Oppanna.com

ವಿಶ್ವ ವಿದ್ಯಾಲಯ – ವಿಶ್ವಾಸ, ವಿದ್ಯೆಯೇ ಲಯ!

ಬರದೋರು :   ಒಪ್ಪಣ್ಣ    on   18/03/2011    27 ಒಪ್ಪಂಗೊ

ದೂರಲ್ಲಿ ಕೂದು ನಮ್ಮ ಭಾಶೆಯ ಮರದೋರ ಬಗ್ಗೆ, ದೂರಂದಲೇ ನಮ್ಮ ಭಾಶೆಯ ನೆಂಪುಮಡಿಗಿದೋರ ಬಗ್ಗೆ – ನಾವು ಕಳುದವಾರಂದ ಶುದ್ದಿ ಮಾತಾಡಿದ್ದು.
ಭಾಶೆ ಮರದರೂ ಭಾಶೆ ಇಪ್ಪೋರು, ಭಾಶೆ ನೆಂಪಿದ್ದರೂ ಭಾಶೆಇಲ್ಲದ್ದೋರು – ಈ ನಮುನೆ ಜೆನಂಗಳ ಬಗ್ಗೆಯೂ ನಾವು ಶುದ್ದಿ ತೆಗದ್ದು.
ಭಾಶೆ, ನಮ್ಮತ್ವ ಒಳಿಶುತ್ತದರ ಬಗ್ಗೆ ವಿಶೇಷ ಚಿಂತನೆಯೂ ಆಯಿದು ಬೈಲಿಲಿ.
ಕೇಜಿಮಾವನ ಇಂಜೆಕ್ಷನಿಲಿ ಅಂತೂ ಅರ್ದ ಒರಕ್ಕಿಲಿ ಇದ್ದೋನು ಎದ್ದು ಕೂದ ನಮುನೆ ಆತಿದಾ! 😉
ಅದಿರಳಿ.
ಎಲ್ಲರ ಭಾವವೂ ಒಂದೇ ನಮುನೆ, ತೋರುಸಿಗೊಂಬ ರೀತಿ ಬೇರೆಬೇರೆ ಇಕ್ಕು!
~

ನಿನ್ನೆಲ್ಲಮೊನ್ನೆ ಕೊಳಚ್ಚಿಪ್ಪು ಭಾವನ ಮನೆಗೆ ಹೋಗಿತ್ತಿದ್ದೆ.
ಹೋದ್ದೆಂತಕೆ? ಅಂತೇ!
ಆಚಮನೆದೊಡ್ಡಣ್ಣ ಹೊಸಾ ಬೈಕ್ಕು ತೆಗದ ಮತ್ತೆ ನವಗೆ ಅತ್ತಿತ್ತೆ ಹೋಪದಕ್ಕೆ ವಿಶೇಷ ಕಾರಣ ಹೇಳಿ ಏನೂ ಇರ್ತಿಲ್ಲೆ! 😉
ಹೋಯೆಕ್ಕು ಕಂಡ್ರೆ ಹೋಪದು, ಬಡಬಡನೆ!
ಬೈಕ್ಕಿನ ಹೇಂಡ್ಳು ಹೇಂಗೆ ತಿರುಗುತ್ತೋ – ಕೂದ ಮೇಗೆಯೇ ಅಂದಾಜಿ ಅಪ್ಪದು.
ಮೊನ್ನೆ ಮುಳ್ಳೇರಿಯಕ್ಕೆ ಹೋಗಿಪ್ಪಾಗ ಟೇಂಕಿಲಿ ಕುತ್ತ ಪೆಟ್ರೋಲು ತುಂಬುಸಿದ್ದನಾಡ, ಹಾಂಗಾಗಿ ಎಡೆದಾರಿಲಿ ನೂಕೆಕ್ಕಾದ ತಲೆಬೆಶಿ ಇಲ್ಲೆ! ಮೊನ್ನೆ ಕೊಳಚ್ಚಿಪ್ಪು ಮಾರ್ಗಲ್ಲೆ ಆಗಿ ಮಾಲಿ ಬೈಕ್ಕು ಎಡತ್ತಿಂಗೆ ತಿರುಗಿತ್ತು, ಅದ – ಕೊಳಚ್ಚಿಪು ಬಾವನ ಮನೆಗೆ!
~
ಗಂಟೆ ಹತ್ತೂವರೆ ಆದರೂ ಕೊಳಚ್ಚಿಪ್ಪುಬಾವ° ಎದ್ದಿತ್ತಿದ್ದನಿಲ್ಲೆ.
ಒಪ್ಪಣ್ಣ ಹೋಪದ್ದೇ – ಬೆನ್ನಿಂಗೆ ಉರಿಕಚ್ಚಿದ ಹಾಂಗೆ – ಎದ್ದು ಕೂದಿಕ್ಕಿದ°! ಪಕ್ಕನೆ ಹಸೆಮಡುಸಿ ಹಲ್ಲುತಿಕ್ಕಿ ಬಂದ°.
ಆಗಂದ ಏಳುಸುಲೆ ಹೆರಟು ಸೊರಬಿದ್ದ ಕೊಳಚ್ಚಿಪ್ಪು ಅತ್ತೆಗೆ ಈ ಚೋದ್ಯ ಕಂಡು ಆಶ್ಚರ್ಯವೇ ಆಶ್ವರ್ಯ! 😉
ಇನ್ನುದೇ ಒರಗಿರೆ ಒಪ್ಪಣ್ಣ ಬೈಲಿಂಗಿಡೀ ಹೇಳುಗು ಹೇಳಿ ಹೆದರಿಗೊಂಡನೋ ಏನೋ! ಉಮ್ಮಪ್ಪ!!

ಜ್ಞಾನ ಗಂಗೋತ್ರಿ - ಜ್ಞಾನ ಹುಟ್ಟೇಕಾದಲ್ಲಿ ಬೇರೆಂತದೋ ಹುಟ್ಟುತ್ತೋ..?

~
ಮುನ್ನಾಣದಿನ ಇರುಳು ಅವ° ಬಸ್ಸಿಲಿ ಬಂದದಷ್ಟೇ ಅಡ – ಮಯಿಸೂರಿಂದ, ಕೊಳಚ್ಚಿಪ್ಪು ಅತ್ತೆ ಹೇಳಿದವು.
ಉದೆಕಾಲಕ್ಕೆ ಮನಗೆ ಎತ್ತಿ ಮನುಗಿದವ° ಹತ್ತು-ಹನ್ನೊಂದು ಗಂಟೆ ಒರೆಂಗೆ ಒರಗುತ್ತದು ಇಪ್ಪದೇ ಇದಾ!
ಆಟಕ್ಕೆ ಹೋದ ಮುಳಿಯಬಾವನೂ ಒಂದೊಂದರಿ ಹಾಂಗೇ ಮಾಡುಗು – ಲವಕುಶರು ಯುದ್ಧ ಸುರುಮಾಡುವಗಳೇ ಏಳುದು!! 😉
ಅದಿರಳಿ,
ಕೊಳಚ್ಚಿಪ್ಪುಬಾವ° ಉದೆಕಾಲಕ್ಕೆ ಮಯಿಸೂರಿಂದ ಬಂದು ಒರಗಿದೋನು ಈಗ ಎದ್ದದಷ್ಟೇ!
ಅಪ್ಪು, ಅವ° ಹಾಂಗೇ, ಒಂದಿನ ಮಯಿಸೂರು, ಒಂದಿನ ಬೆಂಗುಳೂರು, ಒಂದಿನ ಡೆಳ್ಳಿ, ಒಂದಿನ ಬೈಲು, ಒಂದಿನ ಶಿರ್ಸಿ – ಹೀಂಗೆ ಊರಿಡೀ ಗುರ್ತದೋರೇ, ಊರಿಡೀ ಬೇಕಾದೋರೇ!
~

