ಸ್ವಯಂವರ 43
ಮದುವೆಯ ದಿನಂಗೊ ಹತ್ತರೆ ಬಂತು. ಮನೆಲಿ ಸಟ್ಟುಮುಡಿ ಮಾಡುದು ಹೇಳಿ ತೀರ್ಮಾನ ಆದ ಕಾರಣ ಜಾಲಿಂಗೆಲ್ಲ ಚಪ್ಪರ ಹಾಕಲೆ ಆಳುಗೊ ಬಂದವು. ಅಡಿಗೆ ಕೆಲಸ ಎಲ್ಲ ಶಾರದಕ್ಕ ಒಬ್ಬನೇ ಮಾಡುಗ ಸುಶೀಲಂಗೆ ಬೇಜಾರಾಗಿಂಡಿದ್ದತ್ತು.
ಅಬ್ಬೆ ಎನ್ನ ಹೀಂಗೇ ದೂರ ಮಾಡಿತ್ತನ್ನೇ..ಕಾಯಿ ಕೆರದು ಕೊಡ್ಲೂ ಆಗದಾ,ಬೆಂದಿಗೆ ಕೊರದು ,ಪಾತ್ರ ತೊಳದು ಕೊಡ್ತೆ ‘ ಹೇಳಿರೂ ಅಬ್ಬೆ ” ಈಗ ಬೇಡ, ನೀನು ಮುಟ್ಟೆಡ” ಹೇಳಿ ಹೇಳಿದ ಮತ್ತೆ ಅದು ಆದಷ್ಟು ಅದರ ಉಗ್ರಾಣದ ಒಳವೇ ಕೂಬದು.
ಕೇಶವಂಗೆ ಈಗ ತುಂಬಾ ಕೆಲಸ. ಹೇಳಿಕೆ ಹೇಳೆಕು. ಮನೆಲಿ ವ್ಯವಸ್ಥೆ ಮಾಡೆಕು. ಅದರೆಡೆಲಿ ಅಪ್ಪ° ಇಲ್ಲೆ ಹೇಳುವ ಬೇಜಾರವುದೆ.
“ವರ್ಷಾಂತ ಕಳಿಯದ್ದೆ ಮದುವೆ ಮಾಡ್ಲಾಗ ,ಇಷ್ಟು ವರ್ಷ ಸುಮ್ಮನೇ ಕೂದಿಕ್ಕಿ ಈಗ ಹೆರಟದಾ. ಇನ್ನೂ ಒಂದು ವರ್ಷ ಕಾವಲಾವ್ತಿತಿಲ್ಯಾ” ಹೇಳಿ ಚಂದ್ರಣ್ಣನ ಅಣ್ಣ ಒಬ್ಬ° ಎಡೇಲಿ ಮಾತು ತೆಗದ°.
“ಬದ್ಧ ಕಳಿವನ್ನಾರ ಸುಮ್ಮನೇ ಕೂದ್ದಾ ದೊಡ್ಡಪ್ಪ°, ಅಂದೇ ಹೇಳಿದ್ದರೆ ಆನೀಗ ಹೆರಡ್ತಿತಿಲ್ಲೆ” ಹೇಳಿ ಕೇಶವ° ಹೇಳಿದ°.
