Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರದ ಸಮಸ್ಯೆ:
“ಚಳಿಗಾಲಕ್ಕಿದು ಬೇಕಕ್ಕೋ?”
ಚಳಿ ಇಲ್ಲದ್ರೂ ಕಾಲದ ನೆ೦ಪು ಮಾಡೆಕ್ಕಲ್ಲದೋ?
ಸೂ:
- ಈ ಸಮಸ್ಯೆ “ಶರ” ಷಟ್ಪದಿಲಿ ಇದ್ದು.
ನಾಕು ನಾಕರ ಎರಡು ಗುಚ್ಛ – ಮೊದಲೆರಡು ಸಾಲಿಲಿ.
ನಾಕರ ಮೂರು ಗುಂಪು, ಕೊನೆಗೊಂದು ಗುರು – ಮೂರ್ನೇ ಸಾಲಿಲಿ. - ಹೆಚ್ಚಿನ ಮಾಹಿತಿಗೆ:
https://oppanna.com/oppa/shara-kusuma-bhoga-bhamini-shatpadi
http://padyapaana.com
ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:
- ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
- ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
- ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
- ಶರ: “ಆಟಿಯ ತಿಂಗಳ ಮಳೆಗಾಲ”
- ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
- ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
- ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
- ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
- ಭೋಗ: “ಯೋಗವೊಲುದು ಬಪ್ಪ ಹಾ೦ಗೆ ಬದುಕು ನೆಡೆಶುವೊ”
- ಭೋಗ: “ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ”
- ಭಾಮಿನಿ : “ಹಸಿಯ ತರಕಾರಿಗಳ ತಿ೦ದರೆ ತು೦ಬಿದಾರೋಗ್ಯ”
- ಪರಿವರ್ಧಿನಿ: ” ನೆತ್ತರು ಹಾರಿಸಿ ಸುತ್ತಲಿ ನೆರದವು ಶಾ೦ತಿಯ ಸಾರಿದವು”
- ವಾರ್ಧಕ : ” ಕೋಲು ತೆಕ್ಕೊ೦ಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊ೦ಡು ಓಡೋಡಿದ°”
ರೈಸಿದ್ದಪ್ಪಾ ರೈಸಿದ್ದು..
ಬೆಳಿಯಂಗಿಯ ಜೆನ
ಚಳಿಕೋಣೆಯ ಒಳ
“ಗಿಳಿಬಾಗಿಲಿ”ನೊಳ ಅರಟಿತ್ತು ।
ಜುಳುಜುಳು ಮೊರೆತದ
ಹಳತೇಸಿಯ ದನಿ
ಚಳಿಗಾಲಕ್ಕಿದು ಬೇಕಕ್ಕೊ ?।
ಗಿಳಿಬಾಗಿಲು = ವಿಂಡೋಸ್
ಹಳತೇಸಿ = ಹಳತು + “ಏಸಿ”
ಒಳ್ಳೆ ಪರಿಹಾರ.
ಕೋಣೆಯ + ಒಳ -> ವಿಸಂಧಿ ಆಯಿದು.
“ಚಳಿಕೋಣೆಲಿಯೇ” ಹೇಳಿ ಸರಿ ಮಾಡ್ಲಕ್ಕು.
ಇಳಿವಯಸಿಲಿಯುದೆ
ಬೆಳಿತಲೆಯಜ್ಜ°ನು
ಇಳಿಗುದೆಗಾಲಕೆ ಮಾರ್ಗಕ್ಕೆ।
ಹಳೆ ಶಾಲಿನ ಹಿಡು
ದಳಿಯನು ಕೇಳಿದ°
ಚಳಿಗಾಲಕ್ಕಿದು ಬೇಕಕ್ಕೊ।।
ಪಷ್ಟಾಯಿದು,ಇದು.
