- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಒಂದುವಾರ ಕಳುತ್ತು, ಎನಗೆ ಶೀತವೂ ಕಮ್ಮಿ ಆತು :). ಈ ವಾರ ಎಂತರ ಬಗ್ಗೆ ಬರವದು ಹೇಳಿ ಆಲೋಚನೆ ಮಾಡ್ತಾ ಇಪ್ಪಗ ಒಂದು ಮುಖ್ಯ ವಿಷಯ ನೆಂಪಾತು. ಇದು ಒಂದು ಸಾಮಾನ್ಯ ಸಮಸ್ಯೆ. ಸಣ್ಣ ಪ್ರಾಯದ ಕೂಸುಗೊ(90% ಜೆನ) ಹೆಚ್ಚಾಗಿ ಈ ಸಮಸ್ಯೆಯ ಎದುರ್ಸುತ್ತವು. ಮುಟ್ಟಿನ ಹೊಟ್ಟೆಬೇನೆ. ಇದಕ್ಕೆ ವೈದ್ಯಕೀಯವಾಗಿ dysmenorrhea ಹೇಳ್ತವು. ಇದರಲ್ಲಿ ಎರಡು ರೀತಿ ಇದ್ದು;
Primary dysmenorrhea ಹೆಚ್ಚಾಗಿ ಸಣ್ಣ ಪ್ರಾಯದ/ಇನ್ನೂ ಮದುವೆ ಆಗದ್ದ ಕೂಸುಗೊಕ್ಕೆ ಆ ಸಮಸ್ಯೆ ಇರ್ತು.ಇದರಲ್ಲಿ ಯಾವುದೇ ರೋಗ ಅಥವ ದೊಡ್ಡ ಕಾರಣ ಇರ್ತಿಲ್ಲೆ.
Secondary dysmenorrhea ಇದು ಯಾವ ಪ್ರಾದವಕ್ಕೂ ಬಪ್ಪ ಸಾಧ್ಯತೆ ಇದ್ದು. ಯಾವುದಾರೂ ರೋಗ ಇದ್ದರೆ ಆ ಕಾರಣಂದಾಗಿ ಮುಟ್ಟಿನ ಸಮಯಲ್ಲಿ ಅಪ್ಪ ಹೊಟ್ಟೆಬೇನೆ,ಉದಾಹರಣೆಗೆ ಗರ್ಭಕೋಶಲ್ಲಿ ಗಡ್ಡೆ ಇತ್ಯಾದಿ ಸಮಸ್ಯೆ ಇಪ್ಪದು. ಇದಕ್ಕೆಲ್ಲಾ ತಜ್ಞರ ಭೇಟಿ ಆಯಕಾದ್ದು ಅಗತ್ಯ. ಯಾವುದೇ ಬೇನೆ ಹೆಚ್ಚಿದ್ದರೆ ವೈದ್ಯರ ಕಂಡು, ಅದು ಯಾವುದೇ ಬೇರೆ ಕಾರಣಂದಾಗಿ ಅಲ್ಲ ಹೇಳಿ ನಿಗಂಟು ಮಾಡೀಗೊಳ್ಳಿ.
ಈಗ Primary dysmenorrhea ದ ಬಗ್ಗೆ ರಜ್ಜ ಮಾಹಿತಿ ಕೊಡ್ತೆ.
ಸಮಸ್ಯೆಯ ಲಕ್ಷಣಂಗೊ:
- ಹೆಚ್ಚಾಗಿ ಮುಟ್ಟು ಅಪ್ಪಲೆ ಶುರುವಾಗಿ. ಪ್ರತೀ ತಿಂಗಳು ಸರಿಯಾದ ದಿನಕ್ಕೆ ಅಪ್ಪಲೆ ಶುರುವಾದ ಮೇಲೆ ಈ ಬೇನೆ ಬಪ್ಪಲೆ ಶುರು ಆವ್ತು.
- ಈ ಸಂದರ್ಭಲ್ಲಿ ಯಾವುದೇ ಕೆಲಸ ಮಾಡ್ಲೆ ಎಡಿತ್ತಿಲ್ಲೆ. ಮನುಗಿದಲ್ಲಿಂದ ಏಳುಲೆ ಎಡಿಯದ್ದಷ್ಟು ಬೇನೆಯೂ ಕೆಲವು ಜೆನಕ್ಕೆ ಇರ್ತು.