“ಆ ಬಾಶೆಕೆಟ್ಟದರ ಮನೆಲಿ ಕೂರ್ಸಿದ ನಿನಗೆ ಇಷ್ಟು ಬೇಗ ಕೂಸು ಕೊಡ್ಲೆ ಆರೂ ಒಪ್ಪವು ಗ್ರೇಶಿದ್ದೆ. ಅಂದರೂ ಆರೋ ಗೊಂತಿಲ್ಲದ್ದೆ ಕೊಡ್ಲೆ ಒಪ್ಪಿದವು”
“ಅಲ್ಲ ದೊಡ್ಡಪ್ಪ°. ..ಅವಕ್ಕೆ ಎಂಗಳ ವಿಶಯ ಎಲ್ಲ ಸರೀ ಗೊಂತಿದ್ದು”
“ಎಂತ್ಸೋ..ಈಗಾಣ ಕಾಲದವಕ್ಕೆ ಯೇವ ಆಚಾರವಿಚಾರವೂ ಬೇಡ, ನೀನೊಬ್ಬ° ಸಮಾಜೋದ್ಧಾರಕ ಅಲ್ಲದಾ, ಆರಾರೊಟ್ಟಿಂಗೆ ಓಡಿ ಹೋಗಿ ಎರಡು ಬಾಲೆಗಳ ಕಟ್ಯೊಂಡು ಬಂದ ತಂಗೆಯ ಬಡ್ದು ಓಡ್ಸುದು ಬಿಟ್ಟು ಮನೆ ಒಳ ಕೂರ್ಸಿ ಸಮ್ಮಾನ ಮಾಡ್ತೆನ್ನೆ..”
ಅವು ಹೇಳಿದ ಆ ಮಾತು ಸುಶೀಲಂಗೆ ಕೇಳಿತ್ತು.
ಎನ್ನಂದಾಗಿ ಅಣ್ಣ ಹೇಂಗಿದ್ದ ಮಾತುಗಳ ಕೇಳೆಕಾವ್ತು ಹೇಳಿ ಸಂಕಟ ಆತದಕ್ಕೆ. ಮದ್ಲಾಣ ಸುಶೀ ಆಗಿದ್ದರೆ ಅಂಬಗಳೇ ಅವರತ್ರೆ ಹೋಗಿ ಪೆದಂಬು ಮಾತಾಡ್ತಿತು. ಆದರೆ ಈಗ ಹಾಂಗಲ್ಲ.
ಜನರ ಮೋರೆ ನೋಡ್ಲೆ ಹೆದರಿಕೆ ಅದಕ್ಕೆ. ಎನ್ನಂದಾಗಿ ಮನಗೆ ಕೆಟ್ಟ ಹೆಸರು ಬಂತು, ಅಪ್ಪ° ಪ್ರಾಣವನ್ನೇ ಕೊಟ್ಟವು. ಅಬ್ಬಗೆ ಪ್ರೀತಿಯೇ ಇಲ್ಲೆ..ಆದರೆ ಅಣ್ಣ!!
ಅವ° ಹಾಂಗಲ್ಲ, ಕೂಸು ನೋಡ್ಲೆ ಹೋದಿಪ್ಪಗ ಕೂಸಿನತ್ರೆ ಎಂತಾರು ಮಾತಾಡ್ಲಿದ್ದಾ ಕೇಳಿದ್ದಕ್ಕೆ ಅದರತ್ರೆ ಕೇಳಿದ್ದು ಒಂದೇ ಮಾತಾಡ.
“ಎನ್ನ ತಂಗೆಯೂ, ಎರಡು ಮಕ್ಕಳು ಇದ್ದವು ಮನೆಲಿ. ಯಾವ ಕಾರಣಕ್ಕೂ ಅವರ ಕಣ್ಣಿಲ್ಲಿ ನೀರು ಬಪ್ಪ ಹಾಂಗಪ್ಪಲಾಗ. ಜೀವನಲ್ಲಿ ತುಂಬ ಕಷ್ಟ ಬಂದ ತಂಗಗೆ ಮಕ್ಕಳೊಟ್ಟಿಂಗೆ ನೆಮ್ಮದಿಯ ಬದ್ಕು ಸಿಕ್ಕೆಕು. ಇದು ಅಕ್ಕು ಹೇಳಿ ಆದರೆ ಮಾತ್ರ ಎನ್ನ ಮದುವೆಪ್ಪಲೆ ಒಪ್ಪಿರೆ ಸಾಕು” ಹೇಳಿದ್ದಾಡ°. ಅಕ್ಕ° ಬಂದು ಈ ಮಾತು ಹೇಳಿಯಪ್ಪಗ ಸುಶೀಲಂಗೆ ಕಣ್ಣೀರು ತಡವಲೇ ಎಡಿಗಾಯಿದಿಲ್ಲೆ.
