Oppanna.com

ಸಮಸ್ಯೆ 102 : “ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ”

ಬರದೋರು :   ಸಂಪಾದಕ°    on   12/09/2015    37 ಒಪ್ಪಂಗೊ

ಕಳುದ ವಾರದ ಕಡ್ಲೆ ಪಾಯಸ ರೈಸಿದ ಲೆಕ್ಕಲ್ಲಿ ಈ ವಾರ ಸೇಮಗೆ ಮಾಡುವ ಮನಸ್ಸಾತಿದ.
ಈ ವಾರ “ಲ೦ಗರುಚ೦” ಅಥವಾ “ಜಗದ್ವ೦ದಿತ೦” ಹೇಳ್ತ ಅಕ್ಷರವೃತ್ತದ ಪರಿಚಯ ಮಾಡಿಗೊ೦ಬ° .
ಈ ವೃತ್ತದ ಲಕ್ಷಣ ಹೀ೦ಗಿದ್ದು : ನಾನನನಾ ನನ/ನಾನನನಾ/ನನ/ನಾನನನಾ

ಸಮಸ್ಯೆ : “ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ”

ಎಲ್ಲೋರೂ ಸೇಮಗೆಯ ರುಚಿ ನೋಡುವ° , ಬನ್ನಿ.

37 thoughts on “ಸಮಸ್ಯೆ 102 : “ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ”

  1. ಈ ಮಹರಾಯನ ಬೈದರೆ ಬಾಯಿಯೆ ಬಚ್ಚುಗಿದಾ
    ಹೋಮವ ನೀರಿನ ಮಾಡಿದ ಹಾಂಗೆಯೆ , ಕಾರ್ಕಳದಾ
    ಗೋಮಟನಾಂಗೆಯೆ ನಿಲ್ಲೆಡ ಚಡ್ಡಿಯ ಏರುಸಿಯೇ
    ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ I

  2. ಕೈಲಾಸಲ್ಲೂ ಸೇಮಗೆ
    ಏ ಮಗ° ಸಿದ್ದಿವಿನಾಯಕ ನೀನಿದ ಏಳುವೆಯಾ?
    ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ I
    ನೀಮೊದಲಾ ಶಿಖಿ ಷಣ್ಮುಖನೊಂದರಿ ಏಳ್ಸುವೆಯಾ?
    ಹೇ ಮಹದೇವನೆ ನಿ೦ಗಳೆ ಸೇಮಗೆ ಒತ್ತುವಿರಾ ?

    ಪಾರ್ವತಿ ಸೇಮಗೆ ಮಾಡ್ಲೆ ಗಣಪ್ಪನ ಏಳ್ಸುಲೆ ಹೆರಟತ್ತು . ಮೊದಾಲು ಷಣ್ಮುಖ ಒತ್ತಲಿ ,ಮತ್ತೆ ಆನು ಒತ್ತುತ್ತೆ ಹೇಳ್ತ ಅವ° . ಈ ಮಕ್ಕಳ ಕಾದರಾಗ ಹೇಳಿ ಶಿವನತ್ತರೆ ಸೇಮಗೆ ಒತ್ತಿ ಕೊಡ್ಲೆಡಿಗಾ ಕೇಳ್ತು .

    1. ಅಬ, ಅದ್ಭುತ ಕಲ್ಪನೆ. ಪ್ರಾಸವ ಉಪಯೋಗಿಸಿದ ರೀತಿಯೇ ಸೂಪರ್..

    2. ಗೆಣಪ್ಪ ಚುಬ್ಬಣ್ಣನ ಲಡಾಯಿ, ಶಿವನ ಹತ್ರೆ ಸೇಮಗೆ ಒತ್ತಲೆ ಹೇಳಿದ್ದು, ಕಲ್ಪನೆ ಚೆಂದ ಆಯಿದು. ಓದಿ ಕೊಶಿಯಾತು.

      1. ಗೋಪಾಲಣ್ಣ ಹೇಳಿದಾಂಗೆ, ಗೆಣಪ್ಪ ಚುಬ್ಬಣ್ಣ ಹೇಳಿದರೆ ಹವ್ಯಕ ಸೊಗಡು ಒಳ್ಳೆತ ನೆಗೆತ್ತು

    3. ಭಾಗ್ಯಕ್ಕಾ…ಕಡ್ಲೆಬೇಳೆ ಪಾಯಸದ ಹಾಂಗೆ ಸೇಮಗೆಯೂ ಒಳ್ಳೆತ ರುಚೀ…. ಆಯಿದನ್ನೇ ..

    4. ಸಕಾಲಿಕ ಆದ ಪೂರಣ ಲಾಯ್ಕ ಆಯಿದನ್ನೆ ಭಾಗ್ಯಕ್ಕಾ..

