Oppanna.com

ಹೆಮ್ಮಕ್ಕಳ ದಿನ – ಹೀಂಗೊಂದು ಚರ್ಚೆ

ಬರದೋರು :   ಪೆಂಗಣ್ಣ°    on   08/03/2011    8 ಒಪ್ಪಂಗೊ

ಪೆಂಗಣ್ಣ°

ಈ ಕೆಪ್ಪಣ್ಣಂಗೆ ಯೇವಾಗಲೂ ಪೆಂಗಣ್ಣನ ನೆಂಪಪ್ಪದು, ಅವ ಬೈಲಿಂಗೆ ಬಾರದ್ದರೂ ಎನ್ನ ಬಿಡ. ಇರಳಿ ಈಗ ಶುದ್ದಿಗೊ ಜಾಸ್ತಿ, ಹಾಂಗೆ ತಿರುಗಾಟವು ಜಾಸ್ತಿ. ಮಾಡ್ತಿಲ್ಲೆ ಹೇದರೆ ಉಣ್ಣೆಡದೋ ಬಾವ ಹೇಳುದು ಆನು ಅವನತ್ರೆ. ಈ ತಿರುಗಾಟಲ್ಲಿ ಬರವಲೂ ಪುರುಸೋತ್ತಿಲ್ಲೆ. ಉದಿಯಪ್ಪಗಲೆ ಹೇಳೆಕ್ಕು ಇದ್ದದರ ಈಗ ಹೇಳುತ್ತಾ ಇದ್ದೆ. ಸಣ್ಣ ಶುದ್ದಿ ಆತಾ. ನಿಂಗಳ ವಿಮರ್ಶೆಗೊಕ್ಕೆ ಸದಾ ಸ್ವಾಗತಮ್.

ಹೇಳಿ ಕೇಳಿ ಇಂದು ಎಲ್ಲಿ ಹೋದರೂ ಒಂದೆ ಶುದ್ದಿ. ಅದೂ ಹೆಮ್ಮಕ್ಕಳದ್ದು. ಎಂತರ? ಕನ್ನಡಲ್ಲಿ ಹೇಳ್ತರೆ ‘ ಅಂತರಾಷ್ಟ್ರೀಯ ಮಹಿಳಾ ದಿನ ‘ ಅಡ. ಎಲ್ಲದಕ್ಕೂ ಒಂದೊಂದು ದಿನ. ವರ್ಶ ಪೂರ್ತಿ ಹೀಂಗಿಪ್ಪ ಆಚರಣೆಗೊ ಇದ್ದು ಹೇಳಿದ್ದ ಎನ್ನ ಒಬ್ಬ ಮಿತ್ರ. ಹಾಂಗೆ ಹೆಮ್ಮಕ್ಕಗೊಂದು ದಿನ ಅಡಾ. ನವಗರಡಿಯ. ಈ ದಿನಂಗೊ ನಮ್ಮ ಸಂಸ್ಕೃತಿಲಿ ಬೇಕಾ ಮೊದಲ ಪ್ರಶ್ನೆ. ಹಾಂಗೆ ಹೇಳಿ ಈ ದಿನ ಬೇಡ ಹೇಳಿರೆ ಹೆಮ್ಮಕ್ಕೊ ಎನ್ನ ಕೂಪಲೆ ಬಿಡವು.

ಎನ್ನ ಕೆಲಸ ಶುದ್ದಿ ಹುಡುಕುದು ಅಲ್ಲದೋ. ಹಾಂಗೆ ಉದಿಯಂದ ತಿರುಗಾಟ ಮಾಡಿದೆ. ಏವ ಅಂಗಡಿ / ಹೋಟೆಲ್ / ಮಾಲ್ ಹೋದರು ಹೆಮ್ಮಕ್ಕೊಗೆ ವಿಶೇಶ ಕಾರ್ಯಕ್ರಮಂಗ. ಆ ಶುದ್ದಿಗೊ ಇಲ್ಲಿ ಬೇಡ. ಹೊತ್ತಪ್ಪಗ ಎಲ್ಲಾ ಟಿ.ವಿ.ಲಿಯೂ ಇದೇ ವಿಶೇಷ. ಹೆಮ್ಮಕ್ಕೊ ಹೆಮ್ಮಕ್ಕಳ ಬಗ್ಗೆ ಚಿಂತನೆಗೊ. ಶೋಭಕ್ಕನ ಕಂಡತ್ತು, ಗುಣಾಜೆ ಮಾಣಿ ಎಲ್ಲಿತ್ತಿದ್ದಿದ್ದ ಹೇಳಿ ದೊಡ್ಡ ಭಾವ ಹುಡ್ಕಿಯೊಂಡಿತ್ತಿದ್ದ.

