Oppanna.com

ಶಾಲೆ ಶಿಕ್ಷೆ ಅಪ್ಪಲಾಗ

ಬರದೋರು :   ಸುವರ್ಣಿನೀ ಕೊಣಲೆ    on   05/09/2010    13 ಒಪ್ಪಂಗೊ

ಸುವರ್ಣಿನೀ ಕೊಣಲೆ

ಇಂದು ಶಿಕ್ಷಕರ ದಿನಾಚರಣೆ, ಇಂದು ಆನು (ದೊಡ್ಡ ಅಲ್ಲದ್ದರೂ) ಒಂದು ಸಣ್ಣ ಸಾಧನೆ ಎಂತಾರು ಮಾಡಿದ್ದರೆ ಅದಕ್ಕೆ ಕಾರಣ ಆದ ಎನ್ನ ಎಲ್ಲ ಶಿಕ್ಷಕರಿಂಗೂ ಪ್ರಣಾಮಂಗೊ. ಹೀಂಗೆ ಶಿಕ್ಷಕರ ಬಗ್ಗೆ ಹೇಳೆಕಾರೆ ಎನಗೆ ಎನ್ನ ಸುರುವಾಣ ಶಾಲೆಯ ನೆಂಪು ಬತ್ತು 🙂 ಶಾಲೆಗೆ ಹೋಪಲೆ ಶುರು ಮಾಡಿಯಪ್ಪಗ ಎನಗೆ ಎರಡೂವರೆ ವರ್ಷ, ಅದರಿಂದ ಮೊದಲೇ ಅಕ್ಷರಾಭ್ಯಾಸ ಮಾಡ್ಸಿತ್ತಿದ್ದವು ಅಪ್ಪ ಮನೆಲಿ.ಆ ಶಾಲೆ ಒಂದು ಗಮ್ಮತ್ತು ಎನಗೆ ! ಅಲ್ಲಿ ಎಂತ ಕಲ್ತಿದೆ ಹೇಳೀ ನೆಂಪಿಲ್ಲೆ ! ಆದರೆ ಎನಗೆ ಆ ಶಾಲೆಯ ಮಾಷ್ಟ್ರನ ನೆಂಪು ಬತ್ತು ಒಂದೊಂದರಿ, ಹೆಸರು ಗೊಂತಿಲ್ಲೆ, ಮೋರೆಯೂ ನೆಂಪಿಲ್ಲೆ, ಎಲ್ಲ ಅಸ್ಪಷ್ಟ. ಇದೆಲ್ಲ ಕಥೆ ಇರಲಿ, ಆನು ಇಂದ್ರಾಣ ನಮ್ಮ ವಿಷಯಕ್ಕೆ ಬತ್ತೆ. ಸಾಮಾನ್ಯವಾಗಿ ಈಗಾಣ ದಿನಂಗಳಲ್ಲಿ ಕಂಡುಬಪ್ಪ ದೊಡ್ಡ ಸಮಸ್ಯೆ ಎಂತ ಹೇಳಿರೆ ಮಕ್ಕೊಗೆ ಸಂಬಂಧಪಟ್ಟದು.  ಅವರ ಆರೋಗ್ಯ ಆದಿಕ್ಕು, ಬೌದ್ಧಿಕ ಬೆಳವಣಿಗೆ ಆದಿಕ್ಕು, ಅವ್ವು ಮಾಡುವ ಲೂಟಿ ಆದಿಕ್ಕು…ಎಲ್ಲದರಲ್ಲಿಯೂ ಸಮಸ್ಯೆ ಎದುರಾವ್ತು. ಈಗ ಇಂದು ಆನು ಮಕ್ಕೊಗೆ ಶಾಲೆಲಿ ಅಪ್ಪ ತೊಂದರೆಗಳ ಬಗ್ಗೆ ಬರೆತ್ತೆ. ಇದರಿಂದ ಸುಮಾರು ಜನ ಅಮ್ಮಂದ್ರಿಂಗೆ ಉಪಕಾರ ಅಕ್ಕು ಹೇಳಿ ಎನ್ನ ಆಲೋಚನೆ :).
ಸಣ್ಣ ಮಕ್ಕೊ (7 ವರ್ಷಂದ ಸಣ್ಣವ್ವು) :
ಈ ಪ್ರಾಯದ ಮಕ್ಕೊ ಮನೆಂದ ಶಾಲೆಗೆ ಹೋವ್ತಿಲ್ಲೆ ಹೇಳಿ ಹಠ ಮಾಡುದು ನೋಡಿಕ್ಕು, ಇದರ ಕಂಡು ನಾವು ಮಕ್ಕಳ ಜೋರು ಮಾಡ್ತು. ಆದರೆ ಅದಕ್ಕೆ ಸುಮಾರು ಕಾರಣ ಇಕ್ಕು. ಅದರ ಅರ್ಥ ಮಾಡಿಗೊಂಡು ಮಕ್ಕೊಗೆ ಇಪ್ಪ ಸಮಸ್ಯೆಯ ನಾವು ಪರಿಹಾರ ಮಾಡೆಕು.