ಆಹ! ಪುಂಖಾನುಪುಂಖ “ಶರ” ಸಂಧಾನ, ಭಾರೀ ಲಾಯಕ್ಕಾಯಿದು,
ತೆಳಿ ಕುಡುದಿಕ್ಕಿಯೆ
ತಳೆ ಕಟ್ಟಿತ್ತದ
ಹಳೆ ತಲೆ ಬಟ್ಯನು ತೋಟಲ್ಲಿ।
ಕಳಿ ಮ೦ಡೆಯ ಕೊ
ತ್ತಳಿಗೆ೦ದಿಳುಶುಗು
ಚಳಿಗಾಲಕ್ಕಿದು ಬೇಕಕ್ಕೊ ??।।
ಅದಾ, ಈಗ ರಂಗೇರಿತ್ತದ ಪದ್ಯ ಪೂರಣಕ್ಕೆ. ರಘು ಭಾವಾ, ಹವ್ಯಕ ವಾರ್ತೆಲಿ ನಿಂಗಳ ಮದುಮಗಳ ಮನದಾಳದ ಮಾತುಗೊ ಮನಸ್ಸಿಂಗೆ ಮುದ ಕೊಟ್ಟತ್ತು. ಧನ್ಯವಾದಂಗೊ.
ನಳಿನಾಕ್ಷಿಯೆ ನೀ
ಸುಳಿಯುತಲಿಲ್ಲದೆ
ಮಳೆಗಾಲಕ್ಕೆಯೆ ನೋವಕ್ಕು
ಸುಳಿಕಣ್ಣಿನ ಇಳೆ
ನಳಿನಾಕ್ಷಿಯ ನೆಗೆ
ಚಳಿಗಾಲಲ್ಲಿಯು ಬೇಕಕ್ಕೋ
ಮಾತ್ರೆಗೊ ಸರಿ ಇದ್ದು ಭಾವ.
ನಳಿನಾಕ್ಷಿ ಹೇಳಿರೆ ಭೂಮಿಯೊ ಅಲ್ಲ ಗಾಳಿಯೊ ಹೇಳಿ ಸ್ಪಷ್ಟ ಆತಿಲ್ಲೆ.
ಮೋರೆಪುಟಲ್ಲಿ ಭಾವನ ಕೆಲವು ಕವನಂಗಳ ಓದಿದ್ದೆ.ಲಾಯಕ ಬರೆತ್ತಿ. ಈ ಪೂರಣವ ಕಾಂಬಗ ಛಂದೋಬದ್ಧವಾದ ಪದ್ಯವನ್ನೂ ಲಾಯಕ ಬರೆತ್ತಿ ಹೇಳುದು ಸ್ಪಷ್ಟ ಆವುತ್ತು.
ಆದಿಪ್ರಾಸ,ಮಾತ್ರೆ,ಜಗಣ,ವಿಸಂಧಿ ಇತ್ಯಾದಿ ದೋಷಂಗೊ ಇಲ್ಲದ್ದೆ ಬರವದೇ ಛಂದೋಬದ್ಧ ಪದ್ಯದ ಸವಾಲು.ಅದೂ ಹವಿಕನ್ನಡಲ್ಲಿ ಬರವದು ಇನ್ನೂ ಕಷ್ಟದ ಕೆಲಸ.
ಸುಳಿಗಣ್ಣಿನ+ಇಳೆ -> ಇಲ್ಲಿ ವಿಸಂಧಿ ಆಯಿದು ಭಾವ.
ವಿಸಂಧಿ – ವ್ಯಂಜನಾಕ್ಷರದ ಮತ್ತೆ ಸ್ವರ ಬಂದಪ್ಪಗ ಅಲ್ಲಿ ಸಂಧಿ ಮಾಡದ್ದೆ ಇದ್ದರೆ ಅದರ ವಿಸಂಧಿ ದೋಷ ಹೇಳುದು.
ಪ್ರಯತ್ನ ನಿಲ್ಲುಸೆಡಿ. ಪ್ರತೀ ವಾರವೂ “ಸಮಸ್ಯಾ ಪೂರಣ”ಕ್ಕೆ ಪರಿಹಾರ ಪದ್ಯ ಬರಕ್ಕೊಂಡಿರಿ.
