Oppanna.com

ನಾವು-ನಮ್ಮ ಆಹಾರ

ಬರದೋರು :   ಡಾಗುಟ್ರಕ್ಕ°    on   26/07/2010    33 ಒಪ್ಪಂಗೊ

ಡಾಗುಟ್ರಕ್ಕ°

ಗುರುಗಳ ಚರಣಗಳಿಂಗೆ ಮನಸ್ಸಿಲಿಯೇ ವಂದಿಸುತ್ತಾ ಈ ಒಪ್ಪ ಬರೆತ್ತಾ ಇದ್ದೆ…
ಒಪ್ಪಣ್ಣ ಬರತ್ತಿರಾ ಡಾಗುಟ್ರಕ್ಕಾ ಹೇಳಿ ಕೇಳಿ ಅಪ್ಪಗ ಇಲ್ಲೆ ಹೇಳುಲೆ ಆತಿಲ್ಲೆ..
ಎಂತ ಬರವದು ಹೇಳಿ ಯೋಚನೆ ಮಾಡಿಯಪ್ಪಗ, ಬೈಲಿನೋರಿಂಗೆ ಒಪ್ಪಣ್ಣ ಸುಮಾರು ಸರ್ತಿ ಹೇಳಿದ್ದ -ಡಾಗುಟ್ರಕ್ಕ ಓದುತ್ತಾ ಇದ್ದು ಹೇಳಿ..
ಅಂಬಗ ನಿಂಗೊಗೆಲ್ಲಾ ಕಂಡುಗೊಂಡಿದ್ದಿಕ್ಕು ಎಂತಪ್ಪಾ ಇದು ಹೀಂಗುದೇ ಓದುದು ಹೇಳಿ..
ಇದಾ, ಆನು ಓದುತ್ತಾ ಇಪ್ಪ ವಿಷಯದ ಬಗ್ಗೆ ಬರೆತ್ತೆ.. ಅದುವೇ ನಮ್ಮ ಆಹಾರ ಪದ್ದತಿ
ಆಹಾರ ನಮ್ಮ ಜೀವನಕ್ಕೆ ಬೇಕಪ್ಪ ಮುಖ್ಯ ಅಂಶ.
ನಾವು ಆಹಾರ ತೆಕ್ಕೊಂಬದಕ್ಕೆ ನವಗೆ ಕೆಲಸ ಮಾಡ್ಲೆ ಶಕ್ತಿ ಬಪ್ಪದು.. ಆದರೆ ನವಗೆ ನಮ್ಮ ಆಹಾರದ ಬಗ್ಗೆ ಎಷ್ಟು ಗೊಂತಿದ್ದು?ನಾವು ಎಷ್ಟು ಸಮರ್ಪಕವಾಗಿ ಆಹಾರ ಸೇವನೆ ಮಾಡ್ತು?
ನಮ್ಮ ಆಚಾರ್ಯ ಚರಕ ಹೇಳ್ತವು ”  ||] ಹೇಳಿದರೆ,
ಅನ್ನ (ಆಹಾರ) ಹೇಳ್ತದು ಜೀವಿಗಳ ಪ್ರಾಣ. ಅದರ ಅತಿಯಾಗಿ ಉಪಯೋಗುಸಿದರೆ(ಸೇವನೆ ಮಾದಿದರೆ) ಅದುವೇ ವಿಷವಾಗಿ ಪ್ರಾಣ ನಾಶ ಮಾಡ್ತು, ಅದೇ ಯುಕ್ತಿ ಉಪಯೋಗುಸಿ ಆಹಾರ ಸೇವನೆ ಮಾಡಿದರೆ ಅದುವೇ ರಸಾಯನ (ಅಮೃತ) ಆವ್ತು..
ಹಾಂಗಾರೆ ನಾವು ದಿನಾಗುಳು ತಿಂಬ ಆಹಾರ ಹೇಂಗಿರೆಕ್ಕು? ಇದರ ಬಗ್ಗೆ ರಜ ತಿಳ್ಕೊಂಬ….
ನಮ್ಮ ದೇಹಕ್ಕೆ ಬೇಕಪ್ಪ ಪೌಷ್ಟಿಕಾಂಶದ ಸಮತೋಲನವ ಕಾಪಾಡ್ಲೆ,ತ್ರಿಕೋಣಾಕೃತಿಲಿ ಆಹಾರದ ಪಟ್ಟಿ ಇದ್ದು ಇದರ “ಫುಡ್ ಪಿರಮಿಡ್” ಹೇಳ್ತವು..

Food Pyramid
ಫುಡ್ ಪಿರಮಿಡ್

ತ್ರಿಕೋಣ ಕೆಳಂದ ಮೇಲೆ ಹೋದ ಹಾಂಗೆ ಹೇಂಗೆ ಸಪೂರ ಆವುತ್ತೋ ಹಾಂಗೇ ಆಹಾರದ ತ್ರಿಕೋಣಲ್ಲಿ ಕೆಳಂದ ಮೇಲೆ ಹೋದ ಹಾಂಗೆ ಯಾವ ಆಹಾರ ಹೇಳಿದ್ದವೋ, ಅದರ ಕಮ್ಮಿ ಕಮ್ಮಿ ತೆಕ್ಕೊಳ್ಳೆಕ್ಕು..
ಹೆಚ್ಚು ಪ್ರಮಾಣಲ್ಲಿ ತೆಕ್ಕೊಳ್ಳೆಕ್ಕಾದ ಆಹಾರ ಹೇಳಿದರೆ-ಅಶನ, ಗೋಧಿ, ರಾಗಿ, ಜೋಳ, ಧವಸ ಧಾನ್ಯಂಗೊ,ಹಣ್ಣುಗೊ, ಸೊಪ್ಪು-ತರಕಾರಿಗೊ..
ಹಿತ-ಮಿತಲ್ಲಿ ತೆಕ್ಕೊಳ್ಳೆಕ್ಕಾದ ಆಹಾರಂಗೊ-ಹಾಲು-ಹಾಲಿಂದ ಮಾಡಿದ ಬೇರೆ ಬಗೆಗೊ (ಪನೀರ್,ಮೊಸರು…) , ಮೊಟ್ಟೆ-ಮಾಂಸ (ನಮ್ಮಬೈಲಿಲಿ ತಿಂಬೋರು ಇರ ಹೇಳಿ ಗ್ರೇಶುತ್ತೆ) 😉 ) ಬೇಳೆ ಕಾಳುಗ ,ಗೋಡಂಬಿ,ಬಾದಾಮಿ…
ತುಂಬಾ ಕಡಮ್ಮೆ ತೆಕ್ಕೊಳ್ಳೆಕಾದ ಆಹಾರಂಗೊ ಹೇಳಿದರೆ- ಬೆಣ್ಣೆ, ತುಪ್ಪ, ಎಣ್ಣೆ, ಸೀವಿನ ತಿಂಡಿಗೊ, ಐಸ್ಕ್ರೀಮ್, ಈಗಣ ಮಕ್ಕೊಗೆ ಇಷ್ಟ ಅಪ್ಪ ಚೀಸ್, ಮಯೋನೇಸ್, ಕುರು-ಕುರು ತಿಂಡಿಗೊ….
ಆಹಾರ ತಜ್ಞರು ನಮ್ಮ ಆಹಾರವ ೫ ಗುಂಪುಗಳಾಗಿ ವಿಭಾಗ ಮಾಡಿದ್ದವು …
ಅದುವೇ-

