- ತೆಂಕಲಾಗಿಂದ ಹೇಳಿಕೆ ಬಂತು - November 5, 2012
- ಮಡಿಕೇರಿ ಆಕಾಶವಾಣಿಲಿ “ಇರ್ತಲೆ” ಬಗ್ಗೆ ಸುಭಗಣ್ಣನ ಸಂದರ್ಶನ - October 8, 2012
- ಈ ಪದ್ಯದ ಛಂದಸ್ಸು, ಆಶಯ ಗುರುತುಸಿ!! - February 29, 2012
ಕಳುದ ಶತಮಾನದ ಆದಿಭಾಗಲ್ಲಿ ನಮ್ಮ ಹಿರೀಕರಿಂಗೆ; ಮುಖ್ಯವಾಗಿ ಕುಂಬ್ಳೆ ಸೀಮೆಲಿ ನೆಲೆ ಕಂಡೊಂಡಿದ್ದ ನಮ್ಮೋರಿಂಗೆ- ಹಲವು ಸಂಕಷ್ಟಂಗಳ ಎದುರುಸೆಕ್ಕಾಗಿ ಬಂತು. ಬರಗಾಲ, ಕಳ್ಳಂಗಳ ಉಪದ್ರ, ಮಾಪ್ಳೆಗಳ ರಗಳೆ, ಮೇಗಂದ ಒಂದನೇ ಮಹಾಯುದ್ಧದ ಬೆಶಿ- ಇದೆಲ್ಲದರಿಂದಾಗಿ ನಮ್ಮವಕ್ಕೆ ಇಲ್ಲಿ ದಿನಕಳವದೇ ಬಂಙಾನುಬಂಙ ಆಗಿಹೋತು. ಒಂದೊತ್ತಿನ ತೆಳಿಗೂ ತತ್ವಾರ ಹೇಳಿ ಆದಪ್ಪಗ ನಿವುರ್ತಿ ಇಲ್ಲದ್ದೆ ಅನೇಕ ಕುಟುಂಬಂಗೊ ಇದ್ದಬದ್ದ ಸೊತ್ತುಗಳ ಕಟ್ಟಿಂಡು ಇಲ್ಲಿಂದ ದೇಶಾಂತರ ಹೆರಟವು.
ಹಾಂಗೆ ಹೆರಟವರಲ್ಲಿ ಹೆಚ್ಚಿನವು ಮೋರೆ ತಿರುಗುಸಿದ್ದು ತೆಂಕ ಹೊಡೆಂಗೆ. ನೀಲೇಶ್ವರ ಲಾಗಾಯ್ತು ತೃಶ್ಶೂರು, ಪಾಲಕ್ಕಾಡು, ಮತ್ತೆ ಅಲ್ಲಿಂದ ರೆಜ ಮೂಡಂತಾಗಿ ಕೊಯಂಬತ್ತೂರು ಹೀಂಗೆ ಅಲ್ಲಲ್ಲಿ ಅಲ್ಲಲ್ಲಿ ಗೆಂಟುಮೂಟೆ ಇಳುಶಿ ಜೀವನ ವ್ಯಾಪಾರ ನೆಡಶಲೆ ಸುರುಮಾಡಿದವು. ಶಾಂತಿಕ್ಕಾರಂಗೊ ಆಗಿಯೋ ಹೋಟ್ಲು ಮಡುಗಿಯೋ ಒಬ್ಬೊಬ್ಬ ಒಂದೊಂದು ರೀತಿಲಿ ‘ಅಡಿ’ ಗಟ್ಟಿ ಮಾಡಿಯೊಂಡವು.
ತೆಂಕಲಾಗಿ ಹೋಗಿ ನೆಲೆನಿಂದ ನಮ್ಮ ಹೊಡೆಯಾಣ ಹವೀಕರಲ್ಲಿ ಹೆಚ್ಚಿನವು ಅವ್ವವು ಉದರಂಭರಣಕ್ಕೆ ಆಯ್ಕೆಮಾಡಿಯೊಂಡ ಕ್ಷೇತ್ರಕ್ಕೆ ಮಾಂತ್ರ ಸೀಮಿತವಾಗಿ ಜೀವನ ನೆಡಶಿಂಡು ಬಂದವು. ಬಾಲಣ್ಣ ಬೈಲಿಂಗೆ ಪರಿಚಯ ಮಾಡಿಕೊಟ್ಟ ಪೋತ್ತಿ ಯವರಹಾಂಗೆ ಸಮಾಜದ ಇತರೆ ಕ್ಷೇತ್ರಂಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ನಮ್ಮವು ಇಪ್ಪದು ಕೇವಲ ಕೆಲವೇ ಕೆಲವು ಜೆನ.
