- ರಕ್ಷಾ ಬಂಧನದ ದಿನ ಶಿಷ್ಯರಿಂಗೆ ಗುರುಗಳ ಅಭಯ ರಕ್ಷೆ - August 28, 2014
- ಹೊಸತ್ತರ ಒಪ್ಪಿಗೊಂಬದು - June 11, 2014
- ಪುಸ್ತಕ ಪರಿಚಯ : How to talk with God - September 3, 2013
ಹರೇ ರಾಮ,
ಕಳುದಸರ್ತಿ ನಾವು ಸಸ್ಯಾಹಾರವೇ ಎಂತಕೆ ಹೇಳ್ತ ವಿಷಯ ಮಾತಾಡಿಯೊಂಡಿತ್ತು 🙂
ಅಲ್ಲದೋ? ಈ ಸರ್ತಿ ಅದರ ಮುಂದುವರೆಸುವೊ°…
***
ಆ ದಿನ ಬಚಾವಾತು, ಆದರೆ ಮತ್ತೊಂದರಿ ಸಿಕ್ಕಿ ಬೀಳದ್ದೆ ಇಕ್ಕೋ?
ಮರದಿನ ಮತ್ತೆ ಕೇಳಿತ್ತು ಒಂದು ಹೆಮ್ಮಕ್ಕ,
“ನೀವು ತರಕಾರಿಯೇ ತಿನ್ನುದಾ? ಅದಕ್ಕೇ ನೀವು ಸಪೂರ ಇರುದು.. ನಿಮಿಗೆ ಹಾಗಾದ್ರೆ ಶಕ್ತಿ ಎಲ್ಲಿಂದ ಬರ್ತದೆ?” ಆ ಮಾತಿಂಗೆ ಎಂತ ಹೇಳೆಕೂ ಹೇಳಿಯೇ ಗೊಂತಾಯಿದಿಲ್ಲೆ ಎನಗೆ. ಎಂತ ಹೇಳಿರೆ, ಆಪೀಸಿಲ್ಲಿ ಇಪ್ಪ ಎರಡೂ ಸಸ್ಯಾಹಾರಿಗಳೂ ಕಡ್ಡಿ ಪೈಲ್ವಾನುಗಳೇ…
🙁
***
ಚೋದ್ಯ: ನೀನೆಂತಕೆ ಸಸ್ಯಾಹಾರಿ? ಮಾಂಸ ತಿಂದರೆ ಎಂತ ಆವುತ್ತು?
ಉತ್ತರ: ಪ್ರಾಣಿಹತ್ಯೆ ಎನಗೆ ಇಷ್ಟ ಇಲ್ಲೆ, ನಾವು ಜೀವಂತ ಇರೆಕೂ ಹೇಳುವ ಸಬೂಬು ಹೇಳಿ, ಬೇರೆ ಅವಕಾಶ ಇಪ್ಪಗಳೂ ವಿನಾಕಾರಣ ಇನ್ನೊಂದು ಜೀವಿಯ ಸಾವಿಂಗೆಕಾರಣ ಅಪ್ಪದು ಎನಗೆ ಸರಿ ಕಾಣ್ತಿಲ್ಲೆ.
ಚೋದ್ಯ : ಮಾಂಸಾಹಾರ ಸೇವನೆ ಹೇಳಿರೆ ಪ್ರಾಣಿ ಹತ್ಯೆ ಅಪ್ಪು, ಅಂಬಗ ಸಸ್ಯಾಹಾರ ಸೇವನೆ ಎಂತರ? ಅದು ಜೀವ ಹತ್ಯೆ ಅಲ್ಲದೋ?
ಉತ್ತರ : ಅಪ್ಪು, ಸಸ್ಯವ ಕಡುದರೂ ಅದು ಜೀವ ಹತ್ಯೆಯೇ.. ಆದರೆ ದೋಷದ ಪ್ರಮಾಣ ತುಂಬ ಕಡಮ್ಮೆ. ಬದುಕ್ಕೆಕ್ಕು ಹೇಳಿ ಆದರೆ ಎಂತಾರು ತಿನ್ನಲೇ ಬೇಕಾದ ಕಾರಣ, ಪ್ರಜ್ನೆಯ ವಿಕಾಸ ಆದಷ್ಟು ಕಡಮ್ಮೆ ಇಪ್ಪದರನ್ನೇ ತೆಕ್ಕೊಂಡರೆ ಉತ್ತಮ. ಸಸ್ಯಂಗಳಲ್ಲಿ ೯೦% ನೀರೇ ಇಪ್ಪ ಕಾರಣ ಅದ್ರ ಪ್ರಜ್ನೆಯ ಮಟ್ಟ ಮತ್ತೆ ಅದಕ್ಕೆ ಬೇನೆಯ ಅನುಭವ ಪ್ರಾಣಿಗಳಿಂದ ಕಡಮ್ಮೆ.
ಅಷ್ಟೇ ಅಲ್ಲದ್ದೆ,
ಸಸ್ಯವ ಆಹಾರವಾಗಿ ಉಪಯೋಗುಸುವಗ, ನಾವು ಅದರ ಬೇರಿನ ಎಂತೂ ಮಾಡ್ತಿಲ್ಲೆ. ಮತ್ತೆ, ಅದರ ಕವಲುಗಳ ತುಂಡು ಮಾಡಿ ತೆಗವದರಿಂದ ಸಸ್ಯ ಮತ್ತೂ ಬೆಳವಲೆ ಅವಕಾಶ ಆವುತ್ತು. ಹಾಂಗಾಗಿ ಅದು ಸಸ್ಯಂಗೊಕ್ಕೆ ಉಪದ್ರ ಮಾಡಿದ ಹಾಂಗೆ ಆಯಿದಿಲ್ಲೆ.
ಮರದ ಫಲ ಚೆಂದಕೆ ಹಣ್ಣಾಗಿಯಪ್ಪಗ, ಅದು ಅದರ ಮರಿಮ್ಮಳ ಮತ್ತೆ ಬಣ್ಣಂದ ಎಲ್ಲರ ಆಕರ್ಷಣೆ ಪಡಕ್ಕೊಳ್ತು. ಒಂದು ವೇಳೆ ಅದರ ತಿನ್ನದ್ದೇ ಬಿಟ್ಟರೆ ಅದು ಅಲ್ಲೇ ಕೊಳದು, ಬಿದ್ದು, ಯಾವುದಕ್ಕೂ ಉಪಕಾರ ಇಲ್ಲದ್ದ ಹಾಂಗೆ ಆವುತ್ತು. ಸಸ್ಯ ಮತ್ತು ಹಣ್ಣುಗಳ ಸೇವನೆ ಅದಕ್ಕೆ ಯಾವುದೇ ತೊಂದರೆ ಆಗ.
