Oppanna.com

ಅಸಂಗತ ಪದ್ಯಂಗೊ

ಬರದೋರು :   ಗೋಪಾಲಣ್ಣ    on   01/05/2011    9 ಒಪ್ಪಂಗೊ

ಗೋಪಾಲಣ್ಣ

ಅಸಂಗತ ಕವನಂಗೊ ಆಂಗ್ಲ ಸಾಹಿತ್ಯಲ್ಲಿ ಹಲವು ಇದ್ದು,ಅದರಲ್ಲಿ ಒಂದು’Soloman Grundy,Born on Monday….”ಹೇಳುದರ ಎಲ್ಲರಿಂಗೂ ಗೊಂತಿದ್ದು.ಅದೇ ರೀತಿ “ಆದಿತ್ಯ ವಾರದಲಿ ಮುದ್ದಣನ  ಜನನ “ಹೇಳಿ ಕನ್ನಡಲ್ಲೂ ಮಾಡಿದ್ದವು.

ಸ್ಯಾಮ್ಯುವೆಲ್ ಬೆಕೆಟ್ ಹೇಳುವ ಮಹನೀಯ ಬರೆದ ವಯಿಟಿನ್ಗ್ ಫಾರ್ ಗೋದೋ[Waiting for Godot]ಹೇಳುವ ನಾಟಕಕ್ಕೆ [Absurd drama] ಆಂಗ್ಲ ಸಾಹಿತ್ಯ ಲೋಕಲ್ಲಿ ಅಪಾರ ಮನ್ನಣೆ ಇದ್ದು.ಬದುಕು ಮೂಲತಃ ಅರ್ಥಹೀನ,ಕ್ರಮರಹಿತ ಹೇಳುವ ಚಿಂತನೆ ಇದರ ಆಧಾರ.

ಆದರೆ ಅಸಂಗತ ಕವನ ಈ ರೀತಿ ಗಂಭೀರ ಆದ ಬರಹ ಅಲ್ಲ.ಅರ್ಥಹೀನ ಆದರೂ ಜೀವನವಿಮುಖ ಅಲ್ಲ!

ಮನಸ್ಸಿನ ಸಂತೋಷಕ್ಕಾಗಿ ,ಮತ್ತೊಬ್ಬರ ಸಂತೋಷಪಡಿಸುಲೆ ಬೇಕಾಗಿ ಇಪ್ಪ ಸರಸ ಕವನಂಗೊ ಇವು.

ಈಗ ನಮ್ಮ ಭಾಷೆಲಿ ಈ ರೀತಿಯ ಪದ್ಯ ಇದ್ದೊ-ಹೇಳಿ ನೋಡಿದರೆ ,ಇದ್ದು!

ಯಾವ ಸಾಹಿತ್ಯ ಪಂಥ ,ತತ್ತ್ವದ,ವಿಮರ್ಶೆಯ ಪರಿಭಾಷೆಗಳ  ಪರಿಚಯ ಇಲ್ಲದ್ದ ಅಜ್ಜಿಯಕ್ಕೊ  ಹೇಳುವ ಕೆಲವು ಹಾಡುಗಳ ಆನು ಕೇಳಿದ್ದೆ.ಸಾಲು ಸಾಲಿನ ಅರ್ಥ ನೋಡಿದರೆ ಅದರಲ್ಲಿ ಒಂದಕ್ಕೊಂದು ಸಂಬಂಧ ಇಲ್ಲೆ.ಆದರೆ ಆ ಶಬ್ದಗಳ ಜೋಡಣೆಯೇ ಒಂದು ವಿಚಿತ್ರ ಕುಶಿ ಕೊಡುತ್ತು.ತರ್ಕ ಮಾಡುವ ಮಕ್ಕೊ[ ಅವ ಎಂತಾ ಅರ್ಗೆಂಟು ಮಾಣಿಯೇ ಆಗಿರಲಿ]ಈ ರೀತಿ ಪದ್ಯ ಕೇಳಿದರೆ ಹಟ ನಿಲ್ಲಿಸುತ್ತವು.ಈಗ ಎನಗೆ ತುಂಬಾ ಪದ್ಯ ಮರೆತ್ತು ಹೋಯಿದು.ಒಂದೆರಡು ಬರೆತ್ತೆ-

