- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಸರಸ್ವತೀಪೂಜೆ – (ಸಂಕ್ಷಿಪ್ತ ವಿಧಾನ)
ಕಾಲಕ್ಕೆ ತಕ್ಕ ಕೋಲ, ಕಾಲಾಯ ತಸ್ಮೈ ನಮಃ ಹೇಳ್ತ ಪೀಠಿಕೆಯೊಟ್ಟಿಂಗಾವ್ತು ಈ ಶುದ್ದಿ. ಕೆಲವು ಸಂಕ್ಷಿಪ್ತವಿಧಾನಂಗಳ ಅನುಕೂಲಕ್ಕೆ ಹೊಂದುಸಿಗೊಂಡವು ಪುಸ್ತಕಪೂಜೆಯನ್ನೂ ಸಂಕ್ಷಿಪ್ತಲ್ಲಿ ಮಾಡುವ ವಿಧಾನ ಬೇಕು ಹೇದು ಬೇಡಿಕೆ ಮಡಿಗಿದ ಕಾರಣ ಅವಕ್ಕೆ ಮಾಂತ್ರ ಉಪಯೋಗಕ್ಕೆ ಇದು. ಅರಡಿತ್ತೋರು ಕ್ರಮಪ್ರಕಾರ ಷೋಡಶೋಪಚಾರಪೂಜೆ ಮಾಡುವದು ಮನಸ್ಸಿಂಗೂ ದೇವರಿಂಗೂ ತೃಪ್ತಿ. ಆಚಮ್ಯ ಹೇಳ್ವಾಗ ಮೂರುಸರ್ತಿ ನೀರು ಕುಡಿಯೆಕು ನಮಃ ಹೇದಪ್ಪಗ ನಮಸ್ಕಾರ ಮಾಡೆಕು ಪಾದ್ಯ ಅರ್ಘ್ಯ ಹೇಳ್ವಾಗ ನೀರುಬಿಡೆಕು ಹೇದು ಗೊಂತಿಪ್ಪವಂಗೆ ನಿತ್ಯಪೂಜೆಯ ಹಾಂಗೆ ಸರಸ್ವತೀ ಪೂಜೆ ಬಂಙದ್ದು ಅಲ್ಲ.
ಒಬ್ಬ ಅತಿಥಿಗೆ ಸತ್ಕಾರ ಹೇಂಗೆ ಮಾಡ್ತೋ ಹಾಂಗೇ ದೇವರನ್ನೂ ಒಬ್ಬ ಅತಿಥಿಯಾಗಿ ಆಹ್ವಾನಿಸಿ ಉಪಚಾರಮಾಡ್ತದೇ ಪೂಜೆ. ಉಪಚಾರ ಹೇಳ್ತಲ್ಲಿ ಪಂಚೋಪಚಾರ , ಷೋಡಶೋಪಚಾರ, ಹೇದೆಲ್ಲ ಇದ್ದು. ಷೋಡಶೋಪಚಾರ ಮಾಡಿರೆ ಒಪ್ಪ ಉಪಚಾರ ಮಾಡಿದಾಂಗೆ ಆವ್ತು. ಮಂತ್ರ ತಂತ್ರಂದಲೂ ಶ್ರದ್ಧಾಭಕ್ತಿಯೇ ಮುಖ್ಯ . ಅದು ಬರೇ ಏಕುಟಿಂಗೆ ಇಪ್ಪದು ಅಪ್ಪಲಾಗ ಅಷ್ಟೇ. ದೇವರಿಂಗೆ ನಾವು ಮಾಡುವ ಷೋಡಶೋಪಚಾರ ಏವುದಯ್ಯ ಹೇದರೆ – ಧ್ಯಾನ ಆವಾಹನ ಪಾದ್ಯ ಅರ್ಘ್ಯ ಆಚಮನ ವಸ್ತ್ರ ಗಂಧ ಅಕ್ಷತೆ ಪುಷ್ಫ ಧೂಪ ದೀಪ ನೈವೇದ್ಯ ತಾಂಬೂಲ ನೀರಾಜನ ಪ್ರದಕ್ಷಿಣ ನಮಸ್ಕಾರ. ಆಯಾ ದೇವತೆಗಳ ಧ್ಯಾನಶ್ಲೋಕ ಹೇದುಗೊಂಡು ಆಯಾದೇವರ ಹೆಸರು ಹೇಳಿಗೊಂಡು … ಸಮರ್ಪಯಾಮಿ ಮಾಡಿರೆ ಒಪ್ಪ ಉಪಚಾರವೂ ಆತು ಪೂಜೆಯೂ ಆತು. ಅಕೇರಿಗೊಂದು ಬ್ರಹ್ಮಾರ್ಪಣ. ಬಾಕಿ ಗೌಜಿ ಎಲ್ಲ ಅಲಂಕಾರಕ್ಕೆ ಅಟ್ಟೇ. ಇದಿಷ್ಟು ಪೀಠಿಕೆಂದ ಭಕ್ತಿಂದ ಸಂಕ್ಷಿಪ್ತವಾಗಿ ಪೂಜೆ ಮಾಡ್ಳೆ ಸುರುಮಾಡುವನೋ.