ಹಾಂಗಿಪ್ಪ ಅಪರೂಪದ ವೆಗ್ತಿಗಳಲ್ಲಿ ಮಲಯಾಳಂ ಸಾಹಿತ್ಯ ಕ್ಷೇತ್ರಕ್ಕೆ ಯಥಾನುಶಕ್ತಿ ಕಾಣಿಕೆ ಸಲ್ಲುಸಿ ಸಾಹಿತಿಯಾಗಿ ಗುರುತಿಸಿಯೊಂಡ ಒಬ್ಬ ವೆಗ್ತಿಯೂ ಇದ್ದವು.
ಅವು ‘ನಕುಲನ್’ . ಈ ಹೆಸರು ಕೇಳಿಯಪ್ಪಗ ‘ಇದು ಹವ್ಯಕರ ಹೆಸರಿನಾಂಗೆ ಇಲ್ಲೆನ್ನೆ?’ ಹೇಳಿ ನಿಂಗೊಗೆ ತೋರಿಕ್ಕು.
ನಿಜ. ಇದು ಅವರ ಮೂಲ ಹೆಸರು ಅಲ್ಲ.
ಸರಿಸುಮಾರು ನೂರು ವರ್ಷ ಮದಲು ಕುಂಬ್ಳೆ ಸೀಮೆಂದ ವಲಸೆಹೋದ ಮಡ್ವ ಮನೆತನದ ಭಂಡಾರಕೊಟ್ಟಗೆ ಕವಲಿನ ಶ್ರೀ ಕೃಷ್ಣ ಭಟ್ಟ ಹೇಳುವವು ಪಾಲಕ್ಕಾಡು ಜಿಲ್ಲೆಯ ಕೊಲ್ಲಂಗೋಡು ಹತ್ರಾಣ ನೆನ್ಮೇನಿ ಹೇಳ್ತ ಊರಿಲ್ಲಿ ಒಂದು ದೊಡ್ಡಾ ಜಮೀನ್ದಾರನ ಕಾರ್ಯಸ್ಥನಾಗಿ ಸೇರಿಯೊಂಡವು. ಒಟ್ಟಿಂಗೆ ಅದೇ ಊರಿನ ಒಂದು ದೇವಸ್ಥಾನದ ‘ಶಾಂತಿ’ಯೂ ಸಿಕ್ಕಿತ್ತು. ಅವರ ಮಗ ಎಂ.ಕೆ.ಬಾಲಕೃಷ್ಣ ಭಟ್ ಅಪ್ಪನ ವೃತ್ತಿಗೆ ಸಹಕಾರಿಯಾಗಿ ಇದ್ದುಕೊಂಡು ಸಾಹಿತ್ಯದ ಬಗ್ಗೆಯೂ ಅಭಿರುಚಿ ಬೆಳಶಿಯೊಂಡವು. ಆ ಕಾಲಲ್ಲಿ ಖ್ಯಾತಿಹೊಂದಿದ್ದ ಸಹದೇವನ್ ಹೇಳ್ತ ಒಂದು ಸಾಹಿತಿ – ಕಲಾವಿದನ ಮೇಗಾಣ ಅಭಿಮಾನಂದ ಇವು ನಕುಲನ್ ಹೇಳಿ ಕಾವ್ಯನಾಮ ಮಡುಗಿಂಡು ಕಥೆ ಕಾದಂಬರಿ ಬರವಲೆ ಸುರುಮಾಡಿದವು.
