- ಸಪ್ತಪದಿ - August 1, 2011
- 15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ - June 15, 2011
- ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ - April 2, 2011
ಮಾತೃಋಣ,ಪಿತೃಋಣ,ಋಷಿಋಣ ಈ ಮೂರು ಋಣಂಗಳ ಋಣತ್ರಯ ಹೇಳಿ ಹೇಳ್ತವು. ಋಣ ಹೇಳಿರೆ ಸಾಲ.ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬನೂ ಋಣತ್ರಯಂದ ಮುಕ್ತ ಆಯೆಕ್ಕು.ಇಲ್ಲದ್ರೆ ಜನ್ಮ ಸಾರ್ಥಕತೆ ಸಿದ್ಧಿಸುತ್ತಿಲ್ಲೆ..ಮೊದಲಿಂಗೆ ಮಾತೃ ಋಣ ಹೇಳಿರೆ ಎಂತ ಹೇಳಿ ಹೇಳ್ತೆ, ನವಮಾಸ ತನ್ನ ದೇಹದೊಳದಿಕೆ ಮಡಿಕ್ಕೊಂಡು ಭಾರವ ಸಹಿಸಿ ರಕ್ತ ಮಾಂಸಾದಿಗಳ ಕೊಟ್ಟು ಜೀವ ಜಗತ್ತಿನ ತೋರ್ಸಿದ ಮತ್ತೊಂದು ಸೃಷ್ಟಿ ದೇವತೆ ನಮ್ಮ ಹೆತ್ತಬ್ಬೆ..~ಅಮ್ಮ,
ನಮ್ಮ ಜನ್ಮಕಾರಣನಾಗಿ,ಪೋಷಕನಾಗಿ,ವಿದ್ಯೆ ಹೇಳ್ಸಿ,ಕಾಲಕ್ಕೆ ತಕ್ಕ ಹಾಂಗಿಪ್ಪ ಅವಶ್ಯಕತೆಗಳ ಪೂರೈಸಿ ಅಭಿವೃದ್ಧಿಯ ದಾರಿಗೆ ನಡೆಶಿ,ತನ್ನ ಪಿತೃಋಣವ ತೀರ್ಸುಲೆ ಮಕ್ಕೊಗೆ ಮದುವೆ ಮಾಡಿ,ಒಟ್ಟಿಲಿ ಹೇಳ್ತಾರೆ ಸಮಾಜಲ್ಲಿ ಆದರ್ಶಪ್ರಾಯ ವ್ಯಕ್ತಿಯಾಗಿ ಬಾಳಿ ಬದುಕುಲೆ ಇಪ್ಪಂತಹ ಎಲ್ಲಾ ವೆವಸ್ಥೆಗೊಕ್ಕೆ ಬೇಕಾಗಿ ಅಹರ್ನಿಶಿ ನಮ್ಮ ಭವಿಷ್ಯದ ಉನ್ನತಿಗಾಗಿ ಶ್ರಮಿಸಿದ ಅಪ್ಪ~ಇದು ಪಿತೃಋಣ..
ಅಪ್ಪ ಅಮ್ಮ ಜನ್ಮಕೊಟ್ಟರೆ ಜ್ಞಾನವ ಕೊಡುವದು ಗುರು.ನಾವು ಈಗ ಆಚರಣೆ ಮಾಡುವ ಸಂಪ್ರದಾಯ ಹೇಳುವದು ಯಾವ ರೀತಿಲಿ ಮಾಡಿಗೊಂಡಿದ್ದೋ ಅದಕ್ಕೆ ಕಾರಣ ನಮ್ಮ ಗೋತ್ರದ ಋಷಿಗ.ನಾವು ಆಡುವಂತಹ ಭಾಷೆಗೆ ರೂಪುಕಲ್ಪನೆ ಕೊಟ್ಟು ಭಾಷೆಯ ಲಿಪಿರೂಪಕ್ಕೆ ಶಾಶ್ವತಗೊಳಿಸಿದವು ನಮ್ಮ ಋಷಿಮುನಿಗ..ಉತ್ತಮ ಬದುಕು ನಡೆಶುಲೆ ಪ್ರಯೋಗವಿಧಿ ಸಹಿತ ಅಪೂರ್ವ ಶಾಸ್ತ್ರಂಗಳ ಮೂಲಕ ಧರ್ಮಜ್ಞಾನವನ್ನೂ,ಪರಿಸರ ಪ್ರಜ್ಞೆಯನ್ನೂ ಗ್ರಂಥಂಗಳ ರೂಪಲ್ಲಿ ನವಗೆ ಇಂದು ವಿಜ್ಞಾನ ಧನರೂಪಲ್ಲಿ ಕೊಟ್ಟವು ನಮ್ಮ ಋಷಿ ಪರಂಪರೆ~ಇದು ಋಷಿಋಣ..