ನಿನ್ನೆ ಮಯಿಸೂರಿಂಗೆ ಹೋದ್ದೆಂತಕೆ ಅಂಬಗ – ಕೇಳಿದೆ; ಚೆಂಡಿಹರ್ಕಿಲಿ ಚೆಂಡಿ ಮೋರೆಉದ್ದಿಗೊಂಡು ಬಂದ ಕೊಳಚ್ಚಿಪ್ಪು ಬಾವನ ಹತ್ತರೆ!
ಅಂಬಗ ಗೊಂತಾತು ಅವ ವಿಶ್ವವಿದ್ಯಾಲಯಕ್ಕೆ ಹೋದ್ದದು – ಹೇಳಿಗೊಂಡು.
ಸಮಾಜಶಾಸ್ತ್ರಲ್ಲಿ ಎಮ್ಮೆ ಕಟ್ಟೇಕು – ಹೇಳಿ ಆಶೆ ಇದ್ದಾಡ ಆ ಮಾಣಿಗೆ!
ಊರಿನ ಇಷ್ಟೆಲ್ಲ ಒಯಿವಾಟುಗಳ ಎಡಕ್ಕಿಲಿ ಅದೂ ಒಂದು ಆಶೆಮಡಗಿದ್ದು ಒಪ್ಪಣ್ಣಂಗೆ ಭಾರೀ ಕೊಶಿ ಆತು.
~
ಕೊಳಚ್ಚಿಪ್ಪುಮಾವನ ಹತ್ರೆ ದೊಡ್ಡಣ್ಣ ಏನೋ ಅಡಕ್ಕೆ ಪಂಚಾತಿಗೆ ಸುರುಮಾಡಿದ°.
ಬಾಬು ಅಡಕ್ಕೆಕೊಯಿವಲೆ ಬಾರದ್ದೆ ಮತ್ತೆ ಮೂರ್ನೇ ಕೊಯಿಲುದೇ, ಕಡೆಕ್ಕೊಯಿಲುದೇ ಒಂದೇ ಮಾಡಿದ – ಶುದ್ದಿಯ ಹೇಳಿಗೊಂಡಿತ್ತಿದ್ದ° ದೊಡ್ಡಣ್ಣ.
ಕೊಳಚ್ಚಿಪ್ಪುಮಾವ ಹೂಂಕುಟ್ಟಿಗೊಂಡೇ ಚೆಂಡಿಹರ್ಕು ಬೀಸಿಗೊಂಡಿತ್ತಿದ್ದವು, ನೆಳವು ಓಡುಸಲೂ ಆತು, ಸೆಕೆ ಅಪ್ಪದಕ್ಕೂ ಆತು – ಹೇಳಿಗೊಂಡು!!
ಕೊಳಚ್ಚಿಪ್ಪುಬಾವಂಗುದೇ ಎರಡೊಂದು ಮಾಡ್ಲಕ್ಕು, ಉದಿಯಪ್ಪಗಾಣದ್ದುದೇ, ಮದ್ಯಾನದ ಊಟವುದೇ.
ಆದರೆ ಅವ° ಮಾಡ°, ಎರಡನ್ನೂ ಬಿಟ್ಟಿಕ್ಕ° ಇದಾ! 😉
~
ದೊಡ್ಡವರ ಗಂಭೀರ ಮಾತುಕತೆಗೆ ತೊಂದರೆ ಆಗದ್ದ ನಮುನೆ ಮೆಲ್ಲಂಗೆ ಕೇಳಿದೆ ಕೊಳಚ್ಚಿಪ್ಪುಬಾವನ ಹತ್ರೆ – ಮೊನ್ನೆ ಅದೆಂತದೋ ವಿಶ್ವವಿದ್ಯಾಲಯದ ಶುದ್ದಿ ಬಂದಿತ್ತು ಪೇಪರಿಲಿ – ಅದೆಂತರ ಹೇಳಿಗೊಂಡು.!!

ಮೊನ್ನೆ ಒಂದೆರಡು ದಿನ ಪೇಪರಿಲಿ ಅದರದ್ದೇ ಗವುಜಿ! ವಿಶ್ವವಿದ್ಯಾಲಯಲ್ಲಿ ಹಾಂಗಾತು, ಹೀಂಗಾತು – ಹೇಳಿಗೊಂಡು!!
ಅದೆಂತರ ಹೇಳ್ತದು ಸಮಗಟ್ಟು ನವಗೆ ಗೊಂತಾಯಿದಿಲ್ಲೆ. ಹಾಂಗಾಗಿ ಗೊಂತಿಪ್ಪ ಕೊಳಚ್ಚಿಪ್ಪುಬಾವನ ಹತ್ರೆ ಕೇಳಿದೆ!

ಕೊಳಚ್ಚಿಪ್ಪುಬಾವಂಗೆ ಅದೆಲ್ಲ ಅರಡಿಗಿದಾ.
ಅವಂಗೆ ಮದಲೇ ಗೊಂತಿಕ್ಕು ಹೇಳಿ ಅಲ್ಲ, ಆದರೆ ಹೀಂಗುರ್ತದರ ಕೂಡ್ಳೇ ತಿಳ್ಕೊಂಗು!
ಅರಡಿಗಾದ್ದರ ಅವ° ಹೇಳುಗು.
– ಹೀಂಗುರ್ತ ವಿಶಯಂಗಳಲ್ಲಿ ಒಪ್ಪಣ್ಣ ನಂಬುದು ಅವನನ್ನೇ!

ಉದಿಉದಿಅಪ್ಪಗಳೇ ಆ ಶುದ್ದಿ ತೆಗದು ಹಾಳುಮಾಡಿದೆನ್ನೇ – ಹೇಳಿಗೊಂಡು ಒಂದು ನೆಗೆಮಾಡಿ, ಶುದ್ದಿ ಹೇಳುಲೆ ಸುರುಮಾಡಿದ°.
~