೧. ಶರ್ಕರಪಿಷ್ಟ(Carbohygrates)
೨. ಪ್ರೋಟೀನ್
೩. ಕೊಬ್ಬು(Fat)
೪. ನೀರು
೫. ವಿಟಮಿನ್ -ಖನಿಜಾಂಶ(Minerals)

ಇವುಗಳಲ್ಲಿ ಸುರುವಣ ೪ ಹೆಚ್ಚಿನ ಪ್ರಮಾಣಲ್ಲಿ ಶರೀರಕ್ಕೆ ಬೇಕು,ಅಕೇರಿಯಾಣದ್ದು ಮೇಲಾಣಶ್ಟು ಬೇಕಾವುತ್ತಿಲ್ಲೆ ಆದರೆ ಅದುದೆ ಮುಖ್ಯವಾದ್ದೇ… ಈ ಗುಂಪಿಲ್ಲಿಪ್ಪ ಆಹಾರಂಗೊ ಯಾವುದು ಅಂಬಗ? ಅವು ಶರೀರಲ್ಲಿ ಎಂತ ಎಲ್ಲ ಕೆಲಸ ಮಾಡ್ತವು? ಹೇಳಿ ನಿಂಗೊ ಎಲ್ಲರೂ ಆಲೋಚನೆ ಮಾಡ್ಲೆ ಸುರು ಮಾಡಿದಿ ಹೇಳಿ ಕಾಣ್ತು.. ಅದಕ್ಕೆ ಉತ್ತರ ಇಲ್ಲಿದ್ದು….
೧.ಶರ್ಕರಪಿಷ್ಟ(ಕಾರ್ಬೋಹೈಡ್ರೇಟ್)–
ನಾವು ದಿನಾಗುಳೂ ಅತಿ ಹೆಚ್ಚು ತೆಕ್ಕೊಂಬ ಆಹಾರ ಹೇಳಿದರೆ ಅಶನ,ಚಪಾತಿ,ರೊಟ್ಟಿಲಿ ಶರ್ಕರ ಪಿಷ್ಟ ಹೆಚ್ಚಿನ ಪ್ರಮಾಣಲ್ಲಿ ಇರ್ತು.
ಇದಲ್ಲದ್ದೆ

ಶರ್ಕರಪಿಷ್ಟ
ಶರ್ಕರಪಿಷ್ಟ

  • ಅಕ್ಕಿ,ಗೋಧಿ,ರಾಗಿ,ಜೋಳಂದ ಮಾಡಿದ ತಿಂಡಿಗೊ-ದೋಸೆ,ರೊಟ್ಟಿ,ಉಂಡೆಗೊ.. ( ಹೆಚ್ಚಿಗೆ ವಿವರಕ್ಕೆ ಬಂಡಾಡಿ ಅಜ್ಜಿಯತ್ರೆ ಕೇಳಿ,ಎನಗೆ ಕೆಲವು ಮಾತ್ರ ಗೊಂತಿಪ್ಪದು 😉 )
  • ಹಣ್ಣುಗೊ-ಬಾಳೆಹಣ್ಣು,ಮಾವಿನಹಣ್ಣು,ದ್ರಾಕ್ಷೆ,ಪರಂಗಿಚೆಕ್ಕೆ,ಚಿಕ್ಕು;
  • ತರಕಾರಿಗೊ-ಬಟಾಟೆ,ಗೆಣಂಗು,ಬೀಟ್ರೂಟು,ಕೇನೆಗೆಂಡೆ,ಮುಂಡಿ;
  • ಬೇಳೆ-ಕಾಳುಗೊ, ಹಾಲು,ಜೇನು,ಸಕ್ಕರೆ,ಬೆಲ್ಲ.. ಹೀಂಗೆ ಎಲ್ಲಾ ಆಹಾರಂಗಳಲ್ಲೂ ಶರ್ಕರಪಿಷ್ಟ ಇದ್ದು..

ಪ್ರಯೋಜನಂಗೊ:

  • ಇದು ನಮ್ಮ ಮೈಗೆ ಕೆಲಸ ಮಾಡ್ಲೆ ಶಕ್ತಿ ಕೊಡ್ತು..ಈ ಶಕ್ತಿಯ ಅಳವಲೆ ಒಂದು ಮಾಪಕ ಇದ್ದು ಅದಕ್ಕೆ “ಕ್ಯಾಲರಿ” ಹೇಳ್ತವು.ಒಂದು ಗ್ರಾಮ್ ಶರ್ಕರಪಿಷ್ಟ ೪ ಕ್ಯಾಲರಿ ಅಪ್ಪಷ್ಟು ಶಕ್ತಿ ಕೊಡ್ತು..
  • ನಮ್ಮ ಶರೀರಲ್ಲಿ ಶರ್ಕರಪಿಷ್ಟದ ಪ್ರಮಾಣ ಕಮ್ಮಿ ಇಪ್ಪಗ,ಪ್ರೋಟೀನ್ ಶಕ್ತಿ ಆಗಿ ಮಾರ್ಪಾಡು ಆವುತ್ತು..ಹೀಂಗೆ ಅಪ್ಪದರ ಶರ್ಕರಪಿಷ್ಟ ತಡೆತ್ತು.. ಪ್ರೋಟೀನ್ ಹೇಳ್ತದು ಶರೀರದ ಬೆಳವಣಿಗೆಗೆ ಅಗತ್ಯ,ಅದು ಶಕ್ತಿ ಕೊಡ್ಲೆ ಉಪಯೋಗ ಆದರೆ ಶರೀರದ ಬೆಳವಣಿಗೆ ಕಮ್ಮಿ ಆವುತ್ತು..
  • ಕೊಬ್ಬಿನ ಅಂಶ ಸರಿಯಾಗಿ ಉಪಯೋಗ ಅಪ್ಪಲೆ ಸಹಾಯ ಮಾಡ್ತು..
  • ಸಕ್ಕರೆ,ಬೆಲ್ಲ,ಜೇನು.. ಬಾಯಿಗೆ ರುಚಿ ಕೊಡ್ತು
  • ಹಣ್ಣು-ತರಕಾರಿಗಳಲ್ಲಿ ನಾರಿನ ಅಂಶ ಹೆಚ್ಚಿರ್ತು,ಇದು ಆಹಾರ ಸರಿಯಾಗಿ ಕರುಳಿಲಿ ಮುಂದೆ ಹೋಪಲೆ ಸಹಾಯ ಮಾಡ್ತು ಹಾಂಗೆ ಮಲಬದ್ದತೆ ಕಮ್ಮಿ ಮಾಡ್ತು..

