- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
ಕೆಲವು ವರ್ಷಂಗಳ ಹಿಂದೆ “The Sword of Tipu Sultan “ ಹೇಳ್ತ ಟಿ. ವಿ. ಧಾರವಾಹಿ ಪ್ರಸಾರ ಅತು. ಭಗವಾನ್ ಎಸ್. ಗಿಡ್ವಾನಿಯ ಕಾದಂಬರಿ ಆಧರಿಸಿದ ಟಿಪ್ಪುವಿನ ಕತೆ ಆಗಿತ್ತದು. ಹಲವಾರು ಜೆನ,ವಿಶೇಷವಾಗಿ ಕೇರಳಿಯರು ಇದರ ವಿರೋಧಿಸಿತ್ತಿದ್ದವು – ಮುಖ್ಯವಾಗಿ ಇದರಲ್ಲಿ ತೋರ್ಸಿದ ಟಿಪ್ಪುವಿನ ಚಿತ್ರಣ ಸತ್ಯಕ್ಕೆ ದೂರ ಹೇಳ್ತ ಅಭಿಪ್ರಾಯ ಅವಕ್ಕೆ. ಟಿಪ್ಪು ವಾಸ್ತವಲ್ಲಿ ಹಿಂಗೆ ಇತ್ತಿದ್ದಾಯಿಲ್ಲೆ ಹೇಳಿ ಭಾವಿಸಿಗೊಂಡಿತ್ತಿದ್ದವು. ಇಂಥ ವಿವಾದವ ಹಿಡುದು ಶ್ರೀ ಎಚ್ .ಡಿ .ಶರ್ಮ ಟಿಪ್ಪುವಿನ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದ°. ಟಿಪ್ಪು ಒಬ್ಬ ರಾಷ್ಟ್ರೀಯವಾದಿ, ಜಾತ್ಯತೀತ ಮನೋಭಾವದ ವ್ಯಕ್ತಿಗಿಂತ ಅವನ ದೂಷಣೆ ಮಾಡ್ತ ಜೆನಂಗಳ ಅಭಿಪ್ರಾಯವೇ ಹೆಚ್ಚು ಸರಿ ಹೇಳಿ ಕಂಡು, ಈ ಸತ್ಯವ ಜೆನಂಗೊಕ್ಕೆ ತಲ್ಪುಸುಲೇ ಬೇಕಾಗಿ “ The Real Tipu” ಹೇಳ್ತ ಪುಸ್ತಕವ 1991 ರಲ್ಲಿ ಬರದ್ದ°. ಈ ಪುಸ್ತಕ ಡಾ।ಪ್ರಧಾನ್ ಗುರುದತ್ತ್ ಇವರ ಕೈಲಿ ಕನ್ನಡಲ್ಲಿ ಅನುವಾದಗೊಂಡು 2003ಕ್ಕೆ “ಟಿಪ್ಪೂ- ನಿಜಸ್ವರೂಪ” ಹೇಳಿ ಪ್ರಕಟ ಆಯಿದು. ಪುಸ್ತಕದ ಉದ್ದಕ್ಕೂ ಲೇಖಕ ಹತ್ತು ಹಲವು ಮೂಲ ಆಕರ ಗ್ರಂಥಂಗಳ ಉಲ್ಲೇಖ ಮಾಡಿದ್ದ°. ಒಟ್ಟು ಹದಿನಾರು ಅಧ್ಯಾಯಲ್ಲಿ ಟಿಪ್ಪುವಿನ ಚಿತ್ರಣ ಕೊಡ್ತ°.
