ಗಂಗಾನದಿಯ ಕರೆಲಿ ಹನ್ನೆರಡು ಒರಿಶಕ್ಕೊಂದರಿ ಮಹಾ ಕುಂಭ ಮೇಳ – ಹೇದು ಆವುತ್ತಲ್ಲದೋ;
ಪುಣ್ಯ ಕಾಲಲ್ಲಿ ಗಂಗಾ ನೀರಿಲಿ ಮಿಂದು ಪುನೀತರಪ್ಪದು ಮಹಾಕುಂಭ ಮೇಳದ ಗವುಜಿ.
ಲಕ್ಷಗಟ್ಳೆ ಜೆನಂಗೊ ಆ ದಿನ ಬಂದು ಸೇರ್ತವು.
ಮೊದಲೂ ಇರ್ತವಿಲ್ಲೆ, ಮತ್ತೆಯೂ ಇರ್ತವಿಲ್ಲೆ – ಆ ಒಂದು ಕ್ಷಣಕ್ಕೆ ಲಕ್ಷಗಟ್ಳೆ ಜೆನ ಬಂದು ಸೇರಿ ಪುಣ್ಯ ಸ್ನಾನ ಮಾಡ್ತವು.
ಮೊನ್ನೆ ಕೊಡೆಯಾಲಲ್ಲೂ ಆದ್ಸು ಇದೇ ನಮುನೆದು. ಎಂತರ!?
~
ಮಠಂದ ಗೋ ರಕ್ಷಣೆಗಾಗಿ ಹಲವಾರು ಕಾರ್ಯಂಗೊ, ಕಾರ್ಯಕ್ರಮಂಗೊ ನೆಡೆತ್ತಾ ಇದ್ದು – ನವಗೆ ಗೊಂತಿಪ್ಪದೇ.
ಕಾಮದುಘಾ – ಹೇಳ್ತ ಯೋಜನೆ ಮೂಲಕ ಗೋ ರಕ್ಷಣೆಗೆ ಮೊದಲುಗೊಂಡು, ದತ್ತಶಂಕರ ಗೋ ಯಾತ್ರೆ, ಭಾರತೀಯ ಗೋ ಯಾತ್ರೆ, ವಿಶ್ವಮಂಗಲ ಗೋ ಗ್ರಾಮ ಯಾತ್ರೆ, ವಿಶ್ವ ಗೋ ಸಮ್ಮೇಳನ – ಹೀಂಗಿರ್ತ ಹಲವಾರು ಗೋ ಸೇವಾ ಕಾರ್ಯಂಗೊ ನೆಡೆದ್ದು ನಮ್ಮ ಮಠದ ಆವರಣಲ್ಲಿ.
ಈಗಾಣದ್ದು – ಮಂಗಳ ಗೋಯಾತ್ರೆ.
ಮಂಗಳ ಪಾಂಡೆಯ ಅಸಾಧಾರಣ ಗೋ ಭಕ್ತಿಯ ಪ್ರೇರಣೆಲಿ ಅದರದ್ದೇ ಹೆಸರಿಲಿ ಒಂದು ಗೋ ಯಾತ್ರೆ ಆರಂಭ ಆತು.
ಅದಕ್ಕೆ ಮಂಗಳ ಗೋ ಯಾತ್ರೆ – ಹೇಳಿಯೇ ಹೆಸರು.
~
ಈ ಯಾತ್ರೆಗೆ ಪೂರ್ವಭಾವಿಯಾಗಿ ಗೋ ಕಿಂಕರ ಯಾತ್ರೆ – ಹೇದು ಕಾರ್ಯಕರ್ತರ ಯಾತ್ರೆ ಹೋಗಿ ಊರೂರಿನ ಸಂಪರ್ಕ ಮಾಡಿದ್ದು. ಗೋ ಯಾತ್ರೆ ಎಲ್ಲೆಲ್ಲಿ ಬರೆಕ್ಕು, ಹೇಂಗೆ ಬರೆಕ್ಕು, ಆರಾರು ಆಸಕ್ತರು – ಹೇಳ್ತದರ ಗುರ್ತ ಮಾಡಿಗೊಂಡು ಬಂದ ಯಾತ್ರೆ ಅದು.
ಏಕಕಾಲಕ್ಕೆ ಐದು ದಿಕ್ಕಂದ ಆರಂಭ ಆದ ಗೋ ಕಿಂಕರರ ಯಾತ್ರೆ – ಮುಂದೆ ಇಡೀ ಅಲೆ ಎಬ್ಬುಸಿದ ಮಂಗಳ ಗೋ ಯಾತ್ರೆಗೆ ದಾರಿ ಮಾಡಿಗೊಂಡು ಬಂತು.