೧]ಬೋಚು ಕಡೆವಾ ನೆಣೆ ಎಲ್ಲಿ ಹೋತು

ನೆರೆಮನೆ ಅಜ್ಜಿ ತೆಕ್ಕೊಂಡ್ಹೋತು

ಕೊಂಡು ಬಾ ಎಂದರೆ ತಿಂದಿಕ್ಕಿ ಬಂತು

ಅದು ಏವಜ್ಜಿ?

ಅದು ಮರುಳಜ್ಜಿ.

[ಮೊಸರು ಕಡೆವ ಬಳ್ಳಿಯ ಹತ್ತರಾಣ ಮನೆ ಅಜ್ಜಿ  ಕೊಂಡು ಹೋತು,ತಿಂದತ್ತು-ಇದು ಸಾಧ್ಯವೊ?]

೨]ತೋಳು ಕೈಯ ತೋಳು

ತೋಳನಾಡಿ ಬಪ್ಪಾಗ

ಕಾಳು ಬೊಗ್ಗ ಕಚ್ಚಿತ್ತು

ಮದ್ದು ತಾರೋ ಮಾವ

ಮದ್ದು ತಂದೆನಲ್ಲ

ಎಲ್ಲಿಗೆ ಹಚ್ಚಲಿ ಮದ್ದು?

ಎಡದ ಕೈಯ ತೋಳು

ಕಡಿದು ಹೋಯ್ತು ನೋಡು

[ಈ ಪದ್ಯ ಕನ್ನಡಲ್ಲಿ ರಚನೆ ಆದದ್ದೆ ಹೇಳಿ ಕಾಣುತ್ತು -ಇದರ ಮೂಲ ಆರಿಂಗಾದರೂ ಗೊಂತಿದ್ದರೆ ತಿಳಿಸಿ]

೩]ಚಳಿ ಚಳಿ ಎಂಬುದು ಉದಕ

ಮಕ್ಕಳ ಕೊರಳಿಗೆ ಪದಕ

ಪ್ರಾಯ ಹೋದರೆ ಮುದುಕ

ಪ್ರಾಣ ಹೋದರೆ ಬದುಕ!

[ಒಂದೊಂದು ಸಾಲಿಂಗೆ ಅರ್ಥ ಇದ್ದು-ಆದರೆ ಒಂದಕ್ಕೊಂದು ಸಂಬಂಧ?ಪ್ರಾಸ ಮಾತ್ರ.]

೪]ಕತೆ ಹೇಳು ಕತೆ ಹೇಳು ಕುಂಡೀಭಟ್ಟ

ಆನೇನ ಹೇಳಲಿ ಮಣ್ಣ ಹೆಂಟೆ

ನೀರಿಲಿ ಬಿದ್ದರೆ ಕರಗಿ ಹೋಪೆ

ಬೆಟ್ಟಲ್ಲಿ ಬಿದ್ದರೆ ಒಣಗಿ ಹೋಪೆ

ಅರೆ ನೀರಿಲಿ ಬಿದ್ದರೆ ಹಸಿಯಾಗಿಂಡಿಪ್ಪೆ—

[ಕತೆಗೂ ಮಣ್ಣ ಹೆಂಟೆಗೂ ಸಂಬಂಧ ಎಂತದೊ ದೇವರಿಂಗೆ ಗೊಂತು]

