ಪಂಕಜಾ ರಾಮಭಟ್ ಇವಕ್ಕೆ ಒಪ್ಪಣ್ಣಜಾಲತಾಣಕ್ಕೆ ಸ್ವಾಗತ ಕೋರುತ್ತಾ, ಒಂದು ಲೇಖನದೊಟ್ಟಿಂಗೆ, ಅವರ ಬಗ್ಗೆ ವಿವರಂಗಳನ್ನೂ ಇಲ್ಲಿ ಕೊಡ್ತಾ ಇದ್ದೆ:-
ಹೆಸರು—ಪಂಕಜ ರಾಮಭಟ್, ವಾಸ್ತವ್ಯ—-ಕುರ್ನಾಡು ಗ್ರಾಮದ ಮುಡಿಪು.
ವಿದ್ಯಾರ್ಹತೆ— ಇತಿಹಾಸಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಂದ ಎಂ. ಎ. ಸ್ನಾತಕೋತ್ತರ ಪದವಿ.
ವೃತ್ತಿ—ಭಾರತೀಯ ಅಂಚೆ ಇಲಾಖೆಯಲ್ಲಿ 26 ವರ್ಷ ಸೇವೆಗೈದು ಮಂಗಳೂರು ಹೆಡ್ ಪೋಸ್ಟ್ ಆಫೀಸಿಲ್ಲಿ ಅಸಿಸ್ಟಂಟ್ ಪೋಸ್ಟ್ ಮಾಸ್ಟರ್ ಆಗಿ ಸ್ವಯಂ ನಿವೃತ್ತಿ ಪಡೆದು ಪ್ರಸ್ತುತ ಗೃಹಿಣಿ.
ಹವ್ಯಾಸ –ಕಥೆ, ಕವನ, ಲೇಖನ ಬರೆವದು, ಓದುವುದು, ಹೊಲಿಗೆ, ಕಸೂತಿ, ಗಾರ್ಡೆನಿಂಗ್, ಕರಕುಶಲ ಕಲೆ ಇತ್ಯಾದಿ
ಮೂಲತಃ ದಿವಂಗತ ಕೊಡಕ್ಕಲ್ಲು ವೆಂಕಟ್ರಮಣ ಭಟ್ (ಕೆ.ವಿ.ಭಟ್ ) ಮತ್ತು ದಿವಂಗತ ಶ್ರೀಮತಿ ಸಾವಿತ್ರಿ ವಿ ಭಟ್ ಇವರ ಮಗಳು ಕಬ್ಬಿನಹಿತ್ಲು ದಿವಂಗತ ಶಂಕರಭಟ್ಟರ ಸೊಸೆ, ಕೆ. ಎಸ್. ರಾಮಭಟ್ ರ ಹೆಂಡತಿ
ಶ್ರೀಸುತ ಜಾಲತಾಣ, ಮಂಗಳೂರು ಹವ್ಯಕ ವಾರ್ತೆ ಇತ್ಯಾದಿಗಳಲ್ಲಿ ಕವನ ಪ್ರಕಟ ವಾಗಿದ್ದು ವಿಕ್ರಮ ನವರಾತ್ರಿ ವಿಶೇಷಾಂಕಲ್ಲಿ ಕವನ ಪ್ರಕಟ. ಆಯಿದು.