ಈ ಋಣತ್ರಯ ವಿಮುಕ್ತಿಗಾಗಿ ನಾವು ಋಷಿಗ ಹೇಳಿದ ವಿಧಿಗೆ ಶರಣಾಯೆಕ್ಕು..ಅದರ ಶಾಸ್ತ್ರ ವಿಧಿಗ ಹಲವು ರೂಪಲ್ಲಿ ಇಕ್ಕು.ಆದರೆ ಅದರ ಸಂಕಲ್ಪ ಒಂದೇ ಆಗಿರ್ತು.ಉದಾ:ವೈದಿಕ ಕಾರ್ಯಕ್ರಮ,ಜ್ಯೋತಿಷ್ಯ ಪರಿಹಾರ,ಅಧ್ಯಯನ-ಅಧ್ಯಾಪನಾದಿ ಷಟ್ಕರ್ಮ ವಿಷಯಂಗ,ಆಯುರ್ವೇದ,ಇನ್ನೂ ಹಲವು ರೀತಿಲಿ ಹೇಳುಲಕ್ಕು.ಮಾತಾ ಪಿತೃಗಳ ಋಣ ಹೇಳಿರೆ ಅದೊಂದು ಧಾರ್ಮಿಕ ಋಣ.ಅದಕ್ಕೆ ಅನುಸರಿಸಿ ನಮ್ಮ ಆಚಾರ ವಿಚಾರ ಪದ್ಧತಿಗ ಇರ್ತು.ನಾವು ಹುಟ್ಟಿ ಬೆಳದ ಕೂಡ್ಲೆ ನಮ್ಮ ಜೀವನಲ್ಲಿ ಕಣ್ಣಿನ ಮೇಲೆ ಕಣ್ಣು ಮಡುಗಿ ನಾವು ಸಮಾಜಲ್ಲಿ ವಿದ್ಯೆ ಬುದ್ಧಿ ಕಲ್ತು ಸಂಪಾದನೆಗೆ ಇಳಿವನ್ನಾರ ಹಲವಾರು ರೀತಿಲಿ ತಲೆಬೆಶಿ ಮಾಡಿಗೊಂಡಿರ್ತವು.ಇಂಥ ಅಪ್ಪ ಅಮ್ಮಂದ್ರು ಮುದಿತನ ಬಪ್ಪಗ ಅವರ ಸೇವೆಯ ಮಾಡಿ,ಅವರ ಆಗು ಹೋಗುಗಳ ಸೂಕ್ತ ಸಮಯಲ್ಲಿ ವಿಚಾರ್ಸಿಗೊಂಡು,ಅವರ ಮನಸ್ಸಿಂಗೆ ಧೈರ್ಯ ತುಂಬಿ ಮಾತಾಪಿತೃ ಋಣಂದ ಮುಕ್ತಿಯಾಯೆಕ್ಕು…
ನಮ್ಮ ಇಡೀ ಜಗತ್ತಿಂಗೆ ಜಗದ್ಗುರುಗ ಆಗಿಪ್ಪಂತಹ ನಮ್ಮ ಗುರುಗಳ ಸೇವೆ ಮಾಡಿಗೊಂಡು ಆ ಮೂಲಕ ನಮ್ಮ ಋಷಿ ಪರಂಪರೆಯ ನಮ್ಮ ಜೀವನಲ್ಲಿ ಅಳವಡಿಸಿಗೊಂಡು ಋಷಿಋಣ ಸಹಿತ ಋಣತ್ರಯಂಗಳ ಮುಕ್ತಿ ಮಾಡ್ಲೆ ಅವು ಹೇಳಿದ ರೀತಿಲಿ ಪದ್ಧತಿಗಳ ಅನುಸರಿಸಿಗೊಂಡು ಹೋಪ!!
