- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಎಡೆ ಇಲ್ಲೆ , ಸಮಯ ಇಲ್ಲೆ, ಚುಟುಕಿಲ್ಲಿ ಆಯೇಕು ಹೇದಿಪ್ಪವಕ್ಕೆ
ಬ್ರಹ್ಮತೇಜೋಭಿವೃದ್ಧಿಗಾಗಿ ಎಲ್ಲೊರೂ ಮಾಡಲೇಬೇಕಾದ
ಅಘ್ಯೆಜೆಪ – ಸಂಧ್ಯಾವಂದನೆ
(ಚುಟುಕಿಲ್ಲಿ)
ಪ್ರಪಂಚಕ್ಕೆಲ್ಲ ಬೆಣಚ್ಚು ಕೊಡುವ ಸೂರ್ಯನ ಸಂಧ್ಯಾಕಾಲಲ್ಲಿ ಕೃತಜ್ಞತೆ ಹೇಳುವ ಉದ್ದೇಶಂದ ಮಾಡ್ತ ಕಾರ್ಯವೇ “ಸಂಧ್ಯಾವಂದನೆ”. ಸೂರ್ಯದೇವರಿಂಗೆ ’ಅರ್ಘ್ಯ’ ಪ್ರದಾನವೂ ಗಾಯತ್ರೀ (ಅರ್ಘ್ಯೆಜೆಪ) ಮಂತ್ರದ ‘ಜಪ’ವೂ ಪ್ರಮುಖವಾಗಿ ಇಪ್ಪಕಾರಣ ಇದಕ್ಕೆ ನಮ್ಮ ಆಡು ಮಾತಿಲಿ ‘ಅರ್ಘ್ಯ-ಜಪ’ (ಅರ್ಘ್ಯೆಜೆಪ) ಹೇಳ್ತ ಹೆಸರು ಚಾಲ್ತಿಗೆ ಬಂತು.
ಸಂಧ್ಯಾವಂದನೆಂದ ಆಧ್ಯಾತ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ ಪ್ರಯೋಜನಕಾರಿ. ಜಪ-ಪ್ರಾಣಾಯಾಮಂಗಳಿಂದ ನಮ್ಮ ಮನಸ್ಸಿಂಗೆ ನೆಮ್ಮದಿ, ಶಾಂತಿ ಸಿಕ್ಕುದಲ್ಲದ್ದೆ, ಆರೋಗ್ಯ ದೃಷ್ಟಿಂದ ಮನೋಶುದ್ಧಿ, ಚುರುಕು ಬುದ್ಧಿ, ಆಯುಷ್ಯ ವೃದ್ಧಿ ಆವುತ್ತು ಹೇಳ್ತದು ನಮ್ಮ ಹಿರಿಯರ ಉಪದೇಶ ನವಗೆ ಅದುವೇ ನಂಬಿಕೆ ನವಗೆ. ಋಷಿವರೇಣ್ಯರುಗಳ ದೀರ್ಘಾಯುಷ್ಯದ ಗುಟ್ಟು ಈ ಸಂಧ್ಯೋಪಾಸನೆಯ ನಿತ್ಯಾನುಷ್ಠಾನವೇ.
ಒಟ್ಟಿಲ್ಲಿ ಹೇಳುತ್ತರೆ, ಪ್ರತಿಯೊಬ್ಬನೂ ತನ್ನ ಮಾನಸಿಕ ಮತ್ತು ಶಾರೀರಿಕ ಉನ್ನತಿಗೆಬೇಕಾಗಿ, ಸದ್ಗುಣ, ಸುಸಂಸ್ಕೃತ, ಸದಾಚಾರ ಪ್ರವೃತ್ತಿ ಅಭಿವೃದ್ಧಿಗೆ, ಬ್ರಹ್ಮತೇಜೋಭಿವೃದ್ಧಿಗೆ, ದೀರ್ಘ ಆಯಸ್ಸು, ಆರೋಗ್ಯ ಅಭಿವೃದ್ಧಿಗೆ ನಿತ್ಯ ಮಾಡೆಕ್ಕಪ್ಪದು – ’ತ್ರಿಕಾಲ ಸಂಧ್ಯಾವಂದನೆ’. ಎಡಿಯದ್ರೆ ಉದಿಯಪ್ಪಗ ಹೊತ್ತೋಪಗ ಆದರೂ ಮಾಡ್ಳೇಬೇಕು.
ಸಂಧ್ಯಾವಂದನೆ ಹಲವು ಕ್ರಮಲ್ಲಿ ಆಚರಣೆಲಿ ಇದ್ದರೂ, ಈಗಾಣ ಕಾಲಲ್ಲಿ ಅದರ ಆಚರಣೆಲಿ ಮಡಿಕ್ಕೊಂಬವು ವಿರಳ. ದೀರ್ಘಕಾಲದ ಸಂಧ್ಯಾವಂದನೆಗೆ ಸಮಯಾಭಾವ ಒಂದು ಕಾರಣ ಆದರೆ, ಹಲವು ಪಾಠಾಂತರಂಗೊ, ಪಠ್ಯದ ಕೊರತೆ ಇನ್ನೊಂದು ಕಾರಣ ಆಗಿಕ್ಕು.
ಸಂಧ್ಯಾವಂದನೆಲಿ ಇರೆಕ್ಕಾದ ಮೂಲಭೂತ ಅಂಶಂಗಳ ಸಂಕ್ಷಿಪ್ತವಾಗಿ ಸೇರ್ಸಿಗೊಂಡ ಈ ಲಘುಕೈಪಿಡಿ. ರೂಢಿಲಿ ಇಪ್ಪ ಪಾಠಾಂತರ ವ್ಯತ್ಯಾಸಂಗೊಕ್ಕೆ ಈ ಕೈಪಿಡಿಯೂ ಹೊರತಾಗಿಲ್ಲೆ.
ಆದರೂ, ಈಗಾಣ ಕಾಲಘಟ್ಟಕ್ಕೆ ಸಾಧ್ಯತೆ ಇಪ್ಪ ’ಸುಲಭ ಸಂಧ್ಯಾವಂದನೆ’ ಮಾರ್ಗವ ಸಂಪಾಲುಸಿ ಬೈಲಿಂಗೆ ತಲುಪುಸವ ಕೆಲಸ ಈ ಮೂಲಕ ಮಾಡಿದ್ದದು. ಎಲ್ಲೋರುದೆ ಇದರ ಸದುಪಯೋಗವ ಪಡಕ್ಕೊಂಡು, ಸಂಧ್ಯಾದೇವಿಯ ಸದಾನುಗ್ರಹಕ್ಕೆ ಪಾತ್ರರಾಯೇಕು ಹೇಳ್ತದು ಒಪ್ಪಣ್ಣ ಬೈಲಿನ ಆಶಯ.
~~
1. ಆಚಮನ
ಮೀಯಾಣದ ಮೂಲಕ ಬಾಹ್ಯಶರೀರ ಶುದ್ಧಿ ಮಾಡಿದ ಹಾಂಗೆ ಅಂತರ್ಶುದ್ಧಿಗೆ ಹಾಂಗೂ ನರಂಗಳ ಜಾಗೃತಿಗೆ ’ಆಚಮನ’.