‘ನಕುಲನ್’ ಈವರೆಗೆ ಹನ್ನೊಂದು ಕಾದಂಬರಿ ರಚನೆ ಮಾಡಿದ್ದವು. ಸುಮಾರು 65ಕ್ಕೂ ಮಿಕ್ಕಿ ಸಣ್ಣಕಥೆಗೊ ಕೇರಳದ ಬೇರೆಬೇರೆ ನಿಯತಕಾಲಿಕಂಗಳಲ್ಲಿ ಪ್ರಕಟ ಆಯಿದು.
ಇವರ ಸಾಧನೆಯ ಗುರುತಿಸಿ ಅಖಿಲ ಭಾರತ ಬರಹಗಾರರ ಒಕ್ಕೂಟ ಇವಕ್ಕೆ ಸನ್ಮಾನ ಮಾಡಿ ಗೌರವ ಸಲ್ಲುಸಿದ್ದು. ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯೂ ‘ನಕುಲನ್’ ಸಾಧನೆಗೆ ಸಂದ ಮತ್ತೊಂದು ಗೌರವ.
ವ್ಯವಹಾರಕ್ಕೂ ಸಾಹಿತ್ಯ ರಚನೆಗೂ ಮಲಯಾಳವನ್ನೇ ಉಪಯೋಗಿಸುತ್ತಾ ಇದ್ದರೂ ಇವು ಮಾತೃಭಾಷೆಯ ಮರದ್ದವಿಲ್ಲೆ. ಈಗಳೂ ಮನೆಮಾತು ಕುಂಬ್ಳೆ ಸೀಮೆಯ ಹವಿಕನ್ನಡವೇ.
‘ನಕುಲನ್’ ಸ್ವಯಂ ಪರಿಶ್ರಮಂದ ಕನ್ನಡವ ಓದಲೂ ಕಲ್ತಿದವು..! ಕನ್ನಡದ ಮೇಗಾಣ ಅಭಿಮಾನಂದ ಸುಮಾರು ವರ್ಷ ಕಾಲ ಜನಪ್ರಗತಿ, ಪ್ರಜಾಮತ ಪತ್ರಿಕೆಗಳ ಚಂದಾದಾರರಾಗಿ ಪತ್ರಿಕೆ ತರುಸಿ ಓದಿಯೊಂಡಿ ಇದ್ದಿದ್ದವು. ಆ ಪತ್ರಿಕೆಗಳ ಸಂಗ್ರಹ ಈಗಳೂ ಅವರ ಮನೆಲಿ ಭದ್ರವಾಗಿ ಇದ್ದು!
ಅದೇ ರೀತಿ ಅವರ ಮೂಲಸ್ಥಾನದ ಒಟ್ಟಿಂಗೆ ಈಗಳೂ ಸಂಪರ್ಕ ಮಡುಗಿಯೊಂಡಿದ್ದವು. ಮೂರೋ ನಾಕೋ ವರ್ಷಕ್ಕೊಂದಾರಿ ಊರಿಂಗೆ ಬಂದು ಮಡ್ವ ದೈವದ ಪ್ರಸಾದ ತೆಕ್ಕಂಡು ಹೋಕು.
‘ನಕುಲನ್’ಗೆ ಈಗ ಅರುವತ್ತೆಂಟಾತು. ಸಹಧರ್ಮಿಣಿ ಸಾವಿತ್ರಿ, ಮಗ ಸೊಸೆ ಪುಳ್ಳಿಯಕ್ಕಳೊಟ್ಟಿಂಗೆ ನೆನ್ಮೇನಿಯ ‘ಸರಸ್ವತಿ ಮಂದಿರಂ’ಲಿ ನೆಮ್ಮದಿಯ ಬದುಕು ಸಾಗುಸುತ್ತಾ ಇದ್ದವು.
‘ನಕುಲನ್’ ಖ್ಯಾತಿ ಹೊಂದಿದ ಮುಂಚೂಣಿ ಸಾಹಿತಿ ಖಂಡಿತ ಅಲ್ಲ. ಮಲಯಾಳಂ ಸಾಹಿತ್ಯ ಸಿಂಧುವಿನ ಕೇವಲ ಒಂದು ಸಣ್ಣ ಬಿಂದು. ಆದರೂ ಈ ‘ನಕುಲನ್’ ಅರ್ಥಾತ್ ಎಂ.ಕೆ. ಬಾಲಕೃಷ್ಣ ಭಟ್ ಹೇಳುವ ಬಿಂದು ನಮ್ಮವನೇ ಆದ ಒಬ್ಬ ಹವ್ಯಕ ಬಂಧು ಹೇಳ್ತದು ನಾವೆಲ್ಲರು ಅಭಿಮಾನಪಡೆಕಾದ ವಿಷಯ, ಅಲ್ಲದೊ?
