Oppanna.com

ಕೋಟಿ ಬೆಲೆಯ ಕಟ್ಟೆ ಕಟ್ಟಿ ಅಮರವಾದ ಅಜ್ಜ..!

ಬರದೋರು :   ಒಪ್ಪಣ್ಣ    on   16/09/2016    2 ಒಪ್ಪಂಗೊ

ದೇಶ ಇಡೀ ಇಂಗ್ಲೀಶರು ಆಡಳ್ತೆ ಮಾಡಿಗೊಂಡು ಇಪ್ಪಾಗ ಮೈಸೂರು ಸಂಸ್ಥಾನವ ಒಡೆಯರು ನೋಡಿಗೊಂಡು ಇತ್ತಿದ್ದವು.
ಕಾಲಕಾಲಕ್ಕೆ ಬ್ರಿಟಿಷರು ಕೇಳಿದ ಸೌಕರ್ಯಂಗಳ ಮಾಡಿ ಕೊಟ್ಟುಗೊಂಡು ಇದ್ದರೆ ಮೈಸೂರು ರಾಜ್ಯಭಾರ ನೆಮ್ಮದಿಲಿ ಸಾಗಿಗೊಂಡು ಇದ್ದತ್ತು ಒಡೆಯರುಗೊಕ್ಕೆ.
ಬ್ರಿಟಿಷರ ಒಟ್ಟಿಂಗೆ ಒರ್ಮೈಸಿಗೊಂಬಲೆ ಎಷ್ಟೇ ಕಷ್ಟ ಇದ್ದರೂ, ಜನತೆಗೆ ಏನೂ ಕೊರತ್ತೆ ಮಾಡಿದ್ದವಿಲ್ಲೆ ಒಡೆಯರು.
ರಾಜಂಗೆ ದಿವಾನರು, ಮಂತ್ರಿಗೊ ಇತ್ಯಾದಿ ಹಲವು ಸಹಾಯಕರೂ ಇದ್ದುಗೊಂಡು ನಿರಂತರವಾಗಿ ನೆಮ್ಮದಿಯ ಧಾರೆ ಹರಿವ ಹಾಂಗೆ ನೋಡಿಗೊಂಡಿದವು.

~
೧೯೧೦ನೇ ಇಸವಿ ಆಸುಪಾಸಿಲಿ ಮೈಸೂರಿನ ದಿವಾನರಾಗಿದ್ದೋರು ನಿವೃತ್ತರಾದವು. ಆ ಸಮೆಯಕ್ಕೆ ಒಬ್ಬ ಯೋಗ್ಯ, ಸೂಕ್ತ ದಿವಾಣರ ಹುಡ್ಕಿದವು ಮಹಾರಾಜರು.
ಅಷ್ಟಪ್ಪಗ ಕಣ್ಣಿಂಗೆ ಬಿದ್ದೋರೇ – ವಿಶ್ವೇಶ್ವರಯ್ಯರು.
ಮೈಸೂರು ಸಂಸ್ಥಾನದ ಚಿಕ್ಕಬಳ್ಳಾಪುರಲ್ಲಿ ಹುಟ್ಟಿ, ಭಾರೀ ಕಷ್ಟಲ್ಲಿ ಬೆಳದ ಹುಡುಗ ಅದಾಗಲೇ ಬುದ್ಧಿಮತ್ತೆಯ ಪರೀಕ್ಷೆಲಿ ಪಾಸಾಗಿ ಸ್ಕೋಲರ್ಶಿಪ್ ಗಳಿಸಿಗೊಂಡು ಪುಣೆಲಿ ಕೋಲೇಜು ಕಲ್ತು ಆಗಿತ್ತು. ಅಷ್ಟೇ ಅಲ್ಲ, ಬ್ರಿಟಿಶ್ ಆಡಳ್ತೆಲಿ ಇಂಜಿನಿಯರು ಆಗಿಂಡು, ಹಲವು ಅದ್ಭುತಂಗಳ ಸಾಧಿಸಿ ತೋರ್ಸಿ ಆಗಿದ್ದತ್ತು.