ಶುರುವಾಣ ಎರಡು ಅಧ್ಯಾಯಲ್ಲಿ ಅ ಕಾಲದ ಸ್ಥಿತಿಗತಿಗಳ ಬಗ್ಗೆಯೂ, ಹೈದರಾಲಿಯ ಬಗ್ಗೆಯೂ ಸೂಕ್ಷ್ಮವಿವರಣೆ ಸಿಕ್ಕುತ್ತು .ಮತ್ತಾಣ ಅಧ್ಯಾಯಲ್ಲಿ ಟಿಪ್ಪು ವ್ಯಕ್ತಿಯಾಗಿ, ಅಡಳಿತಗರನಾಗಿ, ಯೋಧನಾಗಿ, ಸೇನಾಪತಿಯಾಗಿ, ಕ್ರೂರಿಯಾದ ನಿಕಂಕುಶ ಪ್ರಭುವಾಗಿ ಅಲ್ಲದ್ದೆ ಮತಾಂಧನಾಗಿ ಇದ್ದ ಬಗ್ಗೆ ಸ್ಥೂಲ ಚಿತ್ರಣ ಸಿಕ್ಕುತ್ತು. ಅಕೇರಿಗೆ ಹಲವು ಇತಿಹಾಸಗಾರರ ಅಭಿಪ್ರಾಯಂಗಳ(ಟಿಪ್ಪುವಿನ ಬಗ್ಗೆ) ಉಲ್ಲೇಖ ಇದ್ದು. ಇವೆಲ್ಲದರ ಸೂಕ್ಷ್ಮ ಪರಿಚಯ ಮಾಡುವ ಪ್ರಯತ್ನ ಎನ್ನದು .
ಹೈದರ್ – ಟಿಪ್ಪು ಸಂಬಂಧ : ಹೈದರಾಲಿ ನಂಬಿದ ಪ್ರಕಾರ ಟಿಪ್ಪು ಒಬ್ಬ ಕ್ರೂರ ಸ್ವಭಾವದ, ವಂಚಕನೂ, ದುರಾಚಾರಿಯೂ, ವಿನೋದಶಿಲನೂ ಅಗಿಪ್ಪ ಬುದ್ಧಿಹೀನ ವ್ಯಕ್ತಿ. ಆ ಕಾಲಲ್ಲಿ ಮುಸ್ಲಿಂ ಚಕ್ರವರ್ತಿಗಳಲ್ಲಿ ಕಂಡುಗೊಂಡಿದ್ದ ಮಗ° ಅಪ್ಪನ ಕೊಲ್ಲುವ, ಅಣ್ಣ ತಮ್ಮನ (ಅಥವಾ ತಮ್ಮ ಅಣ್ಣನ)ಕೊಲ್ಲುವ ಸಂಪ್ರದಾಯದ ಪೂರ್ಣ ಮಾಹಿತಿ ಹೈದರ ಆಲಿಗೆ ಇದ್ದಿರೆಕ್ಕು.ಅಲ್ಲದ್ದೆ ಬಹುಶಃ ಇಂಥ ಕೆಲಸ ಟಿಪ್ಪು ಮಾಡುಗು ಹೇಳ್ತ ಹೆದರಿಕೆಯೂ ಇದ್ದಿಕ್ಕು. ಇದೇ ಕಾರಣಕ್ಕಾಗಿಯೋ ಏನೋ “ಇಕ್ರಾರ್ – ನಾಮ“ ಹೇಳ್ತ ಮುಚ್ಚಳಿಕೆಯ ಬರೆಸಿಗೊಂಡ ಬಗ್ಗೆ ದಾಖಲೆ ಇದ್ದು.
ಟಿಪ್ಪುವಿನ ಯುದ್ದಂಗೊ ಃ ಕ್ರೌರ್ಯಂಗೊ : ಹೈದರ್ ಆಲಿ ಟಿಪ್ಪುವಿಂಗೆ ಬಿಟ್ಟು ಹೋದ್ದರಲ್ಲಿ ಸುಮಾರು ಒಂದು ಲಕ್ಷ ಯೋಧರಿಪ್ಪ ಸೇನೆಯ ಒಟ್ಟಿಂಗೆ ಅಗಾಧ ಸಂಪತ್ತು ಮಾಂತ್ರ ಅಲ್ಲ, ಬ್ರಿಟಿಷರೊಟ್ಟಿಂಗೆ ಇದ್ದ ವೈರವೂ ಸೇರಿತ್ತಿದ್ದು .1784 ರಿಂದ 1792 ಟಿಪ್ಪು ಹೆಚ್ಚಾಗಿ ಯುದ್ದಂಗಳಲ್ಲಿ ತೊಡಗಿಸಿಗೊಂಡಿತ್ತಿದ್ದ. ಹೈದರ್ ಶುರುಮಾಡಿದ ಎರಡನೇ ಮೈಸೂರು ಯುದ್ದವ ಟಿಪ್ಪು ಮುಂದುವರಿಸಿದನಾದರೂ ಅಕೇರಿಗೆ ಮಂಗಳೂರು ಒಪ್ಪಂದಲ್ಲಿ ಮುಗೆಶೆಕ್ಕಾಗಿ ಬತ್ತು. ಹೀಂಗೆ ದೀರ್ಘ ಸಮಯದವರೆಗೆ ಶ್ರೀರಂಗಪಟ್ಟಣ್ದ ಬಿಟ್ಟು ಇತ್ತಿದ್ದ ಸಮಯಲ್ಲಿ ಮೈಸೂರು ರಾಜರಿಂಗೆ ನಿಷ್ಟೆಲಿತ್ತಿದ್ದ ಅಂಚೆ ಶಾಮಣ್ಣ ಮತ್ತೆ ರಂಗಯ್ಯ ದಂಗೆ ಎದ್ದು ಆಡಳ್ತೆ ವಶಕ್ಕೆ ತೆಕ್ಕೊಂಬ ಪ್ರಯತ್ನ ಮಾಡಿ ಸಿಕ್ಕಿ ಬೀಳ್ತವು. ಅವರ ಅತ್ಯಂತ ಬರ್ಬರ ರೀತಿಲಿ ಟಿಪ್ಪು ಕೊಲ್ಸುತ್ತು. ಇದಲ್ಲದ್ದೆ ಕೊಡಗಿಲಿ ಜೆನ ಟಿಪ್ಪು ವಿರುದ್ದ ದಂಗೆ ಎದ್ದಿಪ್ಪಗ ಅಲ್ಲಿ ಹೋಗಿ ದಂಗೆಯ ಅಡಗುಸುತ್ತು. ಸುಮಾರು ನಲುವತ್ತು ಸಾವಿರ ಜೆನಂಗಳ ಹಿಡುದು ಮತಾಂತರ ಮಾಡ್ಸಿ ಜೆವ್ವನಿಗರ ಸೈನ್ಯಲ್ಲಿ ಸೇರ್ಸುತ್ತು. ಇದಾಗಿ ನರಗುಂದ , ಕಿತ್ತೂರು, ಸವಣೂರು, ಆದವಾನಿ ಈ ಎಲ್ಲ ಪಾಳೆಗಾರಂಗಳ ಸೋಲ್ಸುತ್ತು. ಹೀಂಗೆ ಸೋಲ್ಸಿಕ್ಕಿ ಬಪ್ಪಗ ಅಲ್ಲಿ ಇದ್ದ ಸಂಪತ್ತಿನ ಲೂಟಿ ಮಾಡುದು ಅಲ್ಲದ್ದೆ, ಅಲ್ಲಿಯ ಬೆಳೆಗೂ, ಮನೆಗೂ ಕಿಚ್ಚು ಕೊಟ್ಟು ಜೆನಂಗೊಕ್ಕೆ ಭೀತಿ ಹುಟ್ಟುಸುದು ಟಿಪ್ಪುವಿನ ತಂತ್ರ ಅಗಿತ್ತಿದ್ದು.( ಈ ಕೆಲೆಸವ ಮೊಹಮ್ಮದ್ ರಜಾ ಹೇಳ್ತ ಸೇನಾಧಿಕಾರಿ ಮಾಡಿಗೊಂಡಿತ್ತಿದ್ದು. “ಬೆಂಕಿ ನವಾಬ ” ಹೇಳುವ ಹೆಸರೂ ಅದಕ್ಕೆ ಇತ್ತಿದ್ದು).ಮೈಸೂರಿನ ಪ್ರಭುಗಳ ಪಕ್ಷ ಇತ್ತಿದ್ದವು ಹೇಳ್ತ ಕಾರಣಕ್ಕಾಗಿ ಮೈಸೂರಿನ ರಾಣಿಯ ಪ್ರಧಾನರಾಗಿತ್ತಿದ್ದ ತಿರುಮಲ ರಾವ್, ನಾರಾಯಣ ರಾವ್, ಸುಬ್ಬರಾಜೆ ಅರಸು ಇವರ ಪರಿವಾರದವರ – ಸುಮಾರು 700 ಕುಟುಂಬದವರ ಶ್ರೀರಂಗಪಟ್ಟಣ ದೇವಸ್ತಾನದ ಎದುರು ಹುಣುಸೆ ಮರಕ್ಕೆ ತೂಗಿ ಕಗ್ಗೊಲೆ ಮಾಡ್ಸಿದ ವಿಚಾರ ಪುಸ್ತಕಲ್ಲಿ ಇದ್ದು.
