Oppanna.com

ಸ್ವಯಂವರ ಭಾಗ 48-ಪ್ರಸನ್ನಾ ವಿ ಚೆಕ್ಕೆಮನೆ

ಸ್ವಯಂವರ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   11/05/2020    4 ಒಪ್ಪಂಗೊ

ಸ್ವಯಂವರ ಭಾಗ 48

ಉದಿಯಪ್ಪಾಣ ತಂಪುಗಾಳಿ ಮೋರಗೆ ಬಡುದಪ್ಪಗ ಸುಪ್ರಿಯಂಗೆ ಎಚ್ಚರಿಕೆ ಆತು. ಫಕ್ಕನೆ ಎದ್ದು ಕೂದಪ್ಪಗಳೇ ಅದಕ್ಕೆ ಇಂದು ಅತ್ತೆಮನೆಲಿ ಇಪ್ಪದು ಹೇಳಿ ನೆಂಪಾದ್ದು.

ಇರುಳು ಸುಮಾರು ಹೊತ್ತು ಮಾವ ಹೇಳುವ ಹಳೆಕತೆಗಳ ಎಲ್ಲ ಕೇಳಿಂಡು, ಅತ್ತೆ ಹತ್ತರೆ ಅದೂ ಇದೂ ಮಾತಾಡಿಂಡು ಕೂದ ಕಾರಣ ಒರಗುಗ ರಜ ತಡವುದೆ ಆಯಿದು. ಸುದೀಪ ಹೆಚ್ಚು  ಮಾತಾಡ್ಲೆ ಬಾರದ್ದ ಕಾರಣ ಅವನತ್ರೆ ಸರಿಯಾಗಿ ಮಾತಾಡ್ಲೂ ಆಯಿದಿಲ್ಲೆ ಅದಕ್ಕೆ.

“ಅವಂಗೆ ಎಂತೋ ಕಂಪ್ಯೂಟರಿಲ್ಲಿ ಕೆಲಸ ಇದ್ದಾಡ” ಹೇಳಿದವು ಅತ್ತೆಯುದೆ. ಅವ° ಇಪ್ಪಲ್ಲಿಗೆ ಹೋಗಿ ಮಾತಾಡ್ಲೆ ಇದಕ್ಕೂ ಲಾಯ್ಕ ಆಯಿದಿಲ್ಲೆ.

“ಚಪಾತಿ ಮಾಡುವ°. ಆನು ಲಟ್ಟಿಸಿ ಕೊಡ್ತೆ ಅತ್ತೇ” ಹೇಳಿ ಮುನ್ನಾಣ ದಿನವೇ ಅತ್ತೆ ಎಂತರ ತಿಂಡಿ ಮಾಡುದು ಹೇಳಿ ಕೇಳಿಯಪ್ಪಗ ಸುಪ್ರಿಯ ಹೇಳಿದ್ದತ್ತು.

“ಓಹ್… ಒಳ್ಳೆದಾತು. ಇಲ್ಲಿ ನಿನ್ನ ಮಾವಂಗೂ,ಸುದೀಪಂಗೂ ಇಬ್ರಿಂಗೂ ಅದು ಭಾರೀ ಪ್ರೀತಿ ಆತಾ. ಎನಗೆ ಉದಿಯಪ್ಪಗಳೇ ಬಾಕಿ ಕೆಲಸದೊಟ್ಟಿಂಗೆ ಅದರ ಲಟ್ಟಿಸಿಕೊಂಡು ಬೇಗ ಬೇಗ ಮಾಡ್ಲೆ ಪೂರೈಸುತ್ತಿಲ್ಲೆ” ಹೇಳಿ ಅತ್ತೆ ಕೊಶೀಲಿ ಹೇಳುಗ ಸುದೀಪನ ಇಷ್ಟಂಗಳ ಅತ್ತೆ ಹತ್ತರೆ ಕೇಳಿ ತಿಳ್ಕೊಂಡ್ರೆ ಮುಂದಂಗೆ ಒಳ್ಳೆದು ಹೇಳಿ ಜಾನ್ಸಿತ್ತು ಅದೂದೆ.

“ಅತ್ತೆ ಆಗಳೇ ಎದ್ದಿದವೋ ಏನೋ..ಒಳ್ಳೆ ಒರಕ್ಕು ಬಂದು ಉದಿಯಾದ್ದು ಗೊಂತಾಯಿದಿಲ್ಲೆ” ಹೇಳಿ ಸಣ್ಣಕೆ ಹೇಳಿಂಡೇ ಬೇಗ ಎದ್ದು ಹೆರ ಬಂತು. ಆರು ಗಂಟೆಗೆ ಇನ್ನೂ ಹತ್ತು ನಿಮಿಷ ಇದ್ದ ಕಾರಣ ತಡವಾಯಿದಿಲ್ಲೆ ಹೇಳಿ ರಜ್ಜ ಸಮದಾನ ಆತು.

“ಬೇಗ ಎದ್ದೆಯಾ? ಆರೂವರೆ ಕಳುದು ಎದ್ದರೆ ಸಾಕಾವ್ತಿತು” ಅತ್ತೆಯ ಮಾತು ಕೇಳಿ ಕೊಶೀ ಆತು.

