Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನ ಹಣ್ಣಿನ ಒಗ್ಗರಣೆ
ಬೇಕಪ್ಪ ಸಾಮಾನುಗೊ:
- 12-15 ಹಲಸಿನ ಹಣ್ಣಿನ ಸೊಳೆ
- 3 ಒಣಕ್ಕು ಮೆಣಸು
- ರುಚಿಗೆ ತಕ್ಕಸ್ಟು ಉಪ್ಪು
- 1 ಚಮ್ಚೆ ಉದ್ದಿನ ಬೇಳೆ
- 1/2 ಚಮ್ಚೆ ಸಾಸಮೆ
- 2 ಚಮ್ಚೆ ತೆಂಗಿನ ಎಣ್ಣೆ
ಮಾಡುವ ಕ್ರಮ:
ಹಲಸಿನ ಹಣ್ಣಿನ ಕೊರದು, ಎಳಕ್ಕಿ, ಬೇಳೆ, ಪೊದುಂಕುಳು, ಹೂಸಾರೆ ಎಲ್ಲ ತೆಗದು ಮಡುಗಿ.
ಒಂದು ಬಾಣಲೆಗೆ ಸಾಸಮೆ, ಉದ್ದಿನ ಬೇಳೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಹಲಸಿನ ಹಣ್ಣಿನ ಸೊಳೆ ಹಾಕಿ ತೊಳಸಿ. ಇದಕ್ಕೆ ಉಪ್ಪು ಹಾಕಿ ತೊಳಸಿ, ಸಣ್ಣ ಕಿಚ್ಚಿಲ್ಲಿ, 2-3 ನಿಮಿಷಕ್ಕೊಂದರಿ ತೊಳಸಿಗೊಂಡು ಮುಚ್ಚಲು ಮುಚ್ಚಿ ಬೇಶಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಎನ್ನ ಅಮ್ಮಂದೆ ಎಂಗ ಸಣ್ಣಾದಿಪ್ಪಗ ಇದರ ಮಾಡುತ್ತ ಭಾರಿ ರುಚಿ !ನೆನಪಿಸಿದ್ದಕ್ಕೆ ಧನ್ಯವಾದಂಗ ವೇಣಿ ಅಕ್ಕ ಇನ್ನಣ ಸರ್ತಿ ಹಲಸಿನ ಹಣ್ಣು ಇಪ್ಪಗ ಅಪ್ಪನ ಮನೆಗೆ ಹೋದರೆ ಮಾಡುತ್ತೆ !ಒಂದೆರಡು ಬಗೆ ನಿಂಗ ಇಲ್ಲಿ ಹೇಳಿಕೊಟ್ಟ ಮಾದರಿಲಿ ಮಾಡಿದ್ದೆ ಆನುದೆ!ಧನ್ಯವಾದಂಗ ವೇಣಿ ಅಕ್ಕ
ಧನ್ಯವಾದಂಗೊ.. ಮಾಡಿ ತಿಳಿಸಿದ್ದಕ್ಕೆ. 🙂
ತುಂಬ ಲಾಯ್ಕ ಆವ್ತು ಇದು.
ಎಂಗೊ ವರ್ಷಲ್ಲಿ ನಾಲ್ಕೈದು ಸರ್ತಿಯಾದರೂ ಮಾಡ್ತೆಯೊ° ಇದರ.
ವೇಣಿಯಕ್ಕ, ಇದಕ್ಕೆ ತುಳುವಿಲ್ಲಿ ’ಚಂಗುಳಿ’ಯೋ ಹೀಂಗೆಂತದೋ ಒಂದು ಹೆಸರಿದ್ದಲ್ಲದ? ಗೊಂತಿದ್ದ?
ಇನ್ನೊಂದರಿ ಮಾಡಿಪ್ಪಗ ಒಂದು ಕೂಕಿಳು ಹಾಕಿ ಭಾವ.
ಅಪ್ಪು ಅಪರೂಪಕ್ಕೆ ತಿಂಬಲೆ ಲಾಯಿಕ ಆವುತ್ತು.
ಚಂಗುಳಿ ಹೇಳಿದರೆ ಬೇರೆ. ಚಂಗುಳಿ ನಮ್ಮ ಹಲಸಿನ ಹಣ್ಣಿನ ಪಾಯಸದ ಹಾಂಗೆ.. ಕಾಯಿಹಾಲು ಹಾಕದ್ದೆ ಬೋಳು ಪಾಯಿಸ.(ಹಲಸಿನಹಣ್ಣಿನ ಕೊಚ್ಚಿ, ರೆಜ್ಜ ನೀರು ಹಾಕಿ ಬೇಶಿ, ಬೆಲ್ಲ ಹಾಕಿ ಕೊದುಶಿ, ರೆಜ್ಜ ಗೆಣಮೆಣಸಿನ ಹೊಡಿ/ಏಲಕ್ಕಿ ಹೊಡಿ ಹಾಕಿ ತೊಳಸಿದರೆ ಆತು.)
ಚಂಗುಳಿ, ಹಲಸಿನ ಹಣ್ಣಿನ ಒಗ್ಗರಣೆ ಎಲ್ಲ ಹೆಚ್ಚಾಗಿ ಮಳೆಗಾಲದ ನೀರು ಎಳಕ್ಕೊಂಡ ಹಣ್ಣಿನ ಮಾಡುದು(ಹಸಿ ತಿಂದರೆ ಶೀತ, ದೊಂಡೆ ಬೇನೆ ಮತ್ತೆ ಕರಗದ್ದೆ ಅಪ್ಪದಕ್ಕೆ ಹೀಂಗೆ ಬೇಶಿ ತಿಂಬದು.)