ಒಂದು ಪ್ರಕರಣದ ಸುತ್ತ -೫
-ರಮ್ಯ ನೆಕ್ಕರೆಕಾಡು
ಅಂಜಲಿ ಕಾಣೆ ಆದ ಎರಡ್ನೆ ದಿನ ಇದು..ನಿನ್ನೆ ನಡು ಇರುಳಿಂಗೊರೆಗೆ ಸ್ಟೇಷನಿಲಿಯೇ ಇತ್ತ ಶರತ್ಚಂದ್ರಂಗೆ ಅಲ್ಲಿಗೇ ಒರಕ್ಕು ಬಂದಿತ್ತು. ನಿನ್ನೆ ಇಡೀ ದಿನ ತಿರುಗಿದ ಕಾರಣ ಶರತ್ಚಂದ್ರಂಗೆ ಉದಿಯಾದರೂ ಎಚ್ಚರಿಗೆ ಆಗಿತ್ತಿಲ್ಲೆ. ಸ್ಟೇಷನಿನ ಬಾಗಿಲಿಂದ ಸೀದಾ ಸೂರ್ಯನ ಬೆಳಕು ಮೇಜಿನ ಮೇಲೆ ತಲೆ ಅಡಿಗೆ ಹಾಕಿ ಮನುಗಿತ್ತ ಶರತ್ಚಂದ್ರನ ಮೇಲೆ ಬಿದ್ದುಗೊಂಡಿತ್ತು. ನಿನ್ನೆ ರಜೆ ಹಾಕಿತ್ತ ಪೇದೆ ನಾಗರಾಜ ಬಂದು,” ಸರ್…ನಿಂಗ ಮನೆಗೆ ಹೋಯ್ದಿಲ್ಲಿರಾ…??” ಹೇಳಿಯಪ್ಪದ್ದೆ ಶರತ್ಚಂದ್ರನ ಒರಕ್ಕು ಗುಡ್ಡೆ ಹತ್ತಿತ್ತು. ನಿನ್ನೆ ಉದಿಂದ ಲಾಗಾಯ್ತಿ ಆದ ಘಟನೆ ಪೂರಾ ಒಂದರಿಯಂಗೆ ಕಣ್ಣೆದುರೆ ಬಂದು ಹೋತು. ಛೇ..ಇದೊಂದು ಕನಸಾಗಿರ್ತಿದ್ದರೆ ಎಷ್ಟು ಲಾಯ್ಕಿರ್ತಿತ್ತು…ಹೇಳಿ ಶರತ್ಚಂದ್ರ ಮನಸ್ಸಿಲಿಯೇ ಗ್ರೇಶಿಗೊಂಡು, ನಾಗರಾಜನತ್ರೆ ಅಂಜಲಿಯ ಪ್ರಕರಣವ ವಿವರ್ಸಿಕ್ಕಿ,” ಎಲ್ಲಿಗೆ ಹೋತಿಕ್ಕಿದ್ದೋಳಿಯೇ ಇಲ್ಲೆ..ದಿನ ಕಳ್ದ ಹಾಂಗೆ ಪರಿಸ್ಥಿತಿ ಮಾತ್ರ ಕಠಿಣ ಅಪ್ಪದರಲ್ಲಿ ಸಂಶಯ ಇಲ್ಲೆ..