ಈಗಾಣ ವಿಶ್ವವಿದ್ಯಾಲಯಂಗಳಲ್ಲಿ ನಿಜವಾದ ವಿದ್ವತ್ತು ಇಪ್ಪೋರಿಂದಲೂ ಹೆಚ್ಚು ಜಾತಿ ಲೆಕ್ಕಲ್ಲಿ ಬಂದು ಕೂದೋರು ಹೆಚ್ಚು ಇಪ್ಪದಡ – ಎಲ್ಲೋರು ಅಲ್ಲ, ಕೆಲವು ಜೆನ!
ವಿಜ್ಞಾನ ಹೇಳಿಕೊಡ್ತದರಿಂದಲೂ ಮಾರ್ಕಿಷ್ಟು ತತ್ವಂಗಳ ತುರ್ಕುವೋರೇ ಇಪ್ಪದಾಡ –
ಕೆಲವು ಜೆನ – ಒಂದರಿ ಪರೀಕ್ಷೆ ಪಾಸಾಗಿ ಲೆಗುಚ್ಚರ ಅಪ್ಪಲೆತಕ್ಕ ಓದುತ್ತವಡ, ಮತ್ತೆ ಅವರ ಜನ್ಮಲ್ಲಿ ಪುಸ್ತಕ ಮುಟ್ಟುತ್ತವಿಲ್ಲೇಡ.
ಕೆಲಸಕ್ಕೆ ಸೇರಿ ಆದ ಮೇಗೆ ಓದಲೆ ಹೇಂಗೂ ಇರ್ತಿಲ್ಲೆ, ಮಾಡ್ಳೆ ಎಂತಾರು ಕೆಲಸ ಬೇಕನ್ನೆ, ಅದಕ್ಕೆ ಸಂಘರ್ಷ ಸಮಿತಿ, ಓರಾಟ ಸಮಿತಿಗಳ ಮಾಡಿಗೊಂಡು, ಮೀಟಿಂಗು, ಹಕ್ಕೊತ್ತಾಯ ಧರಣಿಗಳ ಮಾಡಿಗೊಂಡು ಹೊತ್ತುಕಳೆತ್ತದಡ.
ರಜಾ ಗೆಡ್ಡಬಿಟ್ಟು, ಚೂಡಿದಾರದ ನಮುನೆ ಅಂಗಿ ಹಾಕಿಂಡರೆ ಬುದ್ಧಿವಂತ° – ಹೇಳಿ ಲೆಕ್ಕ ತೆಕ್ಕೊಳೇಕಡ!
ಸೇರಿದ ಕೂಡ್ಳೆ ಆರಾರು ಹೆರಿಯೋರ ಕೈಕ್ಕಾಲಿಂಗೆ ದಮ್ಮಯ ಹಾಕಲೆ ಸುರುಮಾಡಿರೆ ಬೇಗ ಬೇಗ ಪ್ರೊಮೋಶನು ಆವುತ್ತಡ.
ಪ್ರೊಮೋಶನು ಆರಿಂಗೆ ಬೇಡ! – ಎಲ್ಲೋರಿಂಗೂ ಹೆಂಡತ್ತಿಮಕ್ಕೊ ಇರ್ತವಲ್ಲದೋ!
ಮಾಡೆಕ್ಕಾದ ಕಾರ್ಯ ಸಮಗಟ್ಟು ಮಾಡದ್ದರೆ ಬಿಟ್ಟಿಚಾಕ್ರಿ ಮಾಡೆಕ್ಕಾವುತ್ತಿದಾ! – ಹಾಂಗಾಗಿ ಮೇಗಾಣೋರು ಮಾಡುಸುತ್ತವು, ಕೆಳಾಣೋರು ಮಾಡ್ತವು.
ಮೇಗಾಣೋರು ಮಾಡುಸಿಗೊಂಬದು ಎಂತ್ಸಕೆ ಹೇಳಿತ್ತುಕಂಡ್ರೆ, ಅವು ಅವರಿಂದ ಮೇಗಾಣೋರ ಬಿಟ್ಟಿಚಾಕ್ರಿ ಮಾಡಿರ್ತವು! ಹಾಂಗೆ.
ಮೇಗಾಣವರ ಗುಟ್ಟುಗೊ ಕೆಳಾಣೋರಿಂಗೆ ಅರಡಿಗು, ಕೆಳಾಣೋರ ಜೊಟ್ಟು ಮೇಗಾಣೋರ ಹತ್ತರೆ ಇರ್ತು!
ಹಾಂಗಾಗಿ, ಇಬ್ರಿಂಗೂ ಇಬ್ರೂ ಮನಸ್ಸಿನೊಳವೇ ಹೆದರಿಗೊಂಡು, ಹೆದರಿಸೆಂಡು ಜೀವನ ದೂಡ್ತದಡ.
ಇದೆಲ್ಲ ಒಯಿವಾಟುಗಳೆಡಕ್ಕಿಲಿ ಪುರುಸೊತ್ತಾದರೆ ಒಂದೊಂದರಿ ಕ್ಳಾಸಿಂಗೆ ಹೋಗಿ ಮಕ್ಕೊ ಬಯಿಂದವೋ ನೋಡಿಕ್ಕಿ ಬಪ್ಪದಾಡ.
~
ಇದರೊಟ್ಟಿಂಗೆ, ಇನ್ನೊಂದು ವಿಶಯ ಇದ್ದು.
ನಿಜವಾಗಿ ನೋಡಿರೆ, ಲೆಗುಚ್ಚರಂಗೆ ಅನುಭವ ಆದ ಹಾಂಗೆಯೇ – ಅವನಂತೆಯೇ ಕೆಲವು ಜೆನವ ಸಿದ್ಧಮಾಡಿ ದೇಶಸೇವೆ ಮಾಡೆಕ್ಕಲ್ಲದೋ – ಹಾಂಗೆ ಪ್ರೊಪೆಸರಂಗೊಕ್ಕೆ ಇನ್ನೊಬ್ಬಂಗೆ ಮಾರ್ಗದರ್ಶನದ ಜೆವಾಬ್ದಾರಿಯೂ ಕೊಡ್ತವಡ.
ಅದಕ್ಕೆ “ಗೈಡು” ಹೇಳುದಡ.
ಹಾಂಗೆ ಗೈಡು ಆಗಿಪ್ಪವ° ತನ್ನ ಹತ್ತರಂಗೆ ಬಪ್ಪ ವಿದ್ಯಾರ್ಥಿಗೊಕ್ಕೆ ಯೇವದಾರೊಂದು ವಿಶಯಲ್ಲಿ ಅಧ್ಯಯನ ಮಾಡ್ಳೆ ಸಕಾಯ ಮಾಡಿ ಅವನನ್ನೂ ಡಾಗುಟ್ರೇಟು ಮಾಡುಸೇಕಡ.
ಕೆಲವು ಜೆನ ಅಲ್ಲಿಯೂ ಮೋಸವೇ ಅಡ!!
– ಆಗ ಮಾತಾಡಿದ ಹಾಂಗೆ ಕಳ್ಳದಾರಿಲಿ ಬಂದೋರಿಂಗೆ ಇನ್ನೊಬ್ಬಂಗೆ ಹೇಳಿಕೊಡ್ತ ನಮುನೆ ಏನಾರು ಗೊಂತಿದ್ದರಲ್ಲದೋ!
ಅಂತೇ ಆರಾರ ಬೈಕ್ಕೊಂಡು ತಿರುಗಿದೋರಿಂಗೆ “ಹೇಳಿಕೊಡಿ” ಹೇಳಿರೆ ಮರಿಯಾದಿ ಹೋಗದೋ – ಅದಕ್ಕೆ ಆ ಹೆಡ್ಡುಕೆಲಸಕ್ಕೆ ಹೆರಡ್ತವೇ ಇಲ್ಲೇಡ.
ಹೆರಟ ಕೆಲವುಜೆನವುದೇ ಬರ್ಕತ್ತಿಂಗೆ ಕೆಲಸ ಮಾಡ್ತವಿಲ್ಲೆಡ!
ಅವರ ಹತ್ತರೆ ಮಾರ್ಗದರ್ಶನಕ್ಕೆ ಹೇಳಿ ಬಂದೋರ ಹತ್ತರೆ ನಾಯಿಂದ ಕಡೆ ಕೆಲಸ ಮಾಡುಸುತ್ತವಡ.
ಮನಗೆ ಅಳತ್ತೊಂಡೆ ಸೌತ್ತೆ ನೆಟ್ಟಿಕಾಯಿ ತಪ್ಪದರಿಂದ ಹಿಡುದು, ಮಗನ ಶಾಲಗೆ ಕರಕ್ಕೊಂಡು ಹೋಪದರಿಂದ ತೊಡಗಿ, ಆಪೀಸಿನ ಉದ್ದಿಉಡುಗಿ ಮನಾರ ಮಾಡ್ತಲ್ಲಿ ಒರೆಂಗೆ ಆಯೇಕಾದ ಅಕ್ಕಾದ ಆಗದ್ದ ಸಮಸ್ತ ಕಾರ್ಯಂಗಳನ್ನೂ ಮಾಡಿಸಿಗೊಳ್ತವಡ.
~
ಇನ್ನು, ಕಲಿವಲೆ ಬಂದೋರು ಕೂಸುಗೊ / ಹೆಮ್ಮಕ್ಕೊ ಆದರೆ ಕೇಳುದೇ ಬೇಡ!
ಮೊನ್ನೆ ಪೇಪರಿಲಿ ಬಂದದು ಇದೇ ನಮುನೆ ಒಂದು ಶುದ್ದಿ ಅಡ.
ಮದುವೆ ಆಗಿ ನೆಮ್ಮದಿಯ ಸಂಸಾರ ಮಾಡಿಗೊಂಡಿದ್ದ ಒಂದು ಹೆಮ್ಮಕ್ಕೊಗೆ “ಇನ್ನೂ ಕಲಿಯೇಕು” – ಹೇಳಿ ಆತಡ.
ಹಾಂಗೆ, ಒಂದು ಗೈಡನ ಹಿಡುದತ್ತಾಡ.
ವಿದ್ಯಾತುರಾಣಾಂ ನಸುಖಂ ನ ನಿದ್ರಾ!! – ಹಾಂಗೇ ಆತುದೇ.
ಸರಿಯಾಗಿ ಕಲಿಯೇಕು ಹೇಳ್ತ ಈ ಹೆಮ್ಮಕ್ಕೊಗೆ ನೆಮ್ಮದಿಯ ಒರಕ್ಕುದೇ ಬಾರದ್ದ ನಮುನೆ ಮನಸ್ಥಿತಿ ಆಗಿ ಬಿಟ್ಟತ್ತು!
ಆರಂಭಲ್ಲಿ ಚೆಂದಕೇ ನೆಡಕ್ಕೊಂಡತ್ತು, ಆದರೆ ರಜ ಸಮೆಯ ಆಗಿಅಪ್ಪಗಳೇ ಅದರ ದುರ್ಬುದ್ಧಿ ಗೊಂತಾತಡ!
ವಿದ್ಯಾಭ್ಯಾಸಕ್ಕಾಗಿ ಬಂದ ಈ ಹೆಮ್ಮಕ್ಕಳ ಹತ್ತರೆಯೇ ಅದರ ದುರ್ಬುದ್ಧಿ ತೋರುಸಲೆ ಸುರು ಮಾಡಿತ್ತಡ!
ಕಾಮಾತುರಾಣಾಂ ನಭಯಂ ನ ಲಜ್ಜಾ!! – ಹಾಂಗೇ ಆತುದೇ! ಕಳ್ಳ ಬುದ್ಧಿಯ ಆ ಲೆಗುಚ್ಚರು ಮರಿಯಾದಿ ಕೆಡ್ತ ವೆಗ್ತಿತ್ವ ತೋರುಸಲೆ ಸುರುಮಾಡಿತ್ತಾಡ!

ಮರಿಯಾದಸ್ಥ ಮನೆತನದ ಆ ಹೆಮ್ಮಕ್ಕೊಗೆ – ತನ್ನ ಸಂಸಾರ ಜೀವನಕ್ಕೆ ಅನ್ಯಾಯ ಆವುತ್ತಾ ಇದ್ದು ಹೇಳ್ತದು ಮನಸ್ಸಿಂಗೆ ಬಂತಡ.
ದಿನದಿನವೂ ಮಾನಸಿಕ ಚಿತ್ರ ಹಿಂಸೆ..
ಕಲಿತ್ತ ಆಶೆಗಾಗಿ ಸಹಿಸಿಗೊಂಡತ್ತು!

ಸಹಿಸಿಗೊಂಬದು ಎಷ್ಟು ದಿನ, ಪಾಪ!
ಎಷ್ಟು ದಿನ ಆದರೂ ಬಿಡ್ತೇ ಇಲ್ಲೆ, ಪಾಪಿ!
ಕಲಿತ್ತ ಆಶೆ ಇಲ್ಲಿ ಒರೆಂಗೆ ತಂದು ನಿಲ್ಲುಸಿದ್ದು,
ಅದರ ಅರ್ದಲ್ಲೇ ಬಿಟ್ರೆ ಜೀವನವೇ ಮುಗುದ ನಮುನೆ!!