ಹನ್ನೊಂದಲ್ಲ; ಮತ್ತೂ ಒಂದಿದ್ದು..!
ಇನ್ನಲೆಗಳ್ ನಾಳೆಗಳ್, ವೆಳ್ಳಿತ್ತಿರಯಿಲೆ ನಾಯಿಕ, ನಿಲಯುಡೆ ಕರಯಿಲ್- ಈ ಮೂರು, ಆಗ ಹೇಳಿದ ಒಂಭತ್ತು – ಒಟ್ಟು ಹನ್ನೆರಡು ಕಾದಂಬರಿಗೊ ಪುಸ್ತಕರೂಪಲ್ಲಿ ಪ್ರಕಟ ಆಯಿದು.
ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟ ಆದ ಕಾದಂಬರಿಗೊ ಮೂರು- ಸಿಂಗಾರಿ, ಸಲೀಮಾ ನಿನಕ್ಕ್ ವೇಂಡಿ, ತೂಕ್ಕ್ ಮರತ್ತಿಂಡೆ ತಣಲಿಲ್
ಖಂಡಿತ ನವಗೆ ಅಭಿಮಾನದ ವಿಷಯ. ಹನ್ನೊಂದು ಕಾದಂಬರಿಗಳ ಪಟ್ಟಿ ಕೊಡ್ಲೆ ಎಡಿಗೋ? ಒಂದೊಂದಾಗಿ ಓದಿ ನೋಡೆಕ್ಕು ಹೇಳಿ ಇದ್ದು.
ಅಲಮೇಲು, ವೆಳಿಚ್ಚತ್ತೆ ಸ್ನೇಹಿಚ್ಚು, ಸತ್ಯಂ ಅರಿಯುಗ ಮಗನೇ, ಗ್ರಾಮಂ, ತೆನ್ಮಲೆಯುಡೆ ತಾಳ್ವರಯಿಲ್, ಪಂಚಾಗ್ನಿ ಇಡಯಿಲ್ ಪಾಂಚಾಲಿ, ನಾಳತ್ತೆ ಪ್ರಭಾತಂ, ಮುಗಿಲಿರಙಿಯ ತಾಳ್ವರಂ, ಮಧುರಕ್ಕಳ್ಳ್..
ಒಂಭತ್ತಾತಿಲ್ಯೊ ಭಾವ..? ಇನ್ನೆರಡು ಹೆಸರು ನೆಂಪಾವ್ತಿಲ್ಲೆಪ್ಪ. ಸಿಕ್ಕಿದಕೂಡ್ಲೆ ತಿಳುಸುತ್ತೆ.
ಅಭಿಮಾನಂದ ಆಸಕ್ತಿ ತೋರ್ಸಿದ್ದಕ್ಕೆ ಧನ್ಯವಾದಂಗೊ
“ಎಂ.ಕೆ. ಬಾಲಕೃಷ್ಣ ಭಟ್ ಹೇಳುವ ಬಿಂದು ನಮ್ಮವನೇ ಆದ ಒಬ್ಬ ಹವ್ಯಕ ಬಂಧು ಹೇಳ್ತದು ನಾವೆಲ್ಲರು ಅಭಿಮಾನಪಡೆಕಾದ ವಿಷಯ, ಅಲ್ಲದೊ”
ನಿಜವಾಗಿಯೂ ಅಪ್ಪು. ಅವರ ಬಗ್ಗೆ ತಿಳಿಶಿಕೊಟ್ಟದಕ್ಕೆ ಧನ್ಯವಾದಂಗೊ ಸುಭಗಣ್ಣ.
ದೂರದ ಮಲೆಯಾಳ ದೇಶಲ್ಲಿ ಕೂದಂಡು ಸರಸ್ವತಿ ಸೇವೆ ಮಾಡ್ತ ನಮ್ಮ ನಕುಲನ್ಮಾವಂಗೆ ನಮಸ್ಕಾರ ಇದ್ದು.
