ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು.
ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು.
( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat )
ಹ್ಮ್, ಅಪ್ಪು.
ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ.
ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು.
ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ.
ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು!
ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ.
ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ?
ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ.
ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು!
ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°.
ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?
ಇದು ನಿಂಗೊಗೆ ಗೊಂತಿಲ್ಲದ್ದ ಶಬ್ದ ಅಲ್ಲ.
ಇದಕ್ಕೆ ಐದು ಅಕ್ಷರ.
೧,೨ ನೇ ಅಕ್ಷರ ಸೇರಿಸಿದರೆ-ರಾಶಿ
೧,೪,೫-ಇದು ಅಳವಲಲ್ಲ ಬೇಶಲಿಪ್ಪದು
೩,೨-ಬೆಳೆ ಬೆಳೆಕ್ಕಾರೆ ಸುರು ನೆಲ ಅಗೆದು,ಉತ್ತು ಇದು ಮಾಡೆಕ್ಕು
೩,೪-ಇವ ದೊಡ್ಡ ಮನುಷ್ಯ,ಆದರೆ ಹೆಂಡತಿಯ ಕಾಡಿಲಿ ಬಿಟ್ಟು ಹೋದ!
೧,೫-ಭತ್ತದ ಸಣ್ಣ ಸೆಸಿ
೩,೫-ಇದಕ್ಕಾಗಿಯೇ ಬೈಲಿಲಿ ಒಬ್ಬ ಇದ್ದ.
ಈಗ ಒಂದು ಸಾಕು,ಇದಕ್ಕೆ ಉತ್ತರ ಹೇಳಿ .ಮತ್ತೆ ಕಾಂಬೊ.
ಈ ಶಬ್ದವನ್ನೆ ಈ ವರ್ಷ ಪುಸ್ತಕಕ್ಕೆ ಮಡಿಗಿದ್ದವು ಅಲ್ಲದೊ!
ಹೋ..ಅಪ್ಪನ್ನೇ..
ಗೊಂತಾತು… ಗೊಂತಾತು… 🙂
ನಿಂಗಳ ಉತ್ತರಾ ಓದಿ ಯನಗೆ ರಾಶಿ ಖುಶೀ ಆತು ನೋಡಿ. ನಿಂಗ್ಳೆಲ್ಲಾ ದೋಸ್ತಂದಿಕ್ಳ ಮಾಡ್ಕಂಬೂಲೆ ಯಂತಾ ಮಾಡ,……
ಎನಗುದೇ ಗೊಂತಾತೂ.. 🙂
ಭಾರೀ ಲಾಯ್ಕಾಯಿದು ಒಗಟು ಮಾಡಿದ್ದು.
ಧನ್ಯವಾದ ಎಲ್ಲರಿಂಗೂ.
ಅಂತೂ ಇಂತೂ ಉತ್ತರ ಗೊಂತಾತು !!
{ ೩,೫-ಇದಕ್ಕಾಗಿಯೇ ಬೈಲಿಲಿ ಒಬ್ಬ ಇದ್ದ. }
– ಅದಾ, ಎನಗೆ ಗೊಂತಾತು ಎನ್ನ ಬಗ್ಗೆ ಆರೋ ಮಾತಾಡಿಗೊಂಡಿದ್ದವು ಹೇಳಿ.
ಉತ್ತರ:
ಎನಗೆ ಇದರ ಉತ್ತರ ನೆಂಪಾದರೆ ಶುಬತ್ತೆಯ ನೆಂಪಾವುತ್ತು. ಶುಬತ್ತೆಯ ಕಂಡರೆ ಇದನ್ನೇ ನೆಂಪಪ್ಪದು!
ಅದಾ, ಒಂದು ಮರದತ್ತು ಹೇಳುಲೆ:
ಮೊನ್ನೆಮೊನ್ನೆ ಒಂದೆರಡು ವಾರಂದಿತ್ತೆ ಸುಬಗಣ್ಣನನ್ನೂ ನೆಂಪಾವುತ್ತು! 😉
ಎನಗುದೆ ಗೊಂತಾತು ಟೆಂಟಡಾಂಯ್…. 😀
ಮೊನ್ನೆ ಸುಬಗಣ್ಣ ಇದರ ತೊಳವಲೆ ಸಾರಡಿ ತೋಡಕರೆಂಗೆ ತೆಕ್ಕೊಂಡು ಹೋದ್ದಡ.
“ತೊಳದಾತೋ?” ಹೇಳಿ ಮನೆದೇವರು ಜೋರುಮಾಡಿ ಕೇಳುವಗ ಹೆದರಿ ಪಕ್ಕನೆ ಕೆಳಂಗೆ ಬಿದ್ದತ್ತಡ.