“ಆನು ಯಾವಗಲು ಇಷ್ಟೊತ್ತಿಂಗೆ ಏಳ್ತೆ ಅತ್ತೇ…..ಈಗ ಎಂತ ಮಾಡೆಕು ಹೇಳಿ ಮದಾಲು?” ಸುಪ್ರಿಯ ಕೆಲಸ ಮಾಡ್ಲೆ ಉತ್ಸಾಹಲ್ಲಿ ಹೆರಟತ್ತು‌ .
“ಗೋಧಿ ಹೊಡಿ ಇಲ್ಲಿದ್ದು. ಗಸಿ ಮಾಡ್ಲೆ ನಿನ್ನೆ ಬಟಾಣಿ ಬೊದುಳ್ಲೆ ಹಾಕಿದ್ದೆ. ನೀನು ಹಿಟ್ಟು ಕಲಸಿಯಪ್ಪಗ ಆನು ಎತ್ತುವೆ. ತೆಂಗಿನಕಾಯಿ ಇಲ್ಲಿದ್ದು. ಮತ್ತೆ ನಿನಗೆ ಬೇಕಾದ್ದೆಲ್ಲ ಹುಡ್ಕಿ ತೆಕ್ಕೋ. ಆನು ಬೇಗ ಕರದಿಕ್ಕಿ ಬತ್ತೆ” ಅತ್ತೆ ಸಾಮಾನೆಲ್ಲ ಎಲ್ಲಿಪ್ಪದು ಹೇಳಿಕ್ಕಿ ಹೋದ ಮತ್ತೆ ಸುಪ್ರಿಯ ಒಬ್ಬನೇ ಎಲ್ಲಾ ಕೆಲಸ ಮಾಡಿತ್ತು.

ಚಪಾತಿ, ಗಸಿ ಎಲ್ಲ ಒಬ್ಬನೇ ಮಾಡಿಯಪ್ಪಗ ಅದರ ಮನಸಿಂಗೆ ಹೇಳ್ಲೆಡಿಯದ್ದಷ್ಟು ಸಂತೋಷ. ಇಷ್ಟರವರೆಗೆ ಒಬ್ಬನೇ ಹೀಂಗೆ ಕೆಲಸ ಮಾಡಿದ ಅನುಭವ ಇಲ್ಲೆ ಅದಕ್ಕೆ. ರಜೆಲಿ ಮನಗೆ ಬಂದರೆ ಅಬ್ಬೆಯೊಟ್ಟಿಂಗೆ ಸೇರಿ ಕೆಲಸ ಮಾಡಿ ಗೊಂತಿದ್ದ ಕಾರಣ ಬಂಙ ಆಯಿದೂ ಇಲ್ಲೆ.

“ಆನು ಹಟ್ಟಿಂದ ಬಪ್ಪಗ ನಿನ್ನ ಕೆಲಸ ಎಲ್ಲ ಆತೋ?ಗಸಿಯ ಪರಿಮ್ಮಳ ಆ ತಲೇಂಗೆ ವರೆಗೆ ಬತ್ತನ್ನೇ..” ಅತ್ತಗೂ ಸೊಸೆಯ ಕೆಲಸದ ಚುರುಕುತನ ತೃಪ್ತಿ ಆತು. ಅಣ್ಣನ ಮಗಳು ಮನೆಕೆಲಸಲ್ಲಿ ಉಶಾರಿದ್ದು. ಒಂದೇ ಮಗಳು ಹೇಳಿ ಅತ್ತಿಗೆ ಹೆಚ್ಚು ಕೊಂಗಾಟ ಮಾಡಿದ್ದಿಲ್ಲೆ.

ಎಲ್ಲ ಮಾಡಿ ಮುಚ್ಚಿ ಮಡುಗಿ ಸ್ಟೌನ ಎಲ್ಲ ಲಾಯ್ಕ ಉದ್ದಿ ಒತ್ತರೆ ಮಾಡಿ ಮಡುಗಿತ್ತದು. ಮಾವ ಎದ್ದು ತೋಟಕ್ಕೆ ಹೋಯಿದವು ಹೇಳಿ ಗೊಂತಾತು ‌. ಸುದೀಪ ಇನ್ನೂ ಎದ್ದಿದನೋ ಇಲ್ಯೋ ಹೇಳಿ ಅಂದಾಜಾಯಿದಿಲ್ಲೆ ಅದಕ್ಕೆ. ಒಂದರಿ ಅವನತ್ರೆ ಮಾತಾಡೆಕು. ಇಬ್ರ ನಡುವೆ ಇಪ್ಪ ಯಾವುದೋ ಕಾಣದ್ದ ಪರದೆಯ ದೂರ ಮಾಡೆಕು ಹೇಳಿ ಇದ್ದತ್ತು. ಆದರೆ ಅವ ಸರಿಕಟ್ಟಾಗಿ ಸಿಕ್ಕಿದ್ದನೂ ಇಲ್ಲೆ. ಸಿಕ್ಕಿಯಪ್ಪಗ ಬೇರೆಂತೋ ಮಾತಾಡಿ ವಿಷಯ ಬದಲಿತ್ತುದೆ.

“ಆನು ಪೂಜೆ ಸಾಹಿತ್ಯ ಮಾಡ್ಲೆ ಹೋವ್ತೆ ಮೋಳೇ. ಸುದೀಪ  ಬಂದರೆ ಕಾಪಿಕೊಡು, ಮಾವ ಹೇಂಗೂ ಪೂಜೆ ಆಗದ್ದೆ ಕಾಪಿ ಕುಡಿಯವು. ನೀನುದೆ ಅವನೊಟ್ಟಿಂಗೆ ಕಾಪಿ ಕುಡಿ. ಬೇಗ ಹೋಯೆಕನ್ನೆ ” ಅತ್ತೆಯ ಮಾತು ಕೇಳಿಯಪ್ಪಗ ಮನಸಿನ ಮೂಲೆಲಿಪ್ಪ ನವಿಲು ಗರಿ ಬಿಡ್ಸಿದಷ್ಟು ಕೊಶಿಯಾತು ಸುಪ್ರಿಯಂಗೆ.

