Oppanna.com

“ಕೊಡದ್ರೆ ಒಂದೇ ಕೋಪ, ಕೊಟ್ಟರೆ ಎರಡು ಕೋಪ”-{ಹವ್ಯಕ ನುಡಿಗಟ್ಟು-36]

ಬರದೋರು :   ವಿಜಯತ್ತೆ    on   27/09/2015    7 ಒಪ್ಪಂಗೊ

-“ಕೊಡದ್ರೆ ಒಂದೇ ಕೋಪ,ಕೊಟ್ಟರೆ ಎರಡು ಕೋಪ”-{ಹವ್ಯಕನುಡಿಗಟ್ಟು-36}

“ಆಗ ಆಚಕರೆ ಕಿಟ್ಟಣ್ಣ ಭಾವ ಎಂತಕೆ ಅರ್ಜೆಂಟಿಲ್ಲಿ ಬಂದು ಹೋದಾಂಗೆ ಕಂಡತ್ತು!”. ಎಲೆ ಮರಿಗ್ಗೆ ಕೈ ಹಾಕಿ ಗೆಂಡನೊಟ್ಟಿಂಗೆ ಎಲೆ ತಿಂಬಲೆ ಕೂದೊಂಡು ಪಟ್ಟಾಂಗಕ್ಕೆ ತೊಡಗಿತ್ತು ಐತ್ತಕ್ಕಂ. “ಬೇರೆಂತಕೆ..?ಕೆಲಸದವಕ್ಕೆ ಕೊಡ್ಳೆ ಪೈಸೆ ಇಲ್ಲೆ. ಒಂದೈನ್ನೂರು ರೂಪಾಯಿ  ಸಾಲ ಕೊಡು  ಕೇಳ್ಲೆ ಬಂದದು!”.ಅಣ್ಣಯ್ಯ ಹೇದಪ್ಪಗ

“ಕೊಟ್ಟೀರೊ?” ಐತ್ತಕ್ಕನ ಪ್ರಶ್ನೆ.

“ಕೊಟ್ಟಿದಿಲ್ಲೆ. ಕೊಡದ್ರೆ ಒಂದೇ ಕೋಪ. ಕೊಟ್ರೆ ಎರಡು ಕೋಪ”

ಅಲ್ಲೇ ಕೋಪಿ ಬರಕ್ಕೊಂಡಿದ್ದ ಪುಳ್ಳಿ; ಅಜ್ಜ ಹೇಳಿದ ಮಾತಿನ ಕೆಮಿಗೊಂಡೆ ಮಾಡಿ ಕೇಳಿಕ್ಕಿ “ಕೊಡದ್ರೆ ಒಂದೇ ಕೋಪ ಕೊಟ್ರೆ ಎರಡು ಕೋಪ ಹೇಳಿರೆಂತರಜ್ಜಂ?” ಪ್ರಶ್ನೆ ಹಾಕಿತ್ತು.

“ ಅದುವೋ..,ಆಚಕರೆ ಅಜ್ಜಂಗೆ ಆನೀಗ ಪೈಸ ಕೊಡದ್ರೆ;ಅವನ ಮನಸ್ಸಿಲ್ಲಿ ಕೊಟ್ಟಿದಿಲ್ಲೆ ಹೇಳ್ತ ಒಂದೇ ಕೋಪ ಇಕ್ಕಷ್ಟೆ.ಕೊಟ್ಟತ್ಕಂಡ್ರೆ ವಾಪಾಸು ಕೇಳುವಗ ಅವಂಗೆ ಕೋಪ ಬಕ್ಕು.ಎನಗೂ ಸಿಕ್ಕಿದ್ದಿಲ್ಲೇದು ಕೋಪ ಬಕ್ಕು. ಇಬ್ರಿಂಗೂ ಕೋಪ ಬಪ್ಪಲೆಡೆ ಆತಿದ!.”

“ಓಹೋ ಹಾಂಗೋ!”.ಈಗ ಪುಳ್ಳಿಗೆ ಅರ್ಥ ಆತು.

—–೦——

 

7 thoughts on ““ಕೊಡದ್ರೆ ಒಂದೇ ಕೋಪ, ಕೊಟ್ಟರೆ ಎರಡು ಕೋಪ”-{ಹವ್ಯಕ ನುಡಿಗಟ್ಟು-36]

  1. ಶ್ಶೆಲ ಹೀಂಗೂ ಒಂದಿದ್ದಂಬಗ!! ಲಾಯಕ ಅತು ಇದು ನಿಂಗೊ ಹೇದ್ಸು. ಹರೇ ರಾಮ

  2. ಕನ್ನಡಲ್ಲಿ ಒಂದು ಮಾತು ಕೇಳಿದ್ದು ನೆಂಪು ಬಂತು. “ಆರು ಕೊಟ್ರೆ ಸೊಸೆ ಕಡೆ, ಮೂರು ಕೊಟ್ರೆ ಅತೆ ಕಡೆ” ಹೇಳಿ.
    ಕೊಟ್ಟು ವೈಮನಸ್ಯ ಬೆಳೆಶುತ್ತಕ್ಕಿಂತ ಕೊಡದ್ದೆ ಇಪ್ಪದೇ ಒಳ್ಳೆದು .
    ಒಳ್ಳೆ ನುಡಿಗಟ್ಟು

  3. ತೆಕ್ಕುಂಜೆ ಕುಮಾರ,ಬೊಳುಂಬು ಗೋಪಾಲ, ಕೇಶವ ಪ್ರಕಾಶ,ರಘುಮುಳಿಯ,ಓದಿನೋಡಿ ಅಭಿಪ್ರಾಯ ಹೇಳಿದವಕ್ಕೆಲ್ಲ ಧನ್ಯವಾದಂಗೊ .

  4. ಸರ್ವಕಾಲಿಕ ನುಡಿಗಟ್ಟು ವಿಜಯತ್ತೆ ..

  5. ಕೊಟ್ಟವ ಕೋಡಂಗಿ ಇಸ್ಕಂಡವ ಈರಭದ್ರ. ಈರಭದ್ರನ ಕೋಪದ ಎದುರು ಕೊಟ್ಟವನ ಕೈಲಾಗದ ಕೋಪ ಕಾಂಬಲೇ ಕಾಣ. ಅಪರೂಪದ ನುಡಿಗಟ್ಟಿನ ತಿಳುಸಿಕೊಟ್ಟ ವಿಜಯಕ್ಕಂಗೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×