~~***~~
ಹವ್ಯಕರ ಮದುವೆ ಸಮಸ್ಯೆ ಒಂದು ವಿಡಂಬನೆ
ಅಂದೆಲ್ಲಾ ಮನೆಲಿ ಕೂಸು ಹುಟ್ಟಿದರೆ ಅಯ್ಯೋ ಕೂಸಾ ಹೇಳುವ ಸಸಾರದ ಮಾತು ಕೂಸು ಹುಟ್ಟಿದ ಪ್ರತಿ ಮನೆಲಿ ಕೇಳಿಗೊಂಡಿತ್ತು ..ಸಾಲು ಸಾಲು ಕೂಸು ಹೆತ್ತೋರಂತೂ ಇನ್ನೊಂದಾದರು ಮಾಣಿ ಅಕ್ಕು ಹೇಳಿ ಆಶೆಲಿತ್ತಿದ್ದವು .ಅದಕ್ಕೆ ಕಾರಣವೂ ಇಲ್ಲದ್ದೆ ಇಲ್ಲೇ. ಕೂಸು ಆದರೆ ಪ್ರಾಯಕ್ಕೆ ಬಪ್ಪಗ ಅದಕ್ಕೆ ಮದುವೆ ಮಾಡುದೆ ಒಂದು ತಲೆಬೆಶಿ. ಅಂಬಗ ಮಾಣಿಯಂಗೊಕ್ಕೆ ಕೂಸು ನೋಡುಲೆ ಹೋಪದು. ಎಲ್ಲ ಸರಿ ಇದ್ದರೂ ಎಂತಾರು ಒಂದು ಕುಂಟು ನೆಪ ತೆಗದು ಕೂಸಿನ ಬೇಡ ಹೇಳುದು ಒಂದು ಹವ್ಯಾಸ ಅಗಿತ್ತು . ಕೆಲವರಂತೂ ಅಬ್ಬೆ ಅಪ್ಪ ನೋಡಿದರೆ ಸಾಲ, ನೆಂಟರು ಗೆಳೆಯರು ಹೇಳಿ ಒಂದು ಕೂಸಿನ ನೋಡುವ ನೆಪಲ್ಲಿ ನಾಲ್ಕು ಐದು ಸರ್ತಿ ಹೆಣ್ಣಿನ ಮನೆಗೆ ಬಂದು ಆದರಾತಿಥ್ಯ ಸವಿದು ಕಡೆಂಗೆ ಎಂತದೂ ಇಲ್ಲದ್ದರೆ ಜಾತಕ ಅವುತ್ತಿಲ್ಲೆ ಹೇಳಿ ಬೇಡ ಹೇಳುದು ಮಾಡಿಗೊಂಡಿತ್ತಿದ್ದವು. ಹಿಂಗಾಗಿ ಕೂಸಿನ ಅಬ್ಬೆ ಅಪ್ಪಂಗೆ ಕೂಸಿನ ಮದುವೆ ಮಾಡುದೆ ಒಂದು ಸಮಸ್ಯೆ ಆಗಿತ್ತು .ಅವಾಗ ಕೂಸಿಂಗೆ ಎಂತಕೆ ವಿದ್ಯೆ, ಅಡಿಗೆ ಕೆಲಸ ಕಲ್ತರೆ ಸಾಕು ಹೇಳುವ ಭಾವನೆದೆ ಇತ್ತು. ಹಾಂಗೇ ಕೂಸಿನ ವಿದ್ಯಾಭ್ಯಾಸ ಮೊಟಕು ಮಾಡಿ ಮದುವೆ ಯ ತಯಾರಿ ಮಾಡಿಗೊಂಡಿತ್ತಿದ್ದವು .ಅಂಬಗ ವರದಕ್ಷಿಣೆದೆ ಪ್ರಮುಖವಾಗಿತ್ತು. ಹಾಂಗೇಳಿ ಕೂಸಿಂಗೆ ಪ್ರಾಯ ಆತೋ ಮದುವೆ ಮಾಡುದೆ ಕಷ್ಟ ಆಗಿತ್ತು ..ಇತ್ಲಾಗಿ ವಿದ್ಯೆದೆ ಇಲ್ಲೇ ಅತ್ಲಾಗಿ ಮದುವೆದೇಇಲ್ಲೇ, ಎಂಗಳ ನಂತರ ಮಗಳ ಜೀವನ ಹೆಂಗೋ ಹೇಳುವ ತಲೆಬೆಶಿಯುದೆ ಸೇರಿಗೊಂಡಿತ್ತು. ಈ ಎಲ್ಲದರಂದ ಬೇಜಾರ ಆಗಿ ಕೂಸು ಹುಟ್ಟುದೆ ಬೇಡ ಹೇಳುವ ಸ್ಥಿತಿಗೆ ಅಬ್ಬೆ ಅಪ್ಪ ಬಂದವು. ಕೂಸು ಹೇಳಿ ಆದರೆ ಹೊಟ್ಟೇಲಿಯೇ ಪೆಜಂಕಿ ಹಾಕುವ ಕಾಲವು ಬಂತು .
ಆದರೆ ಯಾವಾಗ ಕೂಸುಗಳ ವಿದ್ಯೆಗೆ ಪ್ರೋತ್ಸಾಹ ಸಿಕ್ಕಿತ್ತೋ ಕಾಲವೇ ಬದಲಾತು ಎಲ್ಲ ತಿರುಗು-ಮುರುಗು ಆತು. ಈಗ ಕೂಸುಗಳೇ ಮಾಣಿಗಳ ಬೇಡ ಹೇಳುವ ಸ್ಥಿತಿ ಬಂತು. ಅಬ್ಬೆ ಅಪ್ಪಂಗೆ ಮಗಳ ಮದುವೆ ಆಗದ್ದರೆ ಮುಂದೆ ಅದರ ಜೀವನ ಹೇಂಗೋ ಹೇಳುವ ಚಿಂತೆ ತಪ್ಪಿತ್ತು. ವಿದ್ಯಾವಂತೆಯಾದ ಮಗಳು ಕೆಲಸಕ್ಕೂ ಸೇರಿ ಸಂಪಾದನೆ ಮಾಡಿ ಅಬ್ಬೆ ಅಪ್ಪನ ಚಂದಕೆ ನೋಡಿಗೊಂಬಲೆ ಸುರು ಮಾಡಿದ ಮೇಲೆ ಅಬ್ಬೆ ಅಪ್ಪನೂ ಬದಲಾದವು . ಒಂದೇ ಮಗಳು ಇದ್ದರಂತೂ ಅದರ ಮದುವೆ ಆದರೆ ನವಗಾರು ಹೇಳಿ ಮಗಳು ಮದುವೆ ನಿರಾಕರಿಸುವಾಗ ಬುದ್ಧಿ ಹೇಳುದು ಬಿಟ್ಟವು. ಹಿಂಗಾಗಿ ಮಾಣಿಗೊಕ್ಕೆ ಮದುವೆ ಅಪ್ಪಲೆ ಕೂಸು ಇಲ್ಲದ್ದಂಗೆ ಆತು. ಅದು ಕೃತಕವಾಗಿ ಸೃಷ್ಟಿಸಿಗೊಂಡದು ಹೊರತು ನಿಜವಾದ ಕೂಸುಗಳ ಬರ ಅಲ್ಲ
ಇನ್ನು ಮುಂದೆ ಹೋಗಿ ಈಗಣ ಕೂಸುಗ ಮದುವೆ ಆಯಕ್ಕಾರೆ ಮಾಣಿಗೆ ಅಬ್ಬೆ ಅಪ್ಪ ಇಪ್ಪಲಾಗ, ಅಬ್ಬೆ ಅಪ್ಪ ಇದ್ದವುಹೇಳಿ ಆದರೆ ಸಂಬಂಧವೇ ಬೇಡ ಹೇಳುವಲ್ಲಿವರಗೆ ಮುಟ್ಟಿದವು.
ಇದಕ್ಕೂ ಕಾರಣ ಇಲ್ಲದ್ದೆ ಇಲ್ಲೇ ಹೇಳುವ°. ಹೆತ್ತು ಹೊತ್ತು ಸಾಂಕಿದ ಅಬ್ಬೆ ಅಪ್ಪಂಗೆ ಮದುವೆ ಆದ ಕೂಡಲೇ ಸಂಪಾದನೆ ಪೈಸೆ ಕೊಡುಲಾಗ, ಕೂಸಿನ ಅಬ್ಬೆ ಅಪ್ಪನ ಪ್ರಾಯ ಹೋಕಿಲಿ ನೋಡಿಗೊಂಬಲೆ ಮಾಣಿ ಅಬ್ಬೆ ಅಪ್ಪ ಒಪ್ಪುದು ಕಮ್ಮಿ .ಕೆಲಸಕ್ಕೆ ಹೋಪ ಸೊಸೆ ಆದರೂ ಮನೆ ಕೆಲಸ ಮಾಡಲೇ ಬೇಕು. ಮಗಳಿಂಗೆ ಆದರೆ ಕೂದಲ್ಲೇ ಎಲ್ಲಾ ಮಾಡುವ ಅಬ್ಬೆ ಅಪ್ಪ°, ಸೊಸೆಯ ವಿಷಯಕ್ಕೆ ಬಪ್ಪಗ ಮಾತ್ರ ಅತ್ತೆ ಅತ್ತೆಯೇ ಹೇಳುದರ ತೋರಿಸಿ ಕೊಡ್ತವು. ಹಾಂಗಾಗಿ ಕೆಲವು ಕೂಸುಗ (ಎಲ್ಲೋರು ಅಲ್ಲ) ಅಬ್ಬೆ ಅಪ್ಪ ಇಲ್ಲದ್ದ ಮಾಣಿ ಅಯಕ್ಕು ಹೇಳಿ ಬೇಡಿಕೆ ಮಡುಗುಲೆ ಸುರುಮಾಡಿದವು.