ಮಾತೃದೇವೋಭವ!ಪಿತೃದೇವೋಭವ!ಆಚಾರ್ಯದೇವೋಭವ!ಅತಿಥಿದೇವೋಭವ!
ಹರೇರಾಮ
ಋಣತ್ರಯಂಗಳ ಬಗ್ಗೆ ಭಾರೀ ಚೆಂದಲ್ಲಿ ಹೇಳಿಕೊಟ್ಟಿದಿ ಗಣೇಶಮಾವಾ..
ತುಂಬಾ ಕೊಶಿ ಆತು.
ಹೀಂಗಿರ್ತದು ಬೈಲಿಂಗೆ ಬತ್ತಾ ಇರಳಿ, ರಜಾ ಅಧ್ಯಾತ್ಮವನ್ನುದೇ ಕಲ್ತುಗೊಂಬ, ವಾನಪ್ರಸ್ಥದ ಮೊದಲು.
ಅಲ್ಲದೋ? 😉
ತುಂಬಾ ಸರಳವಾಗಿ ವಿವರುಸಿದ್ದಿ.
ಧನ್ಯವಾದ ಗಣೇಶ ಮಾವಂಗೆ.
ಒಪ್ಪ ಲೇಖನ!!!!
ಲೈಕ ಆಯಿದು ಗುರುಗಳೇ… ನಮ್ಮ ಹಿರಿಯರು ನವಗೆ ಮಾಡಿದ ಋಣವ, ಕೊಟ್ಟ ಸಂಸ್ಕಾರವ ನಾವು ನಮ್ಮ ಮುಂದಿನವಕ್ಕೆ ಕೊಟ್ಟು ಹಿರಿಯರ ಋಣ ತೀರುಸೆಕ್ಕು ಅಲ್ಲದ?
—
ನಿಂಗಳ
ಮಂಗ್ಳೂರ ಮಾಣಿ…
ಗಣೇಶಣ್ಣನ ಲೇಖನ ಒಳ್ಳೆಸಮಯಲ್ಲಿ ಬಯಿ೦ದು.ಇ೦ದು ಅಬ್ಬೆ ಅಪ್ಪ ನಮ್ಮದು ಮಾ೦ತ್ರ ಅಲ್ಲ ನಮ್ಮ ಮಕ್ಕಳದ್ದು ಚಾಕ್ರಿ ಮಾಡಿರಕ್ಕು ಹೇಳಿ ಗ್ರಹಿಸುವ ಕಾಲ ಆ ಮೇಲೆ ಅವರ ಚಾಕ್ರಿ ಮಾಡೇಕಾಗಿ ಬ೦ದರೆ ಎಲ್ಲಿ ವ್ರುದ್ದಸ್ರಮ ಇದ್ದು ಅದರಲ್ಲಿ ಎಲ್ಲಿ ಕಮ್ಮಿಗಾವುತ್ತು ಹೇಳಿ ನೋಡುತ್ತವು.ಆನು ಮನೆಲಿ ನಿ೦ದರೆ ಅಕ್ಕೊ? ಹೆ೦ಡತ್ತಿಯು ಕೆಲಸಕ್ಕೆ ಹೋವುತ್ತು ಮಕ್ಕಳ ವಿದ್ಯಾಬ್ಯಾಸ ಆಯೆಕು ಅದರೆಡೆಲಿ ಈ ರಗಳೆ ಒ೦ದು ಹೇಳಿ ಗ್ರಹಿಸುವವೆ ಜಾಸ್ತಿ.ನಾಳೆ ನಮ್ಮ ಮಕ್ಕಳ ಯೋಚನ ಲಹರಿಯೂ ಇದೆ ದಾರಿಲಿ ಹೋಕು ಹೇಳಿ ನಾವು ಗ್ರಹಿಸುತ್ತಿಲ್ಲೆ.