ತೊಂದರೆಗೊ:

  • ಶರ್ಕರಪಿಷ್ಟ ತೆಕ್ಕೊಂಬದು ಕಮ್ಮಿ ಆದರೆ ಕೆಲಸ ಮಾಡ್ಲೆ ಶಕ್ತಿ ಇರ್ತಿಲ್ಲೆ,ಶರೀರದ ತೂಕ ತುಂಬಾ ಕಮ್ಮಿ ಆವುತ್ತು,ಬಚ್ಚುತ್ತು…
  • ಅದೇ ಶರ್ಕರಪಿಷ್ಟ ತೆಕ್ಕೊಂಬದು ಹೆಚ್ಚಾದರೆ ಮೈ ತೂಕ ತುಂಬಾ ಜಾಸ್ತಿ ಆಗಿ ಸ್ಥೂಲದೇಹ ಆವುತ್ತು..cheap raybans sunglasses ಇದರಂದ ಮುಂದೆ ಸಕ್ಕರೆ ಖಾಯಿಲೆ,ಹೆಚ್ಚಿನ ನೆತ್ತರಿನ ಒತ್ತಡ(ಬಿ.ಪಿ),ಗಂಟು ಬೇನೆ(ಆರ್ತೈಟಿಸ್) ಹೀಂಗೆ ತೊಂದರೆಗೊ ಆವುತ್ತು..

೨.ಪ್ರೋಟೀನ್:
ನಮ್ಮ ಶರೀರದ ಜೀವಕೋಶಂಗ ಸರಿಯಾಗಿ ಕೆಲಸ ಮಾಡೆಕ್ಕಾರೆ ಪ್ರೋಟೀನ್ ಮುಖ್ಯವಾಗಿ ಬೇಕು.
ನೆಟ್ಟಿಕಾಯಿಲಿ,ಪ್ರಾಣಿಗಳಂದ ಸಿಕ್ಕುವ ಆಹಾರ ಎರಡರಲ್ಲೂ ಪ್ರೋಟೀನ್ ಇರ್ತು.ನೆಟ್ಟಿಕಾಯಿಗಳಲ್ಲಿಪ್ಪ ಪ್ರೋಟೀನಿನ ಪ್ರಮಾಣಂದ ಪ್ರಾಣಿಗಳಂದ ಸಿಕ್ಕುವ ಆಹಾರಲ್ಲಿಪ್ಪ ಪ್ರೋಟೀನ್ ಪ್ರಮಾಣ ಜಾಸ್ತಿ ಇರ್ತು.
ಹಾಂಗಾರೆ ಇನ್ನು ಎಂಗೊ ಮೊಟ್ಟೆ-ಮಾಂಸ ತಿನ್ನೆಕ್ಕು ಹೇಳ್ತಾ ಇದ್ದಿರಾ ಡಾಗುಟ್ರಕ್ಕಾ ಹೇಳಿ ನೆಗೆಗಾರ ಅಣ್ಣನಾಂಗಿಪ್ಪೋರು ಕೇಳುಗು.. 🙂 ಹಾಂಗೆಂತ ಇಲ್ಲೆ.
ಇದಾ ಪ್ರೋಟೀನ್ ಇಪ್ಪ ಆಹಾರಂಗಳ ಪಟ್ಟಿ ಕೊಡ್ತೆ ನಿಂಗೊಗೆಲ್ಲಾ…
ಪ್ರೋಟೀನ್ ಇಪ್ಪ ಪ್ರಾಣಿಗಳಂದ ಸಿಕ್ಕುವ ಆಹಾರಂಗೊ:

ಹಾಲು-ಮೊಟ್ಟೆ
ಹಾಲು-ಮೊಟ್ಟೆ

ಹಾಲು,ಮೊಸರು,ಮೊಟ್ಟೆ,ಮಾಂಸ,ಮೀನು,ಕೋಳಿ.. ಹೀಂಗೇ… ಇದರಲ್ಲಿ ಸಿಕ್ಕುವ ಪ್ರೋಟೀನಿನ ಶರೀರ ಪೂರ್ತಿ ಆಗಿ ಹೀರಿಗೊಳ್ತು..
ಪ್ರೋಟೀನ್ಇಪ್ಪ ನೆಟ್ಟಿಕಾಯಿಗೊ:
ಬೇಳೆಕಾಳುಗೊ(ತೊಗರಿಬೇಳೆ,ಹಸರುಬೇಳೆ,ಕಡ್ಲೆಬೇಳೆ,ಉದ್ದಿನಬೇಳೆ,ಕುಡು, ಬಟಾಣಿ..), ಬೀಜಂಗೊ(ಗೇರುಬೀಜ,ಬಾದಾಮಿ,ನೆಲಕಡ್ಲೆ..) ಇದರಲ್ಲಿ ತುಂಬಾ ಪ್ರಮಾಣಲ್ಲಿ ಪ್ರೋಟೀನ್ ಇದ್ದು. ಗೋಧಿ,ಅಕ್ಕಿಲಿಯೂ ರಜ ಪ್ರೋಟೀನ್ ಇರ್ತು.
ನೆಟ್ಟಿಕಾಯಿಗಳಲ್ಲಿ ಸಿಕ್ಕುವ ಪ್ರೋಟೀನಿನ ಶರೀರ ಕಮ್ಮಿ ಹೀರುದು.
ಹಾಂಗಾಗಿ ನಮ್ಮ ಅಡಿಗೆಲಿ ಪ್ರೋಟೀನ್ ಒಳ್ಳೆ ಪ್ರಮಾಣಲ್ಲಿ ಸಿಕ್ಕೆಕ್ಕು ಹೇಳಿ ಆದರೆ ಧವಸ-ಧಾನ್ಯದೊಟ್ಟಿಂಗೆ ಬೇಳೆಕಾಳುಗಳ ಹಾಕಿ ಅಡಿಗೆ ಮಾಡೆಕ್ಕು.
ಉದಾಹರಣೆಗೆ-ಬಿಸಿಬೇಳೆ ಬಾತ್, ಪೊಂಗಲ್, ಅಶನ-ಬೇಳೆಸಾರು, ಚಪಾತಿ-ದಾಲ್, ಇಡ್ಲಿ,ಉದ್ದಿನದೋಸೆ, ಹಾಲು ಹಾಕಿ ಮಾಡುವ ಅಕ್ಕಿ ಪಾಯಸ, ಸೇಮೆ ಪಾಯಸ,.. 🙂
ಪ್ರಯೋಜನಂಗೊ:

  • ಶರೀರದ ಜೀವಕೋಶಂಗಳ ಬೆಳವಣಿಗೆ,ಕಾಪಾಡ್ಲೆ ಪ್ರೋಟೀನ್ ಬೇಕೇಬೇಕು..ಅದಕ್ಕೆ ಬೆಳವ ಮಕ್ಕೊಗೆ,ಬಸರಿಯಕ್ಕೊಗೆ ಪ್ರೋಟೀನ್ ತುಂಬಾ ಮುಖ್ಯ..
  • ಪ್ರೋಟೀನ್ ಶರೀರಲ್ಲಿ ಕಿಣ್ವದ ರೂಪಲ್ಲಿ,ಹೋರ್ಮೋನ್ ರೂಪಲ್ಲಿದೇ ಇದ್ದುಗೊಂಡು ಶರೀರದ ಕೆಲಸಂಗಳ ಸಸೂತ್ರವಾಗಿ ಮಾಡ್ತು..
  • ಮೊದಲೇ ಹೇಳಿದ ಹಾಂಗೆ,ಶರ್ಕರ ಪಿಷ್ಟದ ಕೊರತೆ ಬಂದರೆ ಪ್ರೋಟೀನ್ ಶಕ್ತಿ ಆಗಿ ಮಾರ್ಪಾಡು ಆವುತ್ತು.. ಒಂದು ಗ್ರಾಮ್ ಪ್ರೋಟೀನ್ ೪ ಕ್ಯಾಲರಿ ಶಕ್ತಿ ಕೊಡ್ತು..