{ಟೆಂಟಡಾಂಯ್…}
ಇದೇ ಶೆಬ್ದ ಬಂತಾಡ! 😉 😉 😉
ಅಷ್ಟು ಶಬ್ದ ಬಂದಿದ್ದರೆ ಞಗ್ಗಿತ್ತಾಳಿ ಅಂಬಗ.. ಮತ್ತೆಂತಾತೋ !!!!!
ನಿನ್ನೆಯಾಣದ್ದೋ ಮನ್ನೆಯಾಣದ್ದೋ ಚಪಾತಿ ಬಾಕಿ ಒಳುದ್ದು ಇದ್ದರೆ ಇದರಲ್ಲಿ ಹಾಕಿ ಬೆಶಿಮಾಡಿ ಕೊಟ್ರಾತು. ‘ಈ ಮನುಶ್ಶ’ ಭಾರೀ ಕೊಶಿಲಿ ತಿಂಗು!
ಈಗ ಇವ ಟ್ಟೆ ಟ್ಟೆ ಟ್ಟೇ..! 😀 😀 😀
ತೊಳದ್ದು ಅಂದು ಪಟಲ್ಲಿ ತೋರ್ಸಿದ ವೇಷ್ಟಿಯನ್ನೋ?!
ನೆಗೆಗಾರಣ್ಣ ಹೇಳಿದ ಪಾತ್ರ ಬಿದ್ದ ಶಬ್ದ ಕೇಳಿಯೆ ಅಲ್ಲದೊ ಅ೦ದು ಕಾಳಿದಾಸ
‘ರಾಜಾಭಿಷೇಕೇ ಮದವಿಹ್ವಲಾಯಾಃ
ಹಸ್ತಾತ್ಚ್ಯುತೋ ಹೇಮಘಟಸ್ತರುಣ್ಯಾಃ
ಸೋಪಾನಮಾಸಾದ್ಯ ಕರೋತಿ ಶಬ್ದ೦
ಟ೦ಟ೦ಟಟ೦ಟ೦ ಟಟಟ೦ಟಟ೦ಟ೦’
ಹೇಳಿ ಶ್ಲೋಕ ಬರದ್ದದು!!
ವಾಹ್…!!!
ಸಿಕ್ಕಿತ್ತು 🙂
ಅಬ್ಬ………..ಉತ್ತರ ಗೊನ್ತತು…ಉದಿಯನ್ದ try ಮಾಡಿಗೊನ್ದು ಇತ್ತಿದ್ದೆ..
ಆನು ಈಗಂಗೆ ಮುಳಿಯ ರಘು ಭಾವನ ಒಟ್ಟಿಂಗೆ.
ಆನು ಈಗ ನಿ೦ಗಳೊಟ್ಟಿ೦ಗೆ… ;)…
ಭುಜ ಮುಟ್ಟಿಯೊಳ್ತೆ.. 😉
ಕುಕ್ಕರಿಲ್ಲಿ ಆದರೆ ಶಬ್ದ ಕೇಳುಗು. ಇದರಲ್ಲಿ ಶಬ್ದ ಕೇಳ್ತ ? ಮುಟಿಕ್ಕೆಡಿ. ಕೈಲಿ ಪೊಕ್ಕುಳು ಬಕ್ಕು.
ಗೋಪಾಲಣ್ಣ, ಲಾಯಕಾಯಿದು.
ಗೋಪಾಲಣ್ಣ೦ಗುದೆ ಒಪ್ಪ೦ಗೊ. ಪ್ರಶ್ನೆ ಭಾರಿ ಲಾಯಿಕಾಯಿದು
ಶರ್ಮಪ್ಪಚ್ಚಿಗೆ hats off!!
ಅದು ಒ೦ದು ಸಿಕ್ಕಿಯಪ್ಪಗ ಬಾಕಿ ಎಲ್ಲವುದೆ ಮಿ೦ಚಿನ ವೇಗಲ್ಲಿ ಸಿಕ್ಕಿತ್ತು. ವಿಷುವಿ೦ಗೆ ಕೊಟ್ಟಿಗೆ ಮಾಡೆಕಾರೆ ಇದು ಬೇಕಾಯ್ಕಲ್ಲದೊ?