  • ಶಾಲೆಲಿ ಬೇರೆ ಮಕ್ಕೊ ಮಾಡುವ ಉಪದ್ರಂಗೊ. ಶಾಲೆಗೆ ಬಪ್ಪ ಬೇರೆ ಕೆಲವು ಮಕ್ಕೊ ವಿಪರೀತ ಲೂಟಿ ಮಾಡ್ತವು (ಪೆಟ್ಟು ಕೊಡುದು, ನೂಕಿ ಬೀಳ್ಸುದು, ವಸ್ತುಗಳ ಕದ್ದುಗೊಂಬದು, ಬುತ್ತಿಯ ಕದ್ದು ತಿಂಬದು, ಪುಸ್ತಕ ಹರಿವದು ಇತ್ಯಾದಿ). ನಮ್ಮ ಮಕ್ಕೊ ಪಾಪ ಹೇಳಿ ಆದರೆ ಲೂಟಿ ಮಕ್ಕೊ ಕೊಡುವ ತೊಂದರೆ ಹೆಚ್ಚು. ಇದಕ್ಕೆ ಹೆದರಿ ಮಕ್ಕೊ ಶಾಲೆಗೆ ಹೋಗದ್ದೆ ಇಪ್ಪಲೂ ಸಾಕು.
  • ಶಿಕ್ಷಕರು ಕೊಡುವ ಶಿಕ್ಷೆ. ಇದು ಒಂದು ದೊಡ್ಡ ಸಮಸ್ಯೆ. ಕಾರಣ ಎಂತ ಹೇಳಿರೆ ಈಗ ಟೀಚರ್ ಆಗಿ ಬಪ್ಪವಕ್ಕೆ ಯಾವುದೇ ಆಸಕ್ತಿ ಇರ್ತಿಲ್ಲೆ (ಹೆಚ್ಚಿನವಕ್ಕೆ), ಅವಕ್ಕೆ ಕಲುಶುಲೆ ಗೊಂತಿರ್ತಿಲ್ಲೆ, ಮಕ್ಕಳ ಇತಿಮಿತಿ, ಮನಸ್ಸು ಎಲ್ಲ ಅವಕ್ಕೆ ಗೊಂತೇ ಇರ್ತಿಲ್ಲೆ !! ಹಾಂಗಾಗಿ ಅಂತೆ ಇಲ್ಲದ್ದೆ ಮಕ್ಕೊಗೆ ಬಡಿವದು ಇತ್ಯಾದಿ ಮಾಡ್ತವು. ಟಿವಿಲಿ ಬಪ್ಪ ಶುದ್ದಿಗಳ ನಿಂಗಳುದೇ ನೋಡಿಕ್ಕು ಅಲ್ಲದಾ? ಹೀಂಗಿಪ್ಪ ತೊಂದರೆ ಇದ್ದರೆ ಮಕ್ಕೊ ಶಾಲೆಗೆ ಹೋಪಲೆ ಹೆದರುತ್ತವು. ಮನೆಲಿ ಶಾಲೆಗೆ ಹೋಪಲೆ ಒತ್ತಾಯ ಮಾಡುವ ಕಾರಣ ಮನೆಯವರ ಹೆದರಿಕೆಂದಾಗಿ ಕಾರಣವ ಮನೆಲಿ ಹೇಳ್ತವಿಲ್ಲೆ. ನವಗೂ ಒಂದು ಅಭ್ಯಾಸ ಇದ್ದು, ಮಕ್ಕೊ ಹೀಂಗೆಂತಾರು ಹೇಳಿರೆ “ನೀನೆ ಎಂತಾರು ಮಾಡಿಪ್ಪೆ, ಅದಕ್ಕೆ ಟೀಚರ್ ಪೆಟ್ಟು ಕೊಟ್ಟದು, ಈಗ ಅಂತೆ ಟೀಚರಿಂಗೆ ದೂರು ಹಾಕೆಡ” ಹೇಳಿ ನಾವು ಅವರ ಜೋರು ಮಾಡ್ತು. ಆದರೆ ಎಲ್ಲಾ ಸಂದರ್ಭಲ್ಲಿಯೂ ಇದು ಸತ್ಯ ಆಗಿರ್ತಿಲ್ಲೆ. ನಿಜವಾದ ವಿಷಯವ ತಿಳುಕ್ಕೊಂಡು ಮಕ್ಕೊಘೆ ಸಹಾಯ ಮಾಡೆಕಾದು ನಮ್ಮ ಕರ್ತವ್ಯ ಅಲ್ಲದಾ?