ನಮ್ಮ ಭಾಷೆಲಿ ವಿಸ೦ಧಿ ದೋಷವ ತಪ್ಪುಸಲೆ ಭಾರೀ ಸಮಸ್ಯೆ ಆವುತ್ತು.ಸ೦ಧಿ ಮಾಡಿಯಪ್ಪಗ ಆ ಶಬ್ದ ಕನ್ನಡದ ಹಾ೦ಗೆ ಕಾಣುತ್ತು. ಉದಾಹರಣೆಗೆ ಸುಳಿಗಣ್ಣಿನ ಇಳೆ – ಈ ಶಬ್ದವ ಸುಳಿಗಣ್ಣಿನದಿಳೆ ( ಸುಳಿಗಣ್ಣಿನದು+ಇಳೆ) ಹೇಳಿ ಮಾಡೆಕ್ಕಷ್ಟೆ,ಅಲ್ಲದೋ ಮಾವ?
ಮಳೆಗಾಲದಿ ಅದ
ಜಳಜಳ ಬೆಶಿಲೂ
ಇಳೆಯಲಿ ಎಲ್ಲದು ಅಯೋಮಯಾ ।
ಹುಳಿಯಾ ಬಿತ್ತುದೆ
ಸುಳಿಚಕ್ಕುಲಿಯುದೆ
ಚಳಿಗಾಲಕ್ಕಿದು ಬೇಕಕ್ಕೊ ?
ಒಳಿವಲೆ ಬಿಡವೂ
ತಳಿಯದೆ ಕೂದರೆ
ನಳನಳಿಸುವ ಈ ಭುವಿಯನ್ನು ।
ಸಳಕೆಯ ಬೆತ್ತದ
ಪೊಳಿಯದು ಬೀಳೆಕು
ಇಳೆಯನು ನಾಶವ ಮಾಡುವಗೇ ।
ಬೊಳು೦ಬು ಮಾವಾ,
ಲಾಯ್ಕ ಆಯಿದು.ಎರಡ್ನೆ ಚರಣ ಪೂರಕವಾಗಿದ್ದು. ಆದರೆ
“ಹುಳಿಯಾ ಬಿತ್ತುದೆ
ಸುಳಿಚಕ್ಕುಲಿಯುದೆ”
ಈ ಸಾಲುಗೊ ಒಳುದ ಒಟ್ಟು ಭಾವದ ಒಟ್ಟಿ೦ಗೆ ಚೇರ್ಚೆ ಆವುತ್ತಿಲ್ಲೆಯೋ ಹೇದು.
“ಅಯೋಮ”ಯ -ಇದು ಜಗಣ ಹೇಳ್ತದು ಒ೦ದು ದೋಷ.
ಶರ-ಲ್ಲಿ ಕಮ್ಮಿ ಶಬ್ದಲ್ಲಿ ಹೆಚ್ಚು ವಿವರುಸುಲೆ ಕಷ್ಟವೇ..
ಲಾಯಕಾಯಿದು .ಗೋಪಾಲಣ್ನಾ ಭುವಿ ಅಲ್ಲ,” ಬುವಿ “ಹೇಳಿ ಆಯೆಕ್ಕು.
ಹಳಿಯಿತು ಮನಸದು
ಬಳಿಗೇ ಬಂತಿದು
ಸುಳಿಯುವ ಗಾಳಿಯು ಎಂತಕ್ಕೋ
ಮಳಿಗೆಲಿ ನೋಡಿದೆ
ಬಿಳಿ ಕುರಿ ಕಂಬಳಿ
ಚಳಿಗಾಲಕ್ಕಿದು ಬೇಕಕ್ಕೋ
ಒಳ್ಳೆ ಪ್ರಯತ್ನ ಅದಿತಿ ಅಕ್ಕ.