ಅಪ್ಪು!! ಜೀವನ ಮುಗಿತ್ತದೇ ಒಳ್ಳೆದು..
ತನ್ನ ಗೆಂಡಂಗೂ ಅಪಚಾರ ಅಪ್ಪಲಿಲ್ಲೆ, ತನ್ನ ಅಧ್ಯಯನದ ಆಶೆಗೂ ಎಳ್ಳುನೀರು ಅಪ್ಪಲಿಲ್ಲೆ, ತನ್ನ ಜೀವನಕ್ಕೇ ಎಳ್ಳುನೀರು ಬಿಟ್ಟುಗೊಂಬ – ಹೇಳಿ ಯೋಚನೆ ಮಾಡಿತ್ತಡ.
ಹಾಂಗೆ, ಒರಕ್ಕಿನ ಮಾತ್ರೆಯ ಒಂದು (ಮೆಡಿಕಲು) ಮದ್ದಿನಂಗುಡಿಂದ ತಂದು, ಒಂದೇ ಸರ್ತಿಲಿ ಒಂದು ಮುಷ್ಠಿ ತಿಂದು ಮನುಗಿತ್ತಡ!!
~
ಪುಣ್ಯ, ಬೇರೆ ಆರಿಂಗೋ ಗೊಂತಾಗಿ, ಅದರ ಆಸುವತ್ರೆಗೆ ಸೇರುಸಿ ಮದ್ದು ಮಾಡಿದವಡ.
ಕಲಿಯೇಕು ಹೇಳ್ತ ಆಶೆಲಿ ಕಲಿವಲೆ ಹೆರಟ ಆ ಹೆಮ್ಮಕ್ಕೊ ಜೀವವನ್ನೇ ಬಿಡ್ಳೆ ಹೆರಟತ್ತಡ!
ಅಂತೂ ಆಯುಶ್ಶ ಗಟ್ಟಿ ಇತ್ತು, ಆ ಹೆಮ್ಮಕ್ಕೊ ಒಳ್ಕೊಂಡತ್ತಡ.
ಸರಸ್ವತಿ ಅನುಗ್ರಹಂದಾಗಿ ಆಯುಷ್ಯ ಒಳುದತ್ತು! ಪಾಪ!!
~
ಇನ್ನು ಬೇರೆ ಆರತ್ರಾರು ಮಾರ್ಗದರ್ಶನ ತೆಕ್ಕೊಂಡು ಅದಕ್ಕೆ ಕಲಿವದರ ಮುಂದುವರುಶುಲೆ ಅಕ್ಕನ್ನೇ – ಕೇಳಿದೆ ಆನು.
ಬದ್ಕೇಕು ಹೇಳಿಯೇ ಆಶೆ ಇಲ್ಲೆ, ಇನ್ನು ಕಲಿಯೇಕು ಹೇಳ್ತ ಆಶೆ ಇಕ್ಕೋ ಅದಕ್ಕೇ – ಕೇಳಿದ ಕೊಳಚ್ಚಿಪ್ಪು ಭಾವ!!
ಅದಪ್ಪುದೇ!!
~
ಮಾತಾಡಿಂಡು ಇಪ್ಪಗಳೇ ಕೊಳಚ್ಚಿಪ್ಪು ಅತ್ತೆ ಆಸರಿಂಗೆ ತಂದವು.
– ಷ್ಟ್ರೋಂಗು ಚಾಯವುದೇ, ಪಾರ್ಲೆಜಿ ಬಿಸ್ಕೇಟುದೇ!
ಕುಡುದಾದ ಕೂಡ್ಳೆ ಆಚಮನೆದೊಡ್ಡಣ್ಣ ’ಹೆರಡುವನಾ ಒಪ್ಪಣ್ಣ’ ಕೇಳಿದ°,
ಸರಿ! ಹೆರಟತ್ತು ನಾವು.
ಎಲ್ಲಿಗೆ? ಬೈಲಿಲೇ ಇನ್ನೊಂದು ಹೊಡೆಂಗೆ!
~
ಕೊಳಚ್ಚಿಪ್ಪು ಬಾವ ಹೇಳಿದ್ದುದೇ ಸರಿಯೇ!
ಸಮಾಜಕ್ಕೆ ಕಲಿತ್ತ ಆಶೆ ಹುಟ್ಟುಸೇಕಾದ ವಿಶ್ವವಿದ್ಯಾಲಯಂಗಳೇ ಹೀಂಗೆ ಮಾಡಿರೆ ಅಕ್ಕೋ?
ಅಲ್ಲಿ ಇದ್ದಂಡು ಗುರುಸ್ಥಾನ ತುಂಬುಸೇಕಾದ ಜೆನಂಗೊ ಈ ನಮುನೆ ಬೇಡಂಗಟ್ಟೆ ಮಾಡಿರೆ ವಿಶ್ವಾಸ ಒಳಿಗೋ?
ವಿದ್ಯೆ ಕಲಿಶೇಕಾದ ಅವರ ಮೇಗೆ ವಿಶ್ವಾಸವೇ ಲಯ ಆಗದೋ?

ಈ ನಮುನೆ ಕಾಟುಗೊ ಅಂತಲ್ಲಿಯೂ ಇದ್ದವೋ? ಅಂಬಗ ನಮ್ಮೋರ ಮಕ್ಕೊ ಹೋಗಿ ಮುಂದೆ ಕಲಿತ್ತದಾರೂ ಹೇಂಗಪ್ಪಾ?
ತಲೆಲಿ ಇದೇ ಆಲೋಚನೆ ತಿರುಗಿಂಡು ಇತ್ತು!!
ಯೇವತ್ತು ವಿದ್ಯೆಗೆ ಬೆಲೆಕೊಡದ್ದೆ, ಕೇವಲ ಜಾತಿರಾಜಕೀಯ ಮಾಡಿ ಜೆನಂಗಳ ವಿದ್ಯಾಲಯಕ್ಕೆ ಲೆಗುಚ್ಚರುಗೊ ಮಾಡ್ತವೋ, ಅಲ್ಲಿ ಒರೆಂಗೆ ಹೀಂಗ್ರುತ್ತ ಅವಸ್ತೆ ಇದ್ದೇ ಇದ್ದು!
ಎಂತ ಹೇಳ್ತಿ?

ಒಂದೊಪ್ಪ: ವಿದ್ಯೆ ಕಲಿಶದ್ರೂ ಸರಿ, ವಿಶ್ವಾಸ ಒಳಿಶಿಗೊಳೆಕ್ಕಾದ್ದು ಮುಖ್ಯ! ವಿಶ್ವಾಸ ಕಳಕ್ಕೊಂಡ ವಿದ್ಯೆ ಪ್ರಯೋಜನ ಇದ್ದೋ?

ಸೂ: ಒಳ್ಳೆಗುಣದ ಲೆಗುಚ್ಚರುಗೊ ಧಾರಾಳ ಇದ್ದವು. ಆದರೆ ಹೀಂಗ್ರುತ್ತ ಕಾಟುಗಳೂ ಇಪ್ಪದು ಬೈಲಿನೋರಿಂಗೆ ಬೇಜಾರಪ್ಪದು, ಅಷ್ಟೆ. 🙁

27 thoughts on “ವಿಶ್ವ ವಿದ್ಯಾಲಯ – ವಿಶ್ವಾಸ, ವಿದ್ಯೆಯೇ ಲಯ!

  1. ಲೇಖನ ಲಾಯಕ ಆಯಿದು. ವಿಶ್ವವಿದ್ಯಾನಿಲಯ ಹೇಳುವಗ ನೆನಪ್ಪಪ್ಪದು ಕನಸುಗಳ ಮೇಲೆ ಕಟ್ಟಿದಗೋರಿ ಹೇಳ್ತ ಮಾತು………

  2. ಶಿಕ್ಷಣ ಹೇಳುದೇ ಇಂದು ಪೈಸೆ ಇದ್ದವರ ಸೊತ್ತು ಹೇಳುದು ಆಯಿದು.ಒಬ್ಬ ವಿದ್ಯಾರ್ಥಿಯ ಪ್ರತಿಭೆಯ ನೋಡಿ ಗೌರವಿಸುವ ವಿಶ್ವವಿದ್ಯಾಲಯ ಇಂದಿಂಗೆ ಕಾಂಬದು ಕಷ್ಟ..ಮುಂದಕ್ಕೆ ಹೇಂಗೆ ಅಕ್ಕು ಹೇಳಿ ಹೇಳುಲೇ ಕಷ್ಟ..ಒಳ್ಳೆ ಅನುಭವದ ಲೇಖನ..ಶಿಕ್ಷಣದ ಮಟ್ಟ ಆದಷ್ಟು ಒಳ್ಳೆ ರೀತಿಲಿ ಬರಲಿ.ಆ ಮೂಲಕ ಸರಸ್ವತಿ ಒಲಿದು ಬರಲಿ…

  3. ಒಪ್ಪಣ್ಣಾ,
    ವಿದ್ಯಾದಾನ ಮಾಡೆಕ್ಕಾದ ಗುರುಗಳ ಮನಸ್ಸು ಶುಭ್ರವಾಗಿರೆಕ್ಕಲ್ಲದೋ?ಅದೇ ಕೆಸರು ತು೦ಬಿದ ಹೊ೦ಡ ಆದರೆ ಇ೦ತ ಅನರ್ಥ೦ಗೊ ನೆಡವೊದಲ್ಲದೋ?
    ಇ೦ದು ಮೀಸಲಾತಿ ಮತ್ತೊ೦ದು ಹೇಳಿಗೊ೦ಡು ಅಯೋಗ್ಯರೂ ಸಮಾಜಲ್ಲಿ ಉನ್ನತ ಸ್ಥಾನಕ್ಕೆ ಏರಿಯಪ್ಪಗ ಹೀ೦ಗೆಲ್ಲ ನೆಡಗು.ಇ೦ತವರ ಸಮರ್ಥನೆ ಮಾಡುಲೂ ಜೆನ ಇಕ್ಕು.ಇದು ಈಗಾಣ ವೆವಸ್ಥೆಯ ಪರಿಣಾಮ.
    ವಿಶ್ವವಿದ್ಯಾಲಯಲ್ಲಿ ವಿಷ ಸರ್ಪ೦ಗೊ ತು೦ಬಿಯಪ್ಪಗ ವಿದ್ಯೆ ಲಯ ಅಕ್ಕನ್ನೇ.
    ಶುದ್ದಿಯ ಎಡಕ್ಕಿಲಿ ಇದ್ದ ಒಗ್ಗರಣೆಗೊ ನೆಗೆ ತರುಸಿತ್ತು.ಆದರೆ ವಿದ್ಯಮಾನ೦ಗಳ ನೆನದು ಬೇಜಾರಾತು,ವಿದ್ಯೆಯ ಮಾನ ಹೋವುತ್ತಾ ಇದ್ದನ್ನೇ ಹೇಳಿಗೊ೦ಡು.

