Oppanna.com

ಸಮಸ್ಯಾಪೂರಣ -೧೦ ” ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ ”

ಬರದೋರು :   ಸಂಪಾದಕ°    on   15/12/2012    18 ಒಪ್ಪಂಗೊ

ಇದಾ, ಇಲ್ಲಿದ್ದು ಈ ವಾರದ ಸಮಸ್ಯಾಪೂರಣ!
ಹತ್ತನೇ ಕಂತು – ಮತ್ತೆ ಭೋಗ ಷಟ್ಪದಿಲಿ,ರಜಾ ಅಭ್ಯಾಸ ಆಗಲಿ ಹೇಳಿ…

ಈ ವಾರದ ಸಮಸ್ಯೆ:

ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ

ಉತ್ತರ ದಿಕ್ಕಿ೦ಗೆ ಏನೆಲ್ಲಾ ಹಾರುತ್ತೋ,ಕಲ್ಪನೆಗೊ ಕವಿತೆಯಾಗಿ ಹಾರಲಿ,ಬೈಲಿಲಿ ಮೆರೆಯಲಿ.

ಭೋಗ ಷಟ್ಪದಿ
ಭೋಗ ಷಟ್ಪದಿ

ಸೂ:

ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:

  1. ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
  2. ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
  3. ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
  4. ಶರ: “ಆಟಿಯ ತಿಂಗಳ ಮಳೆಗಾಲ”
  5. ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
  6. ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
  7. ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
  8. ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
  9. ಭೋಗ ; “ಯೋಗವೊಲುದು ಬಪ್ಪ ಹಾ೦ಗೆ ಬದುಕು ನೆಡೆಶುವೊ”

18 thoughts on “ಸಮಸ್ಯಾಪೂರಣ -೧೦ ” ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ ”

  1. ಹಳ್ಳಿ ಮಗಂಗೆ ಕೂಸು ಇಲ್ಲೆ
    ಎಲ್ಲಿ ಹುಡುಕ್ಕಿ ತರಲಿ ಇನ್ನು
    ಬಂಙ ಬಂದ ಭಾವ ಮೋರೆ ಸಣ್ಣ ಮಾಡಿದ° ।
    ಭಾರತದುತ್ತರಕ್ಕೆ ಕಾಶ್ಮೀರ
    ಕೂಸಲ್ಲಿ ಇದ್ದು ಮಗನೆ ಹೇದ
    ಮಾವ ಕೂದ ವಿಮಾನ ಹಾರಿತುತ್ತರಕ್ಕೆ ಬೇಗನೆ ॥

    1. ವಿಜಯತ್ತೆಯ ಕಲ್ಪನೆ ಲಾಯ್ಕ ಇದ್ದು.ಪ್ರಾಸ,ಮಾತ್ರೆ ಹೊ೦ದಾಣಿಕೆ ಆಯೆಕ್ಕಟ್ಟೆ.ಅತ್ತೇ,ನಿ೦ಗಳ ಯೋಚನೆಯ ಹೀ೦ಗೆ ಯೋಜಿಸುಲಕ್ಕು.

      ಊರ ಮಾಣಿಗೊಕ್ಕೆ ಕೂಸು
      ಭಾರಿ ಕಷ್ಟ, ಸಿಕ್ಕ ರಜ್ಜ
      ದೂರವಾದರೆ೦ತ ಹೊ೦ದಿರಾತು ಜಾತಕಾ|
      ಏರಿ ಕೂದವ೦ದು ಕಾಶು-
      ಮೀರ ಸೇರುಲಾ ವಿಮಾನ
      ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ ||

  2. ಮೂರು ಲೋಕದೊಡೆಯ ರಾವ
    ಣಾರಿ ಯುದ್ಧ ಗೆದ್ದ ಮೇಲೆ
    ನಾರುಮಡಿಲಿ ಕಾಡಿಲಲೆವ ಕಾಲ ಸ೦ದೊಗಾ|
    ಪೂರ ರಾಮಸೇನೆ ಕೊಶಿಲಿ
    ಸೇರಿ ಪುಷ್ಪಕದೊಳ ನೂರಿ
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ ||

  3. ಕೂರುಮಾಡ ಬಿಟ್ಟು ಅಟ್ಟ
    ವೇರಿ ಎಲಿಯ ಹುಡ್ಕಿ ತಿಂಬ
    ಭಾರಿಯಾಸೆಯಿಂದ ಲಾಗಹಾಕ್ಲೆ ನೋಡಿದ॥
    ಕೇರೆ ಗೋಡೆಯಿಂದ ಪಕ್ಕ
    ಜಾರಿಬಿದ್ದು ಜನವ ನೋಡಿ
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ॥
    [ಇಲ್ಲಿ ಉತ್ತರ ಹೇಳಿರೆ ದಿಕ್ಕಿನ ಹೆಸರಲ್ಲ.]

