Oppanna.com

ಸ್ವಯಂವರ : ಕಾದಂಬರಿ : ಭಾಗ 20 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   14/10/2019    2 ಒಪ್ಪಂಗೊ

ಕೇಶವ°, ಶೈಲ ಎಲ್ಲೋರು ಹೋದ ಮತ್ತೆ ಮನೆಯೇ ಖಾಲಿ ಖಾಲಿ ಆದಾಂಗಾತು ಚಂದ್ರಣ್ಣಂಗೆ.ಕೇಶವ° ಇಪ್ಪಗ ಎಲ್ಲಾ ಕೆಲಸಕ್ಕೂ ತಲೆಕೊಡುಗು.ಆಳುಗಳತ್ರೆ ಕೆಲಸ ಮಾಡ್ಸುಗ ಮಗನತ್ರೆ ಒಂದು ಮಾತು ಕೇಳಿರೆ ಅದಕ್ಕೊಂದು ಸಲಹೆ ಕೊಡುಗುವ°. ಸಾಮಾನು ತಪ್ಪಲೆ, ಕೆಲವು ಜೆಂಬಾರಕ್ಕೆ ಹೋಪಲೆ, ಬೇರೆಂತಾರು ಕೆಲಸ ಆಯೆಕಾರೆ “ಆನು ಮಾಡಿಕೊಡ್ತೆ ಅಪ್ಪಾ°” ಳಿ ಮಾಡಿಂಡಿದ್ದ ಅವ° ಹೋದ್ದದು ಅವಕ್ಕೆ ಮನಸಿಂಗೂ ರೆಜ ಉದಾಸೀನದ ಹಾಂಗಪ್ಪಲೆ ಸುರುವಾತು. ಹಾಂಗೆ ಹೇಳಿ ಅಷ್ಟು ಕಲ್ತ ಮಗನ ಮನೆಲಿ ಕೂರ್ಸಿ ತೋಟದ ಕೆಲಸ ಮಾಡ್ಸುವ ಮನಸುದೇ ಅವಕ್ಕಿಲ್ಲೆ.

ಹಟ್ಟಿ ಕೆಲಸ ಮುಗುದರೂ ಒಂದಿಷ್ಟು ಸಣ್ಣ ಸಣ್ಣ ಕೆಲಸಂಗೊ ಬಾಕಿ ಇದ್ದತ್ತು.ಅದರ ಎರಡು ದಿನಲ್ಲಿ ಮಾಡಿ ಕೊಟ್ಟಿಕ್ಕಿ ಆಳುಗಳುದೆ ಹೆರಡುವ ಅಂದಾಜಿಲ್ಲಿತ್ತಿದ್ದವು.ದಿನೇಸಂಗೆ ಇಲ್ಲಿಂದ ಹೋಪಲೆ ಮನಸ್ಸಿಲ್ಲೆ. ಹೋಗದ್ರೆ ಅದರ ಮಾವಂದ್ರು ಕೇಳವು.ಯೇವದಾದರು ಹೆಳೆಲಿ ಇಲ್ಲಿಯೇ ನಿಂಬ ಹಾಂಗಾಗಿದ್ದರೆ ಸಾಕು ಹೇಳಿ ಅದು ಬೇರೆಂತಾರು ಉಪಾಯ ಇದ್ದೋಳಿ ಆಲೋಚನೆ ಮಾಡ್ಲೆ ಸುರು ಮಾಡಿತ್ತು.