~
ಮತ್ತೆ ಹೆರಟದು ಮಂಗಳ ಗೋ ಯಾತ್ರೆ.
ಬೆಂಗುಳೂರಿಂದ ಆರಂಭ ಆದ ಯಾತ್ರೆ, ಮುಂದೆ ತುಮಕೂರು ದಾರಿಲಿ ಆಂಧ್ರ, ತೆಮುಳು ನಾಡು, ಮತ್ತೆ ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ – ಕೊಡೆಯಾಲ ಹೀಂಗೆ ಬಂದು ಸೇರಿತ್ತು.
ಕೊಡೆಯಾಲಲ್ಲಿ ಮೊನ್ನೆ ನೆಡದ ಕಾರ್ಯಕ್ರಮವೇ – ಮಹಾ ಮಂಗಳ.
ಮಂಗಳ ಗೋ ಯಾತ್ರೆಯ ಮಂಗಳ ಕಾರ್ಯಕ್ರಮಕ್ಕೆ ಮಹಾಮಂಗಳ – ಹೇದು ಗುರುಗೊ ಹೆಸರು ಮಡಗಿದ್ಸಾಡ.
~
ಕೊಡೆಯಾಲದ ದೊಡ್ಡ ಮಾರ್ಗದ ಕರೆಲಿಪ್ಪ ದೊಡ್ಡಾ ಪದವಿನ ಜಾಲು ಮಾಡಿದ್ಸು.
ಅದಕ್ಕಿಡೀ ಕೆಂಪು ಮಣ್ಣು ಹಾಕಿ ಒಪ್ಪ ಮಾಡಿದ್ದು.
ಅದರಲಿ ಬೇರೆಬೇರೆ ದಿಕ್ಕೆ ಏಳೆಂಟು ದಿಕ್ಕೆ ಶಾಮಿಯಾನ ಹಾಕಿದ್ದು.
ಒಂದಿಕ್ಕೆ ಸಭಾ ಕಾರ್ಯಕ್ರಮ ಮಾಡ್ಳೆ, ಮತ್ತೊಂದು ಧಾರ್ಮಿಕ ಕಾರ್ಯಕ್ರಮ ಮಾಡ್ಳೆ, ಇನ್ನೊಂದು ಕಛೇರಿಗೆ, ಮತ್ತೊಂದು ಕಲಾವೇದಿಕೆ, ಮತ್ತೊಂದು ಪ್ರದರ್ಶಿನಿಗೆ, ಮತ್ತೊಂದು ಅಡಿಗೆಗೆ, ಕೊನೆಯದಾಗಿ – ಭೋಜನಶಾಲೆಗೆ.
ಪ್ರತಿಯೊಂದುದೇ ಅದರದ್ದೇ ಆದ ಗವುಜಿದು.
ಕಲಾವೇದಿಕೆಲಿ ಘಟಾನುಘಟಿಗೊ ಬಂದು ಕಲಾಸೇವೆ ಮಾಡಿದವು.
ಪ್ರದರ್ಶಿನಿಲಿ ಅಪೂರ್ವ ತಳಿಗೊ, ಅಮೂಲ್ಯ ವಸ್ತುಗೊ ಪ್ರದರ್ಶಗೊಂಡತ್ತು.
ಧಾರ್ಮಿಕ ಕಾರ್ಯಕ್ರಮದ ಶಾಮಿಯಾನಲ್ಲಿ ತುಂಬಾ ಅಪೂರ್ವ ಹೋಮ ಹವನಂಗೊ ನೆಡದತ್ತು.
ಭೋಜನ ಶಾಲೆಲಿ ಸಾವಿರ ಸಾವಿರ ಜೆನ ಬಂದರೂ ತುಂಬಾ ಚೆಂದಲ್ಲಿ ನಿರ್ವಹಣೆ ಆತು.
ಇನ್ನು, ಸಭಾ ಕಾರ್ಯಕ್ರಮದ್ದು?
ಅದುವೇ ಒಂದು ತೂಕ.
ಒಂದು ಸಾವಿರ ಜೆನ ಸಂತರು ವೇದಿಕೆ ಮೇಲೆ ಕೂಪಲೆ ಬೇಕಾದ ವೆವಸ್ತೆ ಇದ್ದತ್ತು.
ಅದರ ಒಟ್ಟಿಂಗೆ ಕೆಲವು ಮುಖ್ಯಪಟ್ಟ ಅತಿಥಿಗೊ ಬಂದು ವೇದಿಕೆಯ ಅಲಂಕರಿಸುವ ಹಾಂಗೆ.
