“ಅವ °ಎಂತಕ್ಕೂ ಆಗ° ,ಮಹಾ ತೆಗಲೆ ಕಂಠ° “ ಈ ಮಾತಿನ ಎಂಗಳ ಕಡೆ ತುಂಬಾ ಸರ್ತಿ ಕೇಳಿತ್ತಿದ್ದೆ .ಎಂತ ಕೆಲಸವನ್ನೂ ಸಸೂತ್ರ ಮಾಡದ್ದೋರ ಬಗ್ಗೆ ಮಾತಾಡುವಗ, ಬೈಯ್ವಗ ಈ ಮಾತಿನ
ಬಳಕೆ ಮಾಡ್ತವು ಎಂಗಳ ಕಡೆಯ ನಮ್ಮ ಭಾಷೆಲಿ .ಸಾಮಾನ್ಯವಾಗಿ ತುಂಬಾ ಉದಾಸೀನ ಪ್ರವೃತ್ತಿಯ ಸೋಮಾರಿಗಳ ಸ್ವಭಾವವ ಈ ಮಾತು ಸೂಚಿಸುತ್ತು.ಇದು ತುಳುವಿಲಿ ಕೂಡ ಚಾಲ್ತಿಲಿ ಇದ್ದು . ತುಳುವಿಲಿ “ಆಯೆ ಬಜಿ ತಿಗಲೆ ಕಂಟೆ” ಹೇಳಿ ಉದಾಸೀನದ ಮುದ್ದೆಗಳ ಬೈತ್ತವು .ಈ ನುಡಿಗಟ್ಟಿನ ಆನು ಸಣ್ಣಾದಿಪ್ಪಗಂದಲೇ ಕೇಳುತ್ತಾ ಬಂದಿದ್ದರೂ ಇದರ ಅರ್ಥ ಎಂತ ಹೇಳಿ ಎನಗೆ ನಿಜವಾಗಿಯೂ ತಲೆಗೆ ಹೋಗಿತ್ತಿಲ್ಲೆ .ಆ ಬಗ್ಗೆ ಒಂದೆರಡು ಸರ್ತಿ ಇದರ ಅರ್ಥ ಎಂಥಪ್ಪಾ ಹೇಳಿ ನೆನಪಪ್ಪಗ ಒಂದೆರಡು ಸರ್ತಿ ಯೋಚಿಸಿತ್ತಿದೆ .ಇದರ ಅರ್ಥ ಎಂತ ಹೇಳಿ ಏನ ತಲೆಗೆ ಹೋಗಿತ್ತಿಲ್ಲೆ. ಮತ್ತೆ ಹೆಚ್ಚು ಇದರ ಬಗ್ಗೆ ತಲೆ ಕೆಡುಸುಲೆ ಹೋಗಿಯೂ ಇತ್ತಿಲ್ಲೆ ಹೇಳುದು ಬೇರೆ ವಿಚಾರ .
ಓ ಮೊನ್ನೆ ಸ್ವಾತಂತ್ರ್ಯೋತ್ಸವದ ದಿನ ಉದಿಯಪ್ಪಗ ಬೇಗ 8 ಗಂಟೆಗೆ ಎತ್ತಕ್ಕಾದ ಕಾರಣ ಬೇಗ 5 ಗಂಟೆಗೆ ಎದ್ದು ಗಡಿ ಬಿಡಿ ಮಾಡಿಕೊಂಡು ಹೆರಟು ೬ ಗಂಟೆಗೆ ಬಸ್ಸು ಹತ್ತಿದೆ .ಎನ್ನ ಹಾಂಗೆ ದೂರಂದ ಶಾಲೆ ಕಾಲೇಜಿ೦ಗೆ ಹೋಗಿ ಬಪ್ಪ ಸುಮಾರು ಜನಂಗ ಮಾಸ್ತ್ರಕ್ಕ ಟೀಚರುಗ ಆ ಬಸ್ಸಿಲಿ ಇತ್ತಿದವು .ಎಲ್ಲರೂ ಎನ್ನ ಹಾಂಗೆ ಉದಿಯಪ್ಪಗ ೪-೫ ಗಂಟೆಗೆ ಎದ್ದು ತಯಾರಾಗಿ ೬ ಗಂಟೆಗೆ ಬಸ್ಸು ಹತ್ತಿದೋರು .
ಬೆಂಗಳೂರಿಂದ ದೊಡ್ಡ ಬಳ್ಳಾಪುರ ಹೋಪಲೆ ಸುಮಾರು ಒಂದು ಒ೦ದೂವರೆ ಗಂಟೆ ಬೇಕಾವುತ್ತು .ಆ ಬಸ್ಸಿಲಿದ್ದೊರು ಹೆಚ್ಚಿನೋರು ದೊಡ್ಡ ಬಳ್ಳಾಪುರಕ್ಕೆ ಹೊಪೋರು . ಉದಿಯಪ್ಪಗಣ ಹೊತ್ತು ಆದ ಕಾರಣ ಎಲ್ಲೊರಿಂಗು ಸೀಟ್ ಸಿಕ್ಕಿತ್ತು .ಬಸ್ಸು ಹೆರಟು ೫-೧೦ ನಿಮಿಷಕ್ಕೆ ಎಲ್ಲರೂ ಚಂದಕ್ಕೆ ಕೂದಲ್ಲಿಯೇ ಬಸ್ಸಿಲಿಯೇ ಒರಗಿದವು !ಎನಗೆ ಬಸ್ಸಿಲಿ ಜಪ್ಪಯ್ಯ ಹೇಳ್ರೂ ಒರಕ್ಕು ಬತ್ತಿಲ್ಲೆ .
ಹಾಂಗೆ ಅಲ್ಲಿ ಇಲ್ಲಿ ಗೆಬ್ಬಾಯಿಸಿಕೊಂಡು ಇತ್ತಿದೆ.ಹಾಂಗೆ ಎಲ್ಲ ಕಡೆ ನೋಡುವಗ ಅಕ್ಕ ಪಕ್ಕ ಸುತ್ತ ಮುತ್ತ ಇಪ್ಪೋರೆಲ್ಲ ಒರಗಿದ್ದವು ! ಎಲ್ಲರ ಮೋರೆ ಬಗ್ಗಿಸಿ ಒರಗಿಕೊಂಡು ಇತ್ತಿದವು .ಎಲ್ಲರ ಗಡ್ಡ ಎದೆಗೆ ತಾಗಿಕೊಂಡು ಇದ್ದು !!!
