ಪುಸ್ತಕ ಲೋಕಾರ್ಪಣೆ ಹೇಳ ಪದ ಬಳಸವು ಕಾಣ್ತು, ಬಿಡುಗಡೆ ಹೇಳಿರೆ ಅಷ್ಟು ಸರಿ ಕಾಣ್ತಿಲ್ಲೆ.
ಬಿಡುಗಡೆ ಅಪ್ಪಲೆ ಅದು ಸಿಕ್ಕಾಕಂಡ್ ಬಿದ್ದದ್ದು ಎಲ್ಲಿ ? ಹೇಳಿ ಪ್ರಶ್ನೆ ಬತ್ತು.
ಯಾವುದಾದರೂ ಬಂಧ್ನ (ಕಷ್ಟಸ್ಥಿತಿ) ದಿಂದ ಹೆರ ಬಂದ್ರೆ ಬಿಡುಗಡೆ ಸರಿ, ಒಂದು ಕೊಡುಗೆ ಪ್ರಪಂಚಕ್ಕೆ ಮಾಡ್ದಾಗ
ಅದು ಲೋಕಾರ್ಪಣೆ ಸರಿ ಕಾಣ್ತು.
ಎಂತ ಹೇಳ್ತಿ?
Latest posts by ಕಾಂತಣ್ಣ (see all)
- ಬಿಡುಗಡೆ – ಲೋಕಾರ್ಪಣೆ - September 10, 2012
ಇಂಗ್ಲಿಷಿಲಿ ರಿಲೀಸ್ ಹೇಳುದರ ಬಿಡುಗಡೆ ಹೇಳಿ ಅನುವಾದ ಮಾಡಿದ್ದವು.ಅದರಲ್ಲಿ ಯಾವ ತಪ್ಪೂ ಇಲ್ಲೆ.ಪುಸ್ತಕ ಲೇಖಕನ ಏಕಾಂತಲ್ಲಿ ಇಪ್ಪ ವಸ್ತು-ಜನರಿಂಗೋಸ್ಕರ ಪ್ರಕಟ ಆವುತ್ತು .ಅದಕ್ಕೆ ಅದು ಬಿಡುಗಡೆಯೇ ಸರಿ.
ಬಿಡುಗಡೆ ಬ೦ಧನ ದ ವಿರೋಧ ಆದರೆ ಅರ್ಪಣೆ ವಿಕ್ರಯದ ವಿರೋಧ ಅಲ್ಲದಾ?
ಮ್ರುತ್ತಿಕೆ೦ದ ಮಾಡಿದ್ದು ಮಾ೦ತ್ರ ಮೂರ್ತಿಯಾ? ಶಿಲೆ೦ದ ಮಾಡಿದ್ದು ಮಾ೦ತ್ರ ಶಿಲ್ಪವಾ?
Release ಹೇಳ್ತ ಶಬ್ಡವ ಅನುವಾದ ಮಾಡಿ ಬಿಡುಗಡೆ ಹೇಳಿದ್ದು ಸರಿ ಕಾಣದ್ದೇ ಇಕ್ಕು, ಆದರೆ ಆ ಪುಸ್ತಕಲ್ಲಿ ಇಪ್ಪ ವಿಷಯಂಗೋ ಲೋಕಕ್ಕೆ ತಿಳಿವಲೆ ನಮ್ಮ ಕಡೆಂದ ಬಿಡುಗಡೆ ಮಾಡ್ತ ಇಪ್ಪ ಸಂಕೇತ ಹೇಳಿ ತಿಳುಕೊಂಡರೆ ಸರಿ ಅರ್ಥ ಕೊಡ್ತಾ?