ಕಲ್ಲಡ್ಕ ಡಾಗುಟ್ರು, ನಿಟ್ಟೆ ಹೆಗ್ಡೇರು, ಸುಬ್ರಮಣ್ಯ ಸ್ವಾಮಿಗೊ – ಹೀಂಗೆ ಹಲವಾರು ಜೆನ ಧರ್ಮರಕ್ಷಣೆಗಾಗಿ ಕೆಲಸ ಮಾಡಿದವು ವೇದಿಕೆಲಿ ಇತ್ತಿದ್ದವು.
ಸುಬ್ರಮಣ್ಯ ಸ್ವಾಮಿಗೊ ಅಂತೂ – ಮಿಂಚಿನ ಸಂಚಾರದ ಮಾತುಗೊ.
ಅಂತೂ – ಅಭೂತಪೂರ್ವ ಮಾತುಗೊ.
~
ಅದಾಗಿ ಶ್ರೀ ಶ್ರೀ ಆಶೀರ್ವಚನ.
ಗೋ ರಕ್ಷಣೆಗೆ ಹೇಂಗೆ ಕೆಲಸ ಮಾಡೇಕು- ಎಂತೆಲ್ಲ ಕೆಲಸ ಮಾಡೇಕು, ಅದು ಸಮಾಜಕ್ಕೆ ಎಂತಕೆ ಅನಿವಾರ್ಯ – ಹೇಳ್ತದರ ತುಂಬಾ ಚೆಂದಕೆ ಕಣ್ಣಿಂಗೆ ಕಟ್ಟುವ ಹಾಂಗೆ ಹೇಳಿಕೊಟ್ಟವು.
~
ಇದರ ಕೇಳುಲೆ ಹೇದು ಸೇರಿದ ಗೋ ಭಕ್ತರು – ಒಂದು ಲಕ್ಷಂದ ಮೇಗೆ.
ಇಂಥಾ ಒಂದು ಅಭೂತಪೂರ್ವ ಕಾರ್ಯಕ್ರಮ ನೋಡುವಾಗ, ಗಂಗಾನದಿಯ ಕುಂಭಮೇಳ ಒಪ್ಪಣ್ಣಂಗೆ ನೆಂಪಾದ್ಸು ಅಂತೆ ಅಲ್ಲ.
ಎರಡುರಲ್ಲೂ ಜೆನ ಸಾಗರ ಸೇರುತ್ತು. ಎರಡರಲ್ಲೂ ಧರ್ಮ ಚಿಂತನೆ ನೆಡೆತ್ತು. ಎರಡರಲ್ಲೂ ಅಚ್ಚುಕಟ್ಟು ವೆವಸ್ತೆಗೊ.
ಕುಂಭ ಮೇಳಲ್ಲಿ ಗಂಗಾ ನದಿಯೇ ಅಮ್ಮ.
ಮಹಾ ಮಂಗಳಲಿ ಗೋ ಮಾತೆಯೇ ಅಮ್ಮ.
ಆದರೆ, ಕುಂಭ ಮೇಳ ಅಂಬಗಂಬಗ ಆವುತ್ತ ಇರ್ತು; ಮಹಾ ಮಂಗಳ ನಭೂತೋ – ಕಾರ್ಯಕ್ರಮ. ಭವಿಶ್ಯಲ್ಲಿ ಅಗತ್ಯ ಬಿದ್ದರೆ ಅಪ್ಪಲೂ ಸಾಕು.
ಒಂದೊಪ್ಪ: ಮಹಾ ಮಂಗಳದ ಮಹಾ ಜನತೆ ಗೋ ರಕ್ಷೆಗೆ ಮಹಾ ಸೈನಿಕರಾಗಲಿ.
~
ಸೂ: ಮಹಾ ಮಂಗಲ ಪತ್ರಿಕಾ ವರದಿಗೊ: ಇಲ್ಲಿದ್ದು,
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಹರೇರಾಮ. ಚುಟುಕಾದ ವರದಿ ಮನತಟ್ಟಿತ್ತು. ಕುಂಭ ಮೇಳಕ್ಕೆ ಹೋಲುಸಿದ್ದು ತುಂಬ ಲಾಯಕಾತು.
ಕುಂಭ ಮೆಳಲ್ಲಿ ಗಂಗಾ ನದಿಯೇ ಅಮ್ಮ ,ಆದರೆ ಮಹಾ ಮಂಗಳಲ್ಲಿ ಗೋಮಾತೆಯೆ ಅಮ್ಮ..!! ಒಳ್ಳೆ ವಿಶ್ಲೇಷಣೆ ಒಪ್ಪಣ್ಣ.