    1. ಗೋಪಾಲಣ್ಣ,
      ಭಾರಿ ಲಾಯ್ಕ ಆಯಿದು.ಕೇರೆ ಹಾರದ್ದರೆ ಎರಡು ಕಲ್ಲು ಹೊತ್ತು ಹಾಕುತ್ತಿದ್ದವೋ ಏನೋ!
      ಹೊಸ ಹೊಸ ಕಲ್ಪನೆಗೆ ಒಳ್ಳೆ ಅವಕಾಶ ಆತು.
      ಕೂರು ಮಾಡು ಹೇಳಿರೆ ಎ೦ತರ ಅಣ್ಣ?

      1. ಮನೆ/ಕೊಟ್ಟಗೆ/ಹಟ್ಟಿಗೆ ಹಿಂದೆ ಅಥವಾ ಹೊಡೆಂಗೆ ಇಳಿಸಿ ಕಟ್ಟಿದ ಮಾಡು[ಮುಳಿ/ಹಂಚು ಯಾ ಸೋಗೆದು].ಈ ಶಬ್ದ ಹೇಂಗೆ ಬಂತು ಹೇಳಿ ಗೊಂತಿಲ್ಲೆ.ಇದೇ ರೀತಿ ಕುರುಬಾಗಿಲು/ಕೂರುಬಾಗಿಲು=ಹಿಂದಾಣ ಬಾಗಿಲು ಹೇಳಿ ಅರ್ಥ. ಎನಗೆ ಕಾಣುತ್ತು,ಕಿರು ಬಾಗಿಲು [ಸಣ್ಣ ಬಾಗಿಲು] ಕಿರು ಮಾಡು[ಸಣ್ಣ ಮಾಡು]ಹೇಳುದರ ಹೀಂಗೆ ಹೇಳುತ್ತವೋ ಹೇಳಿ.ಉಡುಪುಮೂಲೆ ಅಪ್ಪಚ್ಚಿ ಯಾ ಮಧುರಕಾನನ ಅಣ್ಣ ತಿಳಿಸೆಕ್ಕು ಹೇಳಿ ಕೇಳಿಕೊಳ್ತೆ.

  4. ಮೂರು ವರುಷವಾಯಿದಿಲ್ಲೆ
    ಸೋರಿತಯ್ಯೊ ಜೆನರ ಪೈಸೆ
    ಸೂರೆ ಹೊಡದ ಮ೦ತ್ರಿ ಸೈನ್ಯ ರೈಸಿ ಗತ್ತಿಲಿ|
    ಆರು ರಾಜ್ಯವಾಳೊದೇಳಿ
    ನೂರು ಜೆನರ ಕಟ್ಟಿಗೊ೦ಡು
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ ||

  5. ಶೇಪು ಭಾವನ ಎರಡು ಪದ್ಯ೦ಗಳೂ ಲಾಯ್ಕ ಆಯಿದು.ಎರಡನೆಯದ್ದರಲ್ಲಿ “ಬಾರದೆಯೇ” –ಇಲ್ಲಿ ”ದೆಯೇ” ಗುರು ಲಘು ವಾಗಿ ತಿರುಗಿಸಿದರೆ ಚೆ೦ದ.ಉದಾಃ
    {ಸಾರಿ ನಿಂದು ಕಾದವಕ್ಕೆ
    ಮೋರೆ ಸಾನು ತೋರುಸದ್ದೆ}

    ಒಳ್ಳೆ ಪ್ರಯತ್ನ ಭಾವ.

  6. ಆರು ನೂರು ಸಾಕು ನಿನಗೆ
    ಮೂರು ಹೊತ್ತು ತಿಂಬಲೇಳಿ
    ಕಾರು ಹತ್ತಿ ಹೋಪಗದರ ಗತ್ತು ನೋಡಿರೋ
    ಸಾರಿನಿಂದು ಕಾವ ಜೆನರ
    ಮೋರೆ ಮುಂದೆ ಬಾರದೆಯೇ
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೇ

  7. ದಾಪುಗಾಲು ಹಾಕಿಗೊಂಡು
    ಶೇಪುಭಾವ ಬಂದ ನೋಡಿ
    ಕೂಪ ಭಾವ ಹೀಂಗೆ ಬನ್ನಿ ಕಾಫಿ ಕುಡಿವನೊ.
    ಯೋಪ, ನಿಂಗ ಬೈಲಿಲಿಯಪ
    ರೂಪರಾಗಿ ಹೋದಿರನ್ನೆ
    ಪಾಪ ನಮ್ಮ ಬೋಚ ಭಾವ ಪಾಚ ಕೊಡುಗಿದಾ.