ಲೋಕಕ್ಕೆ ಈ ಪುಸ್ತಕ ಅರ್ಪಣೆ ಮಾಡಿದ ಮೇಲೆ ಅದಕ್ಕೆ ಏಂತಕೆ ಪೈಸೆ ಕೊಟ್ಟು ತೆಕ್ಕೊಳೆಕ್ಕು? ನಮ್ಮ ಪುಸ್ತಕಕ್ಕೆ ನಾವೇ ಪೈಸೆ ಕೊಡೆಕ್ಕ ಹೇಳಿ ನೆಗೆಮಾಣಿ ಕೇಳಿಯೊಂಡು ಇತ್ತಿದ್ದ.
ನೆಗೆಮಾಣಿಗೆ ಹೇಳು, ದೇವಸ್ಥಾನ ಲೋಕಾರ್ಪಣೆ ಆಗ್ತು, ಆದರೆ ಪ್ರವೇಶಕ್ಕೆ ಟಿಕ್ಕೆಟ್ ತೆಕ್ಕಳಕಾಗ್ತು.
ದೇವಸ್ಥಾನ ಪ್ರವೇಶಕ್ಕೆ ಟಿಕೆಟ್??!!
ಒಂದೆರಡು ಈ ಪುಸ್ತಕ ”ಬಿಡುಗಡೆ” ಕಾರ್ಯಕ್ರಮದ ಆಭಾಸ ಹೇಳ್ತೆ, ಕಟ್ಟಿದ ಗಂಟು ಬಿಚ್ಚುಲೆ ಬರದೆ ಅಭ್ಯಾಗತರ (ಅತಿಥಿಗಳ!) ವದ್ದಾಟ, ಬಣ್ಣದ ಪೇಪರ ಹರಿಯಲು ಶಕ್ತಿಹಾಕಿ ಅದು ಎಲ್ಲಂದರಲ್ಲಿ ಹರಿದು ಪುಸ್ತಕ ವೇದಿಕೆಯ ಜಮಖಾನದ ಮೇಲೆ ಬಿಡುಗಡೆ ಕಾಂಬುದು, ಬಿಡಿಸಿದ ಬಣ್ಣದ ಪ್ಲಾಸ್ಟಿಕ್ ಹಾಳೆ ಅಲ್ಲೇ ಬಿಕ್ಕುದು, ಎಲ್ಲರೂ ಎದೆಮಟ್ಟಕ್ಕೆ ಪುಸ್ತಕ ಹಿಡ್ಕಂಡು (ಬೇರೆಲ್ಲೋ ಪಾಟಿ ಹೀಂಗೇ ಹಿಡ್ಕಂಬದು ನೆನಪಾಗ್ತು) ಕಷ್ಟಪಟ್ಟು ನೆಗೆಯಾಡುದು, ವೇದಿಕೆ ಮೇಲೆ ಜಾಸ್ತಿ ಜನ ಇದ್ದು, ಪುಸ್ತಕ ಎಲ್ಲರಿಗೂ ಹಿಡಿಸುಲೆ ಸಾಧ್ಯವಾಗದೆ ಇಪ್ಪದು.. ಇನ್ನೂ ಏನೇನೋ ಕಂಡಿದ್ದು ನೆನಪಾಗ್ತ ಇದ್ದು. ಈ ಪದ ಬದಲಾಯಿಸಿರೂ ಇದೆಲ್ಲ ಆಭಾಸ ಅಪ್ಪು ಛಾನ್ಸೇಸ್ ತಪ್ಪಕಾಣ್ತು.