ಕೂಡ್ಲೆ ಜ್ಞಾನೋದಯ ಆತು ಎನಗೆ ,ತೆಗಲೆ ಕಂಠ ಹೇಳಿರೆ ಎಂತ ಹೇಳಿ ತಲೆಗೆ ಹೋತು !
ತೆಗಲೆ=ಎದೆ ,ಕಂಠ =ಕೊರಳು ,ಕೊರಳು ಎದೆಗೆ ಬಗ್ಗಿ ಒರಗಿಕೊಂಡು ಇಪ್ಪದಕ್ಕೆ ತೆಗಲೆ ಕಂಠ ಹೇಳುದು! ಅಥವಾ ತೆಗಲೆಗೆ /ಎದೆಗೆ ಕೊರಳಿನ ಕಂತು ಹಾಕಿಕೊಂಡು /ನೇತು ಹಾಕಿಕೊಂಡು ಇಪ್ಪದು ಹೇಳುದೆ ತೆಗಲೆ ಕಂತೆ>ತೆಗಲೆ ಕಂಟೆ>ತೆಗಲೆ ಕಂಠ ಆಡಿಪ್ಪ ಸಾಧ್ಯತೆದೆ ಇದ್ದು! ಯಾವ ಕೆಲಸವೂ ಮಾಡದ್ದೆ ಉದಾಸೀನಂದ ಒರಕ್ಕು ತೂಗಿಕೊಂಡು ಇಪ್ಪೋರಿನ್ಗೆ ಒಪ್ಪುವ ಮಾತಿದು ,ಉದಾಸೀನದ ಮುದ್ದೆಗಳ ಬಗ್ಗೆ ಹೇಳುಲೆ ಇದಕ್ಕಿಂತ ಚಂದದ ಪದ ಬೇರೆಲ್ಲ್ಲಿಯೂ ಸಿಕ್ಕ .ನಮ್ಮ ಭಾಷೆಯ ಈ ಒಂದು ನುಡಿಗಟ್ಟಿನ ಸೊಗಸಿಂಗೆ ಆನು ನಿಜವಾಗಿಯೂ ಮಾರು ಹೋದೆ,ನಿಂಗೊಗೆ ಎಂತ ಅನ್ಸುತ್ತು ?ಈ ತೆಗಲೆಕಂಠ ಹೇಳುವ ನುಡಿಗಟ್ಟು ನಿಂಗಳ ಕಡೆ ನಮ್ಮ ಭಾಷೆಲಿ ಇದ್ದ ?ಅಥವಾ ಇದೆ ಅರ್ಥ ಕೊಡುವ ನುಡಿಗಟ್ಟು ಬೇರೆ ಯಾವುದಾದರು ಬಳಕೆಲಿ ಇದ್ದಾ ?ತೆಗಲೆ ಕಂಠ ಹೇಳ್ರೆ ಇದೇ ಅರ್ಥ ಆದಿಕ್ಕು ಅಲ್ಲದ ?ತಿಳುದೋರು ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ
- ಗಿಳಿ ಬಾಗಿಲಿಂದ -ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ? - September 11, 2014
- ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು - August 20, 2014
- ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ - July 30, 2014
ತೆಗಲೆ ಕಂಡು-ಹಿಂದೆ ಸರಿವ ಹೇಡಿ,ಎದೆಕೊಡದ ಕಳ್ಳ ಅಂದರೆ ಕೆಲಸದ ಜವಾಬ್ದಾರಿ ತೆಕ್ಕೊಳದ್ದವ-ಆಗಿಕ್ಕು.ಅದರಿಂದಲೇ ತೆಗಲೆ ಕಂಠ ಬಂದದಾದಿಕ್ಕು.
ನಮ್ಮ ಭಾಷೆಲಿ ತುಳು ಶಬ್ದ ತುಂಬಾ ಇದ್ದು.’ಏನೇ ಕಷ್ಟ ಬಂದರೂ ಆನು ತೆಗಲೆ ಕೊಡುವೆ’ ,-ಇಲ್ಲಿ ಗಮನಿಸಿ,ತೆಗಲೆ ಕೊಡುದು ಹೇಳಿರೆ ಭಾರ ಹೊರುವ ,ಜವಾಬ್ದಾರಿ ತೆಕ್ಕೊಂಬ ಧೈರ್ಯ ತೋರುಸುದು.ಹೀಂಗೆ ಮಾಡದ್ದವ ಕಳ್ಳ /ಕಂಡು.
ಮತ್ತೆ ಕನ್ನಡಲ್ಲೂ ಕೆಲಸಗಳ್ಳ-ಹೇಳುವ ಶಬ್ದ ಗಮನಿಸಿ.
ಹೀಂಗೆ ತೀರ್ಮಾನಕ್ಕೆ ಬಪ್ಪಲಕ್ಕೋ ಹೇಳಿ ತೋರುತ್ತು. ಆನು ಶಬ್ದವ್ಯುತ್ಪತ್ತಿ ತಿಳುದವ ಅಲ್ಲ.ವಿಚಾರ ಮಾಡುವಾಗ ಹೀಂಗೆ ಕಾಣುತ್ತು.
ಎಸ್.ಕೆ.ಗೋಪಾಲಕೃಷ್ಣ ಭಾವ ಹೇಳಿದ್ದಕ್ಕೆ ಎನ್ನ ವೋಟು…
ಅಪ್ಪು ತೆಗಲೆ ಕಂಡು >ತೆಗಲೆ ಕಂಡೆ >ಕಂಟೆ >ಕಂಠ ಆಡಿಪ್ಪ ಸಾಧ್ಯತೆದೆ ಇದ್ದು .
ತೆಗಲೆ ಕಂಡು ಹೇಳುದೂ ಬಳಕೆಲಿ ಇದ್ದು ಎನಗೆ ಇದರ ಬರವಗ ನೆನಪಿತ್ತಿಲ್ಲೆ .ಇಲ್ಲಿ ನಿಂಗ ಬರದ್ದರ ಓದಿ ಅಪ್ಪಗ ಅಂಥ ಬಳಕೆ ಇಪ್ಪದು ನೆನಪಾತು ಎನಗೆ.