  • ಭಾಷೆಯ ಸಮಸ್ಯೆ, ಮನೆಲಿ ಮಾತಾಡುವ ಮಾತು ಬೇರೆ, ಆದರೆ ಈಗ ಹೆಚ್ಚಾಗಿ ನಾವು ಮಕ್ಕಳ ಇಂಗ್ಲಿಷ್ ಮಾಧ್ಯಮದ ಶಾಲೆಗೆ ಹಾಕುವ ಕಾರಣ ಮಕ್ಕೊಗೆ ಅರ್ಥ ಮಾಡಿಗೊಂಬಲೆ, ಮಾತಾಡುಲೆ ಸಮಸ್ಯೆ ಆವ್ತು. ಹೆಚ್ಚಿನ ಶಾಲೆಲಿ ಇಂಗ್ಲಿಷಿಲ್ಲಿ ಮಾತಾಡದ್ರೆ ಶಿಕ್ಷೆ ಕೊಡ್ತವು. ಇದಕ್ಕೆ ಹೆದರಿ ಮಕ್ಕೊ ಶಾಲೆಗೆ ಹೋಪಲೆ ಹೆದರುತ್ತವು. ಇಂತಹ ಸಂದರ್ಭಲ್ಲಿ ಮನೆಲಿ ನಾವು ಮಕ್ಕೊಗೆ ಆ ಭಾಷೆಲಿ ವ್ಯವಹರಿಸುಲೆ ಕಲಿಶೆಕು, ಅಲ್ಲದ್ದರೆ, ಆ ಕಷ್ಟವ ಸಣ್ಣ ಮಕ್ಕೊಗೆ ಕೊಡದ್ದೆ ಅವರ ಮಾತೃಭಾಷೆ (ಕನ್ನಡ) ಶಾಲೆಗೆ ಸುರುವಿಂಗೆ ಸೇರ್ಸೆಕು. ನಿಧಾನಕ್ಕೆ ಮಕ್ಕೊ ರಜ್ಜ ದೊಡ್ಡ ಆದಮೇಲೆ ಇಂಗ್ಲಿಷ್ ಮಾಧ್ಯಮಕ್ಕೆ ಕಳುಸುಲಕ್ಕು.
  • ಮಕ್ಕೊಗೆ ಕಲಿವ ಸಮಸ್ಯೆ ಇದ್ದರೆ. ನಮ್ಮ ಮಕ್ಕೊಗೆ ಯಾವುದಾದರೂ ರೆತಿಯ ಕಲಿವ ಸಮಸ್ಯೆ ಇದ್ದರೆ ಇದರಿಂದಾಗಿ ಅವಕ್ಕೆ ಶಾಲೆಲಿ ಕಷ್ಟ ಅಕ್ಕು.ಉದಾಹರಣೆಗೆ ಅಮೀರ್ ಖಾನ್ ನ ತಾರೆ ಜ಼ಮೀನ್ ಪರ್ ಸಿನೆಮಾಲ್ಲಿ ಇದ್ದ ಹಾಂಗಿದ್ದ ತೊಂದರೆ ಇದ್ದರೆ, ಅಥವಾ ಏಕಾಗ್ರತೆಯ ಸಮಸ್ಯೆ ಇದ್ದರೆ, ನೆಂಪು ಮಡಿಕ್ಕೊಂಬಲೆ ಕಷ್ಟ ಇದ್ದರೆ, ಅಥವಾ ಶಾಲೆಲಿ ಮಾಡ್ತ ಪಾಠಂಗೊ ಅರ್ಥ ಆಗದ್ರೆ, ಹೀಂಗಿಪ್ಪ ತೊಂದರೆ ಇಪ್ಪಗ ನಾವು ಅದರ ನಿರ್ಲಕ್ಷ ಮಾಡಿರೆ, ಅರ್ಥ ಮಾಡಿಗೊಂಬ ಬದಲು ಮಕ್ಕೊಗೆ ಉದಾಸೀನ ಹೇಳಿ ಗ್ರೇಶಿರೆ ಮುಂದೆ ತುಂಬಾ ದೊಡ್ಡ ಸಮಸ್ಯೆ ಎದುರಕ್ಕು.