ತಂಗಮ್ಮಂಗೂ ಹಾಂಗೇ.ಹೇಂಗಾರು ಶಾರದೆಯ ಒಪ್ಸಿಕ್ಕಿ ಅದರ ಮುಖಾಂತರ ಇಲ್ಲಿಯೇ ನಿಂದರೆ ಮಾತ್ರ ಮಗಂಗೆ ಸುಶೀಲ ಸಿಕ್ಕುಗಷ್ಟೆ ಹೇಳಿ ಅದಕ್ಕೆ ಅಂದಾಜಿದ್ದು.ಅದಕ್ಕೆ ಬೇಕಾಗಿ ಚಂದ್ರಣ್ಣ ಮನೆಲಿ ಇಲ್ಲದ್ದಿಪ್ಪಗ ಸ್ವಂತ ಕಷ್ಟಂಗಳ ಶಾರದೆ ಹತ್ರೆ ಹೇಳಿ ಕಣ್ಣನೀರು ಹಾಕಿತ್ತು

“ಎನ್ನ ಸಣ್ಣ ಪ್ರಾಯಲ್ಲೇ ಮದುವೆ ಮಾಡಿ ಕೊಟ್ಟವು.ಎರಡು ಮಕ್ಕೊ ಅಪ್ಪಗ ಗೆಂಡ° ಎನ್ನ ಬಿಟ್ಟಿಕ್ಕಿ ಹೋತು.ದೊಡ್ಡ ಮಗನು ಎನ್ನೊಟ್ಟಿಂಗೆ ಇಲ್ಲೆ.ಎಂಗೊಗೆ ಊರ್ಲಿ ಮನೆ,ಜಾಗೆ ಎಲ್ಲ ಎಂತದೂ ಇಲ್ಲೆ ಅಕ್ಕಾ..ಈ ಅಣ್ಣತಮ್ಮಂದ್ರು ಕೆಲಸಕ್ಕೆ ಹೋಪಗ ಆನುದೆ ಅವರೊಟ್ಟಿಂಗೆ ಹೋಪದು. ಈಗ ಪ್ರಾಯಾಗಿ ಹಾಂಗೆ ಎಡಿತ್ತಿಲ್ಲೆ. ನಿಂಗೊ ದೊಡ್ಡ ಮನಸ್ಸು ಮಾಡಿ ಎನ್ನ ಮಗಂಗೆ ಇಲ್ಲಿ ಕಾಯಮ್ಮು ಕೆಲಸ ಕೊಟ್ರೆ ಆನೂದೆ ದೊಡ್ಡ ಅಕ್ಕನ ಸೇವೆ ಮಾಡಿಂಡು, ಎನಗೆಡಿಗಾದ ಕೆಲಸ ಮಾಡಿ ಕೊಟ್ಟುಕೊಂಡಿಪ್ಪೆ.ಎನಗೆ ನಿಂಗೊ ಸಂಬಳ ಎಲ್ಲ ಕೊಡೆಕೂಳಿಲ್ಲೆ. ಮಗಂಗೆ ಕೆಲಸ ಕೊಟ್ರೆ ಅದುವೇ ಸಾಕಕ್ಕಾ,ಸಣ್ಣ ಪ್ರಾಯಲ್ಲಿ ಎಡಿಗಾದಷ್ಟು ಬಂಙ ಬಂದೆ..ಈಗ ಎಡಿತ್ತಿಲ್ಲೆ. ಇವು ಎಲ್ಲೆಲ್ಲಿಗೋ ಕೆಲಸಕ್ಕೆ ಹೋದರೆ ಎನಗೆ ಇನ್ನು ಮದ್ಲಾಣಾಂಗೆ ಹೋಪಲೆ ಎಡಿಯ ಅಕ್ಕಾ°..ನಿಂಗಳೇ ಎನ್ನ ದೇವರು ಹೇಳಿ ಗ್ರೇಶುತ್ತೆ” ಹೇಳಿಕ್ಕಿ ಮುಸು ಮುಸು ಹೇಳಿಂಡು ಸೆರಗಿಲ್ಲಿ ಕಣ್ಣುದ್ದಿತ್ತು.