ಈ ಬಗ್ಗೆ ಚರ್ಚಿಸಿ ಮಾಹಿತಿ ,ಮಾರ್ಗ ದರ್ಶನ ಮಾಡಿದ ಎಲ್ಲೋರಿಂಗು ಧನ್ಯವಾದಂಗ
ತೆಗಲೆ ಕಂಠ ಎನಗೆ ಹೊಸ ಶಬ್ದವೇ. ಲಕ್ಷ್ಮಿ ಅಕ್ಕನ ಸಂಶೋಧನೆಗೆ ಕುಮಾರ ಮಾವನ ಪೂರಕ ಮಾತುಗೊ ಸರಿಯಾಯಿದು. ಹಾಂಗೆ
ಅವು ಹೇಳಿದ ಅದೇ ಅರ್ಥ ಆಯಿಕ್ಕು ಹೇಳಿ ಅನಿಸುತ್ತು. ಬೇರೆಯವರ ತೆಗಳುತ್ತ, ಆನೇ ದೊಡ್ಡ ಜೆನ ಹೇಳುವ ಕಂಠದವ (ತೆಗಳುಕಂಠ) ಹೇಳಿ ಅರ್ಥ ಮಾಡ್ಳೆಡಿಗೊ. ತಿಗಲೆ ಹೇಳುವ ತುಳು ಶಬ್ದಕ್ಕೆ, ಕಂಠ ಹೇಳುವ ಸಂಸ್ಕೃತ ಶಬ್ದ ಸೇರುಸಿದ್ದದು ಸರಿ ಬತ್ತೋ ಹೇಳಿ ಎನಗೆ ಗೊಂತಿಲ್ಲೆ. ತಿಗಲೆ ಕೊರಳ ಹೇಳಿದರೆ ಸರಿ ಅಕ್ಕಷ್ಟೆ, ಎಂತ ಹೇಳ್ತಿ ?
ಕನ್ನಡಲ್ಲಿ ಸಂಸ್ಕೃತ ಕನ್ನಡ ಪದ ಸೇರಿ ಅರಿ ಸಮಾಸ ಆಗಿಪ್ಪ ಅನೇಕ ಪದಂಗ ಇದ್ದು ಇದು ಕನ್ನಡದ ವಿಶಿಷ್ಟ ಲಕ್ಷ್ನಣ ಗಳಲ್ಲಿ ಒಂದು.ಹಾಂಗೆ ತುಳು ಸಂಸ್ಕೃತ ಸೇರಿ ಸಮಾಸ ಆಡಿಪ್ಪ ಸಾಧ್ಯತೆ ಇದ್ದು
ಇಲ್ಲಿ ಇನ್ನೊಂದು ಸಾಧ್ಯತೆಯೂ ಇದ್ದು ತಿಗಲೆ ಕಂತೆ (ಕಂತೆ ಹೇಳಿರೆ ನೇತು ಹಾಕು ಹೇಳುವ ಅರ್ಥ ಇತ್ತು) ಹೇಳುದು ಸಂಸ್ಕ್ರುತೀಕರಣಗೊಂಡು ತೆಗಲೆ ಕಂಠ ಆಡಿಪ್ಪ ಸಾಧ್ಯತೆ ಇದ್ದು
ನಿಂಗಳ ಅಭಿಪ್ರಾಯ ತಿಳುಸಿದ್ದಕ್ಕೆ ಧನ್ಯವಾದಂಗ ಬೊಳುಂಬು ಮಾವ
{ಇದು ಕೇವಲ ಉಹೆ ಅಲ್ಲ ,ವಿಶ್ಲೇಷಣೆ ಕೂಡ } -> ಲಕ್ಷ್ಮಿ ಅಕ್ಕನ ಮಾತಿಂಗೆ ಎನ್ನ ಸಹಮತ ಇದ್ದು. ಅದಕ್ಕೆ ಪೂರಕವಾಗಿ ಕೊಟ್ಟ ಮಾತುಗೊ ತರ್ಕಬದ್ಧವಾಗಿದ್ದು ಹೇಳಿ ಎನ್ನ ಅನಿಸಿಕೆ. ಈ ನುಡಿಗಟ್ಟಿಂಗೆ ಎನ್ನ ವಿಶ್ಲೇಷಣೆ ಕೆಲ ಕೊಟ್ಟಿದೆ.
ಯಾವ ಕೆಲಸವೂ ಮಾಡದ್ದೆ ಉದಾಸೀನಂದ ಒರಕ್ಕು ತೂಗಿಕೊಂಡು ಇಪ್ಪದು ಸೋಮಾರಿತನದ ಲಕ್ಷಣ ಹೇಳುದು ಸಾರ್ವತ್ರಿಕವಾಗಿ ಅನ್ವಯಿಸುಲೆ ಸಾಧ್ಯ ಇಲ್ಲೆ. ದೈಹಿಕವಾಗಿ ಅತಿಯಾದ ಬಚ್ಚೆಲು ಆಗಿಪ್ಪಗ,ಅಥವಾ ಇರುಳು ಒರಕ್ಕು ಕೆಟ್ಟಿಪ್ಪಗ ಮರದಿನ ಕೂದಲ್ಲಿಯೇ ಒರಕ್ಕು ತೂಗುಗು. ಅದು ಸೋಮಾರಿಯ ಲಕ್ಷಣ ಅಲ್ಲನ್ನೆ. ನಮ್ಮಲ್ಲಿ ಚುರುಕು ಕಮ್ಮಿ ಇಪ್ಪವಕ್ಕೆ”ಅವಂಗೆ ಬೊಜ್ಜು ಬೆಳದ್ದು” ಹೇಳ್ತ ಕ್ರಮವೂ ಇದ್ದನ್ನೆ.ಬೊಜ್ಜು ಅತಿಯಾಗಿ ತೆಗಲೆಯೂ ಕಂಠವೂ ಒಂದೇ ಆದ ನಮುನೆ ಕಾಂಬಷ್ಟು ದೇಹ ಬೆಳದಪ್ಪಗ,ಹೇಳಿರೆ ತೆಗಲೆಯೂ ಉಬ್ಬಿ, ಗಲ್ಲವೂ ಕೆಳಾಣ ಭಾಗಲ್ಲಿ ತುಂಬಿ ತೆಗಲೆಗೆ ಮುಟ್ಟುವ ಹಾಂಗೆ ಬೊಜ್ಜು ಬೆಳದಪ್ಪಗ, ತೆಗಲೆಯೂ ಕಂಠವೂ ಒಂದೇ ಆದ ಹಾಂಗೆ ಕಾಣುತ್ತು,ಅಥವಾ ತೆಗಲೆಯೇ ಕಂಠ ಆದ್ದದೋ ಹೇಳ್ತ ಭ್ರಮೆ ಬತ್ತು(ಕಂಠ ಕಾಣೆಕ್ಕಾರೆ ತಲೆ ನೆಗ್ಗೆಕ್ಕು).ಆ ಸ್ಥಿತಿಲಿಪ್ಪ ವೆಗ್ತಿಯ ಕಾಂಬಗಳೆ ಸೋಮಾರಿತನ ಸಹಜವಾಗಿಯೇ ಎದ್ದು ಕಾಂಗು.ಹಾಂಗಾಗಿ ಅತಿಯಾಗಿ ಬೊಜ್ಜು ಬೆಳದವನ ಸೊಮಾರಿತನವ ಕಂಡೇ ಈ ‘ತೆಗಲೆ ಕಂಠ’ನುಡಿಗಟ್ಟು ಉತ್ಪತ್ತಿಯಾದ್ದದು ಆಗಿಕ್ಕು.