ಹೀಂಗಿದ್ದ ಕೆಲವು ಸಮಸ್ಯೆಗೊ ಹೆಚ್ಚಾಗಿ ಈ ಸಣ್ಣ ಮಕ್ಕಳಲ್ಲಿ ಕಂಡು ಬತ್ತು, ಇದರ ನಾವು ಅರ್ಥ ಮಾಡಿಗೊಂಡು, ನಿಜವಾದ ಸಮಸ್ಯೆ ಎಂತರ? ಮಕ್ಕೊ ನಿಜವಾಗಿಯೂ ಉದಾಸೀನ ಮಾಡುದಾ ಅಲ್ಲ ಅವಕ್ಕೆ ಹೇಳ್ಲೆ ಎಡಿಯದ್ದ ತೊಂದರೆ ಇದ್ದಾ ಹೇಳಿ ಆಲೋಚನೆ ಮಾಡಿ ಸಮಸ್ಯೆಗೆ ಪರಿಹಾರ ಮಾಡೆಕ್ಕು. ಹೀಂಗಿದ್ದ ಸಮಸ್ಯೆಗೊಕ್ಕೆ ಹೆಚ್ಚಾಗಿ ಉಪಕಾರಕ್ಕೆ ಬಪ್ಪದು ಮಕ್ಕಳೊಟ್ಟಿಂಗೆ ನಾವು ಎಷ್ಟು ಆತ್ಮೀಯವಾಗಿ ವ್ಯವಹರಿಸುತ್ತು ಹೇಳುದು. ಮನೆಲಿಪ್ಪವ್ವು, ಮತ್ತೆ ಶಾಲೆಲಿ ಟೀಚರ್ ಗಳುದೇ ರಜ್ಜ ಹೆಚ್ಚು ಕಾಳಜಿ ತೆಕ್ಕೊಂಡು ಮುಂದುವರಿದರೆ ಈ ಸಣ್ಣ ಮಕ್ಕಳ ಮುಂದಾಣ ದೊಡ್ಡ ಜೀವನ ಸುಗಮ ಅಪ್ಪಲೆ ಉಪಕಾರ ಅಕ್ಕು.
8 ರಿಂದ 12 ವರ್ಷದ ಮಕ್ಕೊ:
ಸಣ್ಣ ಮಕ್ಕಳ ಕಥೆ ಹೀಂಗೆ ಆದರೆ ಇನ್ನು ರಜ್ಜ ದೊಡ್ಡ ಪ್ರಾಯದ ಮಕ್ಕೊಗೆ ಇದರೊಟ್ಟಿಂಗೆ ಬೇರೆ ಕೆಲವು ತೊಂದರೆಗೊ ಇರ್ತು.