ಉಂಬಗಳೂ,
ನಾವು ತಿಂಬ ಊಟ ದೇವರ ಪ್ರಸಾದ, ಇದು ಅಮೃತ – ಹೇಳುವ ದೃಷ್ಟಿಲಿ ಉಂಡರೇ, ಸಸ್ಯಾಹಾರಕ್ಕೆ ಒಂದು ಅರ್ಥ ಬಪ್ಪದಲ್ಲದ್ದೇ, ಬರೇ ಉಂಡು ತೇಗಿರೆ ಆತಿಲ್ಲೆ. ಸಸ್ಯಾಹಾರದ ಮೂಲ ಉದ್ದೇಶ ದೌಹಿಕ ಮತ್ತು ಮಾನಸಿಕ ಸಮತೋಲನ ಸಾಧಿಸಿಯೊಂಡು, ಸಾತ್ವಿಕ ಜೀವನ ನಡೆಶುದು.
ಸಾತ್ವಿಕ ಜೀವನಕ್ಕೆ ಸಸ್ಯಾಹಾರ ಪಾಯ ಇದ್ದ ಹಾಂಗೆ.
ಚೋದ್ಯ: ಸಸ್ಯಾಹಾರಿಗೊ ಹೆಚ್ಚಾಗಿ ಸಣ್ಣ ಸಣ್ಣಕೆ, ಸಪುರ ಸಪೂರ ಇರ್ತವು ಹೇಳುವ ಭಾವನೆ ಇದ್ದನ್ನೆ ಜನರಲ್ಲಿ? ಸಸ್ಯಾಹಾರಂದಾಗಿ ಅಲ್ಲದೋ ನೀನು ಸಪೂರ ಇಪ್ಪದು?
ಉತ್ತರ: ಇಲ್ಲೆ ಸಸ್ಯಾಹಾರಿಗೊ ಸಪುರ ಇರ್ತವು ಹೇಳುವ ಭಾವನೆ ತಪ್ಪು. ಆಹಾರ ಕ್ರಮ ಮತ್ತು ಆರೋಗ್ಯ ಸರೀ ಇದ್ದರೆ ಅವ್ವುದೇ ಉದ್ದ, ತೋರ ಬೆಳೆತ್ತವು. ಹಿಂದಿ ಸಿನೆಮದ ವಿವೇಕ್ ಓಬೀರಾಯ್ ಸಸ್ಯಾಹಾರಿ, ಅವ° ಯಾವ ಹೃತಿಕ್, ಸಲ್ಮಾನುಗೊಕ್ಕೆ ಕಮ್ಮಿ ಇದ್ದ°? ಈಗ ಪ್ರಾಣಿಗಳಲ್ಲಿ ಹೇಳ್ತರೆ, ಆನೆ, ಗೋವು, ಜಿರಾಫೆಗೊ, ಕುದುರೆಗೊ ಸಸ್ಯಾಹಾರಿ ಪ್ರಾಣಿಗೊ, ಇವಕ್ಕೆ ಶಕ್ತಿಯೂ ಹೆಚ್ಚು ಮನುಷ್ಯನ ಉಪಯೋಗಕ್ಕೆ ಬಪ್ಪದೂ ಇವ್ವೆ..
ಅದೇ ಮಾಂಸಾಹಾರಿ ಪ್ರಾಣಿಗೊ, ಆಕ್ರಮಣಕಾರಿ ಪ್ರವೃತ್ತಿಯವ್ವುದೇ ಅಪ್ಪು – ಉಪಗೋಗಕ್ಕೂ ಬತ್ತವಿಲ್ಲೆ. ಯಾವ ಆಹಾರ ತಿಂದು ಅವ್ವು ಹಾಂಗೆ ಆಯಿದವೋ ಅದೇ ಆಹಾರವ ಮನುಷ್ಯನೂ ತೆಕ್ಕೊಂಡರೆ ತಿಂದವನೂ ಹಾಂಗೇ ಅಪ್ಪ ಸಾಧ್ಯತೆಯೇ ಹೆಚ್ಚು.
ಹಾಂಗೇ, ಮಾಂಸಾಹಾರಿಗೊ ತೋರ ಇರೆಕು ಹೇಳಿಯೇ ಏನಿಲ್ಲೆ. ಆದರೆ, ಸರಾಸರಿ ಜೀವನಾಯುಷ್ಯ ನೋಡಿರೆ ಸಸ್ಯಾಹಾರಿಗಳದ್ದೇ ಹೆಚ್ಚು.
ಚೋದ್ಯ: ನೀವು ಮೊಟ್ಟೆಯೂ ತಿನ್ನುದಿಲ್ವಾ? ಯಾಕೆ?
ಉತ್ತರ: ಮೊಟ್ಟೆ ತಿಂಬದಕ್ಕೂ ಮಾಂಸ ತಿಂಬದಕ್ಕೂ ಹೆಚ್ಚಿನ ವೆತ್ಯಾಸ ಎಂತ ಇದ್ದು? ಎರಡರಲ್ಲೂ ಇನ್ನೊಂದು ಜೀವ ಸಾಯ್ತನ್ನೇ? ಮೊಟ್ಟೆಯ ತಿನ್ನದ್ದೇ ಇದ್ದರೆ ಅದರಿಂದ ಮತ್ತೆ ಒಂದು ಜೀವ ವಿಕಾಸ ಅಪ್ಪಲೆ ಅವಕಾಶ ಇರ್ತು. ತಿಂದ ಕೂಡ್ಳೇ ಅದು ತಪ್ಪುಸಿದ ಹಾಂಗೆ ಆತನ್ನೇ? ಅದಕ್ಕಾಗಿ, ‘ಸಸ್ಯಾಹಾರ’ದ ಪರಿಧಿಯೊಳ ಮೊಟ್ಟೆಗೆ ಅವಕಾಶ ಇಲ್ಲೆ. ಮೊಟ್ಟೆಯ ಅರಶಿನ ಭಾಗಲ್ಲಿ ಕೊಲೆಸ್ತ್ರೋಲು ತುಂಬಾ ಇಪ್ಪ ಕಾರಣ cardiovascular disorders ಬಪ್ಪ ಸಾಧ್ಯತೆಯೂ ಇದ್ದು. ಇದು ಈಗೀಗ ಭಾರತಲ್ಲಿ ಹೆಚ್ಚಾವುತ್ತಾ ಇಪ್ಪದು ಕಂಡು ಬೈಂದು.
ಚೋದ್ಯ: ಮನುಷ್ಯನೇ ಕೋಳಿ, ಮೀನು, ಹಂದಿ ಮತ್ತೆ ದನ ಮುಂತಾದ್ದರ ಸಾಂಕುದಲ್ಲದಾ? ಅಂಬಗ ತಿಂದರೆ ಎಂತ ತಪ್ಪು?