“ಅಬ್ಬೇ…ಕಾಪಿಗೆಂತ ಮಾಡಿದ್ದೇ…” ಕೇಳಿಂಡು ಒಳ ಬಂದ ಸುದೀಪಂಗೆ ಸುಪ್ರಿಯ ಬಟ್ಲು ಮಡುಗಿ ಬಳ್ಸಿಯಪ್ಪಗ ಆಶ್ಚರ್ಯವೂ, ಕೊಶಿಯೂ ಒಟ್ಟಿಂಗೆ ಆತು.

“ಬಣ್ಣ ಕಾಂಬಗಳೇ ಭಾರೀ ಲಾಯ್ಕ ಆದಾಂಗೆ ಕಾಣ್ತು…ನೀನೇ ಮಾಡಿದ್ದಾ…” ಅವನ ಪ್ರಶ್ನೆಗೆ ‘ಅಪ್ಪು’ ಹೇಳುವ ಹಾಂಗೆ ತಲೆ ಆಡ್ಸಿದ್ದಷ್ಟೆ.

“ಎಂತ ಮಾತಾಡ್ತಿಲ್ಲೆ.ಕೆಲಸ ಮಾಡಿ ಬಚ್ಚಿತ್ತಾ..ಅಬ್ಬೆ ಹೇಳಿತ್ತು ಎಲ್ಲಾ ಕೆಲಸ ನೀನೊಬ್ಬನೇ ಮಾಡಿದ್ದು ಹೇಳಿ. ಎಂತಾರು ಸಕಾಯ ಬೇಕಾರೆ ಎನ್ನತ್ರೆ ಹೇಳಿದ್ದರೆ ಆನು ಸೇರ್ತಿತಿಲ್ಯಾ..” ಅವನ ಪ್ರೀತಿಯ ಮಾತು ಕೇಳಿ ಅದರ ಕಣ್ಣು ತುಂಬಿ ಬಂತು.

“ನೀನುದೆ ಕೂರು..ಬಾ..ಅಬ್ಬೆ ಅಪ್ಪನ ಕಾದರೆ ಅಸಲಾಗ.ಅವು ಇಬ್ರೇ ಒಟ್ಟಿಂಗೆ ಪಟ್ಟಾಂಗ ಹೊಡಕ್ಕೊಂಡು ಕಾಪಿ ಕುಡಿಗು. ಅಪ್ಪಂಗೆ ಇರುವಾರಕ್ಕೆ ಬಳ್ಸಿಕ್ಕಿಯೇ ಅಬ್ಬೆ ಕೂರುಗಷ್ಟೆ. ಅವರೊಟ್ಟಿಂಗೆ ನಾವು ಕೂದು ರಸಭಂಗ ಮಾಡುದು ಬೇಡ….” ರಜಾ ಕುಶಾಲು ಮಾತಾಡಿಂಡು ಅವನ ಹತ್ತರೇ ಅದಕ್ಕೂ ಕೂಬಲೆ ಹೇಳಿದ.
ಅದಕ್ಕೂ ಉತ್ತರ ಕೊಡ್ಲೆ ಸ್ವರ ಹೆರಟಿದಿಲ್ಲೆ ಅದಕ್ಕೆ

“ಎಂತ ಮಾತಾಡ್ತಿಲ್ಲೆ. ಇಂದು ಸೋಮವಾರ ಮೌನವ್ರತವಾ….” ಅವ ಅದರ ಕೈ ಹಿಡುದು ಕೂಬಲೆ ಹೇಳಿಯಪ್ಪಗ ಅದಕ್ಕೆ ಕಣ್ಣೀರು ತಡವಲೇ ಎಡಿಗಾಯಿದಿಲ್ಲೆ. ಸುಮ್ಮನೆ ಮೇಜಿಂಗೆ ತಲೆ ಮಡುಗಿ ಚೂಡೀದಾರದ ಶಾಲಿಲ್ಲಿ ಕಣ್ಣುದ್ದಿತ್ತು.

“ಎಂತಾತು ನಿನಗೆ. ಕೂಗುವಷ್ಟು ಬೇಜಾರದ ಮಾತೆಂತಾರು ಹೇಳಿದನ ಆನು? ” ಅದರ ಕೈ ಹಿಡುದೇ ಕೇಳಿಯಪ್ಪಗ “ಇಲ್ಲೆ” ಹೇಳುವಾಂಗೆ ತಲೆ ಆಡ್ಸಿತ್ತು.

“ಮತ್ತೆಂತಾತು.ನಿನ್ನೆ ಬಂದ ಲಾಗಾಯ್ತು ನೋಡ್ತೆ,ಮನಸಿಲ್ಲಿ ಎಂತೋ ಬೇಜಾರ ಇದ್ದು” ಹೇಳಿದವನ ದೃಷ್ಟಿಗೆ ಅದರ ಕೈಲಿಪ್ಪ ಸಣ್ಣ ಗಾಯದ ಕಲೆ ಕಂಡತ್ತು.
“ಇದು ಅಂದು ನಾವು ಸೈಕಲಿಂದ ಬಿದ್ದಪ್ಪಗ ಆದ ಗಾಯವಾ.‌‌‌‌‌…..ಓಹ್ ಇನ್ನೂ ಇದ್ದಲ್ಲದಾ” ಹೇಳಿಯಪ್ಪಗ ಸುಪ್ರಿಯಂಗೆ ಸಣ್ಣಾದಿಪ್ಪಗ ನಡದ ಆ ಘಟನೆ ನೆಂಪಾಗಿ ನೆಗೆ ಬಂತು.