ಶಾರದೆ ಅದರ ಈ ನಟನೆ ಎಲ್ಲ ಸತ್ಯ ಹೇಳಿಯೇ ನಂಬಿತ್ತು‌. ಚಂದ್ರಣ್ಣನತ್ರೆ ತಂಗಮ್ಮನ ಮಗಂಗೆ ಮನೇಲಿಯೇ ಕಾಯಮ್ಮು ಕೆಲಸ ಕೊಡುವ ವಿಷಯವನ್ನು ಮಾತಾಡಿ ಒಪ್ಸಿತ್ತು
“ಬರೀ ಪಾಪಾಳಿ.ನಮ್ಮಲ್ಲೇ ಇರ್ಲಿ. ಇಷ್ಟು ಸಮಯ ಇದ್ದ ಕಾರಣ ಅವು ಜನಂಗೊ ಹೇಂಗಿಪ್ಪವು ಹೇಳಿ ನವಗೆ ಗೊಂತಿದ್ದು. ಅತ್ತೆಯ ಕೆಲಸಕ್ಕೆಲ್ಲ ಅದು ಸೇರ್ತು.ನಮ್ಮ ಚಂದ್ರಿಗೆ ಬಾಕಿ ಕೆಲಸವೇ ಇರ್ತು.ಇದರ ಮಗನೂ ಕೆಲಸಲ್ಲಿ ಉಶಾರಿ ಅಲ್ಲದಾ? ಇಷ್ಟು ಸಮಯ ಇದ್ದ ಕಾರಣ ಅವರ ವಿಶಯ ನವಗೆ ಗೊಂತಿದ್ದು. ಈಗ ಕೇಶವನೂ ಮನೆಲಿ ಇಲ್ಲದ್ದ ಕಾರಣ ನವಗೆ ಇಲ್ಲೇ ನಿಂಬ ಆಳೊಂದಿದ್ದರೆ ನಿಂಗೊಗೂ ಉಪಕಾರಕ್ಕಾ ಕಾಣ್ತು. ಆನು ವಿಶಯ ಹೇಳಿದ್ದಷ್ಟೆ. ನಿಂಗೊ ಬೇಕಾದಾಂಗೆ ಮಾಡಿ”

ಚಂದ್ರಣ್ಣನ ಹಾಳು ಯೋಗವೋ, ದಿನೇಸನ ಒಳ್ಳೆ ಯೋಗವೋ ಗೊಂತಿಲ್ಲೆ. ಶಾರದೆ ಈ ವಿಶಯ ಹೇಳಿದ್ದದೂದೆ ಚಂದ್ರಣ್ಣ ಅದರ ಒಪ್ಪಿದವು.

“ಆನೂದೆ ಕಾಯಮ್ಮಿಂಗೆ ಆರಾರು ಆಳುಗೊ ಸಿಕ್ಕುತ್ತವೋಳಿ ಹುಡ್ಕುವ ಅಂದಾಜಿಲ್ಲಿತ್ತಿದ್ದೆ.ಇಲ್ಲೇ ನಿಂಬ ಒಂದು ಆಳು ನವಗೀಗ ಅಗತ್ಯ ಇದ್ದೂದೆ.ದಿನೇಸ ಆದರೆ ನಂಬಿಕಸ್ಥ.ತಂಗಮ್ಮ ಇದ್ದರೆ ಅಬ್ಬೆಯನ್ನು ಲಾಯ್ಕ ಮೀಶಿ ಎಲ್ಲ ಮಾಡ್ತು.ನಿನಗೂ ಕೆಲಸ ರೆಜ ಹಗುರಕ್ಕು.ಚಂದ್ರಿಗೂ ಹಾಂಗೆ.ಅದರ ಕಾಲು ಬೇನೆಯೂ ಕಮ್ಮಿ ಆಯೆಕಷ್ಟೆ”

“ಅದಪ್ಪು.ಆನಂಬಗ ತಂಗಮ್ಮನತ್ರೆ ನಿಂಗೊ ಒಪ್ಪಿದ್ದಿ ಹೇಳ್ತೆ. ಪಾಪ ಒಳ್ಳೆ ಗುಣದ ಹೆಣ್ಣು” ಶಾರದೆಗೆ ಗೆಂಡ° ಒಪ್ಪಿದವನ್ನೇಳಿ ಕೊಶೀ ಆತು.