ತೊಂದರೆಗೊ:

ಧವಸ ಧಾನ್ಯಂಗೊ
ಧವಸ ಧಾನ್ಯಂಗೊ

  • ಸಣ್ಣ ಮಕ್ಕಳಲ್ಲಿ ಕ್ವಷಿಯೋರ್ಕರ್ ಹೇಳುವ ತೊಂದರೆ ಕಾಣ್ತು.ಇದರ ಲಕ್ಷಣಂಗೊ-ಬೆಳವಣಿಗೆ ಕಮ್ಮಿ ಆವುತ್ತು,ಮೈಲಿ ನೀರು ತುಂಬಿ ಬಾಪು ಬತ್ತು,ಚರ್ಮ,ಕೂದಲಿಲಿ ಬದಲಾವಣೆಗೊ…
  • ಬಸರಿಯಕ್ಕಳಲ್ಲಿ ಗರ್ಭಲ್ಲಿಪ್ಪ ಮಕ್ಕಳ ಬೆಳವಣಿಗೆ ಕಮ್ಮಿ ಆವುತ್ತು..
  • ಎದೆ ಹಾಲು ಕುಡಿಶುವ ಅಮ್ಮಂದ್ರಿಂಗೆ ಹಾಲು ಕಮ್ಮಿ ಆವುತ್ತು…

೩.ಕೊಬ್ಬಿನಂಶ:
ಆಹಾರಲ್ಲಿಪ್ಪ ಕೊಬ್ಬಿನಂಶ ಶರೀರಕ್ಕೆ ಶರ್ಕರಪಿಷ್ಟಂದ ಅಥವಾ ಪ್ರೋಟಿನಿಂದ ಸಿಕ್ಕುವ ಶಕ್ತಿಯ ಎರಡುಪಟ್ಟು ಶಕ್ತಿ ಕೊಡ್ತು.. ಒಂದು ಗ್ರಾಮ್ ಕೊಬ್ಬು ೯ ಕ್ಯಾಲರಿ ಕೊಡ್ತು..
ಎಲ್ಲಾ ನಮೂನೆಯ ಎಣ್ಣೆಗೊ,ತುಪ್ಪ,ಬೆಣ್ಣೆ,ಹಾಲು,ಬೀಜಂಗ,ಮಾಂಸ.. ಎಲ್ಲವೂ ಕೊಬ್ಬು ಇಪ್ಪ ಆಹಾರಂಗೊ..
ಪ್ರಯೋಜನಂಗೊ:

  • ಕೊಬ್ಬಿನಂಶ ಉಪಯೋಗುಸಿಗೊಂಡು ಕರಗುವ ವಿಟಮಿನ್ ನ ಹೀರಿಗೊಂಬಲೆ ಸಹಾಯ ಮಾಡ್ತು..
  • ನಮ್ಮ ಮೈ ಬೆಶಿ ಇಪ್ಪಾಂಗೆ ಚರ್ಮದ ಕೆಳ ಒಂದು ಪದರ ನಿರ್ಮಾಣ ಮಾಡ್ತು..
  • ಶರೀರದ ಒಳ ಇಪ್ಪ ಅಂಗಾಂಗೊಕ್ಕೆ ತಲೆದಿಂಬಿನ ಹಾಂಗೆ ಸಹಾಯ ಮಾಡ್ತು..ಎಂತಾರು ಅಫಘಾತ ಆದಪ್ಪಗ ಈ ಅಂಗಾಂಗಗಳ ಪೆಟ್ಟಾಗದ್ದಾಂಗೆ ಕಾಪಾಡ್ತು..
  • ಕೆಲವು ದಿನ ಹಿಂದೆಷ್ಟೇ ಅಜ್ಜಿ ಮಳೆಗಾಲದ ಕುರುಕುರು ತಿಂಡಿ ಎಣ್ಣೆಲಿ ಹೊರುದು ಕೊಟ್ಟದರ ನಾವೆಲ್ಲಾ ತಿಂದಿದಿದಾ!!! ರುಚಿ ಇತ್ತಲ್ಲದಾ? ಹಾ.. ಕೊಬ್ಬಿನಂಶ ಆಹಾರಕ್ಕೆ ರುಚಿ ಕೊಡ್ತು..
  • ತುಪ್ಪಲ್ಲಿ/ಎಣ್ಣೆಲಿ ಮಾಡಿದ ತಿಂಡಿ ತಿಂದ ಕೂಡ್ಲೆ ಹೊಟ್ಟೆ ತುಂಬಿದ ಹಾಂಗೆ ಆವುತ್ತಿದಾ.. ಅಪ್ಪು ಕೊಬ್ಬಿನಂಶ ಹೊಟ್ಟೆ ತುಂಬಿ ಸಂತೃಪ್ತಿಯ ಅನುಭವ ಕೊಡ್ತು..

ತೊಂದರೆಗೊ:

  • ಕೊಬ್ಬಿನಂಶ ಆಹಾರಲ್ಲಿ ಕಮ್ಮಿ ಆದರೆ ಶಕ್ತಿಯ ಕೊರತೆ,ಭಾರ ಕಮ್ಮಿ ಅಪ್ಪದು,ಬಚ್ಚುದು,ಕೆಲಸ ಮಾಡ್ಲೆ ಯೆಡಿಯದ್ದಿಪ್ಪದು ಎಲ್ಲ ಆವುತ್ತು.. ಮುಖ್ಯವಾಗಿ ಕೊಬ್ಬಿನಂಶ ಉಪಯೋಗ್ಸಿಗೊಂಡು ಕರಗುವ ವಿಟಮಿನಿನ ಹೀರುವಿಕೆ ಆವುತ್ತಿಲ್ಲೆ.. ವಿಟಮಿನ್ ಕೊರತೆ ಬತ್ತು..
  • ಅತಿ ಹೆಚ್ಚು ಕೊಬ್ಬಿನಂಶ ತೆಕ್ಕೊಂಡರೆ ಮೈಲಿ ಬೊಜ್ಜು ಜಾಸ್ತಿ ಆವುತ್ತು..