ಆಚಮನ ಹೇಳಿರೆ ಮೂರು ಸರ್ತಿ ನೀರು ಕುಡಿವದು. ಒಂದು ಆಚಮನವ ಎರಡು ಸರ್ತಿ ಮಾಡಿರೆ ದ್ವಿರಾಚಮನ. ಆಚಮನ ಮೂಲಕ ಶರೀರದ ಸುಷುಮ್ನ ನಾಡಿಗೊ ಜಾಗೃತ ಆವುತ್ತು.
ಕಿರು ಪವಿತ್ರ ನಡು ಬೆರಳ ಮೇಲ್ಮುಖ ಮಡುಸಿ ಹೆಬ್ಬಟೆ ಬೆರಳ ಕೊಡಿಯ ನೆಡು ಬೆರಳ ನೆಡುಕೆ ಜೋಡುಸಿ (ಗೋಕರ್ಣ ಆಕೃತಿ / ದನದ ಕೆಮಿ ಆಕಾರ) ಅಂಗೈಗೆ ಸಕ್ಕಣಲ್ಲಿ ನೀರೆರದು ಮಂತ್ರೋಚ್ಚಾರಣೆ ಮೂಲಕ ಜಲ ಪ್ರಾಶನ ಮಾಡುವದು.
’ಗೋಕರ್ಣಾಕೃತಿ ಹಸ್ತೇನ ಮಾಶ ಮಾತ್ರ ಜಲಂ ಪಿಬೇತ್’- ಬಲಕೈ ಅಂಗೈಯ ಗೋಕರ್ಣಾಕೃತಿಗೊಳಿಸಿ ಅದಕ್ಕೆ ಒಂದು ಉದ್ದಿನ ಕಾಳು ಮುಂಗುತ್ತಷ್ಟು ನೀರು ಎರದು ಅಂಗುಷ್ಠ ಮೂಲಂದ ನಿಶ್ಶಬ್ದವಾಗಿ ಕುಡಿವದು.
ಆಚಮನ ಹೇಳಿರೆ ಮೂರು ಸರ್ತಿ ಸಕ್ಕಣಲ್ಲಿ ನೀರು ತೆಗದು ಅಂಗೈಗೆ ಹಾಕಿ ಅಂಗುಷ್ಠ ಮೂಲಂದ ಕುಡಿವದು.
ಆಚಮನ ಯಾವಾಗಲೂ ಪೂರ್ವಾಭಿಮುಖವಾಗಿ ಕೂದು (ಉತ್ತರವೂ ನಿಷೇಧ ಅಲ್ಲ) ಮಾಡುವದು ಶಾಸ್ತ್ರ. ಪಶ್ಚಿಮಾಭಿಮುಖ ಮತ್ತು ದಕ್ಷಿಣಾಭಿಮುಖವಾಗಿ ಆಚಮನ ಮಾಡುವದು ಪ್ರಶಸ್ತ ಅಲ್ಲ.
ಗೋಕರ್ಣಾಕಾರ ಮಾಡಿದ ಬಲ-ಅಂಗೈಗೆ, ಎಡದ ಕೈಲಿ ಸಕ್ಕಣಲ್ಲಿ ನೀರು ತೆಕ್ಕೊಂಡು ಹಾಕಿ ಆರು ಸರ್ತಿ ಕುಡಿಯೆಕ್ಕು –
ದ್ವಿರಾಚಮನ :
ಓಂ ಋಗ್ವೇದಾಯ ಸ್ವಾಹಾ |
ಓಂ ಯಜುರ್ವೇದಾಯ ಸ್ವಾಹಾ |
ಓಂ ಸಾಮವೇದಾಯ ಸ್ವಾಹಾ ||
ಓಂ ಋಗ್ವೇದಾಯ ಸ್ವಾಹಾ |
ಓಂ ಯಜುರ್ವೇದಾಯ ಸ್ವಾಹಾ |
ಓಂ ಸಾಮವೇದಾಯ ಸ್ವಾಹಾ ||
2. ಅಂಗಸ್ಪರ್ಶ
ಆಚಮನ ಆದಮತ್ತೆ ಅಂಗಸ್ಪರ್ಶ.
ನಮ್ಮ ದೇಹದ ಭಾಗಂಗೊಕ್ಕೆ ಒಂದೊಂದು ಶಕ್ತಿಗಳ ಕಲ್ಪಿಸಿಗೊಂಡು ಆ ಅಂಗವ ಬಲಕೈಲಿ ಮುಟ್ಟಿಗೊಂಬದೇ ಅಂಗಸ್ಪರ್ಶ.
ಒಂದು ಅಂಗ ಸ್ಪರ್ಶ ಆದ ಮತ್ತೆ, ಇನ್ನೊಂದು ಅಂಗ ಸ್ಪರ್ಶ ಮಾಡೆಕ್ಕಾರೆ ಮದಲು ಕೈಬೆರಳಿನ ಒಂದರಿ ನೀರಿಲ್ಲಿ ಮುಟ್ಟಿಗೊಳ್ಳೆಕ್ಕು.
ಅಂಗ ಸ್ಪರ್ಶಂದ ಆಯಾ ದೇವತಾ ಶಕ್ತಿಗೊ ಅಲ್ಲಲ್ಲಿ ಇದ್ದವು ಹೇಳಿ ಭಾವಿಸುವದು ತಾತ್ಪರ್ಯ.
ಓಂ ಅಥರ್ವವೇದಾಯ ನಮಃ | – ಮೇಲಾಣ ತೊಡಿಯ – ಎಡತ್ತಿಂದ ಬಲತ್ತಿಂಗೆ ಬಲಗೈ ಹೆಬ್ಬಟೆ (ಅಂಗುಷ್ಠ) ಬೆರಳಿಲಿ ಉದ್ದಿಗೊಂಬದು.
ಓಂ ಇತಿಹಾಸ ಪುರಾಣೇಭ್ಯೋ ನಮಃ | – ಕೆಳಾಣ ತೊಡಿಯ ಉದ್ದಿಗೊಂಬದು.
ಓಂ ಅಗ್ನಯೇ ನಮಃ | – ಮೋರೆಯ ಮೇಗಂದ ಕೆಳಾಂತಾಗಿ – ಅಂಗೈ ತಳಂದ – ಉದ್ದಿಗೊಂಬದು.
ಓಂ ನಕ್ಷತ್ರೇಭ್ಯೋ ನಮಃ | – ಬಲ ಅಂಗೈಮುಷ್ಟಿಲಿ ರಜ ನೀರು ಎಡದಕೈಗೆ ಪ್ರೋಕ್ಷಣೆ ಮಾಡುದು.
ಓಂ ವಿಷ್ಣವೇ ನಮಃ | – ಬಲಗೈ ಮುಷ್ಟಿಂದ ಎರಡು ಪಾದಕ್ಕೆ ಪ್ರೋಕ್ಷಣೆ ಮಾಡುದು.