ಅಂದು ಸುದೀಪ ಅಜ್ಜನಮನೆಗೆ ಬಂದಿಪ್ಪಗ ಸುರೇಶನ ಸೈಕಲು ಮೆಟ್ಟಿ ಜಾಲಿಂಗೆ ಸುತ್ತು ಬಪ್ಪಗ ಸುಪ್ರಿಯಂಗೂ ಅವನೊಟ್ಟಿಂಗೆ ಸೈಕಲ್ ಲಿ ಕೂರೆಕೂಳಿ ಆತು. ಅದರನ್ನೂ ಕೂರ್ಸಿಂಡು ಸೈಕಲ್ ಮೆಟ್ಟುಗ ಮನೆ ನಾಯಿ ಸೈಕಲಿಂಗೆ ಅಡ್ಡ ಬಂತು. ಇಬ್ರೂ ಸೈಕಲ್‌ ನೊಟ್ಟಿಂಗೆ ಕೆಳಾಂಗೆ. ಸುಪ್ರಿಯನ ಕೈಲಿಪ್ಪ ಕುಪ್ಪಿ ಬಳೆ ಒಡದು ಅದರ ಕೈಗೆ ಮಾತ್ರ ರಜ ಗಾಯ ಆಗಿ ನೆತ್ತರು ಬಂದಿತ್ತು. ಅದು ಕೂಗಿರೆ ದೊಡ್ಡವರ ಕೈಂದ ಬೈಗಳು ಸಿಕ್ಕುಗು ಹೇಳಿ ಅದರ ಕೊಂಗಾಟ ಮಾಡಿ,ಮುದ್ದು ಮಾಡಿ ಕೂಗುಲಾಗ ಹೇಳಿ ಮಂಕಾಡ್ಸಿದ್ದು ನೆಂಪಪ್ಪಗ ಸುಪ್ರಿಯನ ಮೋರೆ ನಾಚಿಕೆಲಿ ಕೆಂಪಾತು.

“ಈಗ ಕೂಗುದು ನಿಲ್ಸದ್ರೆ ಹಾಂಗೇ ಮಂಕಾಡ್ಸೆಕಷ್ಟೆ ಗ್ರೇಶಿಂಡಿತ್ತಿದ್ದೆ….” ಅವನ ಕುಶಾಲು ಕೇಳಿ
ಕಣ್ಣೀರು ಉದ್ದಿ ತೊಡಿ ಬಿಡ್ಸಿ ನೆಗೆ ಮಾಡಿದ ಅದರ ಕಂಡಪ್ಪಗ ಅವಂಗೂ ಸಮದಾನ ಆತು. ಅದರ ಕೋಲೇಜಿಲ್ಲಿ ಬಿಡುವ ಮದಲು ಅದರ ಮನಸಿನ ಸಂಕಟ ಎಂತರಾಳಿ ಹೇಂಗಾರು ತಿಳಿಯೆಕು ಹೇಳಿ ತೀರ್ಮಾನ ಮಾಡಿದ ಅವ°.

“ಅಬ್ಬಬ್ಬಾ…ನೆಗೆ ಬಂತನ್ನೇ‌‌.ಸಮದಾನ ಆತು.ಇಲ್ಲದ್ರೆ ಈಗ ಅಬ್ಬೆ ಬಂದು ನೋಡಿದ್ದರೆ ಎನ್ನ ಬೈತ್ತಿತವು. ಅಲ್ಲದ್ರೂ ಎನಗೆ  ಕೂಸುಗಳತ್ರೆ ಚಂದಕೆ ಮಾತಾಡ್ಲೆ ಗೊಂತಿಲ್ಲೆ ಹೇಳಿ ಅಕ್ಕನೂ,ಅಬ್ಬೆಯೂ ಯೇವಗಳೂ ಹೇಳ್ತವು. ಅಕ್ಕನ ಮಕ್ಕೊ ಮಾತ್ರ ಹಾಂಗಲ್ಲಾತ. ಅವಕ್ಕೆ ಆನು ಹೇಳಿರೆ ಭಾರೀ ಪ್ರೀತಿ….” ಹೀಂಗೇ ಒಂದೊಂದೇ ಮಾತಾಡಿಂಡು ಅವು ತಿಂಡಿ ತಿಂದವು. ಸುಪ್ರಿಯನೂ ಅವನತ್ರೆ ಮೈ ಚಳಿ ಬಿಟ್ಟು ಮಾತಾಡ್ಲೆ ಸುರು ಮಾಡಿತ್ತು.

“ಅಂಬಗ ನಾವು ಹೆರಡುವನಾ. ನಿನಗೆ ಎಷ್ಟೊತ್ತಿಂಗೆ ಕ್ಲಾಸ್ ಸುರುವಪ್ಪದು? ಅಷ್ಟೊತ್ತಿಂಗೆ ಎತ್ತುಸುವೆ” ಹೇಳಿಕ್ಕಿ ಅವ ಅವನ ರೂಮಿಂಗೆ ಹೋದ°.

“ಇದಾ…ಈ ಹೂಗು ಸೂಡು” ಅತ್ತೆ ಉದ್ದದ ಮಲ್ಲಿಗೆ ಮಾಲೆ ತಂದು ಅದರ ತಲಗೆ ಸೂಡ್ಸಿದವು. ವಿಜಯಂಗಾದರೆ ಉದ್ದ ಜಡೆ ಇದ್ದತ್ತು. ಸುಪ್ರಿಯ ಅಂಬಗಂಬಗ ಬ್ಯೂಟಿ ಪಾರ್ಲರಿಂಗೆ ಹೋಗಿ ತಲೆಕಸವು ಹೆಚ್ಚು ಉದ್ದ ಬಾರದ್ದಾಂಗೆ ಕತ್ತರ್ಸಿಂಡಿದ್ದತ್ತು.

“ಹಾಸ್ಟೆಲ್ ಲಿ ಎನಗೆ ತಲೆಬಾಚಲೆ ಕಷ್ಟ ಆವ್ತು” ಹೇಳಿ ಅಬ್ಬೆಯತ್ರೆ ಹೇಳಿರೆ ಅವು ಮತ್ತೆ ಎಂತ ಹೇಳವೂಳಿ ಗೊಂತಿದ್ದದಕ್ಕೆ.