    5. ಅಪ್ಪು ,ಮಗನ ಹುಟ್ಟುಹಬ್ಬಕ್ಕೆ ಅಪ್ಪನೇ ಸೇಮಗೆ ಒತ್ತೆಕ್ಕಾದ್ದು .
      ಭಾಗ್ಯಕ್ಕ , ಅಮೋಘ ಪೂರಣ .ಚೌತಿ ಹಬ್ಬದ ಹೋಳಿಗೆಗೆ ಹೂರಣ ಆತು . ಅಭಿನಂದನೆ .

    6. ಶೈಲಕ್ಕ,ಇಂದಿರತ್ತೆ, ತೆಕ್ಕುಂಜಮಾವ, ಬೊಳುಂಬು ಗೋಪಾಲಣ್ಣ ,ಮುಳಿಯದಣ್ಣ ..ಎಲ್ಲೋರಿಂಗೂ ಧನ್ಯವಾದ.

  3. ಜಾಮಿಲಿ ಅದ್ದುವ ತಿಂಡಿಯ ಕಂಡರೆ ಕೂಗುವೆ ನೀನ್
    ಕೂರ್ಮವು ಪೂರಿಯು ನಿನ್ನೆಯೆ ಮಾಡಿದೆ ; ನಿತ್ಯವುದೇ
    ನೇಮವ ನಿಷ್ಠೆಲಿ ಮಾಡುವ ಅಜ್ಜನು ಹೇಳಿದ ಈ
    ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ ||

  4. ಜಾಮವು ಮೀರಿಯೆ ಸೂರ್ಯನು ನೆತ್ತಿಗೆ ಬಂದನದಾ
    ಚಾಮಿಗೆ ಕೈಮುಗುದಿಕ್ಕಿಯೆ ಓದುಲೆ ಕೂರೆಡದೋ
    ಜೋಮಿನ ಓಡ್ಸುಲೆ ಮೋರೆಗೆ ನೀರಿನ ತೋಕುವೆ ಬಾ
    ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ ||

  5. ಅತ್ತೆಯ ಅಂಬ್ರೇಪು :
    ದೂಮನೊ ಹಿಂಡಿಯ ಹಾಕುಲೆ ಬೈಪ್ಪಣೆಗೋಯಿದದಾ
    ಚೋಮನೊ ಹುಲ್ಲಿನ ಕಟ್ಟವ ತಪ್ಪದು ನೋಡಿದೆಯಾ
    ಈ ಮಗಳೆಲ್ಲಿಗೆ ಹೋಯಿದೊ ಕಾದರೆ ಸೋಲುಗಿದಾ
    ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ !!

    1. ಸೇಮಗೆ ತಯಾರಪ್ಪಗ ಇದಾ ಆನು ಎತ್ತಿದೆ, ತಿಂಬಲೆ.

  6. ನೇಮಕೆ ಎತ್ತಿದ ಸೋದರ ಮಾವನ ಪುಳ್ಳಿಗೆ ಬೇ
    ಕಾಮಿನ ಹಣ್ಣಿನ ಸೀಕರಣೇ ನಿನಗೂ ಜತೆಗಾ
    ನೇ ಮಸರೊಟ್ಟಿಗೆ ಕಾಯಿಯ ಹಾಲಿನ ಮಾಡಿದೆ ನೀ
    ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ

    ನೇಮಕ್ಕೆ ಬಂದ ಸೋದರ ಮಾವನ ಪುಳ್ಳಿಗೆ ನೂಕಡ್ಯೆ ತಿನ್ನಿಸಿ ಕಳುಸುವಾಳಿ ಅತ್ತೆಯ ಆಲೋಚನೆ. ಸೋದರ ಮಾವನ ಪುಳ್ಳಿಗೆ ‘ಆಮ್’ ಹಣ್ಣಿನ ಸೀಕರಣೆ (ರಸಾಯನ) ಇಷ್ಟ ಅಡ. ಆದರೆ ಮಗಂಗೆ ಮಸರು, ಕಾಯಿಹಾಲು ಬೇಕಡ. ಹಾಂಗೆ ಅತ್ತೆ ನಿನಗೆ ಬೇಕಾದ್ದು ಮಾಡಿದ್ದೆ, ಸೇಮಗೆ ಒತ್ತುಲೆ ಸಹಾಯ ಮಾಡು ಮಗಾ ಬಾ ಹೇಳಿ ಮಂಕಾಡಿಸಿ ಕರಿತ್ತಾ ಇದ್ದು.