ಹರೇ ರಾಮ, ಅದು ಭೌತಿಕ ಸತ್ಯ, ಅಂದ್ರೆ ಅದು ಹೊಸ ಪುಸ್ತಕ ಆಯಿರೆಕ್ಕು ಹೇಳಿ ಇಲ್ಲೆ ಆತು. ಹಳೆದಾದರೂ ಮೊದಲೇ ಸುತ್ತಿಟ್ಟು ಕಟ್ಟು ಬಿಚ್ಚಿರೆ ಆತು. ಅಂದಾಂಗಾತು. ಒಂದು ಸಾಹಿತ್ಯಕೃತಿ ಇದೇ ಮೊದಲಾಗಿ ಸಾರಸ್ವತಲೋಕ್ಕೆ ಕೊಡುದು ಹೇಳಿ ಆದ್ರೆ ಅದು. ಒಂದು ಮಗು ಹುಟ್ಟುವ ಪೂರ್ವದಲ್ಲಿ ಸಾಕಷ್ಟು ತ್ರಾಸು ಇರ್ತು, ಅದು ಬಂಧನದಲ್ಲೂ ಇರ್ತು, ಸಂತೋಷ ಕೊಡುವ ಆ ಜನ್ಮ ಬಿಡುಡೆ ಅಲ್ಲ ಅಲ್ದಾ. ಲೋಕಾರ್ಪಣೆಯೇ ಒಂದೊಳ್ಳೆ ಪದ ಪ್ರಚಲಿತವೂ ಇದ್ದು. ಇಂಗ್ಲೀಶಲ್ಲಿ ಪದಗಳ ಕೊರತೆ ಇರ್ತು ಅಲ್ಲಿ ಹಲವಾರಕ್ಕೆ ಒಂದೇ ಪದ ಬಳಸ್ತ ( ಉದಾ : serve, press ಇತ್ಯಾದಿ) ಹುಟ್ಟು (ಸೌಟು) ಬೇರೆ ಬೇರೆ ಇಟ್ಗಂಡೂವಾ ತಂಬ್ಳಿ, ಹುಳಿ, ಗೊಜ್ಜು ಒಂದೇ ಹುಟ್ಟಲ್ಲಿ ಎಂಥಕ್ಕೆ ಬಡಗಳವಪ ? ಬಿಡುಗಡೆ ಶಬ್ದವ, ಜೈಲಿನಿಂದ ಅಪ್ಪ ತೆರವಿಗೆ ಬಿಡುಗಡೆ, ಅಥವಾ ಯಾವುದೇ ಜವಾಬ್ದಾರಿಯಿಂದ ಹೊರತಾದರೆ ಅದಕ್ಕೆ ಹಾಂಗೆ ಹೇಳ್ಲಕ್ಕನ. ಈ ಲೋಕರ್ಪಣೆ ಬೇರೆ ಅರ್ಥ ಯಾ ಅಪಾರ್ಥ ಕೊಡದಿಪ್ಪಾಗ ಅದನ್ನ ರೂಢಿಗತ ಮಾಡುಲೆ ಕಷ್ಟ ಎಂಥ, ದಾಕ್ಷಿಣ್ಯ, ಬಿಡೆ, ಸಂಕೋಚ ಎಂಥಕ್ಕೆ ಅಲ್ದಾ ?
ನಮ್ಮ ಗುರುಗ ” ರಾಮಾಯಣ ಮಹಾಸತ್ರ ” ಎಂಬ ಕಾರ್ಯಕ್ರಮ ಮಾಡಿದಾಗ ಈ ಸತ್ರ ಶಬ್ದದ ಬಗ್ಗೆ ರಾಶೀ
ಜನರಿಗೆ ಪೂರ್ವಾಗ್ರಹ ಇತ್ತು . ಆದರೆ ಈಗ ಅದೆಷ್ಟು ವಾಸ್ತವ, ಪ್ರಚಲಿತ, ಸುಂದರ ಪದ ಹೇಳಿ ಅನಿಸಿದ್ದಲ್ಲದ ?
ಅಪ್ಪಪ್ಪು… ರಟ್ಟಿನ ಪೆಟ್ಟಿಗೆಲಿ ಬಣ್ಣದ ಪೇಪರು ಕಟ್ಟಲ್ಲಿ ಬಣ್ಣದ ಲಾಡಿಲಿ ಕಟ್ಟಿಗೊಂಡಿತ್ತರ ಬಿಡಿಸಿ ಬಿಡುಗಡೆ ಮಾಡಿದ್ದದು ನಾವು ಕಂಡದು !