ಓಂ ಸೂರ್ಯಾಯ ನಮಃ | – ಬಲದ ಕಣ್ಣು ಮುಟ್ಟುವದು – ಹೆಬ್ಬಟೆ ಮತ್ತೆ ಪವಿತ್ರ ಬೆರಳಿಲ್ಲಿ.
ಓಂ ಚಂದ್ರಮಸೇ ನಮಃ | – ಎಡದ ಕಣ್ಣು ಮುಟ್ಟುವದು – ಹೆಬ್ಬಟೆ + ಪವಿತ್ರ ಬೆರಳಿಲಿ.
ಓಂ ಪ್ರಾಣಾಯ ನಮಃ | – ಮೂಗಿನ ಬಲದ ಹೊಡೆ ಮುಟ್ಟುವದು – ಹೆಬ್ಬಟೆ + ತೋರುಬೆರಳಿಲ್ಲಿ.
ಓಂ ಅಪಾನಾಯ ನಮಃ | – ಮೂಗಿನ ಎಡದ ಹೊಡೆ ಮುಟ್ಟುವದು – ಹೆಬ್ಬಟೆ + ತೋರುಬೆರಳಿಲ್ಲಿ.
ಓಂ ದಿಗ್ಭ್ಯೋ ನಮಃ | – ಬಲದ ಕೆಮಿ ಮುಟ್ಟುವದು – ಹೆಬ್ಬಟೆ + ಕಿಂಕಿಣಿ ಬೆರಳ ಜೋಡುಸಿ.
ಓಂ ದಿಗ್ಭ್ಯೋ ನಮಃ | – ಎಡದ ಕೆಮಿ ಮುಟ್ಟುವದು – ಹೆಬ್ಬಟೆ + ಕಿಂಕಿಣಿ ಬೆರಳ ಜೋಡುಸಿ.
ಓಂ ಇಂದ್ರಾಯ ನಮಃ | – ಬಲಭುಜ ಮುಟ್ಟುವದು – ಹೆಬ್ಬಟೆ + ನಡು ಬೆರಳ ಜೋಡುಸಿ.
ಓಂ ಇಂದ್ರಾಯ ನಮಃ | – ಎಡಭುಜ ಮುಟ್ಟುವದು – ಹೆಬ್ಬಟೆ + ನಡು ಬೆರಳ ಜೋಡುಸಿ.
ಓಂ ಪೃಥಿವೈ ನಮಃ | – ಎರಡೂ ಪಾದಂಗಳ ಉದ್ದಿಗೊಂಬದು – ಬಲಗೈಲಿ.
ಓಂ ಅಂತರಿಕ್ಷಾಯ ನಮಃ | – ಎಡ + ಬಲ ಮೊಳಪ್ಪುಗಳ ಅನುಕ್ರಮವಾಗಿ ಮುಟ್ಟಿಗೊಂಬದು.
ಓಂ ದಿವೇ ನಮಃ | – ಗುಹ್ಯಸ್ಥಳ ಸ್ಪರ್ಶಿಸಿಗೊಂಬದು.
ಓಂ ಬ್ರಹ್ಮಣೇ ನಮಃ | – ಹೊಕ್ಕುಳು (ನಾಭಿ) ಮುಟ್ಟುವದು – ಹೆಬ್ಬಟೆ ಬೆರಳಿಂದ.
ಓಂ ರುದ್ರಾಯ ನಮಃ | – ಹೃದಯ ಮುಟ್ಟಿಗೊಂಬದು- ಅಂಗೈಲಿ.
ಓಂ ಶಿವಾಯ ನಮಃ | – ತಲೆ ಮುಟ್ಟಿಗೊಂಬದು – ಬಲಗೈಲಿ.
ಓಂ ಸಪ್ತ-ಋಷಿಭ್ಯೋ ನಮಃ | – ಶಿಖೆ (ಜುಟ್ಟು) ಮುಟ್ಟಿಗೊಂಬದು – ಬಲಗೈಲಿ.
(ಪ್ರತಿ ಅಂಗಸ್ಪರ್ಶ ಆದ ಮತ್ತೆ ಒಂದರಿ ಸಕ್ಕಣಂದ ನೀರಿನ ಮುಟ್ಟಿಗೊಳ್ಳೆಕ್ಕು.)
3. ಭಸ್ಮಧಾರಣೆ
ಭಸ್ಮ, ಗೋಪೀಚಂದನ ಧಾರಣೆ ಮಾಡಿಗೊಂಡು ಮುಂದೆ ಸಂಧ್ಯೋಪಾಸನೆ ಸುರುಮಾಡುವದು ಕ್ರಮ.
ಮದಾಲು ಒಂದು ಸಕ್ಕಣ ನೀರಿಲಿ ಕೈ ತೊಳಕ್ಕೊಂಡು ಒಂದು ಆಚಮನ ಮಾಡುವದು –
ಓಂ ಋಗ್ವೇದಾಯ ಸ್ವಾಹಾ |
ಓಂ ಯಜುರ್ವೇದಾಯ ಸ್ವಾಹಾ |
ಓಂ ಸಾಮವೇದಾಯ ಸ್ವಾಹಾ ||
ಬಲದ ಕೈಗೆ ರಜ್ಜ ವಿಭೂತಿ ಹಾಕಿಗೊಂಡು, ಅದಕ್ಕೆ ಒಂದು ಸಕ್ಕಣ ನೀರು ಹಾಕಿಕ್ಕಿ, ಈ ಮಂತ್ರ ಹೇಳಿಗೊಂಡು ಎರಡೂ ಕೈಯ ಉದ್ದಿಗೊಂಡು ವಿಭೂತಿ ನೀರಿಲಿ ಕರಗುಸುದು:
ಓಂ ಮಾನ ಸ್ತೋಕೇ ತನಯೇ ಮಾ ನ ಆಯುಷಿ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ |
ಓಂ ವೀರಾನ್ಮಾನೋ ರುದ್ರ ಭಾಮಿತೋವಧೀರ್ ಹವಿಷ್ಮಂತೋ ನಮಸಾ ವಿಧೇಮತೇ ||
ಹಣೆ, ಬಲಬಾಹು, ಎಡಬಾಹು, ಎದೆ, ಕೊರಳು, ಉದರ, ಪೃಷ್ಠ, ತಲೆ – ಈ ಭಾಗಂಗೊಕ್ಕೆ ತೋರು-ನಡು-ಪವಿತ್ರ ಬೆರಳುಗಳ ಜೋಡುಸಿ ವಿಭೂತಿಯ ಉದ್ದೆಕು.
4. ಪ್ರಾಣಾಯಾಮ
ಇದರಿಂದ ಅಂಗಾಂಗ ಅನಾಯಾಸ ಸಕ್ರಿಯಗೊಳ್ಳುತ್ತು; ರಜೋಗುಣ ಕ್ಷಯಿಸಿ ಸತ್ವ ಗುಣ ಅಭಿವೃದ್ಧಿ ಆವ್ತು.