- ಕೆಳಹೊಟ್ಟೆ ಬೇನೆ, ಸೊಂಟಬೇನೆ, ತೊಡೆಯ ಭಾಗಲ್ಲಿ ಬೇನೆ ಹೆಚ್ಚಾಗಿ ಇರ್ತು, ಕೆಲವು ಜೆನ ಬೇನೆ ಹೆಚ್ಚಾಗಿ ಪ್ರಜ್ಞೆ ತಪ್ಪಿ ಬೀಳ್ತವೂ ಕೂಡ.
- ಕೆಲವು ಜೆನಕ್ಕೆ ಬೇನೆಯೊಟ್ಟಿಂಗೆ ತಲೆಬೇನೆ, ತಲೆತಿರುಗುದು, ಹೊಟ್ಟೆತೊಳಸುದು, ವಾಂತಿ ಬಪ್ಪದು, ಲೂಸ್ ಮೋಶನ್ ಇತ್ಯಾದಿ ತೊಂದರೆಗಳೂ ಇರ್ತು.
- ಮಲ ಮೂತ್ರ ವಿಸರ್ಜನೆ ಸರಿಯಾಗಿ ಆಗದ್ದರೆ ಹೊಟ್ಟೆ ಬೇನೆ ಹೆಚ್ಚಪ್ಪ ಸಾಧ್ಯತೆ ಇರ್ತು.
- ಇದು ಹೆಚ್ಚಾಗಿ ಮುಟ್ಟಿನ ಮೊದಲ ಎರಡು ದಿನ ಇರ್ತು.
- 13-14 ರ ಪ್ರಾಯಂದ ಶುರು ಅಪ್ಪ ಈ ಬೇನೆ ಕೆಲವು ಜೆನಕ್ಕೆ ಇಪ್ಪತ್ತು ವರ್ಷ ಕಳೆವ ಹೊತ್ತಿಂಗೆ ಕಮ್ಮಿ ಆವ್ತು. ಆದರೆ ಕೆಲವರಿಂಗೆ ಮದುವೆ ಅಪ್ಪನ್ನಾರವೂ ಹೀಂಗೇ ಬೇನೆ ಇರ್ತು,ಕೆಲವರಿಂಗೆ ಮೊದಲನೇ ಹೆರಿಗೆ ಆದಮೇಲೆ ಮಾಂತ್ರ ಈ ಸಮಸ್ಯೆ ಕಮ್ಮಿ ಅಪ್ಪದು.
ಇದಕ್ಕೆ ಕಾರಣಂಗೊ:
- ಬೇನೆಯ ತಡಕ್ಕೊಂಬ ಶಕ್ತಿ ಇಲ್ಲದ್ದೆ ಇಪ್ಪದು. ಕೆಲವು ಜೆನಕ್ಕೆ ಸಣ್ಣ ಬೇನೆ ಎಂತಾರೂ ಆದರೂ ಅದರ ತಡಕ್ಕೊಂಬ ಶಕ್ತಿ ಇರ್ತಿಲ್ಲೆ ಈ ಕಾರಣಂದ ಸಣ್ಣಕ್ಕೆ ಅಪ್ಪ ಹೊಟ್ಟೆಬೇನೆಯೂ ತುಂಬಾ ಹೇಳಿ ಅನ್ಸುತ್ತು.
- ಹೊಟ್ಟೆಯ ಸ್ನಾಯುಗಳ ಶಕ್ತಿ ಕಮ್ಮಿ ಇದ್ದರೆ ಕೂಡ ಮುಟ್ಟಿನ ಹೊಟ್ಟೆಬೇನೆ ಹೆಚ್ಚು ಬಪ್ಪ ಸಾಧ್ಯತೆ ಇದ್ದು.
- ಗರ್ಭಕೋಶ ಕುಗ್ಗುದು-ಹಿಗ್ಗುದು (contractions) ಆವ್ತಾ ಇರ್ತು, ಇದು ಲೆಕ್ಕಂದ ಹೆಚ್ಚು ಕುಗ್ಗುಲೆ ಶುರು ಆದರೆ ಕೂಡ ಬೇನೆ ಹೆಚ್ಚಾವ್ತು.ಪ್ರೋಸ್ಟಾಗ್ಲಾಂಡಿನ್ ಹೇಳ್ತ ಅಂಶ ಹೆಚ್ಚಾದರೆ ಗರ್ಭಕೋಶ ಹೆಚ್ಚು ಹಿಗ್ಗಿ-ಕುಗ್ಗಿ ಆವ್ತು.