“ಛೇ..ಈಗ ವಿಜಯನ ಹಾಂಗೆ ಉದ್ದ ಜೆಡೆ ಇರ್ತಿದ್ದರೆ ಸುದೀಪ ಭಾವಂಗೆ ಹೆಚ್ಚು ಕೊಶಿಯಾವ್ತಿತು. ಅವ  ರಜ ಹಳೇಕ್ರಮವ ಇಷ್ಟ ಪಡುದು ಹೇಳಿ ಈಗ ಸರೀ ಗೊಂತಾತು.
ಉದಿಯಪ್ಪಗ ಬೇಗ ಎದ್ದು ಯೋಗ,ಪ್ರಾಣಾಯಾಮ ಎಲ್ಲ ಮಾಡಿ ಮತ್ತೆ ತೋಟಕ್ಕೆ ಹೋಗಿ ಅಡಕ್ಕೆ ಹೆರ್ಕಿಕ್ಕಿ ಬಂದು, ಅಬ್ಬೆಯೊಟ್ಟಿಂಗೆ ಹಟ್ಟಿ ಕೆಲಸಕ್ಕೂ ಸೇರುವ ಅವಂಗೆ ಹೆಮ್ಮಕ್ಕಳ ಕಷ್ಟ ಸುಖ ಸರಿಯಾಗಿ ಗೊಂತಿದ್ದು.

” ಅತ್ತೆ ಅಂಬಗ ಆನು ಹೆರಡೆಕಾ..ಮಾವ ಪೂಜೆ ಆಗಿ ಬಂದವಾ?” ಸುಪ್ರಿಯ ಕೋಲೇಜಿಂಗೆ ಹೋಪಲೆ ಹೆರಟಿಕ್ಕಿ ಬಂತು. ಅತ್ತೆ ಸೊಸೆಯ ಕಣ್ತುಂಬ ನೋಡಿದವು. ಸುದೀಪನ ಮದುವೆ ಅಪ್ಪಲೆ ಒಪ್ಪಿರೆ ಸಾಕು.ಪಾಪದ ಕೂಸು,ಒಪ್ಪುಗು..ಚಿನ್ನದ ಹಾಂಗೆ ನೋಡ್ಯೊಂಗು ನಿನ್ನ ಎನ್ನ ಮಗ°’ ಅವು ಮನಸಿಲ್ಲೇ ಹೇಳಿದವು.

“ಅಣ್ಣ ಆಗಲೇ ಕಾಲ್ ಮಾಡ್ತಾಡ.ನಿನ್ನ ಪೋನ್ ಎಂತಾಯಿದು?” ಸುದೀಪ ಹೆರಟು ಬಂದವ ಅಣ್ಣಂಗೆ ಕಾಲ್ ಮಾಡು ಹೇಳಿ ಅವನ ಪೋನ್ ತಂದುಕೊಟ್ಟ°.
ಅಂಬಗಳೇ ಅದಕ್ಕೆ ಸಿಮ್ಮು ಹೊಡಿ ಮಾಡಿದ ವಿಶಯ ನೆಂಪಾದ್ದು.
ಅಣ್ಣಂಗೆ ಪೋನ್ ಮಾಡಿ ಮೊಬೈಲ್ ಹಾಳಾಯಿದು ಹೇಳಿತ್ತು.ಒಟ್ಟಿಂಗೆ ಸಿಮ್ಮುದೆ ಹೊಡಿ ಆಯಿದು ಹೇಳಿತ್ತು. ಅವ ° ಕೂಡ್ಲೇ ಸುದೀಪನತ್ರೆ  ಒಂದು ಹೊಸ ಪೋನ್ ತೆಗದು ಕೊಡ್ಲೆ ಹೇಳಿದ°

“ಅಣ್ಣ ಹೊಸ ಪೋನ್ ತೆಗದು ಕೊಡ್ಲೆ ಹೇಳಿದ್ದ. ಬೇಗ ಹೋಪನಾ ಅಂಬಗ” ಸುಪ್ರಿಯಂಗೆ ಕೊಶಿಯಾದ್ದು ಹೊಸ ಪೋನ್ ತೆಗವದಕ್ಕಲ್ಲ, ಸುದೀಪನೊಟ್ಟಿಂಗೆ ಹೆಚ್ಚು ಹೊತ್ತು ಇಪ್ಪಲಕ್ಕನ್ನೇಳಿ.

ಅತ್ತೆಯತ್ರೂ, ಮಾವನತ್ರೂ ಹೇಳಿಕ್ಕಿ ಸುದೀಪನೊಟ್ಟಿಂಗೆ ಕಾರು ಹತ್ತಿತ್ತು.

“ಹೆಚ್ಚಾಗಿ ಬೈಕಿಲ್ಲಿ ಹೋಪದು, ಇಂದು ನೀನಿದ್ದ ಕಾರಣ ಕಾರು….”
“ಎನಗೆ ಬೈಕಿನ ಹಿಂದೆ ಕೂದು ಅಭ್ಯಾಸ ಇದ್ದು. ಎನಗೆ ಬೇಕಾಗಿ ಕಾರು ತರೆಕಾತಿಲ್ಲೆ” ಅದರ ಮಾತು ಕೇಳಿ ನೆಗೆ ಬಂತು ಅವಂಗೆ.
“ಆಹಾ….ಹಾಂಗಿದ್ದ ಆಶೆಯೆಲ್ಲ ಸದ್ಯಕ್ಕೆ ಬೇಡ, ಎನ್ನೊಟ್ಟಿಂಗೆ ಬೈಕಿಲ್ಲಿ ಹೋಯೆಕಾರೆ ಲೈಸೆನ್ಸ್ ಬೇಕು”

“ಎದುರು ಕೂಬವಕ್ಕೆ ಲೈಸೆನ್ಸ್. ಹಿಂದೆ ಕೂದವಕ್ಕೆಂತಕೆ?”