ಇನ್ನಾಣ ಸರ್ತಿ ಅವರ ಕಾಂಬಲೆ ನಿಂಗೊ ಹೋಪಗ ಒಂದು ದಿನಿಗೆಳಿಕ್ಕಿ. ಆತೋ?
ಪುರುಸೊತ್ತಿದ್ದರೆ ನಾವುದೇ ಸೇರಿಗೊಳ್ತು ನಿಂಗಳ ಬೈಕ್ಕಿಲಿ.
‘ನಕುಲನ್’ ಇವರ ಪೂರ್ವಜರ ಕತೆ ಓದಿಯಪ್ಪಗ ಇವಕ್ಕೆ ಪ್ರಚಂಡ ಜೀವನಾನುಭವ ಇಕ್ಕನ್ನೆ ಹೇಳಿ ಭಾವಿಸುಲಕ್ಕು. ಇಂಥಾ ಜೀವನಾನುಭವ ಇಪ್ಪ ಸಾಹಿತಿಯ ಸಾಹಿತ್ಯವೂ ಪ್ರಚಂಡ ಆಗಿಕ್ಕು.
‘ನಕುಲನ್’ ಮತ್ತೆ ಇವರ ಪರಿಚಯ ಕೊಟ್ಟ ‘ಸುಭಗ” – ಇಬ್ರಿಂಗೂ ಅಭಿನಂದನೆಗೊ..
ನಮ್ಮವು ಮಲೆಯಾಳಲ್ಲೂ ಮಿಂಚಿದ್ದು ನೋಡಿ ಖುಷಿ ಆತು.
ಓಹ್, ಕೇರಳಲ್ಲಿ ಹುಟ್ಟಿ ಬೆಳದು, ಅಲ್ಲಿ ಮಲಯಾಳಿ ಸಾಹಿತ್ಯ ಕೃಷಿ ಮಾಡ್ತ “ನಕುಲನ್” ನಾಮದ ನಮ್ಮವರ ಬಗ್ಗೆ ತಿಳುದು ಅಭಿಮಾನ ತುಂಬಿ ಬಂತು. ಅದರೊಟ್ಟಿಂಗೆ ನಮ್ಮ ಭಾಷೆಯನ್ನುದೆ ಅವು ಮರದ್ದವಿಲ್ಲೆ. ಊರಿಂಗುದೆ ಬತ್ತಾ ಇರ್ತವು. ನಿಜವಾಗಿಯೂ ಕೊಶಿಯ ವಿಚಾರ. ಹನ್ನೊಂದು ಕಾದಂಬರಿ, 65 ಸಣ್ಣ ಕತೆ ಬರದ್ದವು ಹೇಳಿರೆ ದೊಡ್ಡ ಸಾಹಿತಿಯೇ ಸರಿ. ನಿಜವಾಗಿಯೂ ಮಲೆಯಾಳಿ ಕತೆಯ ಶೈಲಿ ಲಾಯಕಿರುತ್ತು. ಅವರ ಕತೆಗಳ ನಮ್ಮ ಭಾಷೆಗೊ, ಕನ್ನಡಕ್ಕೊ, ಭಾಷಾಂತರ ಮಾಡಿ ಆರಾರು (ಅವುದೆ ಮಾಡಿ ಕೊಡುಗು) ಕೊಡುತ್ತರೆ, ನವಗೆಲ್ಲ ಓದಿಕ್ಕಲೆ ಆವುತ್ತಿತು. ಪರಿಚಯ ಇದ್ದವರ ಮೂಲಕ ಅವರ ಸಂಪರ್ಕಿಸಲಾವುತ್ತಿತು. ಸುಭಗಣ್ಣ ಒಳ್ಳೆ ಸುದ್ದಿಯನ್ನೇ ಕೊಟ್ಟಿದ, ಧನ್ಯವಾದಂಗೊ.
ಒಳ್ಳೆ ಮಾಹಿತಿ ಕೊಟ್ಟಿದಿ ಸುಭಗಣ್ಣ .