ನಮ್ಮವು ಶಾಲೆಲಿ ಕಲಿವದು ಕನ್ನಡ.ಓದುದು ಕನ್ನಡ.ಹಾಂಗಾಗಿ ಎಷ್ಟೊ ಕನ್ನಡ ಹಾಡುಗೊ ನಮ್ಮಲ್ಲಿ ಚಾಲ್ತಿ ಇದ್ದು.ಶಾಲಾ ವಿದ್ಯಾಭ್ಯಾಸ ಇಲ್ಲದ್ದ ಅಜ್ಜಿಯಕ್ಕೊ ಕೂಡಾ ಕನ್ನಡದ ಪದ್ಯಂಗಳ ಬಾಯಿಪಾಠ ಮಾಡುಗು.ಹೇಳುಗು.ಆವಾಗ ಕೆಲವು ಪದ್ಯಂಗೊ ಮಾರ್ಪಾಡು ಆದಿಪ್ಪಲೂ ಸಾಕು. ಕೆಲವು ಮೂಲತಃ ನಮ್ಮದೇ ಆಗಿಕ್ಕು.ಏನೇ ಆದರೂ ಸಾಹಿತ್ಯವ ಅಭ್ಯಾಸ ಮಾಡುವವಕ್ಕೆ ಆಶ್ಚರ್ಯ ಅಪ್ಪ ಹಾಂಗಿಪ್ಪ ಕೆಲವು ಪದ್ಯಂಗೊ-ಯಾವ ರೀತಿಯ ವ್ಯಾಖ್ಯಾನ,ವಿಮರ್ಶೆ,ಸಿದ್ಧಾಂತಂಗಳ ಹಂಗಿಲ್ಲದ್ದೆ ನಮ್ಮಲ್ಲಿ ಇಪ್ಪದು ಸಂತೋಷದ ವಿಷಯ.

ಎನಗೆ ತುಂಬಾ ಕುಶಿ ಆದ ಒಂದು ವಿಚಿತ್ರ ಕನ್ನಡ ಪದ್ಯಂದ ಈ ಲೇಖನವ ಮುಗಿಸುತ್ತೆ-

ಅಕ್ಕ ಬೋಲ್ ಬೋಲ್ ಭಂಗಿ

ಬಂಗಾರಕ್ಕನ ತಂಗಿ

ಹನ್ನೆರಡೆತ್ತಿನ ಬಂಡಿ

ಬಂಡಿ ಮೇಲೆ ನಾನು

ನನ್ನ ಮೇಲೆ ಗುಂಡು

ಗುಂಡು ಮೂರು ತುಂಡು

ಸಂತೆಗೆ ಹೋದಳು ಬೀರಿ

ತಂದಳು ಅರ್ಧ ಸೇರು ರಾಗಿ

ಗರಗರ ಬೀಸಿ

ರೊಟ್ಟಿ ಸುಟ್ಟಳೊಂದು

ತನಗರ್ಧ ಗಂಡಗರ್ಧ

ಕದ್ದಳೋ,ಮೆದ್ದಳೋ

ಕೇರೇ ಹಾವಿನ ಬಾಯಿಗೆ ಮಣ್ಣು

ಒಳ್ಳೆ ಹಾವಿನ ಬಾಯಿಗೆ ಬೆಣ್ಣೆ

[ಇದರ ಎನ್ನ ಅಜ್ಜಿ ಹೇಳುದು ಕೇಳಿದ್ದೆ.ಇದು ಬಹುಶಃ ಯಾವದೊ ಹಳೆ ಕಾಲದ -೨೦ನೆ ಶತಮಾನದ ಆದಿ ಭಾಗದ ಪದ್ಯ ಪುಸ್ತಕಲ್ಲಿ ಇಕ್ಕು.ಅಸಂಗತ ಅರ್ಥ ಇಪ್ಪ ಪದ್ಯ ಹೇಂಗಿಕ್ಕು ಹೇಳುದಕ್ಕೆ ಇದು ಒಂದು ಉತ್ತಮ ಉದಾಹರಣೆ]

9 thoughts on “ಅಸಂಗತ ಪದ್ಯಂಗೊ

  1. ನಿಜ,ಅಸಂಗತ ಪದ್ಯ ಎಲ್ಲರಿಂಗೂ ಇಷ್ಟ.
    ಪ್ರತಿಕ್ರಿಯೆ ಬರೆದ ಎಲ್ಲರಿಂಗೂ ಧನ್ಯವಾದ.

