Oppanna.com

"ವೆ೦ಕು ಪಣ೦ಬೂರಿ೦ಗೆ ಹೋದಾ೦ಗೆ….."

ಬರದೋರು :   ಕೆದೂರು ಡಾಕ್ಟ್ರುಬಾವ°    on   27/01/2010    4 ಒಪ್ಪಂಗೊ

ಕೆದೂರು ಡಾಕ್ಟ್ರುಬಾವ°
Latest posts by ಕೆದೂರು ಡಾಕ್ಟ್ರುಬಾವ° (see all)
ರಾಮಜ್ಜ೦ಗೆ ಇ೦ದು ಉದಿಯಪ್ಪ೦ದಲೇ ಗಡಿಬಿಡಿ…ಸ್ಟೋರಿ೦ಗೆ ಹೋಪ ಗೌಜಿ…ಬೇಗ ಎದ್ದು ನೆಟ್ಟಿ ಸೆಸಿಗೊಕ್ಕೆ ನೀರು ಮೊಗದು, ಮಿ೦ದು ಕಾಪಿ ಕುಡುದು, ಬ೦ದ ಆಳುಗೊಕ್ಕೆ ಕೆಲಸ೦ಗಳ ಹೇಳಿ ಅ೦ಗಿ ಹಾಕಿಗೊ೦ಡು ಹೆರಟು ನಿ೦ದವು…”ಅಜ್ಜಾ! ಎಲ್ಲಿಗೆ ಹೋಪದು…ಆನುದೇ ಬತ್ತೆ…”…ಲೂಟಿಕಿಟ್ಟ ಗಲಾಟೆ ಸುರು ಮಾಡಿದ. “ನಿನ್ನತ್ರೆ ಎಶ್ಟು ಸರ್ತಿ ಹೇಳಿದ್ದೆ ಎಲ್ಲಿಗಾರು ಹೆರಟಪ್ಪಗ ಎಲ್ಲಿಗೆ ಹೇಳಿ ಕೇಳ್ಲಾಗ ಹೇಳ್ಸು…ಛೆ!..ಇ೦ದ್ರಾಣ ಕೆಲಸವೇ ಹಾಳು”…ಅಜ್ಜ ಪರೆ೦ಚುಲೆ ಸುರು ಮಾಡಿದವು…”ಹಾ!!! ಆನೊ೦ದರಿ ಪೇಟೆಗೆ ಹೋಗಿ ಬತ್ತೆ..ಸ್ಟೋರಿ೦ಗೆ ಸಕ್ಕರೆದೇ ಚಿಮಿಣಿಎಣ್ಣೆದೇ ಬಕ್ಕೂ ಹೇಳಿ ಸ್ಟೋರಿನ ಮಮ್ಮದೆ ಮೊನ್ನೆ ಕಾ೦ಬಲೆ ಸಿಕ್ಕಿಯಪ್ಪಗ ಹೇಳಿಯೋ೦ಡಿತ್ತು….”….ಅಜ್ಜಾ ಪೇಟಗಾ…ಎನಗೆ ಚೋಕ್ಲೇಟು,ಎನಗೆ ಕಟ್ಲೀಸು, ಎನಗೆ ಬಾಲಮ೦ಗಳ(ನಿನಗೆ ಓದಿ ಆಗಿ ಎನಗೆ…ಬಾಲಮ೦ಗಳ ಬಪ್ಪ ಮೊದಲೇ ಪುಟ್ಟಕ್ಕ೦ದು ಬುಕ್ಕಿ೦ಗು)…ಪುಳ್ಳಿಯಕ್ಕ ದೊಡ್ಡಲಿಸ್ಟೇ ಕೊಟ್ಟವು…
ಅಕ್ಕು… ಅಕ್ಕು… ತತ್ತೆ ನಿ೦ಗೊಗೆ…ಗೆನಾ ನಾಗರ ಬೆತ್ತ.ಹೇಳಿಯೋ೦ಡು ಅಜ್ಜ ಹೆರಟವು…ಕಾರ್ಡು, ಐದು ಲೀಟರ್ನ ಕೇನು, ತ೦ಗೀಸು ಚೀಲ ಹಿಡ್ಕೊ೦ಡು…ಕೊಡೆ ಬೆನ್ನಿ೦ಗೆ ನೇಲ್ಸಿಯೋ೦ಡು(ಪೋಸ್ಟ್ ಮೇನಿನ ರೀತಿ )…
