- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಅತ್ಯಂಬುಪಾನಾನ್ನ ವಿಪಚ್ಯತೇsನ್ನಮ್।
ನಿರಂಬುಪಾನಾಚ್ಚ ಸ ಏವ ದೋಷಃ।।
ತಸ್ಮಾನ್ನರೋ ವಹ್ನಿವಿವರ್ಧನಾಯ।
ಮುಹುರ್ಮುಹುರ್ವಾರಿ ಪಿಬೇದಭೂರಿ।।
ಪದಚ್ಛೇದ:
ಅತ್ಯಂಬುಪಾನಾತ್ ನ ವಿಪಚ್ಯತೇ ಅನ್ನಮ್ ನಿರಂಬುಪಾನಾತ್ ಚ ಸಃ ಏವ ದೋಷಃ।
ತಸ್ಮಾತ್ ನರಃ ವಹ್ನಿವಿವರ್ಧನಾಯ ಮುಹುರ್ಮುಹುಃ ವಾರಿ ಪಿಬೇತ್ ಅಭೂರಿ।।
ಅನ್ವಯ:
ಅತ್ಯಂಬುಪಾನಾತ್(ಅತಿಯಾಗಿ ನೀರು ಕುಡಿವದರಂದ) ಅನ್ನಂ(ಆಹಾರ) ನ ವಿಪಚ್ಯತೇ(ಜೀರ್ಣ ಆವುತ್ತಿಲ್ಲೆ)
ನಿರಂಬುಪಾನಾತ್ ಚ (ನೀರು ಕುಡಿಯದೇ ಇದ್ದರೂ) ಸ ಏವ ದೋಷಃ (ಅದೇ ದೋಷ- ಜೀರ್ಣ ಆವ್ತಿಲ್ಲೆ)
ತಸ್ಮಾತ್ (ಹಾಂಗಾಗಿ) ನರಃ ( ಮನುಷ್ಯ) ವಹ್ನಿವಿವರ್ಧನಾಯ(ಜಠರಾಗ್ನಿ ಹೆಚ್ಚಪ್ಪಲೆ ಬೇಕಾಗಿ) ಮುಹುರ್ಮುಹುಃ(ಆಗಾಗ) ಅಭೂರಿ(ಸ್ವಲ್ಪ ಸ್ವಲ್ಪವೇ) ವಾರಿ ಪಿಬೇತ್(ನೀರು ಕುಡಿಯೆಕ್ಕು)
ಏನೇ ಮಾಡ್ತರೂ ಅದು ಅತಿ ಅಪ್ಪಲಾಗ. ಒಂದೋ ಆರು ಮೊಳ ಇಲ್ಲದ್ದರೆ ಮೂರು ಮೊಳ ಹೇಳಿ ಮಾಡ್ಲಾಗ. ಅತಿಸರ್ವತ್ರ ವರ್ಜಯೇತ್ ಹೇಳ್ತವನ್ನೆ.
ಊಟ ಮಾಡುವಗ ಲೆಕ್ಕಂದಚ್ಚಿಗೆ ನೀರಾಗಲೀ ದ್ರವಾಹಾರ ಆಗಲೀ ತೆಕ್ಕೊಂಬಲಾಗ. ಜೀರ್ಣ ರಸಂಗೊ ಚಪ್ಪೆ ಆಗಿ ಸರಿಯಾಗಿ ಜೀರ್ಣ ಆಗ.
ನೀರು ಅಥವಾ ದ್ರವಾಹಾರವೇ ಇಲ್ಲದೆ ಬರೇ ಗಟ್ಟಿ ಆಹಾರ ಮಾತ್ರ ಸೇವಿಸುಲೂ ಆಗ. ನೀರಿಲ್ಲದ್ದೆ ಆವಗಳೂ ಜೀರ್ಣ ಸರಿಯಾಗಿ ಆಗ.
ಅಷ್ಟಾಂಗಹೃದಯಲ್ಲಿ ಹೇಳಿದಾಂಗೆ ಜಠರದ ಅರ್ಧಭಾಗ ಗಟ್ಟಿ ಆಹಾರ,ಅದರರ್ಧ ದ್ರವಾಹಾರ ಸೇವಿಸೆಕ್ಕು ಒಳುದ ಕಾಲುಭಾಗ ಖಾಲಿ ಬಿಡೆಕ್ಕು ವಾಯುಸಂಚಾರಕ್ಕೆ.
ಜಠರಂ ಪೂರಯೇದರ್ಧಂ ತದರ್ಧಂ ತು ಜಲೇನ ಚ।
ವಾಯೋಃ ಸಂಚರಣಾರ್ಥಾಯ ಪಾದಮೇಕಂ ಪರಿತ್ಯಜೇತ್।।
ಜೀರ್ಣಕ್ರಿಯೆ ಸರಿಯಾಗಿ ಆಯೆಕ್ಕಾರೆ ಮಧ್ಯೆ ಮಧ್ಯೆ ರಜರಜವೇ ನೀರು ಕುಡಿಯಕ್ಕು.
ಲೇಖನ ಕಳುಹಿಸುವ ಕ್ರಮ ರಜ ಹೇಳಿ.
ತ್ರಿಕಾಲಾಬಾಧಿತ ಸತ್ಯ.
ನೀರು ಯಾವರೀತಿ ಕುಡಿಯೆಕ್ಕು ಹೇಳಿ ತಿಳಿಶಿ ಕೊಟ್ಟ ಒಳ್ಳೆ ಸೂಕ್ತಿ