ಎಲ್ಲಾ ಕಡೆ ಹೆಮ್ಮಕ್ಕೊಗೆ ಅವಕಾಶ ಇಲ್ಲೆ ಹೇಳ್ತದೇ ದೊಡ್ಡ ಶುದ್ದಿ. ಆನು ಎಂತ ಶುದ್ದಿ ಸಿಕ್ಕರೂ ನಮ್ಮ ಸಂಸ್ಕೃತಿಯೊಟ್ಟಿಂಗೆ(ಹವ್ಯಕ) ಸಮೀಕರಿಸುದು ಅಭ್ಯಾಸ.ನಮ್ಮಲ್ಲಿ ಅಮ್ಮಂಗೆ ದೊಡ್ಡ ಸ್ಥಾನ ಮನೆಲಿ ಅಲ್ಲದೊ. ಮನೆಯ ಪೂರ್ತಿ ಜೆವಾಬ್ದಾರಿ ಯಜಮಾನನ ಹೆಂಡತಿದೆ ಅಲ್ಲದೋ. ಗಂಡಂಗೆ ಹೆಂಡತಿಯಾಗಿ, ಮಕ್ಕೊಗೆ ಅಬ್ಬೆಆಗಿ, ಪುಳ್ಯಕ್ಕೊಗೆ ಅಜ್ಜಿ ಆಗಿ, ಅಕ್ಕ, ತಂಗಿ, ಸೊಸೆಯಾಗಿ, ಮನೆಗೆ ಗೃಹಲಕ್ಶ್ಮಿಯಾಗಿ ಸಂಸ್ಕೃತಿಯ ಬೆಳೆಶುದು ಇದೇ ಹೆಮ್ಮಕ್ಕೊ ಅಲ್ಲದೊ. ನಾವು ಹೆಮ್ಮಕ್ಕಳ ದೇವಿಯ ರೂಪಲ್ಲಿ ಕಂಡವು, ನವಗೆ ಹೀಂಗಿಪ್ಪ ಆಚರಣೆಗೊ ಬೇಕಾ?

ಇನ್ನು ಈಗಂತೂ ಎಲ್ಲಾ ವಿಶ್ಯಲ್ಲೂ ಹೆಮ್ಮಕ್ಕೊ ಉಶಾರಿ ಇದ್ದವು. ಯಾವುದೇ ಕ್ಷೇತ್ರಲ್ಲೂ ಕಮ್ಮಿ ಇಲ್ಲೆ. ಆದರೂ ಎಲ್ಲಾ ಕಡೆ ಮಹಿಳಾ ಸಬಲೀಕರಣದ್ದೇ ಶುದ್ದಿ. ಕೆಲವು ಜೆನ ಶೋಷಣೆಯ ಬಗ್ಗೆ ಹೇಳುತ್ತವು. ಆದರೆ ಪುರಾಣ ಕಾಲಂದಲೂ ಹೆಮ್ಮಕೊಗೆ ವಿಷೇಶ ಪ್ರಾಶಸ್ತ್ಯ ಇತ್ತು. ಈ ಮಧ್ಯೆ ಪರಕೀಯರ ದಾಳಿ ನಮ್ಮ ದೇಶದ ಮೇಲೆ ಆದ ಮೇಲೆ ರಜಾ ಹೆಮ್ಮಕ್ಕಳ ಕೀಳಾಗಿ ಕಂಡಿಕ್ಕು. ಅದಕ್ಕೆ ಕಾರಣ ಪರಕೀಯರ ಹಿಂದೆ ಬಿದ್ದ ನಮ್ಮದೇ ಜೆನಂಗೊ ಅಲ್ಲದೋ. ಮತ್ತದೇ ಜೆನಂಗೊ ಸಬಲೀಕರಣದ ಬಗ್ಗೆ ಮಾತಾಡ್ಸು.ಇಂತವರಿಂದಲೆ ಸಮಾಜ ಹಾಳಪ್ಪದು ಹೇಳ್ತದು ಎನ್ನ ಅಭಿಪ್ರಾಯ.

ಅಂಬ್ರೇಪಿಲಿ ಬರೆದ ಈ ಶುದ್ದಿಯ ಬಗ್ಗೆ ಆರೋಗ್ಯಕರ ಚರ್ಚೆ ಆಯೆಕ್ಕು ಹೇಳ್ತದು ಎನ್ನಾಶೆ.