ಬ್ರಿಟಿಷರ ಕೆಲಸಂದ ಸ್ವಯಂ ನಿವೃತ್ತಿ ಪಡದು ಹೈದರಾಬಾದಿಲಿ ಮುಖ್ಯ ಇಂಜಿನಿಯರ್ ಆಗಿ ಸೇರಿ ಆಗಿದ್ದತ್ತು.
ಅಲ್ಲಿ, ಮೂಸಿ ನದಿಯ ಪ್ರವಾಹವ ತಡವಲೆ ಮಾಡಿದ ಅದ್ಭುತ ವೆವಸ್ತೆಗೊ ಅಲ್ಯಾಣ ನಿಜಾಮಂಗೂ, ಜೆನಸಾಮಾನ್ಯರಿಂಗೂ ತುಂಬಾ ಕೊಶಿ ಆಗಿದ್ದತ್ತು. ಅಷ್ಟೇ ಅಲ್ಲ, ವಿಶಾಖಪಟ್ಟಣಲ್ಲಿ ಕಡಲುಕೊರೆತ ತಡವಲೆ ಮಾಡಿದ ವೆವಸ್ತೆಯೂ ಹಾಂಗೇ – ಬ್ರಿಟಿಷರೇ ಮೂಗಿನ ಮೇಗೆ ಬೆರಳು ಮಡಗಿತ್ತಿದ್ದವು.
ಹಾಂಗಿಪ್ಪ ಹೆಸರು ಹೋದ ಯುವ ಪ್ರತಿಭೆಯ ಮೈಸೂರು ರಾಜ್ಯಕ್ಕೆ ದಿವಾಣರಾಗಿ ಬರುಸಿದವು ಒಡೆಯರು.
ಅಷ್ಟಪ್ಪಗ ಅವಕ್ಕೆ ಕಾಲಿ ಐವತ್ತು ಒರಿಶ.
ಆ ಜಾಗೆಗೆ ಎತ್ತಲೆ ಒಳುದೋರಿಂಗೆ ಅರುವತ್ತರ ಮೇಗೆ ಪ್ರಾಯ ಬೇಕಾತೋ ಏನೋ – ಆದರೆ, ಈ ಅಜ್ಜಯ್ಯರು ಇನ್ನೂ ಮೈಲಿ ಶೆಗ್ತಿ ಇಪ್ಪಗಳೇ ಎತ್ತಿತ್ತಿದ್ದವು.
ಅದರಿಂದಾಗಿ ಮೈಸೂರು ರಾಜ್ಯಕ್ಕೆ ಹಲವು ಕೆಲಸ ಮಾಡ್ಳೆ ಎಡಿಗಾತು ಅವಕ್ಕೆ.
ಅವರ ಎಲ್ಲ ಕೆಲಸಂಗಳಲ್ಲಿ ಮುಖ್ಯವಾಗಿ ಎದ್ದು ಕಾಂಬದು – ಕನ್ನಂಬಾಡಿ ಕಟ್ಟೆ.
~
ಮೈಸೂರಿನ ಅಂಬಗಾಣ ಪರಿಸ್ಥಿತಿ ಹೇಂಗಿದ್ದತ್ತು ಹೇದರೆ – ಆ ಊರಿಂಗೆ ನೀರಿನಾಸರೆ ಹೇದರೆ ಕಾವೇರಿ.
ಮಡಿಕೇರಿಯ ತಲಕಾವೇರಿಲಿ ಹುಟ್ಟಿದ ಸಣ್ಣ ತೋಡು, ಅಲ್ಲಿಂದ ದೊಡ್ಡ ಆಗಿ ಆಗಿ ಮೈಸೂರಿಂಗೆತ್ತುವಗ ದೊಡಾ ನದಿ ಆಗಿರ್ತು.
ಮಳೆ ಒಳ್ಳೆತ ಬಂದರೆ ನೀರು ಇದ್ದು, ಇಲ್ಲದ್ದರೆ? ದೇವರೇ ಗೆತಿ.