- ಗರ್ಭಕೋಶದ ದ್ವಾರ (cervical os) ತುಂಬಾ ಸಣ್ಣ ಇದ್ದರೆ.
ಇದಿಷ್ಟು ಮುಖ್ಯ ಕಾರಣಂಗೊ.
ಇದಕ್ಕೆ ಪರಿಹಾರ ಎಂತರ?
- ಸರಿಯಾಗಿ ಆಹಾರ ತೆಕ್ಕೊಂಡು ದೈಹಿಕವಾಗಿ ಸಶಕ್ತವಾಗಿ ಇಪ್ಪದು. ಮುಟ್ಟಿನ ದಿನಂಗಳಲ್ಲಿ ಹಶು ಹೊಟ್ಟೆಲಿ ಇರದ್ದೆ ಸರಿಯಾದ ಸಮಯಕ್ಕೆ ಸರಿಯಾದ ಆಹಾರ ತೆಕ್ಕೊಳ್ಳೆಕು.
- ಈ ಬೇನೆಯ ತಡಕ್ಕೊಂಬಲೆ ಮಾನಸಿಕವಾಗಿ ಗಟ್ಟಿ ಅಪ್ಪದು.
- ನಿತ್ಯವೂ ವ್ಯಾಯಾಮ ಮತ್ತೆ ಯೋಗಾಭ್ಯಾಸವ ಮಾಡಿ ಸ್ನಾಯುಗೊಕ್ಕೆ ಶಕ್ತಿ ಕೊಡುದು. ಈ ಸಮಸ್ಯೆಗೊಕ್ಕಾಗಿಯೇ ಇಪ್ಪ ಯೋಗಾಭ್ಯಾಸಂಗಳ ಮಾಡ್ಲಕ್ಕು.
- ಗರ್ಭಕೋಶದ ದ್ವಾರ ಸಣ್ಣ ಇದ್ದರೆ ಸಾಮಾನ್ಯವಾಗಿ ಮದುವೆ ಆದಮೇಲೆ,ಮೊದಲನೇ ಹೆರಿಗೆಯ ಸಂದರ್ಭಲ್ಲಿ ಗರ್ಭಕೋಶದ ದ್ವಾರ ದೊಡ್ಡ ಅಪ್ಪ ಕಾರಣ ತೊಂದರೆ ಕಮ್ಮಿ ಆವ್ತು. ಈ ಸಮಸ್ಯೆಗೆ ಓಪರೇಷನ್ ಕೂಡ ಮಾಡ್ತವು.
- ಮುಟ್ಟಿನ ಸಂದರ್ಭಲ್ಲಿ ಬೇನೆ ಇದ್ದರೆ ಬೆಶಿನೀರಿನ ಶಾಖವ ಸೊಂಟ/ಕಿಬ್ಬೊಟ್ಟೆಗೆ ಕೊಡುದು. [ಬೆಶಿನೀರಿನ ಹಾಕಿ ಶಾಖ ಕೊಡುವ ಚೀಲ ಸಿಕ್ಕುತ್ತು]
- ಸಾಧ್ಯ ಆದಷ್ಟೂ ವಿಶ್ರಾಂತಿ ತೆಕ್ಕೊಂಬದು.
- ಇದಕ್ಕೆ ಹಲವಾರು ಮನೆಮದ್ದುಗೊ ಇದ್ದು
- ನಿತ್ಯವೂ ಎರಡು ಚಮ್ಚೆ ಕುಮಾರಿ ಆಸವ ಕುಡಿವದು.
- ಬೆಳ್ಳುಳ್ಳಿಯ ಗುದ್ದು ಒಂದು ಗ್ಲಾಸ್ ಹಾಲಿಂಗೆ ಹಾಕಿ ಕಾಲು ಗ್ಲಾಸ್ ಹಾಲು ಅಪ್ಪನ್ನಾರ ಕೊದುಶಿ ಉದಿಯಪ್ಪಗ ಹಸಿಹೊಟ್ಟೆಗೆ ಕುಡಿವದು. [ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಗಳ ಬಂಡಾಡಿ ಅಜ್ಜಿಯ ಹತ್ತರೆ ಕೇಳುವ, ಆಗದಾ?]