    1. ಅಂತೂ ಮಕ್ಕೊ ಅದು ಬೇಕು ಇದು ಬೇಕು ಹೇಳಿ ಕೇಳಿದರೆ ನವಗೆ ಎರಡು ಬಗೆ ಹೆಚ್ಚಿಗೆ ಸಿಕ್ಕುಗು ಹೇಳಿ ಆತು .
      ಹೇಳಿದ ಹಾಂಗೆ … ಸೇಮಗೆಗೆ ತೆಂಗಿನ ಎಣ್ಣೆ ಉಪ್ಪಿನಕಾಯಿ ಎಸರು … ಆಹಾ .. ಒಳ್ಳೆ ಚೇರ್ಚೆ ..

    2. ಮಂಕಾಡ್ಸಿ ಆದರೂ ಸೇಮಗೆ ಮಾಡಿಯೇ ಆಯೆಕ್ಕು, ಅಲ್ಲದೋ..? ಪ್ರಾಸ ಶಬ್ದ ರಜ್ಜಾ ಕಷ್ಟ ಆದರೂ ಎಲ್ಲ ಪೋರಣಂಗಳಲ್ಲಿ ಹೊಸ ಹೊಸ ಕಲ್ಪನೆಗೊಕ್ಕೆ ಅವಕಾಶ ಸಿಕ್ಕಿದ ಹಾಂಗೆ ಆಯಿದು, ಅಪ್ಪೋ.?

  7. ಸೇಮಗೆ ಕಂಡರೆ ವಾಮನ ಅಕ್ಕು ಪರಾಕ್ರಮಿಯೇ !
    ಸಕಲರ ಮೆಚ್ಚಿನ ತಿಂಡಿ ಇದೇ ಹೇಳ್ತದಕ್ಕೆ ನಮ್ಮದೊಂದು ವೋಟು ಮಾವ , ರೈಸಿತ್ತು .

  8. ಕಾಮನೆ
    ವಾಮನ ಆಗ ಳೆ ಸೂರ್ಯನ ದರ್ಶನ ಆತದ ನೀ
    ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ
    ಸೋಮನ ಪತ್ನಿಯ ಕಾಮನೆ ತೀರ್ಸುಲೆ ಬೇಕದು ವೇ
    ಪಾಮರ ಪಂಡಿತ ಎಲ್ಲರ ಮೆಚ್ಚಿನ ತಿಂಡಿಯಿ ದೇ

    1. ಮಜ್ಜಿಗೆ ಆಗದ್ದೋರು ಇಕ್ಕು ಸೇಮಗೆ ಮೆಚ್ಚದ್ದೋರು ಇಕ್ಕಾ… ? ಪಷ್ಟಾಯಿದು ಮಾವ.

  9. ವಾವ್… ಇದಾದರೆ ಎನ್ನ ಮಗ ನಾಕೂ ಹೊತ್ತು ತಿಂತ 🙂

    “ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ
    ಚಾಮಿಯ ಶಾಲೆಯ ಬುತ್ತಿಗಿದನ್ನೆಯೆ ತುಂಬುಸುದಾ?
    ಜಾಮಿದು ಬೇಡದೊ ಸಾಕು ರಸಾಯನ ಕೂಡಿದರೇ
    ಭೀಮನ ಶಕ್ತಿಯೆ ಬಪ್ಪಲೆ ತಿನ್ನೆಕು ಲಾಯಿಕಕೇ “

    1. ಶೈಲಜಕ್ಕ೦ಗೂ ಸೇಮಗೆ ಮಾಡುಲೆ ಇಷ್ಟ ಹೇಳಿ ಗೊಂತಾತದಾ .. ಒಳ್ಳೆ ಪೂರಣ .

    2. ಎನಗೂ ಬುತ್ತಿಗೆ ತುಂಬುಸುಲಕ್ಕು ಶೈಲಜಕ್ಕ. ಸೇಮಗೆ ಅಂತೂ ಲಾಯಿಕಿದ್ದು.

  10. ಸೇಮಗೆ ಭಾರೀ ಇಷ್ಟ ಕಾಣುತ್ತು, ಬೊಳುಂಬು ಭಾವಂಗೆ. ಒಳ್ಳೆ ಪ್ರಯತ್ನ

  11. ಘಮ್ಮನೆ ಘಾಟಿನ “ನೂಡಲು ಗೀಡಲು” ಬೇಡಮಗಾ
    ಸುಮ್ಮನೆ ಬೇಕರಿಯಂಗಡಿ ಕುರುಕುರೆ ತಿನ್ನೆಡದೋಂ
    “ಹೋಮಿ”ಲೆ ಮಾಡಿದ ತಿಂಡಿಯ ತಿಂಬಲಿದಾ ಬೆಶಿ ಬೆಶಿ
    ಸೇಮಗೆ ಒತ್ತಲೆ ಆತಿದ ಬೇಗನೆ ಬಾ ಮಗನೇ ||

