ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉 ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.