  4. ಒಳ್ಳೆ ಲೇಖನ ..ಚಿಂತನೆ ಮಾಡೆಕ್ಕಾದ ವಿಷಯ..ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ..ಹೇಳಿ ಗಾದೆ ಇದ್ದು …ಆದರೆ ಇಂತ ಪರಿಸ್ಥಿತಿ ಹೇಳಿರೆ .. !!

    1. ಎಷ್ಟು ಸರಿಯಾಗಿ ಹೇಳಿದ್ದಿ ನಿಂಗ….

      “ಹೆಣ್ಣೊಂದು ಕಲಿತರೆ ಶಾಲೆಯೇ ತೆರೆದಂತೆ….. ಹೆಣ್ಣೊಂದು ಮನಸು ಮಾಡಿರೆ ಇಡೀ ಸಮಾಜವ ಬೆಳಗುಲೇ ಎಡಿಗು….” ನಮ್ಮ ಮಕ್ಕೊಗೆ “ಮಾರ್ಕ್, exaam , ಉದ್ಯೋಗ,ಪದವಿ ಇಷ್ಟೇ ಜೀವನ ಅಲ್ಲ ….” . ಜೀವನಕ್ಕೆ ಬೇಕಾದ್ದು ಆದರ್ಶ ಗುಣಂಗ….. ಆ ಆದರ್ಶ ಗುಣಂಗಳ ನಾವು ಕಲ್ತು ನಮ್ಮ ಮಕ್ಕಳ ಮನಸ್ಸಿಲಿ ಬಿತ್ತುವ…. ಅದು ಹೆಮ್ಮರವಾಗಿ ಬೆಳೆದು ಸಮಾಜವ ಬೆಳಗಲಿ…..

  5. ಅಧುನಿಕ ಶಿಕ್ಷಣ ಶಿಕ್ಷೆ ಆಯಿದು…. ನಮ್ಮ ಸಮಾಜ ಬದಲಾಯೇಕ್ಕಾರೆ ನಾವಿಂದು ನಮ್ಮ ದೃಷ್ಟಿಯ, ನಮ್ಮ ವ್ಯಕ್ತಿತ್ವವ ಬದಲಾಯಿಸೆಕ್ಕಷ್ಟೇ…. ನಮ್ಮ ಮಕ್ಕ ಪ್ರೀತಿ,ವಿಶ್ವಾಸ, ಆದರ್ಶ ತುಂಬಿದ ರಾಮ ರಾಜ್ಯಲ್ಲಿ ಬದುಕ್ಕಲಿ ಹೇಳುವ ಆಶೆಯ ಮೊದಲು ಬೆಳೆಸುವ…. ಅದಕ್ಕೆ ಪೂರಕವಾದ ವಾತಾವರಣವ ನಮ್ಮ ಮನೇಲಿ, ನಮ್ಮ ವ್ರುತ್ತಿಲಿ ನಿರ್ಮಿಸುವ…. ನಮ್ಮ ನೋಡಿ ನಮ್ಮ ಮಕ್ಕ ಕಲಿತ್ತವು…. ಮಕ್ಕಳ ಡಾಕ್ಟರ, ವಕೀಲ, ವಿಜ್ಞಾನಿ ಆಗಲಿ ಹೇಳುವ ಉದ್ದೇಶಂದ ಬೆಳೆಸುವ ಬದಲು….”ಏನಾದರೂ ಸರಿ ಮೊದಲು ಮಾನವನಾಗು” ಹೇಳುವ ದ್ರುಷ್ಟಿಂದ ಬೆಳೆಸುವ…. “ಆರಂಭ ನಮ್ಮಿಂದಲೇ” ಹೇಳಿ ಇಂದೇ ಶುರು ಮಾಡುವ….. ನಾವು ಪುಣ್ಯವಂತರು ಎಂತಕೆ ಹೇಳಿರೆ ನಮಗೆ ಮಾರ್ಗದರ್ಶಕರಾಗಿ ನಮ್ಮ ಗುರುಗೋ ಇದ್ದವು…..

  6. ನಿಶ್ಚಿ೦ತೆ೦ದ ಶೈಕ್ಷಣಿಕ ಕಾರ್ಯ೦ಗ ನಡೆಯಲಿ ಹೇಳಿ ವಿವಿಯ ಅಧ್ಯಾಪಕರಿ೦ಗೆ ಬೇಕಾಷ್ಟು ಸವಲತ್ತುಗೊ ಕೊಡ್ತವು. ಆದರೆ ಸವಲತ್ತುಗೊ ಹೆಚ್ಚಾದ ಹಾ೦ಗೆ ಆಲಸ್ಯ,ದುರ್ಬುದ್ಧಿಯುದೆ ಬೆಳೆತ್ತು. ಇದು ಯಾವುದೇ ಜಾತಿಗೆ ಸೀಮಿತ ಆಗಿ ಇಲ್ಲೆ.

  7. “ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ” ಹೇಳಿ ಗುರುವಿಂಗೆ ಬ್ರಹ್ಮನ ಸ್ಥಾನ ಕೊಟ್ಟ ಸಂಸ್ಕೃತಿ ನಮ್ಮದು.
    ವಿದ್ಯಾಲಯಂಗಳಲ್ಲಿ, ವಿದ್ಯೆ ಮತ್ತೆ ವಿಶ್ವಾಸಕ್ಕೆ ಲಯ ಬಂದರೆ, ಹೆತ್ತ ಅಬ್ಬೆ ಅಪ್ಪಂಗೆ, ಮಕ್ಕಳ ಕಳುಸುವಾಗ ಎಷ್ಟೊಂದು ಆತಂಕ ಅಕ್ಕು? ಹೀಂಗಿಪ್ಪ ಪ್ರಸಂಗ ಬಂದಪ್ಪಗ ಧೈರ್ಯಲ್ಲಿ ಪ್ರತಿಭಟನೆ ಮಾಡ್ಲೇ ಬೇಕು. ಹೆಣ್ಣು, ಗಂಡು, ಜಾತಿ ಮತ ಬೇಧ ಇಲ್ಲದ್ದೆ ಇದರ ವಿರೋಧಿಸೆಕ್ಕು.
    ಆದರೆ, ಈ ವಿಶ್ವ ವಿದ್ಯಾಲಯಲ್ಲಿ ಆದ ವಿಪರ್ಯಾಸ ನೋಡಿ:
    ಕುಲಪತಿ ಹೇಳಿತ್ತಡ- ” ಒಂದರ ಪಡೆಕಾರೆ ಇನ್ನೊಂದರ ಕಳಕ್ಕೊಂಬಲೆ ತಯಾರು ಇರೆಕು” ಹೇಳಿ.
    ಕಡೇಂಗೆ ಪರಿಶಿಷ್ಟ ಜಾತಿ ಆದ ಕಾರಣ ಈ ರೀತಿ ಅಪಪ್ರಚಾರ ಮಾಡಿದವು ಹೇಳಿ ಜಾತಿ ರಾಜಕೀಯ ಮಾಡಿತ್ತು.
    ಆ ಹೆಮ್ಮಕ್ಕೊಗೆ, ಬೇರೆ ಗೈಡ್ ಕೊಟ್ಟವು. ಅಲ್ಲಿಯೂ ಈ ನೀಚ ಜೆನಂಗೊ ದುರ್ಬುದ್ದಿ ಬಿಟ್ಟಿದವಿಲ್ಲೆ. ಆ ಹೊಸ ಗೈಡಿಂಗೆ ಜೀವ ಬೆದರಿಕೆ ಹಾಕಿದ್ದವು ಹೇಳಿ ಸುದ್ದಿ.
    ವಿದ್ಯೆ ಕೊಡುವದು ಸುಸಂಸೃತ ಸಮಾಜ ನಿರ್ಮಾಣ ಆಯೆಕ್ಕು ಹೇಳಿ. ಆದರೆ ವಿದ್ಯೆ ಎಲ್ಲರನ್ನೂ ಸುಸಂಸ್ಕೃತರನ್ನಾಗಿ ಮಾಡ್ತಿಲ್ಲೆ ಹೇಳುವದೂ ಅಷ್ಟೇ ಸತ್ಯ.
    ನವಗೆ ಬೇಕಾದ್ದು ಡಿಗ್ರಿ ಕೊಡುವ ವಿದ್ಯೆ ಮಾತ್ರ ಅಲ್ಲ, ಸಂಸ್ಕಾರವನ್ನೂ ತಿಳಿಸಿ ಕೊಡುವ ವಿದ್ಯೆ ಕೂಡಾ ಇಂದಿನ ಅಗತ್ಯ.