ಅಲ್ಯಾಣ ಕೃಷಿಯೂ ಹಾಂಗೇ – ಮಳೆಯ ಮೇಲೆ ಅವಲಂಬಿತ. ಒಳ್ಳೆತ ಬಂದು ನೀರಾದರೆ ಇದ್ದು, ಇಲ್ಲದ್ದರೆ – ದೇವರೇ ಗೆತಿ.
ಮಳೆ ಬಂದರೆ ಕೊಡೆಯಾಲದ ಹಾಂಗೆ, ಬಾರದ್ದರೆ ಗುಲ್ಬರ್ಗದ ಹಾಂಗೆ – ಆಗಿತ್ತು ಮೈಸೂರು.
ಇದಕ್ಕೆ ಪರಿಹಾರವಾಗಿ ಈ ದಿವಾಣಜ್ಜಂಗೆ ಕಂಡದು – ಅಲ್ಯಾಣ ಕಾವೇರಿಯ ವಿಶಾಲ ನೀರು, ಮತ್ತೆ ಅದರ ಒಳಿಶಿಗೊಳೆಕ್ಕು ಹೇಳುವ ಸಮಾಜ ಹಿತ.
ಅದಕ್ಕೋಸ್ಕರ ಯೋಚನೆ ಬಂದು ಆದ ಏರ್ಪಾಡೇ – ಕನ್ನಂಬಾಡಿ ಕಟ್ಟೆ.
ಕಾವೇರಿ ನದಿಗೆ ಅಡ್ಡಕೆ ಕಟ್ಟಿದ ಮೊದಲ, ಅಂಬಗಾಣ ಅತ್ಯಂತ ದೊಡ್ಡ – ಅಣೆಕಟ್ಟು ಅದು ಹೇಳ್ತ ಹೆಗ್ಗಳಿಕೆ ನಮ್ಮದು.
~
ಈಗ ಹಾಂಗೆ ಹೇಳುಲೆ ಸುಲಭ, ಆದರೆ ಅಂಬಗಾಣ ಪರಿಸ್ಥಿತಿ ಸುಲಭ ಇತ್ತೋ?
ಕಾಲ ಈಗಾಣದ್ದಲ್ಲ.
ಈಗಳೇ ಹೊಯಿಗೆ ಸಿಮೆಂಟು ಸಿಕ್ಕಲೆ ಕಷ್ಟ ಆವುತ್ತು, ಅಂಬಗ? ಎತ್ತಿನಗಾಡಿಯ ಕಾಲ ಅದು.
ಆ ಕಾಲಲ್ಲಿ ಹೋರಾಡಿ ಅಷ್ಟು ಸಾಮಾನು ಅಲ್ಲಿಗೆ ಎತ್ತುಸೆಕ್ಕಾರೆ ಕಷ್ಟ ಎಷ್ಟಿದ್ದು!

ಅದು ಮಾಂತ್ರ ಸಾಲದ್ದಕ್ಕೆ – ನಮ್ಮಂದ ಕೆ ಇಪ್ಪ ಮೆಡ್ರಾಸು ರಾಜ್ಯ ಅಂಬಗ ಬ್ರಿಟಿಷರದ್ದು.
ಅವಕ್ಕೆ ಅಲ್ಲದ್ದರೂ ಮೈಸೂರು ರಾಜರ ಕಂಡ್ರೆ ಆಗ, ಕಿರಿಕಿರಿಕಿರಿಕಿರಿ ಮಾಡಿಗೊಂಡು ಇತ್ತಿದ್ದವು, ಕಿಟ್ಟಿದ್ದಕ್ಕೆ ಮುಟ್ಟಿದ್ದಕ್ಕೆ.
ಹಾಂಗಾಗಿ ಈ ಸಂಗತಿಯೂ ಸಿಕ್ಕಿತ್ತು ಅವಕ್ಕೆ.