  • ಈ ಪ್ರಾಯಲ್ಲಿ ಮಕ್ಕೊಗೆ ತಮ್ಮ ವ್ಯಕ್ತಿತ್ವದ ಅರಿವು ಹೆಚ್ಚಾವ್ತ ಹೋವ್ತು, ಇಂತಹ ಸಂದರ್ಭಲ್ಲಿ ಬೇರೆಯವ್ವು ಕುಶಾಲು ಮಾಡಿರೆ, ಹೀಯಾಳಿಸಿರೆ ಎಲ್ಲ ಅದು ಮನಸ್ಸಿಂಗೆ ಹೆಚ್ಚು ನಾಟುತ್ತು. ಹೀಂಗಿಪ್ಪಗ ಶಾಲೆಲಿ ಬೇರೆ ಮಕ್ಕೊ ಹೀಯಾಳಿಸುದು ಎಲ್ಲ ಮಾಡಿರೆ ಅದರಿಂದಾಗಿ ಮಕ್ಕಳ ಮನಸ್ಸಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಆವ್ತು. ಇನ್ನು ಶಾಲೆಲಿ ಟೀಚರ್ಗೊಕ್ಕೆ ಕೂಡ ಒಂದೊಂದರಿ ಮಕ್ಕಳ ಅವಮಾನ ಮಾಡುವ ಅಭ್ಯಾಸ ಇರ್ತು, ಕಲಿವಲೆ ಉಷಾರಿಲ್ಲದ್ರೆ ಬೇರೆ ಎಲ್ಲ ಮಕ್ಕಳ ಮುಂದೆ ಬಾಯಿಗೆ ಬಂದ ಹಾಂಗೆ ಬೈತ್ತವು. ಆದರೆ ಇದರ ಪರಿಣಾಮ ತುಂಬಾ ಕೆಟ್ಟದಾವ್ತು ಹೇಳ್ತ ಅಂದಾಜಿ ಇರ್ತಿಲ್ಲೆ ಅವಕ್ಕೆ.
  • ಇನ್ನು ಈ ಪ್ರಾಯಲ್ಲಿ ದೈಹಿಕ ಬೆಳವಣಿಗೆ ಆವ್ತಾ ಇರ್ತು, ಅದರ ಬಗ್ಗೆ ಅವಕ್ಕೆ ಕುತೂಹಲ ಇರ್ತು. ಈ ಸಮಯಲ್ಲಿ ಸರಿಯಾದ ಮಾರ್ಗದರ್ಶನ ಅಗತ್ಯ. ಅವಕ್ಕೆ ಅವರ ದೇಹದ ಬದಲಾವಣೆ ಎಂತಗೆ, ಹೇಂಗೆ ಹೇಳಿ ಸರಿಯಾಗಿ ಅರ್ಥ ಅಪ್ಪ ಹಾಂಗೆ ವಿವರ್ಸೆಕಾದು ಅಗತ್ಯ.