  8. ಒಪ್ಪಣ್ಣ, ಶುದ್ದಿ ಲಾಯ್ಕಾಯಿದು. ನಮ್ಮ ದೇಶಲ್ಲಿ ವಿದ್ಯೆಗೆ ಎಷ್ಟು ಮಹತ್ವ ಇತ್ತು ಹೇಳಿ ನಮ್ಮ ಹಿಂದಾಣ ಚರಿತ್ರೆಯ ನೋಡಿದರೆ ಗೊಂತಾವುತ್ತು. ಪ್ರಪಂಚದ ಬಾಕಿ ದೇಶಂಗ ಇನ್ನುದೇ ಕಣ್ಣು ಬಿಡುಲೆ ಸುರು ಮಾಡೆಕ್ಕಾದರೆ ಅಥವಾ ಅಸ್ತಿತ್ವಕ್ಕೆ ಬರೆಕ್ಕಾದರೆ ಮೊದಲೇ ನಮ್ಮ ದೇಶಲ್ಲಿ ವಿಶ್ವವಿದ್ಯಾಲಯಂಗ ಇದ್ದತ್ತು ಮಾಂತ್ರ ಅಲ್ಲ ನಮ್ಮ ದೇಶಲ್ಲಿ ಒಳ್ಳೆಯ ವಿದ್ವತ್ತಿನ ಮೇರುಶಿಖರಂಗಳ ಹಾಂಗೆ ಇಪ್ಪ ಮಹಾಪುರುಷರು ಇತ್ತಿದ್ದವು. ಇಂದಿನವರೆಗೂ ಆ ಎಲ್ಲಾ ಮಹಾನುಭಾವರ ವಿದ್ವತ್ತಿನ ರಚನೆಗ ನಮ್ಮ ವರೆಂಗುದೇ ಎತ್ತಿದ್ದು. ಇದು ನಮ್ಮ ದೇಶದ ಪರಂಪರೆಯ ಆಸ್ತಿ. ಇದರ ಮುಂದಾಣವಕ್ಕೆ ಕೊಡೆಕ್ಕಪ್ಪದು ನಮ್ಮ ಧರ್ಮ. ಆದರೆ ಈಗಾಣ ಕಾಲಘಟ್ಟಲ್ಲಿ, ನಮ್ಮ ಈಗಾಣ ಪೀಳಿಗೆ ಎಲ್ಲಿಯೋ ದಾರಿ ತಪ್ಪಿದ್ದು. ಬಹುಶ ಆರೋ ತೋರ್ಸಿದ ದಾರಿಲಿ, ಆರದ್ದೋ ಅನುಕರಣೆಲಿ ನಾವು ನಡೆತ್ತಾ ಇದ್ದು. 🙁

    ಮೊದಲು ನಮ್ಮಲ್ಲಿ ಗುರುಗಳ ದೇವರ ಹಾಂಗೆ ಕಂಡು, ಗುರು ಶಿಷ್ಯಂಗೆ ನಿಸ್ವಾರ್ಥಲ್ಲಿ ತನಗೆ ಗೊಂತಿಪ್ಪ ವಿದ್ಯೆಯ ದಾನ ರೂಪಲ್ಲಿ ಕೊಟ್ಟುಗೊಂಡಿತ್ತಿದ್ದವು. ಕೊಡುವವಕ್ಕೂ ತೆಕ್ಕೊಂಬವಕ್ಕೂ ನಡುಗೆ ಒಂದು ಅಮೂಲ್ಯವಾದ, ಪವಿತ್ರವಾದ ಸಂಬಂಧ ಇತ್ತು. ಇಂದು ವಿದ್ಯೆ ಹೇಳುದು ಒಂದು ವ್ಯಾಪಾರ ಆಯಿದು. ಶಾಲೆಗೊಕ್ಕೆ ಇಪ್ಪ ದೇಣಿಗೆ, ಶಾಲೆಯ ಕಾಲೇಜಿನ ಫೀಸು ಎಷ್ತಿದ್ದು ನೋಡಿಗೊಂಡು ಮಕ್ಕಳ ಸೇರ್ಸುದು. ಅಲ್ಲಿ ಕಲಿಶುತ್ತವ್ವು ಹೇಂಗೆ ಹೇಳಿ ಮತ್ತೆ ಅಲ್ಲದಾ ಗೊಂತಪ್ಪದು. ಕಲಿಶುಲೇ ಬತ್ತವುದೇ ಅದೇ ಭಾವನೆಲಿ ಇದ್ದರೆ ಮತ್ತೆ ಮಕ್ಕಳ ದೇವರೇ ರಕ್ಷಿಸೆಕ್ಕಷ್ಟೇ.. ಒಪ್ಪಣ್ಣ, ನೀನು ಹೇಳಿದ ಹಾಂಗೆ ಕಾಟಾಚಾರಕ್ಕೆ ಕಲ್ತು ಉದ್ಯೋಗ ಗಿಟ್ಟಿಸಿದವನ ಹತ್ತರೆ ಕಲಿಶು ಹೇಳಿದರೆ ಅವಂಗೆ ಅದು ತುಂಬಾ ದೊಡ್ಡ ಅಪರಾಧ ಹೇಳಿ ಆಗಿ ಹೋಕು. ಕಲಿಯೆಕ್ಕು ಹೇಳಿ ತೀವ್ರ ಆಕಾಕ್ಷೆಲಿ ವಿಶ್ವವಿದ್ಯಾಲಯಕ್ಕೆ ಬಪ್ಪ ಕೆಲವು ಜನ ಮುಗ್ಧರ ಅಸಹಾಯಕತೆ ಮತ್ತೆ ಅವರ ಅಗತ್ಯತೆಯ ದುರುಪಯೋಗ ಮಾಡುವವರ ಕಾಂಬಗ ನಮ್ಮ ವ್ಯವಸ್ಥೆಯ ಬಗ್ಗೆ ಬೇಜಾರಾವುತ್ತು. ಹೀಂಗಿಪ್ಪವಕ್ಕೆ ಯಾವ ಶಿಕ್ಷೆಯೂ ಸಿಕ್ಕದ್ದೇ, ಕಲಿವಲೆ ಹೋದೋರೆ ಮರ್ಯಾದಿ ಕಳಕ್ಕೊಳ್ಳೆಕ್ಕಾಗಿ ಬಪ್ಪದು ನಮ್ಮ ದೇಶದ ದುರಂತ.

    ನಮ್ಮಲ್ಲಿ ಕಲಿವಲೆ ಮನಸ್ಸಿಪ್ಪ ಎಲ್ಲರಿಂಗೆ , ಕಲಿವಲೆ ಒಳ್ಳೆ ಸಂಸ್ಥೆಗಳೂ, ಕಲಿಶುಲೆ ಒಳ್ಳೆಯ ಮಾಷ್ಟ್ರಕ್ಕಳೂ, ಮುಂದರಿವಲೆ ಎಲ್ಲರ ಮಾರ್ಗದರ್ಶನ ಇದ್ದು ಅವರ ಕಲಿಯುವಿಕೆ ಲಾಯ್ಕಲ್ಲಿ ಆಗಿ ಅವು ಇನ್ನೊಬ್ಬಂಗೆ ಒಳ್ಳೆಯ ಮಾರ್ಗದರ್ಶಕರಾಗಲಿ ಹೇಳ್ತ ಹಾರಯಿಕೆ.

    ಒಂದೊಪ್ಪ ಲಾಯ್ಕಾಯಿದು. ವಿಶ್ವಾಸ ಕಳಕ್ಕೊಂಡರೆ ಯಾವಾಗಲೂ ತೊಂದರೆಯೇ!!

  9. ವಿಶ್ವವಿದ್ಯಾಲಯಲ್ಲಿ ಮಾವೊ ವಾದಿಗೊ,ನಕ್ಸಲೀಯರಿಂಗೆ ಬೆಂಬಲ ಕೊಡುವವು,ಜಾತಿವಾದಿಗೊ ಇಪ್ಪದು ಹಲವು ಕಾಲಂದ ಇದ್ದು.ಒಂದಾರಿ ಶುದ್ಧ ಮಾಡದ್ದರೆ ಆಗ.

  10. ಅಣ್ಣಾ,ಯಾವಗಾಣ ಹಾಂಗೇ ಮೆದುಳಿಂಗೆ ಕೆಲಸ ಕೊಡುವ ಹಾಂಗಿಪ್ಪ ಲೇಖನ..
    ಹೀಂಗಿಪ್ಪ ಜನರ ನೋಡೆಕ್ಕಾರೆ ವಿಶ್ವವಿದ್ಯಾಲಯಕ್ಕೊರೆಗೆ ಹೋಯೆಕ್ಕಾದ ಅಗತ್ಯ ಇಲ್ಲೆ ಹೇಳಿ ಕಾಣ್ತು..ದಿನಾ ವಾರ್ತೆ ನೋಡಿದರೆ ಯಾವುದಾದರೂ ಒಂದು ಊರಿನ ಸಣ್ಣ ಮಕ್ಕಳ ಶಾಲೆಲಿಯೇ ಹೀಂಗಿಪ್ಪ ಜನಂಗೊ ಇದ್ದವು ಹೇಳಿ ತೋರ್ಸುತ್ತವು.. ಇಂಥೋರ ಗುರುಗೊ/ಮಾಶ್ಟ್ರು ಹೇಳುಲೇ ನಾಚಿಗೆ ಆವುತ್ತು..
    ನಮ್ಮ ಸಮಾಜಲ್ಲಿ ಒಳ್ಳೆ ಗುರುಗೊ ಹೇಳಿ ಹೆಸರು ಪಡಕ್ಕೊಂಡೋರು ತುಂಬಾ ಜನ ಇದ್ದವು..ನಮ್ಮ ಅವರ ಸ್ವಂತ ಮಕ್ಕಳಂದಲೂ ಜಾಸ್ತಿಯಾಗಿ ಪ್ರೀತಿ ಮಾಡಿ ಒಳ್ಳೆ ಸಂಸ್ಕಾರ ಕಲಿಶಿಕೊಟ್ಟಿದವು..ಅಂಥಾ ಎಲ್ಲಾ ಗುರುಗಳಿಂಗೆ ಕೋಟಿ ಕೋಟಿ ನಮನಂಗೊ.. 🙂