‘ನಕುಲನ್’ನಂತಹ ಅಪರೂಪದ ವೆಗ್ತಿಯ ಪರಿಚಯ ಮಾಡಿ ಕೊಟ್ಟದ್ದಕ್ಕೆ ಸುಭಗಣ್ಣಂಗೆ ಧನ್ಯವಾದಂಗೊ…
ಸಂತೋಷ ಆತು ನಮ್ಮವು ಮಲಯಾಳ ಭಾಷಾ ಸಾಹಿತ್ಯಲ್ಲಿ ಇಪ್ಪದು ನೋಡಿ..ಬೈಲಿಂಗೆ ಪರಿಚಯ ಮಾಡಿ ಒಳ್ಳೆ ಕೆಲಸ ಮಾಡಿದಿ ಸುಭಗಣ್ಣ…
ವ್ಯವಹಾರಕ್ಕೂ ಸಾಹಿತ್ಯ ರಚನೆಗೂ ಮಲಯಾಳವನ್ನೇ ಉಪಯೋಗಿಸುತ್ತಾ ಇದ್ದರೂ ಇವು ಮಾತೃಭಾಷೆಯ ಮರದ್ದವಿಲ್ಲೆ. ಈಗಳೂ ಮನೆಮಾತು ಕುಂಬ್ಳೆ ಸೀಮೆಯ ಹವಿಕನ್ನಡವೇ.
ಇದರ ಓದಿಯಪ್ಪಗ ಒಂದು ವಿಚಾರ ನೆನಪಾತು, ಹಂಚಿಕೊಳ್ಳುತ್ತೆ,
YouTube ವೀಡಿಯೊ ನೋಡಿ ಇತ್ತಿದ್ದೆ, ರಾಜಸ್ತಾನದ ಒಂದು ಗ್ರಾಮಲ್ಲಿ ಸಂಸ್ಕೃತವೆ ಮಾತನಾಡುವ ಭಾಷೆ ಅಡ, ಇಂಟರ್ವ್ಯೂ ಮಾಡುವ ಮನುಷ್ಯ ಒಂದು ಹೆಮ್ಮಕ್ಕಳ ಹತ್ರ ಕೇಳುತ್ತ..ನಿನಗೆ ಸಂಸ್ಕೃತ ಮಾತನಾಡ್ಲೆ ಕಷ್ಟ ಆವುತ್ತಿಲ್ಲೆಯ ಹೇಳಿ, ಅಷ್ಟಪ್ಪಗ ಆ ಹೆಮ್ಮಕ್ಕೋ ಹೇಳುತ್ತವು, ಎನ್ನ ಭಾಷೆಯೇ ಸಂಸ್ಕೃತ ಹೇಳಿ
vishaya tilisiddakke ananatananta dhanyavaadanga.
nakulan maavana contact maadle ippa number iddare kottikki bhaavaa.
[ನಾವೆಲ್ಲರು ಅಭಿಮಾನಪಡೆಕಾದ ವಿಷಯ, ಅಲ್ಲದೊ?] – ಖಂಡಿತಾ. ಎಳ್ಳಷ್ಟೂ ಸಂಶಯವೇ ಬೇಡ.
ನವಗೆ ಈ ವರೆಂಗೆ ಗೊಂತಿದ್ದದು ಮಹಾಭಾರತದ ‘ಚಿಣ್ಣರು ಯಮಳರು’ ನಕುಲ ಸಹದೇವನ ಮಾಂತ್ರ. ಇವನೂ ಒಬ್ಬ ಇದ್ದ ಹೇಳಿ ಪರಿಚಯ ಮಾಡಿಕೊಟ್ಟದು ಉತ್ತಮ ಆತು ಸುಭಗಣ್ಣ. ಅವರ ಸಾಧನೆ ನೋಡಿ ಖುಶೀ ಆತಿದ. ಶ್ರೀ ಗುರು ದೇವತಾನುಗ್ರಹಂದ ಆಯುರಾರೋಗ್ಯ ಐಶ್ವರ್ಯದಿಂದ ಸದಾ ಹಸನ್ಮುಖಿಯಾಗಿ ಇನ್ನೂ ಬಹುಕಾಲ ನಮ್ಮೊಂದಿಗೆ ಇರಲಿ ಸಾಹಿತ್ಯ ಸೇವೆ ಮುನ್ನೆಡೆಯಲಿ ಹೇಳಿ ಬೈಲಿಂದ ನಾವೆಲ್ಲಾ ಬೇಡಿಗೊಂಬೊ ಹೇಳಿ ಇತ್ಲಾಗಿಂದ ಒಪ್ಪ.