ಉತ್ತರ: ಅಪ್ಪಮ್ಮ ಮಕ್ಕಳ ಸಾಂಕುತ್ತವು, ಭಯಂಕರ ಹಶುವಾವುತ್ತು ಹೇಳಿ ತಿಂಬದೋ ಮಕ್ಕಳ? ಆ ಹಕ್ಕು ಇದ್ದೋ ಆರಿಂಗಾರು? ಈ ಜಗತ್ತಿಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕ್ಕುವ ಹಕ್ಕಿದ್ದು. ಮನುಷ್ಯನೂ ಸೇರಿದ ಹಾಂಗೆ ಯಾವುದೇ ಜೀವಿಗಳೂ ಬದುಕನ್ನೇ ಬಯಸುತ್ತವು, ಸಾವಿನ ಇಷ್ಟಪಡ್ತವಿಲ್ಲೆ. ಕೊಲೆ – ಆತ್ಮಹತ್ಯೆ ಎರಡೂ ಪಾಪವೇ ಅಲ್ಲದೋ? ನವಗೆ ನಮ್ಮ ಆರೂ ಕೊಲ್ಲುಲಾಗ ಹೇಳಿ ಕಾಣ್ತರೆ, ಆ ಪ್ರಾಣಿಗೊಕ್ಕೂ ಹಾಂಗೇ ಅಲ್ಲದಾ? ಹೆದರಿ ಹೆದರಿ ಸತ್ತ ಪ್ರಾಣಿಗಳ ಮೈಲಿ ಏವ ರಾಸಾಯನಿಕ ಬಿಡುಗಡೆ ಆವುತ್ತೋ? ಅದರಿಂದ ನಮ್ಮ ದೇಹಕ್ಕೆ ಎಷ್ಟು ಉಪದ್ರವೋ ಆರಿಂಗೊಂತು? ನಮ್ಮ ಆರೂ ಕೊಲ್ಲುಲಾಗ ಹೇಳಿ ನಾವು ಹೇಳ್ತರೆ ನಾವುದೇ ಯಾವುದೇ ಜೀವಿಯ ಹತ್ಯೆ ಮಾಡುಲಾಗ.
ಚೋದ್ಯ: ತಿನ್ನದ್ದೇ ಬಿಟ್ಟರೆ ಪ್ರಾಣಿಗಳ ಸಂಖ್ಯೆಯೇ ಹೆಚ್ಚಕ್ಕು. ಎಲ್ಲರೂ ನೀನು ಹೇಳಿದಾಂಗೆ ಎಲ್ಲೋರೂ ಸಸ್ಯಾಹಾರಿಗಳೇ ಆದರೆ, ಎಲ್ಲರಿಂಗೂ ತಿಂಬಲೆ ಸಿಕ್ಕ…!
ಉತ್ತರ: ಮನುಷ್ಯ ಈ ಭೂಮಿಗೆ ಬಪ್ಪ ಎಷ್ಟೋ ಮದಲಿಂದಲೇ ಒಳುದ ಪ್ರಾಣಿಗೊ ಇತ್ತಿದ್ದವು ಹೇಳಿ ಹೇಳ್ತು ವಿಜ್ನಾನ. ಅಂಬಗ ಈ ಭೂಮಿ ಎಂತ ತುಂಬಿತ್ತಿಲ್ಲೆನ್ನೆ? ಪ್ರಕೃತಿ ಅದಾಗಿಯೇ ನಿಭಾಯಿಸಿಯೊಂಡಿತ್ತು ಎಲ್ಲದರ. ಈಗಳೂ ಜನಸಂಖ್ಯಾ ನಿಯಂತ್ರಣವ ಸರಿಯಾಗಿ ಮಾಡುದು ಪ್ರಕೃತಿಯೇ. ಎಲ್ಲಿ ಎಷ್ಟು ಜೀವ ಹೆಚ್ಚುಮಾಡೆಕು ಎಲ್ಲಿ ಯಾವುದರ ಕಮ್ಮಿ ಮಾಡೆಕು ಹೇಳಿ ಅದಕ್ಕೆ ಗೊಂತಿದ್ದು.
ಮತ್ತೆ,
ಒಂದು ನಿರ್ದಿಷ್ಟ ಜಾಗೆಲಿ ತೆಗದ ಬೆಳೆ, ಆ ಜಾಗೆಲಿ ಆಹಾರಕ್ಕಾಗಿ ಮಾಡಿದ ಪ್ರಾಣಿ ಸಾಕಣೆಂದ ಹದಿನಾಲ್ಕು ಪಟ್ಟು ಹೆಚ್ಚಿಗೆ ಆಹಾರ ಕೊಡುತ್ತು. ಅಷ್ಟೇ ಅಲ್ಲದ್ದೆ, ಒಂದು ಎಕರೆ ಜಾಗೆಲಿ ಬೆಳೆದ ಸಸ್ಯಂದ ೮೦೦೦೦೦ ಕ್ಯಾಲೋರಿ ಶಕ್ತಿ ಸಿಕ್ಕುತ್ತರೆ, ಆ ಆಹಾರವ ಪ್ರಾಣಿಗೊಕ್ಕೆ ತಿನ್ನುಸಿ ಆ ಪ್ರಾಣಿಗಳ ಮನುಷ್ಯರು ತಿಂದರೆ ಮನುಷ್ಯರಿಂಗೆ ಸಿಕ್ಕುದು ೨೦೦೦೦೦ ಕ್ಯಾಲೋರಿ ಶಕ್ತಿ ಮಾತ್ರ.. ಅಂಬಗ ಇಲ್ಲೇ ಗೊಂತಾತಿಲ್ಲೆಯೋ?
“ಸಸ್ಯಾಹಾರಿಯಾಗಿ ಇಪ್ಪದರಿಂದ ಒಳ್ಳೆ ಮನಸ್ಸು ಹೃದಯ ಮಡಿಕ್ಕೊಂಬದು ಮುಖ್ಯ ಹೇಳಿ ಎನಗೆ ಅನ್ನುಸುತ್ತು. ಬೇಕಾರೆ ಸಸ್ಯಾಹಾರವ ಹೆಚ್ಚಾಗಿ ಅನುಸರಿಸಿ ಅಲ್ಲಲ್ಲಿ ರಜ ರಜ ಮಾತ್ರ ಮಾಂಸ ತಿಂದರಾತು.” ಹೇಳಿತ್ತೊಂದು ಹೆಮ್ಮಕ್ಕೊ.
“ಅಯ್ಯೋ ದೇವರೇ…!!” ಗ್ರೇಷಿದೆ ಆನು.
ಅಪ್ಪೋ, ಅಂಬಗ ಇನ್ನೊಂದು ಪ್ರಾಣಿಯ ಕೊಂದು ತಿಂಬದು ಹೇಳಿರೆ ಒಳ್ಳೆ ಮನಸ್ಸಿಪ್ಪದು ಹೇಳಿ ಆದಿಕ್ಕು – ನವಗೆಂತಕೆ ಅವರ ಖರ್ಮ ಅವಕ್ಕವಕ್ಕೆ ಹೇಳಿ ಸುಮ್ಮನೆ ಕೂದತ್ತು ನಾವು. ಒಂದು ಗ್ಲಾಸು ಹಾಲಿಂಗೆ ಒಂದು ಬಿಂದು ಹೆಪ್ಪು ಹಾಕಿರೂ ಸಾಲದೋ ಹಾಲು ಹಾಳಪ್ಪಲೆ? ಅಂಬಗ ‘ಸಸ್ಯಾಹಾರಿ ಪದಾರ್ಥ’ಕ್ಕೆ ಒಂದು ತುಂಡು ಫೋರ್ಕು ಸೇರ್ಸಿರೂ ಹಾಂಗೇ ಅಲ್ಲದೋ ಕಂಡತ್ತು. ಉಮ್ಮ…. 🙁
“ಹೇ… ನಾಳೆಯಿಂದ ನಮ್ಮ ಮನೆಯಲ್ಲಿ ತರಕಾರಿ” ಹೇಳಿತ್ತು ಆ ಹೆಮ್ಮಕ್ಕೊ.