  11. ಹೆ ಮೊನ್ನೆ ಪರೀಕ್ಷೆಲಿ ಎನ್ನ ಹೆಸರು ಅರ್ಗೆ೦ಟು “ಮಾಣಿ” ಹೇಳಿ ಇದ್ದರೂ ಯೆವ್ದೋ ಕೂಸಿನ ಫೋಟೊ ಹಾಕಿತ್ತೊವು(ಹಾಳು ಟಿಕೆತ್ತಿ’ಲಿ). ಆನು ಎ೦ತಪ್ಪ ಎನಗೆ ಕೂಸು ಹುಡ್ಕಿ ಕೊಟ್ಟೊವೊ ಹೇಳಿ ತಲೆ ಕೆರದೆ!
    ಎನಗೆ ಮಾ೦ತ್ರವೊ ಹೇಳಿ ನೋಡ್ವಗ ಸುಮಾರು ಜೆನರದ್ದಿತ್ತು! ಏವ ಹೇ೦ಗಿಪ್ಪ ವಿಶ್ವವಿದ್ಯಾ”ಲಯ”೦ಗೊ ಇದ್ದೊವಪ್ಪ ಹೇಳಿ ಆತು 🙁

    ಇನ್ನು ಮಾರ್ಕು ಕಾರ್ಡಿಲಿ ನೋಡೆಕ್ಕು:(

    ಇ೦ತಿ ಗೆ೦ಟ

  12. ಕೆಲವರಿಂದಾಗಿ ಇಡೀ ವೃತ್ತಿಗೆ ಕೆಟ್ಟ ಹೆಸರು ಬಯಿಂದು ಇದರಿಂದ ಬೇಸರದ ಸಂಗತಿ ಬೇರೆ ಇಲ್ಲೆ.
    {ಸಮಾಜಶಾಸ್ತ್ರಲ್ಲಿ ಎಮ್ಮೆ ಕಟ್ಟೇಕು – ಹೇಳಿ ಆಶೆ ಇದ್ದಾಡ ಆ ಮಾಣಿಗೆ! }
    ಹೇಳಿ ಓದಿ , ಎಮ್ಮೆ ಕಟ್ಟುದು ಸರಿ ಅದಕ್ಕೆ ಹುಲ್ಲು ಹಿಂಡಿ ವ್ಯವಸ್ಥೆ ಹೇಂಗೆ ಹೇಳಿ ಒಪ್ಪಕ್ಕ ಮಾಷ್ಟ್ರು ಮಾವನ ಹತ್ರ ಕೇಳಿತ್ತಡ, ಮಾಷ್ಟ್ರು ಮಾವ – ಒಪ್ಪಣ್ಣನ ಹತ್ರೆ ಕೇಳಿರೆ ಉತ್ತರ ಸಿಕ್ಕುಗು ಹೇಳಿದವಡ.

  13. ಹ್ಮ್ ಎಂತ ಮಾಡುದು…..ನಾಯಿಯ ಸಿಂಹಾಸನಲ್ಲಿ ಕೂರ್ಸಿರೆ ಅದರ ಬುದ್ದಿ ಬಿಡ.. ಹಾಂಗೆ ಅನರ್ಹರ ಗುರುಸ್ಥಾನಲ್ಲಿ ಕೂರ್ಸಿರೆ ಇಂಥಾ ತೊಂದರೆ ಅಪ್ಪದು….

  14. ಶುದ್ದಿಯ ’ಹೆಡ್ಡಿಂಗು’ ಓದಿಯೇ ಖುಶಿ ಆತು 🙂 ’ಭಾಶೆ ಮರದರೂ ಭಾಶೆ ಇಪ್ಪೋರು, ಭಾಶೆ ನೆಂಪಿದ್ದರೂ ಭಾಶೆಇಲ್ಲದ್ದೋರು’ ಈ ಮಾತು ತುಂಬಾ ಅರ್ಥಪೂರ್ಣವಾಗಿ ಇದ್ದು 🙂
    ವಿದ್ಯಾದಾನ ಹಿಂದಾಣ ಕಾಲಲ್ಲಿ ತುಂಬಾ ಮಹತ್ವದ್ದಾಗಿತ್ತು, ಈಗಳೂ ಅದರ ಮಹತ್ವ ಇದ್ದೇ ಇದ್ದು, ಆದರೆ ಜೆನಂಗೊ ಅದರ ಮರೆತ್ತಾ ಇದ್ದವು. ಒಪ್ಪಣ್ಣ ಇಲ್ಲಿ ಹೇಳಿದ ಹಾಂಗೆ ಎಲ್ಲಾರೀತಿಯ ಸಮಸ್ಯೆಗಳೂ ಇದ್ದು. ಸರಿ ಮಾಡುದು ಹೇಂಗೆ? ಆರು? ದೊಡ್ಡ ಪ್ರಶ್ನೆ 🙁 🙁 🙁

  15. ಶುದ್ದಿಯ ಹೆಸರೇ ಖಡಕ್ ಆಗಿದ್ದು. ಲಾಯ್ಕಾಯ್ದು ಬರದ್ದು.
    ಈಗಾಣ ಪರಿಸ್ಥಿತಿಲಿ ವಿದ್ಯೆ ವ್ಯಾಪಾರವೇ ಆಗಿಹೋಯ್ದು. ಆ ಪ್ರೊಫೆಸರಿನ ಹಾಂಗಿಪ್ಪವಕ್ಕೆ ಅಂತೂ ಅದು ಪೈಸೆ ಮಾಡುವ, ಬೇಕಾದ್ದರ ಬೇಕಾದಾಂಗೆ ಪಡಕ್ಕೊಂಬಲೆ ಇಪ್ಪ ಮಾಧ್ಯಮದಾಂಗಾಯ್ದು. ಅವ್ವೇ ಸರ್ವಾಧಿಕಾರಿಗ. ಅವರ ಕಂಟ್ರೋಲು ಮಾಡುವವ್ವು ಆರೂ ಇಲ್ಲೆ. ಬರೇ ಡಾಗುಟ್ರೇಟು ಮಾಡ್ತವಕ್ಕೆ ಮಾತ್ರ ಅಲ್ಲ, ಸ್ನಾತಕೋತ್ತರ ವಿದ್ಯಾರ್ಥಿಗೊಕ್ಕೂ ಕಾಟ ಕೊಡುವವ್ವು ಇದ್ದವು. 🙁
    ಅಪ್ಪ ಅನ್ಯಾಯದ ವಿರುದ್ಧ ಮಾತಾಡಿಕ್ಕುಲೆ ಗೊಂತಿಲ್ಲೆ. ಎಂತಕೆ ಹೇಳಿರೆ ನಮ್ಮ ಮಾರ್ಕು, ನಮ್ಮ ಭವಿಷ್ಯ ಅವರ ಕೈಲೇ ಇರ್ತು!
    ಸರಿಯಾಗಿ ಪಾಠ ಮಾಡದ್ದೆ, ವಿದ್ಯಾರ್ಥಿಗೊಕ್ಕೆ ಮಾರ್ಗದರ್ಶನ ಕೊಡದ್ದೆ, ಅಕೇರಿಗೆ ಬಂದು ಮನಸ್ಕಂಡ ಹಾಂಗೆ ಪಾಸು-ಫೈಲು ಮಾಡಿಕ್ಕಿ ಹೋಪವಕ್ಕೆ ತಿಂಗಳಿಂಗೆ ಎಂಬತ್ತು ಸಾವಿರ ಸಂಬಳ ಅಡ! ಅಲ್ಲ, ಅವಕ್ಕೊಂದು ಸಣ್ಣ ಪಶ್ಚಾತ್ತಾಪವೂ ಆಗದಾ?
    ಎಲ್ಲೊರೂ ಹೀಂಗಲ್ಲ. ಆದರೆ, ಹೆಚ್ಚಿನವು ಹೀಂಗೆಯೇ…

  16. kelavondu shaalegalalli heenge aavutta iddu heli tv channelinavu bobbe hodatta iddavu ambagambaga.olleyavu kettavu ella fieldgalalliyu iddavu.
    guruga helire avu maadari aagireku.
    aadare eegana paristili aaru olleyavu aaru kettavu heliye gontagaddange aaydu.
    ketta janangalindaagi olleyavara melu samshaya bappange aaydu.
    gaandhi ajja helida raaamaraajya kanasu maatra akkaste.
    eega hagalu kooda koosuga,hemmakka obbobbane hopalediyadda stiti iddu ella kade.

  17. ಕೆಲವೇ ಕೆಲವು ಕೆಟ್ಟ ಜೆನಂಗಳಿಂದಲಾಗಿ ಇಡೀ ಗುರು ವಂಶಕ್ಕೇ ಕೆಟ್ಟ ಹೆಸರು ಬಪ್ಪಲೆ ಸುರು ಆದ್ದದು ಕೇಳುವಗ ಬೇಜಾರು ಆವ್ತು. ಹೀಂಗೆ ಆವ್ತರಿಂದಲಾಗಿ ಶಾಲೆ, ಕಾಲೇಜುಗಳ ಮಾಸ್ಟ್ರಕ್ಕಳ ಬೆಲೆ ಕಡಮ್ಮೆ ಆವ್ತಾ ಇದ್ದು. ಕೆಲವೊಂದರಿ ಗುರು ಶಿಷ್ಯರು ಸ್ನೇಹಿತರ ಹಾಂಗೆ ಒಂದೇ ಬಾರಿಲ್ಲಿ ಎದುರು ಎದುರಾಗಿ ಕೂದು ಕುಡಿತ್ತದು, ಹೆಗಲಿಂಗೆ ಕೈ ಹಾಕಿ ಕುಶಾಲು ಮಾಡ್ತದುದೆ ನೆಡೆತ್ತು. ವಿದ್ಯಾರ್ಥಿಗವಕ್ಕೆ, ಗುರುಗಳ ಭಯ ಬೇಕು. ಒಟ್ಟಿಂಗೆ, ಗುರುಗಳೂ ಅವರ ಮರ್ಯಾದಿಯ ಒಳುಸೆಂಡು ಬರೆಕು. ಒಂದು ಪ್ರಸ್ತುತ ಸಮಸ್ಯೆಯ ಒಪ್ಪಣ್ಣ, ಅವನ ಶೈಲಿಲಿ ಚೆಂದಕೆ ವಿವರುಸಿ ಲಾಯಕಿನ ಒಪ್ಪವನ್ನು ಕೊಟ್ಟಿದ. ನಿಜ. ಮನುಷ್ಯ ವಿಶ್ವಾಸ ಒಳುಸೆಳೆಕಾದ್ದು ಅತಿ ಮುಖ್ಯ.