ನಿಂಗೊ ಕಟ್ಟೆ ಕಟ್ಟಿರೆ ಎಂಗೊಗೆ ಇಲ್ಲೆ – ಹೇದು ಅರೆದ್ದುಲೆ ಸುರುಮಾಡಿದವು ಬ್ರಿಟಿಷರು.
(ಈಗ ಬ್ರಿಟಿಷರು ಹೋದರೂ ಅವರ ಮನಸ್ಥಿತಿ ಆ ಊರಿನವಕ್ಕೆ ಹೋಯಿದಿಲ್ಲೆ. ಅದು ಬೇರೆ ವಿಷಯ)
ಅಂತೂ ಇಂತೂ ಅವರ ಒಪ್ಪುಸಿ, ಬೇಕು ಬೇಕಾದ ಏರ್ಪಾಡು ಮಾಡಿಗೊಂಡು ಕಟ್ಟಿಯೇ ಕಟ್ಟಿದವು, ಈ ಅಜ್ಜಯ್ಯ.
ಎಲ್ಲ ಆಗಿ ತಲೆ ಎತ್ತಿ ನಿಂಬಗ ಅದು “ಸಾಗರ”ವೇ ಆಗಿತ್ತು.
ಅದಕ್ಕೆ ಕೃಷ್ಣರಾಜಸಾಗರ – ಹೇದು ಹೆಸರು ಮಡಗಿದವು. ನಮ್ಮ ಕಾಲದ ಮಂತ್ರಿಗೊ ಆಗಿದ್ದರೆ ಅವರದ್ದೇ, ತಪ್ಪಿರೆ ಅವರ ಅಪ್ಪಂದೋ ಅಮ್ಮಂದೋ ಹೆಸರು ಮಡಗುತಿತವು. ಅದಿರಳಿ.
~
ಇವು ಮಾಡಿದ್ದು ಇದೊಂದೇ ಕೆಲಸ ಅಲ್ಲ. ಶಿವನಸಮುದ್ರಲ್ಲಿ ಕರೆಂಟು ಕಂಪೆನಿ, ಭದ್ರಾವತಿಲಿ ಕಾಗತ ಕಂಪೆನಿ, ಕೋಲಾರಲ್ಲಿ ಚಿನ್ನದ ಹಟ್ಟಿ, ಮೈಸೂರಿಲಿ ಸಾಹಿತ್ಯ ಪರಿಷತ್ತು – ಹೀಂಗಿಪ್ಪ ಒಂದಕ್ಕೊಂದು ಸಂಬಂಧವೇ ಇಲ್ಲದ್ದ ವಿಚಾರಂಗಳೂ ಅವರಿಂದ ರೂಪುಗೊಂಡಿದು.
ಅಂಥಾ ಮೇಧಾವಿ ಅವು.
ಇಷ್ಟೆಲ್ಲ ಮಾಡಿಕ್ಕಿಯೂ, ತನ್ನ ಅರುವತ್ತರ ಒರಿಶ ಬರೆಕ್ಕಾರೇ – ಈಗಾಣ ರಿಟೇರ್ಡು ಪ್ರಾಯಲ್ಲಿ – ನಿವೃತ್ತರಾಗಿ ದಿವಾಣ ಸೀಟಿಂದ ಇಳುದು ಹೋಯಿದವು.
ಯಾವದೇ ವ್ಯಾಮೋಹವಾಗಲೀ, ಆಸೆಗೊ ಆಗಲಿ, ಹಗರಣಂಗೊ ಆಗಲಿ – ಎಂತದೂ ಇಲ್ಲದ್ದ ವಿರಕ್ತ ಸಂನ್ಯಾಸಿಯ ಹಾಂಗೆ.
~
ಅವರ ಜನ್ಮದಿನ ಅಡ, ಸೆಪ್ಟೆಂಬರ್ ಹದಿನೈದಕ್ಕೆ.
ಕಟ್ಟೆ ಕಟ್ಟೆ ಅಜರಾಮರ ಆದವು ಆ ಅಜ್ಜ°. ಅವರ ಮಂಡೆಯ ಗುರುತಿಸಿ ಅದು ಇಂಜಿನಿಯರು ಮಂಡೆ.