ಪ್ರಣವಸ್ಯ ಪರಬ್ರಹ್ಮ ಋಷಿಃ | – ಬಲದ ಕೈಲಿ ಶಿರೋ ಮಧ್ಯ ಮುಟ್ಟಿಗೊಂಬದು.
ದೈವೀ ಗಾಯತ್ರೀ ಚ್ಛಂದಃ | – ಬಲದ ಕೈಲಿ ಮುಖ ಮುಟ್ಟಿಗೊಂಬದು.
ಪರಬ್ರಹ್ಮ ಪರಮಾತ್ಮಾ ದೇವತಾ | – ಬಲದ ಕೈ ಅಂಗೈಲಿ ಹೃದಯ ಮುಟ್ಟಿಗೊಂಬದು.
ಪ್ರಾಣಾಯಾಮೇ ವಿನಿಯೋಗಃ || – ಎರಡೂ ಕೈ ಜೋಡುಸಿ ನಮಸ್ಕಾರ ಮಾಡಿಗೊಂಬದು.
ಓಂ ಭೂಃ – ಎರಡೂ ಕೈಂದ ಎರಡೂ ಪಾದವ ಮುಟ್ಟಿಗೊಂಬದು
ಓಂ ಭುವಃ – ಎರಡೂ ಕೈಂದ ಮೊಳಪ್ಪಿಂದ ಕೆಳ (ಜಂಘೆ) ಮುಟ್ಟಿಗೊಂಬದು
ಓಗ್೦ ಸುವಃ – ಎರಡೂ ಕೈಂದ ಮೊಳಪ್ಪಿನ ಮುಟ್ಟಿಗೊಂಬದು
ಓಂ ಮಹಃ – ಬಲಗೈಂದ ಜಠರ ( ಹೊಟ್ಟೆ) ಮುಟ್ಟಿಗೊಂಬದು
ಓಂ ಜನಃ – ಬಲಗೈಂದ ಕೊರಳು ಮುಟ್ಟಿಗೊಂಬದು
ಓಂ ತಪಃ – ಬಲಗೈಂದ ಮೋರೆ ಮುಟ್ಟಿಗೊಂಬದು
ಓಗ್೦ ಸತ್ಯಂ – ಬಲಗೈಂದ ತಲೆ ಮುಟ್ಟಿಗೊಂಬದು
ಇದಕ್ಕೆ ಸಪ್ತ (ಏಳು) ವ್ಯಾಹೃತಿ ಹೇಳಿ ಹೆಸರು.
ಪ್ರಾಣಾಯಾಮದ ಅಂಗವಾದ ಈ ಕೆಲಸಕ್ಕೆ ಸಪ್ತ ವ್ಯಾಹೃತಿ ನ್ಯಾಸ ಹೇಳ್ತವು. ಸಪ್ತ ಲೋಕದ ಶಕ್ತಿಯ ನಮ್ಮ ಶರೀರಲ್ಲಿ ಕಲ್ಪಿಸಿಗೊಂಬದು.
ಬಲಗೈ ಹೆಬ್ಬೆರಳಿಂದ ಬಲಮೂಗಿನ ಒತ್ತಿಗೊಂಡು, ಎಡ ಮೂಗಿನಿಂದಾಗಿ ಒಂದು ದೀರ್ಘ ಶ್ವಾಸವ ಸಮದಾನಕ್ಕೆ ಒಳ ತೆಕ್ಕೊಂಬದು. ಅಲ್ಲೇ ಶ್ವಾಸ ಹಿಡುದು ಮಡಿಕ್ಕೊಂಡು ಈ ಗಾಯತ್ರೀ ಮಂತ್ರವ ಮನಸ್ಸಿಲೇ ಹೇಳಿಗೊಂಬದು:
ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||
ಬಲಗೈ ಪವಿತ್ರ-ಕಿರು ಬೆರಳಿಂದ ಎಡಮೂಗು ಒತ್ತಿ ಹಿಡುದು ಬಲಮೂಗಿನ ಹೆಬ್ಬೆಟೆ ಬೆರಳಿನ ಸಡಿಲಮಾಡಿ, ಹಿಡುಕ್ಕೊಂಡ ಶ್ವಾಸವ ಬಲಮೂಗಿಂದಾಗಿ ನಿಧಾನವಾಗಿ ಹೆರ ಬಿಟ್ಟುಗೊಂಡು ಕೆಳಾಣ ಮಂತ್ರ ಹೇಳುವದು:
ಓಮಾಪೋ ಜ್ಯೋತೀ ರಸೋಮೃತಂ ಬ್ರಹ್ಮಭೂರ್ಭುವಸ್ಸುವರೋಮ್ ||
5. ಸಂಕಲ್ಪ
ಎಡಗೈಲಿ ಸಕ್ಕಣಲ್ಲಿ ನೀರು ತೆಕ್ಕೊಂಡು ಬಲದಕೈಗೆ ಎರದು ತಟ್ಟಗೆ ಬಿಟ್ಟುಗೊಂಡು ಸಂಧ್ಯಾವಂದನೆಯ ಮಾಡುವ ಬಗ್ಗೆ ಶ್ರೀ ಪರಮೇಶ್ವರನ ಸನ್ನಿಧಿಗೆ ಸಂಕಲ್ಪ ಮಾಡಿಗೊಂಬದು.
ಮಮೋಪಾತ್ತ ದುರಿತಕ್ಷಯದ್ವಾರಾ, ಶ್ರೀ ಪರಮೇಶ್ವರಪ್ರೀತ್ಯರ್ಥಂ, ಪ್ರಾತಃಸಂಧ್ಯಾಂ ಉಪಾಸಿಷ್ಯೇ |
– (ಉದಿಯಪ್ಪಗಾಣದ್ದಕ್ಕೆ ಪ್ರಾತಃ ಸಂಧ್ಯಾಂ ಹೇಳೆಕ್ಕು; ಹೊತ್ತೋಪಗಾಣದ್ದಕ್ಕೆ ಸಾಯಂ ಸಂಧ್ಯಾಂ ಹೇಳೇಕು).
6. ಮಾರ್ಜನ
ಮಾರ್ಜನ ಹೇಳಿರೆ ನೀರು ಪ್ರೋಕ್ಷಿಸಿಗೊಂಬದು.
ಎಡದ ಕೈಲಿ ಸಕ್ಕಣಲ್ಲಿ ನೀರು ತೆಗದು ಹಿಡ್ಕೊಂಡು, ಬಲಗೈ ಪವಿತ್ರ ಬೆರಳಿಲ್ಲಿ ಶರೀರಕ್ಕೆ ತಳಿವದು.
ಬೇರೆಬೇರೆ ಭಾಗಂಗೊಕ್ಕೆ, ಒಟ್ಟು ಒಂಬತ್ತು ಸರ್ತಿ ಪ್ರೋಕ್ಷಣೆಮಾಡ್ಳಿದ್ದು.