    1. ಒಪ್ಪ ಕಂಡು ತುಂಬಾ ಕೊಶಿ ಆತು ಮಾವ.
      ಗುರುಗಳ ಬಗ್ಗೆ ಪುನಾ ಭಯ ಬಪ್ಪ ಕಾಲ ಸುರು ಆತದಾ..!! 🙂

  18. ಅಪ್ಪು ಆನುದೆ ಒದಿದೆ ಇದರ ಪೇಪರಿಲಿ. ಪ್ರತಾಪ್ ಸಿಂಹ ಇದರ ಬಗ್ಗೆ ಹಿಂದೆ ಒಂದು ೨ ವರ್ಶ ಮೊದಲು ಬರದಿತ್ತ. ಕೊಣಾಜೆಲಿ ಕೂಡ ಹೀಂಗಿಪ್ಪ ಕೆಲವು ಇದ್ದವಡ.

    ಆನು ಮಯಿಸೂರಿಲಿ ೪ ವರ್ಶ ಇತ್ತಿದ್ದೆ. ಈ ಲಿಂಗಾಯತ್ ಮತ್ಥೆ ಗೌಡಂಗಳ ಕಾರ್ಬಾರು ಭಯಂಕರ.

    ಇವಕ್ಕೆ ಅವರ ಮೇಲೆ ಆರೊಪ ಬಪ್ಪಗ ಜಾತಿ ನೆಂಪಪ್ಪದು.

    ಎ.ರಾಜ ಕೂಡ ವಿಷಯ ಎಲ್ಲ ಹೆರ ಬಪ್ಪಗ ಆನು ಹಿಂದುಳಿದ ವರ್ಗ ಹೇಳಿ ರಾಗ ತೆಗವಲೆ ಶುರು ಮಡಿತ್ತು.

    ಮಯಿಸೂರು ಯುನಿವರ್ಸಿಟಿಗೆ ಒಲ್ಲೆ ಹೆಸರಿದ್ದು. ಬೈಲಿನ ಆರುದೆ ಹೆದರಿ ಇನ್ನು ಮಕ್ಕಳ ಕಳುಸದ್ದೆ ಇಪ್ಪದು ಬೇಡ. ರಜ್ಜ ಮುಂಜಾಗ್ರತೆ ವಹಿಸಿರೆ ಆತು.

    1. ಸರಿಯಾದ ವಿಚಾರ ಹೇಳಿದ್ದಿ.
      ಕನ್ನಡಲ್ಲೇ ಒಪ್ಪ ಕೊಟ್ಟದು ಕೊಶಿ ಆತು. ಇನ್ನು ಶುದ್ದಿ ಯೇವಗ ಬತ್ತೋ..? 🙂

  19. “ವಿದ್ಯೆ ಕಲಿಶದ್ರೂ ಸರಿ, ವಿಶ್ವಾಸ ಒಳಿಶಿಗೊಳೆಕ್ಕಾದ್ದು ಮುಖ್ಯ! ವಿಶ್ವಾಸ ಕಳಕ್ಕೊಂಡ ವಿದ್ಯೆ ಪ್ರಯೋಜನ ಇದ್ದೋ?”
    ರಾಜಕೀಯ ಎಲ್ಲ ಕ್ಷೆತ್ರಲ್ಲಿಯೂ ಇದ್ದು. ಆದರೆ ನಮ್ಮ ವಿಶವಿದ್ಯಲಯಂಗ ವಿಶ್ವಾಸ ಪೂರ ಕಳಕ್ಕೊಂಬಶ್ಟು ಕೆಳ ಮಟ್ಟಿಂಗೆ ಬಯಿಂದಿಲ್ಲೆ ಹೇಳಿ ಎನ್ನ ಅಭಿಮತ. ಈ ಒಂದು ಪ್ರಸಂಗ ವಿದ್ಯಾಕ್ಶೆತ್ರಲ್ಲಿ ಒಂದು ಕಪ್ಪು ಚುಕ್ಕೆ, ಹಾಂಗೇಳಿ ನಾವು ಪೂರ ನಿರಾಶೆಲಿ ಇರೆಕ್ಕಾಗಿಲ್ಲೆ ಅಲ್ಲದೊ..?

    1. { ವಿಶ್ವಾಸ ಪೂರ ಕಳಕ್ಕೊಂಬಶ್ಟು ಕೆಳ ಮಟ್ಟಿಂಗೆ ಬಯಿಂದಿಲ್ಲೆ }
      ಅದಪ್ಪು ಕುಮಾರಣ್ಣ. ಎಲ್ಲೊರುದೇ ಅಲ್ಲ, ಕೆಲಾವು ಜೆನ ಮಾಂತ್ರ.
      ಒಳ್ಳೆ ಅಡಕ್ಕೆ ಗೋಣಿಲಿ ಒಂದೊಂದು ಎಡಕ್ಕಿಲಿ ಒಂದೊಂದು ಕರಿಗ್ಗೋಟು ಇದ್ದರೆ ಇಬ್ರಾಯಿ ಒಪ್ಪುಗೋ? ರೇಟು ನಾಕ್ರುಪಾಯಿ ಕಮ್ಮಿಯೇ ಸಿಕ್ಕುಗಟ್ಟೆ! 🙁

  20. ಅಪ್ಪು….., ನಿಂಗೊ ಹೇಳಿದಾಂಗೆ ‘ಭಾಶೆ ಮರದರೂ ಭಾಶೆ ಇಪ್ಪೋರು, ಭಾಶೆ ನೆಂಪಿದ್ದರೂ ಭಾಶೆಇಲ್ಲದ್ದೋರು’ ಒಪ್ಪ ಕೊಟ್ಟಿದವು ಕೂಡ.

    ಈ ಕೊಳಚ್ಚಿಪ್ಪುಬಾವ°ನ ಮಂಡೆಲಿ ಇಷ್ಟೆಲ್ಲಾ ಅನರ್ಥ ಓಡಿಯೊಂಡಿಪ್ಪಗ ಅದೇಂಗೆ ಅಷ್ಟೂ ಒರಕ್ಕು ಬಂತೋ!

    ಆ ಮೈಸೂರಿಂದ ಬಸ್ಸಿಲ್ಲಿ ಬಂದ ಮಾರ್ಗ ಹೆಂಗಿತ್ತು ಹೇಳ್ಳೆ ಮರದತ್ತೋ ಕೊಳಚ್ಚಿಪ್ಪುಬಾವ°ನ್ಗೆ!

    ಎಂತಾರು ನಿಂಗಳ ಆ ಹೆಮ್ಮಕ್ಕೋ ಪಾಪ ಆತೋ. ಛೆ.

    ಪ್ರೊಫೆಸರಂಗೊ ಮಾರ್ಗದರ್ಶನ ಮಾಡ್ಲೆ ಅವರ ಮಾರ್ಗ ಕಂಡು ಹಿಡಿತ್ತದರ್ಲೆ ಆತಿದ. ಇಪ್ಪ ಟೆನ್ಶನ್ ಪರಿಹರುಸಲೆ ಸಿಕ್ಕ ಮಾರ್ಗವೇ ಗತಿ ತೋರಿತ್ತೋ ಎಂತೋಪ ಆ ಮಹಾನುಭಾವಂಗೆ. ಅಂತೂ ಭಾವ , ಇದೊಂದು ನಿದರ್ಶನ . ಹೀಂಗಿರ್ತು ತೆರೆಯ ಮರೆಯಲಿ ಅದೆಷ್ಟು ನಡದ್ದೋ! . ಜ್ನಾನ ಗಂಗೋತ್ರಿಲಿ ಸುಜ್ಞಾನ ಮೆರೆಯಲಿ, ವಿಜ್ಞಾನ ಬೆಳಗಲಿ ಹೇಳಿಯೊಂಡು ಇತ್ಲಾಗಿಂದ ಒಪ್ಪ.

    1. ಒಪ್ಪ ಒಪ್ಪಕ್ಕೆ ಒಪ್ಪಂಗೊ ಭಾವಾ..
      { ಹೀಂಗಿರ್ತು ತೆರೆಯ ಮರೆಯಲಿ ಅದೆಷ್ಟು ನಡದ್ದೋ! }
      – ಅಪ್ಪು ಭಾವ, ನಿಜವಾಗಿಯೂ ಚಿಂತನೆ ಮಾಡೇಕಾದ ವಿಚಾರವೇ! 🙁

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×