ನೆಲಕ್ಕಂಗೆ ನೀರು ಪ್ರೋಕ್ಷಣೆ ಮಾಡಿ ಎರಡು ಚೌಕಾಕಾರ ಮಂಡ್ಳ ಬರದು ಗಂಧ ಅಕ್ಷತೆ ಹೂಗು ಮಡುಗೆಕು. ಎಡದೊಡೆಮಂಡ್ಳಮೇಗೆ ಒಂದು ಮಣೆ ಮಡುಗಿ ಅದರ್ಲಿ ಪುಸ್ತಕ ಮತ್ತು ಅದಕ್ಕೆ ಸಂಬಂಧಪಟ್ಟ ವಸ್ತುಗಳ ಮಡುಗಿ ಗಂದ-ಅಕ್ಷತೆ ಬೊಟ್ಟು ಮಡುಗೆಕು. ಬಲದೊಡೆಲಿ ಇಪ್ಪ ಚೌಕಮಂಡ್ಳ ಗಣಪತಿದು. ಎದುರೆ ದೀಪ ಹೊತ್ತುಸಿಮಡುಗಿ ದೀಪಕ್ಕೆ ಗಂಧಾಕ್ಷತೆಕುಂಕುಮ ತಾಗಿಸಿ ಒಂದು ಹೂಗು ಮಡುಗಿ ಹೊಡಾಡಿಕ್ಕಿ –
ಆಚಮ್ಯ., ಶ್ರೀ ಗುರುಭ್ಯೋ ನಮಃ | ಶ್ರೀ ಮಹಾಗಣಪತಯೇ ನಮಃ | ಶ್ರೀ ಸರಸ್ವತ್ಯೈ ನಮಃ |
ಆಚಮ್ಯಮಾಡಿ ಶ್ರೀಗುರುದೇವತಾದಿಗಳ ಮನಸ್ಸಿಲ್ಯೇ ನಮಸ್ಕರಿಸಿಗೊಂಬದು
ಗಿಂಡಿಗೆ ತುಳಸಿಹೂಗಂಧಾಕ್ಷತೆಯ ಹಾಕೆಕು –
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಎಡದಕೈಲಿ ಅಕ್ಷತೆ ನೀರು ಹಾಕಿ ಬಲದಕೈ ಮುಚ್ಚಿ ಬಲದ ತೊಡೆಯ ಮೇಗೆ ಮಡಿಕ್ಕೊಂಡು ಮುಂದಾಣ ಸಂಕಲ್ಪ ಮಾಡುವದು.