“ಸುಳಿಯುವ ಗಾಳಿಯು ಎಂತಕ್ಕೋ” – ಈ ಸಾಲಿನ –“ಸುಳಿವಾ ಗಾಳಿಯಿದೆ೦ತಕ್ಕೋ” ಹೇಳಿ ಸಣ್ಣ ಮಾರ್ಪಾಡು ಮಾಡಿರೆ ವಿಸ೦ಧಿ ದೋಷ ನಿವಾರಣೆ ಅಕ್ಕು.
ತಳಿ ಸಂಕರ ವಿಷ-
ಯಲಿ ಕಾಳಜಿಗೆ ಹೊ-
ಗಳಿಕೆ ಪಡದ ಗೋ ಡಾಗುಟ್ರು|
ಕಳಕಳಿಲಿಯೆನಗೆ
ತಿಳಿಯಪಡಿಸಿದವು
ಚಳಿಗಾಲಕ್ಕಿದು ಬೇಕಕ್ಕೋ?
ಸಂದರ್ಭ: ಅಪರೂಪದ ದೇಶೀಯ ಗೋತಳಿ ಹಸುವಿಂಗೆ ಇಂಜೆಕ್ಷನ್ ಕೊಡುಲೆ ಬಂದ ಗೋ ಡಾಗುಟ್ರು ದನವ ನೋಡಿಗೊಂಡು ತಳಿಸಂಕರಕ್ಕೆ ಒತ್ತಾಯ ಮಾಡುತ್ತಾ ಇಪ್ಪ ಎನ್ನ ಹತ್ತರೆ ಹೇಳುದು.
ದೇಶೀಯ ಗೋತಳಿ ನಾಶ ಅಪ್ಪಂತಹ ಭೀತಿಯ ಕಾಲವ ‘ಚಳಿಗಾಲ’ ಹೇಳಿ ಕಲ್ಪಿಸಿಗೊಂಡಿದೆ.
ಕೊನೆಯ ಎರಡು ಸಾಲು ಸಮಾಧಾನಕರ ಆಯಿದಿಲ್ಲೇ. ಇನ್ನೂ ಉತ್ತಮ ರೀತಿಲ್ಲಿ ಗೊಂತಾದರೆ ತಿಳಿಸಿ…
ಅಕ್ಕಾ,
ಹೊಸ ಕಲ್ಪನೆ. ಆ ಸಾಲುಗಳಲ್ಲಿ ಲಘು ಹೆಚ್ಚಾಗಿ ರಜಾ ತೊ೦ದರೆ,ಅಷ್ಟೆ.
ಗುಳಿಗೆಯ ತಂದವ
ಫಳಫಳ ತೊಟ್ಟೆಲಿ
ಘಳಿಗೆಲಿ ತಿಂದಾ ಮೂರ್ನಾಕು|
ಒಳಬಂದಪ್ಪನು
ನಳಿನಿಗೆ ಹೇದವು
ಚಳಿಗಾಲಕ್ಕಿದು ಬೇಕಕ್ಕೋ° ||
ಸಂದರ್ಭ :ಮಿಂಟ್ ಚಾಕಲೇಟ್ ತಿಂದ ಮಾಣಿಯ ಅಬ್ಬೆ ನಳಿನಿಗೆ ಮಾಣಿಯ ಅಪ್ಪ ಹೇಳುದು ‘ಚಳಿಗಾಲಕ್ಕಿದು ಬೇಕಕ್ಕೋ°’
ಎರಡೂ ಪೂರಣಂಗೊ ತುಂಬ ಲಾಯಕ ಆಯಿದು. ಶುರುವಾಣ ಸರ್ತಿಲಿ ಒಂದೆರಡು ಸಣ್ಣ ತಪ್ಪುಗೊ ಬಂದರೂ, ಎರಡೂ ಅರ್ಥ ಪೂರ್ಣವಾಗಿದ್ದು. ನಿಂಗಳ ಪ್ರಯತ್ನ ಮುಂದುವರಿಸಿ.