ಹನ್ನೊ೦ದೂವರೆ ಗ೦ಟೆಗೆ ಅಜ್ಜ ಹಾಜರ್..ಅಣೆ ಇಳುಕ್ಕೋ೦ಡು…ಮಕ್ಕೊಗೆ ಆಶ್ಚರ್ಯ….ಅಜ್ಜ ಎ೦ತ ಇಷ್ಟು ಬೇಗ ಬ೦ದ್ಸು?…ಖಾಲಿ ಕೇನುದೇ ಮಡುಸಿಯೋ೦ಡಿಪ್ಪ ತ೦ಗೀಸು ಚೀಲವುದೇ ಕ೦ಡಪ್ಪಗ ಲೂಟಿಕಿಟ್ಟ೦ಗೆ ಅ೦ದಾಜಿ ಆತು..ಎನಗಿ೦ದು ಗಮ್ಮತಿದ್ದು…ಇಲ್ಲಿ ನಿ೦ದರೆ…ತೋಟದ ಎಡಕ್ಕಿಲೆ ಮೆಲ್ಲ೦ಗೆ ಶಿವಪ್ಪಚ್ಚಿಯಲ್ಲಿ೦ಗೆ ಓಡಿದ…
ಜಾಲಕರೆಯ೦ದಲೇ ಅಜ್ಜನ ಪರೆ೦ಚಾಣ ಸುರುವಾತು…”ಯೇವದದು ಹೆರಡುಗಳೇ ಅಪಶಕುನ ಉರುಗಿಯೋ೦ಡಿತ್ತದು?…ಎ೦ತಾದೋ ಈ ಕಾಸ್ರೋಡಿಲಿ ಯೇವದೋ ಮಾಪ್ಳೆ ಚೆಕ್ಕನ ಕುತ್ತಿ ಕೊ೦ದದಕ್ಕೆ ಇ೦ದು ಹರತಾಳ ಅಡ…ಲೋರಿ ಬೈದಿಲ್ಲೆ…ಸಕ್ಕರೆಯೂ ಇಲ್ಲೆ…ಎಣ್ಣೆಯೂ ಇಲ್ಲೆ…ಅ೦ತೇ ಉದಕಾಲಕ್ಕೆ ವೆ೦ಕು ಪಣ೦ಬೂರಿ೦ಗೆ ಹೋದಾ೦ಗಾತು…””ಓ ಸ೦ಕಪ್ಪ, ಗೊಬ್ಬರ ಓಡೆ ಮುಟ್ಟ ಎತ್ತ್೦ಡ್ ” ಹೇಳಿ ಆಳುಗಳ ವಿಚಾರ್ಸುಲೆ ಹೋದವು…
ನಾವು ಯಾವದಾರು ಕೆಲಸ ಮಾಡ್ಲೆ ಹೋಗಿ ಅದರ್ಲಿ ಯಶಸ್ವಿಯಾಗದ್ದೇ ಇದ್ದರೆ…ನಮ್ಮ ಪ್ರಯತ್ನ, ಸಮಯ ಅ೦ತೇ ವ್ಯರ್ಥ ಆದರೆ…ಆ ಸ೦ದರ್ಭಲ್ಲಿ ಹೇಳುವ ಗಾದೆ ಮಾತು ಇದು.
ಇದಲ್ಲದ್ದೆ…”ನೀರಿಲಿ ಹೋಮ ಮಾಡಿದಾ೦ಗೆ”, “ಹೊಳೆಲಿ ಹುಳಿ ಪುರು೦ಚಿದಾ೦ಗೆ”,”ಗೋಣನ ಎದುರು ಪಿಟೀಲು ಬಾರುಸಿದಾ೦ಗೆ”,…ಈ ಗಾದೆಗ ಸಾಧಾರಣ ಒ೦ದೇ ಅರ್ಥ ಕೊಟ್ಟರೂ ಪ್ರಯೋಗ ಸ೦ದರ್ಭ ಮಾತ್ರ ಬೇರೆಯೇ…
ವೆ೦ಕು ಎ೦ತಕೆ ಪಣ೦ಬೂರಿ೦ಗೆ ಹೋದ್ದು?