ಅಪ್ಪೋ ಸುಭಗಣ್ಣ, ಅವರ ಹವೀಕ ಭಾಷೆ ಹೇಂಗಿಕ್ಕು ಹೇಳಿ ಗ್ರೇಶಿ ನೋಡೋದು ಆನೂ. ಉಹೂಂ .., ನೋಡೋ ನಿಂಗಳೇ ನಾಕು ಗೆರೆ ಬರದು ತೋರ್ಸಿ ಭಾವಯ್ಯ ಇಲ್ಲಿ.
[ಅವರ ಹವೀಕ ಭಾಷೆ ಹೇಂಗಿಕ್ಕು ಹೇಳಿ ಗ್ರೇಶಿ ನೋಡೋದು ಆನೂ] ನಿಂಗಳ ಭಾಷೆಂದ (ತೆಮುಳು ಭಾಷೆ) ಲಾಯ್ಕ ಇಕ್ಕು ಚೆನ್ನೈ ಭಾವಾ.
ಎಂಗಳ ಭಾಷೆ ಹೇಳಿರೆ ನಿಂಗೊಗೆ ಅರ್ಥ ಆಗ ಬಿಡಿ. ಆ ಮಲಯಾಳೀ ಹವೀಕ ಭಾಷೆ ಖಂಡಿತಾ ಲಾಯಕ ಇಕ್ಕು ಕೇಳ್ಳೆ. ಎಡಿಗಾರೆ ನಾಕು ಗೆರೆ ಬರದಿಕ್ಕಿ ಇಲ್ಲಿ. ನೋಡಿ ಖುಷಿ ಪಡುವೋ ಗೆಣಪ್ಪಾ
ಊರು ಸೀಮೆಗಳ ದಾ೦ಟಿ ಹೋದರೂ ಪ್ರತಿಭೆ ಹೆರ ಬ೦ದು ಪ್ರಕಾಶಮಾನವಾಗಿ ಬೆಳಗುಗು ಹೇಳೊದಕ್ಕೆ ಸರಿಯಾದ ಉದಾಹರಣೆ.
ಮಲೆಯಾಳ ಭಾಷೆಲಿ ಸಾಹಿತ್ಯ ಕೃಷಿ ಮಾಡಿ ಯಶಸ್ವಿ ಆದ ಈ ಹಿರಿಯರ ಬೈಲಿ೦ಗೆ ಪರಿಚಯ ಮಾಡಿಕೊಟ್ಟದಕ್ಕೆ ಸುಭಗಣ್ಣ೦ಗೆ ಧನ್ಯವಾದ ಸಲ್ಲೆಕ್ಕು.ಬಾಲಕೃಷ್ಣ ಭಟ್ಟರು ಮಾತೃಭಾಷೆಯ ಮರದ್ದವಿಲ್ಲೆ ಹೇಳಿ ಓದಿ ಸ೦ತೋಷ ಹೆಚ್ಚಾತು.
ಅವರ ಯಾವುದೋ ಕೃತಿಯ ಓದಿದ ನೆ೦ಪು.. ಆದರೆ ಅವು ಮೂಲತಃ ನಮ್ಮ ಕು೦ಬ್ಳೆ ಸೀಮೆಯವೇ ಹೇಳಿ ಗೊ೦ತಾದ್ದದು ಈಗ ಇದಾ.. ಇನ್ನುದೆ ಹೀ೦ಗೆ ಎಲೆಮರೆಯ ಕಾಯಿಯಾಗಿಪ್ಪ ಎಷ್ಟು ಜನ೦ಗೊ ಇದ್ದವೋ ಏನೋ.. ಅವರಿ೦ದ ಇನ್ನುದೆ ಹಲವು ಉತ್ತಮ ರಚನೆಗೊ ಮೂಡಿಬರಳಿ ಹೇಳಿ ಹಾರೈಕೆಗೊ..