ಚಳಿಚಳಿ ಪೆಟ್ಟಿಗೆ
ಯೊಳದಿಕೆ ಮಡಗಿದ
ಬೆಳಿಮಾಸಿದ ಐಸ್ಕ್ರೀಮಿನ ತಾ
ಪುಳ್ಲಿಯು ತಿಂದರೆ
ಕೇಳುಗು ಅಜ್ಜನು
ಚಳಿಗಾಲಕ್ಕಿದು ಬೇಕಕ್ಕೋ ?
ಹಲ್ಲಿನ ಸೆಟ್ಟಿನ
ಗಿಳಿಬಾಗಿಲಿನೆಡ
ಕಿಲಿ ಮಡಗಿದ ಅಜ್ಜಿಯು ಬಂತೂ
ಶಾಲಿನ ಹೊದದೂ
ಹೇಳುಗು ಪುಳ್ಲಿಗೆ
ಚಳಿಗಾಲಕ್ಕಿದು ಬೇಕಕ್ಕೋ।
ಒಂದು ಹೊಸ ಸಮಸ್ಯೆಯೇ ಆತನ್ನೆ ಎನಗೆ. ಗೋಪಾಲಣ್ಣನ ಪೂರಣವ ಲಾಯಿಕ್ಕಿದ್ದು ಹೇಳೆಕ್ಕೋ, ಚೆನ್ನೈ ಭಾವನ ಪೂರಣ ಪಷ್ಟಾಯಿದು ಹೇಳೆಕ್ಕೋ, ಅಲ್ಲ ಪೆರ್ವದಣ್ಣನ ಪೂರಣವ ಹೊಗಳೆಕ್ಕೋ. !
ಭೇಷ್..ಭೇಷ್…ಭೇಷ್…!!!
ಪೆರ್ವದಣ್ಣ – ಸಿಂಹ ಪ್ರಾಸದೊಟ್ಟಿಂಗೆ(ಎರಡು ಲಘು), ಗಜ ಪ್ರಾಸ(ಒಂದು ಗುರು+ಒಂದು ಲಘು) ಸೇರದ್ದ ಹಾಂಗೆ ನೋಡಿಗೊಳ್ಳಿ..
ಸಿಂಹಕ್ಕೂ, ಗಜಕ್ಕೂ ಬದ್ದ ವೈರ ಅಲ್ಲದೋ..!
ಎ೦ಗಳಲ್ಲಿ ಒ೦ದರಿ ಉಪ್ಪಿನಕಾಯಿ ಹಾಕುತ್ತ ಸಮಯಲ್ಲಿ ನಮ್ಮ ಹಳೆಮನೆ ಅಜ್ಜಿ ಬ೦ದಿತ್ತಿದ್ದವು, ಅವು ಮಾತಾಡಿ೦ಡಿತ್ತಿದ್ದದು ಕೇಳಿದ ನೆ೦ಪಿಲ್ಲಿ ಈ ಸಮಸ್ಯೆಯ ಪೂರಣ ಮಾಡ್ಳೆಡಿತ್ತೋ ಹೇಳಿ ಒ೦ದು ಪ್ರಯತ್ನ ಮಾಡಿದ್ದೆ, ತಿದ್ದಲೆ ಇಪ್ಪದರ ಹೇಳಿ ಕೊಟ್ಟಿಕ್ಕಿ ಆತೋ..