ಮಲಬಾರ್ ಮತ್ತೆ ತಿರುವಾಂಕೂರಿನ ಆಕ್ರಮಣ : ಕೊಡಗಿನ ದಂಗೆ ಅಡಗಿಸಿದ ಮೇಲೆ ಟಿಪ್ಪು 1789 ರಲ್ಲಿ ಮಲಬಾರಿಂಗೆ ಹೋಗಿ ಅಲ್ಯಾಣ ದಂಗೆಯ ವಿರುದ್ದ ಹೋರಾಟ ಮಾಡುತ್ತು. ಅಲ್ಲಿ ಗೂಟಿಪುರದ ನಾಯರ್ ಕುಟುಂಬದ ಸುಮಾರು 2000 ಜೆನಂಗಳ ಬಲಾತ್ಕಾರಲ್ಲಿ ಮತಾಂತರ ಮಡ್ಸುತ್ತು. ಮತಾಂತರದ ಪ್ರಕ್ರಿಯೆ ಪೂರ್ಣ ಅಪ್ಪಲೆ ಬೇಕಾಗಿ ಎಲ್ಲೋರಿಂಗೆ ಗೋಮಾಂಸ ತಿನ್ಸುತ್ತು. ಇದರ ವಿರೋಧಿಸಿದ್ದಕ್ಕಾಗಿ ಚಿರಕ್ಕಲ್ ರಾಜ ಕುಟುಂಬದವರ ಹಿಡುದು ಅಮಾನುಷವಾಗಿ ಕೊಲ್ಸುತ್ತು .ಬದುಕಿಪ್ಪ, ಸತ್ತ ನೂರಾರು ಜೆನಂಗಳ ಮರಕ್ಕೆ ನೇಣು ಹಾಕ್ಸುತ್ತು. ಬದುಕಿ ಒಳುದ ಕೆಲವು ತಿರುವಾಂಕೂರಿಂಗೆ ಓಡಿ ಹೋಗಿ ತಪ್ಪುಸುತ್ತವು. ಕೋಪಲ್ಲಿ ಟಿಪ್ಪು ತಿರುವಾಂಕೂರಿನ ವಿರುದ್ದವೂ ಯುದ್ದ ಹೂಡುತ್ತು. 1789ರ ಯುದ್ದಲ್ಲಿ ತಿರುವಾಂಕೂರಿನ ಬಲರಾಜ ವರ್ಮ ಟಿಪ್ಪು ಸೈನ್ಯವ ಧೂಳಿಪಟ ಮಾಡ್ತು . 1790 ರಲ್ಲಿ ಟಿಪ್ಪು ಮತ್ತೆ ಬಂದು ತಿರುವಾಂಕೂರಿಲಿಯೂ ದಂಗೆಯೆ ಮಟ್ಟ ಹಾಕುತ್ತು. ಅಲ್ಲದ್ದೆ ಮತಾಂತರ ಪ್ರಕ್ರಿಯೆಯ ಮುಂದುವರುಸುತ್ತು. ಆದರೆ ಈ ಯುದ್ದ ಮುಂದೆ ಟಿಪ್ಪುವಿನ ವಿನಾಶಕ್ಕೆ ಕಾರಣ ಅವುತ್ತು. ಇಡೀ ಮಲಬಾರಿನ ಇಸ್ಲಾಮೀಕರಿಸುವ ಭವ್ಯ ಗುರಿಯ ಟಿಪ್ಪು ಮತ್ತೂ ಮುಂದುವರುಸುತ್ತು.