6.1. ಪಾದಂಗೊಕ್ಕೆ ಪ್ರೊಕ್ಷಣೆ:
ಓಂ ಆಪೋಹಿಷ್ಠಾ ಮಯೋ ಭುವಃ | ತಾ ನ ಊರ್ಜೇ ದಧಾತನ | ಮಹೇ ರಣಾಯ ಚಕ್ಷಸೇ |
6.2 ತಲಗೆ:
ಓಂ ಯೋ ವಃ ಶಿವತಮೋ ರಸಃ | ತಸ್ಯ ಭಾಜಯತೇಹ ನಃ | ಉಶತೀರಿವ ಮಾತರಃ |
6.3 ಹೃದಯಕ್ಕೆ:
ಓಂ ತಸ್ಮಾ ಅರಂ ಗಮಾಮ ವಃ| ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನಃ||
6.4 ತಲಗೆ :
ಓಂ ಆಪೋಹಿಷ್ಠಾ ಮಯೋಭುವಸ್ತಾನ ಊರ್ಜೇ ದಧಾತನ | ಮಹೇ ರಣಾಯ ಚಕ್ಷಸೇ |
6.5 ಹೃದಯಕ್ಕೆ :
ಓಂ ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ | ಉಶತೀರಿವ ಮಾತರಃ |
6.6 ಪಾದಕ್ಕೆ :
ಓಂ ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನಃ||
6.7 ಹೃದಯಕ್ಕೆ :
ಓಂ ಆಪೋಹಿಷ್ಠಾ ಮಯೋಭುವಸ್ತಾನ ಊರ್ಜೇ ದಧಾತನ | ಮಹೇ ರಣಾಯ ಚಕ್ಷಸೇ |
6.8 ಪಾದಕ್ಕೆ :
ಓಂ ಯೋ ವಃ ಶಿವತಮೋ ರಸಸ್ತಸ್ಯ ಭಾಜಯ ತೇಹ ನಃ | ಉಶತೀರಿವ ಮಾತರಃ |
6.9 ತಲಗೆ :
ಓಂ ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನಃ||
7. ಮಂತ್ರಾಚಮನ
ಎಡಕೈಲಿ ಒಂದು ಸಕ್ಕಣ ನೀರಿನ ಬಲಗೈಯ ಗೋಕರ್ಣಾಕೃತಿ ಹಸ್ತಕ್ಕೆ ಸುರುದು, ಕೆಳಾಣ ಮಂತ್ರ ಹೇಳಿಕ್ಕಿ ಅಂಗುಷ್ಠಮೂಲಂದ ಕುಡಿವದು:
ಹಗಲಿಂಗೆ:
ಓಂ ಸೂರ್ಯಶ್ಚ ಮಾ ಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯಃ | ಪಾಪೇಭ್ಯೋ ರಕ್ಷಂತಾಂ | ಯದ್ರಾತ್ರಿಯಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ಞಾ | ರಾತ್ರ್ರಿಸ್ತದವಲುಂಪತು | ಯತ್ಕಿಂಚ ದುರಿತಂ ಮಯಿ | ಇದಮಹಂ ಮಾಮಮೃತಯೋನೌ | ಸೂರ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ ||
ಇರುಳಿಂಗೆ:
ಓಂ ಅಗ್ನಿಶ್ಚ ಮಾ ಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯಃ | ಪಾಪೇಭ್ಯೋ ರಕ್ಷಂತಾಂ | ಯದಹ್ನಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ಞಾ | ಅಹಸ್ತದವಲುಂಪತು | ಯತ್ಕಿಂಚ ದುರಿತಂ ಮಯಿ | ಇದಮಹಂ ಮಾಮಮೃತಯೋನೌ | ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ ||
ಮಂತ್ರಾಚಮನ ಆದ ಮತ್ತೆ ಒಂದು ಆಚಮನ:
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||
8. ಪುನರ್ಮಾರ್ಜನಮ್
ಮಂತ್ರಾಚಮನ ಆದ ಮತ್ತೆ ಪುನಃ ಪ್ರೋಕ್ಷಣೆ ಮಾಡಿಗೊಂಬದೇ ’ಪುನರ್ಮಾರ್ಜನಮ್’.
8.1 ತಲಗೆ :
ದಧಿಕ್ರಾವ್ಣ್ಣೋ ಅಕಾರಿಷಂ ಜಿಷ್ಣೋರಶ್ವಸ್ಯ ವಾಜಿನಃ |
ಸುರಭಿ ನೋ ಮುಖಾ ಕರತ್ಪ್ರಣ ಆಯೂಗ್ಂಷಿ ತಾರಿಷತ್ ||
ಓಂ ಆಪೋಹಿಷ್ಠಾ ಮಯೋಭುವಸ್ತಾನ ಊರ್ಜೇ ದಧಾತನ | ಮಹೇ ರಣಾಯ ಚಕ್ಷಸೇ |
8.2 ಮೋರಗೆ :
ಓಂ ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ | ಉಶತೀರಿವ ಮಾತರಃ |
ಓಂ ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನಃ||
9. ಅರ್ಘ್ಯಪ್ರದಾನ :
ಪ್ರೋಕ್ಷಣ, ಮಾರ್ಜನ ಮುಗಿಸಿ ಅರ್ಘ್ಯಪ್ರದಾನ ಮಾಡುವದು.
ಅಂಜಲಿ ಪೂರ್ವಕ ಸೂರ್ಯಂಗೆ ಮೂರು ಅರ್ಘ್ಯ ಪ್ರದಾನ ಮಾಡೆಕ್ಕಾದ್ದು ಪ್ರತಿಯೊಬ್ಬನ ಕರ್ತವ್ಯ.
ಎಡಕೈಲಿ ಸಕ್ಕಣ ನೀರು ತೆಗದು ಬಲಗೈ ಕೆಳಮುಖವಾಗಿ ಹಿಡುದು ಅಂಗೈಗೆ ನೀರು ಎರದು ತಟ್ಟಗೆ ನೀರು ಬಿಡುವದು ಸರಳ ವಿಧಾನ. (ಅರ್ಘ್ಯ ಪ್ರದಾನ ಮಾಡುವಗ ಹೆಬ್ಬಟೆ ಬೆರಳು ಬೇರೆ ಬೆರಳುಗೊಕ್ಕೆ ತಾಗಲಾಗ ಹೇಳಿ ಶಾಸ್ತ್ರ).
ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||
ಭಾಸ್ಕರಾಯ ನಮಃ, ಇದಮರ್ಘ್ಯಂ ||
– ಈ ರೀತಿಲಿ ಮೂರು ಅರ್ಘ್ಯ ಕೊಡೆಕ್ಕು.
ಪ್ರಾಯಶ್ಚಿತ್ತಾರ್ಘ್ಯ:
ಮಾಡುವ ಕರ್ಮಲ್ಲಿ ವ್ಯತ್ಯಾಸ ಬಂದಿದ್ದರೆ, ಅದರ ಪರಿಹಾರಕ್ಕೆ.