ಈ ಒರಿಶ ಎಂತಕೆ ನೆಂಪಾತು – ಹೇದರೆ, ಗೊಂತಿದ್ದನ್ನೇ. ಜಗಳ.
ಇದೇ ಕನ್ನಂಬಾಡಿ ಕಟ್ಟೆಯ ಬಗ್ಗೆಯೇ ಜಗಳ.
~
ಅಂದು ಆ ಅಜ್ಜ° ಕಟ್ಟೆ ಕಟ್ಟುವಗ ಇದ್ದ ಅವರ ನಿರೀಕ್ಷೆ ಲೋಕ ಉದ್ಧಾರ ಆಯೇಕು ಹೇದು.
ಬ್ರಿಟಿಷರು ಹೆರಟ ಮತ್ತೆ ಆದರೂ ಸರಿ ಅಕ್ಕನ್ನೇ’ದು ಚೆಂದಕೆ ಕಟ್ಟಿದವು.
ಆದರೆ, ಈಗ ಬ್ರಿಟಿಷರು ಹೆರಟ ಮತ್ತೆಯೂ ನಾವು ನಮ್ಮ ಬುದ್ಧಿ ಬಿಟ್ಟಿದಿಲ್ಲೆ.
ಅವ್ವು ಹಾಕಿ ಕೊಟ್ಟ ಜಗಳವನ್ನೇ ಮುಂದುವರುಸಿಗೊಂಡು ಇದ್ದು.
~
ಅಂದು ಕಟ್ಟೆ ಕಟ್ಳೆ ಅಜ್ಜ° ಎರಡು ಕೋಟಿ ರುಪಾಯಿಗಳ ವೆಚ್ಚ ಮಾಡಿದ್ದವಡ.
ಇಂದು ಅದೇ ಕಟ್ಟೆಯ ನೀರು ಆರಿಂಗೆ ಹೇದು ನೋಡ್ಳೆ ನಾವು ಕೋಟಿಗಟ್ಳೆ ಕರ್ಚು ಮಾಡ್ತಾ ಇದ್ದು – ಕೋರ್ಟಿಲಿ.
ಎಂತಾ ದುರವಸ್ಥೆ.
~
ಒಂದೊಪ್ಪ: ಒಳ್ಳೆದು – ಕೆಟ್ಟದು ಎರಡುದೇ ನಮ್ಮ ಹೆರಿಯೋರ ಕಾಲಲ್ಲಿ ಇದ್ದತ್ತು. ಯೇವದರ ಮುಂದುವರುಸೆಕ್ಕು ಹೇಳ್ತದು ನಮ್ಮ ಕೈಲಿದ್ದು.
replica parajumpers jackets

2 thoughts on “ಕೋಟಿ ಬೆಲೆಯ ಕಟ್ಟೆ ಕಟ್ಟಿ ಅಮರವಾದ ಅಜ್ಜ..!

  1. ಒಳ್ಳೆ ಶುದ್ದಿ, ಆಗದು ಎಂದು…ಕೈಲಾಗದು ಎಂದು ..ಕೈಕಟ್ಟಿ ಕುಳಿತರೆ….ಕನ್ನಂಬಾಡಿಯ ಕಟ್ಟದಿದ್ದರೆ……., ವಿಶ್ವೇಶ್ವರಯ್ಯ ಜನಿಸದಿದ್ದರೆ….,ಆವುತಿತೋ ಈ ಕಟ್ಟೆ…..!!

  2. ಇಂಜಿನಿಯರುಗಳ ದಿನಕ್ಕೆ ಸರಿಯಾದ ಒಳ್ಳೆ ಶುದ್ದಿ. ಈಗಾಣವಕ್ಕೆ ವಿಶ್ವೇಶ್ವರಯ್ಯ ಅವರತ್ರಂದ ತುಂಬಾ ಕಲಿಯಲಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×