ಖಿಶಿ ಆತು ಮಾಣಿಗೆ, “ಹೇ° ಅಂಬಗ ಇವ್ವು ಮಾಂಸ ತಿಂಬದು ಬಿಟ್ಟವೋ” ಹೇಳಿ.
ನೋಡಿರೆ ಮತ್ತೆಂತರ?
“ನಮ್ಮ ಮೈನ್(ರೋಮ್)ನಿಂದ ಬಂದಿದೆ, ಇನ್ನು ನಲುವತ್ತು ದಿನ ತರಕಾರಿಯೇ ತಿನ್ಬೇಕಂತೆ. ಇನ್ನು ಮಾಂಸ ಎಲ್ಲ ಮಾಡ್ಲಿಕ್ಕೆ ಈಸ್ಟರಿನ ನಂತ್ರವೇ. ಕಪ್ಪು ತಿಂಗಳಲ್ಲಿ ನಮಿಗೆ ಮಾಂಸ ಮಾಡ್ಲಿಕ್ಕೆ ಇಲ್ಲ :(” ಹೇಳಿತ್ತು.
ಓ ಅಂಬಗ ಇವರ ಧರ್ಮದ ಮೂಲಲ್ಲಿಯೂ ಸಸ್ಯಾಹಾರ ಮತ್ತು ಸಾತ್ವಿಕ ಜೀವನದ ಕಲ್ಪನೆ ಇದ್ದು ಹೇಳಿ ಆತು. “ಮತ್ತೆ ಯಾವಾಗೆಲ್ಲ ತರಕಾರಿ ಮಾಡ್ಲಿಕ್ಕೆ?” ಕೇಳಿದೆ.
“ಮರಿಯ ಜಯಂತಿ ದಿನಸಾ ನಮಿಗೆ ತರಕಾರಿಯೇ ತಿನ್ಲಿಕ್ಕೆ ನಿಜವಾಗಿ, ನಾವು ಮಾಡುದಿಲ್ಲ; ನಾವು ಗಮ್ಮತ್ತು ಮಾಡುದು ಆ ದಿನ” ಹೇಳಿತ್ತು.
ಕೋಳಿ, ಕುರಿ, ಮೀನು ದಿನಾಗುಳೂ ಇಪ್ಪದು, ಅಂಬಗ ಗಮ್ಮತ್ತು ಎಂತಾದಿಕ್ಕು?
ಉಮ್ಮ ನಮ್ಮಂದ ಗ್ರೇಶಿಕ್ಕಲೂ ಎಡಿಯ.
ಎಲ್ಲ ಧರ್ಮವೂ ಮೂಲಲ್ಲಿ ಒಂದೇ.
ಎಲ್ಲವುದೇ ಹೇಳುದು ಸತ್ಯ – ಪ್ರೀತಿ – ತ್ಯಾಗ ಮತ್ತೆ ದಯೆಯನ್ನೇ..
ಅಂಬಗ ಸಸ್ಯಾಹಾರಿ ಆಗಿಪ್ಪ ಎನ್ನ ನಿರ್ಣಯ ಸರಿ ಹೇಳಿ ಕಂಡತ್ತು.
ಬ್ರಾಹ್ಮಣ ಜಾತಿಲಿ ಹುಟ್ಟದ್ದೇ ಇತ್ತಿದ್ದರೂ ಬಹುಶಃ ಆನು ಸಸ್ಯಾಹಾರಿಯೇ ಆಗಿರ್ತಿದ್ದೆ. 🙂
—
ನಿಂಗಳ,
ಮಂಗ್ಳೂರ ಮಾಣಿ
ಓಯ್, ಆನು ಸುಮ್ಮನೆ ನಿನ್ನ ಕಾಲು ಎಳವಲೆ ಹೆರಟದು… ಲೇಖನ ನಿಜವಾಗಿಯೂ ಒಳ್ಳೆದಾಯಿದು. ನಿನ್ನ typical style ಲಿ ಗಹನವಾದ ವಿಷಯವ ತಿಲಿ ಹಾಸ್ಯದ ಲೇಪ ಕೊಟ್ಟು ಹೇಳಿದ್ದು ಒಳ್ಳೆದಾತು. ಹೀಂಗಿಪ್ಪ ಪ್ರಶ್ನೆಗಳ ಆನುದೆ ಎದುರಿಸಿದ್ದೆ. ಮತ್ತೆ ಈ ಹಾಲಿನ ಬಗ್ಗೆ ಕೇಳ್ತವಕ್ಕೆ, ಹಾಲು ಮತ್ತೆ ಹಾಲಿ ಉತ್ಪನ್ನಗಳ ತಿಂತದಕ್ಕೆ lacto vegetarians ಹೇಳಿ ಹೇಳ್ತದಡ. ಆದ ಕಾರಣ ನಾವೆಲ್ಲ lacto vegetarians ಅವ್ತು. ಹಾಲು non-veg ಹೇಳಿ ಗಾಂಧಿ ಹಾಲು ಕುಡುಕ್ಕೊಂಡಿತ್ತವಿಲ್ಲೆ ಹೇಳಿ ಕೇಳಿದ್ದೆ, ಹೇಳಿದ ಹಾಂಗೆ ನೀನು ಇದರಲ್ಲಿ ಕೊಟ್ತ ಘಟನೆ ಅಂದ್ರಾಣ ಹಾಂಗೆ ಬರೀ ಲೊಟ್ಟೆ ಹೇಳಿ ಎನಗೆ ಒಂದು ಸಣ್ಣ ಸಂಶಯ ಇದ್ದು 😛 😀
Thank you Thank you 🙂
lacto vegetarian ಹೇಳುದು ಎನಗೆ ಹೊಸ ಶಬ್ದ. ಹಾಂಗೂ ಒಂದು ಇದ್ದಪ್ಪೋ?
ಮತ್ತೆ, ಸಸ್ಯಾಹಾರ ಹೇಳುದು ಬರೇ ತಿಂಬದು ಮಾತ್ರ ಅಲ್ಲ – ಅದು ಒಂದು ಸಾತ್ವಿಕ ಜೀವನ ಕ್ರಮದ ಅವಿಭಾಜ್ಯ ಅಂಗ. ಇದರ ಆಶಯ ಇಪ್ಪದು “ಇನ್ನೊಬ್ಬಂಗೆ ಅಥವಾ ಇನ್ನೊಂದು ಜೀವಕ್ಕೆ ತೊಂದರೆ ಕೊಡದ್ದೆ ಯಾ ಕೊಡಲೇ ಬೇಕಾದಲ್ಲಿ ಅತೀ ಕಡಮ್ಮೆ ತೊಂದರೆ ಕೊಟ್ಟು ಬದುಕ್ಕುತ್ತೆ” ಹೇಳುವ ಕಲ್ಪನೆಲಿ. ಹಾಂಗಾಗಿ ನಾವು ತಿಂಬ ಆಹಾರವ ನಾವೇ ನಿರ್ಧಾರ ಮಾಡೆಕಾದ್ದು.