ಬೈಲಿನ ಎಲ್ಲಾ ಅತ್ತೆಯಕ್ಕೊ, ಅತ್ತಿಗೆಕ್ಕೊ, ಅಕ್ಕ-ತಂಗಿಯಕ್ಕೊ, ಅಜ್ಜಿ, ಚಿಕ್ಕಮ್ಮ-ದೊಡ್ಡಮ್ಮ ಎಲ್ಲರಿಂಗೂ ಸದಾಶಯಗಳೊಟ್ಟಿಂಗೆ ವಂದನೆಗೊ. ನಮ್ಮ ಸಂಸ್ಕೃತಿಯ ಉಳಿಸಿ ಬೆಳೆಶುವಲ್ಲಿ ಎಲ್ಲರೂ ಸಹಕಾರಿಯಪ್ಪೊ ಆಗದೋ? ಒಂದು ದಿನ ಆಚರಣೆ ಮಾಡುವ ಬದಲು ಜೀವನದುದ್ದಕ್ಕೂ  ಅನುಸರಿಸುವ ಆಗದೋ?

~

ಪೆಂಗ ಪ್ರಮ್ ಬೈಲು.
bingi.penga@gmail.com

8 thoughts on “ಹೆಮ್ಮಕ್ಕಳ ದಿನ – ಹೀಂಗೊಂದು ಚರ್ಚೆ

  1. ಇದು ಸಂಗತಿ ಎಂತ ಹೇಳಿದರೆ, ಗುರುಗಳ ದಿನ ಹೇಳಿ ಶಿಷ್ಯರು ಆಚರಣೆ ಮಾಡುವುದು ಆದರೆ ಕಾರ್ಮಿಕರ ದಿನ ಕಾರ್ಮಿಕರೇ ಆಚರಣೆ ಮಾಡೆಕಷ್ಟೆ. ಹಾಂಗೆ ಮಹಿಳೆಯರ ದಿನ ಹೇಳಿ ಯಾರು ಆಚರಣೆ ಮಾಡುವದು ಹೇಳಿ ಗೊಂತಾಯಿದಿಲ್ಲೆ. ಒಂದುವೇಳೆ ಅತ್ತೆ ಸೊಸೆ ಜಗಳ ಮಾಡುವದು ಬೇಡ ಹೇಳಿ ಮನೆಲಿಪ್ಪ ಗಂಡಸರೆಲ್ಲಾ ಸೇರಿ ಮನೆಯ ಮಹಿಳೆಯರೆಲ್ಲಾ ಒಟ್ಟಿಂಗೆ ಕೂರಿಸಿ ಒಂದು ಆಚರಣೆ ಮಾಡುವದಾ ಹೇಳಿ ಕಾಣ್ತು.

  2. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಹ”, ಇದು ಬರೇ ಸುಭಾಶಿತ ಅಲ್ಲ…
    ಭಾರಿ ತೂಕಗರ್ಭಿತ ಮಾತು. ಹೆಮ್ಮಕ್ಕೊ, ಪೆ೦ಗಣ್ಣ ಹೇಳಿದಾ೦ಗೆ – ತಾಯಿಯಾಗಿ, ಅಕ್ಕ ಆಗಿ.. ಹೆ೦ಡತ್ತಿಯಾಗಿ.. ಅಜ್ಜಿಯಾಗಿ.. ಹಲವಾರು ರೀತಿಲಿ ಪಾತ್ರವಹಿಸುತ್ತವು..
    ನಮ್ಮ ಜೀವನದ ಬೆನ್ನೆಲುಬು ಹೇಳಿ ಹಿರಿಯರು ಹೇಳಿದ್ದವು.. ಅದು ಸತ್ಯಕೂಡ..
    ಹಾ ಮತ್ತೆ ಜೀವನ ಇಡೀ ಆಚರಣೆ.. ಮಾಡ್ತು ಎನಗೊತಿಲ್ಲೆ.. 😉

  3. ಪೆ೦ಗಣ್ಣಾ,
    ಒಳ್ಳೆ ವಿಚಾರ.ನಮ್ಮ ಸ೦ಸ್ಕೃತಿ,ಸ೦ಸ್ಕಾರ೦ಗಳ ಜೀವನದ ಪ್ರತಿದಿನವೂ ಅನುಸರಿಸುವ.ಆವಗೆ ಈ ದಿನ೦ಗಳ ಆಚರಣೆಯ ಅಗತ್ಯವೇ ಇಲ್ಲೆ.
    ಜಯಶ್ರೀ ಅಕ್ಕ ಕೊಟ್ಟ ಕೊ೦ಡಿ ಒಳ ಹೋಪಲೆ ಎಡ್ತತ್ತಿಲ್ಲೆನ್ನೇ.