  2. ವಿಭಿನ್ನವಾದ ಸಾಹಿತ್ಯ ಪ್ರಕಾರವ ಪರಿಚಯ ಮಾಡ್ಸಿದ ಗೋಪಾಲಣ್ಣಂಗೆ ಅಭಿನಂದನೆಗೊ

    ಕತೆ ಕತೆ ಕಾರಣ
    ಬೆಕ್ಕಿನ ತೋರಣ
    ನಾಯಿ ಸತ್ತ ಮನೆಯಲಿ ನಾರಾಯಣ!
    ಹೀಂಗೊಂದು ಬೆಗುಡು ಚುಟುಕವ ಆನು ಸಣ್ಣಾಗಿಪ್ಪಗ ಕೇಳಿತ್ತಿದ್ದೆ.

    ಹಾಂಗೆಯೇ ಬೆಶಿಲೂ ಮಳೆಯೂ ಒಟ್ಟಿಂಗೆ ಬಪ್ಪಗ ಹೇಳಿಂಡಿದ್ದಿದ್ದ ಒಂದು ಪದ್ಯ-
    ಬೆಶಿಲೂ ಮಳೆಯೂ
    ಕುದುಕನ ಮದುವೆ
    ಕೋಳಿಯ ದಿಬ್ಬಣ
    ಕೆಪ್ಪೆಯ ತಾಳು
    ಕೇರೆಯ ಮೇಲಾರ
    ಆನು ಹೋಗಿ ನೋಡಿಕ್ಕಿ ಬತ್ತೆ; ನೀನು ಹೋಗಿ ಉಂಡಿಕ್ಕಿ ಬಾ..!

    1. ಆಹಾ! ಸುಭಗಣ್ಣಾ ಲಾಯ್ಕಾಯ್ದು ಇದು “ಕೇರೆ ಮೇಲಾರ, ಕೆಪ್ಪೆ ತಾಳು” ಪದ್ಯ. ಇದ್ರ ರುಚಿ ಹೆ೦ಗಿತ್ತೊ ಅವ೦ಗೇ ಗೊ೦ತು 😉

      1. ಇದಾ, ‘ತಟ್ಟಾ ಮುಟ್ಟಿ’ ಆಟ ಆಡುವಗ ಹೇಳ್ತ ಒಂದು ಅಸಂಗತ ಪದ-

        ತಟ್ಟಾ ಮುಟ್ಟೀ
        ತನ್ನಾ ದೇವೀ
        ಅಕ್ಕನ ಗೆಂಡಾ ಎತ್ತಾಲೋದಾ
        ಬಿತ್ತಿನ ಮುಡಿಯಾ ಕಾವಾಲೋದಾ
        ಅಟ್ಟಕ್ಕೋದಾ ಅಳಗೇ ಒಡದಾ
        ಮನೆಗೇ ಬಂದಾ ಹೆಂಡತಿಯ ಬಡುದಾ…

        …ಸುಣ್ಣಂಗುಳಿ ಕೆರೆಗೋಗಿ ಕಾಲುಜಾರಿ ಬಿದ್ದ..!!