ಅಪ್ಪು ತೆಕ್ಕುಂಜ ಕುಮಾರ ಮಾವ° ತೆಗಲೆಯೇ ಕಂಠ ಅರ್ಥಾತ್ ಎರಡು ಒಂದೇ ಆಗಿಪ್ಪೋರಿನ್ಗೆ ಹೀಂಗೆ ಈ ಪದ ಬಳಕೆ ಅನ್ವಯ ಆವುತ್ತು .
ಒಂದು ಒಳ್ಳೆ ಪಾಯಿಂಟ್ ಇದು,ಒಳ್ಳೆ ವಿಶ್ಲೇಷಣೆ, ಎನಗೆ ತಲೆಗೆ ಹೋಗಿತಿಲ್ಲೆ,
ಹವ್ಯಕ ಭಾಷೆಯ ಆಯಾ ಶೈಲಿಗಳಲ್ಲಿ ಒಳುಶಲೆ ಒಪ್ಪಣ್ಣನ ಹಲವಾರು ಮಂದಿ ಪ್ರಯತ್ನಪಡುತ್ತಾ ಇದ್ದು, ಹಲವಾರು ಸೀಮೆಗಳಲ್ಲಿ ನಮ್ಮ ಭಾಷೆಲಿಪ್ಪ ವೆತ್ಯಾಸಂಗಳ ತಿಳುಕ್ಕೊಂಬ ಅವಕಾಶ ಸಿಕ್ಕುತ್ತಾ ಇದ್ದು. ಧನ್ಯವಾದ.
ಉಗರು ನೀರಿಂಗೆ ಹಾಕ ಅದು ಹೇಳುವ ನುಡಿಗಟ್ಟಿನ ಬಗ್ಗೆ ಸುಮಾರು ನಾಲ್ಕು ಐದು ತಿಂಗಳು ಮೊದಲು ಎನ್ನ ಹವ್ಯಕ ಬ್ಲಾಗ್ ಗಿಳಿ ಬಾಗಿಲುಲಿ ಹಾಕಿದ್ದೆ ಭಾರತಿ ಅಕ್ಕ ,ಇನ್ನು ಅದರ ರಜ್ಜ ಸುಧಾರಣೆ ಮಾಡಿ ಇಲ್ಲಿಗುದೆ ಬರೆತ್ತೆ ನಿಂಗಳ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಂಗ
ಎನ್ನ ಗಿಳಿಬಾಗಿಲಿಂದ ಬರಹಂಗೊಕ್ಕೆ ಸಲಹೆ ಸೂಚನೆ ಕೊಟ್ಟು ಚರ್ಚಿಸುತ್ತಾ ವಿಶ್ಲೇಷಿಸುತ್ತಾ, ಜೊತೆಗೆ ಎನಗೆ ಪ್ರೋತ್ಸಾಹ ಕೊಡುತ್ತಾ ಇಪ್ಪ, ಬೈಲಿನ ನೆಂಟ್ರು ಗ ಆಗಿಪ್ಪ
Venugopal Kambaru ಯಮ್.ಕೆ. ಬೊಳುಂಬು ಕೃಷ್ಣಭಾವ ಕೆ.ನರಸಿಂಹ ಭಟ್ ಏತಡ್ಕ ಚೆನ್ನೈ ಭಾವ° ಇಂದಿರತ್ತೆ Bharathi Mahalingesh. ಎಸ್.ಕೆ.ಗೋಪಾಲಕೃಷ್ಣ ಭಟ್ಟ ಕೆ. ವೆಂಕಟರಮಣ ಭಟ್ ತೆಕ್ಕುಂಜ ಕುಮಾರ ಮಾವ° ಭಾಗ್ಯಲಕ್ಶ್ಮಿ ಬೊಳುಂಬು ಗೋಪಾಲ್ ಮಾವ ರಘುಮುಳಿಯ ವೆಂಕಟೇಶ anusha thekkunja ಶಂಕರ ಪಿ.ಎಸ್.ಮಂಗಳೂರು ಶೈಲಜಾ ಕೇಕಣಾಜೆ ಅಡ್ಕತ್ತಿಮಾರುಮಾವ° ಪಾರ್ವತಿ ಮರಕಿಣಿ ts bhat Dr.Subrahmanya Bhat ಶರಾವತಿ ಅಕ್ಕ ಸುಭಾಷಿಣಿ ಹಿರಣ್ಯ ಸುರೇಖಾ ಪ್ರದೀಪ್ ಮುಣ್ಚಿಕಾನಉಡುಪುಮೂಲೆ ಅಪ್ಪಚ್ಚಿ ಕೊಳಚಿಪ್ಪು ಭಾವ ಶ್ಯಾಮಣ್ಣ ,ವಿಜಯಕ್ಕ ,ಒಪ್ಪಣ್ಣ ಮತ್ತೆ ಸತ್ಯಣ್ಣ ! ಮದಲಾದ ಎಲ್ಲೋರಿಂಗು ಆನು ಋಣಿ ಆಗಿದ್ದೆ .