ಅವನ ಪ್ರೀತಿಗೆ ಬೆಲೆ ಕಟ್ಲೆ ಎಡಿಯ. ಹೀಂಗಿದ್ದ ಅಣ್ಣ ಸಿಕ್ಕೆಕಾರೆ ಪುಣ್ಯ ಮಾಡೆಕು. ಬದ್ಧ ಕಳುದ ಮರದಿನವೇ ಅಬ್ಬೆ ಇಲ್ಲದ್ದ ಹೊತ್ತು ನೋಡಿ ಐವತ್ತು ಸಾವಿರ ರುಪಾಯಿ ತಂದು ಕೊಟ್ಟ°.
“ನಿನ್ನ ಮದುವಗೆ ಹೇಳಿ ಚಿನ್ನ ತೆಗದ್ದಿಲ್ಲೆ. ಈಗ ನೀನು ಬೇಡ ಹೇಳ್ತೆ. ಆದರೂ ಈ ಪೈಸೆ ನಿನ್ನ ಕೈಲಿರ್ಲಿ. ಒಂದೇ ಮನೆಲಿದ್ದರೂ ಕೆಲವು ಸರ್ತಿ ಎನಗೆ ಅಬ್ಬೆಯ ಮನಸಿಂಗೆ ಬೇಜಾರ ಮಾಡ್ಲೆ ಮನಸ್ಸು ಬತ್ತಿಲ್ಲೆ. ಹಾಂಗಾಗಿ ಪೈಸೆ ತಂದು ಕೊಟ್ಟದು. ಎಂತ ಬೇಕೋ ಅದರ ತೆಗೆ.ಹೀಂಗೆ ಬೋಳು ಕೊರಳಿಲ್ಲಿ ನಿನ್ನ ನೋಡ್ಲೆಡಿತ್ತಿಲ್ಲೆ”
ಅಂಬಗಳೂ ಅದರ ಹೃದಯ ತುಂಬಿ ಬಯಿಂದು. ಈ ಪ್ರೀತಿಗೆ ಬೆಲೆ ಕಟ್ಲೆಡಿಗೋ.. ಎಂಥಾ ತಪ್ಪು ಮಾಡಿದೆ ಆನು. ವಜ್ರದ ತುಂಡು ಕೈಲಿಪ್ಪಗ ಅದರ ಬೆಲೆ ಗೊಂತಿಲ್ಲದ್ದೆ ಬರೀ ಕುಪ್ಪಿಚ್ಚೂರು ಕಂಡು ಕೈಲಿಪ್ಪ ವಜ್ರ ಇಡ್ಕಿಕ್ಕಿ ಅದರ ಹಿಂದಂದ ಹೋದ್ದು..
ಅವ° ಪೈಸೆ ತಂದು ಕೊಟ್ಟದು ಹಾಂಗೇ ಇದ್ದು. ಎಂತದೂ ತೆಗವಲೆ ಮನಸ್ಸು ಬತ್ತಿಲ್ಲೆ. ಒಪ್ಪಕ್ಕಂಗೆ ಬೇಕಾದ್ದೆಲ್ಲ ತೆಗದು ಕೊಟ್ಟಿದ°.
ಎರಡು ಪವನಿನ ಒಂದೇ ಹಾಂಗಿದ್ದ ನಾಲ್ಕು ಚೈನು ಮಾಡ್ಸಿ ಎಲ್ಲದಕ್ಕೂ ಒಂದೇ ಹಾಂಗಿದ್ದ ಕೃಷ್ಣ ದೇವರ ಪಟ ಇಪ್ಪ ಪದಕವನ್ನು ಮಾಡ್ಸಿ ಅದರಲ್ಲಿ ಮಕ್ಕಳ ಹೆಸರು ಬರದು ಶೈಲನ ಎರಡು ಮಕ್ಕೊಗೂ ,ಸುಶೀಯ ಮಕ್ಕೊಗೂ ಕೊಟ್ಟ°.