13 ರಿಂದ 20 ವರ್ಷ ಪ್ರಾಯದ ಮಕ್ಕೊ:
ಈ ಪ್ರಾಯವ ಹದಿಹರಯ (teenage) ಹೇಳಿ ಹೇಳ್ತವು. ಇದು ಹೆಚ್ಚು ಸಮಸ್ಯೆಗಳ ಸಮಯ !

  • ಕಲಿವ ವಿಷಯಂಗಳ ಆಯ್ಕೆ ಮಾಡುವಗ ತಪ್ಪಿರೆ ಅದರಿಂದಾಗಿ ಇಡೀ ಜೀವನ ಕಷ್ಟಪಡೆಕಾವ್ತು. ಹಾಂಗಾಗಿ ಅವಕ್ಕೆ ಆಸಕ್ತಿ ಇಪ್ಪ ಮತ್ತೆ ಅವರ ಕೈಲಿ ಕಲಿವಲೆ ಎಡಿಗಾದ ವಿಷಯಂಗಳನ್ನೇ ಆಯ್ಕೆ ಮಾಡಿ ಅದರಲ್ಲಿಯೇ ಪದವಿ ಮಾಡುದು ಒಳ್ಳೆದು. ನವಗೆ ಒಂದು ಅಭ್ಯಾಸ ಇದ್ದು, ನಮ್ಮ ಮಕ್ಕೊ ಡಾಕ್ಟ್ರೇ ಆಯಕ್ಕು, ಎಂಜಿನಿಯರೇ ಆಯಕ್ಕು ಹೇಳಿ.. ಆದರೆ ಮಕ್ಕಳ ಆಸಕ್ತಿ ಎಲ್ಲಕ್ಕಿಂತ ಮುಖ್ಯ ಅಲ್ಲದ? ಮತ್ತೆ ಇಲ್ಲಿ ಉದಾಹರಣೆ ಕೊಡ್ತರೆ ಅಮೀರ್ ಖಾನ್ ನ 3 idiots  ಸಿನೆಮಾ ! ಅದರಲ್ಲಿ ಈ ವಿಷಯವ ಲಾಯ್ಕಕ್ಕೆ ತೋರ್ಸಿದ್ದವು. ಹಾಂಗಾಗಿ ನಾವು ಮಕ್ಕೊಗೆ ಅವರ ಆಸಕ್ತಿಯನ್ನೇ ಬೆಳಶುಲೆ ಸಹಾಯ ಮಾಡೆಕ್ಕು. ನಾವು ಪೈಸೆಗೆ ಪ್ರಾಮುಖ್ಯತೆ ಕೊಡುವ ಬದಲು ಮಾಡುವ ಕೆಲಸ ಎಷ್ಟು ಉಪಯುಕ್ತ ಹೇಳುದರ ಆಲೋಚನೆ ಮಾಡೆಕು ಅಲ್ಲದಾ? ಪೈಸೆ ಜೀವನಕ್ಕೆ ಅಗತ್ಯ ಆದರೆ ಅದುವೇ ಮುಖ್ಯ ಅಲ್ಲ.
  • ಈ ಪ್ರಾಯದ ಮತ್ತೊಂದು ಮುಖ್ಯ ಸಮಸ್ಯೆ ಹೇಳಿರೆ ಪ್ರೀತಿ ಪ್ರೇಮ ಇತ್ಯಾದಿ. ಹೆಚ್ಚಾಗಿ ಈ ಪ್ರಾಯಲ್ಲಿ ಲೈಂಗಿಕತೆಯ ಬಗ್ಗೆ ಮಕ್ಕೊಗೆ ಹೆಚ್ಚು ಆಸಕ್ತಿ ಇಪ್ಪ ಕಾರಣ ಅದರ ವಿಮರ್ಶೆಗೆ ಮುಕ್ತ ಅವಕಾಶ ಇಲ್ಲದ್ದ ಕಾರಣ ಕಾಲೇಜಿಲ್ಲಿ ಸ್ನೇಹಿತರೊಟ್ಟಿಂಗೆ ಇದರ ಬಗ್ಗೆ ಮಾತಾಡುದು ಇತ್ಯಾದಿ ಮಾಡ್ತವು, ಆದರೆ ಆರಿಂಗೂ ಸರಿಯಾದ ಜ್ಞಾನ ಇಲ್ಲದ್ದ ಕಾರಣ ಮಕ್ಕೊ ತಪ್ಪು ದಾರಿ ಹಿಡಿವ ಸಂದರ್ಭಂಗೊ ಹೆಚ್ಚು. ಮೆತ್ತೆ ಈಗಾಣ ಮಾಧ್ಯಮಂಗಳ ಹಾವಳಿಯ ಕೇಳುದೇ ಬೇಡ, ಕಾಲೇಜಿಂಗೆ ಹೋಪ ಮಾಣಿಯಂಗಳ ಕೆಲಸವೇ ಕೂಸುಗಳ impress ಮಾಡುದು ಹೇಳುವ ರೀತಿಯ ವಿಷಯಂಗಳ ತೋರ್ಸುತ್ತವು, ಕಲಿವದಕ್ಕಿಂತ ಹೆಚ್ಚು ಬಾಹ್ಯ ಸೌಂದರ್ಯವನ್ನೇ ಕೂಸುಗೊ ಹೆಚ್ಚು ಮುಖ್ಯ ಹೇಳಿ ಭಾವಿಸುವ ಒಂದು ದುಃಖದ ವಿಷಯ ಈಗಾಣ ದಿನಂಗಳಲ್ಲಿ ಇದ್ದು.