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||
………… ನಾಮ ಸಂವತ್ಸರೇ …….. ಅಯನೇ …………. ಋತೌ ……….. ಮಾಸೇ ……….. ಪಕ್ಷೇ ……… ತಿಥೌ ……. ವಾಸರಯುಕ್ತಾಯಾಂ ಏವಂ ಗುಣ-ವಿಶೇಷಣ-ವಿಶಿಷ್ಟಾಯಾಂ ಶುಭತಿಥೌ ಮಮ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧಫಲಪುರುಷಾರ್ಥಸಿಧ್ಯರ್ಥಂ ಆಯುರಾರೋಗ್ಯ-ಐಶ್ವರ್ಯಾಭಿವೃದ್ಧ್ಯರ್ಥಂ, ಶ್ರೀ ಮಹಾಗಣಪತಿಪೂರ್ವಕ ಶ್ರೀ ಸರಸ್ವತ್ಯಾಃ ಸಂಪೂರ್ಣಕೃಪಾಕಟಾಕ್ಷ ಸಿದ್ಧ್ಯರ್ಥಂ ವಿದ್ಯಾಬುದ್ಧಿಶ್ರೇಯೋsಭಿವೃದ್ಧ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರಪೂಜಾಂ ಕರಿಷ್ಯೇ || (ಕೈಲಿಪ್ಪ ಅಕ್ಷತೆಯ ಎರಡೂ ಮಂಡ್ಳಕ್ಕೆ ಹಾಕುವದು)
ಪುನಃ ಕೈಲಿ ಹೂ ಗಂಧ ಅಕ್ಷತೆಯ ತೆಕ್ಕೊಂಡು ಎರಡೂ ಮಂಡ್ಳಕ್ಕೆ ಹಾಕ್ಯೊಂಡು ಹೇಳುವದು -– ಓಂ ಗಂ ಗಣಪತಯೇ ನಮಃ , ಶ್ರೀಸರಸ್ವತ್ಯೈ ನಮಃ – ಗಂಧಾಕ್ಷತಪುಷ್ಪಾಣಿ ಸಮರ್ಪಯಾಮಿ
ಗಣಪತಿ ಪೂಜೆ : – ಬಲದೊಡೆಲಿಪ್ಪ ಗಣಪತಿಮಂಡ್ಳಕ್ಕೆ ಪೂಜೆ ಮಾಡುವದು
ಶ್ರೀ ಮಹಾಗಣಪತಿಪೂಜಾಂ ಕರಿಷ್ಯೇ | ಗಣಪತಿ ಮಂಡ್ಳಕ್ಕೆ ಹೂಗು ಹಾಕುವದು.
ಕೈಲಿ ಗಂಧಾಕ್ಷತೆಯನ್ನು ತೆಕ್ಕೊಂಡು ಗಣಪತಿ ಮಂಡ್ಳಕ್ಕೆ ಅರ್ಚನೆ –
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||
ಓಂ ಭೂಃ ಗಣಪತಿಂ ಆವಾಹಯಾಮಿ | ಓಂ ಭುವಃ ಗಣಪತಿಂ ಆವಾಹಯಾಮಿ | ಓಗುಂ ಸುವಃ ಗಣಪತಿಂ ಆವಾಹಯಾಮಿ | ಓಂ ಭೂರ್ಭುವಸ್ಸುವಃ ಗಣಪತಿಂ ಆವಾಹಯಾಮಿ || (ಹೇಳಿಗೊಂಡು ಕೈಲಿಪ್ಪ ಹೂಗಂಧಾಕ್ಷತೆಯ ನಾಲ್ಕು ಸರ್ತಿ ಗಣಪತಿಮಂಡ್ಳಕ್ಕೆ ಹಾಕುವದು)
ಶ್ರೀ ಮಹಾಗಣಪತಯೇ ನಮಃ , ದ್ವಾದಶ ನಾಮ ಪೂಜಾಂ ಕರಿಷ್ಯೇ – (ಹನ್ನೆರಡು ಸರ್ತಿ ಹೂಗು ಹಾಕುವದು) –