  8. ಓರೆ ಹಲ್ಲ ಬೋಚ ಭಾವ
    ಕಾರನಿಳುದು ಬಂದ ನೋಡಿ
    ಮಾರು ದೂರ ನಿಂಬಲೆಡಿಯ ಮೂಗು ಮುಚ್ಚಿರೂ
    ನೀರು ನಿಂದ ಜಾಗೆಲಿದ್ದ
    ನಾರುತಿದ್ದ ಹಂದಿ ಕೂಡ
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ

  9. ಸಮಸ್ಯಾಪೂರಣಕ್ಕೆ ಕೆಲವು ಸುಳಿವು,ಆಸಕ್ತರು ಪ್ರಯತ್ನ ಮಾಡಿ.
    ೧.ಪುರಾಣಲ್ಲಿ ದಕ್ಷಿಣ೦ದ ಉತ್ತರಕ್ಕೆ ಕೆಲವು ಹಾರಾಟ ಆಯಿದು
    ೨. ರಾಜಕೀಯದವಕ್ಕ೦ತೂ ಹಾರೊದೇ ಕೆಲಸ.

  10. ಎಲ್ಲ ಪದ್ಯಂಗಳೂ ಚೆಂದ ಆಯಿದು, ಮಾತ್ರೆ, ಛಂದಸ್ಸು ಸರಿಯಾಗಿ ಬಯಿಂದು.
    ಬೊಳುಂಬು ಮಾವ,ಶರ್ಮಪ್ಪಚ್ಚಿಯ ಕಾಕೆ ಪರಿಹಾರ ನೋಡಿ ನೆಗೆ ಬಂತು. – ಒಳ್ಳೆದಾಯಿದು.

  11. ತಾರಕೆಗಳ ನೆಡುಕೆ ಚ೦ದ್ರ
    ನೂರನಳವದಕ್ಕೆ ಮನ್ನೆ
    ಕೂರುಸಿದವು ಬಾಣಕೊಡಿಲಿಯುಪಗ್ರಹವನು|
    ಮೂರು ಲೋಕ ಬಿರಿವ ಹಾ೦ಗೆ
    ಭಾರಿ ಶಬ್ದ ಮಾಡಿಗೊ೦ಡು
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ||

  12. ಬೇರೆ ಧರ್ಮದೋರ ಕೊಲ್ಲು
    ಲಾರು ಬತ್ತಿ?ಬನ್ನಿ ಬೇಗ
    ಮೇರಿಕಲ್ಲಶಾ೦ತಿ ಹರಗಿ ಹೇಳೆ ಲಾಡೆನೂ|
    ಸೇರಿ ಸಗ್ಗಸುಖವ ಪಡವ
    ನೂರು ಕನಸಿಲುಗ್ರವಾದಿ
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ||

  13. ತೋರುಸೆನಗೆ ನಿನ್ನ ರೂಪ
    ಕೋರಿಕೆಲ್ಲಿ ಮೊರೆಯ ಕೇಳಿ
    ತೋರುಸಿದನು ದೇವ ತನ್ನ ವಿಶ್ವ ರೂಪವ |
    ಹೀರಿ ಜಗದ ಸಕಲ ಸಾರ
    ಮೀರಿ ನಿಂದು ಮೂರು ಲೋಕ
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ||

  14. ಆರು ನೋಡದಿಪ್ಪ ಸಮೆಲಿ
    ನೀರು ಹುಡುಕಿ ಬಂದ ಕಾಕೆ
    ಕಾರುಬಾರು ಮಾಡಲೇಳಿ ಬಂತು ಜಾಲಿಗೆ ।
    ತಿರುಗಿ ತಿರುಗಿ ಮತ್ತೆ ನೋಡಿ
    ಕರೆಲಿ ಇಪ್ಪ ಮೆಣಸ ಎತ್ತಿ
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ ॥

  15. ಕಾರುಬಾರು ಮಾಡಿದವಗೆ
    ನೀರುಸಾರು ಕುಡಿವಲೆಡಿಗೊ
    ಜಾರಿಬಿದ್ದ ಮೇಲೆ ತಿಳುದ ನಿಜದ ಸಂಗತಿ ।

    ಪಾರೆ ಎಡೆಲಿ ಬಿದ್ದ ಕಾಕೆ
    ಮೋರೆ ನೋಡಲೆಡಿಯ ಹೇಳಿ
    ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ ॥

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×