ಹುಳಿಮಾವಿನ ಮೆಡಿ
ಹಳೆಭರಣಿಲಿ ಹೊಡಿ
ಬೆಳಿಯುಪ್ಪಿನ ಜೊತೆ ತು೦ಬಿಸಲು
ಹಳೆಮನೆಯಜ್ಜಿಯು
ಕೇಳಿದವ೦ಬಗ
ಚಳಿಗಾಲಕ್ಕಿದು ಬೇಕಕ್ಕೋ
ಹೊಳಿಮಣೆ ಇಪ್ಪದು
ಹೊಳಿವಲೆ ಜಾಲಿಲಿ
ಒಳಮಡುಗೆಕ್ಕದ ಹೊಳುಪ್ಪಿಕ್ಕೀ ।
ಕೊಳಚೆಯ ನೋಡಿಯೆ
ಕಳಚಿದ ಅಂಗಿಯು
ಚಳಿಗಾಲಕ್ಕಿದು ಬೇಕಕ್ಕೋ ॥
ಮಳೆಗಾಲಕೆ ಜಾ
ಲಿಳಿವಲೆ ಕೈಯಿಲಿ
ಹಳೆಕೊಡೆಯೆನ್ನದು,ಸಾಕಕ್ಕೊ?
ತಳುವಿದೆ ತೆಗೆವಲೆ
ಹೊಳೆವೀ ಹೊಸಕೊಡೆ
ಚಳಿಗಾಲಕ್ಕಿದು ಬೇಕಕ್ಕೋ?
ಕುಳಿತೇ ತಿಂಬದು
ಕೊಳಕೇ ಕಾಂಬದು
ಒಳಿತನೆ ಕೆಡುಕೆಂದೆಂಬುವುದು /
ಹುಳುಕನೆ ಹುಡ್ಕುದು
ಕಳವದು ಪರಪಂ-
ಚಳಿಗಾಲಕ್ಕಿದು ಬೇಕಕ್ಕೋ?/
ಬಳಿಯಲ್ಲಿರೆ ಕಂ-
ಬಳಿ ಕರಿಯಾದರು
ಚಳಿ ಹತ್ತರೆ ಬಾರಲೆ ಬಾರ /
ಕುಳಿರಿಲ್ಲದ್ದರೆ
ಬಳಿ ಕಂಬಳಿಯದು
ಚಳಿಗಾಲಕ್ಕದು ಬೇಕಕ್ಕೋ?/
(ಮಾತ್ರೆ ಲೆಕ್ಕಾಚಾರ ದಾಗುಟ್ರೆ ಹೇಳೆಕ್ಕಷ್ತೆ !)
ಹ್ಹ..ಹ್ಹಾ.ಹ್ಹಾ. !
ನಿಂಗೊಗೆ ಯೇವ ಡಾಗುಟ್ರ ಅಗತ್ಯ ಇಲ್ಲೆ ಬಾಲಣ್ಣ. ಪದ್ಯಂಗೊ ಲಾಯಕ್ಕಾಯಿದು
ಆನು ಮೇಲೆ ಬರೆದ ಪದ್ಯಲ್ಲಿ ಎರಡನೇ ಅಕ್ಷರಲ್ಲಿ ಪ್ರಾಸ ಇಲ್ಲೆ. ಹಾಂಗಾಗಿ ಅದರ ಕೆಳಕಂಡ ಹಾಂಗೆ ಸರಿ ಮಾಡುವ ಪ್ರಯತ್ನ ಮಾಡಿದ್ದೆ 🙂
ಕೇಳಿತು ಕೂಸದು
ಹೊಳಿವಾ ಎರುಗಿನ
ಹೋಳಿಗೆ ನಿನ್ನಾ ಮರಿಗಕ್ಕೋ
ಬಳಿಸಾರಿ ಎರುಗು
ಹೇಳಿತು ಕೂಸಿಗೆ
ಚಳಿಗಾಲಕ್ಕಿದು ಬೇಕಕ್ಕೋ
ಬೈಲಿಂಗೆ ಸ್ವಾಗತ. ನಿಂಗಳ ಪ್ರಯತ್ನ ಮುಂದುವರಿಸಿ, ಪ್ರತೀ ವಾರವೂ ಸಮಸ್ಯಾಪೂರಣಲ್ಲಿ ಪದ್ಯ ಬರಕ್ಕೊಂಡಿರಿ.