“ಅದು ಎನ್ನೊಟ್ಟಿಂಗೆ ಕೂಬಲೆ”
ಸುಪ್ರಿಯಂಗೆ ಆ ಮಾತು ಕೊಶೀ ಆತು.

ಸುದೀಪ ಎಲ್ಲೋರ ಹಾಂಗಲ್ಲ, ಅವನ ಕ್ರಮವೇ ಬೇರೆ. ಮನಸಿನ ಒಳ ಒಂದು ರೀತಿಯ ಅಭಿಮಾನ ಹುಟ್ಟಿತ್ತು ಅವನ ಮೇಗೆ.
ಮಾತಾಡದ್ದೆ ಅವನ ಡ್ರೈವಿಂಗ್ ನೋಡಿಂಡು ಕೂದತ್ತು. ಅದು ಎನ್ನನ್ನೇ ನೋಡ್ತು ಹೇಳಿ ಗೊಂತಾದರೂ ಲೆಕ್ಕಂದ ಹೆಚ್ಚು ಮಾತಾಡಿದ್ದಾಯಿಲ್ಲೆ ಅವ.

ಆದರೆ ಇವರ ಕಾರು ಪೇಟೆಗೆ ಎತ್ತುವಂದ ರಜ್ಜ ಮದಲೇ ಪೋಲೀಸುಗೊ ಕಾರು ನಿಲ್ಸಿದವು.

“ಗೇಸಿನ ಟ್ಯಾಂಕರು ಮೊಗಚ್ಚಿದ ಕಾರಣ ಈ ಮಾರ್ಗಲ್ಲಿ ವಾಹನ ಹೋವ್ತಿಲ್ಲೆ. ಅದು ತೆಗವಗ ಎಷ್ಟು ಹೊತ್ತಕ್ಕು ಹೇಳ್ಲೆಡಿಯ” ಹೇಳಿದವು.

“ಶ್ಶೋ..ಇನ್ನೆಂತ ಮಾಡುದು? ಸುಪ್ರಿಯ ಸುದೀಪನ ಮೋರೆ ನೋಡಿತ್ತು.

ಮನಗೆ ವಾಪಾಸು ಹೋಯೆಕಾರೆ ಒಂದು ಗಂಟೆ ಪ್ರಯಾಣ ಇದ್ದು. ಇಲ್ಲೇ ನಿಂದು ಎಷ್ಟೊತ್ತು ಕಾವದು? ‘

ಅವ° ಕಾರು ರಜಾ ಹಿಂದೆ ಕೊಂಡೋಗಿ ಒಂದು ಮರದಡಿಲಿ ನಿಲ್ಸಿದ°.

‘ಇನ್ನೆಂತ ಮಾಡುದು ಹೇಳುವಾಂಗೆ ಅದರ ಮೋರೆ ನೋಡಿದ°. ಅದೂದೆ ಅವನ ಮೋರೆಯನ್ನೇ ನೋಡಿತ್ತು.

” ಎಂತಾರು ಮಾತಾಡು.ಅಂತೇ ಕೂದೆಂತ ಮಾಡುದು?” ಹೇಳಿಂಡು ಬಾಗಿಲು ತೆಗದು ಹೆರ ಇಳುದ. ಅದೇ ಹೊತ್ತಿಂಗೆ ಅವರ ಕಾರಿನ ಹತ್ತರೆ ಒಂದು ಜೀಪು ಬಂದು ನಿಂದತ್ತು. ಸುದೀಪನ ಕಂಡಪ್ಪಗ ಅದರ್ಲಿಪ್ಪ ಗೆಂಡುಮಕ್ಕೊ ಇಳುದು ಹತ್ತರೆ ಬಂದು

“ಡಾಕ್ಟರೇ….ನಿಂಗಳೂ ಎಂಗಳ ಹಾಂಗೇ ಬಾಕಿ ಆದಿರಾ?” ಕೇಳಿದವು. ಸುದೀಪಂಗೆ ಅವರ ಸರೀ ಗುರ್ತಯಿದ್ದು ಹೇಳಿ ಅವರ ಮಾತಿಂದ ಅಂದಾಜಾತು ಸುಪ್ರಿಯಂಗೆ.

‘ಒಟ್ಟಾರೆ ಎನ್ನ ಗ್ರಾಚಾರ, ಅವನತ್ರೆ ಒಬ್ಬನೇ ಕೂದು ಮಾತಾಡೆಕು ಗ್ರೇಶಿರೂ ಸಿಕ್ಕಿದ ಅವಕಾಶವ ಆನಾಗಿಯೇ ಕಳಕೊಳ್ತಾಯಿದ್ದೆ ಹೇಳಿ ಬೇಜಾರವೂ ಆತು. ಹೊಸ ಪೋನು,ಸಿಮ್ಮು ಇಲ್ಲದ್ದೆ ಅಮ್ಮನತ್ರೆ  ಕೂಡ ಮಾತಾಡ್ಲೆಡಿಯ….. ಎಂತ ಮಾಡೆಕು ಹೇಳಿ ಗೊಂತಾಗದ್ದೆ ಸುಮ್ಮನೆ ಅತ್ಲಾಗಿತ್ಲಾಗಿ ನೋಡಿಂಡು ಕೂದತ್ತು.