“ಇದಾ ಮೋಳೇ..ಆ ತಂಗಮ್ಮನ ಇಲ್ಲಿ ಕಾಯಮ್ಮು ಕೆಲಸಕ್ಕೆ ನಿಲ್ಸುಲೆ ಅಪ್ಪ° ಒಪ್ಪಿದ್ದವು.ಇನ್ನು ಅದೂದೆ ಮಗನೂದೆ ಮಾಂತ್ರ ಇಪ್ಪದು.ನಮ್ಮ ಮನೆಯ ಹಿಂದಾಣ ಉಗ್ರಾಣ ಒತ್ತರೆ ಮಾಡಿ ಕೊಡ್ತೆ ಅವಕ್ಕೆ. ಅಂದ್ರಾಣಾಂಗೆ ಕೊಟ್ಟಗೆಲಿ ನಿಂಬದೆಂತಕೆ?” ಶಾರದೆ ಸುಶೀಲನತ್ರೆ ಕೇಳಿಯಪ್ಪಗ ಅದಕ್ಕೆ ಸಂತೋಶ ತಡವಲೇ ಎಡಿಗಾಯಿದಿಲ್ಲೆ.ದಿನೇಸನೂ ಅದರ ಅಬ್ಬೆಯೂ ಮನೆ ಹಿಂದಾಣ ಉಗ್ರಾಣಲ್ಲಿ ನಿಲ್ಲುತ್ತವೂಳಿ ಆದರೆ ಅದಕ್ಕಿಂತ ಕೊಶಿಯ ವಿಶಯ ಮತ್ತೊಂದಿದ್ದೋ..!! ಅಂದರೂ ಅಬ್ಬೆ ಕೇಳುಗ ಮಾಂತ್ರ
“ಅವು ಆರು ,ಎಂತದು ,ಹೇಂಗಿದ್ದ ಜೆನಂಗೊ ಹೇಳಿ ಗೊಂತಿಲ್ಲದ್ದೆ ಮನೆಯ ಉಗ್ರಾಣ ಕೊಡುದೆಂತಕೆ? ಅಂದ್ರಾಣಾಂಗೆ ಕೊಟ್ಟಗೇಲೇ ಇರ್ಲಿ” ಹೇಳಿತ್ತು.

“ಆತಂಬಗ ಅಪ್ಪನತ್ರೆ ಹೇಳ್ತೆ.ಎನಗೆ ಹಾಂಗೆಲ್ಲ ತಲಗೆ ಹೋವ್ತಿಲ್ಲೆ. ಅಜ್ಜಿಯ ಚಾಕ್ರಿ ಮಾಡ್ಲೆ ಸುಲಭಕ್ಕನ್ನೇಳಿ ಮಾಂತ್ರ ಆನು ಆಲೋಚನೆ ಮಾಡಿದ್ದು”

ಅಬ್ಬೆ ಹಾಂಗೆ ಹೇಳಿಯಪ್ಪಗ ಸುಶೀಲಂಗೆ ‘ ಎನ್ನ ಮಾತು ಹೆಚ್ಚಿಗಾತೋಳಿ ಆತು.ಎಲ್ಯಾರು ಅಬ್ಬೆ ಇದರ ಹೋಗಿ ಅಪ್ಪನತ್ರೆ ಹೇಳಿರೆ ಮತ್ತೆ ಅಪ್ಪನೂ ಬೇಡ’ ಹೇಳುಗಷ್ಟೆ…

“ಅಯ್ಯೋ ಹಾಂಗೆ ಹೇಳಿದ್ದಲ್ಲ. ಅಜ್ಜಿಯ ಚಾಕ್ರಿ ಮಾಡೆಕಾರೆ ಇಲ್ಲಿಯೇ ನಿಲ್ಲೆಕಷ್ಟೆ.ತಂಗಮ್ಮ ಬಂದ ಮತ್ತೆ ಅಜ್ಜಿ ರೆಜಾ ಉಶಾರಾಯಿದವಲ್ಲದಬ್ಬೇ…ಅದು ಇಲ್ಲೇ ನಿಲ್ಲಲಿ”