ಎನಗೆ ಗೊಂತಿಪ್ಪ ನುಡಿಗಟ್ಟುಗಳ ಸಂಗ್ರಹ ಕಾಲಿ ಅಪ್ಪಲ್ಲಿವರೆಗೆ ಮತ್ತು ನಿಂಗ ಎಲ್ಲ ಇಷ್ಟ ಪಡುವ ವರೆಗೆ ಬರೆತ್ತೆ .ಎನ್ನ ಇತರೆ ಸಂಶೋಧನೆ ,ಬರವಣಿಗೆ ಮೊದಲಾದವಕ್ಕೂ ನಿಂಗಳೆಲ್ಲರ ಬೆಂಬಲ ಮತ್ತು ಮಾರ್ಗ ದರ್ಶನವ ಬಯಸುತ್ತೆ
ಎಲ್ಲೋರಿಂಗು ಮನ ಪೂರ್ವಕ ಧನ್ಯವಾದಂಗ
“ಜಿಗ್ಗ ” ಹೇಳುವ ಪದವ ಚೆನ್ಹೈ ಭಾವ ಮೊನ್ನೆ ಉಪಯೋಗಿಸಿದವು. ಆನು ಕಾಸರಗೋಡು ಕೋಲೇಜಿಲ್ಲಿ ನಲವತ್ತು ವರ್ಷ ಹಿಂದೆ “ಅಣ್ಣ ಜಿಗ್ಗ” ಹೇಳುವ ಪದವ ಕೇಳಿದ ನೆನಪು. ಅದರ ಅರ್ಥ ಎಂತರ ?????? ದಯವಿಟ್ಟು ತಿಳಿಸಿ.
ಕನ್ನಡದ ಜಗ ಜಗಿಸು ,ಹೊಳೆ ,ಶೋಭಿಸು ಹೇಳುವ ಅರ್ಥಲ್ಲಿ ಜಿಗ್ಗ ಬಳಕೆ ಅಪ್ಪ ಕಾರಣ,ಜಗ ಜಗಿಸು ಹೇಳುದೆ ಅಪಬ್ರಂಶಗೊಂಡು ಜಿಗ್ಗ ಬಂದಿಪ್ಪ ಸಾಧ್ಯತೆ ಇದ್ದು .
ಆನು ಬೆಳ್ಳಾರೆ ಲಿ ಎನ್ನ ವಿದ್ಯಾರ್ಥಿನಿಯರ ಬಾಯಿಲಿ ಈ ಮಾತು ಕೇಳಿದ್ದೆ ಗೆನ ಸೀರೆ ಸುತ್ತಿ ಕೊಂಡು ಹೋದ ದಿನ “ಮೇಡಂ ಭಾರಿ ಜಿಗ್ಗ ಈವತ್ತು “ಹೇಳಿ
ಕೋಳ್ಯೂರು ಕಡೆ ಹವ್ಯಕಲ್ಲಿ ಜಿಗ್ಗ ಹೇಳುವ ಪದ ಬಳಕೆ ಇಲ್ಲೇ ಹೇಳಿ ಎನ್ನ ಅಂದಾಜು
ಜಿಗ್ಗ ಹೇಳಿರೆ ಕಣ್ಣು ಕೋರೈಸುವ ಹಾಂಗೆ ಇಪ್ಪದು ಹೇಳಿ ಆದಿಕ್ಕು..
ಈ ವಾಕ್ಯ ನೋಡಿ- “ಜಿಗ್ಗನೆ ಬೆಣ್ಚಿ ಬಿದ್ದತ್ತು”
ಹೇಳಿರೆ ಕಣ್ಣು ಕೊರೈಸುವ ಹಂಗೆ ಬೆಣ್ಚಿ ಬಿದ್ದತ್ತು ಹೇಳಿ ಅಲ್ಲದಾ?
ಬಹುಷ ಇಂಗ್ಳಿಶಿನ “zig” ಹೇಳುದರಿಂದ ಬಂದದಾಗಿಪ್ಪಲೂ ಸಾಕು.
ಹವ್ಯಕ ಭಾಷೆಯ ಸುಂದರ ನುಡಿಗಟ್ಟು . ಉದಾಸೀನದ ಮುದ್ದೆಗೊಕ್ಕೆ ಹೇಳಿಮಾಡ್ಸಿದ್ದು . ಯಾವುದೇ ಕೆಲಸ (ಸಹಾಯ ) ಮಾಡದ್ದವರ – ಅವ ಉಗುರು ಮುರುದು ನೀರಿಂಗೆ ಹಾಕ .. ಹೇಳಿಯೂ ಹೇಳ್ತವಲ್ಲದಾ ? ಇದು ಎಂಗಳ ಕಡೆ ಭಾರೀ ಪ್ರಚಲಿತ ಇಪ್ಪ ಮಾತು .. ಇದರ ಬಗ್ಗೆ ಗೊಂತಿಪ್ಪವರ ಅಭಿಪ್ರಾಯ ಬಯಸುತ್ತೆ..
ನಮ್ಮ ಸುತ್ತಲೂ ಇಪ್ಪಂಥ ಒಂದು ಅಪರೂಪದ ನುಡಿಗಟ್ಟಿನ ವಿಶ್ಲೇಷಿಸಿದ ವೈಖರಿ ಅದ್ಭುತ ! ಇದು ಊಹೆಯೇ ಆದರೂ ಊಹೆಯೇ ಶೋಧನೆಗೆ ಮೊದಲಾಣ ಮೆಟ್ಲು ಅಲ್ಲದಾ? ಇದರಂದ ಸಮಂಜಸವಾದ ಊಹೆ ಸಿಕ್ಕುವನ್ನಾರ ಇದೇ ಸರಿಯದ ಉತ್ತರ ಹೇಳಿ ತಿಳ್ಕೊಂಬ°. ಹಾಂಗೆ ಇನ್ನೂ ಸಮರ್ಪಕವಾದ ಅಭಿಪ್ರಾಯವ ಬಲ್ಲವರು ಹೇಳ್ತವು ಹೇಳುವ ನಿರೀಕ್ಷೆಯನ್ನೂ ಮಡಿಕ್ಕೊಂಬ°. ಲಕ್ಷ್ಮಿಅಕ್ಕ, ಅಪರೂಪದ ನುಡಿಗಟ್ಟಿನ ಪರಿಚಯ ಮಾಡಿಸಿದ್ದಕ್ಕೆ ಅಭಿನಂದನೆಗೊ.
ಎನ ಇನ್ನು ಎಂತಾರು ಆಪೀಸಿಲ್ಲಿ ಕೂದೊಂಡೋ, ಸಾರ್ವಜನಿಕ ಸ್ಥಳಲ್ಲಿ ಕೂದೊಂಡೋ, ಇನ್ನೊಬ್ಬನ ಎದುರೆ ಕೂದೊಂಡೋ ಈ ಒರಕ್ಕು ತೂಗುತ್ತ ಕೆಲಸ ಆಗಪ್ಪ ! 😀
ಅಕ್ಕನ ಅಧ್ಯಯನ ಪಷ್ಟಾಯ್ದು.
ಸೋಮಾರಿಗೊಕ್ಕೆ ತುಳುವಿಲ್ಲಿ ತಿಗಲೆ ಕಂಡು,ತಿಗಲೆ ಗಂಟೆ ಹೇಳುವ ಪದಂಗಳ ಪ್ರಯೋಗ ಮಾಡ್ತವು.