ಓಯ್!!!,
ನಿನ್ನ ಸಂಶಯವೇ ಕೂಸೇ??? ಸೋತೆ ಆನು 😉 😀
ಹಾ ನಂದ, ಲಾಯಿಕ ಆಯಿದು. ನೀನು “ಶುದ್ಧ, ಸರಳ, ಸ್ವಸ್ಥ” ಇಪ್ಪದು ಹೇಂಗೆ ಹೇಳಿ ಈಗ ಗೊಂತಾತಿದ…. 😀
ವಿನಯೋ,
😀 😀 😀 😉 ನೆಗೆ ಮಾಡಿ ಮಾಡಿ ಬಚ್ಚಿತ್ತು… ಅಬ್ಬಾ 🙂
ಒಪ್ಪಕ್ಕೆ ತುಂಬ ತುಂಬ ಧನ್ಯವಾದಂಗೊ…
ಆದರೆ ಕೆಲವು ಕಡೆ ಬ್ರಾಹ್ಮಣರೂ ಮೀನು ತಿಂತವು (ಉದಾ: ಬಂಗಾಳಿಗ). ಯಾವದು ಶ್ರೇಷ್ಠ ಹೇಳುದಕ್ಕಿಂತ ಯಾವದು ನಮಗೆ ಸೇರುತ್ತು ಹೇಳುದು ಮುಖ್ಯ. ಒಂದು ಜೀವಿ ಇನ್ನೊಂದು ಜೀವಿಯ ಆಹಾರವಾಗಿ ಉಪ್ಯೋಗಿಸುವುದು ಜಗದ ನಿಯಮ. ಅದರಲ್ಲಿ ಪಾಪ ಬತ್ತು ಹೇಳಿ ಎನಗೆ ಅನಿಸುತ್ತಿಲ್ಲೆ.
ಮಹೇಶ್ ಭಾವಾ,
ನಿಂಗಳ ಒಪ್ಪ ನೋಡ್ಲೆ ತಡವಾತು, ಬೇಜಾರು ಮಾಡಿಕ್ಕೆಡಿ – ಈ ಟಾಕ್ಸ್ ಓಡಿಟ್ಟಿನ ಹೊತ್ತಿಲಿ ಎಂತೂ ಗೊಂತಾಗಿಯೊಂಡಿತ್ತಿಲ್ಲೆ. 🙁
{ಒಂದು ಜೀವಿ ಇನ್ನೊಂದು ಜೀವಿಯ ಆಹಾರವಾಗಿ ಉಪ್ಯೋಗಿಸುವುದು ಜಗದ ನಿಯಮ} – ಅಪ್ಪು. ಬದುಕ್ಕೆಕ್ಕು ಹೇಳಿ ಆದರೆ ಎಂತಾರು ತಿನ್ನಲೇ ಬೇಕಾದ ಕಾರಣ, ಪ್ರಜ್ನೆಯ ವಿಕಾಸ ಆದಷ್ಟು ಕಡಮ್ಮೆ ಇಪ್ಪದರನ್ನೇ ತೆಕ್ಕೊಂಡರೆ ಉತ್ತಮ ಹೇಳಿ ಎನ್ನ ಅಭಿಪ್ರಾಯ. ಯಾವ ಪ್ರಾಣಿಗೂ ಸಾವ ಮನಸ್ಸು ಇರ್ತಿಲ್ಲೆನ್ನೆ? ಸಣ್ಣದರಲ್ಲೇ ನಿಲ್ಲುಸುಲೆ ಎಡಿಗಪ್ಪಗ ಸುಮ್ಮನೇ ಇನ್ನೊಂದು ಪ್ರಾಣಿಯ ಕೊಂದು ತಿಂಬದು ಎನಗೆ ಸರಿ ಕಾಣ್ತಿಲ್ಲೆ.
ಭಾವಾ, ಪಾಪ ಹೇಳಿರೆ ಎಂತರ ಹೇಳಿ? ಯಾವುದು ಬೇನೆ ಕೊಡ್ತೋ ಅದು ಪಾಪ.
ಕೊಲ್ಲುವಾಗ ಪ್ರಾಣಿಗೆ ಬೇನೆ, ತಿಂದಪ್ಪಗ ಹೊಟ್ಟೆ ಬೇನೆ. ನಾಲ್ಕು ದಿನ ಸರಾಗ ಇರುಳಪ್ಪಗ ಮಾಂಸ ತಿಂದತ್ತು ಹೇಳಿ ಆದರೆ ಮತ್ತಾಣ ದಿನ ಡಾಕ್ರ° “ನಿನಗೆ heatಆಯಿದು, ಇನ್ನು ಒಂದು ವಾರ ಸಸ್ಯಾಹಾರವೇ ಮಾಡೆಕು” ಹೇಳ್ತ°. ಅಂಬಗ ಎಂತರ? ಅದು ದೇಹಕ್ಕೆ ಹಿಡಿತ್ತಿಲ್ಲೆ ಹೇಳಿ ಅಲ್ಲದೋ? ದೇಹಕ್ಕೆ ಹಿಡಿಯದ್ದರೂ ಬಾಯಿರುಚಿಗೆ ಸೋತು ಬಲವಂತವಾಗಿ ಹೊಟ್ಟೆಗೆ ಅದರ ತುಂಬುಸುದು ಪಾಪ ಅಲ್ಲದ್ದೆ ಮತ್ತೆಂತ?
{ಆದರೆ ಕೆಲವು ಕಡೆ ಬ್ರಾಹ್ಮಣರೂ ಮೀನು ತಿಂತವು (ಉದಾ: ಬಂಗಾಳಿಗ).} – ಅಪ್ಪಡ. ಆನೂ ಈ ಬಗ್ಗೆ ಕೇಳಿದ್ದೆ. ಆಪೀಸಿಲ್ಲಿ ಎನ್ನ ದೋಸ್ತಿ ಒಬ್ಬ° ಹೇಳಿದ°, “ಮಾಂಸದಲ್ಲೂ ಎರಡು ರೀತಿ ಉಂಟು ಭಟ್ರೇ.. ಈ ಫೋರ್ಕ್ ಮಟನ್ ಎಲ್ಲ ನೋಡಿ ಹಸೀ ಇರುವಾಗ ಕೆಂಪು ಇರ್ತದೆ. ಅದೇ ಕೋಳಿ ಮೀನು ಎಲ್ಲ ಬಿಳಿ. ಕೆಂಪು ಇರುದು ದೇಹಕ್ಕೆ ಒಳ್ಳೆದಲ್ಲ ಅಂತ ಹೇಳ್ತಾರೆ, ಆದ್ರೆ ರುಚಿ ಸಿಕ್ಕಿದ್ರೆ ಉಂಟಲ್ಲಾ… ಬಿಡ್ಲಿಕ್ಕಿಲ್ಲ ನೀವು. ನಿಮಿಗೆ ಇನ್ನು ಆಗ್ಲಿಕ್ಕಿಲ್ಲ, ಮುಂಚೆನೇ… ಸಣ್ಣ ಇರುವಾಗ ಶುರು ಮಾಡ್ಬೇಕು.” ಹೇಳಿ.