ನಮ್ಮ ಮಕ್ಕೊ ಹಾ೦ಗೆ ಮಾಡವು ಹೇಳಿ ನಮ್ಮ ಆಲೋಚನೆ;ನಮ್ಮ ಅಬ್ಬೆ ಅಪ್ಪನು ನಮ್ಮ ಹಾ೦ಗೆ ಅಥವಾ ಅದರಿ೦ದ ರಜ ಹೆಚ್ಚಗಿಯೆ ನವ ಬೆಕಾಗಿ ಬ೦ಗ೦ ಬಯಿನ್ದವು ಹೆಳಿ ತಿಳ್ಕೋ೦ಡ್ರೆ ಸಮಸ್ಯೆ ಅಥವ ಋಣ ಹೇಳ್ತದು ಪರಿಹಾರ ಅಕ್ಕಸ್ಟೆ.ಅ೦ತು ಗಣೇಶಣ್ಣ ಒಳ್ಳೆ ಲೇಖನ ಬರದ್ದ೦.ಇನ್ನು ಗೋಪಾಲ ಮಾವ೦ ಅಬ್ಬೆ ಅಪ್ಪನ ಋಣ ಕಳುದು ಪುರುಸೊತ್ತು ಸಮಯ ಎಲ್ಲಾ ಸಿಕ್ಕಿ ಅಡಕ್ಕಗೆ ರೋಗ ಇಲ್ಲದ್ದೆ ಕೈಗೆ ಬ೦ದು ಕ್ರಯವೂ ಬ೦ದರೆ ನಿ೦ಗಳ ಬಿಟ್ಟುಹಾಕುತ್ತಿಲ್ಲೆ.ಸ೦ತೋಷ ಆತಾನೆ.ಒಪ್ಪ೦ಗಳೊಟ್ಟಿ೦ಗೆ.
ಭಾರೀ ಒಳ್ಳೆಯ ವಿಚಾರವ ಹೇಳಿದ್ದವು ಗಣೇಶಣ್ಣ. ಋಣ ಸಂದಾಯ ಮಾಡುತ್ತದು ನಮ್ಮ ನಮ್ಮ ಕರ್ತವ್ಯ ಖಂಡಿತಾ. ಋಣಮುಕ್ತ ಆವುತ್ತರ ಒಟ್ಟಿಂಗೆ, ಎಂಗಳ ಬ್ಯಾಂಕಿನ ಸಾಲವನ್ನೂ ಮರದಿಕ್ಕೆಡಿ !!!
ಗೋಪಾಲ ಮಾವ,
ನಿಂಗಳ ಬ್ಯಾಂಕಿಲಿ ಆನು ಸಾಲ ಮಾಡಿದ್ದಿಲ್ಲೆ…ಮತ್ತೆ ಎಂಗಳ ಬೈಲಿನೋರು ಕ್ರೋಪು ಲೋನು ಮಾಡಿಕ್ಕು.ಅದು ಎಂಥ ಇದ್ದೋ ಗುರಿಕ್ಕಾರನ ಹತ್ರೆ ಕೇಳಿಕ್ಕಿ,ಎಂಗಳ ಬೈಲಿಲಿ ಅಡಕ್ಕೆಲಿ ರಾಜ ಗಟ್ಟಿ ಅವ್ವೆ,!!!
ಋಣತ್ರಯಂಗಳ ಬಗ್ಗೆ ಗಣೇಶನ ಲೇಖನಲ್ಲಿ ಇಪ್ಪ ವಿಶಯಂಗಳ ಎಲ್ಲರೂ ಅನುಷ್ಠಾನಲಲ್ಲಿ ತರೆಕ್ಕಾದ್ದು ಅವರವರ ಕರ್ತವ್ಯ ಕೂಡಾ.