“ಒಂದೊಂದರಿ ಒಂದೊಂದು ಹೇಳ್ತೆ ನೀನು.ನಿನಗೆ ಮನಸ್ಸಿಲ್ಲದ್ರೆ ಅವು ನಿಂಬದು ಬೇಡ,ಅಜ್ಜಿ ಕೆಲಸ ಇಷ್ಟು ದಿನ ಮಾಡಿದ ಹಾಂಗೆ ಮಾಡುವ°.ತಂಗಮ್ಮ ಮನ್ನೆ ಅದರ ಕಷ್ಟಂಗಳ ಹೇಳಿಯಪ್ಪಗ ಎನ್ನ ಮನಸಿಲ್ಲಿ ಹಾಂಗೊಂದು ಆಲೋಚನೆ ಬಂತು.ಅಪ್ಪನತ್ರೆ ಕೇಳಿದ್ದಕ್ಕೆ ಅಕ್ಕು ಹೇಳಿದವು.ಅಣ್ಣನೂ ಈಗ ಇಲ್ಲಿಲ್ಲದ್ದಿಪ್ಪಗ ದಿನೇಸ ಒಂದು ಮನೆಲಿದ್ದರೆ ರಜ ಉಪಕಾರಕ್ಕಾ ಹೇಳಿಯೂ ಕಂಡತ್ತು. ಹಾಂಗೆ ನಿನ್ನತ್ರೂ ಒಂದು ಮಾತು ಕೇಳಿದ್ದಷ್ಟೆ”

“ಅಪ್ಪ° ಒಪ್ಪಿರೆ ಮತ್ತೆ ಎನ್ನತ್ರೆ ಕೇಳ್ಲೆಂತಯಿದ್ದು.ಆನು ಹೋವ್ತೆ, ಎನಗೆ ಓದಲಿದ್ದು” ಹೇಳಿಕ್ಕಿ ಸುಶೀಲ° ಉದ್ದ ಜೆಡೆ ಬೀಸಿಂಡು ಉಪ್ಪರಿಗೆ ಹತ್ತಿತ್ತು.ಕೊಶಿ, ಸಂತೋಶ ತಡವಲೇ ಎಡಿತ್ತಿಲ್ಲೆ ಅದಕ್ಕೆ.

ಮತ್ತೆ ಒಂದು ವಾರಲ್ಲಿ ಆಳುಗಳ ಕೆಲಸವೂ ಮುಗುದತ್ತು.’ತಂಗಮ್ಮನು ,ಮಗನು ಇಲ್ಲಿ ಕಾಯಮ್ಮಿಂಗೆ ನಿಲ್ಲಲಿ ‘ ಹೇಳಿ ಅವರತ್ರೆ ಚಂದ್ರಣ್ಣ ಹೇಳಿದವು.ಅವಕ್ಕೆ ದಿನೇಸ ಅವರೊಟ್ಟಿಂಗೆ ಕೆಲಸಕ್ಕೆ ಸಿಕ್ಕುತ್ತಿಲ್ಲೆ ಹೇಳಿ ಬೇಜಾರಾದರೂ ತಂಗಮ್ಮ ಇಷ್ಟು ಸಮಯ ಅಲ್ಲಿ ಇಲ್ಲಿ ಕಾಡು ಗುಡ್ಡೆ ಹೇಳಿ ಇವರೊಟ್ಟಿಂಗೆ ಕೆಲಸ ಮಾಡುಗ ಅಡಿಗೆ ಬೇಶಿ ಕೊಟ್ಟು ಬಂಙ ಬಂದದು ನೆಂಪಿದ್ದ ಕಾರಣ ಅದಕ್ಕೊಂದು ನೆಲೆ ಸಿಕ್ಕಿತ್ತನ್ನೇಳಿ ಸಮದಾನ ಮಾಡ್ಯೊಂಡವು.