ಆ ಪದಕ ಎಷ್ಟು ಚಂದ ಇದ್ದತ್ತು ಹೇಳಿರೆ ಫಳಫಳ ಹೊಳಕ್ಕೊಂಡಿದ್ದತ್ತು. ಶೈಲನ ಮಕ್ಕೊಗೂ ಮಾಡ್ಸಿದ ಕಾರಣ ಶಾರದಕ್ಕ ಹೆಚ್ಚೆಂತದೂ ಹೇಳಿದ್ದವಿಲ್ಲೆ. ಅಂದರೂ
“ಸುಶೀಯ ತಲೆಲಿ ಹೊರುದು ರಜ ಹೆಚ್ಚಿಗಾವ್ತು. ಮನ್ನೆ
ಒಂದು ತೆಗದ್ದಷ್ಟೆ. ಈಗ ಪುನಾ ಮಾಡ್ಸಿದ್ದಾ?” ರಜ ಅಸಮಧಾನಲ್ಲಿ ಹೇಳಿದವು.
“ಇರ್ಲಿ ಅಬ್ಬೇ. ಅದಕ್ಕೆ ಮತ್ತೆ ಆರು ತೆಗದು ಕೊಡ್ತವು? ಕೂಸಲ್ಲದಾ,ಚಿನ್ನ ಇರ್ಲಿ. ಅಪ್ಪ ಮಾಡಿ ಮಡುಗಿದ ಆಸ್ತಿಲಿ ಅದಕ್ಕೂ ಪಾಲಿಲ್ಲೆಯಾ..ಎಲ್ಲ ಎನಗೊಬ್ಬಂಗೆಯಾ…” ರಜಾ ಕುಶಾಲು ಸೇರ್ಸಿ ಹೇಳಿ ಅಬ್ಬೆಯ ಸಮದಾನ ಮಾಡಿದ°. ಶಾರದಕ್ಕ ಮತ್ತೆಂತದೂ ಹೇಳದ್ದೆ ಎದ್ದಿಕ್ಕಿ ಹೋದವು.
ಮದುವೆಗೆ ಇನ್ನು ಒಂದೇ ವಾರ ಇಪ್ಪದು. ಶೈಲನು ಮಕ್ಕಳ ಕರಕ್ಕೊಂಡು ಅಪ್ಪನಮನಗೆ ಬಂತು. ಸೀರೆಯ ರವಕ್ಕೆ ಹೊಲುಶಿ ತಂದದರ ಎಲ್ಲ ಸರಿಯಾಗಿ ಜೋಡ್ಸಿ ಮಡುಗುದು. ಮಂಗಲಜವುಳಿ,ಕರಿಮಣಿ ಎಲ್ಲ ಮದುವೆಗೆ ಹೋಪಗ ಜಾಗ್ರತೆಲಿ ಕೊಂಡೋಪ ಹಾಂಗೆ ಸೂಟುಕೇಸು ಪೆಟ್ಟಿಗೆಲಿ ಮಡುಗುದು. ಸಟ್ಟುಮುಡಿಗೆ ಮನೆಲಿ ಆಯೆಕಾದ ವೆವಸ್ಥೆ ಬಗ್ಗೆ ಎಲ್ಲರಿಂಗು ಸರಿಯಾಗಿ ಹೇಳಿ ಗೊಂತು ಮಾಡ್ಸುದು. ಅರೆಬರೆ ಒಳುದ ಕೆಲಸಂಗಳ ಎಲ್ಲ ನೇರ್ಪ ಒತ್ತರೆ ಮಾಡ್ಲೆ ಹೇಳುದು ಹೇಳಿ ಅದಕ್ಕೆ ಸುಮಾರು ಕೆಲಸಂಗೊ. ಅದರ ಎಡೇಲಿ ಕೂಡ ಸುಶೀಲನ ಹೊಡೆಂಗೂ ಗಮನ ಕೊಟ್ಟುಕೊಂಡಿದ್ದತ್ತು.
