ಈಗೀಗ ನಮ್ಮ ಭಾಷೆಲಿ ತುಂಬಾ ಬದಲಾವಣೆ ಆವುತ್ತಾ ಇದ್ದು .ಕನ್ನಡ ಹಾಂಗೆ ಬೇರೆ ಭಾಷೆಗಳ ಪ್ರಭಾವಂದಾಗಿ ಸುಮಾರು ಆಡು ನುಡಿಗಲ ಬಳಕೆ ಅಪರೂಪ ಆವುತ್ತಾ ಇದ್ದು .
ಈಗ ಅಷ್ಟಾಗಿ ಬಳಕೆಲಿ ಇಲ್ಲದ್ದೆ ಇಪ್ಪ ಒಂದು ಅಪುರೂಪದ ನುಡಿಗಟ್ಟು ಹಳೆ ಮನೆ ಪಾಪದೆ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುದು .
ನಮಗೆ ಆರತ್ತರೆ ಆದರು ರಜ್ಜ ಅಸಮಾಧಾನ ಇದ್ದರೆ ಅಥವಾ ಅವು ತುಂಬಾ ಕಸಂಟುಗ/ಪಿಸುಂಟುಗ ಆಗಿದ್ದರೆ ಅವರ ಸುದ್ದಿಯೇ ನಮಗೆ ಬೇಡ ಹೇಳುವ ಸಂದರ್ಭದಲ್ಲಿ ಈ ಮಾತಿನ ಬಳಕೆ ಮಾಡುತ್ತವು .
ಅವರ ಒಳ್ಳೇದು ಕೆಟ್ಟದು ಎರಡುದೆ ನಮಗೆ ಬೇಡ ಅವರ ಸ್ನೇಹವೂ ಬೇಡ ವಿರೋಧವೂ ಬೇಡ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಹಳೆ ಮನೆ ಪಾಪದೇ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುವ ಮಾತು ಧ್ವನಿಸುತ್ತು .
ಇಲ್ಲಿ ಹಳೆ ಮನೆ ಪಾಪ ಹೇಳುವ ಮಾತು ಕೆಡುಕು ,ವಿರೋಧ ದ್ವೇಷವ ಸೂಚಿಸಿದರೆ ಹೊಸ ಮನೆ ಪುಣ್ಯ ಹೇಳುವ ಮಾತು ಒಳಿತು, ಸ್ನೇಹ ವ ಸೂಚಿಸುತ್ತು .ಅವರ ಪಾಪ ಪುಣ್ಯ ಎರಡೂ ಬೇಡ ಹೇಳಿರೆ ಅವರ ಒಳ್ಳೇದು ಕೆಟ್ಟದು ಎರಡರ ಸಂಗತಿಯೂ ಅವರಲ್ಲಿ ನಮಗೆ ಬೇಡ ಅಷ್ಟಕ್ಕಷ್ಟೇ ಇದ್ದರೆ ನಮಗೆ ಒಳ್ಳೆದು ಹೇಳುವ ಭಾವದೆ ಇಲ್ಲಿ ಕಾಣುತ್ತು.
ಕೋಳ್ಯೂರು ಸೀಮೆಲಿ ಈ ನುಡಿಗಟ್ಟು ಬಳಕೆಲಿ ಇದ್ದು ಬೇರೆ ಕಡೆಲಿದೆ ಇಕ್ಕು ಅಥವಾ ಸಮಾನಾಂತರವಾಗಿ ಬೇರೆ ಯಾವುದಾದರೂ ಮಾತಿನ ಬಳಕೆ ಇಕ್ಕು ,ಗೊಂತಿದ್ದೋರು ತಿಳುಸಿ.ಓದಿ ಅಭಿಪ್ರಾಯ ತಿಳುಸಿ
- ಗಿಳಿ ಬಾಗಿಲಿಂದ -ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ? - September 11, 2014
- ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು - August 20, 2014
- ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ - July 30, 2014
ಲಕ್ಷ್ಮಿ ಒಳ್ಳೆ ಬರಹಗಾರ್ತಿ.ಕನ್ನಡಲ್ಲೂ ಹವಿಗನ್ನಡಲ್ಲೂ, ತುಳುವಿಲ್ಲೂ ಸಾಹಿತ್ಯಕೃಷಿ ಮಾಡೀರೆ ವಿದ್ಯಾಭ್ಯಾಸಲ್ಲೂ ಕನ್ನಡ,ಸಂಸ್ಕೃತ,ಹಿಂದಿ,ಆಂಗ್ಲ ಮೊದಲಾದೆಲ್ಲದರ ಪ್ರಾವೀಣ್ಯತೆ ಇದ್ದು. ವಿಜಯಕರ್ನಾಟಕಲ್ಲಿ ತುಳುಚಾವಡಿಲಿ ಅಂಕಣ ಬರೆತ್ತಾಇದ್ದು.ಈ ಬರಹ ಒಳ್ಳೆದಿದ್ದು. “ಅವರತ್ರೆ ಕಿಚ್ಚು ಕಾಸುತ್ತ ಹಾಂಗಿದ್ದರಾತು” ಹೇಳಿ ಬಳಕೆ ಮಾಡ್ತ ಹಾಂಗೆ ಅಲ್ಲದಾ?
ನಿಂಗಳ ಅಭಿಮಾನ ದೊಡ್ಡದು ವಿಜಯಕ್ಕ ,ಧನ್ಯವಾದಂಗ