೪.ನೀರು:
ಇದರ ಬಗ್ಗೆ ಬೈಲಿನೋರಿಂಗೆ ಈಗಾಗಲೇ ಒಳ್ಳೆ ಮಾಹಿತಿ ಸಿಕ್ಕಿದ್ದು..
ಹಾಂಗಾಗಿ ಆನು ಪುನಾ ಅದನ್ನೇ ಹೇಳುಲೆ ಹೋವುತ್ತಿಲ್ಲೆ.. ದಿನಕ್ಕೆ ೨-೩ಲೀಟರ್ ನೀರು ಅಗತ್ಯ..
ಇದು ಶರೀರದ ಉಷ್ಣತೆಯ ಕಾಪಾಡ್ತು, ಎಲ್ಲಾ ಆಹಾರ ಕರಗುಲೆ ಸಹಾಯ ಮಾಡ್ತು ಹಾಂಗೇ ತ್ಯಾಜ್ಯಂಗಳ ಹೆರ ಹಾಕುಲೂ ಸಹಾಯ ಮಾಡ್ತು…
ಇವಿಷ್ಟು ಶರೀರಕ್ಕೆ ಬೇಕಪ್ಪ ಅತಿ ಮುಖ್ಯವಾದ ಆಹಾರದ ಅಂಶಂಗೊ..
ವಿಟಮಿನಿಲಿ ಎ, ಡಿ, ಇ, ಕೆ, ಬಿ, ಸಿ ಹೇಳಿ ಬೇರೆ ಬೇರೆ ನಮೂನಗೊ ಇದ್ದು..
ಹಾಂಗೇ ಖನಿಜಂಗಳೂ ಸುಮಾರಿದ್ದು.. ಹಾಂಗಾಗಿ ಇನ್ನಾಣ ಸರ್ತಿ ವಿಟಮಿನ್-ಖನಿಜಾಂಶಂಗೊ ಯಾವುದು,ಯಾವ ಆಹಾರಲ್ಲಿ ಇರ್ತು, ಉಪಯೋಗಂಗೊ, ತೊಂದರೆಗೊ ಎಲ್ಲಾ ಬರೆತ್ತೆ…
ಆಹಾರದ ಬಗ್ಗೆ ನಿಂಗಳ ವಿಚಾರ ಧಾರೆಗಳೂ ಹರಿದು ಬರಲಿ…
ನಮ್ಮಲ್ಲಿಪ್ಪ ಜ್ಞಾನವ ಹಂಚಿಗೊಂಬ, ಹೆಚ್ಚುಸಿಗೊಂಬ..
ಎಂತ ಹೇಳ್ತಿ?
ಒಪ್ಪ:ಊಟ ಬಲ್ಲವನಿಗೆ ರೋಗವಿಲ್ಲ,ಮಾತು ಬಲ್ಲವನಿಗೆ ಜಗಳವಿಲ್ಲ’ ಹೇಳ್ತ ಗಾದೆ ನವಗೆಲ್ಲಾ ಗೊಂತಿದ್ದು..
ನಾವೆಲ್ಲಾ ಮಾತು ಬಲ್ಲವರು(ಅದು ಎಲ್ಲರ ಒಪ್ಪಂಗಳ ನೋಡಿದರೆ ಅರ್ಥ ಆವುತ್ತು 😉 ) ಇನ್ನು ನಮ್ಮ ಊಟವನ್ನೂ ಬಲ್ಲವರಾಗಿ ಜಗಳ-ರೋಗಗಳಂದ ದೂರ ಒಳಿವ…
ಹರೇ ರಾಮ…

33 thoughts on “ನಾವು-ನಮ್ಮ ಆಹಾರ

  1. ಡಾಗುಟ್ರತ್ತೆ.. great start..

  2. ಊಟಕ್ಕೆ ಮೊದಲು ಓದುಲೆ ಕೂದೆ….ತಿ೦ಡಿ/ಆಹಾರ ಪದಾರ್ಥಂಗಳ ಹೆಸರುಗ ಓದಿಗೊಂಡು ಹಾಂಗೆ ನಿಂಗಳ ಲೇಖನದ ವಿಚಾರಂಗ ಎನ್ನ ತಲಗೆ ಹೋಯಿದೇ ಇಲ್ಲೆ. ..ಅಡುಗೆಯ ಮನೆಯ ಹೊಡೆನ್ಗೆ ಗಮನವಿತ್ತು..! ಮತ್ತೆ ಪುನ: ಸುರುವಿಂದ ಓದಿ ಮುಗಿಸಿದೆ.. ಮನಸ್ಸಿಲಿ ಗ್ರಹಿಸುವ ವಿಚಾರಕ್ಕೆ ಹೆಚ್ಚು ಮಡಿ ಬೇಡ ಅಲ್ದಾ ..? ನಿಂಗಳ ಲೇಖನ ಸ್ವಾದಿಷ್ಟವಾಗಿ ಇಪ್ಪದು , ಮನಸ್ಸಿಗೆ ಒಗ್ಗುವ೦ತದ್ದು, ಆರೋಗ್ಯವ ವೃಧ್ಧಿಸುವ೦ತದ್ದು ವಿಚಾರಂದ ಕೂಡಿದ್ದು . ಧನ್ಯವಾದ ಸೌಮ್ಯಕ್ಕಾ …..

  3. ನಾವೆಲ್ಲಾ ಆಹಾರದ ಬಗ್ಗೆ ತಿಳ್ಕೊಳ್ಳೆಕ್ಕಪ್ಪ ಅಗತ್ಯ ಮಾಹಿತಿಗಳ ಮಾತ್ರ ಆನು ತಿಳಿಶಿದ್ದು..ನಾವು ತೆಕ್ಕೊಂಬ ಯಾವ ಆಹಾರಲ್ಲಿ ಎಂತ ಎಲ್ಲಾ ಇದ್ದು ಹೇಳಿ ಬೈಲಿನೋರಿಂಗೆ ಮೂಲಭೂತವಾದ ಮಾಹಿತಿ ಸಿಕ್ಕೆಕ್ಕು ಹೇಳುವ ಉದ್ದೇಶಂದ ಆನು ಈ ಲೇಖನ ಬರದ್ದು.. ವಿವರವಾಗಿ,ಆಳವಾಗಿ ವಿಮರ್ಶೆ ಮಾಡ್ತರೆ ತುಂಬಾ ವಿಷಯಂಗ ಇದ್ದು.. 🙂

  4. Good artilce.. worth reading
    Let me try to Give explanation for it..
    ೨. ಪರಂಗಿ ಚೆಕ್ಕೆ, ಪಪ್ಪಾಯಿ,ಆಪಲ್ಲು – ಈ ಮೂರು ಹಣ್ಣುಗಳ ಝೀರೋ ಕ್ಯಾಲೋರಿ ಫುಡ್ ಹೇಳುತ್ತವು. ಸರಿಯೋ? ಹಂಗಾದರೆ ಈ ಮೂರು ಹಣ್ಣುಗಳ ತಿಂದರೆ ಎಂತ ಪ್ರಯೋಜನ?
    It is said that fruits and vegetables are good for Health. But when we compare each other vegetables are Better than Fruits.
    The end Products of Fruit metabolism is “URIC ACID”.. And This uric acid is culprit for many metabolic syndromes (For eg Syndrome X, syndrome Z etc).. so overeating of fruits may lead to Metabolic syndromes.

