Oppanna.com

ಕೆಂಡದಡ್ಯೆ (ಗೆಂಡತಡ್ಯೆ)

ಬರದೋರು :   ಚೂರಿಬೈಲು ದೀಪಕ್ಕ    on   27/01/2010    4 ಒಪ್ಪಂಗೊ

ಚೂರಿಬೈಲು ದೀಪಕ್ಕ
Latest posts by ಚೂರಿಬೈಲು ದೀಪಕ್ಕ (see all)

ಶಾಲೆಂದ ಹೊತ್ತಪ್ಪಗ ಮನೆಗೆ ಬಂದ ಮಕ್ಕೊ ‘ಕೆಂಡದಡ್ಯೆ ಮಾಡಿಕೊಡೆಕು’ ಹೇಳಿದವು.
ಕೆಂಡದಡ್ಯೆ ಹೇಳಿರೆ, ಕೆಂಡಲ್ಲಿ ಮಾಡುವ ಅಡ್ಯೆ.  ತುಳುವಿಲಿ ಈ ಅಡಿಗೆಯ ಗೆಂಡತಡ್ಯೆ (ಗೆಂಡತ + ಅಡ್ಯೆ) ಹೇಳುದು.
ಅಡ್ಯೆ ಹೇಳಿರೆ- ಕೊಟ್ಟಿಗೆ ಹೇಳಿ ಅರ್ಥ ಬತ್ತು. ಇದರ ಮಾಡೆಕ್ಕಾರೆ ಕಿಚ್ಚು ಬೇಡ, ಕೆಂಡಲ್ಲೇ ಕಾಸೆಕ್ಕು, ಹಾಂಗಾಗಿ ಈ ಹೆಸರು.
ಇದ, ಅದರ ವಿವರ ಕೊಡ್ತೆ,  ಮಾಡಿ ನೋಡಿ:
ಬೇಕಪ್ಪ ಸಾಮಾನುಗೊ:

  • ಅಕ್ಕಿ – ೧ ಕುಡ್ತೆ (೧ ಗ್ಲಾಸು)
  • ಬೆಲ್ಲ – ೧ ಹಿಡಿ (೧೦೦ ಗ್ರಾಮು)
  • ಕಾಯಿ ಸುಳಿ – ೧/೨ ಗ್ಲಾಸು
  • ಚೆಕ್ಕರ್ಪೆ – ಸಣ್ಣದು ಒಂದು (ಕೊಚ್ಚಲು)
  • ಉಪ್ಪು – ರುಚಿಗೆ ಬೇಕಷ್ಟು
  • ತುಪ್ಪ – ೨ ಚಮ್ಚ

ಮಾಡುವ ಕ್ರಮ:
ಅಕ್ಕಿ, ಕಾಯಿ ಸುಳಿ, ಬೆಲ್ಲ, ಸೌತ್ತೆ – ಎಲ್ಲ ಒಟ್ಟಿಂಗೆ ಹಾಕಿ ಕಡೇಕು, ತರಿತರಿ ಆದರೆ ಸಾಕು, ಸಣ್ಣ ಅಪ್ಪದು ಬೇಡ.
ರುಚಿಗೆ ಬೇಕಷ್ಟು ಉಪ್ಪು ಹಾಯ್ಕೊಂಬದು! ಸೀವು ಇದ್ದ ಕಾರಣ ರಜಾ ಉಪ್ಪುದೇ ಹಾಕಿ ಅಪ್ಪಗ ಒಳ್ಳೆ ರುಚಿ ಆವುತ್ತು.
ಈಗ ಹಿಟ್ಟು ತಯಾರಾತು. ಇನ್ನು ಬೇಶುವ ಕೆಲಸ.

Kendadye ಕೆಂಡದಡ್ಯೆ
ಕೆಂಡದಡ್ಯೆ, ಹಾಳೆ ತಟ್ಟೆಲಿ

ಒಲೆಲಿ ಕೆಂಡ ಮಾಂತ್ರ ಮಿಗಿಮಿಗಿ ಅಪ್ಪ ಹಾಂಗೆ ಮಡುಗಿಯೊಳಿ.
ಒಲೆಯ ಮೇಲೆ ಬಾಣಲೆ ಮಡುಗಿ ಅದಕ್ಕೆ ರಜಾ ತುಪ್ಪ ಹಾಕಿ, ಕಡದ ಹಿಟ್ಟಿನ ಎರವದು.
ಹಿಟ್ಟು ದಪ್ಪ ಆದ ಕಾರಣ, ಕೆಳಾಣ ಬೆಶಿ ಮೇಲಂಗೆ ಎತ್ತುತ್ತಿಲ್ಲೆ ಅಲ್ಲದಾ?
ಕೆಳ ಕರಂಚುಲೆ ಸುರು ಆದರೂ ಮೇಲೆ ಬೆಶಿ ಆಗಿರ್ತಿಲ್ಲೆ, ಅದಕ್ಕೆ ಬೇಕಾಗಿ – ಹಿಟ್ಟಿನ ಎರದ ಕೂಡ್ಳೇ, ಒಂದು ಕೀಜಿ(ಎಲುಮಿನಿಯಂ) ಪ್ಲೇಟಿನ ಮುಚ್ಚಿ, ಒಲೆಂದ ನಾಕು ಗೆನಾ ಕೆಂಡ ತೆಗದು ಪ್ಲೇಟಿನ ಮೇಲೆ ಹಾಕಿ.  ಸಣ್ಣ ಸಣ್ಣ ಸೌದಿಗಳ ಹಾಕಿ ಕೆಂಡದ ಕಿಚ್ಚು ತಾಗುತ್ತ ಹಾಂಗೆ ಮಡುಗಿ!
ಈಗ ಎರಡೂ ಹೊಡೆಂದ ಕೆಂಡಲ್ಲಿ ಬೆಶಿ ಆವುತ್ತಾ ಇರ್ತು. ಹೀಂಗೆ ಅರ್ದ ಗಂಟೆ ಕೆಂಡಲ್ಲಿ ಬೆಂದರೆ ಇಳುಗುಲೆ ಅಕ್ಕು.
ತಿಂಬ ಕ್ರಮ:
Fake Watches UK
ಅರ್ಧಗಂಟೆ ಕಳುದಮತ್ತೆ ಇಳುಗಿ, ಈ ಉರೂಟು ಕೆಂಡದಡ್ಯೆಯ ತುಂಡುಮಾಡಿ ತುಪ್ಪದೊಟ್ಟಿಂಗೆ ಕೂಡಿ ತಿಂಬಲೆ ಸುರುಮಾಡಿ!
ಎಂಗಳಲ್ಲಿ ಮಕ್ಕೊಗೆ, ಇವಕ್ಕೆ ಎಲ್ಲ ಇದು ಬಾರೀ ಇಷ್ಟ!
ನಿಂಗಳುದೇ ಮಾಡಿ ನೋಡಿಕ್ಕಿ, ಹೇಂಗಾಯಿದು ಹೇಳ್ತಿರಲ್ಲದಾ?

4 thoughts on “ಕೆಂಡದಡ್ಯೆ (ಗೆಂಡತಡ್ಯೆ)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×