ಗಣೇಶಣ್ಣೊ.. 🙂
ಎಲ್ಲ ಸರಿ ನಿ೦ಗೊ ಟೊಪ್ಪಿತೆಗದು ಕರೆಲಿ ಮಡುಗಿದ್ದು ಎ೦ತಕೆ?? 😉
ಶರ್ಮಪ್ಪಚ್ಚಿ ಹಾಕಿದ ಟೊಪ್ಪಿ ಯೋ ?? ಏ? 😛
ಏ ಬೋಸ ಭಾವಾ.. ಕೊಟ್ಟಿಗೆ ಹೇಳಿದ ಕೂಡ್ಳೇ ನಿ೦ಗೊ ಬ೦ದಿರನ್ನೆ? ಎ೦ತರ ಇದರ ಗುಟ್ಟು? 😉
ಶರ್ಮಪ್ಪಚ್ಚಿ ಟೊಪ್ಪಿ ಹಾಕುತ್ತ ಬಗೆ ಅಲ್ಲ. ಬೈಲಿಲ್ಲಿ ಇಷ್ಟು ದಿನ ಆತಿಲ್ಯೋ.. ಇನ್ನುದೆ ನಿ೦ಗೊಗೆ ಗೊ೦ತಾಯಿದಿಲ್ಲೆಯೋ? ಏ? 😉
ಶರ್ಮಪ್ಪಚಿ,…ನಿಂಗೊ ಅಂದಾಜು ಮಾಡಿದ್ದು ಸರಿಯೇ..
ಉತ್ತರ ಸಿಕ್ಕಿತ್ತು. ಈಗ ಬೇಡ. ಹಶು ಆವುತ್ತಾ ಇದ್ದು, ಬೇಯಿಸಿದ್ದರೆ ತಿಂದಿಕ್ಕಿ ಮತ್ತೆ ಉತ್ತರ ಹೇಳುವ..!
ಅಕ್ಕಂಬಗ. ಹಾಂಗೇ ಮಾಡುವೊ.
ಗೋಪಾಲಣ್ಣನ ಶಬ್ದ ವಿಶ್ಲೇಷಣೆ ಲಾಯಿಕ ಆಯಿದು.
ಭತ್ತದ ಸಣ್ಣ ಸೆಸಿಗೆ “ಅಗೆ” ಹೇಳ್ತವಾ?
ಅದಾ,
ಶರ್ಮಪ್ಪಚ್ಚಿಯ ಒ೦ದು ಸೂಚನೆ ಸಾಕಾತು.ಸರಿ ಇರೇಕು ಅಪ್ಪಚ್ಚಿ..ಒಳುದ್ದೆಲ್ಲ ಸರೀ ಹೊ೦ದುತ್ತು.
ನಂಗಕೆ ನಿಂಗಳ ಭಾಶೆನೇ ಭಾಳ ಮಜಾ ಕಾಣ್ತು,, ಆದ್ರೂ ನಿಂಗಳ ಕಾಂಬುದೇ ಒಂದು ಅವಕಾಶ… ಒಳ್ಳೆ ಚರ್ಚೆ ನಡೀತು, ತುಂಬಾ ಧನ್ಯವಾದ ನಿಂಗೋಕೆ
ಪ್ರಶಾ೦ತ ಭಾವಾ,
ಕೊಶೀ ಆತು,ಮಾತಾಡದ್ದೆ ಕರೇಲಿ ಕೂರೆಡಿ..ಸಭೆಗೆ ಬನ್ನಿ,ಹೀ೦ಗೇ ಮಾತು ಮು೦ದುವರಿಸುವೊ°..
ಪ್ರಶಾಂತನ ಹತ್ತೆರೆ ಚಂಕಾಯಿ ಸುರು ಆಯಿದೋ ರಘು…!!!
ಯಾವುದೆ ಕಾಳಿನ,ಬೀಜದ ಮೊಳಕೆ ಬಂದ ಕೂಡಲೇ ಅಗೆ ಹೇಳುತ್ತವು. ಇಲ್ಲಿ ಉದಾಹರಣೆಗೆ ಹೇಳಿದ್ದು ಅಣ್ಣ.
ಆನು “ನೇಜಿ” ಹೇಳಿ ಗ್ರೇಶಿ ದಿಕ್ಕು ತಪ್ಪಿದ್ದದು..
ಇ೦ದು ಉದಿಯಪ್ಪಗ ಈ ಲೆಕ್ಕಲ್ಲಿ ಉ೦ಡೆಯೂ,ರವೆಯೂ ದಕ್ಕಿತ್ತು..
ಫಷ್ಟಾಯಿದು ಗೊಪಾಲಣ್ಣ.
ಗೋಪಾಲಣ್ಣ,
ಹೇ೦ಗೆ ತಿರ್ಗುಸಿರೂ ಪಿಡಿ ಸಿಕ್ಕುತ್ತಿಲ್ಲೆ.ಪೆರ್ವ ಭಾವನೇ ಆಯೆಕ್ಕಟ್ಟೆ.
Eno enagoo uthara sikkiddille.