    1. ಅಪ್ಪು ಪ್ರದೀಪ್ ಅಣ್ಣ,ನಿಂಗೊ ಹೇಳಿದ್ದು ಸತ್ಯ.. 🙂 ಧನ್ಯವಾದ..

    2. ಹಣ್ಣು ಹೆಚ್ಚು ತಿಂದು ಯುರಿಕ್ ಆಸಿಡ್ ಜಾಸ್ತಿ ಆವುತ್ತು ಹೇಳಿ ಇಲ್ಲೆ.ಕೆಲವೇ ಹಣ್ಣುಗಳಲ್ಲಿ ಈ ಅಂಶ ಹೆಚ್ಚು ಇಪ್ಪದು.ಫ್ರಕ್ಟೊಸ್ ಅಖೆರಿಗೆ ಯುರಿಕ್ ಆಸಿಡ್ ಆದರೂ ನಮ್ಮ ಶರೀರಕ್ಕೆ ಅಷ್ಟು ಬೇಕಾವುತ್ತು.ಧಾನ್ಯ ಹೆಚ್ಚು ತಿಂದರೆ ಯುರಿಕ್ ಆಸಿಡ್ ಜಾಸ್ತಿ ಅಪ್ಪಲೇ ಸಾಧ್ಯ,ಹಾಂಗೆ ಹೇಳಿ ತಿನ್ನದ್ದೆ ಇಪ್ಪ ಅಗತ್ಯ ಏನೂ ಕಾಣ್ತಿಲ್ಲೆ.ಮಾಂಸ ಮತ್ತೆ ಮೀನು ತಿಮ್ಬವು ರಜಾ ಯೋಚನೆ ಮಾಡೆಕ್ಕಾದ ಅಂಶ ಇದ್ದು.ಅಂತೂ ಇಷ್ಟು ಮಾಂತ್ರ ನಿಜ,ಹಿತ ಮಿತ,ಇದು ನಮ್ಮ ಮಂತ್ರ ಆಯೆಕ್ಕು.

    3. ಯುರಿಕ್ ಆಸಿಡ್ ಕಮ್ಮಿ ಆದರೂ ಹೆಚ್ಚಾದರೂ ತೊಂದರೆ ಇದ್ದು.ನಮ್ಮ ಹವ್ಯಕ ಆಹಾರಲ್ಲಿ ಹಾನ್ಗಿಪ್ಪ ಅಂಶ ಇಲ್ಲೇ,ಉದ್ದಿನ ಬೇಳೆ ಬಿಟ್ಟು.
      ನಮ್ಮ ದೇಶದ ಹಣ್ಣು ಹಾನ್ಗಿಪ್ಪದು ಯಾವದೂ ಇಲ್ಲೇ.ತರಕಾರಿಗೋ ಕೆಲವು ಇದ್ದು.ಅದರ ಸಮಸ್ಯೆ ಇಪ್ಪಗ ಡಾಕ್ಟ್ರು ವಿವರುಸಿ ಹೇಳುಗು.ಎಲ್ಲೊರೂ ತಲೆ ಬೆಶಿ ಮಾಡುವ ಅಗತ್ಯ ಇಲ್ಲೆ.
      ಅದಲ್ಲದ್ದೆ ಹೀಂಗಿಪ್ಪ ವಿಷಯ ಇಲ್ಲಿ ಚರ್ಚೆ ಅಥವಾ ವಿಮರ್ಶೆ ಮಾಡುವ ಸಾಮಾನ್ಯ ಸಂಗತಿ ಅಲ್ಲ ಹೇಳಿ ಎನ್ನ ಅಭಿಪ್ರಾಯ.

  5. ನಮ್ಮಭಾಷೆಲಿ ಇಷ್ಟು ವಿವರಆಗಿ ವೈದ್ಯಕೀಯ ವಿಷಯ ನೋಡಿದ್ದು ಆನು ಇದೇ ಸುರು. ಧನ್ಯವಾದಂಗೊ….

  6. ಊಟ ಬಲ್ಲವಂಗೆ ರೋಗ ಇಲ್ಲೆ, ಹೇಳ್ತಲ್ಲಿಂದ ನಿಂಗಳ ಲೇಖನ ಒಳ್ಳೆ ಪ್ರಾರಂಭ. ಯಾವ ಯಾವ ಆಹಾರಲ್ಲಿ ಯಾವುದು ಇದ್ದು ಹೇಳುವ ವಿವರ ಕೊಟ್ಟದು ಒಳ್ಳೆ ಮಾಹಿತಿ. ಇದರ ಸದುಪಯೋಗ ಎಲ್ಲರಿಂಗು ಆಕ್ಕು ಹೇಳುವ ಆಶಯ ಎನ್ನದು.
    ತೂಕ ಕಮ್ಮಿ ಮಾಡ್ಲೆ, ಹೊಟ್ಟೆ ಇಳುಸಲೆ ಯಾವ ರೀತಿ ಆಹಾರ ಕ್ರಮ ಒಳ್ಳೆದು, ತಿಳಿಸುತ್ತೀರಾ? (complete diet calender).
    ಎನ್ನ ಹಾಂಗಿಪ್ಪವಕ್ಕೆ ಅನುಕೂಲ ಆಕ್ಕು 🙂