ಈ ಎಲ್ಲಾ ಮಕ್ಕೊಗೆ ಸರಿಯಾದ ಮಾರ್ಗದರ್ಶನ ಅಗತ್ಯ. ಮನೆಲಿ ಅಪ್ಪ, ಅಮ್ಮ ಅಥವಾ ಅಣ್ಣ/ಅಕ್ಕ ಇಪ್ಪವ್ವು ಈ ಎಲ್ಲಾ ವಿಚಾರಂಗಳ ಬಗ್ಗೆಯೂ ಅವಕ್ಕೆ ಸರಿಯಾದ ರೀತಿಲಿ ಸಹಾಯ ಮಾಡೆಕು. ಇನ್ನು ಮಕ್ಕಳಲ್ಲಿ ಯಾವುದೇ ರೀತಿಯ ವಿಶೇಷ ಗುಣ ಇದ್ದರೆ ಉದಾಹರಣೆಗೆ ಬರವಣಿಗೆಯ ಕಲೆ, ಚಿತ್ರ ಬಿಡುಸುದು, ಒಳ್ಳೆ ಭಾಷಣ ಕಲೆ ಇತ್ಯಾದಿ.., ಹಾಂಗಿಪ್ಪದರ ಖಂಡಿತಾ ಬೆಳವಲೆ ಬಿಡಿ. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆ/ಅಭಿವೃದ್ಧಿಗೆ ಸಹಾಯ ಮಾಡ್ತು. ಮಕ್ಕೊ ದೊಡ್ಡ ಆಗಿ ಮುಂದೆ ಜೀವನಲ್ಲಿ ಯಾವುದೇ ಸಮಸ್ಯೆಯ ಸಮರ್ಥವಾಗಿ ಎದುರ್ಸೆಕಾರೆ ಈ ಎಲ್ಲಾ ಸಣ್ಣ ಸಣ್ಣ ಹೇಳಿ ಕಾಂಬ ಸಮಸ್ಯೆಗಳ ನಾವು ನಿವಾರ್ಸೆಕ್ಕು. ಇದರಿಂದಾಗಿ “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಹೇಳಿ ಹೇಳ್ತ ಮಾತು ನೂರಕ್ಕೆ ನೂರು ಸತ್ಯ ಅಪ್ಪಲೆ ಸಾಧ್ಯ, ಎಂತಗೆ ಹೇಳಿರೆ ದೈಹಿಕವಾಗಿ ಬೆಳದರೆ ಸಾಲ…ಮಾನಸಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಬೆಳೆಯಕ್ಕು, ಒಟ್ಟಿಂಗೆ ಅವರ ಜ್ಞಾನವೂ ಬೆಳೆಯಕ್ಕು. ಒಟ್ಟಿಂಗೇ ವಿನಯ ಮತ್ತೆ ವಿವೇಕವೂ… ಅಲ್ಲದಾ?
ಬೈಲಿನ ಎಲ್ಲ ಶಿಕ್ಷಕ ಶಿಕ್ಷಕಿ ಯರಿಂಗೆ ಶಿಕ್ಷಕರ ದಿನದ ಶುಭಾಶಯಂಗೊ 🙂

13 thoughts on “ಶಾಲೆ ಶಿಕ್ಷೆ ಅಪ್ಪಲಾಗ

  1. ದಾಗುಟ್ರಕ್ಕಾ..ಒಳ್ಳೆ ಲೇಖನ.
    ಇಪ್ಪತ್ತು ವರುಷದ ಮೇಗಾಣ ಮಕ್ಕಳ(?)ಸಮಸ್ಯೆ ಗೊಂತಿದ್ದೋ?
    ಅವಕ್ಕೆ ಓದೋದು ಹೇಳಿರೆ ದೊಡ್ಡ ಸಮಸ್ಯೆ…

    1. :)೨೦ ವರ್ಷಂದ ದೊಡ್ಡ ’ಮಕ್ಕೊ’ಗೂ ಸುಮಾರು ತೊಂದರೆಗೊ ಇರ್ತು. ಆದರೆ ಅದನ್ನೂ ಸೇರ್ಸಿರೆ ಲೇಖನ ಸುಮಾರು ಉದ್ದ ಅಕ್ಕು ಹೇಳಿ ಕಂಡತ್ತು, ಹಾಂಗಾಗಿ ಇನ್ಯಾವಗಾರು ಬರವಲಕ್ಕು ಗ್ರೇಶಿದೆ.

      1. { ಹಾಂಗಾಗಿ ಇನ್ಯಾವಗಾರು ಬರವಲಕ್ಕು ಗ್ರೇಶಿದೆ.}
        ಇನ್ನಾಣ ವಾರವೆ ಬರೆಯಿ.. ಬಲ್ನಾಡು ಮಾಣಿ ಬೇಕಕ್ಕು..

        1. 🙂 ಅದಪ್ಪು, ನಿಂಗ ಬರೆಯಿ ಅಕ್ಕಾ, ಎನಗೆ ಆ ಸಮಸ್ಯೆಗ ಇದ್ದ ಇಲ್ಲೆಯ ಹೇಳಿ ಮತ್ತೆ ಓದಿಕ್ಕಿ ಹೇಳ್ತೆ ::)