    ಫೋನಿಲಿ ಫೇಸಿಲಿ ಬುಕ್ಕಿಲಿ ಎಂತಕೆ ಗುರುಟುವೆಯೊಂ
    ಗೇಮಿನ ಆಡುತ ಸಮಯವ ಕಳೆಯೆಡ ಲಾರಿಯ ಸ್ಟೇ-
    ರಿಂಗಿನ ತಿರುಗಿಸಿ ಗಮ್ಮತು ಮಾಡುವ ಹಾಂಗಿದ ಈ
    ಸೇಮಗೆ ಒತ್ತಲೆ ಆತಿದ ಬೇಗನೆ ಬಾ ಮಗನೇ ||

    1. ಅದಾ. ಅಪ್ರೂಪಕ್ಕೆ ಬ೦ದ ಬೊಳು೦ಬು ಮಾವ ಕಟ್ಟಿ ತ೦ದ ಸೇಮಗೆ ರುಚಿಕಟ್ಟಾಯಿದು . ರಜಾ ಹೆಚ್ಚು ಬೇಶಿರೆ ಹೇ೦ಗೇ?

      ಘಮ್ಮನೆ ಘಾಟಿನ “ನೂಡಲು ಗೀಡಲು” ಬೇಡಮಗಾ
      ಸುಮ್ಮನೆ ಬೇಕರಿಯಂಗಡಿ ಕುರುಕುರೆ ತಿನ್ನೆಡದೋಂ
      “ಹೋಮಿ”ಲೆ ಮಾಡಿದ ತಿಂಡಿಯ ತಿಂಬಲೆ ಬೇಯಿಶಿದಾ
      ಸೇಮಗೆ ಒತ್ತಲೆ ಆತಿದ ಬೇಗನೆ ಬಾ ಮಗನೇ ||

      ಎರಡ್ನೆದು ಗಮ್ಮತ್ತಾಯಿದು.

    1. ಈಗ ನಾವು ನಾವೇ ಮನೆಲಿ ಮಾಡೆಕಷ್ಟೇ ವಿಜಯತ್ತೆ.ಮೊದಲಾದರೆ ಬೈಲಿಲಿ ವೇಣಿ ಅಕ್ಕನ ಅಡಿಗೆ ಒಗ್ಗರಣೆ ಪರಿಮ್ಮಳ ಬಂದರೆ, ವಾರಕ್ಕೆ ಸಾಕಗಿಯೊಂಡಿದ್ದತ್ತು. ಅಡಿಗೆ ಸತ್ಯಣ್ಣ೦ಗುದೆ ಈಗೀಗ ಪೋರೈಸುತ್ತಿಲ್ಲೆಡ…

      ಕಂಗಾಲು ಹೇಳಿ

  12. ರಾಮನ ತೋಟದ ತೆಂಗಿನ ಹಾಲಿನ ಹಿಂಡಿದ ಮೇ
    ಲಾ ಮಹಲಿಂಗನ ಅಂಗಡಿ ಬೆಲ್ಲವ ಸೇರುಸಿದೇ I
    ಸೀಮನ ಇಷ್ಟದ ಹಣ್ಣಿನ ಕೊಚ್ಚೆಲ ಕೂಡಿದೆ ಈ
    ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇII

    ರಸಾಯನ ಮಾಡಿ ಆತು , ಸೇಮಗೆ ಒತ್ತುಲೆ ಬಾ ಹೇಳಿ ಅಮ್ಮ ದಿನೆಗೇಳುದು ..

    1. ರಸಾಯನದೊಟ್ಟಿ೦ಗೆ ಸೇಮಗೆ .. ರುಚಿಕಟ್ಟಾಯಿದು ಭಾಗ್ಯಕ್ಕ.

      1. ಮುಳಿಯದಣ್ಣ೦ಗೆ ಧನ್ಯವಾದಂಗೊ.
        ಪಾಯಸ ಮಾಡಿದಷ್ಟು ಸುಲಭಲ್ಲಿ ಸೇಮಗೆ ಒತ್ತುಲೆ ಆವುತ್ತಿಲೆಯೋ ಹೇಳಿ ಎನಗೊಂದು ಸಂಶಯ… ಸೇಮಗೆಯ ‘ಮ’ಕಾರ ಪ್ರಾಸಂದಾಗಿ..

    2. ಸೇಮಗೆ – ರಸಾಯನ ಚೇರ್ಚೆ ಪಷ್ಟಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×