    1. ಖಂಡಿತ ತಿಳಿಶುತ್ತೆ ಅಪ್ಪಚ್ಚಿ.. ತೂಕ ಕಮ್ಮಿ ಆಯೆಕ್ಕಾರೆ ಎಲ್ಲರಿಂಗೆ ಗೊಂತಿಪ್ಪಾಂಗೆ ಕೊಬ್ಬಿನಂಶ ಇಪ್ಪ ಆಹಾರಂಗಳ ಕಮ್ಮಿ ತೆಕ್ಕೊಳ್ಳೆಕ್ಕು,ಶರ್ಕರಪಿಷ್ಟ ಇಪ್ಪ ಆಹಾರಂಗಳೂ ಅತಿಯಾಗಿ ತೆಕ್ಕೊಂಡರೆ ಅದು ಕೊಬ್ಬು ಆಗಿ ಮಾರ್ಪಾಡು ಆವುತ್ತು ಅದೂ ಸರಿಯಾಗಿ ವ್ಯಾಯಾಮ ಇಲ್ಲದ್ದರೆ… ಹಾಂಗಾಗಿ ನಾವು ದಿನನಿತ್ಯ ತೆಕ್ಕೊಂಬ ಆಹಾರಲ್ಲಿ ಹಸಿತರಕಾರಿಗಳ,ಮೊಳಕೆ ಬರ್ಸಿದ ಕಾಳುಗಳ,ನೀರಿನ ಹೆಚ್ಚು ತೆಕ್ಕೊಳ್ಳೆಕ್ಕು.. ಊಟಂದ ಕಾಲು ಗಂಟೆ ಮೊದಲು ತಿನ್ನೆಕ್ಕು,ಅಷ್ಟಪ್ಪಗ ಅಶನ/ಚಪಾತಿ ಕಮ್ಮಿ ತೆಕ್ಕೊಂಬಲೆ ಸಾಧ್ಯ ಆವುತ್ತು.. ತರಕಾರಿ ಕಾಳುಗಳಲ್ಲಿ ನವಗೆ ಬೆಕಪ್ಪಷ್ಟು ಶಕ್ತಿ ಸಿಕ್ಕುತ್ತು,ಹೊಟ್ಟೆದೆ ತುಂಬುತ್ತು.. ಇದರೊಟ್ಟಿಂಗೆ ವ್ಯಾಯಾಮ ಅತೀ ಅಗತ್ಯ,ಕಮ್ಮಿ ಕಮ್ಮಿ ಹೇಳಿದರೂ ದಿನಕ್ಕೆ ಅರ್ಧ ಗಂಟೆ.. 🙂 ಎಲ್ಲಾ ಒಟ್ಟಿಂಗೆ ಸೇರಿ ಅಪ್ಪಗ ತೂಕ ಕಮ್ಮಿ ಖಂಡಿತಾ ಆವುತ್ತು… ಇದರ ಬಗ್ಗೆ ವಿವರವಾಗಿ ಇನ್ನೊಂದರಿ ಖಂಡಿತಾ ಬರೆತ್ತೆ… 🙂 ಹೀಂಗೇ ನಿಂಗಳ ವಿಚಾರಂಗ ಇನ್ನೂ ಬರಲಿ.. ಖುಷಿ ಆತು ಅಪ್ಪಚ್ಚಿ… 🙂 ನಿಂಗಳ ಮಿಂಚಂಚೆ ವಿಳಾಸ ತಿಳಿಶಿ,ಕಳ್ಸಿ ಕೊಡ್ತೆ…

        1. ಮೊಳಕೆ ಬರ್ಸುಲೆ ಎಡಿವ ಎಲ್ಲಾ ಕಾಳುಗಳುದೇ ಒಳ್ಳೆದು.. ಉದಾಹರಣೆಗೆ-ಹಸರು,ಕಡ್ಲೆ(ಚನಾ),ಕುಡು,ಅಲಸಂಡೆ ಕಾಳು,ಬಟಾಣಿ, ಅವರೆ ಇತ್ಯಾದಿ..ಕೆಲವೆಲ್ಲಾ ಹಸಿ ತಿಂಬಲೆ ಕಷ್ಟ ಅಕ್ಕು ಕೆಲವರಿಂಗೆ..ಹಾಂಗಿಪ್ಪಗ ಅಡಿಗೆಗೆ ಮಾಡುವಗ ಮೊಳಕೆ ಬರ್ಸಿದ ಕಾಳುಗಳ ಹಾಕಿ ಅಡಿಗೆ ಮಾಡಿದರೆ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸಿಕ್ಕುತ್ತು… ಮೊಳಕೆ ಬರ್ಸಿದರೆ ಅವುಗಳಲ್ಲಿಪ್ಪ ಪ್ರೋಟೀನ್ ನ ಗುಣಮಟ್ಟ ಹೆಚ್ಚುತ್ತು,ಶರೀರಕ್ಕೆ ಹೀರಿಗೊಂಬಲೂ ಸುಲಭ ಆವುತ್ತು… 🙂

          1. { ಮೊಳಕೆ ಬರ್ಸುಲೆ ಎಡಿವ ಎಲ್ಲಾ ಕಾಳುಗಳುದೇ ಒಳ್ಳೆದು }
            ಶ್ರೀಅಕ್ಕ ಮನೆಯ ಚೆಂದಮಾಡ್ಳೆ ಹಸರಿನ ಮುಂಗೆ ಪ್ಲೇಟಿಲಿ ಹಾಕಿ ಮಡಗಿತ್ತಿದ್ದು, ಟೀಪಾಯಿಲಿ. 🙂
            ಕೊಳಚ್ಚಿಪ್ಪುಬಾವ° ಅದರ ಪ್ರೊಟೀನುಪ್ರೊಟೀನು ಹೇಳಿಗೊಂಡು ಆಸರಿಂಗೆ ತಪ್ಪಮೊದಲೇ ಕಾಲಿಮಾಡಿದನಡ…….!!! 🙁

      1. ಡಾಗುಟ್ರಕ್ಕ ನಿಂಗೊ ಶರ್ಮಪ್ಪಚ್ಚಿಗೆ ಕಳ್ಸುದರ ಗುರಿಕ್ಕಾರಂಗು ಕಳ್ಸಿ. ಅವು ಬೈಲಿಲಿ ಸಂಕೋಲೆ ಹಾಕಿ ನೇಲ್ಸುಗು..

        1. ಭಾವ,ಹಾಂಗೆ ಎಲ್ಲರಿಂಗೂ ಒಂದೇ ರೀತಿಯ ಆಹಾರದ ಪಟ್ಟಿ ಆವುತ್ತಿಲ್ಲೆ… ಆಹಾರದ ಪ್ರಮಾಣಂಗೊ ಪ್ರತಿ ಒಬ್ಬನ ಎತ್ತರ,ತೂಕ,ಯಾವ ರೀತಿಯ ಕೆಲಸ ಹೀಂಗೇ ಸುಮಾರು ವಿಚಾರಂಗಳ ತಿಳ್ಕೊಂಡು ಬೇರೆ ಬೇರೆ ಮಾಡೆಕ್ಕಾವುತ್ತು… 🙂

  7. ಸೌಮ್ಯ.., ಲಾಯಕ ಆಯಿದು ಬರದ್ದು.. ಪ್ರತಿಯೊಂದನ್ನೂ ಬೇಕಾದ ಹಾಂಗೆ ವಿವರಿಸಿದ್ದೆ…ಆಹಾರ ನಮ್ಮ ದೇಹಕ್ಕೆ ಅತಿ ಮುಖ್ಯ ಅಲ್ಲದಾ? ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟದು ಒಳ್ಳೇದಾತು.. ಬಹುಷಃ ಇನ್ನು ಬೈಲಿನೋರು ಎಲ್ಲೋರುದೆ ಅಡಿಗೆ ಮಾಡುವಾಗ, ಉಂಬಗ ಎಲ್ಲಾ, ಶರ್ಕರಪಿಷ್ಟವಾ, ಕೊಬ್ಬು, ಪ್ರೋಟೀನು ಹೇಳಿ ಎಂತ ತಿನ್ನುತ್ತವು ಹೇಳಿ ಗಮನಿಸುಗಾ ಹೇಳಿ ಅನಿಸಿತ್ತು.. ಇನ್ನುದೆ ಮಾಹಿತಿಗ ಬರಲಿ…