“ನಾವು ಅವರ ಮನಗೆ ಒಂದರಿ ಹೋಗಿಂಡು ಬಪ್ಪನಾ..ಇವು ಕೇಶವಣ್ಣ ಹೇಳಿ. ಇಲ್ಲೇ ಹತ್ತರೆ ಇವರ ಮನೆ.ಅವರ ಅಮ್ಮ ಎನ್ನಲ್ಲಿಗೆ ಮದ್ದಿಂಗೆ ಬಪ್ಪದು. ಇನ್ನು ವಾಪಾಸು ಮನಗೆ ಹೋಪದಕ್ಕೆ ಅವರ ಮನಗೆ ಹೋಪ ಆಗದಾ?” ಸುದೀಪ ಹೇಳುಗ ಬೇಡ ಹೇಳುದೇಂಗೆ, ಅಥವಾ ಬೇಡ ಹೇಳಿ ಎಂತ ಮಾಡುದು..ಎಷ್ಟು ಹೊತ್ತು ಕಾಯೆಕಕ್ಕು ಹೇಳಿ ಅಂದಾಜಿಯೂ ಇಲ್ಲೆ.

ಕಾರು ಹಿಂದೆ ತಂದು ತಿರುಗಿಸಿಕ್ಕಿ ಅವರ ಜೀಪಿನ ಹಿಂದಂದಲೇ ಹೆರಟವು.
“ಅವರ ಅಮ್ಮ ಎನ್ನ ‘ಆರು’ ಕೇಳಿರೆ ಎಂತ ಹೇಳ್ತಿ” ಸುಪ್ರಿಯನ ಪ್ರಶ್ನೆಗೆ ಎಂತೋ ಕುಶಾಲಿನ ಉತ್ತರ ಕೊಡೆಕೂಳಿ ಗ್ರೇಶಿರೂ ಮಾತಾಡದ್ದೆ ಓರೆ ಕಣ್ಣಿಲ್ಲಿ ನೋಡಿ ನೆಗೆ ಮಾಡಿದ್ದಷ್ಟೆ ಸುದೀಪ.

ಎರಡು ಹೊಡೇಲೂ ಲಾಯ್ಕದ ಗದ್ದೆ ಪಚ್ಚೆ ಪಚ್ಚೆಯಾಗಿ ಕಂಡು ಕೊಂಡಿದ್ದತ್ತು. ಬೇರೆ ಬೇರೆ ಜಾತಿಯ ನೆಟ್ಟಿಕಾಯಿ, ಕಬ್ಬು, ಜೋಳ ಎಲ್ಲ ಬೆಳದ ಗದ್ದೆ ಕಾಂಬಗ ಸುಪ್ರಿಯಂಗೆ ಯಾವುದೋ ಸಿನೆಮಾದ ದೃಶ್ಯ ನೋಡುವ ಹಾಂಗಾತು.

ಕಾರು ಸೀದಾ ಹೋಗಿ ನಿಂದದು ಒಂದು ದೊಡ್ಡ ಮನೆಯ ಎದುರು. ಅಷ್ಟು ದೊಡ್ಡ ಮನೆಯ ಸುಪ್ರಿಯ ಇಷ್ಟರವರೆಗೆ ಕಂಡಿದೇ ಇಲ್ಲೆ. ಹಳೇ ಕ್ರಮದ ನಾಲ್ಕು ಸೂತ್ರದ ಮನಗೆ ಹೊಸ ಕ್ರಮದ ಅಲಂಕಾರವೂ ಸೇರಿ ಅದು ದೊಡ್ಡ ಅರಮನೆಯ ಹಾಂಗೆ ಕಂಡತ್ತದಕ್ಕೆ.

ಮನೆ ಎದುರು ಇಪ್ಪ ಹೂಗಿನ ತೋಟ,ತಾವರೆಕೆರೆ,ಕಾರಂಜಿ…ಅಬ್ಬಬ್ಬಾ….ಜೀಪಿಲ್ಲಿ ಬಂದ ಅವರ ಕಾಂಬಗ ಇಷ್ಟು ಶ್ರೀಮಂತರು ಹೇಳಿ ಅದಕ್ಕೆ ಕಲ್ಪನೆಯೇ ಇತ್ತಿದ್ದಿಲ್ಲೆ.
ಸುದೀಪ ಕಾರಿಂದ ಇಳುದರೂ ಸುಪ್ರಿಯ ಕೆಳ ಇಳಿವಲೆ ಮರದವರ ಹಾಂಗೆ ಆ ಮನೆಯ,ಅದರ ಸುತ್ತಮುತ್ತಲಿನ ತೋಟವ ಎಲ್ಲ ನೋಡಿ ಮೈಮರದು ಕೂದತ್ತು.

“ಬಾ…..ಪ್ರಿಯಾ……ಇಳಿ” ಅವ° “ಪ್ರಿಯಾ..” ಹೇಳುದು ಕೇಳಿ  ಯಾವುದೋ ಲೋಕಕ್ಕೆ ಬಂದ ಅನುಭವ ಆತದಕ್ಕೆ. ಅವ° ಅದರ ಗಾಬರಿ ಕಂಡು “ಎಂತ ಹೆದರಿಕೆಯಾ?” ಕೇಳಿಕ್ಕಿ ಕೈ ಹಿಡ್ಕೊಂಡೇ ಮುಂದೆ ನಡದ.

ಜೀಪಿಂದ ಇಳುದ ಹೆಮ್ಮಕ್ಕಳೂ ಇವರ ಕಂಡು
“ಬನ್ನಿ, ಒಳ ಬಂದು ಕೂಬಲಕ್ಕು. ಅಬ್ಬೆ ಒಳ ಇದ್ದವಾ ಕಾಣ್ತು. ಅತ್ತಿಗೇ…..” ಹೇಳಿ ದಿನಿಗೇಳಿಂಡು ಒಳಾಂಗೆ ಹೋತು.