ಟಿಪ್ಪು “ಬಾದಶಹ “: ಮೊಗಲರ ಹಾಂಗೆ ತಾನುದೆ ‘ಬಾದಶಹ ” ಅಯೆಕ್ಕು ಹೇಳ್ತ ಮಹತ್ವಾಕಾಂಕ್ಷೆ ಟಿಪ್ಪುಗೆ ಇತ್ತಿದ್ದು. ಸರ್ವಾಧಿಕಾರಿಯಾಗಿದ್ದರುದೇ ಮೈಸೂರಿನ ಜೆನ ಟಿಪ್ಪುವಿಂದ ಒಡೆಯರ್ ಕುಟುಂಬದವರ ಹೆಚ್ಚು ನಂಬಿಗೊಂಡು ಇತ್ತಿದ್ದವು. ತಮ್ಮ ಆಳರಸರು ಹೇಳಿಗೊಂಡು ಪ್ರತಿವರುಷದ ದಸರಾ ದರ್ಬಾರಿಲಿ ಗೌರವ ಕೊಡುವ ಸಂಪ್ರದಾಯವ ಮುಂದುವರಿಸಿಗೊಂಡು ಇತ್ತಿದ್ದವು. ಆದರೆ ಟಿಪ್ಪು ಇದರ ನಿಲ್ಲಿಸಿ 1796 ರಲ್ಲಿ ಮೈಸೂರು ರಾಣಿಯ, ಅದರ ಕುಟುಂಬ ಸಮೇತ ಗೃಹಬಂಧನಲ್ಲ್ಲಿಮಡುಗುತ್ತು .ತನ್ನ ವಂಶ ಗೌರವವ ಹೆಚ್ಚುಸುವ ಇರಾದೆಂದ, ಹೈದರಾಬಾದಿನ ನಿಜಾಮನೊಟ್ಟಿಂಗೆ ವಿವಾಹ ಸಂಬಂಧಕ್ಕೆ ಪ್ರಯತ್ನ ಕೂಡ ಮಾಡುತ್ತು. ಸಿಂಹಸನಾರೋಹಣದ ತಯಾರಿಗಾಗಿ 1790 ರಲ್ಲಿ ದೊಡ್ಡದೊಂದು ಚಿನ್ನದ ಸಿಂಹಾಸನವನ್ನೂ ತಯಾರು ಮಾಡ್ತು. ಆದರೆ ಅಕೇರಿವರೆಗೂ ಟಿಪ್ಪುವಿನ ಎಲ್ಲ ಆಕಾಂಕ್ಷೆಗೊ ಕನಸಾಗಿಯೇ ಒಳಿತ್ತು.
ಮೂರನೆ ಮತ್ತೆ ನಾಲ್ಕನೆ ಮೈಸೂರು ಯುದ್ದ : 1792 ರ ಮೂರನೆಯ ಮೈಸೂರು ಯುದ್ದಲ್ಲಿ ಟಿಪ್ಪು ( ಅಥವಾ ಹೈದರ್ ) ಸಂಪಾದಿಸಿದ್ದ ಎಲ್ಲವನ್ನು ಕಳಕ್ಕೊಳ್ಳೆಕ್ಕಾಗಿ ಬತ್ತು. ನಂತರ ನಡೆದ ನಾಲ್ಕನೆ ಯುದ್ದಲ್ಲಿ ಟಿಪ್ಪು ಅಂತ್ಯ ಕಾಣುತ್ತು. 1798 ರ ಮೇ ನಾಲ್ಕರಂದು, ಶ್ರೀರಂಗಪಟ್ಟಣ ಕೋಟೆಯ ಒಡವದರಲ್ಲಿ ಬ್ರಿಟಿಷ್ ಸೇನೆಗೆ ಜಯ ಸಿಕ್ಕುತ್ತು. ಟಿಪ್ಪು ತಾನು ಸೋಲ್ತದು ಸ್ಪಷ್ಟ ಆದ ಮೇಲೆ ಹಿಂದು ಜ್ಯೋತಿಷಿಯ ಸಲಹೆ ತೆಕ್ಕೊಂಡು ಬ್ರಾಹ್ಮಣರಿಂಗೆ, ಬಡವರಿಂಗೆ ದಾನ ಧರ್ಮಾದಿ ಕಾರ್ಯಕ್ಕೆ ಹೆರಡ್ತು. ಚನ್ನಪಟ್ಟಣದ ಪುರೋಹಿತಂಗೆ ಆನೆಯನ್ನೂ, ೨೦೦೦ ರುಪಾಯಿಯನ್ನೂ ದಾನ ಮಾಡ್ತು. ಮುಸ್ಲಿಮೇತರ ಜೆನಂಗಳ ಹಿಂಸಿಸಿ ಹೀನಾಯವಾಗಿ ಕಂಡುಗೊಂಡಿದ್ದ ವ್ಯಕ್ತಿ ಅಕೇರಿಗಪ್ಪಗ ತನ್ನ ಪ್ರಾಣಕ್ಕಾಗಿ ಅದೇ ಜೆನಂಗಳ ನಂಬಿಗೊಂಡು ಬಂದದು ಟಿಪ್ಪುವಿನ ಅಸಹಾಯಕತೆಯ ತೋರ್ಸುತ್ತು. ಟಿಪ್ಪು ಮೇ 4 ರಂದು ಕೋಟೆ ಬಿಟ್ಟು ಓಡುವ ಆಲೋಚನೆ ಮಾಡಿತ್ತಿದ್ದು ಹೇಳಿ ಅದರ ಸಮಕಾಲಿನ ಇತಿಹಾಸಕಾರ ಕಿರ್ಮಾನಿ ಅಭಿಪ್ರಾಯಪಟ್ಟಿದು. ಟಿಪ್ಪುವಿನ ಮೃತದೇಹ ಬಾಕಿ ಸೈನಿಕರ ದೇಹರಾಶಿಯೊಟ್ಟಿಂಗೆ ಕೋಟೆಯ ಹಿಂದಾಣ “ನೀರು ಬಾಗಿಲಿ ”ನ ಹತ್ತರೆ ಸಿಕ್ಕುತ್ತು. ಇಪ್ಪ ಪುರಾವೆ, ಸಾಕ್ಷಿಗಳ ಆಧಾರ ಮಡಿಕ್ಕೊಂಡು ನೋಡಿದರೆ ಟಿಪ್ಪು ತನ್ನ ಸೈನಿಕರೊಟ್ಟಿಂಗೆ ಓಡಿ ಹೋಪಗ ಕೊಲ್ಲಲ್ಪಟ್ಟದಾಗಿಕ್ಕು ಹೇಳ್ತ ಸಂಶಯ ಓದುಗರಿಂಗೆ ಬಂದರೆ ಅದು ಆಶ್ಚರ್ಯ ಅಲ್ಲ.
ಮೈಸೂರಿನ ಇಸ್ಲಾಮೀಕರಣ : ಮೂರನೆ ಮೈಸೂರು ಯುದ್ದದ ನಂತರ, ಟಿಪ್ಪು ಆಡಳಿತಾತ್ಮಕ ಸುಧಾರಣೆಯ ಕೆಲಸಕ್ಕೆ ಶುರು ಮಾಡ್ತು. ಯುದ್ದ ನಂತರದ ಒಪ್ಪಂದಲ್ಲಿ ಖಜಾನೆ ಸಾಕಷ್ಟು ಖಾಲಿ ಅವುತ್ತು. ಹಾಂಗಾಗಿ ಇಂಥದ್ದೊಂದು ಸುಧಾರಣೆಯ ಅಗತ್ಯವೂ ಇತ್ತಿದ್ದು. ಮಾದಕ ದ್ರವ್ಯಕ್ಕೆನಿಷೇಧ ಹೇರಿದ ಮೇಲೆ ಆದ ರಾಜಸ್ವದ ನಷ್ಟವ ಹಿಂದು ದೇವಸ್ತಾನಂಗಳ ಲೂಟಿ ಮಾಡಿ ಸಿಕ್ಕಿದ ಸಂಪತ್ತಿಂದ ತುಂಬಿಸಿಗೊಳ್ತು. ಹಲವಾರು ಊರುಗಳ ಹೆಸರಿನ ಇಸ್ಲಾಮೀಕರಣ ಮಾಡ್ತು.( ಪುಸ್ತಕಲ್ಲಿ ಒಟ್ಟಾರೆ 12 ಊರುಗಳ ಪಟ್ಟಿ ಇದ್ದು ). ಮಲಬಾರ್ ಮತ್ತೆ ಕೊಡಗಿಲಿ ನಡೆಸಿದ ಮತಾಂತರವ ಟಿಪ್ಪು ಮೈಸೂರಿಲಿ ಮಾಡ್ಲೆ ಹೆರಟಿದಿಲ್ಲೆ. ಬಹುಶಃ ಒಡೆಯರ್ ಕುಟುಂಬದವರ ಬಗ್ಗೆ ಮೈಸೂರಿನ ಜೆನಂಗಳಲ್ಲಿ ಇತ್ತಿದ್ದ ಗಟ್ಟಿ ನಂಬಿಕೆ ಟಿಪ್ಪು ಇಂಥ ಕೆಲಸಕ್ಕೆ ಹೆರಡದ್ದಾಂಗೆ ಮಾಡಿಕ್ಕು. ಅಲ್ಲದ್ದೆ ಅವನ ಅಬ್ಬೆಯ ಮತ್ತೆ ಪ್ರಧಾನಿ ಪೂರ್ಣಯ್ಯನ ಪ್ರಭಾವವು ಇತ್ತಿದ್ದು.