ಅಪ್ಪನಮನೆಲಿ ಇಷ್ಟು ಗೌಜಿ ಅಪ್ಪಗ ತಳಿಯದ್ದೆ ಉಗ್ರಾಣದೊಳ ಕೂರೆಕಾಗಿ ಬಂತನ್ನೇ ಸುಶೀಗೆ ಹೇಳಿ ಬೇಜಾರ ಅದಕ್ಕೆ. ಆದರೆ ಅದು ಅಗತ್ಯ, ಅನಿವಾರ್ಯ ಎರಡೂ ಆಗಿದ್ದತ್ತು. ಈಗಲೇ ಅದರ ಮರ್ಯಾದೆ ಹೋಗಿ ಆಯಿದು. ನಾಕು ಜೆನ ಸೇರುವಲ್ಲಿ ಅದು ಹೆರ ಬಂದರೆ ಅದರ ಮನಸಿಂಗೆ ಮತ್ತಷ್ಟು ಬೇಜಾರಪ್ಪ ಹಾಂಗೆ ಮಾತಾಡುವವು ಮಾಂತ್ರ ಸಿಕ್ಕುಗಷ್ಟೆ.
ನಾಂದಿಯ ಮುನ್ನಾಳದಿನ ಹೊತ್ತೋಪಗ ಶಾರದಕ್ಕ ಹಾಲು ಕರವಲೆ ಹಟ್ಟಿಗೆ ಹೋಗಿ ,ಕರದಿಕ್ಕಿ ಬಪ್ಪಗ ಹಿಂದಂದ ಆರೋ ದಿನಿಗೇಳಿದಾಂಗಾಗಿ ತಿರುಗಿ ನೋಡಿದವು.
“ಮಗನ ಮದುವೆ ನಿಗಂಟು ಮಾಡಿಕ್ಕಿ ಎಂಗೊಗೆ ಹೇಳಿಕೆ ಹೇಳಿದ್ದೇಯಿಲ್ಲೆ ನಿಂಗೊ. ಅಂದರೂ ಎಂಗೊಗೂ ಇಲ್ಲೊಂದು ಹಕ್ಕಿದ್ದನ್ನೇ. ಹಾಂಗಾಗಿ ಹೇಳಿಕೆಗೆ ಕಾಯದ್ದೆ ಬಂದೆಯ°”
ಶಾರದಕ್ಕಂಗೆ ಅವರ ಕಂಡಪ್ಪಗ ತಲೆತಿರುಗುವ ಹಾಂಗಾತು. ಮನಸ್ಸಿನ ಕೋಪ ಹೊತ್ತಿ ಉರುದತ್ತು.
“ನಿನಗೆ ಹೇಳಿಕೆ ಅಲ್ಲ..ಅಲ್ಲಿಂದ ಮುಂದೆ ಬಂದರೆ ಕಟ್ಟಿದ ನಾಯಿಯ ಬಿಡುವೆ. ನಿಂಗಳ ಹಕ್ಕು,! ಎಂತ ಇದ್ದಿಲ್ಲಿ ನಿಂಗೊಗೆ!!” ಅವರ ಸ್ವರ ಕೋಪಲ್ಲಿ ನಡುಗಿಂಡಿದ್ದತ್ತು.
“ನಿಂಗೊ ಹಾಂಗೆ ಹೇಳಿರೆ ಹೇಂಗೆ. ಎಲ್ಲಿದ್ದ° ಮದಿಮ್ಮಾಯ? ಶೈಲ ,ಅಳಿಯ ° ಎಲ್ಲ ಬಯಿಂದವಿಲ್ಯಾ? ಅವರ ಹಾಂಗೆ ಅಲ್ಲದೊ ಎಂಗಳೂದೆ”
ಹೆರ ಅಬ್ಬೆ ಆರತ್ರೆ ಹೀಂಗೆ ದೊಡ್ಡಕೆ ಮಾತಾಡುದು ಹೇಳಿ ಉಗ್ರಾಣದ ಗಿಳಿಬಾಗಿಲ್ಲೇ ಬಗ್ಗಿ ನೋಡಿದ ಸುಶೀಲಂಗೆ ಕಂಡದು ಬೆಳಿ ತಲೆಕಸವಿನ ,ಕೆರಕ್ಕಟೆ ಹಲ್ಲಿನ ಸೊಂಟ ಬಗ್ಗಿದ ತಂಗಮ್ಮನೂ,ಅದರೊಟ್ಟಿಂಗೆ ಹೆಗಲಿಂಗೊಂದು ಬೇಗು ನೇಲ್ಸಿಂಡು ನಿಂದ ದಿನೇಸನೂ…….!!!!!!!
“ಅಯ್ಯೋ…. ದೇವರೇ ..ಇನ್ನೂ ಎನ್ನ ಕಷ್ಟ ಮುಗುದ್ದಿಲ್ಯಾ? ಎನ್ನಂದಾಗಿ ಅಪ್ಪನಮನೆಯವರ ಮರ್ಯಾದೆ ಹೋದ್ದು ಮಾತ್ರ ಅಲ್ಲ..ಈಗ ಇದಾ….ಎಂಥಾ ಕಷ್ಟ ತಂದು ಹಾಕಿದ ಹಾಂಗಾತು.! ಮದುವೆ ವಿಶಯ ಗೊಂತಾಗಿ ಬಂದದಾದಿಕ್ಕು. ಅಲ್ಲದ್ರೆ ಆನಿಲ್ಲಿ ಇದ್ದೇಳಿ ಗೊಂತಾಗಿ ಬಂದದು ಪಿಶಾಚಿಗೊ. ಇವು ಎನ್ನ ಎಲ್ಲಿಗೆ ಹೋದರೂ ಬದ್ಕುಲೆ ಬಿಡ್ತವಿಲ್ಲೆನ್ನೇ..ಅಯ್ಯೋ….ಎನ್ನ ಒಂದು ತಪ್ಪಿಂದಾಗಿ ಎಂಥಾ ಸಂಕಷ್ಟ ಬಂತು ಅಪ್ಪನಮನೆಯವಕ್ಕೆ.
ಅಂದು ಸ್ವಯಂವರ ಹೇಳಿ ಅದರೊಟ್ಟಿಂಗೆ ಓಡುಗ ಎಷ್ಟು ಕೊಶಿಯಾಯಿದು. ಕೆಸರಿನ ಹೊಂಡಕ್ಕೆ ಬಿದ್ದ ಮತ್ತೆ ಗೊಂತಾದ್ದಷ್ಟೆ ಇದು ಕೆಸರು ಹೇಳಿ.!!
ಎನ್ನ ಹಾಂಗೆ ಸ್ವಂತ ಇಷ್ಟಲ್ಲಿ ಚಂದ ಕಂಡವರೊಟ್ಟಿಂಗೆ ಹೋಪ ಕೂಸುಗೊಕ್ಕೆ ಪಾಠ ಎನ್ನ ಬದ್ಕು.
ದಿನೇಸ ಎನ್ನ ಕಂಡ್ರೆ ಈಗಲು ಬಿಡ. ಅವಕ್ಕೆ ಇಲ್ಯಾಣ ಆಸ್ತಿಲಿ ಕಣ್ಣು. ಎಂಥಾ ಅಸಹಾಯಕತೆ ದೇವರೇ…ಅಣ್ಣ ಪೇಟಗೂ ಹೋಯಿದ°. ಆಳುಗೊ ಆರೂ ಇಷ್ಟು ಹೊತ್ತಿಂಗೆ ಇರ್ತವಿಲ್ಲೆ. ಈ ಪಿಶಾಚಿಗೊ ಎನ್ನ ಜೀವನಕ್ಕೆ ಅಂಟಿದ್ದವು. ಅವರಿಂದ ಬಿಡುಗಡೆ ಹೇಳಿರೆ ಸಾವದು ಮಾತ್ರ ದಾರಿಯಾ..!! ಈ ಮಕ್ಕಳ ಎಂತ ಮಾಡುದು!!
ಮದುವೆ ದಿನ ಇವು ಇಲ್ಲಿ ಕಾರ್ಬಾರು ಮಾಡ್ಲೆ ಹೆರಟ್ರೆ ಆರಾರು ಎಂತ ಹೇಳುಗು?