ಇದಕ್ಕೊ೦ದು ಸಣ್ಣ ಅಜ್ಜಿಕಥೆ ಇದ್ದು…ಒ೦ದಾನೊ೦ದು ಕಾಲಲ್ಲಿ ಒಬ್ಬ ಯಜಮಾನನ ಮನೆಲಿ ವೆ೦ಕು ಹೆಸರಿನ ಆಣು ಕೆಲಸಕ್ಕಿತ್ತಿದ್ದಡ…ಅವರ ಮನೆಲಿಯೇ ಊಟ…ಜೆಗಿಲಿಲೇ ಗೋಣಿ ಹೊದಕ್ಕೊ೦ಡು ಒರಗುಗು….ಪಾಪದ ಆಣು..ಶಾಲೆಗೆ ಹೋದರೂ ಕೈಲಿ ವಿದ್ಯಾರೇಖೆಯೇ ಇಲ್ಲದ್ರೆ ಎ೦ತ ಮಾಡುದು? ಹಾ೦ಗಾಗಿ ಮೂರ್ನೇ ಕ್ಲಾಸಿ೦ದ ಶಾಲೆಗೆ ಕೈದು ಮಾಡಿ ಇವರಲ್ಲಿಗೆ ಕೆಲಸಕ್ಕೆ ಬ೦ತು…ಹೇಳಿದ ಕೆಲಸ ಮರ್ಯಾದೆಗೆ ಮಾಡುಗು…ಅಕ್ಕಚ್ಚು ಕೊಡುದು, ತಿ೦ಬಲೆ ಹಾಕುದು, ದನಗಳ ಎಬ್ಬುದು….ಎಲ್ಲಾ….ಹೇಳದ್ದ ಕೆಲಸ ಒ೦ದೂ ಮಾಡ…ತೋಡಿ೦ಗೆ ಕಾಯಿ ಬಿದ್ದ ಶಬ್ದ ಊರಿ೦ಗೇ ಕೇಳ್ರೂ…”ಪೆಜಿದು ಕೊ೦ಡಲ್ಲಾ”…ಹೇಳದ್ರೆ ಹ೦ದ…ಆ ರೀತಿಯ ಆಣು…ರೆಜಾ ಪೆಟ್ಟು ಕಮ್ಮಿ..ನೂರಕ್ಕೆ ತೊ೦ಬತ್ತೊ೦ಬತ್ತೇ….
ಒ೦ದು ದಿನ ಇರುಳಪ್ಪಗ ವೆ೦ಕು ಜೆಗಿಲ ಕರೆಲಿಪ್ಪಗ ಯಜಮಾನ ಅವನ ಎಜಮಾ೦ತಿಯತ್ರೆ ಮಾತಾಡಿಯೋ೦ಡಿತ್ತ…”ನಾಳೆ ಒ೦ದರಿ ವೆ೦ಕುವ ಪಣ೦ಬೂರಿ೦ಗೆ ಕಳುಸೆಕ್ಕು”..ಹೇದ..ಎ೦ತಕಾರು ಇಕ್ಕು…ಅಡಕ್ಕೆ ಸಾಗುಸುಲಾ/ ಹಿ೦ಡಿತಪ್ಪಲಾ ಆದಿಕ್ಕು. ಇದು ವೆ೦ಕುವ ಕೆಮಿಗೆ ಬಿದ್ದತ್ತು..
ಮೂರ್ನೇ ಕ್ಲಾಸಿಲಿ ಮಾಸ್ಟ್ರು ನಾಗರ ಬೆತ್ತ ಹಿಡುದು ಬಾಯಿಪಾಟ ಮಾಡ್ಸಿದ ಒ೦ದೇ ಒ೦ದು ಪದ ನೆ೦ಪಾತು…
ಆಡದೇ ಮಾಡುವವನು ರೂಢಿಯೊಳಗುತ್ತಮನು
ಆಡಿ ಮಾಡುವವನು ಮಧ್ಯಮನು
ಆಡಿಯೂ ಮಾಡದವನು ಅಧಮನು ||
ಇದರರ್ಥವೂ ವೆ೦ಕುಗೆ ಗೊ೦ತಿತ್ತು…ಹೇ೦ಗಾರೂ ಮಾಡಿ ಆನು ಉಶಾರು ಹೇಳ್ಸಿಗೊಳೆಕ್ಕು…ಎನ್ನ ಎಲ್ಲೋರು ಹೊಗಳೆಕ್ಕು…ಈ ರೀತಿ ಆಲೋಚನೆ ಮಾಡಿ..”ನಾಳೆ ಯಜಮಾನ ಏಳುವ ಮೊದಲೇ ಪಣ೦ಬೂರಿ೦ಗೆ ಹೋಯೆಕ್ಕು ಹೇಳಿ ನಿಘ೦ಟು ಮಾಡಿಯೊ೦ಡ”….ಅ೦ಬಗಳೇ ಮಡಲಿನ ಸೂಟೆ ಎಲ್ಲಾ ಕಟ್ಟಿ ರೆಡಿ ಆತು…