ನಾಗರಾಜ ಈ ಕೇಸಿನ ಬಗ್ಗೆ ನಿನಗೆಂತಾರು ಐಡಿಯಾ ಇದ್ದಾ..??” ಹೇಳಿ ಸುಮಾರು ವರ್ಷಂದ ಕೆಲಸ ಮಾಡ್ತಾ ಇಪ್ಪ ಅನುಭವಸ್ಥ ಪೇದೆ ನಾಗರಾಜನ ಹತ್ತರೆ ಶರತ್ಚಂದ್ರ ಕೇಳಿದ. ನಾಗರಾಜ,” ಈ ನಾಪತ್ತೆ ಕೇಸುಗಳೇ ಹೀಂಗೆ ತಲೆಬುಡ ಅರ್ಥ ಆಗದ್ದಾಂಗಿಪ್ಪದು. ಪ್ರೀತಿ ಹೇಳಿ ಎಂತ ಇಲ್ಲದ್ದ ಕಾರಣ ಊಹೆ ಮಾಡುದು ರಜ ಕಷ್ಟ..ಅದು ಬಿಟ್ಟರೆ..” ಹೇಳಿ ತಲೆತೊರ್ಸಿಗೊಂಡು ಹೇಳೆಕ್ಕಾ ಬೇಡದಾ ಹೇಳುವಾಂಗೆ ಪೇದೆ ಶರತ್ಚಂದ್ರನ ಮೋರೆ ನೋಡಿತ್ತು. ಶರತ್ಚಂದ್ರ,” ಎಂತಾತು? ಮುಂದುವರೆಶು… ಸರಿಯೋ ತಪ್ಪೋ ಹೇಳಿ ಮತ್ತೆ ವಿಮರ್ಷೆ ಮಾಡುವ..” ಹೇಳಿಯಪ್ಪಗ ನಾಗರಾಜ,” ಮನೆಯವ್ವೇ…ಎಂತಾರು ಮಾಡಿರನ್ನೇ..??” ಹೇಳಿ ಸಂಶಯಲ್ಲಿ ಕೇಳಿತ್ತು. ಶರತ್ಚಂದ್ರ,” ಛೇ..ಛೇ…ನೋ ವೇ…” ಹೇಳಿ ತಲೆ ಕುಡುಗಿದ.” ಅಲ್ಲ ಎನ್ನ ಇಷ್ಟು ವರ್ಷದ ಅನುಭವಲ್ಲಿ ಹೀಂಗೆಪ್ಪ ಒಂದು ಪ್ರಕರಣ ಬೈಂದು. ಹಾಂಗಾಗಿ ಆನು ಹೇಳಿದ್ದು..” ಹೇಳಿ ನಾಗರಾಜ ಹೇಳಿಯಪ್ಪಗ, ರಜ ಕುತೂಹಲಲ್ಲಿಯೇ ಶರತ್ಚಂದ್ರ,” ಯಾವ ಕೇಸ್ ಅದು??” ಹೇಳಿ ನಾಗರಾಜನನ್ನೇ ನೋಡಿದ. ನಾಗರಾಜ ಹೇಳುವ ಪ್ರಕಾರ..
ಪೋಲೀಸ್ ಆಫಿಸರ್ ಗಜವದನ!! ಅವರ ಹೆಸರು ಹೇಳುಲೆ ಊರಿನ ಜನ ಹೆದರಿಗೊಂಡಿತ್ತ ಸ್ಟ್ರಿಕ್ಟ್ ಅಧಿಕಾರಿ. ಆ ಕಾಲದ ರೌಡಿ ಶೀಟರ್ಸ್, ಸ್ಮಗ್ಲರ್ಸ್, ಬೀದಿ ಕಾಮಣ್ಣರಿಂಗೆಲ್ಲ ಬೆಗರರಿಶಿದ ಒಬ್ಬ ಎ ಒನ್ ಆಫಿಸರ್. ನಾಗರಾಜ ಕಾನ್ಸ್ಟೇಬಲ್ ಆಗಿ ಕೆಲಸಕ್ಕೆ ಸೇರಿದ ಸಮಯ ಅದು.