“ಶೈಲಾ…..ನೀನೂ ಬಯಿಂದೆಯ..ಕೇಶವ° ಎಲ್ಲಿ ಸಿಕ್ಕಿದ ನಿನಗೆ…… ಓ…..ಇದಾರು ನಮ್ಮ ಡಾಕ್ಟರು ಬಯಿಂದವನ್ನೇ…‌ಲತಾ ರಜ ಆಸರಿಂಗೆ ತೆಕ್ಕೊಂಡು ಬಾ….” ಹೇಳಿಂಡು ಹೆರ ಬಂದ ಅಜ್ಜಿಯನ್ನೂ,ಅವರೊಟ್ಟಿಂಗೆ ಹೆರ ಬಂದ ಶೈಲನನ್ನು ಕಂಡಪ್ಪಗ ಸುಪ್ರಿಯಂಗೆ ದೊಂಡೆ ಪಸೆ ಆರಿದಾಂಗಾತು. ಅಲ್ಲೇ ಎದುರಾಣ ಗೋಡೆಲಿಪ್ಪ ಒಂದು ಪಟವನ್ನು ಕಂಡಪ್ಪಗ ಮನಸಿಂಗೆ ಎಂತೋ ಆಶ್ಚರ್ಯ, ಹೆದರಿಕೆ ಎಲ್ಲ ಒಟ್ಟು ಬಂದು ಹತ್ತರೆ ಕೂದ ಸುದೀಪನ ಕೈಯನ್ನೇ ಗಟ್ಟಿಯಾಗಿ ಹಿಡ್ಕೊಂಡತ್ತದು.

ಇನ್ನು ಇನ್ನಾಣ ವಾರಕ್ಕೆ>>>>>>>

ಪ್ರಸನ್ನಾ ಚೆಕ್ಕೆಮನೆ

4 thoughts on “ಸ್ವಯಂವರ ಭಾಗ 48-ಪ್ರಸನ್ನಾ ವಿ ಚೆಕ್ಕೆಮನೆ

  1. “ಎನಗೆ ಬೈಕಿನ ಹಿಂದೆ ಕೂದು ಅಭ್ಯಾಸ ಇದ್ದು. ಎನಗೆ ಬೇಕಾಗಿ ಕಾರು ತರೆಕಾತಿಲ್ಲೆ” “ಆಹಾ….ಹಾಂಗಿದ್ದ ಆಶೆಯೆಲ್ಲ ಸದ್ಯಕ್ಕೆ ಬೇಡ, ಎನ್ನೊಟ್ಟಿಂಗೆ ಬೈಕಿಲ್ಲಿ ಹೋಯೆಕಾರೆ ಲೈಸೆನ್ಸ್ ಬೇಕು” “ಎದುರು ಕೂಬವಕ್ಕೆ ಲೈಸೆನ್ಸ್. ಹಿಂದೆ ಕೂದವಕ್ಕೆಂತಕೆ?” ಹವ್ಯಕ ಭಾಷೆಲಿ ನೆಡವ ಸುಪ್ರಿಯ ಸುದೀಪರ ತುಂಟ ಪ್ರೇಮ ಸಂಭಾಷಣೆ ಕೇಳುವಗ ಕೊಶಿ ಆವ್ತು. ಅನುರೂಪದ ಭಾವ-ಅತ್ತಿಗೆಯರ ಜೋಡಿ ಇವರದ್ದು ಹೇಳಿ ಕಂಡತ್ತು.
    ಕೇಶವಂಗು ಡಾಕ್ಟ್ರಿಂಗು ಇದ್ದ ಸ್ನೇಹ, ಕತೆಗೆ ಒಳ್ಳೆ ತಿರುವು ಕೊಟ್ಟತ್ತು. ಬಪ್ಪ ಕಂತಿಲ್ಲಿ ಕೇಶವನ ಮದುವೆ ವಿಷಯ ಖಂಡಿತಾ ಇಕ್ಕು ಹೇಳಿ ಗ್ರೇಶುವೊ. ಮುಂದುವರಿಯಲಿ ಕಥೆ.

  2. ಅಂತೂ ಸುಪ್ರಿಯಾ ಒಳ್ಳೆ ಜೀವನ nadeshugu ಹೇಳಿ ಅಂದಾಜಿ ಆವುತ್ತು..haalappa ಒಂದು ಕೂಸಿನ ಜೀವನ ವಿಜಯ ಸರಿ ಮಾಡಿತ್ತನ್ನೆ…ಇದರೊಟ್ಟಿಗೆ ಸುಷಿ,ಕೇಶವನ ವಿಷಯ ಈಗ ಹೆರ ಬತ್ತು….ಸುಪ್ರಿಯಾ ಮೂಲಕ ಕಥೆ bidsi ಸಿಕ್ಕುತ್ತ ಇದ್ದು…ಒಳ್ಳೆ ಲಾಯ್ಕಲ್ಲಿ ಕುತೂಹಲ ಕಾರಿಯಾಗಿ ಕಥೆ ಬರದ್ದೆ… ಸೂಪರ್..ಕಾದು ಕಾದು ಈಗ ವಿಷ್ಯ ಅರ್ಥ ಆವುತ್ತ ಇದ್ದು…

  3. ತುಂಬಾ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋವುತ್ತಾ ಇದ್ದು.ಮಧ್ಯೆ ಎಷ್ಟೊಂದು ತಿರುವುಗೊ.ಮುಂದಾಣ ಭಾಗಕ್ಕೆ ಇನ್ನೂ ಒಂದು ವಾರ ಕಾಯಕ್ಕನ್ನೇ

  4. Anthu supriya sudeepange hattare appa prayatna madta iddu.. istaralliye adara gelati vijaya ardakke nilsida katheyude raja rajave bicchigolta iddu..
    Supriyanu Sudeepanu hoda mane susheelana appana maneye aadikku heluva anumaana…
    Innana sanchikeli enna anumana bagehariguli bhaavisutte😄

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×