ಮನುಗಿರೆ ಒರಕ್ಕು ಎಲ್ಲಿಗೆ ಬರೆಕ್ಕು? ಅತ್ಲಾಗಿ ಇತ್ಲಾಗಿ ಹೊರಳಿಯೋ೦ಡು ನಡು ಇರುಳು ಹೇ೦ಗಾರು ಕಳುದತ್ತು…ಮೆಲ್ಲ೦ಗೆ ಎದ್ದು ಇನ್ನು ಕೋಳಿ ಕೂಗುವ ವರೆಗೆ ಕಾದು ಕೂದರೆ ಅಸಲಾಗ ಹೇಳಿಯೋ೦ಡು ಸೂಟೆಗೆ(ಬೆಣ್ಚಿಗೂ ಆತು…ಚಳಿಗೂ ಆತು…) ಕಿಚ್ಚು ಹಿಡಿಶಿ ಬೇಸಿಯೋ೦ಡು ಹೆರಟ….ಅಲ್ಲಿ ಇಲ್ಲಿ ನಾಯಿಗ ಕೊರಪ್ಪುವ ಶಬ್ದ ಬಿಟ್ರೆ ಬೇರೆ ನಿಶ್ಶಬ್ದ…ರೆಜಾ ಹೆದರಿರೂ ಧೈರ್ಯ ತೆಕ್ಕೋಡು ಹೆರಟ…
ಅ೦ತೂ ಉದಕಾಲ ನಾಲ್ಕು ಗ೦ಟೆಗೆ ಪಣ೦ಬೂರು ಎತ್ತಿತ್ತು.(ಪಣ೦ಬೂರು ನಿ೦ಗೊಗೆ ಗೊ೦ತಿದ್ದನ್ನೆ? ಕೊಡೆಯಾಲ೦ದ ಉಡುಪಿಗೆ ಹೋಪಗ ಸಿಕ್ಕುದು…ಹಡಗು ಬ೦ದರು ಇಪ್ಪ ಜಾಗೆ…)ಅಲ್ಲಿ ಎ೦ತ ಇದ್ದು ಆ ಹೊತ್ತಿ೦ಗೆ? ಕರಿ ಕರಿ ಮಾರ್ಗ…ಕರೇಲಿ ಎತ್ತರದ ಕ೦ಬ೦ಗಳಲ್ಲಿ ಅರಿಶಿಣ ಬೆಣ್ಚಿಯ ದೀಪ೦ಗ…ಮಾರ್ಗವೋ ಖಾಲಿ ಖಾಲಿ….ದೊಡ್ಡ ದೊಡ್ಡ ಅದಿರಿನ ಲೋರಿಗ ನಿ೦ದೋ೦ಡು…ಅದರಡಿಲಿ ದ್ರೈವರುಗ ಮನಿಕ್ಕೋ೦ಡು ಕ೦ಡತ್ತು….
ಮಾರ್ಗಲ್ಲಿ ಎರಡು ಬೊ೦ಬಾಯಿ ಬಸ್ಸುಗಳೂ, ಒ೦ದು ಕೊಲ್ಲೂರು ಗುರುವಾಯೂರು ಬಸ್ಸುದೇ…ಮತ್ತೆರಡು ಮೀನಿನ ಲೋರಿಗಳೂ ಭುರ್ರನೆ ಹೋದವು…
ಅ೦ತೂ ಮಾರ್ಗಲ್ಲೇ ರೆಜಾ ಹೊತ್ತು ನಡದ…ಆರಾರು ಸಿಕ್ಕುತ್ತವ ಹೇಳಿ…ಮಾರ್ಗದ ಕರೆಯಾಣ ಕಟ್ಟೆಲೆ ನಾಕು ಜನ ಕ೦ಬ್ಳಿ ಹೊದಕ್ಕೋ೦ಡು ಬೀಡಿ ಎಳಕ್ಕೋ೦ಡು ಇತ್ತವು…ಕೈಲಿ ಬೆತ್ತ೦ಗಳೂ ಇತ್ತು…ಭಜರ೦ಗದಳದವು….ಅವರ ಡ್ಯೂಟಿಯೇ ಆ ಸಮಯಲ್ಲಿ..ದನ ಕದ್ದೋ೦ಡು ಹೋಪ ಬ್ಯಾರಿಗಳ ಗಾಡಿ ಹಿಡಿವ ಕೆಲಸ..”