ಮಗಂದಿರು ಇಪ್ಪ ಅಬ್ಬೆ ಅಪ್ಪ ಆದರೆ ಪರವಾಗಿಲ್ಲೇ ಆದರೆ ಕೂಸುಗಳೇ ಇಪ್ಪ ಹೆತ್ತವರಾದರೆ ಕೂಸುಗಳ ಮದುವೆ ಮಾಡಿ ಕೊಟ್ಟ ಮೇಲೆ ಪ್ರಾಯ ಹೋಕಿಲಿ ಆರು ನೋಡಿಗೊಂಬದು ಹೇಳುದು ಸಮಸ್ಯೆ .ಹಾಂಗೇ ಹೇಳಿ ಮಾಣಿಯಂಗ ಇಪ್ಪೋರು ಎಲ್ಲಾ ಅಬ್ಬೆ ಅಪ್ಪನ ಲಾಯಿಕಲ್ಲಿ ನೋಡಿಗೊಳ್ತವು ಹೇಳುಲಾವುತ್ತಿಲ್ಲೆ . .ಎಷ್ಟೋ ಜನ ಮಗಂದಿರು ಹೆತ್ತೋರ ವೃದ್ಧಾಶ್ರಮ ಲ್ಲಿ ಬಿಟ್ಟ ಉದಾಹರಣೆ ಇದ್ದು
ಈ ಎಲ್ಲ ಸಮಸ್ಯೆಗೆ ಪರಿಹಾರ ಹೇಳಿದರೆ, ಮದುವೆ ಎರಡು ಮನೆಗಳ ಒಟ್ಟಿಂಗೆ ಎರಡು ಮನೆತನ ಮನಸ್ಸುಗಳ ಕೂಡುಸೆಕ್ಕು. ದಂಪತಿಗಳ ಅಬ್ಬೆ ಅಪ್ಪನ ಬಗ್ಗೆ ಇಬ್ಬರೂ ಪ್ರೀತ್ಯಭಿಮಾನ ಬೆಳೆಸಿಗೊಳ್ಳಕ್ಕು, ಕಷ್ಟದ ಸಮಯಲ್ಲಿ ಒಬ್ಬರು ಇನ್ನೊಬ್ಬರಿಂಗೆ ಜತೆ ಅಯೆಕ್ಕು.
ಕೂಸುಗ ಹೇಳಿದರೆ ಮಕ್ಕಳ ಹೆರುಲೆಮಾತ್ರ ಹೇಳುವ ಭಾವನೆ ಹೋಗಿ ಅಡಿಗೆ ಕೆಲಸ ಮನೆಕೆಲಸಲ್ಲಿ ಹೆಂಡತಿಗೆ ಆದಷ್ಟು ಸಹಾಯ ಮಾಡುವ ಗಂಡ, ಕೆಲಸಕ್ಕೆ ಹೋಪ ಸೊಸೆಯಕ್ಕೊಗೆ ಆದಷ್ಟು ಮನೆ ಕೆಲಸಲ್ಲಿ ಅತ್ತೆ ಮಾವಂದಿರು ಸಹಾಯ ಮಾಡಿ ಸೊಸೆಯ ಮಗಳ ಹಾಂಗೇ ಕಾಣೆಕ್ಕು ಅಷ್ಟಪ್ಪಗ ಸೊಸೆದೆ ಅತ್ತೆಯ ಅದರ ಅಬ್ಬೆ ಅಪ್ಪನ ಹಾಂಗೇ ನೋಡಿಗೊಂಡು ಪ್ರಾಯ ಹೋಕಿಲಿ ಅವರ ಪ್ರೀತಿಲಿ ನೋಡಿಗೊಂಗೂ .
ಕೂಸುಗಳ ಕೃತಕ ಅಭಾವವ ಪರಿಹರಿಸಿ ಹವ್ಯಕ ಸಮಾಜವ ಒಳುಸುವ ಬೆಳೆಸುವ ಪ್ರಯತ್ನವ ಎಲ್ಲೋರು ಸೇರಿ ಮಾಡೆಕ್ಕು
~~~~****~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಸಮಸ್ಯೆಯ ಸರಿಯಾಗಿ ಪರಿಚಯ ಮಾಡಿದ್ದವು ಪಂಕಜಕ್ಕ. ಕಡೇಣ ವಾಕ್ಯಕ್ಕೆ ಎಲ್ಲೋರು ಗಮನ ಕೊಡೆಕ್ಕಾದ್ದು ಅತ್ಯಗತ್ಯ.