ಟಿಪ್ಪು ರಾಷ್ಟ್ರೀಯವಾದಿಯೇ..: ಟಿಪ್ಪು ಒಬ್ಬ ರಾಷ್ಟ್ರವಾದಿ ಅರಸು ಹೇಳಿ ಲೇಖಕ ಒಪ್ಪುತ್ತಾ° ಇಲ್ಲೆ. ಬ್ರಿಟಿಷರು ಅದರ ದೊಡ್ಡ ವಿರೋಧಿಯಾದರೂ ಸುತ್ತಣ ಕರ್ಣಾಟಕದ ನವಾಬ,ಮರಾಠರು,ನಿಜಾಮ,ನಾಯರುಗೊ,ಕೊಡವರು ಹೀಂಗೆ ಎಲ್ಲ ಸಮುದಾಯದವು ಆಗಾಗ ಅದರ ವಿರುದ್ದ ದಂಗೆ ಎದ್ದುಗೊಂಡಿತ್ತಿದ್ದವು.ಮೂರನೆ ಮೈಸೂರು ಯುದ್ದಲ್ಲಿ ಟಿಪ್ಪು ಸೋತ ಮೇಲೆ ನಾಡಿನ ಸಣ್ಣ, ದೊಡ್ಡ ರಾಜರುಗೊ ಬ್ರಿಟಿಷರ ಅಭಿನಂದಿಸಿತ್ತಿದ್ದವು.ಅಫಘಾನಿಸ್ತಾನದ ದೊರೆ ಜಮಾನ್ ಶಹಂಗೆ ಹಲವು ಪರ್ತ ಬರದು ಭಾರತದ ಮೇಲೆ ಆಕ್ರಮಣ ಮಾಡುಲೆ ಕುಮ್ಮಕ್ಕು ಕೊಟ್ಟಿತ್ತು.ಈ ಬಗ್ಗೆ ಯಾವ ಯಾವ ಯೋಜನೆ ತೆಕ್ಕೊಂಬಲಕ್ಕು ಹೇಳಿ ವಿವರವಾಗಿ ಪತ್ರಲ್ಲಿ ಬರದಿತ್ತಿದ್ದು. ಇಷ್ಟೇ ಅಲ್ಲ, ತುರ್ಕಿ, ಅರಬ್ ದೇಶದವರೊಟ್ಟಿಂಗೆ ಪತ್ರ ವ್ಯವಹಾರ ಮಾಡಿಗೊಂಡಿತ್ತು. ಬ್ರಿಟಿಶರ ಸೋಲುಸುವ ಇರಾದೆಲಿ ನೆಪೋಲಿಯನ್ ಒಟ್ಟಿಂಗೆ ಸಂಪರ್ಕಲ್ಲಿ ಇತ್ತಿದ್ದು.ಟಿಪ್ಪು ನಾಡಿಂಗಾಗಿ ಹೋರಾಡಿದ್ದಲ್ಲ, ತನಗಾಗಿ ಮಾಂತ್ರ ಹೋರಾಟ ಮಾಡಿದ್ದು ಹೇಳ್ತದಕ್ಕೆ ಲೇಖಕ ಆಕರ ಗ್ರಂಥಂಗಳ ಉದ್ದರಣ ಮಾಡ್ತು.