  3. ಜಾಳಿಂ ಬೀಳಿಂ ಎಮ್ಮೆ ಬೋಚು
    ಚಿಳಿ ಪಿಳಿ ಚಿಳಿ ಪಿಳಿ ಹಸುವಿನ ಬೋಚು
    ಬೋಚಾ ಕಡವ ನೆಣೆಲ್ಲ್ಯೋತು
    ನೆರೆಮನೆ ಅಜ್ಜಿ ತೆಕೊಂಡು ಓಡಿತು
    ತೆಕ್ಕೊಂಡು ಬಾ ಎಂದರೆ ತಿನ್ದಿಕ್ಕಿ ಬಂತು
    ತೆಕ್ಕೊಂಡು ಹೋಗು ಹೇಳಿರೆ ಬಿಟ್ಟಿಕ್ಕಿ ಹೋತು

    ಎನ್ನ ಅತ್ತೆ ಈ ರೀತಿ ಹೇಳಿ ಮಕ್ಕಳ ಆಡಿಸೆನ್ದು ಇತ್ತಿದ್ದವು.ಇದರಲ್ಲಿ ಸುರುವಾನ ೨ ಗೆರೆ ಗೋಪಾಲಣ್ಣ ಹೇಳಿದ್ದಕ್ಕಿಂತ ಹೆಚ್ಚು.ಎಮ್ಮೆ ಮೊಸರಿಂಗು ದನದ ಮೊಸರಿಂಗು ಇಪ್ಪ ವ್ಯತ್ಯಾಸ( ದಪ್ಪ – ತೆಳು ) ಮೊದಲ ೨ ಗೆರೆಲಿ ಗೊಂತವುತು .( ಬೋಚು =ಮೊಸರು )

  4. ಗೋಪಾಲಣ್ಣ ಹೇಳಿದ ಪದ್ಯಂಗಳಲ್ಲಿ ಒಂದೆರಡು ಆನೂ ಕೇಳಿದ್ದೆ. ಹೀಂಗೊಂದು ಇದ್ದು ಹೇಳಿ ನೆಂಪು ಮಾಡಿದ್ದಕ್ಕೆ ಧನ್ಯವಾದ. ಬೇರೆ ಬೇರೆ ಊರಿಲ್ಲಿ ಹೀಂಗಿರುತ್ತ ಪದ್ಯಂಗೊ ತುಂಬಾ ಇಕ್ಕು. ಬೈಲಿಂಗೆ ಬರಳಿ.

  5. ಗೋಪಾಲಣ್ಣ,ಬಾಲ್ಯದ ದಿನ೦ಗಳ ನೆನಪ್ಪು ಮಾಡುಸಿತ್ತು ಪದ್ಯ೦ಗೊ.
    “ಅವಲಕ್ಕಿ ದವಲಕ್ಕಿ
    ಕಾ೦ಚನ ಮಿಣಿಮಿಣಿ
    ಡಾ೦ ಡೂ೦…”
    ~~~~~~~~~~~
    ತೋಟಕೆ ಹೋಗೊ ಮಲ್ಲ
    ಮಳೆಯು ಬ೦ದಿತಲ್ಲ
    ಸೌದೆ ತಾರೊ ಮಲ್ಲ

    ಕಡೆ೦ಗೆ
    ಊಟಕೆ ಬಾರೊ ಮಲ್ಲ
    ದೊಡ್ಡ ಬಟ್ಟಲಮ್ಮ ನನಗೆ ದೊಡ್ಡ ಬಟ್ಟಲೂ..
    ಹೇಳುವ ಪದ್ಯ ಎನಗೆ ಮರದತ್ತು,ಆರಿ೦ಗಾರು ನೆ೦ಪಿದ್ದೊ?

  6. ಪದ್ಯಂಗೊ ಎಲ್ಲಾ ಒಪ್ಪ ಇದ್ದು ಗೋಪಾಲಣ್ಣ… ಇನ್ನುದೇ ಯಾವುದಾದರು ಪದ್ಯಂಗೊ ಸಿಕ್ಕಿದರೆ ಬೈಲಿಲಿ ಕೊಡಿ… ಎಲ್ಲರಿಂಗೂ ಓದಿ ಸಂತೋಷಿಸುಲೆ ಅಕ್ಕು….

  7. ಸರಳವೂ ಸರಸವೂ ಸುಂದರವೂ ಆಗಿದ್ದು. ಲಾಯಕ್ಕಾಯ್ದು ಗೋಪಾಲಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×