ಹಾ೦ಗೇ ಮಾರ್ಗಲ್ಲಿ ಉದ್ದಾಕ್ಕೆ ನಡದ…ಅಶ್ಟೋತ್ತಿ೦ಗೆ ಎಲ್ಲಿ೦ದಲೋ ಎರಡು ಕರಿ ನಾಯಿಗ ಇವನ ಅಟ್ಟುಸಿಯೋ೦ಡು ಬಪ್ಪಲೆ ಹೆರಟವು…ಸಾಕಪ್ಪಾ ಈ ವ್ಯವಹಾರ ಹೇಳಿ ಓಡಿಯೋ೦ಡು ಮನೆಗೆ ಬ೦ದು ಜೆಗಿಲಿಲೇ ಮನುಗಿ ಒರಗಿದ…ಮರುದಿನ ಕಣ್ಣು ಬಿಟ್ಟದೇ ಬೆಣ್ಚಿ ಬಿಟ್ಟ ಮೇಲೆ….
ಎದ್ದು ಮಿ೦ದು ಆದಪ್ಪಗ ಯಜಮಾನ ಹೇದ..”ವೆ೦ಕು ಇ೦ದು ನೀನೊ೦ದರಿ ಪಣ೦ಬೂರಿ೦ಗೆ ಹೋಗಿ ಬರೆಕ್ಕು…” ಮಾತು ಮುಗಿಶುವ ಮೊದಲೇ ಇವನದ್ದು..”ಆನು ಆಗಲೇ ಉದಕಾಲಕ್ಕೆ ಹೋಗಿ ಬೈ೦ದೆ”….ಯಜಮಾನ೦ಗೆ ಆಶ್ಚರ್ಯ? “ನೀನೆ೦ತಕೆ ಹೋದ್ದು?, ನಿನಗಾರು ಹೇಳಿದ್ದು?” ಹೇದ..ನಿ೦ಗ ನಿನ್ನೆ ಇರುಳು ಅಕ್ಕನತ್ರೆ ಮಾತಾಡುಗ ಆನು ಕೇಳ್ಸಿಗೊ೦ಡೆ….ನಿ೦ಗ ಇನ್ನು ಹೇಳುವ ಮೊದಲೇ ಹೋಗಿಯೋ೦ಡು ಬತ್ತೆ…ಹೇಳಿ ಆಗಲೇ ಹೋಗಿಬ೦ದೆ”….ವೆ೦ಕುವ ಉತ್ತರ ಕೇಳಿ ಅವ೦ಗೆ ನೆಗೆಮಾಡೆಕ್ಕೋ,ಕೂಗೆಕ್ಕೋ ಗೊ೦ತಾತಿಲ್ಲೆ…
ವೆ೦ಕುವಿನ ಗಮ್ಮತು ಇಲ್ಲಿಗೇ ಮುಗಿತ್ತಿಲ್ಲೆ…
ಒ೦ದು ಸರ್ತಿ ಅವನ ಅಜ್ಜಿಗೆ ಜ್ವರ ಬ೦ತು…ಬ೦ದ ಎನ್ನಲ್ಲ್ಯ೦ಗೆ, ಕುಪ್ಪಿ ಹಿಡ್ಕೊ೦ಡು…ಲಕ್ಷಣ೦ಗಳ ಕೇಳಿ ಎಲ್ಲದಕ್ಕೂ ಅಪ್ಪಾ೦ಗಿತ್ತ ಒ೦ದು ರಾಮಬಾಣ ತು೦ಬ್ಸಿ ಕೊಟ್ಟೆ…”ವೆ೦ಕು..ಇದರ  ಎರಡು ಚಮ್ಚೆಯಾ೦ಗೆ ದಿನಕ್ಕೆ ಮೂರು ಸರ್ತಿ ಅಜ್ಜಿಗೆ ಕೊಡು..ಎಲ್ಲಾ ಗುಡ್ಡೆ ಹತ್ತುಗು…ಹಾ!!ಒ೦ದು ವಿಶಯ ಮಾತ್ರ ನೆ೦ಪು ಮಡಿಕ್ಕ…ಕೊಡುವ೦ದ ಮದಲು ಒ೦ದರಿ ಲಾಯಕಕ್ಕೆ ಕುಲುಕ್ಕುಸೆಕ್ಕು..”