ಕೇವಲ ಊಹೆ ಅಲ್ಲದ್ದೆ ಬೇರೆ ಆಧಾರ ಸಿಕ್ಕಿರೆ ಹೇಳಿ. ಇದು ಕೇವಲ ಊಹೆ. ಹಾಂಗೆ ಅಲ್ಲದ್ದೆ ಇಪ್ಪ ಸಾಧ್ಯತೆಯೇ ಹೆಚ್ಚು.
ಇದು ಕೇವಲ ಉಹೆ ಅಲ್ಲ ,ವಿಶ್ಲೇಷಣೆ ಕೂಡ ಬೊಳುಂಬು ಕೃಷ್ಣ ಭಾವ
ಭಾಷಾ ವಿಜ್ಞಾನಿಗಳ ಪ್ರಕಾರ ನುಡಿಗಟ್ಟುಗ ಹೆಚ್ಚಿನೆಡೆ ಅರ್ಥ ವಿಸ್ತಾರ /ಅರ್ಥ ಬದಲಾವಣೆಯ ಪ್ರಕ್ರಿಯೆಂದ ಉಂಟಾದ ಪ್ರಯೋಗಂಗ (ರಾಬರ್ಟ್ ಕಾರ್ಡ್ ವೆಲ್ )ನುಡಿಗಟ್ಟುಗಳ ಅರ್ಥೈಸುವಾಗ ಮೂಲ ಶಬ್ದಾರ್ಥ ಮತ್ತು ರೂಡಿಲಿ ಬಳಕೆ ಇಪ್ಪ ಅರ್ಥವ ನೋಡಿಗೊಂಡು ವಿಶ್ಲೇಷಿಸಿ ನಿರ್ಧಾರಕ್ಕೆ ಬರಕ್ಕು ಹೇಳಿ ಡಾ.ವೆಂಕಟಾಚಲ ಶಾಸ್ತ್ರಿ ಅವರ ಅಭಿಪ್ರಾಯ
ತಿಗಲೆ ಕಂತೆ /ಕಂಟೆ ಹೇಳುವ ನುಡಿಗಟ್ಟು ತುಳುವಿಲಿ ಸೋಮಾರಿಗಳ ಕುರಿತು ಬಳಕೆಲಿ ಇದ್ದು ನಮ್ಮ ಭಾಷೆಲಿ ತೆಗಲೆ ಕಂಠ ಹೇಳುವ ಬಳಕೆ ಇದ್ದು .ತೆಗಲೆ /ತಿಗಲೆ ಹೇಳುದಕ್ಕೆ ಎದೆ ಹೇಳುವ ಶಬ್ದಾರ್ಥ ಎರಡೂ ಭಾಷೆಗಳಲ್ಲಿ ಇದ್ದು.
ಕಂಠ ಹೇಳುವ ಪದ ಕಂತೆ ಹೇಳುವ ತುಳು ಪದ ನೇತು ಹಾಕುವೋನು ಹೇಳುದರಿಂದ ಬಂದಿಪ್ಪ ಸಾಧ್ಯತೆ ಇದ್ದು ಕಂತು ಪಾಡುನೆ ಹೇಳುದಕ್ಕೆ ನೇತು ಹಾಕು ಹೇಳುವ ಅರ್ಥ ಕೋಳ್ಯೂರು ಕಡೆ ತುಳುವಿಲಿ ಇದ್ದು
ತಲೆ ಕಂತು ಹಾಕಿದ ಹೇಳ್ರೆ ತಲೆ ಕೆಳ ಮಾಡಿದ ಹೇಳುವ ಪದ ಬಳಕೆ ನಮ್ಮ ಭಾಷೇಲಿ ಇದ್ದು .ಜೊತೆಗೆ ಕಂಠ ಹೇಳುದಕ್ಕೆ ಕೊರಳು ಹೇಳುವ ಅರ್ಥ ಹೆಂಗೂ ಇದ್ದನ್ನೆ
ಯಾವುದೇ ಒಂದು ವಿಷಯದ ಬಗ್ಗೆ ನಿಷ್ಕರ್ಷೆಗೆ ಬರಕ್ಕಾದರೆ ಊಹೆ ,ವಿಶ್ಲೇಷಣೆ ಮತ್ತು ಚರ್ಚೆ ಹೇಳುವ ಮೂರೂ ವಿಚಾರಂಗ ಮುಖ್ಯ ಅಲ್ಲದ.
ಇಲ್ಲಿ ಊಹಿಸಿ ಎನ್ನ ತಿಳುವಳಿಕೆಯ ವ್ಯಾಪ್ತಿಲಿ (ಕೆಲೊವೊಂದರಿ ಸಂಶಯ ಬಂದಪ್ಪಗ ಹಿರಿಯತ್ತರೆ ಚರ್ಚಿಸಿ )ವಿಶ್ಲೇಷಿಸುವ ಯತ್ನ ಮಾಡಿದ್ದೆ.ಈ ತೆಗಲೆ ಕಂಠ ಹೇಳುವ ಪದ ಬಳಕೆ ಬಗ್ಗೆ ಡಾ.ಟಿ .ವಿ ವೆಂಕಟಾಚಲ ಶಾಸ್ತ್ರಿ ,ಡಾ.ಮಧುರಾ ಹೆಗಡೆ (ಶೇಷಾದ್ರಿ ಪುರಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಭಾಷಾ ವಿಜ್ಞಾನದ ಉಪನ್ಯಾಸಕಿ)ಹತ್ತರೆ ಪ್ರಸ್ತಾಪಿಸಿ ಎನ್ನ ಅಭಿಪ್ರಾಯವ ಹೇಳಿ ಅಪ್ಪಗ ಅವು ಇಬ್ರುದೆ ಆನು ಹೇಳಿದ ವಿಚಾರಕ್ಕೆ ಸಹಮತ ವ್ಯಕ್ತ ಪಡಿಸಿದ್ದವು.
ಇನ್ನು ಬೇರೆ ಬೇರೆ ಕಡೆಲಿ ನಮ್ಮ ಭಾಷೆ ಅಥವಾ ಬೇರೆ ಭಾಷೇಲಿ ಇದೆ ಅರ್ಥಲ್ಲಿ ಇದೆ ರೀತಿಯ ಬಳಕೆ ಇದ್ದ ಹೇಳುದು ಚರ್ಚೆ ಆಗಲಿ ,ಆಯಕ್ಕು ಹೇಳುದು ಎನ್ನ ಅಭಿಪ್ರಾಯ .