ಓಂ ಸುಮುಖಾಯ ನಮಃ | ಓಂ ಏಕದಂತಾಯ ನಮಃ | ಓಂ ಕಪಿಲಾಯ ನಮಃ | ಓಂ ಗಜಕರ್ಣಕಾಯ ನಮಃ | ಓಂ ಲಂಬೋದರಾಯ ನಮಃ | ಓಂ ವಿಕಟಾಯ ನಮಃ | ಓಂ ವಿಘ್ನರಾಜಾಯ ನಮಃ | ಓಂ ಗಣಾಧಿಪಾಯ ನಮಃ | ಓಂ ಧೂಮಕೇತವೇ ನಮಃ | ಓಂ ಗಣಾಧ್ಯಕ್ಷಾಯ ನಮಃ | ಓಂ ಫಾಲಚಂದ್ರಾಯ ನಮಃ | ಓಂ ಗಜಾನನಾಯ ನಮಃ | ದ್ವಾದಶನಾಮಪೂಜಾಂ ಸಮರ್ಪಯಾಮಿ ||
ಶ್ರೀ ಸರಸ್ವತೀಪೂಜೆ – ಎಡದೊಡೆಲಿಪ್ಪ ಸರಸ್ವತೀಮಂಡ್ಳಕ್ಕೆ ಪೂಜೆ
ಶ್ರೀ ಸರಸ್ವತೀಪೂಜಾಂ ಕರಿಷ್ಯೇ (ಪುಸ್ತಕಮಂಡ್ಳಕ್ಕೆ ಹೂಗು ಹಾಕುವದು)
ಕೈಲಿ ಹೂಗಂಧಾಕ್ಷತೆಯ ತೆಕ್ಕೊಂಡು ಪುಸ್ತಕಮಂಡಲಕ್ಕೆ ಅರ್ಚನೆ –
ಓಂ ಬ್ರಹ್ಮಪತ್ನ್ಯೈ ಚ ವಿದ್ಮಹೇ ಮಹಾವಾಣ್ಯೈ ಚ ಧೀಮಹಿ | ತನ್ನಃ ಸರಸ್ವತೀ ಪ್ರಚೋದಯಾತ್ ||
ಓಂ ಭೂಃ ಸರಸ್ವತೀಂ ಆವಾಹಯಾಮಿ | ಓಂ ಭುವಃ ಸರಸ್ವತೀಂ ಆವಾಹಯಾಮಿ | ಓಗುಂ ಸುವಃ ಸರಸ್ವತೀಂ ಆವಾಹಯಾಮಿ | ಓಂ ಭೂರ್ಭುವಸ್ಸುವಃ ಸರಸ್ವತೀಂ ಆವಾಹಯಾಮಿ || (ಹೇಳಿಗೊಂಡು ನಾಕು ಸರ್ತಿ ಹೂಗು ಹಾಕುವದು)
ದ್ವಾದಶನಾಮಪೂಜಾಂ ಕರಿಷ್ಯೇ (ಹನ್ನೆರಡು ಸರ್ತಿ ಹೂಗು ಹಾಕುವದು)
ಓಂ ಸರಸ್ವತ್ರೈ ನಮಃ | ಓಂ ಚಂಡಿಕಾಯೈ ನಮಃ | ಓಂ ಅಂಬಿಕಾಯೈ ನಮಃ | ಓಂ ವೇದಮೂರ್ತೈ ನಮಃ| ಓಂ ಕಾಲರಾತ್ರೈ ನಮಃ | ಓಂ ಜಗನ್ಮಾತ್ರೇ ನಮಃ | ಓಂ ಶಿವದೂತೈ ನಮಃ | ಓಂ ಕ್ಷೇಮಕರ್ಯೈ ನ್ಮಃ | ಓಂಶಿವದಾಯಿನೈ ನಮಃ | ಓಂ ಶತಾಕ್ಷ್ಯೈ ನಮಃ | ಓಂ ಮಹಾದೇವ್ಯೈ ನಮಃ | ಓಂ ಇಂದ್ರಾಣ್ಯೈ ನಮಃ | ದ್ವಾದಶನಾಮಪೂಜಾಂ ಸಮರ್ಪಯಾಮಿ ||
ಶ್ರೀ ಮಹಾಗಣಪತಯೇ ನಮಃ, ಶ್ರೀ ಸರಸ್ವತ್ಯೈ ನಮಃ (ಎರಡೂ ಮಂಡ್ಳಕ್ಕೂ ಕ್ರಮವಾಗಿ ನಾಲ್ಕು ನಾಲ್ಕು ಸರ್ತಿ ನೀರು ಹೂಗು ಗಂಧ ಅಕ್ಷತೆ, ಧೂಪ , ದೀಪ ಸಮರ್ಪಣೆ ಮಾಡುವುದು) –