ಇಷ್ಟೆಲ್ಲಾ ಚಿತ್ರಣವ ಲೇಖಕ ಖಚಿತ ಮಾಹಿತಿ, ಸಾಕ್ಷ್ಯಂಗಳ ಆಧಾರಲ್ಲಿ ಅನಾವರಣ ಮಾಡಿದ್ದು. ಪ್ರಚಲಿತಲ್ಲಿಪ್ಪ ಟಿಪ್ಪುವಿನ ಅಮೋಘ ಚಿತ್ರಣಕ್ಕೂ, ಖಚಿತ ಸಾಕ್ಷ್ಯಂಗಳ ಆಧಾರಲ್ಲಿ ಹೊಮ್ಮಿದ ಚಿತ್ರಣಕ್ಕೂ ಎಷ್ಟೊಂದು ವ್ಯತ್ಯಾಸ ಇದ್ದು ಹೇಳ್ತದು ಈ ಪುಸ್ತಕ ಓದಿಯಪ್ಪಗ ಗೊಂತಾವುತ್ತು.
ok
ಬಹಳ ವಿವರಗಳಿವೆ, ತುಂಬಾ ಇಷ್ಟವಾಯಿತು, ಸರಳ ಕನ್ನಡದಲ್ಲಿ ಬರೆದರೆ ತುಂಬಾ ಜನರಿಗೆ ತಲುಪುತ್ತದೆ ಹಾಗೂ ಅರ್ಥವಾಗುತ್ತದೆ.
ಲೇಖನ ಒಪ್ಪ ಆಯಿದು. “ಟಿಪ್ಪೂ-ನಿಜಸ್ವರೂಪ” ಪುಸ್ತಕದ ಬಗ್ಗೆ ಹಾಂಗೆ ಅದರಲ್ಲಿಪ್ಪ ವಿಷಯಂಗಳ ಚಿಕ್ಕದಾಗಿ ಆದರೆ ಅಷ್ಟೇ ಚೊಕ್ಕವಾಗಿ ವಿವರಿಸಿದ್ದಕ್ಕೆ ಕುಮಾರಣ್ಣಂಗೆ ಧನ್ಯವಾದಂಗೊ…
🙁
ಅಂಬಗ ಅದು “ಮೈಸೂರಿನ ಎಲಿ”ಯೋ?
ಬರದ್ದು ಲಾಯಿಕಾಯ್ದು. ಪುಸ್ತಕ ಓದೆಕ್ಕುಹೇಳಿ ಅವುತು.
ಇದು ಇನ್ನೊಂದು ವಿಷಯ – ಟಿಪ್ಪುನ “Botanical Contributions” ತುಂಬ ಇದ್ದು. ಬೆಂಗಳೊರಿಲಿಪ್ಪ “ಲಾಲ್ ಬಾಗ್” ಹೈದರ್ ಅಲಿ ಶುರು ಮಾಡಿದ್ದಾದರು, ಟಿಪ್ಪು ಅದರ ತುಂಬ ಮುಂದುವರಿಸಿತ್ತು. ಈಗ ಇಪ್ಪ ಸುಮಾರು ಮರ ಜಾತಿಗೊ – ಅಫ್ರಿಕಾ, ಮೊರಿಶಿಯ್ಸ್, ಚಿನಾ, “ಪರ್ಶಿಯ”ಂದ ಎಲ್ಲ ತರಿಸಿ ನೆಟದು ಟಿಪ್ಪು ಹೇಳಿ ಒದಿದ್ದೆ.
ನಿಂಗ ಹೇಳಿದ್ದು ಸರಿ. ಅಷ್ಟೇ ಅಲ್ಲ, ಮೈಸೂರು ಸೀಮೆಲಿ ರೇಶ್ಮೆ ಬೆಳೆಯ ಶುರುಮಾದಡಿ ಅಭಿವ್ರಿದ್ದಿ ಮಾಡ್ಸಿದ್ದು ಟಿಪ್ಪು. ಟಿಪ್ಪು ನಾಡಿಂಗೆ ಕೊಟ್ಟ contributions ಗಳ ಮರವೆಲೆಡಿಯ.
ಲಾಯಿಕಯಿದು ನಿ೦ಗೊ ಬರದ್ದು.. ಆನುದೆ ಈ ಪುಸ್ತಕ ಓದಿದ್ದೆ.. ಟಿಪ್ಪು ಸುಲ್ತಾನನ ನಿಜವಾದ ಚರಿತ್ರೆಯ ತು೦ಬ ವಿವರವಾಗಿ ಬರದ್ದವು ಇದರಲ್ಲಿ..
”1992 moorane mysore yudda ” isavi tappidda?
ಅಪ್ಪು.. ಅದು ತಪ್ಪು, ತೋರ್ಸಿ ಕೊಟ್ಟದಕ್ಕೆ ಧನ್ಯವಾದ.