ಕಾಲಾತಿಕ್ರಮದೋಷಪರಿಹಾರಾರ್ಥಂ, ಪ್ರಾಯಶ್ಚಿತ್ತಾರ್ಘ್ಯಂ ಕರಿಷ್ಯೇ | ( ಒಂದು ಸಕ್ಕಣ ನೀರು ಬಲದ ಕೈಲಿ ಹಾಕ್ಯೊಂಡು ತಟ್ಟಗೆ ಬಿಡುವದು)
ಓಂ ಭೂರ್ಭುವಸ್ಸುವರ್ಮಹರ್ಜನಸ್ತಪಃಸತ್ಯಂ |
ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||
ಓಂ ಭೂರ್ಭುವಸ್ಸುವರ್ಮಹರ್ಜನಸ್ತಪಃ ಸತ್ಯಂ ||
ಹೇಳಿಕ್ಕಿ, ಒಂದು ಸಕ್ಕಣ ನೀರು ಆಗ ಅರ್ಘ್ಯ ಬಿಟ್ಟ ಹಾಂಗೇ ತಟ್ಟಗೆ ಬಿಡುವದು.
ನೀರು ತಲಗೆ ಸುತ್ತುಗಟ್ಟುದು:
ಓಂ ಅಸಾವಾದಿತ್ಯೋ ಬ್ರಹ್ಮ |
– ಹೇಳಿಗೊಂಡು ಒಂದು ಸಕ್ಕಣ ನೀರು ಬಲದ ಕೈಗೆ ಹಾಕಿ ಮುಷ್ಟಿಲಿ ಹಿಡುಕೊಂಡು ತನ್ನ ತಲಗೆ ಒಂದು ಪ್ರದಕ್ಷಿಣಾಕಾರವಾಗಿ ಸುತ್ತು ತಂದು ಕೆಳ ತಟ್ಟಗೆ ಬಿಡುವದು.
ಪುನಃ ದ್ವಿರಾಚಮನ
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||
10. ಗಾಯತ್ರೀ ಜಪ
ವಿಶ್ವಾಮಿತ್ರ ಋಷಿಃ |- ಮಸ್ತಕ (ತಲೆ) ಮುಟ್ಟಿಗೊಂಬದು
ದೇವೀಗಾಯತ್ರೀ ಚ್ಛಂದಃ | – ಮುಖ (ಮೋರೆ) ಮುಟ್ಟಿಗೊಂಬದು
ಸವಿತಾ ದೇವತಾ | – ಹೃದಯ ಮುಟ್ಟಿಗೊಂಬದು
ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||
12 ಅಥವಾ, 24, ಅಥವಾ, 108, ಅಥವಾ – ಯಥಾಶಕ್ತಿ ಗಾಯತ್ರಿ ಜೆಪ ಮಾಡುದು.
ಮನಸ್ಸು ಕೇಂದ್ರೀಕರಿಸಿ, ತದೇಕಚಿತ್ತರಾಗಿ ಜಪ ಮಾಡಿರೆ ನಮ್ಮೊಳ ತಪಃಶಕ್ತಿ ಶೀಘ್ರ ತುಂಬುತ್ತು. ಮನಸ್ಸಿಂಗೆ ಶಾಂತಿ ನೆಮ್ಮದಿ ಲಭುಸುತ್ತು. ಅದಕ್ಕೇ ಹೇಳುವುದು ಜಪ, ತಪ, ಪೂಜಾ, ಹೋಮ ಕಾರ್ಯ ಮಾಡುವಾಗ ನಮ್ಮ ಸುತ್ತೂ ಪ್ರಶಾಂತ ವಾತಾವರಣ ಇರೆಕು.
ಇದಾದ ಮತ್ತೆ, ಕೈ ಜೋಡಿಸಿ ಕೈ ಮುಗುಕ್ಕೊಂಬದು:
ಸಂಧ್ಯಾಯೈ ನಮಃ|
ಸಾವಿತ್ರ್ಯೈ ನಮಃ |
ಗಾಯತ್ರ್ಯೈ ನಮಃ |
ಸರಸ್ವತ್ಯೈ ನಮಃ|
ಸರ್ವೇಭ್ಯೋ ದೇವೇಭ್ಯೋ ನಮಃ |
ಸರ್ವಾಭ್ಯೋ ದೇವತಾಭ್ಯೋ ನಮಃ |
ಋಷಿಭ್ಯೋ ನಮಃ |
ಮುನಿಭ್ಯೋ ನಮಃ |
ಗುರುಭ್ಯೋ ನಮಃ |
ಆಚಾರ್ಯೇಭ್ಯೋ ನಮಃ |
ಈಶಾನಾಯ ನಮೋ ಗೋ-ಪಿತೃ-ಮಾತೃ-ಗುರುದೇವತಾಭ್ಯೋ ನಮಃ |
11. ಗೋತ್ರಾಭಿವಾದನ
ನಿಂಗಳ ಗೋತ್ರ ಸೂತ್ರ ಪ್ರವರ ಹೇಳಿ ನಮಸ್ಕರಿಸೆಕ್ಕು.
ಶ್ರೀಮದ್ಯಜುಶ್ಶಾಖಾ, – ಯಜುರ್ವೇದ ಅಧ್ಯಾಯಿಗೊ ನಾವು,
ಬೋಧಾಯಾನ ಸೂತ್ರಾನ್ವಿತ – ಬೋಧಾಯನ ಸೂತ್ರ ನಮ್ಮದು
ಆರ್ಷೇಯ ಪ್ರವರಾನ್ವಿತ, – ಪ್ರತಿ ಗೋತ್ರಕ್ಕೂ ಮೂರು ಅತವಾ ಐದು ಋಷಿಗಳ ಪ್ರವರ ಇರ್ತು
…….ಗೊತ್ರೋತ್ಪನ್ನಃ, – ಇಂತಾ ಗೋತ್ರಲ್ಲಿ ಜನ್ಮ ಪಡಕ್ಕೊಂಡ,
……… ಶರ್ಮಃ, – ಇಂತಾ ಹೆಸರಿಪ್ಪ
ಅಹಮಸ್ಮಿ ಭೋ ಅಭಿವಾದಯೇ || – ಆನು ಅಭಿವಾದನೆ ಮಾಡ್ತೆ.
(ಸೂ: ಗೋತ್ರಾಭಿವಾದನ ವಿವರ ಅಕೇರಿಗೆ ಇಲ್ಲಿ ಇದ್ದು.)