ಆನು ಹೇಳುವ ಯಾವುದೂ ಅಂತಿಮ ಅಲ್ಲವೇ ಅಲ್ಲ.ಈ ಬಗ್ಗೆ ಯಾವುದಾದರೂ ಬೇರೆ ಬಲವಾದ ಆಧಾರ ಸಿಕ್ಕಿರೆ ತಿಳಿದು ಬರಕ್ಕು ಹೇಳುದೆ ಎನ್ನ ಆಶಯ
ನಿಂಗಳ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಂಗ
Dr laxmi prasad
ಬಿಷಪ್ ರೋಬರ್ಟ್ ಕಾಲ್ಡ್‍ವೆಲ್ಲನ ಆರ್ಯಾಕ್ರಮಣ ವಾದದ ಹಿನ್ನೆಲೆ ಇಪ್ಪ ಸಿದ್ಧಾಂತವ ಒಪ್ಪಲೆ ವೈಜ್ಞಾನಿಕವಾದ ಸಾಕ್ಷಿಗೊ ಅಡ್ಡಿ ಆವುತ್ತು.
ಇನ್ನು “ಹವ್ಯಕ ಭಾಷೆ” ಹೇಳ್ತ ಭಾಷೆಲಿ ವ್ಯಾಪಕವಾಗಿ ಈ “ತೆಗಲೆ ಕಂಠ°” ಚಾಲ್ತಿಲಿ ಇಲ್ಲೆ ಹೇಳುವುದು ಇಲ್ಲಿ ಬಂದ ಕಮೆಂಟುಗಳಿಂದಲೇ ಗೊಂತಾವುತ್ತು. ಒಂದು ಸೀಮಿತ ಪ್ರದೇಶಲ್ಲಿ ಕೆಲವು ಜೆನ ಉಪಯೋಗುಸುವ ಶಬ್ದ ಅದು, ಅಷ್ಟೇ. ಊರಿಲಿ ಮಾತಾಡುವಗ ತುಳು,ಮಲೆಯಾಳ ಶಬ್ದಂಗಳೂ ಕೆಲವು ಸೇರಿಹೋಪ ಹಾಂಗೆ ಹೇಳಿ ಅಲ್ಲದ್ದೆ ಬೇರೆ ವೈಶಿಷ್ಟ್ಯ ಅದಕ್ಕಿಲ್ಲೆ. ಅದೇ ರೀತಿ ಬೆಂಗುಳೂರಿಲಿ ಮಾತಾಡುವಗ ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಗಳ ಶಬ್ದಂಗೊ ಕನ್ನಡವೇ ಆಗಿಂಡಿಪ್ಪ ಹಾಂಗೆ ಪ್ರಯೋಗ ಆವುತ್ತು.
ಇನ್ನು ತರ್ಕಬದ್ಧ ವಿಶ್ಲೇಷಣೆಯೇ ಆಗಿದ್ದರೆ, “ಮೋಡೆ” ಹೇಳ್ತ ಲೇಖನಲ್ಲಿ ಎನ್ನ ಅಭಿಪ್ರಾಯಕ್ಕೆ ನಿಂಗೊ ಉತ್ತರ ಕೊಟ್ಟಿದಿಲ್ಲಿ. ಇನ್ನೊಂದು ಪ್ರಶ್ನೆ ನಿಂಗೊಗೆ – ಕನ್ನಡಲ್ಲಿ ‘ಕುಡಿಸು’ ಇಪ್ಪದು ನಮ್ಮ್ಲಲ್ಲಿ ‘ಕುಡುಶು’ ಆದರೆ ಕನ್ನಡಲ್ಲಿ ‘ಮಾಡುಸು’ ಇಪ್ಪದು ನಮ್ಮಲ್ಲಿ ‘ಮಾಡುಶು’ ಆವುತ್ತಿಲ್ಲೆ. ಇದೇಕೆ ಹೀಂಗೆ? ನಿಂಗಳ ಉತ್ತರ ಬೇಕು.
ತೆಕ್ಕುಂಜ ಕುಮಾರ ಮಾವನ ಪ್ರಕಾರ ಏತಡ್ಕ ಮಾವ° ಹೇಳಿದ್ದೊಂದೇ ಸರಿಯಡ. ಎಂತಕೆ ಹೇಳಿ ಹೇಳಿದ್ದವಿಲ್ಲೆ. ಇರಲಿ.
ಆನು ಸುರುವಿಲಿಯೇ ಒಂದು ವಿಷಯ ಹೇಳಿದ್ದೆ .ಆನು ಎಂಗಳ ಕೋಳ್ಯೂರು ಪರಿಸರಲ್ಲಿ ಎಂಗ ಬಳಕೆ ಮಾಡುವ ಹವ್ಯಕ ಭಾಷೆಲಿ ಇಪ್ಪ ವಿಶಿಷ್ಟ ಪದ ಪ್ರಯೋಗಂಗಳ ಇಲ್ಲಿ ಬರದು ಎನಗೆ ಅರದಡಿಗಾದ ರೀತಿಲಿ ತಿಳಿಸುತ್ತೇ ಹೇಳಿ ,ನಿಂಗ ಎಲ್ಲ ತಿಳಿದೋರು ಹಂಸ ಕ್ಷೀರ ನ್ಯಾಯದ ಹಾಂಗೆ (ಹಂಸದ ಎದುರು ಹಾಳು ಮಿಶ್ರಿತ ನೀರಿನ ಮಡುಗಿರೆ ಅದು ಹಾಲಿನ ಮಾತ್ರ ಸ್ವೀಕರಿಸಿ ಒಳುದ್ದರ ಅಲ್ಲಿಯೇ ಬಿಡುತ್ತು ಹೇಳಿ ನಂಬಿಕೆ ) ಎನ್ನ ಬರಹಂಗಳಲ್ಲಿ ಇಪ್ಪ ಒಳ್ಳೆಯ ಅಂಶ ಮಾತ್ರ ಸ್ವೀಕರಿಸಕ್ಕು ಹೇಳಿ ವಿನಂತಿಸಿದ್ದೆ.