ಧ್ಯಾಯಾಮಿ, ಪಾದ್ಯಂ ಸಮರ್ಪಯಾಮಿ, ಅರ್ಘ್ಯಂ ಸಮರ್ಪಯಾಮಿ, ಆಚಮನೀಯಂ ಸಮರ್ಪಯಾಮಿ, ಸ್ನಾನಂ ಸಮರ್ಪಯಾಮಿ, ವಸ್ತ್ರಂ ಸಮರ್ಪಯಾಮಿ, ಉಪವೀತಂ ಸಮರ್ಪಯಾಮಿ, ಆಭರಣಂ ಸಮರ್ಪಯಾಮಿ, ಗಂಧಂ ಸಮರ್ಪಯಾಮಿ, ಅಕ್ಷತಾನ್ ಸಮರ್ಪಯಾಮಿ, ಪುಷ್ಪಾಣಿ ಸಮರ್ಪಯಾಮಿ , ಧೂಪಂ ಆಘ್ರಾಪಯಾಮಿ, ದೀಪಂ ದರ್ಶಯಾಮಿ, ಅಮೃತಂ ನಿವೇದಯಾಮಿ (ಎರಡು ದೇವರಿಂಗೂ ಪ್ರತ್ಯೇಕ ಪ್ರತ್ಯೇಕ ಹಾಲು ಹಣ್ಣು ಭಕ್ಷ್ಯ ಭೋಜ್ಯ ಮಡುಗಿ ಪ್ರಪ್ರತ್ಯೇಕ ನೇವೇದ್ಯ ಮಾಡಿ) , ತಾಂಬೂಲಂ ಸಮರ್ಪಯಾಮಿ, (ತಾಂಬುಲನೇವೇದ್ಯ ಮಾಡಿ) ಮಂಗಲನೀರಾಜನಂ ಸಮರ್ಪಯಾಮಿ, (ಮಂಗಳಾರತಿ ಎತ್ತಿ) ಮಂತ್ರಪುಷ್ಪಂ ಸಮರ್ಪಯಾಮಿ , ಪ್ರದಕ್ಷಿಣಂ ಸಮರ್ಪಯಾಮಿ, ನಮಸ್ಕಾರಂ ಸಮರ್ಪಯಾಮಿ, (ಕೈಲಿ ಹೂಗು ತೆಕ್ಕೊಂಡು ಪ್ರದಕ್ಷಿಣೆ ಬಂದು ಹೂಗಾಕಿ ನಮಸ್ಕಾರ ಮಾಡುದು) ಸರ್ವೋಪಚಾರಪೂಜಾಃ ಸಮರ್ಪಯಾಮಿ |
ಕೈ ಮುಕ್ಕೊಂಡು ಪ್ರಾರ್ಥನೆ ಮಾಡುದು –
ವಕ್ರತುಂಡಮಹಾಕಾಯ ಕೋಟಿಸೂರ್ಯಸಮಪ್ರಭ
ಅವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ||
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||
ಸರಸ್ವತಿ ಮಹಾಭಾಗೇ ವಿದ್ಯೇ ಕಮಲಲೋಚನೇ
ವಿಶ್ವರೂಪೇ ವಿಶಾಲಾಕ್ಷಿ ವಿದ್ಯಾಂ ದೇಹಿ ನಮೋಸ್ತುತೇ
ಯಾ ಕುಂದೇಂದುತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ
ಯಾ ವೀಣಾವರದಂಡಾಮಂಡಿತಕರಾ ಯಾ ಶ್ವೇತಪದ್ಮಾಸನಾ
ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ||
ಶುಕ್ಲಾಂ ಬ್ರಹ್ಮವಿಚಾರಸಾರಪರಮಾಂ ಆದ್ಯಾಂ ಜಗದ್ಯಾಪಿನೀ
ವೀಣಾಪುಸ್ತಕಧಾರಿಣೀಂ ಅಭಯದಾಂ ಜಾಡ್ಯಾಂಧಕಾರಾಪಹಾಮ್
ಹಸ್ತೇ ಸ್ಫಟಿಕಮಾಲಿಕಾಂ ವಿದಧತೀ ಪದ್ಮಾಸನೇ ಸಂಸ್ಥಿತಾಮ್
ವಂದೇ ತಾಂ ಪರಮೇಶ್ವರೀಂ ಭಗವತೀಂ ಬುದ್ಧಿಪ್ರದಾಂ ಶಾರದಾಮ್
ಹೇಳಿ ಪ್ರಾರ್ಥನೆ ಮಾಡಿಗೊಂಬದು. ನಮಸ್ಕಾರ ಮಾಡುವದು.
