Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರದ ಸಮಸ್ಯೆ ನಮ್ಮ ಕರಾವಳಿದು.
ಕರಾವಳಿಯ ಪ್ರಜೆಗೊ ಸಮಸ್ಯೆಗೆ ಪರಿಹಾರ ಬೇಕು ಹೇಳಿ ಹೋರಾಟ ಸುರು ಮಾಡಿದ್ದವು.
ನಮ್ಮ ಸಮಸ್ಯೆ : ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ
ಬೈಲಿಲಿ ಭೋಗ ಷಟ್ಪದಿಯ ಈ ಸಮಸ್ಯೆಗೆ ಪರಿಹಾರ ಸಿಕ್ಕಿಗು ಅಲ್ಲದೊ?
ನಿಂಗ ಈ ವರೇಂಗೆ ನೂರ ನಾಕು ಸಮಸ್ಯೆ ಹೇದರೂ ಎನ್ನಂದ ಒಂದರನ್ನೂ ಬಗೆಹರುಸಲೆ ಎಡಿಗಾಯಿದಿಲ್ಲೆ ಸಂಪಾದಕರೇ
ಕೊಳವೆಯೊಳವೆ ನೀರ ತುಂಬಿ
ಎಳದುಬಿಡುವ ಬಯಲಸೀಮೆ
ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ |
ಸಲಿಲ ಭಾಗ್ಯ ತಪ್ಪಿ ಹೋಗೆ
ಹಲುಬಿ ಬೊಬ್ಬೆ ಹಾಕಿ ನಿಂಗು
ಬೆಳೆಯು ನಾಶವಕ್ಕು ಕಡಲದಂಡೆಲಿದ್ದದೂ ||
ಬೆಳೆದ ಮೈಯ ಬೋಚು ಮಂದಿ
ಬೆಳಿಯ ನೆಗೆಲಿ, ಪೈಸೆ ಮಾಡ್ಳೆ
ತೆಳಿಯ ಕುಡಿವ ಜನಕೆ ನಾಮ ಹಾಕಲಿದ್ದಡ |
ಫಲದ ಪಚ್ಚೆ ಕಾಡು ಕಡುದು
ಇಳೆಯನೆಲ್ಲ ಗರ್ಪಿ ಬಗದು
ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ ||
ತೆಳಿಯ ಕುಡಿವ ಕರಾವಳಿಯ ಜೆನ .. ಒಳ್ಳೆ ಪೂರಣ ಬೊಳುಂಬು ಮಾವ .
ಮಳೆಲಿ ನೀರು ಸಹಜ ಭುವಿಯ
ತೊಳದು ಹರಿಯೆ ದಾರಿ ಚೆಂದ
ತಳದು ಬಂದ ಗಾಧ ಕಂಡು ತಂದ ಯೋಜನೆ |
ಬಳುದು ಪೂರ ತಿರುಗುಸುಲದ
ತೊಳುದು ನಮ್ಮ ಜಲದ ಮೂಲ
ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ ||
ಗಾಧ ಹೇಳಿರೆ ಎಂತ ಶೈಲಜಕ್ಕ ?
ಆನಿಲ್ಲಿ ಗಾಢ ,ಅಗಾಧ ಹೇಳುವ ಅರ್ಥಲ್ಲಿ ಬಳಸಿದ್ದದು..
ಕರಾಳ ಯೋಜನೆ
ಹೊಳಗೆ ಅಡ್ಡ ಕಟ್ಟ ಕಟ್ಟಿ
ಮಳೆಯ ನೇರ ಒಟ್ಟು ಮಾಡಿ
ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದ ಡ
ಅಳತೆ ಮೀರಿ ನೇರ ಬಲುಗಿ
ಇಳೆಯು ಬರಡು ಅಕ್ಕು ನೋಡಿ
ಕಳಕಳಿಲಿ ಎದುರುಸಿ ಮಾಡಿ ದೊಡ್ಡ ಚಳವಳಿ
ನಾಲ್ಕನೆಯ ಗೆರೆಲಿ ನೇರ ಬದಲಾಗಿ ನೀರ ಹೇಳಿ ಓದಿಯೊಂ ಬದು.
ಚಳುವಳಿ ಮಾಡಿ ನಾಯಕರ ಚಳಿ ಬಿಡುಸೆಕ್ಕಷ್ಟೇ ಮಾವ , ಲಾಯ್ಕ ಆಯಿದು .
ಕಳದ ವಸ್ತ್ರ ಕಬಡಿಯಾಡಿ
ನೆಲಲಿ ಹೊರಳಿ ಕೆಸರು ಹಿಡ್ದ
ರೆಳದುಯೆಳದು ಕಲ್ಲ ಮೇಲೆ ಅಮ್ಮ ಬಡಿವಗI
ಬಳುದು ಕೆಸರು ನೀರದಲ್ಲಿ
ತೆಳಿಯ ಹಾಂಗೆ ಮಂದವಾಗಿ
ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ II
ಕಳದ ವಸ್ತ್ರ =checks ಇಪ್ಪ ವಸ್ತ್ರ
. ನಿ೦ಗಳ ವಸ್ತ್ರಲ್ಲಿಪ್ಪ ಮಣ್ಣಿನ ಹೊಳೆಕರೆಲಿ ಹೋಗಿ ತೊಳದಿಕ್ಕಿ ಬತ್ತೆ ಹೇಳಿ ಅಮ್ಮ ಹೇಳುವಗ ಮಕ್ಕಳ ಒಪ್ಪ (ಕಮೆಂಟ್ )ಪದ್ಯಲ್ಲಿ . ಇಲ್ಲಿ ಘಟ್ಟ ಹೇಳಿದರೆ ಮೆಟ್ಲು (ಸ್ನಾನ ಘಟ್ಟ ಹೇಳುವ ಹಾಂಗೆ) ಹೇಳುವ ಅರ್ಥಲ್ಲಿ ಉಪಯೋಗಿಸಿದ್ದು .
ಒಳ್ಳೆ ಕಲ್ಪನೆ ಭಾಗ್ಯಕ್ಕ.