ಚಂದಪ್ಪ ಹೇಳ್ತ ಒಂದು ಜನ ಮಗಳ ನಾಪತ್ತೆ ಕೇಸು ಹಿಡ್ಕೊಂಡು ಸ್ಟೇಷನಿಂಗೆ ಬತ್ತು. ಆ ಹುಡುಗಿಗೆ ಒಂದು ಪುರ್ಬಿನೊಟ್ಟಿಂಗೆ ಒಳ್ಳೆದಿತ್ತು ಹೇಳಿ ಗಜವದನಂಗೆ ತನಿಖೆ ಮಾಡಿಯಪ್ಪಗ ಗೊಂತಾತು. ಹೀಂಗೆ ಗೊಂತಾಗಿ ಒಂದು ವಾರ ಆಯ್ಕಾರೆ ಆ ಹುಡುಗಿ ಮತ್ತೆ ಪುರ್ಬುವಿನ ಕೊಳೆತ ಹೆಣ ಕಾಡಿಲಿ ಬಳ್ಳಿ ತೆಕ್ಕೊಂಡ ಅವಸ್ಥೆಲಿ ಇತ್ತು. ಇದು ಬಾಹ್ಯ ನೋಟಕ್ಕೆ ಆತ್ಮಹತ್ಯೆ ಹೇಳಿ ಕಂಡರುದೇ ಒಬ್ಬ ಒಳ್ಳೆ ಡಿಟೆಕ್ಟಿವ್ ದೆ ಆಗಿತ್ತ ಗಜವದನಂಗೆ ಇದೊಂದು ಕೊಲೆ ಹೇಳಿ ಗೊಂತಾತು. ಹೀಂಗೆ ಗೊಂತಾದ ಎರಡು ದಿನಲ್ಲಿಯೇ ಗಜವದನ ಕೊಲೆಗಾರನ ಹಿಡ್ದು ಹಾಕಿದ. ಕೊಲೆಗಾರ ಮತ್ತೆ ಆರುದೇ ಅಲ್ಲ ಆ ಹುಡುಗಿಯ ಅಪ್ಪ ಚಂದಪ್ಪನೇ ಆಗಿತ್ತು. ಬೇರೆ ಜಾತಿಯ ಜನರೊಟ್ಟಿಂಗೆ ಮಗಳಿಂಗೆ ಸಂಬಂಧ ಇತ್ತದರ ಮೊದಲೇ ಗೊಂತುಮಾಡಿಗೊಂಡ ಚಂದಪ್ಪ, ಊರಿನವರ ಮುಂದೆ ತಲೆ ತಗ್ಗುಸುಲೆ ಆಗ ಹೇಳಿ ಇಬ್ರನ್ನುದೆ ಕೊಂದು, ಆಳುಗಳ ಸಹಾಯಂದ ಅವರ ಕಾಡಿಲಿ ಮರಕ್ಕೆ ನೇತುಹಾಕಿದ್ದು ಹೇಳಿ ಗಜವದನ ಚಂದಪ್ಪನ ಕೈಂದ ಬಾಯಿ ಬಿಡ್ಸಿತ್ತಿದ.
ಈ ಸುದ್ದಿಯ ಕೇಳಿ ಶರತ್ಚಂದ್ರ,” ಶಿಟ್..ಅನ್ ಬಿಲಿವೇಬಲ್..ಹೀಂಗೆಪ್ಪವೂ ಇದ್ದವಾ?? ನಾಗರಾಜ..ಅಂಜಲಿಯ ವಿಷಯಲ್ಲಿ ಹೀಂಗೆ ಆಗಿಪ್ಪಲೆ ಸಾಧ್ಯ ಇಲ್ಲೆ..ಎಂತಕೇಳ್ರೆ ಆನು ಭಾವನ ತುಂಬಾ ಹತ್ತರಂದ ನೋಡಿದ್ದೆ. ಮತ್ತೊಂದು…ಅಂಜಲಿಯ ಕೊಲೆ ಮಾಡುವಾಂಗಿಪ್ಪ ಕಾರಣವುದೆ ಎಂತ ಇಲ್ಲೆನ್ನೇ..ಆರನ್ನೂ ನಂಬುಲೆಡಿಯ ಎಲ್ಲರ ಮೇಲೆ ಒಂದು ಕಣ್ಣು ಮಡುಗೆಕ್ಕು..” ಹೇಳಿ ದೊಡ್ಡಕ್ಕೆ ಉಸುಲು ಬಿಟ್ಟ. ಮತ್ತೆ ಮೇಜಿನ ಮೇಲೆ ಎರಡು ಮೋಣಕೈಯನ್ನುದೇ ಮಡುಗಿ,” ಎನಗೆ ಈ ಸಹನಾ ಹೇಳ್ತ ಕೂಸಿನ ಮೇಲೆ ಒಳ್ಳೆತ ಸಂಶಯ ಇದ್ದು..” ಹೇಳಿ ಹುಬ್ಬಿನ ಗಂಟಿಕ್ಕಿದ. ನಾಗರಾಜ ತೆಗದ ಬಾಯಿಗೆ,” ಅಂಬಗ ಸಹನಾ ಅಂಜಲಿಯ ಕೊಂದಿಕ್ಕಾ..??” ಹೇಳಿ ಕುತೂಹಲಲ್ಲಿ ಶರತ್ಚಂದ್ರನ ಮೋರೆ ನೋಡಿತ್ತು. ಶರತ್ಚಂದ್ರ ಸಣ್ಣಕ್ಕೆ ನೆಗೆ ಮಾಡಿಕ್ಕಿ,” ಛೆ.. ಸಂಶಯ ಹೇಳ್ರೆ ಹಾಂಗಲ್ಲ…ಅಂಜಲಿ ಕಾಣೆ ಆದ ಬಗ್ಗೆ ಅದಕ್ಕೆ ಎಂತಾರು ಗೊಂತಿಕ್ಕು ಹೇಳಿ ನಿನ್ನೆ ಎನಗೆ ಅದರ ವರ್ತನೆ ನೋಡಿಯಪ್ಪಗಳೇ ಆಯ್ದು..