ದಿನೇಸನ ಇಲ್ಲಿ ಕಂಡ್ರೆ ನೆರೆಕರೆಯವು,ನೆಂಟ್ರು ಇಲ್ಲಿಗೆ ಬಕ್ಕಾ..ಖಂಡಿತ ಬಾರವು.ಇಷ್ಟು ಬಂಙ ಬಂದ ಅಣ್ಣನ ಬದುಕು ಎನ್ನಂದಾಗಿ ಹಾಳಕ್ಕು…..! ಸುಶೀಯ ಮನಗೆ ಕರಕ್ಕೊಂಡು ಬಂದದೇ ತಪ್ಪು ಹೇಳಿದ್ದವು. …….ಆನು ಇವರ ಕಣ್ಣಿಂಗೆ ಜೀವಂತ ಕಾಂಬಲಾಗ. ಆನಿದ್ದರಲ್ಲದ ಇವಕ್ಕೆ ಇಷ್ಟು ಸಸಾರ….!! ಅದರ ಆಲೋಚನೆಗೊಕ್ಕೆ ತಲೆಬುಡ ಇಲ್ಲದ್ದ ಹಾಂಗಾತು. ಬೇಕಾದ್ದು, ಬೇಡದ್ದು ಹೇಳಿ ಒಂದೇ ಬಿಟ್ಟಿಂಗೆ ಸಾವಿರಾರು ಯೋಚನೆಗೊ ಬಂದಪ್ಪಗ ಗಿಳಿಬಾಗಿಲಿನ ದಳಿ ಹಿಡ್ಕೊಂಡು ನಿಂದ ಅದರ ಕೈ ಅಲ್ಲಿಂದ ಬಿಟ್ಟು ಹೋಗಿ ಹಿಂದಂಗೆ ಮೊಗಚ್ಚಿತ್ತು ಸುಶೀಲ°.
ಹೆರ ದಿನೇಸನೂ, ತಂಗಮ್ಮನೂ ಒಳಾಂಗೆ ಬಪ್ಪಲೆ ಲಡಾಯಿ ಕೊಟ್ಟುಕೊಂಡಿಪ್ಪ ಕಾರಣ ,ಅವರ ಅಲ್ಲಿಂದ ಹೇಂಗಾರು ಓಡ್ಸೆಕು ಹೇಳಿ ಪಂಥಕಟ್ಟಿ ಹೆರಟ ಶಾರದಕ್ಕಂಗೂ,ಅಬ್ಬೆಯೊಟ್ಟಿಂಗೆ ಇದ್ದ ಶೈಲಂಗೂ ಒಳ ಎಂತಾತೂಳಿ ಗೊಂತೇ ಆಯಿದಿಲ್ಲೆ.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಕತೆಗೆ ಒಂದು ಹೊಸ ತಿರುವು ಬಂತನ್ನೇ.
ಅದಾ, ವಿಲನ್ ಎರೆಪ್ಪು ದಿನೇಸ ಬಂದೇ ಬಿಟ್ಟತ್ತಾನೆ.!! ಇನ್ನು ಅದರಿಂದಾಗಿ ಮದುವೆ ನಿಲ್ಲದ್ರೆ ಸಾಕು. ಅಂತು ಈ ಸುಶೀಲನ ಅವಸ್ಥೆ ನೋಡುವಾಗ ಬೇಜಾರಾವ್ತು. ಕತೆಲಿ ಹೊಸ ತಿರುವು ಬಂದು ಕತೆ ರೈಸಿತ್ತು. ಮುಂದುವರಿಯಲಿ ಪ್ರಸನ್ನಕ್ಕಾ.
ಛೇ ಸುಶೀಲಂಗೆ ಮತ್ತೆ ಫಿಟ್ಸು ಸುರುವಾತಾ ಹೇಂಗೆ?ಕೇಶವನ ಮದುವೆ ನಡೆತ್ತೋ ಇಲ್ಲೆಯೋ?ಗೊಂತಾಯಕ್ಕಾರೆ ಬಪ್ಪ ವಾರದ ವರೆಗೆ ಕಾಯಕ್ಕನ್ನೇ.ಸುಶೀಲನ ಜೀವನ ಸರಿಯಾಗಲಿ ದೇವರೇ.