12. ಯಮೋಪಸ್ಥಾನ
ಪ್ರದಕ್ಷಿಣಾಕಾರವಾಗಿ ತಿರುಗಿ ದಕ್ಷಿಣಾಭಿಮುಖವಾಗಿ ನಿಂದು ಯಮಂಗೆ ನಮಸ್ಕರಿಸುದು –
ಯಮಾಯ ಧರ್ಮರಾಜಾಯ ಮೃತ್ಯವೇ ಚಾಂತಕಾಯ ಚ|
ವೈವಸ್ವತಾಯ ಕಾಲಾಯ ಸರ್ವಭೂತಕ್ಷಯಾಯ ಚ |
ಔದುಂಬರಾಯ ದಧ್ನಾಯ ನೀಲಾಯ ಪರಮೇಷ್ಠಿನೇ|
ವೃಕೋದರಾಯ ಚಿತ್ರಾಯ ಚಿತ್ರಗುಪ್ತಾಯ ವೈ ನಮಃ ||
ಬಲಕ್ಕೆ ತಿರುಗಿ ಉತ್ತರಾಭಿಮುಖವಾಗಿ ನಿಂದುಗೊಂಡು –
ಋತಗ್ಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣಪಿಂಗಳಂ |
ಊಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ ||
ಪ್ರದಕ್ಷಿಣಾಕಾರವಾಗಿ ಮೂರು ಸುತ್ತು ಬಂದುಗೊಂಡು ನಮಸ್ಕರಿಸುವದು –
ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಾಯ ಚ|
ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ||
ಯಾಂ ಸದಾ ಸರ್ವಭೂತಾನಿ ಸ್ಥಾವರಾಣಿ ಚರಾಣಿ ಚ |
ಸಾಯಂ ಪ್ರಾತರ್ನಮಸ್ಯಂತಿ ಸಾ ಮಾ ಸಂಧ್ಯಾsಭಿರಕ್ಷತು ||
13. ಅಷ್ಟಾಕ್ಷರೀ ಜಪ
’ಓಂ ನಮೋ ನಾರಾಯಣಾಯ’ – ಹೇಳ್ತದು ಎಂಟು ಅಕ್ಷರ ಇಪ್ಪ ’ಅಷ್ಟ-ಅಕ್ಷರೀ’ ಮಂತ್ರ.
ಅಸ್ಯಶ್ರೀ ಅಷ್ಟಾಕ್ಷರೀ ಮಂತ್ರಸ್ಯ – ಕೈ ಜೋಡಿಸಿ ನಮಸ್ಕರಿಸಿ
ಸಾಧ್ಯನಾರಾಯಣ ಋಷಿಃ – ಬಲಕೈಲಿ ಮಸ್ತಕವ ಮುಟ್ಟಿಗೊಂಬದು
ದೇವೀ ಗಾಯತ್ರೀ ಛಂದಃ – ಮೋರೆ ಮುಟ್ಟಿಗೊಂಬದು
ಪರಬ್ರಹ್ಮಪರಮಾತ್ಮಾ ದೇವತಾ – ಹೃದಯ ಮುಟ್ಟಿಕ್ಕಿ, ಕೈ ಮುಕ್ಕೊಂಬದು
||ಓಂ ನಮೋ ನಾರಾಯಣಾಯ||
ಗಾಯತ್ರೀ ಜಪದ ಎರಟಿ (ಎರಡು ಪಾಲು) ಅಷ್ಟಾಕ್ಷರೀ ಜಪ ಮಾಡೆಕ್ಕು ಹೇಳಿ ಶಾಸ್ತ್ರ ಹೇಳ್ತು.
14. ಪಂಚಾಕ್ಷರೀ ಜಪ
ಓಂ ನಮಃ ಶಿವಾಯ – ಹೇಳ್ತದು ಐದು ಅಕ್ಷರ ಇಪ್ಪ ಪಂಚ-ಅಕ್ಷರೀ ಮಂತ್ರ.
ಅಸ್ಯಶ್ರೀ ಪಂಚಾಕ್ಷರೀ ಮಂತ್ರಸ್ಯ – ಕೈ ಜೋಡಿಸಿ ನಮಸ್ಕರಿಸಿಗೊಂಡು
ವಾಮದೇವ ಋಷಿಃ – ಬಲಗೈಲಿ ತಲೆ ಮುಟ್ಟಿಗೊಂಬದು
ಪಂಕ್ತಿಚ್ಛಂದಃ – ಮೋರೆ ಮುಟ್ಟುವದು
ಸದಾಶಿವರುದ್ರೋ ದೇವತಾ – ಬಲದ ಕೈ ಅಂಗೈಂದ ಹೃದಯ ಮುಟ್ಟಿಕ್ಕಿ ಕೈಮುಕ್ಕೊಂಬದು.
|| ಓಂ ನಮಃ ಶಿವಾಯ ||
ಗಾಯತ್ರೀ ಜಪದ ನಾಕು ಪಾಲು ಪಂಚಾಕ್ಷರೀ ಜಪ ಮಾಡ್ತದು ಹೇಳಿ ಶಾಸ್ತ್ರ ಹೇಳ್ತು.
15. ಸಮರ್ಪಣ
ಕೆಳಾಣ ಮಂತ್ರ ಹೇಳಿಗೊಂಡು – ಎಡದ ಕೈಲಿ ಒಂದು ಸಕ್ಕಣ ನೀರು ಬಲದ ಕೈ ಅಂಗೈಗೆ ಎರದು, ಅಂಜಲಿ ಪೂರ್ವಕ ಕೆಳ ತಟ್ಟಗೆ ಬಿಡುವದು.
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ
ಸದಾಶಿವಾಯೇತಿ ಸಮರ್ಪಯಾಮಿ ||
16. ಬ್ರಹ್ಮಾರ್ಪಣ
ಎಡದ ಕೈಲಿ ಒಂದು ಸಕ್ಕಣ ನೀರು ತೆಗದು ಬಲಗೈ ಅಂಗೈಗೆ ಎರದು ಕೆಳ ತಟ್ಟಗೆ ಬಿಡುವದು.
ಪ್ರತಿ ಕಾರ್ಯಕ್ರಮದ ಅಕೇರಿಗೆ ಮಾಡಿದ ಕಾರ್ಯ, ಶ್ರೀ ಪರಮಾತ್ಮಂಗೆ ಅರ್ಪುಸುವದು ಬ್ರಹ್ಮಾರ್ಪಣ.
ಉದಿಯಪ್ಪಂಗೆ :
ಅನೇನ ಪ್ರಾತಃ ಸಂಧ್ಯಾವಂದನಕರ್ಮಣಾ ಶ್ರೀಪರಮೇಶ್ವರಃ ಪ್ರೀಯತಾಂ | || ಓಂ ತತ್ಸತ್ ||
ಸಾಯಂಕಾಲಕ್ಕೆ –
ಅನೇನ ಸಾಯಂ ಸಂಧ್ಯಾವಂದನಕರ್ಮಣಾ ಶ್ರೀಪರಮೇಶ್ವರಃ ಪ್ರೀಯತಾಂ | || ಓಂ ತತ್ಸತ್ ||
ದ್ವಿರಾಚಮನ (ಎರಡು ಸರ್ತಿ ಆಚಮನ ಮಾಡುವದು)
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||
||ಓಂ ತತ್ಸತ್|| ಹರಿಃ ಓಂ ||
ಇಲ್ಲಿಗೆ ಚುಟುಕಿನ ಸಂಧ್ಯಾವಂದನೆ ಹೇಳ್ತ ಅರ್ಘ್ಯೆಜೆಪ ಮುಗುದತ್ತು.