ಎರುಗಿನ ನೋಡಿದ
ಕೂಸದು ಕೇಳಿತು
ಆ ಸಿಹಿಯು ನಿನ್ನ ಮರಿಗಕ್ಕೋ
ನಕ್ಕಿದ ಎರುಗದು
ಹೇಳಿತು ಕೂಸಿಗೆ
ಚಳಿಗಾಲಕ್ಕಿದು ಬೇಕಕ್ಕೋ
ಮಳೆಗಾಲಲ್ಲೀ
ಹೊಳೆನೀರಿಲ್ಲೀ
ಮುಳುಗಿಯೆ ಮೀವಾ ಮಾಣಿಯವ|
ಒಳ ಬಂದವನೇ
ಹಳೆಯ ಸ್ವೆಟರಿನ
‘ಚಳಿಗಾಲಕ್ಕಿದು ಬೇಕಕ್ಕೋ?’
ಮಾತ್ರೆ, ಛಂದಸ್ಸು ಎಲ್ಲ ಸರಿ ಇದ್ದು. ಆದರೆ, ಶುರುವಾಣ ಐದು ಸಾಲಿಂಗೂ, ಅಕೇರಿಯಾಣದ್ದಕ್ಕೂ ಸಂಬಂಧ ಇಲ್ಲದ್ದ ಹಾಂಗೆ ಕಾಣುತ್ತು. ಸರಿ ಮಾಡ್ತಿರೋ ಅಕ್ಕ.
ಮಳೆಗಾಲಲ್ಲೀ
ಹೊಳೆನೀರಿಲ್ಲೀ
ಮುಳುಗಿಯೆ ಮೀವಾ ಮಾಣಿಯವ|
ಒಳ ಬಂದವನೇ
ಹಳೆಯ ಸ್ವೆಟರಿನ
‘ಚಳಿಗಾಲಕ್ಕಿದು ಬೇಕಕ್ಕೋ?’
[ಹೇಳಿ ಎತ್ತಿ ಬಿಸಾಡಿದ]
ಸಮಸ್ಯೆ ನೋಡಿದ ಒಂದೇ ನಿಮಿಶಲ್ಲಿ ಮನಸಿಂಗೆ ಬಂದ ಆ ಪದ ಸ್ಪಷ್ಟವಾಗಿ ಅರ್ಥ ಕೊಡುತ್ತು ಹೇಳಿ ಅನ್ನಿಸಿತ್ತು. ಬ್ರಾಕೆಟ್ ನೊಳ ಎಲ್ಲ ಸೇರುಸಿ ಓದಿರೆ ಸರಿಯಾಗ, ಪೂರಣ ಸರಿ ಇಲ್ಲೇ ಹೇಳಿ ಮಾವ ಜೋರು ಮಾಡುವ ‘ಚಳಿಗಾಲಕ್ಕೆ’ ಇನ್ನು ಆ ಪದವೇ ಬೇಡ ಹೇಳಿ ಹೊಸ ಪದ ಬರದೆ. ಸರಿ ಇದ್ದ ಮಾವ?
ಹೊಳದಾಂಗೆಯೆ ಪದ
ಬಳಸುತ ಮಾವನೆ
ಕಳುಸಿದೆ ಪೂರಣವಾನಿಲ್ಲಿ|
ಹೊಳೆಯಲು ಹೊಸತಿದು
ಕಳಪೆಯ ಬಿಟ್ಟೇ –
‘ಚಳಿಗಾಲಕ್ಕಿದು ಬೇಕಕ್ಕೋ?”
ಅಕ್ಕಾ,
ನಿಂಗೊಗೆ ಇದರಂದ ಚೆಂದಕ್ಕೆ ಪದ್ಯ ಬರವಲೆ ಎಡಿಗಾವುತ್ತು ಹೇಳ್ತ ಆಶಯಲ್ಲಿ ತಿದ್ದುಲೆ ಹೇಳುದಿದಾ.
ಅನ್ಯಥಾ ತಿಳ್ಕೊಳ್ಳೆಡಿ.
