನಾನು ಯಾರು ಅಂತ ಗೊಂತಾತ. ಬ್ಲಾಗ್ ನೋಡಿ ಉತ್ತರ ಬರೆ. ಕಾದುಗೊಂಡಿರ್ತೆ.

      1. ಪುತ್ತೂರಿನ ರಾಮಜ್ಜನ ಕೋಲೇಜಿಲಿ ಕನ್ನಡ ಮಾಷ್ಟ್ರಾಗಿ ಇದ್ದುಗೊಂಡು, ಬೈಲಿನ ಮಕ್ಕೊಗೆ ಕನ್ನಡ ಕಲಿಶಿದ ಗುರುಗೊ ನಿಂಗೊ. 🙂
        ನಮಸ್ಕಾರ!! ಅಂತರ್ಜಾಲದ ಈ ’ಬೈಲಿಂಗೆ’ ನಿಂಗೊಗೆ ಸ್ವಾಗತ!
        ಸಂಪೂರ್ಣವಾಗಿ ನಮ್ಮ ಹವ್ಯಕಭಾಷೆಲೇ ಇದ್ದುಗೊಂಡು, ನಮ್ಮೋರ ಆಚಾರ-ವಿಚಾರ ಇತ್ಯಾದಿಗಳ ಒಳಗೊಂಡಂತಹಾ ಸಂಪೂರ್ಣ ಬೈಲು ಇದು. ಸುಮಾರು ಜೆನ ಒಪ್ಪಣ್ಣ-ಒಪ್ಪಕ್ಕಂದ್ರು ಈಗ ಶುದ್ದಿ ಹೇಳ್ತವು. ಬೇರೆ ಬೇರೆ ಅಂಕಣಂಗೊ ಇಲ್ಲಿ ಸುರು ಆಯಿದು. ಎಲ್ಲವನ್ನೂ ಓದಿ, ಒಪ್ಪಕೊಡಿ.

        ಬೈಲಿಂಗೆ ಬಂದು ಒಪ್ಪಣ್ಣನ ಶುದ್ದಿಯ ಓದಿ ಒಪ್ಪ (comment) ಕೊಟ್ಟು, ಶುದ್ದಿಯ ಅಪ್ಪಿಗೊಂಡದು ನೋಡಿ ಕೊಶೀ ಆತು. ಬೈಲಿನ ಮಕ್ಕೊಗೆ ನಾಕಕ್ಷರ ಕಲಿಶಿದ ನಿಂಗಳ ಮಾರ್ಗದರ್ಶನ ಸದಾ ಬೇಕು ಎಂಗೊಗೆ.
        ಬಂದುಗೊಂಡಿರಿ, ಶುದ್ದಿಗೊಕ್ಕೆ ಒಪ್ಪ ಬರಕ್ಕೊಂಡಿರಿ.
        (ನಿಂಗಳ ಆರೋಗ್ಯ ಹೇಂಗಿದ್ದು? ಸಿರಿಮನೆಲಿ ಬರದ ವಿವರಣೆ ನೋಡಿ ಬೆಗರು ಬಿಚ್ಚಿತ್ತು!)
        ~
        ಒಪ್ಪಣ್ಣ

    2. ಗೋಪಾಲಮಾವಾ..
      ಶುದ್ದಿಯ ತತ್ವವ ಸರಿಯಾಗಿ ಅರ್ತುಗೊಂಡು ಶುದ್ದಿಂದಲೂ ಲಯಿಕಿಂಗೆ ಒಪ್ಪಕೊಟ್ಟದು ನೋಡಿ ಒಪ್ಪಣ್ಣಂಗೆ ತುಂಬಾ ಕೊಶಿ ಆತು, ಬೇಂಕಿನ ನೋಟಿನ ಕಟ್ಟ ನೋಡಿದ್ದರಿಂದಲೂ ಕೊಶಿ!! 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×