ಧನ್ಯವಾದಂಗ
ಸಮಸ್ಯೆಲೇ ಉತ್ತರ ಇದ್ದು.ಸಮಸ್ಯೆ ಬಪ್ಪದು ಹೊಂದಾಣಿಕೆ ಸರಿಯಿಲ್ಲದ್ದೆ. ಸಮಸ್ಯೆಯ ಕಾರಣವೂ,ಪರಿಹಾರವೂ ಒಂದೊಂದು ಮನೇಲಿ ಒಂದೊಂದು ತರಹ.ಒಂದೇ ಸಿದ್ಧ ಸೂತ್ರ ಇಲ್ಲೇ.
ಅಪ್ಪು ಧನ್ಯವಾದಂಗ
ಒಳ್ಳೆಯ ಬರಹ
ಧನ್ಯವಾದಂಗ
ಪಂಕಜಾ ರಾಮ ತಂಗಗೆ ಸ್ವಾಗತ. ಸಕಾಲಿಕ ಬರಹ.ಒಳ್ಳೆದಾಯಿದು. ಮಾಣಿಯಂಗೊಕ್ಕೆ ಕೂಸು ಸಿಕ್ಕದ್ದ ಸಮಸ್ಯೆ ಒಂದಾದರೆ; ಇನ್ನೊಂದು ಡೈವರ್ಸಿನ ಸಮಸ್ಯೆ ಇದೊಂದು . ಈ ಕೂಸು ಸಿಕ್ಕದ್ದರಿಂದಲೂ ಹೆಚ್ಚು ಕರಾಳ ಕಾಂಬದೆನಗೆ ಮದುವೆ ಆಗಿ ಒಂದೆರಡು ತಿಂಗಳೊಳ ವಿಚ್ಚೇದನಾವುತ್ತವಾಡ. ಕೂಸು ಅಪ್ಪನಮನೆಲಿದ್ದು.!. ಹೇಳ್ಸುಕೇಳ್ತು. ಈ ವಿಪರೀತನ ಎಲ್ಲಿ ತಪ್ಪುತ್ತೊವು. ಹೇಂಗೆ ಇದರ ರಿಪೇರಿ ಮಾಡ್ಳೆ ಎಡಿಗು ಹೇಳುವ ಚಿಂತನೆ ಆಯೆಕ್ಕು.
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಂಗ ಅಪ್ಪು ಈಗೀಗ ಈ ಡೈವೋರ್ಸ್ ಹೇಳುದು ಒಂದು ಸಾಮಾನ್ಯ ವಿಷಯ ಅಯೀದು ನಮ್ಮ ಹವ್ಯಕರಲ್ಲಿ ಇದಕ್ಕೆ ಹೊಂದಾಣಿಕೆ ಮನೋಭಾವ ಇಲ್ಲದ್ದಿಪ್ಪದೇ ಕಾರಣ ಆದಿಕ್ಕು ಈ ಬಗ್ಗೆದೆ ಹವ್ಯಕರೆಲ್ಲ ಒಂದಾಗಿ ಪರಿಹಾರ ಕಂಡು ಹಿಡಿಯಕ್ಕೂ
ಹವ್ಯಕ ಸಮಾಜದ ಇಂದ್ರಾಣ ದೊಡ್ಡ ಸಮಸ್ಯೆಯ ವಿಶ್ಲೇಷಣೆ ಲಾಯ್ಕ ಆಯಿದು.ಧನ್ಯವಾದಂಗ.
ಧನ್ಯವಾದಂಗ ಭಾವ
ಲೇಖನ ಲಾಯಿಕ ಆಯಿದು.. ಪ್ರಸ್ತುತ ದಿನಂಗೊಕ್ಕೆ ಹಿಡಿದ ಕನ್ನಾಟಿ
ಲೇಖನ ಲಾಯಿಕ ಆಯಿದು.. ಪ್ರಸ್ತುತ ದಿನಂಗೊಕ್ಕೆ ಹಿಡಿದ ಕನ್ನಡಿ
ಧನ್ಯವಾದಂಗ