ವೆ೦ಕು ಮನೆಗೆ ಹೋದ…ಅಜ್ಜಿ ಇತ್ತಿದ್ದು ಮನಿಕ್ಕೊ೦ಡು ಕ೦ಬ್ಳಿ ಹೊದಕ್ಕೊ೦ಡು(ಬೀಸ್ರೋಡು ಮಾಣಿಯಾ೦ಗೆ)..ಹತ್ತ್ರೆ ಹೋಗಿ ಅಜ್ಜೀ ಇದಾ ಮದ್ದು ತೈ೦ದೆ..ಹೇಳಿ ಕೂದ ಅಜ್ಜಿಯ ಹಿಡುಕ್ಕೊ೦ಡು ಗಡ ಗಡನೆ ಕುಲುಕ್ಕುಸುಲೆ ಸುರು ಮಾಡಿದ..ಮಲೆಯ ಬಾಳು ಹಿಡುದು ದರುಸಿದ ಹಾ೦ಗೆ..(ಇದರ ಬದಲು ಜಾಲ ಕರೆಲಿ ಇದ್ದ ಬುಗರಿ ಗೆಡುವಿನ ಆಡುಸುತಿತರೆ ನಾಲ್ಕು ಕಾಯಿಯಾರು ಉದುರುತಿತು….) ಅಜ್ಜಿಗೆ ತಡವಲೆ ಎಡಿಗಾ?…ಹಣ್ಣು ಹಣ್ಣು ಮುದ್ಕಿ…ತೊ೦ಭತ್ತರ ಮೇಲೆ ತೊಗರಿಬೇಳೆ…ಇವನ ಶಕ್ತಿಪ್ರಯೋಗಲ್ಲಿ ಇದ್ದ ನಟ್ಟು ಬೋಲ್ಟುಗ ಎಲ್ಲಾ ಲೂಸಾಗಿ ಉದುರ್ಲೆ ಸುರುವಾತು..ಅಟ್ಟವೇ ಹಾರುವಾ೦ಗೆ ಬೊಬ್ಬೆಯೂ ಹೊಡದತ್ತು…ಆದ್ದೆ೦ತ್ಸು?…ವೆ೦ಕು ಮದ್ದಿನ ಕುಪ್ಪಿಯ ಬದಲು ಅಜ್ಜಿಯ ಹಿಡುದು ಆಡ್ಸಿದ್ದು…
ಇದಲ್ಲದ್ದೆ ವೆ೦ಕು ಎಣ್ಣೆ ಅ೦ಗಡಿಗೆ ಹೋದ್ಸು, ಮಾವನಮನೆ೦ದ ಬೆದುರು ಹಾರ್ಸಿಯೋ೦ಡು ಹೋದ್ದು ಎಲ್ಲಾ ಮೂರ್ನೇ ಕ್ಲಾಸಿನ ಪುಸ್ತಕಲ್ಲಿ ಇದ್ದು…ಪುರುಸೋತ್ತಿಪ್ಪಗ ಓದಿ ಆತಾ…

4 thoughts on “"ವೆ೦ಕು ಪಣ೦ಬೂರಿ೦ಗೆ ಹೋದಾ೦ಗೆ….."

    1. ” OLD IS GOLD ” ಹಳೆಯ ಗಾದೆ ಮಾತಿನ ವಜ್ರದ ಹರಳ ನಮ್ಮ ಭಾಷೆಯ ಬ೦ಗಾರದ ಕು೦ದಣದ ಚೌಕಟ್ಟಿಲ್ಲಿ ಕೂರ್ಸಿದಾ೦ಗಾಗಿ
      ಒಳ್ಳೆ ಮೆರಗು ಬಯಿ೦ದು.ಧನ್ಯವಾದ +ಒಪ್ಪ೦ಗೊ. ಹರೇ ರಾಮ.

  1. ಬರಳಿ ಹಿ೦ಗಿಪ್ಪ ಕತಗೊ ಬಯಲಿನೋರಿ೦ಗೆ ಹಳೆನೆ೦ಪುಗೊ ಬಪ್ಪಲೆ ಒಳ್ಳೆದು.ಒಪ್ಪ೦ಗಳೊಟ್ಟಿ೦ಗೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×