- ಈ ಸಮಸ್ಯೆ ಇಪ್ಪಗ ಎಲ್ಲಕ್ಕಿಂತ ಹೆಚ್ಚಾಗಿ ಮನೆಯೋರ ಸಹಕಾರ ಬೇಕು. ಅಮ್ಮ/ಅಕ್ಕ ಆರಾರು ಒಟ್ಟಿಂಗೆ ಇದ್ದರೆ ಮನಸ್ಸಿಂಗೆ ಹಿತ. ಅದರೊಟ್ಟಿಂಗೇ ಆತ್ಮವಿಶ್ವಾಸ ತುಂಬುವ ಕೆಲಸವೂ ಆಯಕ್ಕು.
ಸ್ತ್ರೀತ್ವ ಹೇಳುದು ದೇಅರು ಕೊಟ್ಟ ಒಂದು ವಿಶೇಷ ಶಕ್ತಿ. ಅದಕ್ಕೆ ಅದರದ್ದೇ ಆದ ಉಪಯೋಗಂಗೊ ಇದ್ದು. ಬಾಲ್ಯಂದ ಮುಪ್ಪಿನ ವರೇಗೂ ಜೀವನದ ಬೇರೆ ಬೇರೆ ಸ್ತರಂಗಳ ಅನುಭವಿಸುತ್ತಾ, ಹಲವು ಪಾತ್ರಂಗಳ ನಿಭಾಯಿಸೆಕ್ಕು. ಎಲ್ಲಕ್ಕಿಂತ ಹೆಚ್ಚು ಖುಷಿ ಕೊಡುವ ಸಂದರ್ಭ ಜೀವನಲ್ಲಿ ತಾಯ್ತನವ ಅನುಭವಿಸುದೇ ಅಲ್ಲದಾ? ಮಕ್ಕಳ ಹುಟ್ಟು, ಜೀವನ, ಸಾಧನೆಗಳ ನೋಡಿ ಹೆಚ್ಚು ಆನಂದ ಪಡುದು ಅಮ್ಮನೇ ಅಲ್ಲದಾ?ಹೀಂಗಿದ್ದ ಹಲವು ಧನಾತ್ಮಕ ವಿಚಾರಂಗಳೊಟ್ಟಿಂಗೆ ಕೆಲವು ಋಣಾತ್ಮಕ ಸಂಗತಿಗಳೂ ಇರ್ತು. ಹೂಗಿನೊಟ್ಟಿಂಗೆ ಮುಳ್ಳುಗೊ ಇಪ್ಪ ಹಾಂಗೆ. ಅದರೊಟ್ಟಿಂಗೆಯೇ ಜೀವನವ ಸಂತೋಷವಾಗಿ ನಡಶುದರ ನಾವು ಕಲಿಯಕ್ಕು :).
ಇಂದ್ರಾಣ ಲೇಖನ ಬೈಲಿಲ್ಲಿ ಇಪ್ಪ ಅಕ್ಕಂದ್ರಿಂಗೆ, ತಂಗೆಕ್ಕೊಗೆ ಪ್ರಯೋಜನ ಅಕ್ಕು. ಯಾವುದಾದರೂ ಪ್ರಶ್ನೆ ಇದ್ದರೆ ಎನ್ನ ಮಿಂಚಂಚೆ ವಿಳಾಸಕ್ಕೆ ಕಳ್ಸುಲಕ್ಕು.
ಬರದ್ದು ಮಾಹಿತಿಯುಕ್ತವಾಗಿ ಇದ್ದು….:)
ಸುವರ್ಣಿನಿ ಡಾಗುಟ್ರಕ್ಕ°.., ಹೆಮ್ಮಕ್ಕಳ ಮುಟ್ಟಿನ ಬಗ್ಗೆ, ಅದರ ಸಮಸ್ಯೆಯ ಬಗ್ಗೆ ಸವಿವರವಾಗಿ, ತುಂಬಾ ಚೆಂದಲ್ಲಿ ಬರದ್ದಿ.. ಧನ್ಯವಾದಂಗಾ.