ದಿನೇಶನನ್ನೂ ತಂಗಮ್ಮನನ್ನೂ ಪೋಲೀಸರು ತೆಕ್ಕೊಂಡು ಹೋಗಲಿ.
Susheelana kasta ella mugudathu. Innu adake hosa jeevana sikkithu heliyappaga punaha adara jeevana adimelappa sandarbha bantanne…. Inneega adake saavadonde daariya? Appana maneya runa , bhoomi ya runa ellavu theeritha? Paapigoke shikshe ayekku.. hangeye sanna prayada koosina marulu madi adara jeevana budamelu madida Dineshangu adara ammangu thakka shikshe ayekku.. mundina sanchike khanditha kuthoohalakaari agirtu.. greshadda thiruvu katheli.. adbhutha..
ಹೋದೆಯಾ ಪಿಶಾಚಿ ಹೇಳಿರೆ ಬಂದೆಯ ಗವಾಕ್ಷಿಯಲ್ಲಿ…ಹೇಳಿ ಆತನ್ನೆ..ಪಾಪಿ ಹೋದಲ್ಲಿ ಮೊಣಕಾಲು ನೀರು… ಈ ಸುಷಿಯ ಇಲ್ಲಿಗೂ ಬಂದು ಮರ್ಯಾದಿ ತೆಗತ್ತವನ್ನೆ.. ಛೆ ಬಿದ್ದ ಸುಷಿಗೆ ಎಂತಾತೋ… ಅದರ ಮಕ್ಕೊಗೆ ಇಲ್ಲಿ ಒಳ್ಳೆ ಭವಿಷ್ಯ ಸಿಕ್ಕುಗು ಹೇಳಿ ಆಶೆ ಇತ್ತು…ಆದರೆ ಕೆಟ್ಟ ಮನುಷ್ಯರು ಇಲ್ಲಿಗೂ ಬರೆಕ್ಕಾ…ಹೆಂಗೆ ಈ ಪ್ರಾಬ್ಲಮ್ ಸಾಲ್ವ್ ಅಕ್ಕು…ಕುಪ್ಪಿ ಚೂರಿನ ವಜ್ರ ಹೇಳಿ ಗ್ರೈಸಿದ್ದು …ಒಳ್ಳೆ ಒಂದು ಬುದ್ದಿ ಮಾತು..ದೇವರೇ ಕಾಪಾಡಲಿ ಸುಶಿಯ… ಕಳದು ಹೋದ ಕಷ್ಟ ಮರದು ಪಶ್ಚಾತ್ತಾಪದ ಬೆಗೆಲಿ ಬೆಂದು ಅಬ್ಬೇ ದೂರ ಮಾಡಿರು ಒಂದು ರಜಾ ಸಂತೋಷ ಇತ್ತು ಸುಶಿಗೆ ಅಣ್ಣನ ಪ್ರೀತಿಂದ…ಈಗ ಇನ್ನೂ ಹೆಂಗೋ ದೇವರೇ ಬಲ್ಲ…ಅದಕ್ಕೆ ಇನ್ನೂ ಒಂದು ಕಷ್ಟ ಕೊಟ್ಟೆಯ…ಇನ್ನೂ ಸಹಿಸುವ ಶಕ್ತಿ ಅದಕ್ಕೆ ಇಲ್ಲೆ…ಓದುವಾಗ ಬೇಜಾರು ಆವುತ್ತು ಪ್ರಸನ್ನ….ಸುಷಿಗೆ ಹಿಡುದ ಎಲ್ಲ ಗ್ರಹಚಾರ ತೊಳದಿಕ್ಕಿ ಅದಕ್ಕೆ ಒಳ್ಳೇದು ಮಾಡುವ ಶೈಲಿಲಿ ಕಥೆ ಹೋವುತ್ತ ಇದ್ದು… ಸೂಪರ್