ಮತ್ತೆ ನೀನು ಹೇಳಿಂದಾಂಗೆಲ್ಲ ಎಂತ ಆಗಿರ…ನಿನ್ನೆ ಆನು ಆ ಕೂಸಿನತ್ರೆ ರಜ ಕಣ್ಣು ಹೊರಳ್ಸಿ ಮಾತಾಡ್ಸುತ್ತಿದ್ದರೆ ಪಾಪ ಅದಕ್ಕೆ ಕೂಗಿ ಆವ್ತಿತ್ತು..ಎಂತಕೂ ಸಮಯ ಬರಲಿ ಹೇಳಿ ಕಾಯ್ತಾ ಇದ್ದೆ..ಎಂತಕುದೇ ಎನಗಿಂದೊಂದರಿ ಅರವಿಂದನತ್ರೆ ಮಾತಾಡೆಕ್ಕು..ಆನು ಮನೆಗೆ ಹೋಯ್ಕೊಂಡು ಅಕ್ಕನ ಮನೆಗೆ ಹೋತೆ… ನೀನು ಮತ್ತೆ ಜೀಪಿಲಿ ಅಲ್ಲಿಗೆ ಬಾ..ಕೇಶವನೊಟ್ಟಿಂಗೆ ಅರವಿಂದನ ಮನೆಗೆ ಹೋಪ…” ಹೇಳಿದ.ಶರತ್ಚಂದ್ರನ ಬೂಟ್ಸಿನ ಶಬ್ಧ ದೂರ ದೂರ ಆದಾಂಗೆ ಸ್ಟೇಷನ್ ನಿಶ್ಶಬ್ದ ಆತು….
ವೀಣಾ ಅಟ್ಟೊಂಬಳಲ್ಲಿ ಕಾಪಿಗೆ ಹಸರು ಬೇಶಿತ್ತು. ಶಾಂತ,” ಅಂಜಲಿ ಮನೆಲಿಲ್ಲದ್ದೆ, ಬಾಯಿಗೆ ಎಂತದೂ ಮೆಚ್ಚುತ್ತಿಲ್ಲೆ..ಅದರನ್ನೇ ನೆಂಪಾವ್ತು..ಎನಗೆಂತ ತಿಂಬಲೆ ಬೇಡ..ಇವಕ್ಕೆ ಒಂದುರಜ ಬಟ್ಲಿಲಿ ಹಾಕಿಕೊಡು ತಿಂಗು..” ಹೇಳಿ ವೀಣಾನತ್ರೆ ಹೇಳಿತ್ತು. ಶಾಂತನ ಕಣ್ಣಿಲಿ ನೀರಪಸೆ ಇನ್ನುದೆ ಆರಿತ್ತಿದಿಲ್ಲೆ..” ಅಪ್ಪತ್ತಿಗೆ..ಒಪ್ಪಿಗೊಳ್ತೆ..ಈ ಸಂಧರ್ಭಲ್ಲಿ ಅಂಜಲಿ ಸಿಕ್ಕೆರೆ ಸಾಕು ಹೇಳಿ ಬಿಟ್ಟರೆ, ಮತ್ತೆಂತದೂ ಬೇಡ ಹೇಳಿ ಕಾಣ್ತು..ಬಾಯಿಗೆ ಎಂತ ಮೆಚ್ಚದ್ರೂ ಹೊಟ್ಟೆ ಗಟ್ಟಿ ಮಾಡಿಗೊಳ್ಳೆಕ್ಕನ್ನೇ!! ಮೊದಲೇ ಎಲ್ಲರುದೇ ಅಂಜಲಿಯ ಕಾಣ್ತಿಲ್ಲೆ ಹೇಳಿ ಕಂಗಾಲಾಗಿದ್ದವು. ಇನ್ನು ನಿಂಗಳುದೆ ಅಶನ ನೀರು ಬಿಟ್ಟು ನಿತ್ರಾಣ ಆಗಿ ಆಸ್ಪತ್ರೆಗೆ ಸೇರಿಗೊಂಡರೆ ಎಂಗಳ ಅವಸ್ಥೆ ಎಂತಾಕ್ಕೋಳಿ ನಿಂಗಳೇ ರಜ ಗ್ರೇಶಿ” ಹೇಳಿ ವೀಣಾ ತೂಕದ ಮಾತಾಡಿದ್ದು ಶಾಂತಂಗುದೇ ಅಪ್ಪೋಳಿ ಕಂಡತ್ತಾ ಏನಾ..ತಳೀಯದ್ದೆ ಬಟ್ಲಿಂಗೆ ರಜ ಹಸರು ಹಾಕ್ಯೊಂಡು ತಿಂಬಲೆ ಸುರು ಮಾಡಿತ್ತು. ಆನು ಹೇಳಿದ್ದರ ಅತ್ತಿಗೆ ಬೇಗ ಅರ್ಥ ಮಾಡಿಗೊಂಡತ್ತು ಹೇಳಿ ವೀಣಾಂಗೂ ಖುಷಿ ಆತು.