“Thank God I Didn’t start” ಹೇಳಿದೆ ಆನು.
ಕೆಲವು ಜೆನ Vegetarianಗೊ ಮೀನು ತಿಂಬದು ಬಹುಷಃ ಮೀನು ಒಳುದ ಮಾಂಸದಷ್ಟು ಕೆಟ್ಟದ್ದಲ್ಲ ಕಾರಣಕ್ಕೆ ಆದಿಕ್ಕು. ಆದರೆ, ಸುಮ್ಮನೇ ಅನಿವಾರ್ಯ ಅಲ್ಲದ್ರೆ ಅದರ ತಿಂಬದೂ ಎನಗೆ ಸರಿ ಕಾಣ್ತಿಲ್ಲೆ.
ನಿಂಗೊ ಪುರುಸೊತ್ತಿಲಿ ಓದಿ ಒಪ್ಪ ಕೊಟ್ಟದು ತುಂಬ ಖುಶಿ ಆತು 🙂
ಬಂದೊಂಡಿರಿ ಬೈಲಿಂಗೆ 🙂
ಯೇ ಮಾಣಿ, ಇಷ್ಟು ಅಪ್ರೂಪ ಅಪ್ಪಲಾಗಪ್ಪ. ಶುದ್ದಿಯೂ ಇಲ್ಲೆ, ಒಪ್ಪವೂ ಇಲ್ಲೆ, ‘ಬತ್ತೆ ಕಾಂಬೊ’ ಹೇಳಿಕ್ಕಿ ಅದೂ ಇಲ್ಲೆ….?
ಹೀಂಗೆ ಬಂದು ಒಪ್ಪಕ್ಕೆ ಶುದ್ದಿ ಹೇಳಿಗೊಂಡಿರೆಕ್ಕಿದ.
ಮಾವಾ…°,
ಒಂದು ರಜ್ಜ busy schedule ಈಗ.. tax audit season ಅಲ್ಲದಾ.. ಹಾಂಗಾಗಿ..
ಇದಾ ಬಂದೆ, ಇನ್ನು ಇಲ್ಲಿಯೇ… ಇನ್ನಾಣ tax audit ಬಪ್ಪ ಒರೇಗೆ 😉
{‘ಬತ್ತೆ ಕಾಂಬೊ’ ಹೇಳಿಕ್ಕಿ} – ಅಪ್ಪು ಮಾವಾ° ಬಪ್ಪಲಾಗದ್ದಕ್ಕೆ ಎನಗೂ ಭಯಂಕರ ಬೇಜಾರಾತು :'(
ಇನ್ನೊಂದು ಬೈಲಿನ ಮಿಲನ ಮಾಡುವೊ°, ಅಲ್ಲಿ ಕಾಂಬೊ° 🙂 ಸಾರ ಇಲ್ಲೆನ್ನೆ..?
ಒಳ್ಳೇದಾಯಿದು ಇದು.. ಒಪ್ಪ೦ಗೊ.
ಧನ್ಯವಾದ ಗಣೇಶ್’ಭಾವಾ 🙂
ಅಲ್ಲಾ ಈ ಪೆರ್ವದಣ್ಣ ಆಹಾರ ವಿಷಯಂಗೊಕ್ಕೆ ಜಾಸ್ತಿ ಒಪ್ಪ ಕೊಡುದೋ?
ಉಮ್ಮಪ್ಪಾ.. ಎಂತದೋ?
ಮೊದಲಿ೦ದಲೇ ಹಾ೦ಗೆ ಪೆ೦ಗಣ್ಣಾ.. “ತಿ೦ಬ ವಿಷಯಲ್ಲಿ ಮಾ೦ತ್ರ ಇವ ಭಾರೀ ಉಶಾರಿ, ಮತ್ತೆ೦ತದಕ್ಕೂ ಆಗ” ಹೇಳಿ ಎನ್ನ ಹತ್ರೆ ಎಲ್ಲರೂ ಹೇಳುಗು.. 🙂
ಶರೀರ ರಚನೆ ಪ್ರಕಾರ ಮನುಷ್ಯಂಗೆ ಸಾಸ್ಯಾಹಾರವೇ ಸರಿ. ಸಸ್ಯಾಹಾರ ಸಮರ್ಥನೆಗೆ ಇದರ ಹೊರತಾಗಿ ಇನ್ನಾವ ವಿಚಾರವನ್ನೂ ಎತ್ತುಲಾಗ ಎನ್ನ ಪ್ರಕಾರ. ಅದರಿಂದಾಗಿ ವಿಷಯಾಂತರ ಅಪ್ಪದೆ ಹೆಚ್ಚು. ಹಿಂಸೆ, ಧರ್ಮ ಗ್ರಂಥ ಇವೆಲ್ಲಾ ಅಸಮರ್ಥನೀಯ ಕೂಡ (ಧರ್ಮಗ್ರಂಥಂಗಳಲ್ಲಿ ಹುಡುಕ್ಕಿದರೆ ಹಿಂಸೆಯ ಪರವಾದ ಮತ್ತು ವಿರುಧ್ಧವಾದ – ಎರಡೂ ವಿಚಾರಂಗೋ ಧಾರಾಳ ಸಿಕ್ಕುತ್ತು). ಹಿಂದಾಣ ಬ್ರಾಹ್ಮಣರು ಮಾಂಸ ತಿಂತಿದ್ದವು ಹೇಳ್ತದು ಸಂಶಯಾಸ್ಪದ ವಿಚಾರವಾದರೂ ಕ್ಷತ್ರಿಯರು ಮಾಂಸ ತಿಂತಾ ಇತ್ತಿದವು ಹೇಳುದರಲ್ಲಿ ಯಾವುದೇ ಸಂಶಯ ಇಲ್ಲೆ. ಇಂತಿಪ್ಪಗ ಅವು ಮಾಂಸ ತಿಂದಿದವು ಹೇಳ್ತಾ ಮಾತ್ರಕ್ಕೆ ನಮ್ಮ ಪುರಾಣ ಇತಿಹಾಸಂಗಳಲ್ಲಿ ಬಪ್ಪ ಅತಿ ಶ್ರೇಷ್ಠ ವ್ಯಕ್ತಿಗಳ (ಕ್ಷತ್ರಿಯರ) ಕನಿಷ್ಠ ಮಾಡುಲಾವುತ್ತೋ? ವಿಚಾರ ಮಾಡಿ.
ಇನ್ನು ವಿವೇಕ ಒಬೆರಾಯ್ ಪಟ್ಟಿಗೆ ಸೇರ್ಸುಲೇ ತುಂಬಾ ಹೆಸರುಗೋ ಇದ್ದು – ಉದಾಹರಣೆಗೆ ಕುಸ್ತಿಪಟು ಒಲಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್. ಅಲ್ಲದ್ದೆ ದೇಶ ವಿದೆಶಂಗಳಲ್ಲಿ ಸುಮಾರು ಜನ ಕ್ರೀಡಾಪಟುಗಳೂ ಇದ್ದವು.