ಅಲ್ಲದ್ದೆ ನವಗೆ ಈ ಭೂಮಿ ಋಣ, ಸಮಾಜದ ಋಣಂಗಳೂ ಇದ್ದು. ಅದರನ್ನೂ ಸರಿಯಾದ ರೀತಿಲಿ ತೀರ್ಸೆಕಾದ್ದು ನಮ್ಮ ಕರ್ತವ್ಯ.
ಭಾರೀ ಒಳ್ಳೆ ಲೇಖನ.
ಖಂಡಿತಾ… ಲೇಖನ ಲಾಯ್ಕ ಆಯ್ದು..ಲೇಖನಕ್ಕೆ ಆಯ್ಕೆ ಮಾಡಿಗೊಂಡ ವಿಷಯವೂ ಅಷ್ಟೇ..
“….ಪ್ರತಿಯೊಬ್ಬನೂ ಋಣತ್ರಯಂದ ಮುಕ್ತ ಆಯೆಕ್ಕು.” ಮುಕ್ತ ಆಯಿಕು ಹೇಳುದರ ಅರ್ಥ ಎ೦ತರ ಗಣೇಶ ಮಾವ°… ರಜ ಬಿಡ್ಸಿ ಹೇಳುವಿರಾ?
ಎನಗೆ ತಿಳುದ ಮಟ್ಟಿ೦ಗೆ “ಗೊಪಿತೃಮಾತೃಗುರು” ವಿನ ಋಣ ಎ೦ದಿ೦ಗು ತೀರ್ಸಲೆಡಿಯಾ ಹೀಳಿ…
ನಮ್ಮ ಅಬ್ಬೆಅಪ್ಪಗುರು.. ಎಲ್ಲಾ ದೇವರಿಗಿ೦ತ ಮೇಲೆ ಹೇಳಿ ಹಿರಿಯರು ಹೇಳ್ತವು… ಅಲ್ಲದೊ?? ಅಬ್ಬೆಅಪ್ಪನ ಸೆವೆ ಮಾಡದ್ರೆ… ಮಕ್ಕೊ ಆಗಿ ನಮ್ಮ ಬೆಲೆ… ಒ೦ದು ಕಸವಿ೦ಗು ಸಮಾನ ಅಲ್ಲಾ…
“ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ, ನಿತ್ಯ ದಾನವ ಮಾಡಿ ಫಲವೇನು? – ” ಒ೦ದು ದಾಸರ ವಾಣಿ ಇದ್ದು..
ಸೇವೆ ಮಾಡುವದೇ ಋಣ ಮುಕ್ತನನ್ನಾಗಿ ಮಾಡುದು ಚುಬ್ಬಣ್ಣ ಭಾವ.. ಆಯಾಯ ಕಾಲಕ್ಕೆ ಅವರ ಸೇವೆ ಮಾಡಿರೆ ನವಗೆ ನಮ್ಮ ಹಿರಿಯವು ಮಾಡಿದ ಋಣವ ತೀರ್ಸಿದ ಹಾಂಗೆ..
ಗಣೇಶ ಮಾವಾ,ಮುತ್ತಿನಂಥಾ ಮಾತುಗೋ.
ಧನದಾಸೆಂದ ಇಂದು ಋಣ೦ಗಳ ಮರತು ಬಿಟ್ಟಿದು ಲೋಕ,ಅಲ್ಲದೋ?
ಕ್ರಮೇಣ ಧನಮದ ತುಂಬಿ ತುಳುಕೊಗ ಋಣತ್ರಯ೦ಗೊ ಬಹುಷಃ ಭಾರತ್ರಯವಾಗಿ ಕಾ೦ಬೊದೋ ಏನೋ. ಹಾಂಗಾಗಿ ಅವರಿಂದ ಮುಕ್ತಿ ಪಡೆವ ದಾರಿ ಹುಡುಕ್ಕೊದೋ?