ಆನು ಇಲ್ಲಿ ಉಲ್ಲೇಖಿಸಿದ ಪದಂಗಳ ಬಗ್ಗೆ ಮಾತ್ರ ಎನಗೆ ಗೊಂತಿದ್ದರೆ ಆನು ಇಲ್ಲಿ ಸ್ಪಷ್ಟೀಕರಣ ಕೊಡುತ್ತೆ ಹೊರತು ಬೇರೆ ಪದ/ವಿಷಯಗಳ ಬಗ್ಗೆ ಆನು ಗೊಂತಿದ್ದರೂ ಯಾವುದೇ ಚರ್ಚೆ ಮಾಡುತ್ತಿಲ್ಲೆ,ಎಂತಕೆ ಹೇಳ್ರೆ ಒಟ್ರಾಸಿ ಚರ್ಚೆ ಮಾಡುದು ಎನ್ನ ಉದ್ದೇಶ ಅಲ್ಲ.ಅದು ಹಾಂಗೆ ಮಾಡ್ರೆ ವಿಷಯಾಂತರ ಆಗಿ ಎಲ್ಲಿಂದ ಎಲ್ಲಿಗೋ ಹೊವುತ್ತು.ಎಲಿಯ ಕೊಲ್ಲುಲೆ ಪುಚ್ಚೆ ಸಾಂಕುಲೇ ಹೋಗಿ ಸನ್ಯಾಸಿ ಸಂಸಾರಿ ಆದ ಹಾಂಗೆ
ಆನು ಹೇಳಿದ ಕಾಲ್ಡ್ ಹೇಳಿದ ಅಭಿಪ್ರಾಯದ(ನುಡಿಗಟ್ಟುಗ ಅರ್ಥ ವಿಸ್ತಾರ ಮತ್ತು ಅರ್ಥಾನ್ತರಂದ ಉಂಟಾದ ಪ್ರಯೋಗ ) ಬಗೆ ಯಾವುದೇ ಭಾಷಾ ವಿಜ್ಞಾನಿಗ ಅಕ್ಷೇಪ ವ್ಯಕ್ತಪಡಿಸಿದ್ದವಿಲ್ಲೇ ,ಅದರ ವಿಶ್ವದ ಎಲ್ಲ ಭಾಷಾ ಶಾಸ್ತ್ರಜ್ಞರು ಒಪ್ಪಿಗೊಂಡಿದವು.ಕಾಲ್ಡ್ ವೆಲ್ ಣ ಕೆಲವು ದ್ರಾವಿಡ ಭಾಷಾ ಮೂಲದ ಕುರಿತಾದ ಸಿದ್ಧಾಂತಗಳ ಬಗ್ಗೆ ಚರ್ಚೆ ಇದ್ದು ಆದರೆಪೂರ್ತಿಯಾಗಿ ಸರಿ ಇಲ್ಲೇ ಹೇಳಿ ಆರೂ ಹೇಳಿದ್ದವಿಲ್ಲೆ.
ಹವ್ಯಕ ಭಾಷೆಲಿ ತೆಗಲೆ ಕಂಠ ತುಳುವಿಲಿ ತಿಗಲೆ ಕಂತೆ /ಕಂಟೆ ಹೇಳುವ ಶಬ್ದಗಳ ಬಳಕೆ ಕೋಳ್ಯೂರು ಪರಿಸರಲ್ಲಿ ಇದ್ದು, ಎಂಗಳ ಮನೆ ಹವ್ಯಕ ಮಾತಿಲಿ ಇದ್ದು,ನಮಗೆ ಗೊಂತಿಲ್ಲೇ ಹೇಳಿದರೆ ಅದು ಇಲ್ಲೇ ಹೇಳಿ ಭಾವಿಸುಲಾಗ.
ನಾವು ಎಲ್ಲೋರು ಅವರವರ ಪರಿಸರಲ್ಲಿ ಇಪ್ಪ ವಿಶಿಷ್ಟತೆಗಳ ಒಬ್ಬೊಬ್ಬ ದಾಖಲಿಸಿ ಚರ್ಚಿಸಿದರೆ,ನಮ್ಮ ಭಾಷೆಯ ಬೆಳವಣಿಗೆಗೆ ಸಹಕಾರಿ ಹೇಳಿ ಎನ್ನ ಅಭಿಪ್ರಾಯ
ನಿಂಗಳ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಂಗ
ಬೆಳವಣಿಗೆಗೆ ಸಹಕಾರಿ ಹೇಳಿ ಎನ್ನ ಅಭಿಪ್ರಾಯ ,
ಇ೦ದು ಬೈಟುಕಾಪಿಲಿ ನಿ೦ಗಳ ಟೂರಿಲಿ ”ಬೆಳ್ಳಾರೆ ಬೀಟ್ ” ಲೇಖನ ಕ೦ಡಪ್ಪಗಳೇ ಇದು ಮತ್ತೊ೦ದರಿ ಗೊ೦ತ್ತಾತು.
ಎನಗೆ ಇಂದು ಕನ್ನಡ ಪ್ರಭಲ್ಲಿ ಎನ್ನ ಲೇಖನ ಬಂದದು ಗೊಂತಾಗಿತ್ತಿಲ್ಲೆ.ನಿಂಗ ಇಲ್ಲಿ ಬರದ್ದರ ನೋಡಿ ಇಂಟರ್ನೆಟ್ ಮೂಲಕ ನೋಡಿದೆ .ತಿಳಿಸಿದ್ದು ತುಂಬಾ ಉಪಕಾರ ಆತು .ಬಂದ ಲೇಖನವ ಓದಿ ಎನ್ನದು ಹೇಳಿ ಗುರುತಿಸಿ,ಅಭಿಮಾನಂದ ತಿಳಿಸಿದ್ದಕ್ಕೆ ನಿಂಗೊಗೆ ಮನಃ ಪೂರ್ವಕ ಧನ್ಯವಾದಂಗ ಅಣ್ಣ ಯಮ್.ಕೆ.
ನಮ್ಮ ಮೊದಲೆ ಕ೦ಡಿದ್ದರೆ ಏವತ್ತೇ ಗೊ೦ತ್ತಾವುತ್ತಿತು ಹಾ೦ಗಾರೆ.ಸದ್ಯ ಬಚಾವ್.
ತುಳುವಿಲಿ .ತಿಗಲೆ ಕಳುವೆ ಹೇಳುವ ಪ್ರಯೋಗವು ಇದ್ದು ತೋರ್ತ್.
ಅಲ್ಲದೇ ದಾನೇ ತಿಗಲೆ ಎಳ್ ಕೋಲ್,ಹೀ೦ಗೆಲ್ಲಾ ಇರೆಕ್ಕು.
ಆಗಿಕ್ಕು. ಇದು ಕೇಳದ್ದ ಶಬ್ದ