ಅಪ್ಪಪ್ಪು. ಒಪ್ಪಿದೆ ನಿಂಗೊ ಹೇಳಿದ್ದರ 🙂
ಮಾಂಸಾಹಾರ ಅಥವಾ ಮಾಂಸಾಹಾರಿಗೊ ಕನಿಷ್ಟ ಹೇಳಿ ಆನು ಹೇಳಿದ್ದಲ್ಲ. ಮೀನು ಮೊಟ್ಟೆ ಮಾಂಸ ಆನೆಂತಕೆ ತಿಂತಿಲ್ಲೆ ಹೇಳುದರ ಹೇಳಿದ್ದಷ್ಟೇ.
ಮನುಷ್ಯದೇಹಕ್ಕೆ ನಿಂಗೊ ಹೇಳಿದಾಂಗೇ, ಸಸ್ಯಾಹಾರವೇ ಒಳ್ಳೆದು. 🙂
ಮಂಗ್ಳೂರು ಮಾಣಿಯ ಚೋದ್ಯೋತ್ತರ ರೂಪದ ವೈಚಾರಿಕ ಶುದ್ದಿ ಲಾಯಕಿತ್ತು. ಸಸ್ಯಾಹಾರದ ಪ್ರಾಮುಖ್ಯತೆ ಅದಕ್ಕಿಪ್ಪ್ಪ ಬೆಲೆ ನವಗೆ ಮಾಂತ್ರ ಅಲ್ಲ ಗೊಂತಿಪ್ಪದು, ಮಾಂಸಾಹಾರಿಗವಕ್ಕುದೆ ಗೊಂತಿದ್ದು. ಚಟ ಹೇಳ್ತದು, ಚಟ್ಟ ಹತ್ತುವನ್ನಾರ ಇರ್ತಾಡ. ಆಯುರ್ವೇದ ಚಿಕಿತ್ಸೆ ಹೇಳಿರೆ ಪಿತ್ತ ಕೆರಳುವ ಬುದ್ದಿಯ ಡಾ.ಶ್ರೀನಿವಾಸ ಕಕ್ಕಿಲ್ಲಾಯರ ವಿ.ಕ.ದ ಲೇಖನ ಓದಿ ಎನಗೂ ತುಂಬಾ ಬೇಜಾರು ಆಗಿತ್ತು. ಅನಗತ್ಯ ವಾದ ಮಾಡಿ, ತಾನೇ ಬುದ್ದಿವಂತ ಹೇಳುವ ಪ್ರಕೃತಿಯವು ತುಂಬಾ ಜೆನ ಇದ್ದವು. ಅದಕ್ಕೆ ತಳಿಯದ್ದೇ ಕೂರ್ತದು ನಮ್ಮ ಜಾಣತನ.
{ತಳಿಯದ್ದೇ ಕೂರ್ತದು ನಮ್ಮ ಜಾಣತನ} – ಅದು ಸರಿ 🙂
ಈ ಲೇಖನ ಅವರ ಲೇಖನಕ್ಕೆ ಉತ್ತರ ಆಗಿದ್ದದಲ್ಲ. ಎರಡೂ ಒಟ್ತಿಂಗೇ ಬಂದದು coincidence ಅಷ್ಟೇ.. 🙂
ಒಪ್ಪಕ್ಕೆ ಧನ್ಯವಾದ ಮಾವಾ°. ನವಗೆ ಬೇಕಾದ್ದರ ನಾವು ಮಾಡುವೊ°, ಅವಕ್ಕೆ ಬೇಕಾದ್ದರ ಅವ್ವು ತಿಂತವು 🙂
ಪ್ರಶ್ನೋತ್ತರ ರೂಪಲ್ಲಿ ನಿರೂಪಣೆ, ಪ್ರತಿಪಾದನೆ ಲಾಯಿಕ ಆಯಿದು.
thanks ಅಪ್ಪಚ್ಚೀ 🙂
ಮ೦ಗ್ಳೂರ ಮಾಣಿ ಬರದ್ದು ಒೞೆದಾಯಿದು.ಎನಗೆ ೧೯ ರ ವಿಜಯ ಕರ್ನಾಟಕ ಲ್ಲಿ ಬ೦ದ ಲೇಖನ ಓದಿ ಚೂರು ಅಸಮಾದಾನ ಆತು.ಈ ಲಿ೦ಕಿನ ನೋಡಿ http://srinivaskakkilaya.com/?p=243
ಗಣೇಶ ಮಾವಾ°,
ಧನ್ಯವಾದ 🙂 ಉಮ್ಮ ಆನು ಆ ಲೇಖನ ಓದಿದ್ದಿಲ್ಲೆ, link ಕೊಟ್ಟದು ಒಳ್ಳೆದಾತು. ಓದಿ ನೋಡ್ತೆ 🙂
ಲೇಖನ ಓದಿದೆ,
ಉಮ್ಮ ಎನಗೂ ಅಶ್ಟೊಂದೇನು ಸರಿ ಕಾಣ್ತಿಲ್ಲೆ ಅವ್ವು ಹೇಳುದು. “ನಮ್ಮ ಆಹಾರವು ಶರೀರಕ್ಕೆ ಅನುಗುಣವಾಗಿರಬೇಕು, ಭಾವನೆಗಳಿಗಲ್ಲ” ಹೇಳುದರ ಆನು ಒಪ್ಪುತ್ತಿಲ್ಲೆ.
ಶರೀರಕ್ಕೆ ಆಹರ ಹಿಡಿಯೆಕಾರೆ ಅದು ಮದಲು ಮನಸ್ಸಿಂಗೆ ಹಿಡಿಯೆಕನ್ನೆ?
ನಮ್ಮಂದಾಗಿ ಆರಿಂಗೂ – ಯಾವುದಕ್ಕೂ ತೊಂದರೆ ಅಪ್ಪಲಾಗ, ಹಾಂಗೊಂದುವೇಳೆ ಅಪ್ಪದಾದರೆ ಎಷ್ಟು ಕಡಮ್ಮೆಲಿ ಆವುತ್ತೋ ಅಷ್ಟರಲ್ಲಿ ನಿಲ್ಲುಸೆಕ್ಕು ಹೇಳುದು ಎನ್ನ personal ಅಭಿಪ್ರಾಯ 🙂
ಆ ಡಾಕ್ಟ್ರ ಲೇಖನಕ್ಕೆ, ಡಾ ರವಿಶಂಕರ ಅವ್ವು ಬರದ ಒಪ್ಪ (ಉತ್ತರ) ಲಾಯ್ಕ suit ಆವುತ್ತು 🙂
ಲೇಖನ ಒದಗುಸಿದ್ದಕ್ಕೆ ಧನ್ಯವಾದ ಮಾವಾ° 🙂
ಮಾಣಿ ಬರದ್ದು ಲೈಕ ಆಯಿದು.
ಮನುಷ್ಯ ಮಾಂಸಾಹಾರಿಯೋ-ಸಸ್ಯಾಹಾರಿಯೋ ಹೇಳ್ತದು ಪ್ರಶ್ನೆ ಅಲ್ಲದಾ ಮಾಣಿ ಭಾವಾ ?