*** *** ***
ಗೋತ್ರಾಭಿವಾದನ ವಿವರ –
ಎದ್ದು ನಿಂದುಗೊಂಡು ಬಗ್ಗಿ ಬಲದ ಕೈಯ ಎಡದ ಪಾದದ ಹೊಡೆಂಗೆ ಬಲದ ಕೈಯ ಮೇಗಂದ ಎಡದ ಕೈಯ ಬಲದ ಪಾದದ ಹೊಡೆಂಗೆ ತಂದು ಎರಡೂ ಕೈಲಿ ನೆಲಕ್ಕವ ಮುಟ್ಟಿಗೊಂಡು ಈ ಮಂತ್ರವ ಅಭಿವಾದಯೇ ಹೇದೊಂಡು ಕೈಗಳ ಹಾಂಗೆ ಹಿಡ್ಕೊಂಡು ಕೆಮಿಯ ಮುಟ್ಟಿಕ್ಕಿ ನಮಸ್ಕಾರ ಮಾಡುವದು. ಅಲ್ಲದ್ದರೆ ಇನ್ನೊಂದು ಕ್ರಮವೂ ಇದ್ದು – ಸರ್ತ ಎದ್ದು ನಿಂದುಗೊಂಡು ಬಲದ ಕೈಲಿ ಎಡದ ಕೆಮಿ ಹಿಡ್ಕೊಂಡು ಬಲದ ಕೈ ಮೇಗಂದ ಎಡದ ಕೈ ತಂದು ಬಲದ ಕೆಮಿ ಹಿಡ್ಕೊಂಡು ಮಂತ್ರ ಹೇದಿಕ್ಕಿ ನೆಲಕ್ಕ ಮುಟ್ಟಿಕ್ಕಿ ನಮಸ್ಕಾರ ಮಾಡುವದು.
ನಿಂಗಳ ಗೋತ್ರ-ಸೂತ್ರ ವಿವರ ಯೇವದು ಹೇದು ಗೊಂತಿಲ್ಲದ್ದರೆ ನಿಂಗಳ ಕುಲಪುರೋಹಿತರ ಹತ್ತರೆ ಕೇಟುಗೊಳ್ಳಿ.
ಕಶ್ಯಪ: ಶ್ರೀಮದ್ಯಜುಶ್ಶಾಖಾ ಬೋಧಾಯಾನ ಸೂತ್ರಾನ್ವಿತ ಕಾಶ್ಯಪಾವತ್ಸಾರ ನೈದ್ಧ್ರುವತ್ರ್ಯಾರ್ಷೇಯ ಪ್ರವರಾನ್ವಿತ ಕಾಶ್ಯಪಗೋತ್ರೋತ್ಪನ್ನಃ “ಶಂಕರ” ಶರ್ಮಾಹಮಸ್ಮಿ ಭೋ ಅಭಿವಾದಯೇ |
ಭಾರದ್ವಾಜ: ಶ್ರೀಮದ್ಯಜುಶ್ಶಾಖಾ ಬೋಧಾಯಾನ ಸೂತ್ರಾನ್ವಿತ ಆಂಗೀರಸ ಬಾರ್ಹಸ್ಪತ್ಯ ಭಾರದ್ವಾಜತ್ರ್ಯಾರ್ಷೇಯ ಪ್ರವರಾನ್ವಿತ ಭಾರದ್ವಾಜಗೋತ್ರೋತ್ಪನ್ನಃ “ಶಂಕರ” ಶರ್ಮಾಹಮಸ್ಮಿ ಭೋ ಅಭಿವಾದಯೇ |
ವಿಶ್ವಾಮಿತ್ರ: ಶ್ರೀಮದ್ಯಜುಶ್ಶಾಖಾ ಬೋಧಾಯಾನ ಸೂತ್ರಾನ್ವಿತ ವೈಶ್ವಾಮಿತ್ರಾಘಮರ್ಷಣ ಕೌಶಿಕ ತ್ರ್ಯಾರ್ಷೇಯ ಪ್ರವರಾನ್ವಿತ ವಿಶ್ವಾಮಿತ್ರಗೋತ್ರೋತ್ಪನ್ನಃ “ಶಂಕರ” ಶರ್ಮಾಹಮಸ್ಮಿ ಭೋ ಅಭಿವಾದಯೇ |
ಗೌತಮ: ಶ್ರೀಮದ್ಯಜುಶ್ಶಾಖಾ ಬೋಧಾಯಾನ ಸೂತ್ರಾನ್ವಿತ ಗೌತಮಾಂಗಿರಸಾಯಾಸ್ಯ ತ್ರ್ಯಾರ್ಷೇಯ ಪ್ರವರಾನ್ವಿತ ಗೌತಮಗೋತ್ರೋತ್ಪನ್ನಃ “ಶಂಕರ” ಶರ್ಮಾಹಮಸ್ಮಿ ಭೋ ಅಭಿವಾದಯೇ |
ಜಮದಗ್ನಿ: ಶ್ರೀಮದ್ಯಜುಶ್ಶಾಖಾ ಬೋಧಾಯಾನ ಸೂತ್ರಾನ್ವಿತ ಭಾರ್ಗವ ಚ್ಯಾವನಾಪ್ನವಾನೌರ್ವ ಜಾಮದಗ್ನ್ಯ ಪಂಚಾರ್ಷೇಯ ಪ್ರವರಾನ್ವಿತ ಜಮದಗ್ನಿಗೋತ್ರೋತ್ಪನ್ನಃ “ಶಂಕರ” ಶರ್ಮಾಹಮಸ್ಮಿ ಭೋ ಅಭಿವಾದಯೇ |
ಆಂಗೀರಸ: ಶ್ರೀಮದ್ಯಜುಶ್ಶಾಖಾ ಬೋಧಾಯಾನ ಸೂತ್ರಾನ್ವಿತ ಆಂಗೀರಸ ಪೌರುಕುತ್ಸ್ಯ ತ್ರ್ಯಾಯಾಸದಸ್ಯೇತಿ ಪ್ರವರಾನ್ವಿತ ಆಂಗೀರಸಗೋತ್ರೋತ್ಪನ್ನಃ “ಶಂಕರ” ಶರ್ಮಾಹಮಸ್ಮಿ ಭೋ ಅಭಿವಾದಯೇ |
ವಸಿಷ್ಠ: ಶ್ರೀಮದ್ಯಜುಶ್ಶಾಖಾ ಬೋಧಾಯಾನ ಸೂತ್ರಾನ್ವಿತ ವಾಸಿಷ್ಠ ಮೈತ್ರಾವರುಣ ಕೌಂಡಿನ್ಯ ತ್ರ್ಯಾರ್ಷೇಯ ಪ್ರವರಾನ್ವಿತ ವಸಿಷ್ಠ ಗೋತ್ರೋತ್ಪನ್ನಃ “ಶಂಕರ” ಶರ್ಮಾಹಮಸ್ಮಿ ಭೋ ಅಭಿವಾದಯೇ |
ಟಿಪ್ಪಣಿ: ’ಶಂಕರ’ ಇಪ್ಪಲ್ಲಿ ಅವರವರ ಹೆಸರು ಹೇಳೆಕ್ಕು.
|| ಹರೇ ರಾಮ ||
*** ***
ಶುದ್ದಿಗೆ ಸಕಾಯ : ಅಜ್ಜಕಾನ ಭಾವ°