  2. ತಿಳುವಳಿಕೆಗೆ ಒಂದು ಹೆದ್ದಾರಿಯಾಗಿ ಇಪ್ಪಂತಹ ಶಿಕ್ಷಣ ಪಾಠ ಕಲಿವದರ್ಲಿ , ಕಲಿಸಿಕೊಡುವದರ್ಲಿ ಆಗಿರ್ತು . ಮನುಷ್ಯನೊಬ್ಬನ ತಿಳುವಳಿಕೆ ಹೇಳಿ ಹೇಳುದು ಎಂತ ಇದ್ದೋ ಅದು ಅವ ಉಪಯೋಗಿಸಿಗೊಂಡಿದ್ದ ಶಿಕ್ಷಣದ ಮಾದರಿಯ ಮೇಲೆ ಆಧಾರಿತವಾಗಿ ಇರ್ತು..ಅದು ನಿಂಗ ಹೇಳಿದ ಹಾಂಗೆ ಶಿಕ್ಷೆಯ ಶಿಕ್ಷಣವಾಗಿರದ್ದೆ , ಅವರ ಪ್ರಾಯ ಮತ್ತೆ ಸಮಾಜಲ್ಲಿ ಅವಕ್ಕೆ ಯಾವ ರೀತಿ ಬೆಳವಲೆ ವಾತಾವರಣ ನಿರ್ಮಾಣ ಆವ್ತೋ ಅದರ ಗಮನ್ಸಿಗೊಂಡು ಶಿಕ್ಷಣ ಕೊಟ್ಟರೆ ಅದು ಅವನ ಜೀವನಲ್ಲಿ ಒಳ್ಳೆ ಪರಿಣಾಮ ಬೀರುಗು ಹೇಳಿ ಎನ್ನ ಅನಿಸಿಕೆ.ಒಳ್ಳೆಯ ಮಾಹಿತಿ ಬೈಲಿಂಗೆ ಕೊಟ್ಟದಕ್ಕೆ ಧನ್ಯವಾದ ಸುವರ್ಣಿನಿ ಅಕ್ಕಾ…

    1. ಇಲ್ಲಿ ಹೇಳಿದ್ದು ಸಾಮಾನ್ಯ ಮಕ್ಕಳ ಸಮಸ್ಯೆಗಳ ಬಗ್ಗೆ, ಬೇರೆ ರೀತಿಯ ಆರೋಗ್ಯದ ಸಮಸ್ಯೆಗೊ ಇನ್ನೂ ಹಲವು ಇದ್ದು, ಅದರ ಈ ಲೇಖನಲ್ಲಿ ಬರದ್ದಿಲ್ಲೆ.

  3. ಸುವರ್ಣಿನಿ ಅಕ್ಕಾ..
    ಸಮಯೋಚಿತ, ಸಾರ್ಥಕ ಲೇಖನ.
    ತುಂಬಾ ಲಾಇಕಲ್ಲಿ ವಿಶಯಂಗಳ ಹೇಳಿದಿ. ಶಿಕ್ಷಣ-ಶಿಕ್ಷೆಯ ಸೂಕ್ಷ್ಮತೆಯ ಚೆಂದಲ್ಲಿ ವಿವರುಸಿದಿ.
    ಸ್ವತಃ ಶಿಕ್ಷಕಿ ಆದ ನಿಂಗೊಗೂ ಅಭಿನಂದನೆಗೊ.

  4. ಮಕ್ಕಳ ಯಾವ ರೀತಿ ಬೆಳಸೆಕ್ಕು ಮತ್ತೆ ಅವಕ್ಕಾಗಿ ನಮ್ಮ ಜವಾಬ್ದಾರಿ ಎಂತರ ಹೇಳುವದರ ವಿವರವಾಗಿ ಕೊಟ್ಟದಕ್ಕೆ ಧನ್ಯವಾದಂಗೊ.

    1. ಇತ್ತೀಚೆಗೆ ಸುಮಾರು ಹೀಂಗಿಪ್ಪ ಸಮಸ್ಯೆಗೊ ಎದುರಾವ್ತ ಇದ್ದಲ್ಲದಾ, ಮೊದಲಾಣ ಕಾಲಲ್ಲಿ ಮನೆ ತುಂಬಾ ಮಕ್ಕೊ ಇದ್ದರೂ, ಅವ್ರ ನೋಡಿಗೊಂಬಲೆ ಅಮ್ಮಂದ್ರಿಂಗೆ ಸಮಯ ಇಲ್ಲದ್ರೂ ಹೆಚ್ಚಿನ ಸಮಸ್ಯೆಗಳೇ ಇತ್ತಿಲ್ಲೆ !! ಆದರೆ ಈಗ ಇಪ್ಪದು ಒಂದೋ ಎರಡೋ ಮಕ್ಕೊ, ಆದರೂ ಸಮಸ್ಯೆಗಳ ಸರಮಾಲೆ !! ಆಲೋಚನೆ ಮಾಡೆಕ್ಕಾದ ವಿಷಯ 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×