ಶ್ರೀ ಮಹಾಗಣಪತಯೇ ನಮಃ ಪ್ರಸನ್ನಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಗಣಪತಿಮಂಡ್ಳಕ್ಕೆ ಒಂದು ಹೂಗು ಹಾಕಿ ಒಂದು ಸಕ್ಕಣ ನೀರು) ,
ಸರಸ್ವತ್ಯೈ ನಮಃ ಪ್ರಸನ್ನ ಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಪುಸ್ತಕಮಂಡ್ಳಕ್ಕೆ ಒಂದು ಹೂ ಹಾಕಿ ಒಂದು ಸಕ್ಕಣ ನೀರು)
ಮತ್ತೆ ಬಲಕೈಲಿ ಹೂಗು ಗಂಧ ಅಕ್ಷತೆ ಹಿಡ್ಕೊಂಡು ಗಿಂಡಿಂದ ನೀರುಬಿಡುವದು –
ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ಪೂಜಾ ಯಜ್ಣ ಕ್ರಿಯಾದಿಷು |
ನ್ಯೂನ೦ ಸ೦ಪೂರ್ಣತಾ೦ ಯಾತಿ ಸದ್ಯೋ ವ೦ದೇ ತಮಚ್ಚುತ೦ ||
ಅನೇನ ಮಯಾ ಕೃತಪೂಜನೇನ ಶ್ರೀ ಪರಮೇಶ್ವರಃ ಪ್ರೀಯತಾಂ || ಓಂ ತತ್ಸತ್||
ನೀರು ಹಾಕಿ ಎರಡು ಮಂಡ್ಳಕ್ಕೂ ಹಾಕುವುದು. ಗೋತ್ರಪ್ರವರಹೇಳಿ ಅಭಿವಾದನೆ ಮಾಡುವದು , ಪ್ರಸಾದ ತೆಕ್ಕೊಂಬದು.
ಅಂದು ಉದ್ವಾಸನೆ ಮಾಡ್ಳೆ ಇಲ್ಲೆ. ವಿಸರ್ಜನೆ ದಿನ ಉದ್ವಾಸನೆ. ಅಂದು ಇಷ್ಟು ಭಾಗವ ಪೂರೈಸಿಕ್ಕಿ ಮುಂದಾಣ ವಿಸರ್ಜನೆ –
ಆವಾಹಿತದೇವತಾಃ, ಓಂ ಭೂರ್ಭುವಸ್ಸುವರೋಂ ಉದ್ವಾಸಯಾಮಿ || ಎರಡೂ ಮಂಡಲದಿಂದ ಹೂ ತೆಗೆದು ಮೂಸಿ ಹಾಕುವುದ, ಆಚಮನ ಮಾಡುವುದು. ಪುಸ್ತಕ ತೆಗದು ಬಿಡಿಸಿ ಓದಿಬರದು ಮಾಡುವದು.
ಹರಿಃ ಓಂ | ಶುಭಮ್||
** **
- ಚೆನ್ನೈ ಭಾವ°
ಸೂಚನೆಗೆ ಧನ್ಯವಾದಂಗೊ ಗೋವಿಂದ ಬಾವ. ಸದ್ಯದಲ್ಲೇ ನಿರೀಕ್ಷಿಸಿ
Saraswathi pooje, AAyudha Pooje haakiddu thumbaa olledaathu..Madalu haakida nithya pooje Ganapathi Hooma Arghya japa ellavoo thumbaa upaypayoga ippantha manthrngo.. Idara ottige Agni Kaarya matte grihasthara Vyshwa deva SANKSHPTHA kooda dayavittu hakekku heli vinanthi …Idu thumbaa janakkke bekaagittu