ದೇವರು ಪ್ರಾಣಿ, ಪಕ್ಷಿ, ಜಲಚರ, ಸಸ್ಯ, ಮನುಷ್ಯ ಇತ್ಯಾದಿಗಳ ಸೃಷ್ಟಿಮಾಡುವಗ ಆಯಾಯ ಜೀವಿಗಳ ಹುಟ್ಟುಗುಣಕ್ಕನುಸಾರವಾಗಿ ಆಯಾಯ ಪ್ರಾಣಿಗೊಕ್ಕೆ ಶರೀರವ ಕೊಟ್ಟಿದವು.
ಉದಾಹರಣೆಗೆ: ಮೀನು-ಮೊಸಳೆಗೆ ನೀರಿಲಿ ಹೋಪಲೆ ಉದ್ದದ ಬೀಲ, ಹಕ್ಕಿಗೊಕ್ಕೆ ರೆಕ್ಕೆ, ಸಸ್ಯಂಗೊಕ್ಕೆ ಸರ್ತ ನಿಂಬಲೆ ಗಟ್ಟಿ ಬೇರು ಇತ್ಯಾದಿ.
ಹಾಂಗೆಯೇ ಮನುಷ್ಯ ಸಸ್ಯಾಹಾರಿ ಹೇಳುದಕ್ಕೆ ವೈಜ್ಞಾನಿಕ ಕಾರಣ (logic) ಇದ್ದು. ಅದು ಶರೀರದ ರಚನೆ ಮತ್ತು ಕ್ರಿಯೆ.
ಮಾಂಸಾಹಾರಿಗೊಕ್ಕೆ ಎರಡೆರಡು ಉದ್ದ ಕೋರೆ ಹಲ್ಲುಗೊ(ಮೇಲೆರಡು ಕೆಳ ಎರಡು), ಕಡೆ ಹಲ್ಲಿನ ವರೆಗೂ ಬಿಟ್ಟಿಪ್ಪ ಬಾಯಿ(ಬೇರೆ ಪ್ರಾಣಿಗಳ ಗಬಕ್ಕನೆ ಹಿಡುದು ತಿಂಬಲೆ), ಉದ್ದ ನಾಲಗೆ ಎತ್ಯಾದಿ. ಮಾಂಸಾಹಾರಿ ಪ್ರಾಣಿಗೊ ನೀರು ಕುಡಿವಗ ನಕ್ಕುದು. ಜೀರ್ಣ ಶಕ್ತಿ ಸಸ್ಯಾಹಾರಿಗಳಿಂದ ಹೆಚ್ಚು.
ಮಾಂಸಾಹಾರಿಗೊಕ್ಕೆ ಉದಾಹರಣೆ: ಪುಚ್ಚೆ, ನಾಯಿ, ಮೊಸಳೆ, ಹುಲಿ ಇತ್ಯಾದಿ.
ಸಸ್ಯಾಹಾರಿಗೊಕ್ಕೆ ಕೋರೆ ಹಲ್ಲುಗೊ ಉದ್ದ ಇಲ್ಲೆ, ಬಾಯಿ ಸಣ್ಣದು(ಜಗುದೂ ಜಗುದೂ ತಿಂಬಲೆ), ನಾಲಗೆ ಸಣ್ಣದು, ನೀರು ಕುಡಿವಗ ಉರ್ಪುದು. ಜೀರ್ಣ ಶಕ್ತಿ ಮಾಂಸಾಹಾರಿಗಳಿಂದ ಕಮ್ಮಿ.
ಸಸ್ಯಾಹಾರಿಗೊಕ್ಕೆ ಉದಾಹರಣೆ: ಮನುಷ್ಯ,ದನ, ಆನೆ ಇತ್ಯಾದಿ.
ರವಿ ಮಾವಾ°,
ಒಪ್ಪಕ್ಕೆ ತುಂಬ ಧನ್ಯವಾದಂಗೊ.. 🙂
ಒಪ್ಪ ಓದಿಯಪ್ಪಗ ಅಪ್ಪಪ್ಪು ಕಂಡತ್ತು. ತುಂಬ ಸುಲಭಲ್ಲಿ ಹೇಳಿದಿ 🙂
[ಸಸ್ಯಾಹಾರ ಸೇವನೆ ಎಂತರ? ಅದು ಜೀವ ಹತ್ಯೆ ಅಲ್ಲದೋ?] – ಮಗು ಅಬ್ಬೆ ಹಾಲುಕುಡಿವದು ಹೇಳಿರೆ ಜೀವ ಹಿಂಡುತ್ಸೋ!, ದನದ ಹಾಲು ಕರವದು ಹೇಳಿರೆ ಅದರ ಪ್ರಾಣ ಹಿಂಡುತ್ಸೋ… ಏ ಬೋಚಾ..!
[ಅಲ್ಲಲ್ಲಿ ರಜ ರಜ ಮಾತ್ರ ಮಾಂಸ ತಿಂದರಾತು.” ಹೇಳಿತ್ತೊಂದು ಹೆಮ್ಮಕ್ಕೊ ]- ಉದಿಉದಿವರೇಂಗೆ ರಾಮಾಯಣ ಕೇಳಿ ರಾಮ ಸೀತಗೆ ಚಿಕ್ಕಪ್ಪ° ಅಯೇಕು ಹೇಳಿದ್ದು ಇದೇ ಹೆಮ್ಮಕ್ಕಳ!
[ಎಲ್ಲವುದೇ ಹೇಳುದು ಸತ್ಯ – ಪ್ರೀತಿ – ತ್ಯಾಗ ಮತ್ತೆ ದಯೆಯನ್ನೇ ] – ಅಪ್ಪು ಭಾವ ಅಪ್ಪು. ಕಂಡದ್ದರ ತಿಂದು, ಸಿಕ್ಕಿದ್ದರ ತಿಂದು ಕೆಲವಕ್ಕೆ ಕೊಬ್ಬು ಕೆರಳುಸುತ್ತು ಹೇದು !
ಮಾಣಿಭಾವಾ.. ಚೋದ್ಯೋತ್ತರ ಚಿಂತನೆ ಲಾಯಕ ಆಯ್ದು ಮಿನಿಯಾ
ಧನ್ಯವಾದ ಚೆನ್ನೈ ಭಾವಾ 🙂
{ಕಂಡದ್ದರ ತಿಂದು, ಸಿಕ್ಕಿದ್ದರ ತಿಂದು ಕೆಲವಕ್ಕೆ ಕೊಬ್ಬು ಕೆರಳುಸುತ್ತು ಹೇದು} – ಎಂತ ಮಾಡುದು ಭಾವಾ? ಧರ್ಮಗ್ರಂಥಂಗಳಲ್ಲಿ ಹೇಳುದು ಒಂದು – ಅದರ ‘ತಿಳುದೋರು’ ಹೇಳುದು ಇನ್ನೊಂದು – ಆಚರಣೆ ಮತ್ತೊಂದು 🙁
ಬೇಜಾರಾವುತ್ತು ಕಾಂಬಗ..