ವೀಣಾ ಹಸರಿನ ತಂದು ಕೇಶವಂಗುದೇ ಕೊಟ್ಟತ್ತು. ” ಒಂದು ವಾರಂದಿತ್ತೆ ಅಂಜಲಿ ಕೋಣೆಲಿಯೇ ಬಾಗಿಲು ಹಾಕಿಗೋಂಡಿತ್ತು. ಈಗಳುದೇ ಅಲ್ಲಿಯೇ ಇಕ್ಕು ಹೇಳಿ ಆವ್ತು. ಕಾಣೆ ಆಯ್ದು ಹೇಳಿ ಆವ್ತೇ ಇಲ್ಲೆ..” ಹೇಳಿ ಕೇಶವ ಹೇಳುವಾಗ ಅವನ ಕಣ್ಣಿಂದ ನೀರು ಜಾರುಲೆ ಸುರಾತು. ಈ ಅಬ್ಬೆ ಅಪ್ಪನ ಸಂಕಟ ನೋಡಿ ವೀಣಾಂಗೆ ದುಃಖ ತಡವಲೆಡಿಗಾಯ್ದಿಲ್ಲೆ. ಅಷ್ಟೊತ್ತಿಂಗೆ ಶರತ್ಚಂದ್ರ ಒಳ ಬಂದ.ಅಕ್ಕ ಭಾವನ ಪರಿಸ್ಥಿತಿ ವೀಣಾನತ್ರಂದ ತಿಳ್ಕೊಂಡ. ವೀಣಾಂಗೆ ಇವರ ಸೇವೆ ಮಾಡಿ ಎಂತಾಗೆಡ..ಆದರುದೇ ಎಷ್ಟು ಲಾಯ್ಕ ನೋಡಿಗೊಳ್ತ ಇದ್ದು ಹೇಳಿ ಶರತ್ಚಂದ್ರಂಗೆ ವೀಣಾನ ಗ್ರೇಶಿ ಹೆಮ್ಮೆ ಆತು. ಮತ್ತೆ ಕೇಶವನತ್ರೆ,” ಭಾವ..ಇಂದೊಂದರಿ ಅರವಿಂದನ ಭೇಟಿ ಆಗಿ ಬಪ್ಪ..ಹೆರಡಿ..” ಹೇಳಿದ. ಕೇಶವ ತಡವು ಮಾಡದ್ದೆ ಹೆರಟ. ಇಬ್ರುದೇ ಜೀಪಿಂಗೆ ಹತ್ತಿದವು. ವೀಣಾ ಬಾಗಿಲತ್ರೆ ನಿಂದು ಅವರ ಕಳ್ಸಿ ಕೊಟ್ಟತ್ತು. ಕ್ಷಣಾರ್ಧಲ್ಲಿ ಜೀಪು ಧೂಳು ಹಾರ್ಸಿಗೊಂಡು ಕಣ್ಮರೆ ಆತು…
-ಮುಂದುವರೆತ್ತು… >>>>>
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
Interesting. ..😍😍👌👌👌
😍🙏