ನಿಂಗೊ ಹೇಳಿದ ಹಾಂಗೆ ಸ್ತ್ರೀತ್ವ ಹೇಳುದೇ ಒಂದು ವಿಶೇಷ ಶಕ್ತಿ… ಅಪ್ಪು.., ಸ್ತ್ರೀಯರಿಂಗೆ ಇಪ್ಪ ಸಹನೆ, ತಾಳ್ಮೆ ಗೆಂಡು ಮಕ್ಕಳಲ್ಲಿ ಇಲ್ಲೆ.
ಹಾಂಗಾಗಿಯೇ ಆದಿಕ್ಕು ನಮ್ಮ ಸೃಷ್ಟಿ ಕರ್ತ°, ಇನ್ನೊಂದು ವಂಶ ಬೆಳೆಶುಲೆ ಇಪ್ಪ ಮಾರ್ಗವ ನವಗೆ ಕೊಟ್ಟದು.., ಅದರ ಬೇನೆಗಳಸಹಿಸುವ ಶಕ್ತಿಯುದೆ..
ಇದು ಪ್ರತಿಯೋಬ್ಬಂಗೂ ಭಿನ್ನವೇ!!! ಒಬ್ಬನ ಹಾಂಗೆ ಇನ್ನೊಬ್ಬಂಗೆ ಇರ್ತಿಲ್ಲೆ.. ವೆತ್ಯಾಸ ಇದ್ದೇ ಇರ್ತು ಅಲ್ಲದಾ?
Secondary dysmenorrhea ದ ಬಗ್ಗೆ ಸೂಚನೆ ಕೊಟ್ಟದು ಒಳ್ಳೇದಾತು.. ಅದುದೆ ಸುಮಾರು ಜೆನಕ್ಕೆ ಗೊಂತಿಲ್ಲದ್ದೆ ಕಷ್ಟಲ್ಲಿರ್ತವು.. ಪರಿಸ್ಥಿತಿ ವಿಷಮ ಅಪ್ಪಗಳೇ ಕೆಲವು ಸರ್ತಿ ಗೊಂತಪ್ಪದು ಇದ್ದು ಅಲ್ಲದಾ?
ಇದರ ತಡವಲೆ ನಾವು ಅಂಬಗಂಬಗ ಹೇಳಿದರೆ ಆರು ತಿಂಗಳು, ವರ್ಷಕ್ಕೊಂದರಿ ವೈದ್ಯರ ಕಾಂಬದು ಒಳ್ಳೆದಲ್ಲದಾ?
ಯಾವುದೇ ತೊಂದರೆ ಇಲ್ಲೆ ಹೇಳಿ ನವಗೆ ಅನ್ಸಿದರೂ 30-35 ವರ್ಷ ಪ್ರಾಯ ಆದಮೇಲೆ ವರ್ಷಕ್ಕೊಂದರಿ ವೈದ್ಯರ ಹತ್ತರೆ ತಪಾಸಣೆ ಮಾಡ್ಸಿಗೊಂಡರೆ ಒಳ್ಳೆದು. ಇನ್ನು 45 ವರ್ಷ ಕಳುದಮೇಲೆ ಅಥವಾ ಮುಟ್ಟು ನಿಂದಮೇಲೆದೇ ಅಂಬಗಂಬಗ ಪರೀಕ್ಷೆ ಮಾಡ್ಸಿಗೊಂಬದು ಅಗತ್ಯ.
ಸುವರ್ಣಿನಿ ಅಕ್ಕಾ..
ಹೇಳುಲೇಬೇಕಾದ ವಿಶಯ ಹೇಳುವ ರೀತಿಲಿ ಹೇಳಿತೋರುಸಿದ್ದಿ ನಿಂಗೊ.
ಡಾಗುಟ್ರು ಆಗಿ ಮಾಡ್ಳೇಬೇಕಾದ ಕರ್ತವ್ಯವ ನಿಂಗೊ ಮಾಡಿದ್ದಿ. ತುಂಬಾ ಕೊಶಿ ಆತು.
ಬೈಲಿನ ಎಲ್ಲೋರುದೇ ಆರೋಗ್ಯ ಪಡಕ್ಕೊಂಬ ವಿಚಾರಲ್ಲಿ ನಿಂಗಳ ಕಾಳಜಿ ತುಂಬಾ ಕೊಶಿ ಆತು.
ಧನ್ಯವಾದಂಗೊ.