ಚೆನ್ನೈ ಮಾವ, ಈ ರಟ್ಟಿನ ಪೆಟ್ಟಿಗೆ, ಬಣ್ಣದ ಬೇಗಡೆ, ಜರಿದಾರದ ಗಂಟು, ಇದರ ಬಗ್ಗೇ ಯನ್ನ ಆಕ್ಷೇಪ ಇಪ್ಪದು. ಅವತ್ತೊಂದಿವಸ ಹೇಳಿದ್ನಲಿ, ಪರಿಕಲ್ಪನೆಯೇ ಬೇರೆಯವರದಾದರೆ ಕನ್ನಡದಲ್ಲಿ ಮಾತಾಡ್ರೂ ಭಾವ ಬತ್ತಿಲ್ಲೆ. ಹೇಳಿ. ಶ್ರೀಮಠದಲ್ಲಿ ನಿಂಗ ನೋಡಿಪ್ರಿ ಅಲ್ಲಿ ಪುಸ್ತಕ ಹೂವಿನ ರಾಶಿಯ ಹರಿವಾಣದಿಂದ ಪುಸ್ತಕ ಲೋಕಮುಖಕ್ಕೆ ಬತ್ತು.
ಕಾ೦ತಣ್ಣ,
ಲೋಕಾರ್ಪಣೆ ಸರಿಯಾದ ಶಬ್ದಪ್ರಯೋಗ ,ಆದರೆ ಬಿಡುಗಡೆ ತಪ್ಪಲ್ಲ ಅನ್ಸಿತ್ತು.
ಲೇಖಕನ ಮನಸ್ಸಿನ ಬ೦ಧನ೦ದ ಅಕ್ಷರರೂಪಕ್ಕೆ ಬ೦ದಪ್ಪಗ ಬಿಡುಗಡೆ ಆದ ಹಾ೦ಗೆ ಅಲ್ಲದೋ? ಇನ್ನು,ಬೈಲಿನ ಪುಸ್ತಕ೦ಗೊ ಕಂಪ್ಲೀಟರಿನ ಬ೦ಧನ೦ದ ಹೆರಲೋಕಕ್ಕೆ ಪುಸ್ತಕರೂಪಲ್ಲಿ ಬಪ್ಪದು ಬಿಡುಗಡೆಯೇ ಅಲ್ಲದೋ?
ಪುಸ್ತಕ ಬಣ್ಣದ ಕಾಗದಲ್ಲಿ ಮುಚ್ಚಿ ಅದರ ಮೇಗಂದ ಬಣ್ಣದ ಬಳ್ಳಿ ಕಟ್ಟಿ ಹಾಕಿದ್ದರ ಬಿಡಿಸಿ ಬಿಡುಗಡೆ ಮಾಡಿದ್ದಲ್ಲದ ನಾವು ಕಣ್ಣಿಲ್ಲಿ ಕಂಡದು?ವ್ಯಾವಹಾರಿಕ ಪ್ರಯೋಗ ಅಷ್ಟೆ.
ಮುಳಿಯ ಭಾವನ ಹೊಡೆಂಗೆ ಆನುದೆ ಇದ್ದೆ. ಒಂದು ಪುಸ್ತಕ ಹೆರಬರೆಕಾರೆ ಅದೆಷ್ಟು ಕೆಲಸ ಇದ್ದು. ಅದಕ್ಕೆ ಕಷ್ಟ ಎಷ್ಟು ಇದ್ದು ಹೇಳಿ ಅದರ ಮಾಡ್ಳೆ ಹೆರಟವಂಗೆ ಗೊಂತಕ್ಕಷ್ಟೆ. ಹಾಂಗಿಪ್ಪ ಪುಸ್ತಕ ಒಂದರಿ ಹೆರ ಲೋಕಕ್ಕೆ ಬಂದಪ್ಪಗ ಕಷ್ಟ ಬಂದವಂಗೆ ಒಂದು ರೀತಿಯ ಬಿಡುಗಡೆಯೇ ಅಲ್ಲದೊ ?