ನಿಂಗ ತಿದ್ದುಲೆ ಹೇಳುದು ಎನಗೆ ತುಂಬಾ ಖುಷಿಯ ವಿಚಾರ… ನಿಂಗಳಂತಹ ಹಿರಿಯರ ಜೊತೆ ಸೇರಿ ಪುಟ್ಟ ಪುಟ್ಟ ಪದ ಬರವಲೆ ಅವಕಾಶ ಸಿಕ್ಕಿದ್ಡದೇ ಎನ್ನ ಭಾಗ್ಯ…ಮತ್ತೆ ಅನ್ಯಥಾ ತಿಳಿವ ಮಾತೆಲ್ಲಿ!!! ಕವಿಗೆ ತನ್ನ ಭಾವವ ಇತರರಿಂಗೆ ಅರ್ಥ ಮಾಡುಸುಲೆ ಎಡಿತ್ತಿಲ್ಲೇ ಹೇಳಿ ಆದರೆ ಅದು ಕೊರತೆಯೇ… ಹಾಂಗಾಗಿ ಬ್ರಾಕೆಟ್ ಉಪಯೋಗಿಸಿರೆ ಅದು ಸರಿಯಲ್ಲ ಹೇಳಿ ಅನ್ನಿಸಿತ್ತು… ಆ ಸಂದರ್ಭಲ್ಲಿ ವಿನೋದಕ್ಕಾಗಿ ಮನಸಿಂಗೆ ಬಂದ ಪದ್ಯವ ನಿಂಗಳ ಜೊತೆ ಹಂಚಿಗೊಂಡೆ ಅಷ್ಟೇ…
ಹೋಳಿಗೆ ಜಿಲೇಬಿ
ಹೇಳಿರೆ ಕೊಶಿಯೆ
ಕಾಳಿನ ಲಾಡುದೆ ನವಗಾವ್ತೂ ।
ಗಾಳಿಯ ಬೀಸಲೆ
ಕೇಳುಗೊ ಫೇನಿನ
ಚಳಿಗಾಲಕ್ಕಿದು ಬೇಕಕ್ಕೋ ॥
ಪದ್ಯ ಪಷ್ಟಿದ್ದು ಭಾವ.
ಆದರೆ,೧. “ಜಿಲೇಬಿ” – ಇದರಲ್ಲಿ ‘ಲಗಂ'( ಶುರುವಾಣದ್ದು ಲಘು ಬಂದು ಮತಾನದ್ದು ಗುರು ಬಪ್ಪದು – ಜಗಣ) ಬತ್ತು – “ಹೋಳಿಗೆ ಪಾಯಸ” – ಹೇಳಿರೆ ಸರಿ ಆವುತ್ತು.
೨. ಎರಡ್ನೇ ಸಾಲಿಲಿ ಒಂದು ಮಾತ್ರೆ ಕಮ್ಮಿ ಆಯಿದು, “ಕೊಶಿಯೇ” ಹೇಳಿ ದೀರ್ಘ ಎಳದರೆ ಸರಿ ಆವುತ್ತು.
ಹೋ.. ಅಪ್ಪೋ. ಮಾತ್ರೆ ಹೆಚ್ಚಿಕಮ್ಮಿ ಆಗ್ಯೋತೊ!. ಆ ಎರಡ್ನೇ ಸಾಲಿನ ‘ಕೊಶಿಯೇ’ ಹೇಳಿ ಬಾಯಿಲಿ ದೀರ್ಘವಾಗಿಯೇ ಎಳದು ಬಿಟ್ಟದು ಇಲ್ಲಿಂದ.., ಅಲ್ಲಿಗೆ ಎತ್ತಿತ್ತಿಲ್ಲೆ ಅದು. ಅಕ್ಕು.., ಇನ್ನಾಣ ಸರ್ತಿ ರಜಾ ಜಾಗ್ರತೆಲಿ ಮಾತ್ರೆ ನೋಡಿಗೊಂಬ. ಧನ್ಯವಾದ ಮಾವ°.