  4. ಹರೇ ರಾಮ,
    ನಿಂಗ ಹೇಳಿದ್ದು ಸರಿ.
    “ಮಹಿಳೆ ಖಂಡಿತ ಅಬಲೆ ಅಲ್ಲ, ಸಬಲೆ”. ನಮ್ಮ ಭಾರತೀಯರಿಂಗೆ ಇದು ಗೊಂತಿದ್ದತ್ತು. ಈಗಲೂ ಗೊಂತಿದ್ದು. ನಿಂಗ ಹೇಳಿದ ಹಾಂಗೆ ಒಂದು ದಿನ ಆಚರಣೆ ಮಾಡುವ ಬದಲು ಜೀವನದುದ್ದಕ್ಕೋ ಆಚರಿಸುವ ಹಾಂಗಾಗಲಿ.

    ಅದರೂ ಸಿಕ್ಕಿದ ಅವಕಾಶವ ಬಿಡುದು ಬೇಡ. ಈ ದಿನವ ನಾವು ಸದುಪಯೋಗ ಮಾಡುವ. ಮರತ್ತು ಹೋಗಿದ್ದರೆ ನೆನಪು ಮಾಡುಲೆ ಇದು ಸದವಕಾಶ. ಈ ಕೆಳಾಣ ಸಂಕೋಲೆ ತುಂಬಾ ಲಾಯಕ ಇದ್ದು.

    https://docs.google.com/viewer?a=v&pid=gmail&attid=0.1&thid=12e972e80ee9a7a1&mt=application/vnd.ms-powerpoint&url=https://mail.google.com/mail/?ui%3D2%26ik%3D8735f145cf%26view%3Datt%26th%3D12e972e80ee9a7a1%26attid%3D0.1%26disp%3Dsafe%26realattid%3Dee316f96f913d4b9_0.1%26zw&sig=AHIEtbS9_Os7oz0L80eCCM4s7kYPsLdSwQ&pli=1

  5. ಅಂತೂ ಪೆಂಗಣ್ಣ , ನಿಂಗಳೂ ಅವರೊಟ್ಟಿನ್ಗೆ ಸೇರಿಗೊಂಡಿ. ನವಗೊಂದು (ಗೆಂಡುಮಕ್ಕೊಗೆ) ದಿನ ಹೇಳಿ ಮಡುಗಿದ್ದವಿಲ್ಲೆ ನೋಡಿ. ಆ ದೇವರು ಕೊಟ್ಟರೆ ಮಾತ್ರ ನಮ್ಮ ದಿನ!!

    “…ಒಂದು ದಿನ ಆಚರಣೆ ಮಾಡುವ ಬದಲು ಜೀವನದುದ್ದಕ್ಕೂ ಅನುಸರಿಸುವ ಆಗದೋ?” – ‘ಮಾತೃ ದೇವೋ ಭವ’ ಎಂದೂ ಸತ್ಯವಾಗಿರಲಿ ಹೇಳಿಗೊಂಡು ಇಲ್ಲಿಂದ ಒಂದು ಒಪ್ಪ.

    1. ನವಗೊಂದು ದಿನ ಬೇಕೋ ಭಾವ. ನಮ್ಮ ದಿನ ಹೇಳಿರೆ, ಎನಗೆಂತೋ ಆಭಾಸ ಕಾಣುತ್ತು. ಮಕ್ಕೊ ಆಚರುಸುವ ಆ ದಿನ ಈಗಳೇ ಬೇಡ ಅಲ್ಲದೊ ?!!

      1. ವಿಷಯ ಅದುವೇ ಬೊಳುಂಬು ಭಾವ. ಬಾಯಿ ಬಿಟ್ಟು ಹೇಳಿದ್ದಿಲ್ಲೆ ಅಷ್ಟೇ.

        ಗುರುಗಳ ದಿನ (teachers day) , ಹಿರಿಯೋರ ದಿನ , ಹೆಮ್ಮಕ್ಕಳ ದಿನ, ಮಕ್ಕಳ ದಿನ , ಪ್ರೇಮಿಗಳ ದಿನ , ನಿಂಗೊಗೆ ಕಾರ್ಮಿಕ ದಿನ ಎಂತಕೆ ಅದಾ ಮೂರ್ಖರ ದಿನ ಎಲ್ಲೋರಿಂಗೂ ಕೊಟ್ಟತು. ನವಗಂಬಗ ಗೆಂಡುಮಕ್ಕಳ ದಿನ ?! ಉಮ್ಮಾ ನಿಂಗೋಗೆ ಬೇಡದ್ರೆ ಎನಗೂ ಬೇಡ. ಆನು ಆದಿತ್ಯವಾರವೂ ಆಫೀಸಿಲ್ಲಿ ಕೂಬವ.!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×