“ಅಕ್ಕಂಬಗ, ಆ ಹೆಳೆಲಾದರೂ ಎಂಗೊಗೊಂದರಿ ಬಪ್ಪಲಕ್ಕಿಲ್ಲಿಗೆ.ಇಷ್ಟು ಸಮಯ ಇಲ್ಲಿದ್ದು ಈಗ ನಿಂಗಳ ಮನೆ ಕೆಲಸ ಬಿಟ್ಟಿಕ್ಕಿ ಹೋಪಗ ಎಂಗೊಗೂ ಬೇಜಾರಾವ್ತು.ಇಷ್ಟರವರೆಗೆ ಕೆಲಸಕ್ಕೆ ಹೋದ ಯೇವ ಮನೆಲಿಯೂ ಎಂಗಳ ಇಷ್ಟು ಪ್ರೀತಿಲಿ ನೋಡ್ಯೊಂಡಿದವಿಲ್ಲೆ” ಹೇಳಿಕ್ಕಿ ಚಂದ್ರಣ್ಣನ, ಶಾರದೆಯ ಕಾಲು ಹಿಡುದಿಕ್ಕಿ
“ಲಾಯ್ಕಲ್ಲಿ ಕೆಲಸ ಮಾಡಿ,ಅಬ್ಬೆಯನ್ನು ಚೆಂದಕೆ ನೋಡ್ಯೊಂಡು ಮರ್ಯಾದಿಲಿ ಬದ್ಕು ” ಹೇಳಿ ದಿನೇಸಂಗೂ ಬುದ್ದಿ ಹೇಳಿಕ್ಕಿ ಆ ಆಳುಗೊ ಹೆರಟವು.

ಅಂದೇ ಚಂದ್ರಣ್ಣನ ಮನೆಯ ಹಿಂದಾಣ ಉಗ್ರಾಣಲ್ಲಿ ದಿನೇಸನೂ ,ತಂಗಮ್ಮನೂ ನಿಂಬಲೆ ಬಂದವು.ಅವಕ್ಕೆ ಬೇಕಾದ ಸೌಕರ್ಯ ಎಲ್ಲ ಮಾಡಿ ಕೊಟ್ಟ ಚಂದ್ರಣ್ಣ ಆ ರೂಮಿಂಗೆ ಒಂದು ಫೇನು ಕೂಡ ತಂದು ಮಡುಗಿದವು.

“ಇದೆಂಗೊಗೆ ಸ್ವರ್ಗ ಅಣ್ಣಾ,ನಿಂಗೊ ಇಲ್ಯಾಣ ದೇವರು” ತಂಗಮ್ಮ ಸಂತೋಶಲ್ಲಿ ಚಂದ್ರಣ್ಣನತ್ರೆ ಹೇಳಿದ್ದದು ಕೇಳಿ ಶಾರದೆಗು ಸಂತೋಶಾತು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 20 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಅಯ್ಯೋ, ದೇವರೇ, ಇನ್ನೂದೆ ಚಂದ್ರಣ್ಣಂಗೆ ಬುದ್ದಿ ಬಂತಿಲ್ಲೇನೆ. ತಂಗಮ್ಮ, ಯಬ್ಬಾ, ಚಾಲಾಕಿ ಹೆಣ್ಣು. ಮುಂದುವರಿಯಲಿ, ಮುಂದೆ worry ಯಲಿ.

  2. ಇನ್ನು ಸುಶಿ ದಿನೆಸಂದು ಆಡಿದ್ದೆ ಆಟ..ಆರಿದ್ದವು ಹೇಳುಲೆ ..ಹೆಂಗಿಪ್ಪೋರೆಲ್ಲ ಇದ್ದವು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×