    1. ಧನ್ಯವಾದ ಅಕ್ಕ.. ಹಾಂಗೆ ಗಮನಿಸಿಗೊಂಡು ತಿಂದರೆ ತುಂಬಾ ಒಳ್ಳೆದು.. ನಾವು ಆಹಾರದ ಯಾವ ಭಾಗವ ಎಷ್ಟು ತೆಕ್ಕೊಳ್ತು ಹೇಳಿ ಅಂದಾಜಾವುತ್ತು.. ಯಾವುದಾದರೂ ಹೆಚ್ಚಾಗಿ ತೆಕ್ಕೊಳ್ತರೆ ಅದರ ಕಮ್ಮಿ ಮಾಡ್ಲೆ ಒಳ್ಳೆ ಅವಕಾಶ ಸಿಕ್ಕುತ್ತು,ಕಮ್ಮಿ ತೆಕ್ಕೊಳ್ತಾ ಇದ್ದರೆ ಹೆಚ್ಚುದೆ ಮಾಡಿಗೊಂಬಲಕ್ಕಿದಾ.. 😉

    1. ಧನ್ಯವಾದ ಮಾವ… ನಿಂಗೊಗೆ ಇಷ್ಟ ಆತಲ್ಲದಾ..ಅದೇ ಸಂತೋಷ… 🙂

  8. ಒಂದೆರಡು ಪ್ರಶ್ನೆಗೋ..
    ೧. ನಿಂಗೊ ಹೇಳಿದೆ ಪ್ರೋಟೀನ್ ಇಪ್ಪ ನೆಟ್ಟಿಕಾಯಿಗಳ ( ಬೆಲೆ ಕಾಳುಗೊ,ಬಟಾಟೆ) ಹೆಚ್ಚು ತಿಂದರೆ ಗೇಸು ಉತ್ಪತ್ತಿ ಆವುತ್ತದ ಬೈಲಿನವಕ್ಕೆ. ಇದು ಅಪ್ಪೋ ?ಇದಕ್ಕೆ ಪರಿಹಾರ?(ತಿನ್ನದ್ದೆ ಇಪ್ಪೋದು ಸುಲಭದ ದಾರಿ ಹೇಳಿ ಭಾವ ಹೇಳುತ್ತ.)
    ೨. ಪರಂಗಿ ಚೆಕ್ಕೆ, ಪಪ್ಪಾಯಿ,ಆಪಲ್ಲು – ಈ ಮೂರು ಹಣ್ಣುಗಳ ಝೀರೋ ಕ್ಯಾಲೋರಿ ಫುಡ್ ಹೇಳುತ್ತವು. ಸರಿಯೋ? ಹಂಗಾದರೆ ಈ ಮೂರು ಹಣ್ಣುಗಳ ತಿಂದರೆ ಎಂತ ಪ್ರಯೋಜನ?

    1. ನಿಂಗಳ ಪ್ರಶ್ನೆಗೊ ಎಲ್ಲರ ಮನಸ್ಸಿಲ್ಲಿದೆ ಬಪ್ಪಂತದೇ..
      ಕೆಲವರಿಂಗೆ ಗೇಸು ಉತ್ಪತ್ತಿ ಆದ ಹಾಂಗೆ ಅಪ್ಪದು ನಿಜ.. ಅದಕ್ಕೆ ನಮ್ಮ ಅಡಿಗೆಲಿ ನಾವು ಇಂಗು,ಜೀರಿಗೆ ಎಲ್ಲ ಉಪಯೋಗ ಮಾಡುದು.. ಇದರಂದ ಜೀರ್ಣ ಶಕ್ತಿ ಹೆಚ್ಚುತ್ತು,ಗೇಸು ಅಪ್ಪದು ಕಮ್ಮಿ ಅವುತ್ತು.. ಊಟದ ಅಕೇರಿಗೆ ಇಂಗು ಹಾಕಿದ ಮಜ್ಜಿಗೆ ಕೊಡುದು ಇದೇ ಕಾರಣಕ್ಕೆ… 🙂
      ಖಂಡಿತಾ ಅಲ್ಲ.. ಆ ಹಣ್ಣುಗೊ ಕ್ಯಾಲರಿ ಇಲ್ಲದ್ದ ಹಣ್ಣುಗೊ ಅಲ್ಲ… ಅದರಲ್ಲಿ ಬೇರೆ ಹಣ್ಣುಗೊಕ್ಕೆ ಹೋಲ್ಸಿ ಅಪ್ಪಗ ತುಂಬಾ ಕಮ್ಮಿ ಪ್ರಮಾಣದ ಕ್ಯಾಲರಿ ಇಪ್ಪದು.. ಕ್ಯಾಲರಿ ಇಲ್ಲದ್ದ ಆಹಾರವೇ ಇಲ್ಲೆ… ೧೦೦ಗ್ರಾಮ್ ಆಪಲ್ಲು ೫೯ಕ್ಯಾಲರಿ ,೧೦೦ಗ್ರಾಮ್ ಪಪ್ಪಾಯಿ ೩೨ಕ್ಯಾಲರಿ,೧೦೦ಗ್ರಾಮ್ ಪರಂಗಿ ಚೆಕ್ಕೆ ೪೬ ಕ್ಯಾಲರಿ ಕೊಡ್ತು… ಆದ ಕಾರಣ ಈ ಹಣ್ಣುಗಳ ರಜ ರಜ ತಿಂಬಗ ಅತೀ ಕಮ್ಮಿ ಕ್ಯಾಲರಿ ಸಿಕ್ಕುವ ಕಾರಣ ಅವುಗಳ ಝೀರೋ ಕ್ಯಾಲರಿ ಫುಡ್ ಹೇಳುದು… 🙂

      1. ಡಾಕುಟ್ರಕ್ಕಂಗೆ ಧನ್ಯವಾದ. ಒಳ್ಳೆ ಮಾಹಿತಿ. ಹೀಂಗೆ ಮುಂದುವರಿಸಿ,ಇಬ್ರು ದಾಕುಟ್ರಕ್ಕಂಗಳೂ..

        1. ಧನ್ಯವಾದ ಅಣ್ಣ,ನಿಂಗೊ ಎನ್ನ ಲೇಖನಕ್ಕೆ ಪೂರಕವಾದ ಮಾಹಿತಿ ಇಪ್ಪ ಸಂಕೋಲೆ ಕೊಟ್ಟಿದಿ.. 🙂

    2. { ತಿನ್ನದ್ದೆ ಇಪ್ಪೋದು ಸುಲಭದ ದಾರಿ ಹೇಳಿ ಭಾವ ಹೇಳುತ್ತ }
      ತಿನ್ನದ್ದೆ ಇಪ್ಪದಲ್ಲ, ಬಿಡದ್ದೆ ಇಪ್ಪದು ನಿಜವಾದ ಪರಿಹಾರ ಹೇಳಿ ಅಜ್ಜಕಾನಬಾವ° ಹೇಳ್ತ°!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×