ಎನಗೆ ಇಲ್ಲಿ ಬರವಲೆ ಅವಕಾಶ ಕೊಟ್ಟ ನಿಂಗೊಗೆ ಧನ್ಯವಾದ.. ಒಪ್ಪಣ್ಣ 🙂
ಕೆಲವು ಕಡೆಲಿ ಇಂಗ್ಲೀಷಿನ ಶಬ್ದಂಗಳ ಬರದ್ದಕ್ಕೆ ಕ್ಷಮೆ ಇರಲಿ, ಸಮಸ್ಯೆ ಎಂತರ ಹೇಳಿರೆ…ಕೆಲವು ವೈದ್ಯಕೀಯ ಶಬ್ದಂಗೊಕ್ಕೆ ಸಮಾನ ಹವ್ಯಕ/ಕನ್ನಡ ಶಬ್ದಂಗೊ ಸಿಕ್ಕುತ್ತಿಲ್ಲೆ ಅಥವಾ ಇರ್ತಿಲ್ಲೆ.
ಸುವರ್ಣಿನಿ ಅಕ್ಕೋ ಒ೦ದು ಉತ್ತಮ ಪ್ರಯೋಜನಕರ ಲೇಖನ.ಡಾಕ್ಟ್ರಿ೦ಗೆ ಶೀತ ಗುಣ ಆಗಿಯಪ್ಪಗ ಎನಗೆ ಶೀತ ಬ೦ತದ ಹಾ೦ಗಾಗಿ ಒಪ್ಪ ಕೊಡ್ಲೆ ರಜ ತಡವಾತು.ಅ೦ತೂ ಇಷ್ಟು ಒಳ್ಳೆ ಲೇಖನ ಬರದ್ದದಕ್ಕೆ ಒ೦ದು ಜೈ.ಒಪ್ಪ೦ಗಳೊಟ್ಟಿ೦ಗೆ
ಡಾಗುತ್ರಕ್ಕಾ,ಧನ್ಯವಾದ.ಒಳ್ಳೇ ವಿವರಂಗೋ.
ಪರಿಹಾರಂಗಳ ಹೇಳುತ್ತಾ ಒಂದು ಮುಖ್ಯ (ತಾತ್ಕಾಲಿಕ)ಪರಿಹಾರ ಬಿಟ್ಟಿದಿರೋ ಹೇಳಿ ??!!
yaavudu???
ನಿಂಗೊ ಬೇರೆ ಕಡೆ ಹೇಳಿದ್ದಿ -ತಾಯ್ತನದ ಸುಖವ ಅನುಭವಿಸೊದು !!
ಆ ಸಂದರ್ಭಲ್ಲಿ ಮುಟ್ಟು ಆಗದ್ದೇ ಇಪ್ಪ ಕಾರಣ ಮುಟ್ಟಿನ ಬೇನೆಯ ಸಮಸ್ಯೆಯೇ ಇರ್ತಿಲ್ಲೆ !!
ಒಳ್ಳೆ ತಾತ್ಕಾಲಿಕ ಪರಿಹಾರ ಅಲ್ಲದೋ?
ಅದು ಪರಿಹಾರ ಹೇಂಗಾವ್ತು?? in fact ಹೆರಿಗೆ ಅಪ್ಪದು ಹೆಚ್ಚಿನವಕ್ಕೆ permanent ಪರಿಹಾರ !!
ಧನ್ಯವಾದ ಸುವರ್ಣಿನೀ ಅಕ್ಕ. ನಮ್ಮ ಅಕ್ಕ ತಂಗೆಯೋಕ್ಕ ಓದಿ, ಕೇಳಿ ತಿಳಿಯೆಕ್ಕಾದ ವಿಷಯವೇ.
ಒಂದು ಒಳ್ಳೆ ಲೇಖನ. ಎಷ್ಟೋ ಜೆನಂಗೊ ಕಾದೊಂಡಿದ್ದಿಕ್ಕು ಇದಕ್ಕೆ.
ಧನ್ಯವಾದಂಗೊ ಸುವರ್ಣಿನಿ
ಲೈಕ ಆಯಿದು ಸುವರ್ಣಿನಿ ಅಕ್ಕ .. ನಿಂಗಳ ಮಿಂಚಂಚೆ ವಿಳಾಸ ಬರದ್ದಿರೆ ಇಲ್ಲೆ….
suvarninirao@gmail.com
🙂